ವಿಷಯಕ್ಕೆ ಹೋಗು

ಎಂ. ಎನ್. ಸುವರ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Gif25Guru-M N Suvarna-wr.jpg
'ಗುರು ಎಂ. ಎನ್. ಸುವರ್ಣ'

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ,’ಗುರು ಎಂ. ಎನ್. ಸುವರ್ಣ'ರು, 'ನಾಟ್ಯ ವಿಶಾರದ', ಹಾಗೂ ’ಗ್ಲೋಬಲ್ ಮಾನ್ಯ ಪ್ರಶಸ್ತಿ ವಿಜೇತ' ರು, ತಮ್ಮ ಚಿಕ್ಕ ಪ್ರಾಯದಲ್ಲೇ ಬೊಂಬಾಯಿಗೆ ಆಗಮಿಸಿ, ದಿ|'ಗುರು ಚಂದ್ರಶೇಖರ ಪಿಳ್ಳೆ'ಯವರ ಶಿಷ್ಯತ್ವದಲ್ಲಿ 'ಭರತ ನಾಟ್ಯ'ವನ್ನು ಕಲಿತು, ಅದರಲ್ಲಿ ಸಿದ್ಧಿಯನ್ನು ಪಡೆದರು. ಸನ್,೧೯೫೮ ರಲ್ಲಿ ತಾವೇ ಸ್ವಂತ ನೃತ್ಯ ಸಂಸ್ಥೆಯೊಂದನ್ನು ಸ್ಥಾಪಿಸಿ ತಮ್ಮನ್ನು 'ಸಮಾಜಸೇವೆ'ಯಲ್ಲಿ ತೊಡಗಿಸಿಕೊಂಡರು. ಸನ್. ೧೯೬೨ ರಲ್ಲಿ ನಿಧಾನವಾಗಿ ಬೆಳೆದುನಿಂತ ತಮ್ಮ ಸಂಸ್ಥೆಗೆ,'ಅರುಣೋದಯ ಕಲಾಕೇಂದ್ರ'ವೆಂದು ಹೆಸರಿಟ್ಟು ನೋಂದಣಿಗೊಳಿಸಿದರು.'ಸುವರ್ಣ', 'ಬುದ್ಧಿಮಾಂದ್ಯ ಮಕ್ಕಳಿಗೆ ಭರತ ನಾಟ್ಯ' ನೃತ್ಯದಲ್ಲಿ ವಿಶೇಷ ತರಬೇತಿಯನ್ನು ನೀಡುತ್ತಿದ್ದಾರೆ.

ನೃತ್ಯ ರೂಪಕಗಳು

[ಬದಲಾಯಿಸಿ]

ಗುರು ಸುವರ್ಣರು ನಿರೂಪಿಸಿ ನಿರ್ದೇಶಿಸಿದ ನೃತ್ಯರೂಪಕಗಳು ಹೀಗಿವೆ.

  • 'ಭಸ್ಮಾಸುರ ಮೋಹಿನಿ',
  • 'ಶಾಕುಂತಲಾ',
  • 'ಕೃಷ್ಣ ಲೀಲಾ',
  • 'ಲವ-ಕುಶ' ಮೊದಲಾವುಗಳು. ಇವುಗಳಲ್ಲಿ ಕೆಲವು ದೂರದರ್ಶನವಾಹಿನಿಯಲ್ಲಿ ಪ್ರಸಾರಗೊಂಡಿವೆ.

ಪ್ರಶಸ್ತಿಗಳು

[ಬದಲಾಯಿಸಿ]

ಗುರು ಸುವರ್ಣರ ಸಮಾಜಪರ ಸೇವೆಗಳನ್ನು ಮತ್ತು ನೃತ್ಯವನ್ನು ಮಕ್ಕಳಿಗೆ ಕಲಿಸುತ್ತಿರುವ ವಿಶೇಷ ಪದ್ಧತಿಗಳನ್ನು ಗುರುತಿಸಿ, ಸನ್, ೨೦೦೫ ರಲ್ಲಿ 'ಸಿಂಗಪುರ'ದಲ್ಲಿ ನಡೆದ ಸಮಾರಂಭವೊಂದರಲ್ಲಿ, 'ವಿಶ್ವಮಾನ್ಯ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗಿದೆ.

ಪ್ರತಿವರ್ಷವೂ ಮುಂಬಯಿ ಕರ್ನಾಟಕ ಸಂಘ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಶಿಕ್ಷಣ, ರಂಗಭೂಮಿ ಚಟುವಟಿಕೆ, ಪತ್ರಿಕೋದ್ಯಮ, ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸೇಗೆಗೈದ ಮೂವರು ಸಾಧಕರಿಗೆ,'ಸಾಧನ ಶಿಖರ ಗೌರವ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರವು, ತಲಾ 'ಐದುಸಾವಿರ ರುಪಾಯಿಗಳ ನಗದು ಹಣ', 'ಸ್ಮರಣಿಕೆ', ಹಾಗೂ 'ಸನ್ಮಾನಪತ್ರ'ಗಳನ್ನು ಒಳಗೊಂಡಿದೆ. ಸನ್, ೨೦೧೧/2011 ರ ಸರಣಿಯ ಪುರಸ್ಕಾರವನ್ನು 'ಗುರು ಎಂ.ಎನ್.ಸುವರ್ಣ'ರೂ, ತಮ್ಮ ಇನ್ನಿಬ್ಬರು ಸಾಧಕರ ಜೊತೆಯಲ್ಲಿ ಪಡೆದಿದ್ದಾರೆ.