ವಿಷಯಕ್ಕೆ ಹೋಗು

ಸುಶೀಲಾ ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಶೀಲಾ ಆಚಾರ್ಯ
ಜನನ
'ಸುಶೀಲಾ ಆಚಾರ್ಯ',

ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಮುಂಬಯಿನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿದ'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ : 'ಧರ್ಮ ದುರಂತ','ಸತ್ಯಂ ವದ ಧರ್ಮಂ ಚರ','ರಾಧೇಯತೊಟ್ಟಿಲು ತೂಗಿದ ಕೈ',
ಗಮನಾರ್ಹ ಕೆಲಸಗಳುಹಿಂದೂಸ್ತಾನೀ ಸಂಗೀತದಲ್ಲಿ ಪರಿಣತಿಗಳಿಸಿದ್ದಾರೆ. ಸುಶೀಲಾ ಆಚಾರ್ಯರವರು, 'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ. ' ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳು : 'ರಸಮಂಜರಿ,ಸಗಮ ಸಂಗೀತ', ಮುಂತಾದವುಗಳು.
ಪ್ರಶಸ್ತಿಗಳುಮುಂಬಯಿನಗರದ ಕರ್ನಾಟಕ ಸಂಘವು ಪ್ರದಾನಮಾಡುವ ಸಾಧನ ಶಿಖರ ಪ್ರಶಸ್ತಿಯ ೨೦೧೧ ರ ಸರಣಿಯ ೩ಜನ ಸಾಧಕರ ಜೊತೆಯಲ್ಲಿ ಒಬ್ಬರಾಗಿ ಗಳಿಸಿದ್ದಾರೆ.

ಸುಶೀಲಾ ಆಚಾರ್ಯರು, (ನಿಧನ: ೧೦,ಜನವರಿ, ೨೦೨೨) ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು. ವಿದ್ಯಾರ್ಥಿದೆಸೆಯಲ್ಲೇ ಸಂಗೀತದ ಪ್ರತಿಭೆಯನ್ನು ಗುರುತಿಸಲಾಯಿತು. ಮುಂದೆ ಅವರು ಮುಂಬಯಿನಗರಕ್ಕೆ ಬಂದಮೇಲೆ ನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿ ಸಹೃದಯರ ಗಮನಕ್ಕೆ ಬಂದರು.'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ.

  1. 'ಧರ್ಮ ದುರಂತ',
  2. 'ಸತ್ಯಂ ವದ ಧರ್ಮಂ ಚರ',
  3. 'ರಾಧೇಯ'
  4. 'ತೊಟ್ಟಿಲು ತೂಗಿದ ಕೈ',

ಹಿಂದೂಸ್ತಾನಿ ಸಂಗೀತಾಸಕ್ತರು

[ಬದಲಾಯಿಸಿ]

ಹಿಂದೂಸ್ತಾನೀ ಸಂಗೀತವನ್ನು ಅರಗಿಸಿಕೊಂಡಿರುವ ಸುಶೀಲಾ ಆಚಾರ್ಯರವರು,'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ.'ಸುಶೀಲಾ ಆಚಾರ್ಯ'ರು ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  1. 'ರಸಮಂಜರಿ,'
  2. 'ಸುಗಮ ಸಂಗೀತ', ಮುಂತಾದವುಗಳು.

'ಮುಂಬಯಿನ ಚಿನ್ಮಯ ಮಿಶನ್ ಸಂಸ್ಥೆ'

[ಬದಲಾಯಿಸಿ]

'ಸುಶೀಲಾ ಆಚಾರ್ಯ'ರ ಪ್ರತಿಭೆ ಮತ್ತು ಸಂಗೀತಾಸಕ್ತಿಗಳನ್ನು ಗುರುತಿಸಿ, ಗೌರವಿಸಿದೆ. ಹಾಗಾಗಿ ಚಿನ್ಮಯ ಮಿಶನ್ ನ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಸುಶೀಲಾ ಆಚಾರ್ಯರವರು, ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ಸಾಧನ ಶಿಖರ ಪ್ರಶಸ್ತಿ

[ಬದಲಾಯಿಸಿ]

ಪ್ರತಿವರ್ಷವೂ ಮುಂಬಯಿ ಕರ್ನಾಟಕ ಸಂಘ,ನಾಡು,ನುಡಿ,ಸಾಹಿತ್ಯ,ಸಂಸ್ಕೃತಿ,ಸಂಘಟನೆ,ಶಿಕ್ಷಣ,ರಂಗಭೂಮಿ ಚಟುವಟಿಕೆ,ಪತ್ರಿಕೋದ್ಯಮ,ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸೇಗೆಗೈದ ಮೂವರು ಸಾಧಕರಿಗೆ,'ಸಾಧನ ಶಿಖರ ಗೌರವ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರವು, ತಲಾ 'ಐದುಸಾವಿರ ರುಪಾಯಿಗಳ ನಗದು ಹಣ','ಸ್ಮರಣಿಕೆ', ಹಾಗೂ 'ಸನ್ಮಾನಪತ್ರ'ಗಳನ್ನು ಒಳಗೊಂಡಿದೆ. ಸನ್,೨೦೧೧ ರ ಸರಣಿಯ ಪುರಸ್ಕಾರವನ್ನು 'ಸುಶೀಲಾ ಆಚಾರ್ಯರೂ', ತಮ್ಮ ಇನ್ನಿಬ್ಬರು ಸಾಧಕರ ಜೊತೆಯಲ್ಲಿ ಪಡೆದರು. ಶ್ರೀಮತಿ. ಪ್ರಮೋದಿನಿ ರಾವ್, [] ಸುಶೀಲಾ ಆಚಾರ್ಯರ ಮಗಳು, ಹಿಂದುಸ್ತಾನಿ ಸಂಗೀತದಲ್ಲಿ ಪರಿಣಿತರು. ಚಿನ್ಮಯ ಆಶ್ರಮದ ನಾದಬಿಂದು ವಿಭಾಗದಲ್ಲಿ ತಾಯಿ,ಮಗಳಿಬ್ಬರೂ, ಅಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. []

ಶ್ರೀಮತಿ ಸುಶೀಲಾ ಆಚಾರ್ಯ ಅವರು ೧೦, ಜನವರಿ, ೨೦೨೨ ರಂದು ನಿಧನರಾದರು. []

ಉಲ್ಲೇಖಗಳು

[ಬದಲಾಯಿಸಿ]
  1. ನಿರ್ದೇಶಕಿ ಪ್ರಮೋದಿನಿ ರಾವ್
  2. Ganasarswati Smt.Sushila acharya is no more
  3. "ಗೋಕುಲವಾಣಿ,ನುಡಿನಮನ,'ಅಸ್ತಂಗತವಾದ ಸಂಗೀತ ಸರಸ್ವತಿ-ಗೋಕುಲರತ್ನ, ಶ್ರೀಮತಿ.ಸುಶೀಲಾ ಆಚಾರ್ಯ',ಶ್ರೀಮತಿ. ಪ್ರೇಮಾ ಎಸ್.ರಾವ್,ಫೆಬ್ರವರಿ, ೨೦೨೨,ಪುಟ.೪೪" (PDF). Archived from the original on 2022-02-24. Retrieved 2022-02-24.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]