ಪ್ರಮೋದಿನಿ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಪ್ರಮೋದಿನಿ ರಾವ್,
ಜನನ
ಪ್ರಮೋದಿನಿ. ಸಂಗೀತ ಶಿಕ್ಷಣವನ್ನು ತಾಯಿ,'ಸುಶೀಲ ಆಚಾರ್ಯ'ರಿಂದ ಪಡೆದರು.
ರಾಷ್ಟ್ರೀಯತೆಭಾರತೀಯ.
ವಿದ್ಯಾರ್ಹತೆಹಿಂದೂಸ್ಥಾನಿ ಸಂಗೀತದಲ್ಲಿ 'ಸಂಗೀತ ವಿಶಾರದ ಪದವಿ'ಯ ಪ್ರಶಿಕ್ಷಣವನ್ನು 'ಲಖ್ನೊದ ಭಟ್ಖಂಡೆ ವಿವಿ' ದಲ್ಲಿ ಗಳಿಸಿದರು. ಮುಂಬಯಿಯ ಭಾರತೀಯ ವಿದ್ಯಾಭವನದ ಶಾಖೆಯಾದ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ,'ಶ್ರೀ ಅತ್ತಾವರ್' ಗುರುಗಳಿಂದ ಕಲಿತರು.ಪಂ.ಜಲ್ ಬಾಲ ಪೊರಿಯ', 'ಶ್ರೀಮತಿ ಶಂಪ ಪಕ್ರಶಿ', 'ಶ್ರೀಮತಿ, ಶಶಿಕಲ ಕೈಕಿಣಿ',ಶ್ರೀಮತಿ ಉಶಾ ದೇಶಪಾಂಡೆ (ಮುಂಬಯಿಯ) ಪುಣೆಯಲ್ಲಿ 'ಡಾ.ವಿಕಾಸ್ ಕಶಾಲ್ಕರ್'
ಉದ್ಯೋಗವಿದೇಶಿ ಕಂಪೆನಿಯಲ್ಲಿ (MNCs) ೧೮ ವರ್ಷ ಕೆಲಸಮಾಡಿ ನಿವೃತ್ತರಾಗಿದ್ದಾರೆ.
ಇದಕ್ಕೆ ಖ್ಯಾತರುಮುಂಬಯಿಯ (BSKB Association) ಅಸೋಸಿಯೇಷನ್ ಸಭಾಂಗಣದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.

