ವಿಷಯಕ್ಕೆ ಹೋಗು

ಜಿ. ವಿ. ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಜಿ. ವಿ. ಕುಲಕರ್ಣಿ ಇಂದ ಪುನರ್ನಿರ್ದೇಶಿತ)
ಡಾ.ಜಿ.ವಿ.ಕುಲಕರ್ಣಿ
ಜನನ
ವೃತ್ತಿಅಂಕಣ ಬರಹ. ಸಾಹಿತಿ
Years activeಮುಂಬಯಿನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ದುಡಿದು,೧೯೯೭ ರಲ್ಲಿ ಸೇವಾನಿವೃತ್ತರಾದರು.ಸಾಹಿತ್ಯ ಸಮ್ಮೇಳನಗಳು, ಕಮ್ಮಟಗಳು, ಗೋಷ್ಟಿಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ.
Awardsಬೇಂದ್ರೆ ಸಾಹಿತ್ಯರತ್ನ ಪ್ರಶಸ್ತಿ.
 • ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ,
 • ಸಾಧನ ಶಿಖರ ಪ್ರಶಸ್ತಿ

ಡಾ| ಜಿ.ವಿ.ಕುಲಕರ್ಣಿಯವರು ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕುಲಕರ್ಣಿಯವರಿಗೆ ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಬರುತ್ತಿತ್ತು. ಮುಂದೆ ಸ್ನಾನಕೋತ್ತರದಲ್ಲೂ 'ಫೆಲೋಶಿಪ್' ದೊರೆಯಿತು. ಧಾರವಾಡದಿಂದ ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ; ಎಲ್.ಎಲ್.ಬಿ ಪದವಿಗಳನ್ನೂ ಮುಗಿಸಿ ನೇರವಾಗಿ ಮುಂಬಯಿಗೆ ಆಗಮಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ; 'ಪಿ.ಎಚ್.ಡಿ' ಗಳಿಸಿದರು. ಆಗಿನ ಬೊಂಬಾಯಿನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ದುಡಿದು,೧೯೯೭ ರಲ್ಲಿ ಸೇವಾನಿವೃತ್ತರಾದರು. ಡಾ.ಕುಲಕರ್ಣಿಯವರು ಒಳ್ಳೆಯ ಅಂಕಣಕಾರರು ಸಹಿತ. ಮುಂಬಯಿನಿಂದ ಪ್ರಕಟವಾಗುವ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಬರೆಯುವ ತಮ್ಮ 'ಜೀವನ ಮತ್ತು ಸಾಹಿತ್ಯ ಅಂಕಣ'ದಲ್ಲಿ ಸಾಹಿತ್ಯ,[೧] ಮತ್ತು ಸಂಸ್ಕೃತಿಗಳ ಬಗ್ಗೆಯೂ, ಮತ್ತು ಮುಂಬಯಿ ನಗರಕ್ಕೆ ಹೊಂದಿಕೊಂಡ ಹಲವಾರು ವಿಷಯಗಳನ್ನು ಅದರಲ್ಲಿ ದಾಖಲಿಸುತ್ತಾ ಬಂದಿದ್ದಾರೆ.

ಜಿ.ವಿ.ಯವರ ವ್ಯಕ್ತಿತ್ವ[ಬದಲಾಯಿಸಿ]

ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿರುವ 'ಜಿವಿ'ಯವರು, 'ಕಾವ್ಯ', 'ಕಥೆ', 'ನಾಟಕ', 'ವಿಮರ್ಶೆ', 'ಯೋಗ', 'ಆರೋಗ್ಯವರ್ಧನೆ', ಮೊದಲಾದ ಹತ್ತು ಹಲವು ವಿಷಯಗಳನ್ನು ತೆಗೆದುಕೊಂಡು, ಕೃತಿಗಳನ್ನು ರಚಿಸಿ, ಪ್ರಕಟಿಸಿದ್ದಾರೆ.

