ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್

ಜೀವನ[ಬದಲಾಯಿಸಿ]

ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್ ಬ್ರಿಟನ್ನಿನ ಪ್ರಸಿದ್ಧ ಭೌತವಿಜ್ಞಾನಿ ಮತ್ತು ಖಗೋಳ ವಿಜ್ಞಾನಿ. ಇವರು ಕ್ರಿ.ಶ ೧೮೩೧,ಜೂನ್ ೧೫ರಂದು ಜನಿಸಿದರು. ಇವರು ಭೌತ ಹಾಗೂ ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ. [೧]

ಸಾಧನೆಗಳು[ಬದಲಾಯಿಸಿ]

ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್, ಪ್ರಹರಿಸುತ್ತಿರುವ ವಿದ್ಯುತ್ ಮತ್ತು ಕಾಂತೀಯ ತರಂಗಗಳ ನಡುವಿನ ಅಂತರವರ್ತನೆಗಳಿಗೆ ಕುರಿತಂತೆ ಗಣಿತ ಶಾಸ್ತ್ರಿಯ ಸೂತ್ರಗಳನ್ನು ನಿರೂಪಿಸಿದರು. ಇವರು ಬೆಳಕು ಒಂದು ರೂಪದ ವಿದ್ಯುತ್ ಕಾಂತೀಯ ವಿಕಿರಣ ಎಂದು ಪ್ರತಿಪಾದಿಸಿದರು. ಈ ಮಹತ್ವದ ಸಂಶೋಧನೆ ಹೆನ್ರಿಕ್ ಹಾರ್ಟ್ ರೇಡಿಯೋ ತರಂಗಗಳನ್ನು ಸಂಶೋಧಿಸಲು ನಾಂದಿಯಾಯಿತು. ಇದಕ್ಕೂ ಮೊದಲು ಜೇಮ್ಸ್‌ ಕ್ಲರ್ಕ್‌ ವರ್ಣ ಗ್ರಹಿಕೆಯ ಮತ್ತು ವರ್ಣ ಅಂಧತೆಯ ಕುರಿತು ಆಳವಾದ ಅಭ್ಯಾಸಮಾಡಿ, ಮ್ಯಾಕ್ಸ್‌ವೆಲ್ ಬಿಲ್ಲೆ ಯನ್ನು ಕಂಡುಹಿಡಿದರು. [೨]

ಮ್ಯಾಕ್ಸ್‌ವೆಲ್ ರವರ ಮತ್ತೊಂದು ಮಹತ್ವದ ಸಂಶೋಧನೆಯೆಂದರೆ, ಶನಿಗ್ರಹದ ಸುತ್ತಲೂ ಇರುವ ಉಂಗುರಗಳು ಘನ ವಸ್ತುವಿನಿಂದ ರಚನೆಯಾದದ್ದಲ್ಲ. ಅದು ಸಣ್ಣ ಸಣ್ಣ ಕಣಗಳಿಂದ ರಚನೆಯಾದದ್ದು ಎಂದು ತೋರಿಸಿಕೊಟ್ಟರು. ಇವರ ಇನ್ನೊಂದು ಮಹತ್ವದ ಕೊಡುಗೆಯೆಂದರೆ ಅನಿಲಗಳ ಚಲನ ಸಿದ್ಧಾಂತ ವಿಕಾಸಗೊಳಿಸಿದ್ದು . ಇವರು ೧೮೭೯ ರಲ್ಲಿ ವಿಧಿವಶರಾದರು.

ಸಂಶೋಧನೆಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://www.britannica.com/EBchecked/topic/370621/James-Clerk-Maxwell
  2. http://www.clerkmaxwellfoundation.org/