'ಪ್ರಮೋದಿನಿ ರಾವ್', 'ಮುಂಬಯಿನ ಚಿನ್ಮಯ ನಾದಬಿಂದು ಸಂಗೀತಾಲಯದ ನಿರ್ದೇಶಕಿ', ಒಳ್ಳೆಯ ಕಂಠಶ್ರೀ ಹೊಂದಿದ್ದಾರೆ. ಬಾಲ್ಯದಿಂದಲೇ ಸಂಗೀತ ಶಿಕ್ಷಣವನ್ನು ತಮ್ಮ ತಾಯಿ, 'ಸುಶೀಲ ಆಚಾರ್ಯ'ರಿಂದ ರಿಂದ ಪಡೆದರು. ಮುಂದೆ ಅವರು ಹಿಂದೂಸ್ಥಾನಿ ಸಂಗೀತದಲ್ಲಿ 'ಸಂಗೀತ ವಿಶಾರದ ಪದವಿ'ಯ ಪ್ರಶಿಕ್ಷಣವನ್ನು 'ಲಖ್ನೊದ ಭಟ್ಖಂಡೆ ವಿವಿ' ದಲ್ಲಿ ಗಳಿಸಿದರು. ಮುಂಬಯಿಯ ಭಾರತೀಯ ವಿದ್ಯಾಭವನದ ಶಾಖೆಯಾದ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ,'ಶ್ರೀ ಅತ್ತಾವರ್' ಗುರುಗಳಿಂದ ಕಲಿತರು. ಮುಂದೆ, 'ಪಂ.ಜಲ್ ಬಾಲ ಪೊರಿಯ', 'ಶ್ರೀಮತಿ ಶಂಪ ಪಕ್ರಶಿ', 'ಶ್ರೀಮತಿ, ಶಶಿಕಲ ಕೈಕಿಣಿ',ಶ್ರೀಮತಿ ಉಶಾ ದೇಶಪಾಂಡೆ (ಮುಂಬಯಿಯ) ಪುಣೆಯಲ್ಲಿ 'ಡಾ.ವಿಕಾಸ್ ಕಶಾಲ್ಕರ್' ರವರಿಂದ ಉನ್ನತ ಶಿಕ್ಷಣದಲ್ಲಿ ತಮ್ಮನ್ನುತೊಡಗಿಸಿಕೊಂಡಿದ್ದಾರೆ. ಪ್ರಮೋದಿನಿ 'ಚಿನ್ಮಯ ಸ್ವರಾಂಜಲಿ ವಿಭಾಗ'ದ 'ಚಿನ್ಮಯ ಮಿಶನ್ ನ ಸಹಸಂಸ್ಥಾಪಕರು. ನುರಿತ, ಪ್ರತಿಭಾವಂತ ಕಲಾವಿದರ ಸಹಾಯದಿಂದ ಚಿನ್ಮಯ ಮಿಶನ್ ನಲ್ಲಿ ಧ್ಯಾನದಲ್ಲಿ ಆಸಕ್ತಿಹೊಂದಿದ ಭಕ್ತರು, ಶ್ರದ್ಧಾಳುಗಳಿಗೆ ಸಂಗೀತವನ್ನು ಬೋಧಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಸಮಯಗಳಲ್ಲಿ ಆಶ್ರಮದ ದೊಡ್ಡ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನವನ್ನು ನಿಯೋಜಿಸುತ್ತಿದ್ದಾರೆ. ಮುಂಬಯಿಯ (BSKB Association) ಅಸೋಸಿಯೇಷನ್ ಸಭಾಂಗಣದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಚಿನ್ಮಯ ಮಿಶನ್' ನಲ್ಲಿ ಅಪಾರ ಗೌರವವನ್ನು ಸಂಪಾದಿಸಿದ್ದಾರೆ.

'ಪ್ರಮೋದಿನಿ ರಾವ್'CNB' ವಿನ ನಿರ್ದೇಶಕಿ[ಬದಲಾಯಿಸಿ]

ಪ್ರಮೋದಿನಿ ರಾವ್, [೧] ವಿದೇಶಿ ಕಂಪೆನಿಯಲ್ಲಿ (MNCs) ೧೮ ವರ್ಷ ಕೆಲಸಮಾಡಿದ್ದಾರೆ. ಸಂಗೀತಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಕಂಪೆನಿಯನ್ನು ಬಿಟ್ಟು ಈಗ, ತಮ್ಮ ಸಂಪೂರ್ಣ ಸಮಯವನ್ನು 'ಚಿನ್ಮಯ ನಾದ ಬಿಂದು ಸಂಸ್ಥೆ'('CNB') ಗೆ ಮುಡಿಪಾಗಿಟ್ಟಿದ್ದಾರೆ. ಪೂಜ್ಯ ಯತಿವರ್ಯ,'ಸ್ವಾಮಿ ತೇಜೋಮಯಾನಂದ' ರಿಂದ 'ರೆಸಿಡೆಂಟ್ ನಿರ್ದೇಶಕ'ರಾಗಿ ನಿಯುಕ್ತರಾಗಿದ್ದಾರೆ. [೨] ಮೈಸೂರ್ ಅಸೋಸಿಯೇಷನ್ ಮುಂಬಯಿನಲ್ಲಿ ಪ್ರಮೋದಿಯವರ ಗಾಯನವಿತ್ತು.[೩]

ಪ್ರಶಸ್ತಿಗಳು[ಬದಲಾಯಿಸಿ]

  1. ಗಾನಕೋಕಿಲ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

  1. ಪ್ರಮೋದಿನಿ ರಾವ್,
  2. 'Chinmaya nada bindu', Pramodini Rao
  3. ಕವಿಯಾಗಲು ಆಮಿಷಗೆಲ್ಲುವುದು ಮುಖ್ಯ,ಉದಯವಾಣಿ,ಏಪ್ರಿಲ್,೧೩,೨೦೧೬[permanent dead link]