ಸಾಹಿತ್ಯ ಕೃಷಿ[ಬದಲಾಯಿಸಿ]

೨೦೦೦ ದಲ್ಲಿ 'ಅಮೆರಿಕೆಯ ಹ್ಯೂಸ್ಟನ್ ನಗರದಲ್ಲಿ ಜರುಗಿದ ಪ್ರಥಮ ’ಅಕ್ಕಾ' ವಿಶ್ವಕನ್ನಡ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು. ಅಲ್ಲಿದ್ದಾಗಲೇ ಅವರು 'ಜೀವಿಕಂಡ ಅನುಭವ ಕಥನ' ಬರೆದರು. ಚಿಕಾಗೋನಗರದಲ್ಲಿ ಆಯೋಜಿಸಲಾಗಿದ್ದ ೫ ನೆಯ 'ಅಕ್ಕ' ವಿಶ್ವಕನ್ನಡ ಸಮೇಳ'ನದಲ್ಲೂ ಉಪಸ್ಥಿತರಿದ್ದರು.[೨]

'ಔಷಧಿಯಿಲ್ಲದೆ ಬದುಕಲು ಕಲಿಯಿರಿ', 'ಯೋಗ ಶಿಬಿರ' ಎಂಬ ಪುಸ್ತಕಗಳು ಆಂಗ್ಲ ಭಾಷೆಗಳಲ್ಲಿ ಅನುವಾದ ಕಂಡಿವೆ. ತ್ರಿವಿಕ್ರಮ ಪಂಡಿತಾಚಾರ್ಯರ ನಿತ್ಯ ಪಾರಾಯಣ ಸ್ತೋತ್ರಗಳಾದ 'ಶ್ರೀ ನೃಸಿಂಹ ಸ್ತುತಿ', 'ಶ್ರೀ ವಾಯು ಸ್ತುತಿ'ಗಳನ್ನು ಸಂಸ್ಕೃತದಿಂದ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಿಗೆ ತರ್ಜುಮೆಮಾಡಿದ್ದಾರೆ. ಮಧುರಚೆನ್ನರ 'ನನ್ನ ನಲ್ಲ' ಎಂಬ ಕೃತಿಯನ್ನು ಇಂಗ್ಲೀಷ್ ಭಾಷೆಯಲ್ಲಿ 'ಮೈ ಬಿಲವೆಡ್' ಎಂದು ಅನುವಾದಿಸಿದ್ದಾರೆ. 'ನಿತ್ಯಾನಂದ ದರ್ಶನ ಮಾಸಪತ್ರಿಕೆ'ಗೆ ಒಂದು ವರ್ಷಕಾಲ ಸಂಪಾದಕರಾಗಿ ದುಡಿದಿದ್ದಾರೆ. 'ಸಂಯುಕ್ತ ಕರ್ನಾಟಕ' ಹಾಗೂ 'ಕರ್ಮವೀರ' ದಿನಪತ್ರಿಕೆಗಳಿಗೆ `ಮುಂಬಯಿಪತ್ರ'ವೆಂಬ ಅಂಕಣವನ್ನು ಬರೆಯುತ್ತಿದ್ದರು.

ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

 • ಮಧುಸಂಚಯ
 • ಹುಚ್ಚ-ಹುಚ್ಚಿ
 • ನಾಲ್ಕು ಧ್ವನಿ
 • ಸಂಜೀವಿನಿ
 • ದಶಪದಿ
 • ಮ್ಯೂಸಿಂಗ್ (ಆಂಗ್ಲಭಾಷಾ ಕವನ ಸಂಗ್ರಹ)
 • ವಚನಗಳು
 • ಏಳುಕವನ ಸಂಕಲನ ಕೃತಿಗಳು
 • ಇಂಟರ್ವ್ಯೂ
 • ಕನ್ನಡಿಯೊಳಗಿನ ಗಂಟು
 • ಸರಸ-ವಿರಸ
 • ಶಬರಿ ಮುಂತಾದ ಹನ್ನೆರಡು ಏಕಾಂಕ ನಾಟಕಗಳು

ಕಥಾ ಸಂಕಲನ[ಬದಲಾಯಿಸಿ]

 • ಧೃತರಾಷ್ಟ್ರ ಸಂತಾನ

ನಾಟಕ[ಬದಲಾಯಿಸಿ]

