ವಿಷಯಕ್ಕೆ ಹೋಗು

ಹೆನ್ರಿ ಕ್ಯಾವೆಂಡಿಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿ ಕ್ಯಾವೆಂಡಿಷ್
Henry Cavendish
ಜನನ(೧೭೩೧-೧೦-೧೦)೧೦ ಅಕ್ಟೋಬರ್ ೧೭೩೧
Nice, Kingdom of Sardinia
ಮರಣ24 February 1810(1810-02-24) (aged 78)
ಲಂಡನ್, ಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಷ್
ಕಾರ್ಯಕ್ಷೇತ್ರರಸಾಯನಶಾಸ್ತ್ರ, ಭೌತಶಾಸ್ತ್ರ
ಸಂಸ್ಥೆಗಳುRoyal Institution
ಅಭ್ಯಸಿಸಿದ ವಿದ್ಯಾಪೀಠPeterhouse, Cambridge
ಪ್ರಸಿದ್ಧಿಗೆ ಕಾರಣDiscovery of hydrogen
Measuring the Earth's density (Cavendish experiment)

ಹೆನ್ರಿ ಕ್ಯಾವೆಂಡಿಷ್ (10 ಒಕ್ಟೋಬರ್ 1731 – 24 ಫೆಬ್ರವರಿ 1810). ಇಂಗ್ಲೆಂಡಿನ ರಸಾಯನ ಹಾಗೂ ಭೌತವಿಜ್ಞಾನಿ.

ಬಾಲ್ಯ

[ಬದಲಾಯಿಸಿ]

ಜನನ 1731ರ ಅಕ್ಟೋಬರ್ 10ರಂದು. ಈತನಿಗೆ ಎರಡು ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡಳು. ಕೈಬೀಸಿ ಕರೆಯುತ್ತಿದ್ದ ಆಡಂಬರದ ಶ್ರೀಮಂತ ಜೀವನದ ಆಸೆಗೆ ಬಲಿಯಾಗದೆ ಸತ್ಯಶೋಧನೆಗಾಗಿ ವಿಜ್ಞಾನದ ಮೇಲಿನ ಹಂಬಲದಿಂದ ತನ್ನ ಇಡೀ ಜೀವನದ ಅತ್ಯಮೂಲ್ಯ ಕಾಲವೆಲ್ಲವನ್ನೂ ಪ್ರಯೋಗಾಲಯ ಮತ್ತು ಗ್ರಂಥಭಂಡಾರಗಳಲ್ಲಿ ಕಳೆದು ಸರಳಜೀವನವನ್ನು ನಡೆಸಿದ ಆದರ್ಶ ವಿಜ್ಞಾನಿ. ವಿಜ್ಞಾನವನ್ನೇ ವರಿಸಿದ್ದ ಹೆನ್ರಿ ಕ್ಯಾವೆಂಡಿಷನ ಜೀವನದಲ್ಲಿ ಬೇರೊಬ್ಬ ಮಡದಿಯ ಅವಶ್ಯಕತೆ ಇರಲಿಲ್ಲ. ಈತ ಅವಿವಾಹಿತನಾಗಿಯೇ ಉಳಿದಿದ್ದ. ಏಕಾಂತ ಜೀವನ ಇವನಿಗೆ ಬಲುಪ್ರಿಯ. ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಹೋದ್ಯೋಗಿಗಳೊಡನೆ ನಡೆಸುತ್ತಿದ್ದ ಮಾತುಕತೆಗಳೆಷ್ಟೋ ಅಷ್ಟು.. ವೈಯಕ್ತಿಕ ಜೀವನದಲ್ಲಿ ತನ್ನ ಹತ್ತಿರದ ನೆಂಟರೊಡನೆ ಕೂಡ ಹೆಚ್ಚು ಸಂಪರ್ಕವನ್ನು ಈತ ಪಡೆದಿರಲಿಲ್ಲ. ಬಲು ನಾಚಿಕೆ ಪ್ರವೃತ್ತಿಯುಳ್ಳವ. ತನ್ನ ಬಗ್ಗೆ ಪ್ರಚಾರಕ್ಕೆ ಎಂದೂ ಅವಕಾಶ ನೀಡಲಿಲ್ಲ. ಇದರಿಂದಾಗಿ ಈತನ ಅಮೂಲ್ಯ ಸಾಧನೆಗಳು ಸಕಾಲದಲ್ಲಿ ಪ್ರಕಟವಾಗಲಿಲ್ಲ. ಆದರೂ ಕ್ಯಾವೆಂಡಿಷನ ನಿಧನಾನಂತರ ಪ್ರಕಟವಾಗಿರುವ ಆತನ ಸಾಧನೆಗಳು ಅವನಿಗೆ ವಿಜ್ಞಾನಪ್ರಪಂಚದಲ್ಲಿ ವಿಶಿಷ್ಟವಾದ ಸ್ಥಾನಮಾನಗಳನ್ನು ಗಳಿಸಿಕೊಟ್ಟಿವೆ.

