ವಿಷಯಕ್ಕೆ ಹೋಗು

ಜೀವ ಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಪ್ಟೆಂಬರ್ 1997 ರಿಂದ ಆಗಸ್ಟ್ 2000ರ ಗ್ಲೋಬಲ್ ಓಶಾನಿಕ್ ಹಾಗೂ ಟೆರೆಸ್ಟ್ರಿಯಲ್ ಫೋಟೋಆಟೋಟ್ರೋಪ್‌ಗಳ ಒಂದು ಮಿತ್ಯ-ಬಣ್ಣದ ಮಿಶ್ರಣ. ಸೀವಿಫ್ಸ್ ಯೋಜನೆಯಿದ ದೊರೆತದ್ದು.

ನಮ್ಮ ಜೀವ ಮಂಡಲ ವು ಎಲ್ಲಾ ಪರಿಸರ ವ್ಯವಸ್ಥೆಗಳ ಜಾಗತಿಕ ತಾಣವಾಗಿದೆ. ಇದನ್ನು ಒಂದು ಸಂವೃತ (ಸೌರ ಮತ್ತು ಹಾಗೂ ಸ್ವಯಂ ನಿಯಂತ್ರಿತ ಜೀವ ವ್ಯವಸ್ಥೆಯ ಒಂದು ವಲಯವೆಂದೂ ಕರೆಯಬಹುದು.[] ಜೈವಿಕ ಶರೀರ ಶಾಸ್ತ್ರದ ವಿಶಾಲ ದೃಷ್ಟಿಕೋನದಲ್ಲಿ ಹೇಳುವುದಾದರೆ ,ಜೀವಮಂಡಲವು ಎಲ್ಲಾ ಜೀವಿಗಳನ್ನೂ ಒಗ್ಗೂಡಿಸುವ ಒಂದು ಜಾಗತಿಕ ಪರಿಸರ ವ್ಯವಸ್ಥೆಯಾಗಿದೆ. ಇವು ಶಿಲಾಗೋಳ,ಜಲಗೋಳ ಮತ್ತು ವಾಯುಗೋಳ. ಅಂಶಗಳು ಜೀವಿಗಳೊಂದಿಗೆ ಹೇಗೆ ಸಂಬಂಧವನ್ನು ಇಟ್ಟುಕೊಂಡಿವೆ ಎಂಬುದನ್ನೂ ತೋರಿಸುತ್ತವೆ. ಸ್ವಯಂಸಿದ್ದಾಂತದ ಪ್ರಕಾರ ಜೀವಮಂಡಲವು ಸುಮಾರು 3.5 ಬಿಲಿಯನ್ ವರ್ಷಗಳ ಹಿಂದೆ ಜೈವಿಕ ಉಗಮ (ಬಯೋಜೆನೆಸಿಸ್) ಅಥವಾ ಬಯೋಪೀಸಿಸ್ ಎಂಬ ಒಂದು ಪ್ರಕ್ರಿಯೆಯೆ ಮೂಲಕ ಉಗಮಗೊಂಡಿರಬಹುದು ಎಂದು ಊಹಿಸಲಾಗಿದೆ.[]

ವಿಶಾಲ ಅರ್ಥದಲ್ಲಿ ಹೇಳುವುದಾದರೆ, ಜೀವಮಂಡಲಗಳು ಸ್ವಯಂ ನಿಯಂತ್ರಿತ ವ್ಯವಸ್ಥೆಗಳನ್ನು ಹೊಂದಿರುವ ಪರಿಸರ ವ್ಯವಸ್ಥೆಗಳಾಗಿವೆ. ಇವು ಜೀವಮಂಡಲ 2 ಹಾಗೂ ಬಯೋಸ್ -3 ನಂತಹ ಕೃತಕ ವ್ಯವಸ್ಥೆಗಳನ್ನೂ ಮತ್ತು ಚಂದ್ರ ಅಥವಾ ಇತರೆ ಗ್ರಹಗಳ ಮೇಲಿನ ವ್ಯವಸ್ಥೆಗಳನ್ನೂ ಒಳಗೊಂಡಿದೆ.[]

ಪದದ ಮೂಲ ಹಾಗೂ ಬಳಕೆ

[ಬದಲಾಯಿಸಿ]

"ಜೀವಮಂಡಲ" ಎಂಬ ಪದವನ್ನು ಮೊಟ್ಟ ಮೊದಲಿಗೆ 1875ರಲ್ಲಿ ಎಡ್ವರ್ಡ್ ಸುಯೆಸ್ ಎಂಬ ಭೂಶಾಸ್ತ್ರಜ್ಞನು ಬಳಸಿದನು,ಆತನು ಇದನ್ನು ಈ ರೀತಿಯಾಗಿ ವ್ಯಾಖ್ಯಾನಿಸಿದ್ದಾನೆ:[]

"The place on Earth's surface where life dwells."