 • ಪ್ರಜಾಪ್ರಭುತ್ವ
 • ಗುಂಡನ ಮದುವೆ
 • ಕಾದಿರುವಳು ಶಬರಿ
 • ವಿವೇಕ ಚೂಡಾಮಣಿ
 • ಸಂಭವಾಮಿ ಯುಗೇ ಯುಗೇ
 • ನರಕ,

ಕಾದಂಬರಿ[ಬದಲಾಯಿಸಿ]

 • ವ್ಯಥೆಯಾದಳು ಹುಡುಗಿ

ಜೀವನ ಚರಿತ್ರೆ[ಬದಲಾಯಿಸಿ]

 • ಶಾಂತಾರಾಮ ಪಿಕಳೆ

ವಿಮರ್ಶೆ[ಬದಲಾಯಿಸಿ]

 • ನಾ ಕಂಡ ಬೇಂದ್ರೆ
 • ಸಮನ್ವಯಾಚಾರ್ಯ ಡಾ| ವಿ.ಕೃ.ಗೋಕಾಕ
 • ಜೀವನ ಮತ್ತು ಸಾಹಿತ್ಯ
 • ಬೇಂದ್ರೆ ಒಳನೋಟ,
 • ಬೇಂದ್ರೆ ಸಮಗ್ರ ಕಾವ್ಯ ದರ್ಶನ

ಇತರ[ಬದಲಾಯಿಸಿ]

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

 • '೨೦೦೩ ರಲ್ಲಿ ಕರ್ನಾಟಕ ಸಾಹಿತ್ಯಪರಿಷತ್ ನ ’ಕರ್ನಾಟಕ ಶ್ರೀ'.
 • 'ಮುಂಬಯಿ ಸಾಹಿತ್ಯ ಬಳಗದಿಂದ ಮಹಾರಾಷ್ಟ್ರ `ಶ್ರೇಷ್ಠ ಕನ್ನಡಿಗ',
 • ಶ್ರೀಕೃಷ್ಣ ವಿಠಲ ಪ್ರತಿಷ್ಠಾನ `ಯೋಗ-ಸಾಹಿತ್ಯ ರತ್ನಾಕರ ಪ್ರಶಸ್ತಿ',
 • 'ಬಿಲ್ಲವರ ಅಸೋಸಿಯೇಷನ್ ನಿಂದ ಶ್ರೀಗುರುನಾರಾಯಣ ಸಾಹಿತ್ಯ ಪ್ರಶಸ್ತಿ'
 • ೨೦೧೧ ರ ಸರಣಿಯ 'ಸಾಧನ ಶಿಖರ ಪ್ರಶಸ್ತಿ' ಪುರಸ್ಕಾರ.[೩][೪]
 • ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ,[೫]

ಉಲ್ಲೇಖಗಳು[ಬದಲಾಯಿಸಿ]

 1. ಕರ್ನಾಟಕ ಮಲ್ಲ,ಜೀವನ ಮತ್ತು ಸಾಹಿತ್ಯ,'ಕುವಲಯ ಕಂಡ ಅಂದತ್ತ',(ಅಂಬಿಕಾತಯಯ ದತ್ತ-೧)-ಡಾ.ಜಿ.ವಿ.ಕುಲಕರ್ಣಿ, ಪುಟ : ೬ ಮತ್ತು ೮, ಡಿಸೆಂಬರ್, ೨೯, ೨೦೧೪,ಸೋಮವಾರ,
 2. 'The Hindu','The poet from up close' September 15, 2006
 3. ಡಾ| ಜೀವಿ ಕುಲಕರ್ಣಿಗೆ ಬೇಂದ್ರೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ[ಶಾಶ್ವತವಾಗಿ ಮಡಿದ ಕೊಂಡಿ]
 4. "ಆರ್ಕೈವ್ ನಕಲು". Archived from the original on 2016-03-06. Retrieved 2014-04-13.
 5. ಕರ್ನಾಟಕ ಮಲ್ಲ, ಜನವರಿ,೦೩, ೨೦೧೫, ಶನಿವಾರ,ಪುಟ-೬,'ಡಾ.ಜಿ.ಕೆ.ಕುಲಕರ್ಣಿಯವರಿಗೆ ಅಂಬಿಕಾತನದತ್ತ ರಾಷ್ಟ್ರೀಯ ಪ್ರಶಸ್ತಿ',