ತಿಲ್‍ಕುಟ್
ಮೂಲ | |
---|---|
ಪರ್ಯಾಯ ಹೆಸರು(ಗಳು) | ತಿಲ್‍ಕತ್ರಿ, ಪಲಾಲಾ |
ಮೂಲ ಸ್ಥಳ | (ಮಗಧ,ಭಾರತ) |
ಪ್ರಾಂತ್ಯ ಅಥವಾ ರಾಜ್ಯ | ಬಿಹಾರ ಮತ್ತು ಪೂರ್ವ ಭಾರತ |
ನಿರ್ಮಾತೃ | ಬಿಹಾರ |
ವಿವರಗಳು | |
ಸೇವನಾ ಸಮಯ | ಸಿಹಿ ತಿನಿಸು |
ಮುಖ್ಯ ಘಟಕಾಂಶ(ಗಳು) | ಎಳ್ಳು, ಬೆಲ್ಲ ಅಥವಾ ಸಕ್ಕರೆ |
ಪ್ರಭೇದಗಳು | ಬಾದಾಮಿಗಳು |
ತಿಲ್ಕುಟಮ್, ಗಜಕ್, ತಿಲ್‍ಪಟ್ಟಿ ಎಂದೂ ಕರೆಯಲ್ಪಡುವ ತಿಲ್‍ಕುಟ್ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್‌ನಲ್ಲಿ ತಯಾರಿಸಲಾಗುವ ಸಿಹಿತಿನಿಸಾಗಿದೆ.[೧]
ತಿಲ್‍ಕುಟ್‍ನ್ನು ವಿಶೇಷವಾಗಿ ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ತಯಾರಿಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇದನ್ನು ಪುಡಿಮಾಡಿದ ಎಳ್ಳು ಬೀಜಗಳು ( ಸೆಸಮಮ್ ಇಂಡಿಕಮ್ ) ಮತ್ತು ಬೆಲ್ಲ ಅಥವಾ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಅತ್ಯುತ್ತಮ ತಿಲ್‍ಕುಟ್ ಗಯಾದಿಂದ ಬರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಇದು ಮಗಧ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ.[೨] ಈ ಒಣ ಸಿಹಿತಿನಿಸಿನ ಉಲ್ಲೇಖವು ಬೌದ್ಧ ಸಾಹಿತ್ಯದಲ್ಲಿ ಪಲಾಲಾ ಎಂದು ಕಂಡುಬರುತ್ತದೆ.[೩]
ಸಾಮಾನ್ಯವಾಗಿ, ಮೂರು ವಿಧದ ತಿಲ್‍ಕುಟ್‍ಗಳು ಲಭ್ಯವಿವೆ- ಸಂಸ್ಕರಿಸಿದ ಸಕ್ಕರೆಯುಳ್ಳ ತಿಲ್‍ಕುಟ್ ಬಿಳಿ ಬಣ್ಣದ್ದಾಗಿರುತ್ತದೆ, ಶಕ್ಕರ್ ತಿಲ್‍ಕುಟ್ ಅನ್ನು ಸಂಸ್ಕರಿಸದ ಸಕ್ಕರೆಯಿಂದ ತಯಾರಿಸಲಾಗುತ್ತದೆ ಮತ್ತು ತಿಳಿ ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಗುರ್ ತಿಲ್‍ಕುಟ್ ಬೆಲ್ಲದಿಂದ ಮಾಡಲ್ಪಟ್ಟಿರುತ್ತದೆ ಮತ್ತು ಗಾಢ ಕಂದು ಬಣ್ಣವನ್ನು ಹೊಂದಿರುತ್ತದೆ. ಈ ಪ್ರತಿಯೊಂದು ಪ್ರಭೇದವು ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ. ವೃತ್ತಾಕಾರದ ತಿನಿಸನ್ನು ತಿಲ್‍ಕುಟ್ ಎಂದು ಕರೆಯಲಾಗುತ್ತದೆ ಮತ್ತು ಚಿಕ್ಕದಾದ ನಟ್ ಗಾತ್ರದವುಗಳನ್ನು ತಿಲ್ಲೌರಿ ಎಂದು ಕರೆಯಲಾಗುತ್ತದೆ.
ಚಳಿಗಾಲದಲ್ಲಿ ಕಬ್ಬನ್ನು ಕಟಾವು ಮಾಡಲಾಗುತ್ತದೆ. ಆ ಅವಧಿಯಲ್ಲಿ ಅನೇಕ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ತಿಲ್‍ಕುಟ್‍ನ್ನು ತಯಾರಿಸಲಾಗುತ್ತದೆ. ಆದಾಗ್ಯೂ, ಬೇಡಿಕೆಯು ವರ್ಷವಿಡೀ ಉಳಿಯುವುದರಿಂದ, ವರ್ಷಪೂರ್ತಿ ಸಣ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ.
ಪ್ರದೇಶಗಳು
[ಬದಲಾಯಿಸಿ]ತಿಲ್‍ಕುಟ್ ಭಾರತೀಯ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಬಳಸಲಾಗುವ ಕಾಲೋಚಿತ ಸಿಹಿತಿಂಡಿಯಾಗಿದೆ. ಡಿಸೆಂಬರ್ ಮತ್ತು ಜನವರಿ ಸಮಯದಲ್ಲಿ ಈ ಪ್ರದೇಶಗಳಲ್ಲಿ ತಿಲ್‍ಕುಟ್ ಅನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ ಮತ್ತು ಇದು ಎಲ್ಲಾ ವಯಸ್ಸಿನವರಿಗೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಇದು ಗ್ರಹ ಮತ್ತು ನಕ್ಷತ್ರ ದೋಶಕ್ಕೆ ಕೂಡ ಸಂಬಂಧಿಸಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Get famous 'tilkut' of Gaya by post anywhere in Bihar". The Times of India (in ಇಂಗ್ಲಿಷ್). 3 January 2021. Retrieved 2021-03-25.
- ↑ Qadir, Abdul (10 January 2020). "Gaya tilkut may get GI tag soon: Bihar agriculture minister Prem Kumar". The Times of India (in ಇಂಗ್ಲಿಷ್). Retrieved 2021-03-25.
{{cite web}}
: CS1 maint: url-status (link) - ↑ Gupta, Deepa (2020-01-08). "How to make winter delicacy 'Tilkut' at home?". The Statesman (in ಅಮೆರಿಕನ್ ಇಂಗ್ಲಿಷ್). Retrieved 2021-03-25.
{{cite web}}
: CS1 maint: url-status (link)