ವಿದ್ಯಾಭ್ಯಾಸ

[ಬದಲಾಯಿಸಿ]

ಕ್ಯಾವೆಂಡಿಷನ ವಿದ್ಯಾಭ್ಯಾಸ ನಡೆದದ್ದು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ. ವ್ಯಕ್ತಿಯೊಬ್ಬನ ಪ್ರತಿಭೆಯ ಪ್ರತೀಕ ಪದವಿ ಆಗಲೇಬೇಕಾಗಿಲ್ಲ ಎಂಬುದಕ್ಕೆ ಕ್ಯಾವೆಂಡಿಷನೇ ಸಾಕ್ಷಿ. ವಿಶ್ವವಿದ್ಯಾಲಯದ ವ್ಯಾಸಂಗ ಮಾಡಿದನಾದರೂ ಪರೀಕ್ಷಕರನ್ನು ಎದುರಿಸಲು ಅಳುಕಿ ಹಿಂಜರಿದ ಇವನು ಯಾವ ಪದವಿಯನ್ನೂ ಪಡೆಯಲಿಲ್ಲ[] . ಈತನ ಔಪಚಾರಿಕ ವಿದ್ಯಾಭ್ಯಾಸ ಹೀಗೆ ವೈಫಲ್ಯದಲ್ಲಿ ಮುಕ್ತಾಯವಾಯಿತು(1753). ಆದರೆ ಮುಂದೆ ಕೇವಲ ಅರೇ ವರ್ಷಗಳ ಅವಧಿಯಲ್ಲಿ ಈತ ರಾಯಲ್ ಸೊಸೈಟಿಯ ಸದಸ್ಯತ್ವದ ಗೌರವಕ್ಕೆ ಪಾತ್ರನಾಗುವನೆಂದು ಆಗ ಯಾರೂ ಊಹಿಸಿರಲಾರರು. ಕ್ಯಾವೆಂಡಿಷ್ ಮುಂದೆ ಫ್ರೆಂಚ್ ಇನ್ಸ್‍ಟಿಟ್ಯೂಟಿನ ವಿದೇಶೀ ಪ್ರತಿನಿಧಿಯೂ ಆಗಿದ್ದ.

