ವಿಷಯಕ್ಕೆ ಹೋಗು

ಸಾಧನ ಶಿಖರ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಕರ್ಣಾಟಕ ಸಂಘ, ಮುಂಬಯಿ' ಸುಮಾರು ೮೦ ವರ್ಷಗಳಿಂದ ಮುಂಬಯಿ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಸೇವೆ ಮಾಡುತ್ತಾ ಬಂದಿದೆ. ೨೦೦೬ ರಿಂದ 'ಸಾಹಿತ್ಯ ಸಂಸ್ಕೃತಿ ಸಮಾವೇಶ' ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಸಂಘವು ಹೊರನಾಡಿನಲ್ಲಿ ಕನ್ನಡದ ನಾಡು-ನುಡಿ-ಸಾಹಿತ್ಯ-ಸಂಸ್ಕೃತಿ-ಸಂಘಟನೆ-ಶಿಕ್ಷಣ-ರಂಗಭೂಮಿ-ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂವರು ಸಾಧಕರಿಗೆ ಸಂಘದ 'ಸಾಧನ ಶಿಖರ ಪ್ರಶಸ್ತಿ' ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ಪುರಸ್ಕಾರವು, ಸ್ಮರಣಿಕೆ, ಪ್ರಶಸ್ತಿ ಪತ್ರ, ಶಾಲು, ಫಲ-ಪುಷ್ಪ, ಹಾಗೂ ೧೦,೦೦೦ ರೂಪಾಯಿಗಳ ನಗದು ಬಹುಮಾನವನ್ನು ಹೊಂದಿರುತ್ತದೆ. ಈಗಾಗಲೇ ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದ ವ್ಯಕ್ತಿಗಳ ಹೆಸರುಗಳು ಹೀಗಿವೆ :

 1. ಶ್ರೀ.ಬಿ. ಎಸ್. ಕುರ್ಕಾಲ್
 2. ಡಾ. ಜಿ. ವಿ. ಕುಲಕರ್ಣಿ,
 3. ಸುಶೀಲಾ ಆಚಾರ್ಯ,
 4. ಎಂ. ಎನ್. ಸುವರ್ಣ,
 5. ಶ್ರೀ.ಸದಾನಂದ ಸುವರ್ಣ,
 6. ಡಾ.ಬಿ.ಆರ್.ಮಂಜುನಾಥ್,
 7. ಡಾ. ಸಂಜೀವ ಶೆಟ್ಟಿ,
 8. ವಿದುಷಿ ಉಮಾ ನಾಗಭೂಷಣ,
 9. ಬಿ.ಎ.ಸನದಿ
 10. ಡಾ. ವಿಶ್ವನಾಥ ಕಾರ್ನಾಡ್,
 11. ಶ್ರೀಮತಿ. ಕುಂದಾ ರೇಗೆ,