ತರ್ಕೇಶ್ವರಿ ಸಿನ್ಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತರ್ಕೇಶ್ವರಿ ಸಿನ್ಹಾ

ಸಂಸತ್ತಿನ ಸದಸ್ಯೆ
ಮತಕ್ಷೇತ್ರ ಬರ್ಹ್ (ಬಿಹಾರ)
ವೈಯಕ್ತಿಕ ಮಾಹಿತಿ
ಜನನ (೧೯೨೬-೧೨-೨೬)೨೬ ಡಿಸೆಂಬರ್ ೧೯೨೬
ತುಳಸಿಗಢ, ನಳಂದ ಜಿಲ್ಲೆ, ಬಿಹಾರ
ಮರಣ 14 August 2007(2007-08-14) (aged 80)
ನವ ದೆಹಲಿ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಅಭ್ಯಸಿಸಿದ ವಿದ್ಯಾಪೀಠ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್

ತರ್ಕೇಶ್ವರಿ ಸಿನ್ಹಾ (೨೬ ಡಿಸೆಂಬರ್ ೧೯೨೬ - ೧೪ ಆಗಸ್ಟ್ ೨೦೦೭) ಬಿಹಾರದ ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು. ೧೯೫೨ ರಲ್ಲಿ ತಮ್ಮ ೨೬ ನೇ ವಯಸ್ಸಿನಲ್ಲಿ ಇವರು ಪಾಟ್ನಾ ಪೂರ್ವ ಕ್ಷೇತ್ರದಿಂದ ೧ ನೇ ಲೋಕಸಭೆಗೆ ಆಯ್ಕೆಯಾದರು. ತರುವಾಯ, ೧೯೫೭, ೧೯೬೨ ಮತ್ತು ೧೯೬೭ ರಲ್ಲಿ ಬಾರ್ಹ್ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾದರು. ಇವರು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ೧೯೫೮ - ೬೪ ನೇತೃತ್ವದ ಕೇಂದ್ರ ಸಂಪುಟದಲ್ಲಿ ಮೊದಲ ಮಹಿಳಾ ಉಪ ಹಣಕಾಸು ಸಚಿವರಾಗಿದ್ದರು. ಯುಎನ್ ಮತ್ತು ಟೋಕಿಯೊಗೆ ನಿಯೋಗವನ್ನು ಸಹ ಮುನ್ನಡೆಸಿದ್ದರು. ಗುಲ್ಜಾರ್ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರ, ಆಂಧಿಯು ಇಂದಿರಾ ಗಾಂಧಿಯನ್ನು ಹೊರತುಪಡಿಸಿ ತಾರಕೇಶ್ವರಿ ಸಿನ್ಹಾ ಅವರಿಂದ ಭಾಗಶಃ ಸ್ಫೂರ್ತಿ ಪಡೆದಿದೆ. [೧]

ಆರಂಭಿಕ ಜೀವನ[ಬದಲಾಯಿಸಿ]

ತರ್ಕೇಶ್ವರಿ ಸಿನ್ಹಾ ನಳಂದಾ ಜಿಲ್ಲೆಯ ಚಂಡಿ ಬಳಿಯ ತುಳಸಿಗಢ ಗ್ರಾಮದಲ್ಲಿ ಭೂಮಿಹಾರ್ ಕುಟುಂಬದಲ್ಲಿ ಜನಿಸಿದರು. ಅವರು ಪಾಟ್ನಾದ ಮಗಧ ಮಹಿಳಾ ಕಾಲೇಜು ಎಂದು ಕರೆಯಲ್ಪಡುವ ಬಂಕಿಪೋರ್ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇವರು ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್‌ನಿಂದ ಬೇರ್ಪಟ್ಟ ಬಿಹಾರ ವಿದ್ಯಾರ್ಥಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಮುಗಿಸಿದ್ದಾರೆ.

ವೃತ್ತಿ[ಬದಲಾಯಿಸಿ]

ಇವರು ಬಿಹಾರದ ಬಾರ್ಹ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಭಾರತೀಯ ಸ್ವಾತಂತ್ರ್ಯದ ನಂತರದಲ್ಲಿ ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ನಂತರ ೧೯೫೨ ರಲ್ಲಿ ಪಾಟ್ನಾ ಪೂರ್ವ ಕ್ಷೇತ್ರದಿಂದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಕಾಂಗ್ರೆಸ್ ಪಕ್ಷದ ಮೂಲಕ, ಅವರು ೧೯೫೭, ೧೯೬೨ ಮತ್ತು ೧೯೬೭ ರಲ್ಲಿ ಮರು ಆಯ್ಕೆಯಾದರು [೨]