ಸಾಧನೆ

[ಬದಲಾಯಿಸಿ]
Cavendish's apparatus for making and collecting hydrogen

ವಿಜ್ಞಾನಪ್ರಪಂಚದಲ್ಲಿ ಕ್ಯಾವೆಂಡಿಷ್ ಸಾಧಿಸಿದ ಕಾರ್ಯಗಳು ಬೆಲೆಕಟ್ಟಲಾರದಂಥವು. ನಡೆಸಿದ ಪ್ರಯೋಗಗಳು ಅಪಾರ. ಕಾರ್ಯಸೀಮೆ ಬಲು ವಿಸ್ತಾರ. ಭೌತವಿಜ್ಞಾನಿ ಕ್ಯಾವೆಂಡಿಷ್ ರಸಾಯನಶಾಸ್ತ್ರ ಸಂಶೋಧಕನೂ ಆಗಿದ್ದ. ಪ್ರೀಸ್ಟ್ಲಿ ಮತ್ತು ಷೀಲೆಯರೊಂದಿಗೆ ಈತ ಇಂದಿನ ರಸಾಯನಶಾಸ್ತ್ರದ ಜನಕರಲ್ಲೊಬ್ಬ. ಇವನಿಗೆ ಭೂವಿಜ್ಞಾನದಲ್ಲಿಯೂ ಅಭಿರುಚಿಯಿದ್ದಂತೆ ತೋರುವುದು. ಗಾಳಿ ಅನಿಲ ಮಿಶ್ರಣವೆಂದು ತಿಳಿಸಿದ್ದು, ಬಂಧಿತ ವಾಯುವಿನ ಗುಣಗಳನ್ನು ಬೆಳಕಿಗೆ ತಂದು ಇಂಗಾಲ ದಹಿಸಿದಾಗ ಈ ಅನಿಲ ಬಿಡುಗಡೆಯಾಗುವುದರಿಂದ ಈ ಇಂಧನ ಅಪಾಯಕಾರಿ ಎಂದದ್ದು, ನಮ್ಮ ಗಾಳಿಗಿಂತಲೂ ವಿಭಿನ್ನವಾದ ದಹ್ಯ ವಾಯುವೊಂದನ್ನು (ಊ2) ಆವಿಷ್ಕರಿಸಿ ಅದರ ಅನೇಕ ಗುಣಗಳನ್ನು ಬೆಳಕಿಗೆ ತಂದದ್ದು, ವಾಯುಮಂಡಲದ ರಚನೆಯ ಅಂಗವಾಗಿ ನಿಷ್ಕ್ರಿಯವಾದ ಅನಿಲವೊಂದರ ಇರುವಿಕೆಯನ್ನು ಸೂಚಿಸಿದ್ದು, ನೀರು ಸರಳಧಾತುವಲ್ಲ ಬದಲು ಆಮ್ಲಜನಕ ಮತ್ತು ದಹ್ಯವಾಯುಗಳನ್ನು (ಊ2) ವಿದ್ಯುತ್ ಕಿಡಿಯ ಸಹಾಯದಿಂದ ಉರಿಸಿದಾಗ ದೊರೆಯುವ ಸಂಯುಕ್ತವಸ್ತು ಎಂಬುದನ್ನು ತೋರಿಸಿದ್ದು, ನೈಟ್ರಿಕ್ ಆಮ್ಲದ ರಾಸಾಯನಿಕ ರಚನೆಯನ್ನು ವಿವರಿಸಿದ್ದು (1704)-ಇವೇ ಮೊದಲಾದವು ಕ್ಯಾವೆಂಡಿಷ್ ರಸಾಯನವಿಜ್ಞಾನದಲ್ಲಿ ಸಾಧಿಸಿದ ಸಾಧನೆಗಳಲ್ಲಿ ಹೆಸರಾಂತವು. ಭೂಮಿಯ ಸಾಂದ್ರತೆಯನ್ನು ಕಂಡು ಹಿಡಿದದ್ದು ಭೌತವಿಜ್ಞಾನದಲ್ಲಿ ಈತನ ಮಹಾಸಾಧನೆ. ಇದನ್ನು ಪ್ರಥಮವಾಗಿ ಸಾಧಿಸಿದವ ಇವನೇ.ನ್ಯೂಟನ್ನನ ಸಾರ್ವತ್ರಿಕ ಗುರುತ್ವಾಕರ್ಷಣ ನಿಯಮದ ಪ್ರಕಾರ ಒ1 ಮತ್ತು ಒ1 ದ್ರವ್ಯರಾಶಿಗಳಿರುವ ಎರಡು ಕಾಯಗಳ ನಡುವಿನ ಪರಸ್ಪರ ಆಕರ್ಷಣಬಲ ಇಲ್ಲಿ ಉ ಗುರುತ್ವಾಕರ್ಷಣದ ನಿಯತಾಂಕ; ಡಿ ಆಕಾಶಕಾಯಗಳ ಗುರುತ್ವ ಕೇಂದ್ರಗಳ ನಡುವಿನ ಅಂತರ. ಜ್ಞಾತ ದ್ರವ್ಯರಾಶಿಗಳಿರುವ (ಗೊತ್ತಿವೆ) ಎರಡು ಕಾಯಗಳನ್ನು ಆಯಬಹುದು. ಅವುಗಳ ನಡುವಿನ ಅಂತರ ಡಿ ನ್ನು ಅಳೆಯಬಹುದು. ಇಂಥ ಒಂದು ಪ್ರಯೋಗವನ್ನು ರೂಪಿಸಿ ಆ ಕಾಯಗಳ ನಡುವಿನ ಗುರುತ್ವಾಕರ್ಷಣ ಬಲವನ್ನು ತಿಳಿಯೋಣ ಎಂದರೆ ಉ ಯ ಬೆಲೆ, ಅದು ನಿಯತಾಂಕವಾಗಿದ್ದರೂ, ಅಜ್ಞಾತವಾಗಿರುವುದರಿಂದ ಪ್ರಯೋಗ ಸ್ಥಗಿತವಾಗುತ್ತದೆ. ಆದ್ದರಿಂದ ಉಯ ಬೆಲೆಯನ್ನು ಗೊತ್ತುಪಡಿಸುವುದು ಕ್ಯಾವೆಂಡಿಷನ ಎದುರಿಗಿದ್ದ ಸಮಸ್ಯೆ. ಈತ ಒಂದು ಅಭೂತಪೂರ್ವ ಪ್ರಯೋಗವನ್ನು ರೂಪಿಸಿದ (1798). ಹಗುರಾದ ಒಂದು ಸರಳಿನ ಕೇಂದ್ರಕ್ಕೆ ತಂತಿಯನ್ನು ಬಂಧಿಸಿ ಆ ಸರಳನ್ನು ತೂಗಗೊಟ್ಟ.. ಸರಳಿನ ಒಂದೊಂದು ಕೊನೆಯಲ್ಲೂ ಸೀಸದ ಹಗುರಾದ ಒಂದೊಂದು ಚಂಡನ್ನು ಜೋಡಿಸಲಾಗಿತ್ತು. ಸರಳು ಮತ್ತು ಸೀಸದ ಚಂಡುಗಳ ಈ ವ್ಯವಸ್ಥೆ ತಂತಿಯ ಸುತ್ತ ಮುಕ್ತವಾಗಿ ಆವರ್ತಿಸಬಲ್ಲುದು. ಯಾವುದೇ ಚಂಡಿನ ಮೇಲೆ ಪ್ರಯುಕ್ತಿಸಿದ ಅತ್ಯಲ್ಪ ಬಲವೂ ಈ ವ್ಯವಸ್ಥೆಯಲ್ಲಿ ತಿರುಚನ್ನು ಉಂಟು ಮಾಡುವಷ್ಟು ಸೂಕ್ಷ್ಮವಾಗಿಯೂ ಕೋಮಲವಾಗಿಯೂ ಪ್ರಯೋಗವನ್ನು ರೂಪಿಸಲಾಗಿತ್ತು. ಜ್ಞಾತ ಅಲ್ಪಬಲಗಳನ್ನು ಪ್ರಯುಕ್ತಿಸಿ ಒಂದೊಂದು ಬಲವೂ ಉಂಟು ಮಾಡುವ ತಿರುಚನ್ನು ಅಳತೆ ಮಾಡಲಾಯಿತು. ಇಂಥ ಒಂದು ಯಾದಿ ಸಿದ್ಧವಾದ ಬಳಿಕ ಕ್ಯಾವೆಂಡಿಷ್ ಜ್ಞಾತ ದ್ರವ್ಯರಾಶಿಗಳಿರುವ ಎರಡು ದೊಡ್ಡ ಚಂಡುಗಳನ್ನು ಸರಳಿನ ಕೊನೆಯ ಹಗುರ ಚಂಡುಗಳ ಬಳಿಗೆ (ಒಂದೊಂದನ್ನು ಒಂದೊಂದು ಕಡೆಗೆ) ತಂದು ಹಿಡಿದ. ದೊಡ್ಡ ಚಂಡುಗಳ ಮತ್ತು ಹಗುರ ಚಂಡುಗಳ ನಡುವಿನ ಗುರುತ್ವಬಲದ ಪರಿಣಾಮವಾಗಿ ತಂತಿಯಲ್ಲಿ ತಿರುಚು ತಲೆದೋರಿತು. ಇದರ ಅಳತೆಯಿಂದ ಒಂದೊಂದು ಜೊತೆ ಚಂಡುಗಳ (ಹಗುರ ಹಾಗೂ ದೊಡ್ಡ) ನಡುವಿನ ಗುರುತ್ವಾಕರ್ಷಣ ಬಲವನ್ನು ನಿರ್ಧರಿಸಿದ. ಈಗ ಚಂಡುಗಳ ನಡುವಿನ ಅಂತರ ಅವುಗಳ ದ್ರವ್ಯರಾಶಿಗಳು ಎಲ್ಲವೂ ಜ್ಞಾತವಾಗಿರುವುದರಿಂದ ಉಯ ನಿರ್ಧಾರ ಸಾಧ್ಯ. ಈ ಸರಳ ನಿಷ್ಕøಷ್ಟ ಪ್ರಯೋಗದಿಂದ (ಇದು ಕ್ಯಾವೆಂಡಿಷ್ ಪ್ರಯೋಗವೆಂದೇ ಪ್ರಸಿದ್ಧವಾಗಿದೆ) ಲಭ್ಯವಾದ ಉಯ ಬೆಲೆಯನ್ನು ಉಪಯೋಗಿಸಿ ಭೂಮಿಯ ದ್ರವ್ಯರಾಶಿ 6.6 ಘಿ 1021 ಟನ್ನುಗಳೆಂದೂ ಸಾಂದ್ರತೆ ಸುಮಾರಾಗಿ ನೀರಿನ 5.5. ರಷ್ಟೆಂದೂ ನಿರ್ಧಾರವಾಯಿತು.

