ಸುಶೀಲಾ ಆಚಾರ್ಯ

ವಿಕಿಪೀಡಿಯ ಇಂದ
Jump to navigation Jump to search
ಸುಶೀಲಾ ಆಚಾರ್ಯ
ಚಿತ್ರ:SusheelaAcharya.JPG
ಹುಟ್ಟು
'ಸುಶೀಲಾ ಆಚಾರ್ಯ',

ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು
ರಾಷ್ಟ್ರೀಯತೆಭಾರತೀಯ
ವೃತ್ತಿಮುಂಬಯಿನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿದ'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ : 'ಧರ್ಮ ದುರಂತ','ಸತ್ಯಂ ವದ ಧರ್ಮಂ ಚರ','ರಾಧೇಯತೊಟ್ಟಿಲು ತೂಗಿದ ಕೈ',
ಖ್ಯಾತಿಹಿಂದೂಸ್ತಾನೀ ಸಂಗೀತದಲ್ಲಿ ಪರಿಣತಿಗಳಿಸಿದ್ದಾರೆ. ಸುಶೀಲಾ ಆಚಾರ್ಯರವರು, 'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ. ' ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳು : 'ರಸಮಂಜರಿ,ಸಗಮ ಸಂಗೀತ', ಮುಂತಾದವುಗಳು.
ಪ್ರಶಸ್ತಿಗಳುಮುಂಬಯಿನಗರದ ಕರ್ನಾಟಕ ಸಂಘವು ಪ್ರದಾನಮಾಡುವ ಸಾಧನ ಶಿಖರ ಪ್ರಶಸ್ತಿಯ ೨೦೧೧ ರ ಸರಣಿಯ ೩ಜನ ಸಾಧಕರ ಜೊತೆಯಲ್ಲಿ ಒಬ್ಬರಾಗಿ ಗಳಿಸಿದ್ದಾರೆ.

'ಸುಶೀಲಾ ಆಚಾರ್ಯ' ರು, ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು. ವಿದ್ಯಾರ್ಥಿದೆಸೆಯಲ್ಲೇ ಸಂಗೀತದ ಪ್ರತಿಭೆಯನ್ನು ಗುರುತಿಸಲಾಯಿತು. ಮುಂದೆ ಅವರಲ್ಲಿ ಸುಶುಪ್ತವಾಗಿದ್ದ ಅಭಿನಯ ಕಲೆ ಬೊಂಬಾಯಿಗೆ ಬಂದಮೇಲೆ ಬೆಳಕಿಗೆ ಬಂತು. ಮುಂಬಯಿನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿ ಸಹೃದಯರ ಗಮನಕ್ಕೆ ಬಂದರು. 'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ.

  • 'ಧರ್ಮ ದುರಂತ',
  • 'ಸತ್ಯಂ ವದ ಧರ್ಮಂ ಚರ',
  • 'ರಾಧೇಯ'
  • 'ತೊಟ್ಟಿಲು ತೂಗಿದ ಕೈ',

ಹಿಂದೂಸ್ತಾನೀ ಸಂಗೀತವನ್ನು ಅರಗಿಸಿಕೊಂಡಿರುವ ಸುಶೀಲಾ ಆಚಾರ್ಯರವರು, 'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ. 'ಸುಶೀಲಾ ಆಚಾರ್ಯ'ರು ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  • 'ರಸಮಂಜರಿ,'
  • 'ಸಗಮ ಸಂಗೀತ', ಮುಂತಾದವುಗಳು.

'ಮುಂಬಯಿನ ಚಿನ್ಮಯ ಮಿಶನ್ ಸಂಸ್ಥೆ' 'ಸುಶೀಲಾ ಆಚಾರ್ಯ'ರ ಪ್ರತಿಭೆ ಮತ್ತು ಸಂಗೀತಾಸಕ್ತಿಗಳನ್ನು ಗುರುತಿಸಿ, ಗೌರವಿಸಿದೆ.

'ಸಾಧನ ಶಿಖರ ಪ್ರಶಸ್ತಿ'[ಬದಲಾಯಿಸಿ]

ಪ್ರತಿವರ್ಷವೂ ಮುಂಬಯಿ ಕರ್ನಾಟಕ ಸಂಘ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಶಿಕ್ಷಣ, ರಂಗಭೂಮಿ ಚಟುವಟಿಕೆ, ಪತ್ರಿಕೋದ್ಯಮ, ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸೇಗೆಗೈದ ಮೂವರು ಸಾಧಕರಿಗೆ,'ಸಾಧನ ಶಿಖರ ಗೌರವ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರವು, ತಲಾ 'ಐದುಸಾವಿರ ರುಪಾಯಿಗಳ ನಗದು ಹಣ', 'ಸ್ಮರಣಿಕೆ', ಹಾಗೂ 'ಸನ್ಮಾನಪತ್ರ'ಗಳನ್ನು ಒಳಗೊಂಡಿದೆ. ಸನ್,೨೦೧೧ ರ ಸರಣಿಯ ಪುರಸ್ಕಾರವನ್ನು 'ಸುಶೀಲಾ ಆಚಾರ್ಯರೂ', ತಮ್ಮ ಇನ್ನಿಬ್ಬರು ಸಾಧಕರ ಜೊತೆಯಲ್ಲಿ ಪಡೆದರು. ಶ್ರೀಮತಿ. ಪ್ರಮೋದಿನಿ ರಾವ್, ಸುಶೀಲಾ ಆಚಾರ್ಯರ ಮಗಳು. ಹಿಂದುಸ್ತಾನಿ ಸಂಗೀತದಲ್ಲಿ ಪರಿಣಿತರು. ಚಿನ್ಮಯ ಆಶ್ರಮದ ನಾದಬಿಂದು ವಿಭಾಗದಲ್ಲಿ ತಾಯಿ,ಮಗಳಿಬ್ಬರೂ, ಅಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.