ಸಿನ್ಹಾ ೧೯ ನವೆಂಬರ್ ೧೯೫೭ ರಂದು ಟು ಟೆಲ್ ದಿ ಟ್ರೂತ್ ಎಂಬ ಗೇಮ್ ಶೋನಲ್ಲಿ ಕಾಣಿಸಿಕೊಂಡರು, ಪ್ಯಾನೆಲ್‌ನಲ್ಲಿರುವ ನಾಲ್ಕು ಸದಸ್ಯರಲ್ಲಿ ಇಬ್ಬರನ್ನು ಮೂರ್ಖರನ್ನಾಗಿ ಮಾಡಿದರು. [೩]

ತರ್ಕೇಶ್ವರಿ ಸಿನ್ಹಾರವರು ಮೊರಾರ್ಜಿ ದೇಸಾಯಿಯವರಿಗೆ ಹತ್ತಿರವಾಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ದೇಸಾಯಿ ಮತ್ತು ಇಂದಿರಾ ಗಾಂಧಿಯವರ ನಡುವಿನ ಉತ್ತರಾಧಿಕಾರದ ಯುದ್ಧದಲ್ಲಿ ಅವರ ಪರವಾಗಿದ್ದರು. ದೇಸಾಯಿ ಮತ್ತು ಇತರ ನಾಯಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಒಡೆದ ಗುಂಪನ್ನು ರಚಿಸಿದಾಗ, ಅವರೂ ಅದಕ್ಕೆ ಸೇರಿಕೊಂಡರು. ೧೯೭೧ ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂದಿರಾ ಅಲೆಯಲ್ಲಿ, ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಧರ್ಮವೀರ್ ಸಿನ್ಹಾ ಅವರ ವಿರುದ್ಧ ಸೋತರು.ಇದು ಅವರ ಮೊದಲ ಚುನಾವಣಾ ಸೋಲಿನ ರುಚಿಯಾಗಿತ್ತು, ಮುಂದಿನ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಸೋತರು ಮತ್ತು ಇಂದಿರಾ ಗಾಂಧಿಯವರ ಪಕ್ಷಕ್ಕೆ ಮರಳಿದರು. ೧೯೭೭ ರಲ್ಲಿ, ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಬೇಗುಸರಾಯ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಬಿಹಾರದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತಿದ್ದರಿಂದ ಜನತಾ ಅಲೆಯಲ್ಲಿ ಸೋತರು. ಈ ಸೋಲಿನ ನಂತರ, ಅವರು ನವೆಂಬರ್ ೧೯೭೮ ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮಸ್ತಿಪುರದಿಂದ ಲೋಕಸಭೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು ಆದರೆ ಮತ್ತೆ ಸೋತರು.

ಅಂತಿಮವಾಗಿ, ಇವರು ರಾಜಕೀಯದಿಂದ ನಿವೃತ್ತಿ ಹೊಂದಿ ಸಾಮಾಜಿಕ ಕಾರ್ಯಗಳನ್ನು ಮಾಡಿದರು.

ಸಮಾಜಿಕ ಕಾರ್ಯ[ಬದಲಾಯಿಸಿ]

ತರ್ಕೇಶ್ವರಿ ಸಿನ್ಹಾ ಅವರು ಹೊಸದಿಲ್ಲಿಯಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಇವರ ನೆನಪಿಗಾಗಿ ಅವರ ಸಹೋದರ, ಏರ್ ಇಂಡಿಯಾದ ಪೈಲಟ್, ಕ್ಯಾಪ್ಟನ್ ಗಿರೀಶ್ ನಂದನ್ ಸಿಂಗ್ ರವರು ತುಳಸಿಗಢದಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಆ ದಿನಗಳಲ್ಲಿ ಇದಕ್ಕಾಗಿ ಸುಮಾರು ೨೫ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇದು ಎರಡು ಅಂತಸ್ತಿನ ಆಸ್ಪತ್ರೆಯ ನಿರ್ಮಾಣವಾಗಿದ್ದು, ಚಿಕಿತ್ಸೆಯು ಬಹುತೇಕ ಉಚಿತವಾಗಿದೆ. ನಳಂದದಲ್ಲಿ ಚಂಡಿ ಮತ್ತು ಹರ್ನಾಟ್ ಗ್ರಾಮವನ್ನು ಸಂಪರ್ಕಿಸಲು ರಸ್ತೆಯನ್ನು ನಿರ್ಮಿಸಲು ಅವರು ಕ್ರಮ ತೆಗೆದುಕೊಂಡಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. Sanjay Suri. "Mrs. G's String of Beaus".
  2. "Tarkeshwari Sinha". veethi.com. Retrieved 2017-08-19.
  3. YouTube