ಸ್ಥಿರವಿದ್ಯುತ್ತಿನ ಕ್ಷೇತ್ರದಲ್ಲಿ ಕ್ಯಾವೆಂಡಿಷ್ ನಡೆಸಿದ ಸಂಶೋಧನೆಗಳ ವಿವರಗಳನ್ನು ಮ್ಯಾಕ್ಸ್‍ವೆಲ್ 1879ರಲ್ಲಿ ಪ್ರಕಟಪಡಿಸಿದ. ವಿದ್ಯುತ್ ಸಂಗ್ರಾಹಕಗಳ ಸಂಚಯನ ಶಕ್ತಿಗಳನ್ನು ಕುರಿತು ಸಂಶೋಧನೆ ನಡೆಸುತ್ತಿದ್ದಾಗ ಕ್ಯಾವೆಂಡಿಷ್ ಹಲವಾರು ಲೆಡೆನ್ ಜಾಡಿಗಳನ್ನು ಒಂದೇ ವಿದ್ಯುತ್ ಒತ್ತಡಕ್ಕೆ ಒಪ್ಪಿಸಿ, ಅನಂತರ ತನ್ನ ಶರೀರವನ್ನೇ ಗ್ಯಾಲ್ವನೋಮೀಟರ್ ಆಗಿ ಉಪಯೋಗಿಸಿ, ಆ ಸಂಗ್ರಾಹಕಗಳ ವಿಸರ್ಜನೆಯಿಂದ ತನಗೆ ಉಂಟಾದ ಆಘಾತ ಪ್ರಮಾಣಗಳಿಂದ ಅವುಗಳ ಸಂಚಯನಶಕ್ತಿಗಳ ತುಲನೆ ಮಾಡುತ್ತಿದ್ದ. ಓಮನ ನಿಯಮವನ್ನು ತಾತ್ತ್ವಿಕವಾಗಿ ಕ್ಯಾವೆಂಡಿಷ್ ಆವಿಷ್ಕರಿಸಿದ್ದ ಎಂಬ ವದಂತಿ ಉಂಟು. ಆದರೆ ಇದು ಸಕಾಲದಲ್ಲಿ ಪ್ರಕಟವಾಗಲಿಲ್ಲ. ಭೂವಾತಾವರಣದ ಮೇಲೆ ಸತತವೂ ದಾಳಿ ಇಡುತ್ತಿರುವ ಪ್ರಕಾಶಮಾನವಾದ ಉಲ್ಕೆಗಳು ಭೂಮಿಗೆ ಎಷ್ಟು ದೂರದಲ್ಲಿದ್ದಾಗ ಗೋಚರಿಸುತ್ತವೆ ಎಂಬುದನ್ನು ಮೊದಲು ಲೆಕ್ಕಹಾಕಿದವ ಕ್ಯಾವೆಂಡಿಷ್. ಹವಾ ಮುನ್ಸೂಚಕ ಉಪಕರಣಗಳನ್ನು ಪರಿಷ್ಕರಿಸಿದ್ದಲ್ಲದೇ ಖಗೋಳಶಾಸ್ತ್ರದ ಉಪಕರಣಗಳನ್ನು ಪರಿಷ್ಕರಿಸುವುದರಲ್ಲಿ ಸಹ ಈತ ನಿರತನಾಗಿದ್ದ.

ಕ್ಯಾವೆಂಡಿಷ್ ಗತಿಸಿದ್ದು 1810ರ ಫೆಬ್ರುವರಿ 24 ರಂದು. ಜಾರ್ಜ್ ವಿಲ್ಸನ್ (1818-59) ಕ್ಯಾವೆಂಡಿಷನ ಜೀವನ ಚರಿತ್ರೆಯನ್ನು ಬರೆದಿದ್ದಾನೆ. ಹೆನ್ರಿ ಕ್ಯಾವೆಂಡಿಷ್ ಉಪಯೋಗಿಸಿದ ಅನೇಕ ಉಪಕರಣಗಳನ್ನು ಕಾಪಾಡಿಕೊಂಡು ಬಂದಿದ್ದು ಅವನ್ನು ಇಂದಿಗೂ ರಾಯಲ್ ಇನ್ಸ್‍ಟಿಟ್ಯೂಟಿನಲ್ಲಿ ಕಾಣಬಹುದು. ಲಂಡನ್ನಿನಲ್ಲಿ ಕಟ್ಟಿರುವ ಕ್ಯಾವೆಂಡಿಷ್ ಭೌತವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥ ಭಂಡಾರಗಳು ಈ ವಿಜ್ಞಾನಿಯ ನೆನಪನ್ನು ಸದಾಕಾಲ ಜೀವಂತಗೊಳಿಸಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Wilson, George (1851). "1". The life of the Hon. Henry Cavendish. Cavendish Society. p. 17.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]