ಆದರೆ ಈ ಪರಿಕಲ್ಪನೆಯು ಭೌಗೋಳಿಕ ಮೂಲದ ಹಿನ್ನಲೆಯನ್ನು ಹೊಂದಿದ್ದು, ಡಾರ್ವಿನ್ ಮತ್ತು ಮೌರಿಯ ಭೂ ವಿಜ್ಞಾನಗಳ ಪ್ರಭಾವದ ಒಂದು ಸಂಕೇತವಾಗಿದೆ. ಜೀವಮಂಡಲದ ಪರಿಸರ ವಿಜ್ಞಾನದ ಅರ್ಥವು 1920ರಲ್ಲಿ ( ವಲ್ಡಮೀರ್ ವೆರ್ನಾಡ್ ಸ್ಕೀ ನೋಡಿರಿ ) ಯವರ 1935 ರ ಮುಂಚಿನ "ಪರಿಸರ ವ್ಯವಸ್ಥೆ" ಎಂಬ ಪದವನ್ನು ನೀಡಿದ ಸರ್ ಆರ್ಥರ್ ಟೇನ್ಸ್ ಲೀಯವರಿಂದ ಬಂದಿದೆ (ಪರಿಸರವಿಜ್ಞಾನದ ಚರಿತ್ರೆಯನ್ನು ನೋಡಿರಿ). ವೆರ್ನಾಡ್ ಸ್ಕೀ ಪರಿಸರ ವನ್ನು ಜೀವಮಂಡಲದ ವಿಜ್ಞಾನ ಎಂದು ಕರೆದಿದ್ದಾರೆ. ಇದು ಖಗೋಳ ಶಾಸ್ತ್ರ, ಭೂಭೌತಶಾಸ್ತ್ರ, ಪವನಶಾಸ್ತ್ರ , ಜೀವ ಭೂಗೋಳಶಾಸ್ತ್ರ, ವಿಕಾಸ, ಭೂವಿಜ್ಞಾನ, ಭೂ ರಸಾಯನಶಾಸ್ತ್ರ, ಜಲಶಾಸ್ತ್ರ ದ ಸಮಗ್ರತೆಯ ಒಂದು ಅಂತರ್ ಶಿಸ್ತಿನ ಪರಿಕಲ್ಪನೆಯಾಗಿದೆ ಹಾಗೂ ಒಟ್ಟಾರೆ ಹೇಳುವುದಾದರೆ ಎಲ್ಲಾ ಜೀವರಾಶಿ ಮತ್ತು ಭೂವಿಜ್ಞಾನಗಳ ಪರಿಕಲ್ಪನೆಯಾಗಿದೆ.

ಕಿರಿದಾದ ವ್ಯಾಖ್ಯಾನ

[ಬದಲಾಯಿಸಿ]
ಬಳಕೆಯಲ್ಲಿರುವ ಭೂಮಿಯ ಒಂದು ದೃಶ್ಯ, ಇದರಲ್ಲಿ ಭೂಮಂಡಲ, ವಾಯು ಮಂಡಲ ಹಾಗೂ ವಾತಾವರಣಗಳನ್ನು ತೋರಿಸಲಾಗಿದೆ.

ಕೆಲವು ಜೈವಿಕ ವಿಜ್ಞಾನಿಗಳು ಹಾಗೂ ಭೂ ವಿಜ್ಞಾನಿಗಳು ಜೀವಮಂಡಲ ಎಂಬ ಪದವನ್ನು ಹೆಚ್ಚು ಸೀಮಿತ ಅರ್ಥದಲ್ಲಿ ಬಳಕೆ ಮಾಡಿದ್ದಾರೆ. ಉದಾಹರೆಣೆಗೆ, ಭೂರಸಾಯನ ಶಾಸ್ತ್ರಜ್ಞರು ಜೀವಮಂಡಲವನ್ನು ಜೀವಿಗಳ ಒಂದು ಒಟ್ಟು ವ್ಯವಸ್ಥೆ (ಜೀವಶಾಸ್ತ್ರಜ್ಞರು ಹಾಗೂ ಪರಿಸರ ತಜ್ಞರು "ಜೀವರಾಶಿ" ಅಥವಾ "ಬಯೋಟಾ" ಎಂದು ಹೇಳಿರುವಂತೆ) ಎಂದು ವ್ಯಾಖ್ಯಾನಿಸಿದ್ದಾರೆ. ಈ ದೃಷ್ಟಿಕೋನದಲ್ಲಿ ಜೀವಮಂಡಲವು ಭೂರಾಸಾಯನಿಕ ಮಾದರಿಯ ನಾಲ್ಕು ಪ್ರತ್ಯೇಕ ಘಟಕಗಳಲ್ಲಿ ಒಂದಾಗಿದೆ, ಉಳಿದ ಮೂರು ಘಟಕಗಳೆಂದರೆ ಶಿಲಾಗೋಳ , ಜಲಗೋಳ , ಮತ್ತು ವಾಯು ಗೋಳ . ಕೆಲವು ಭೂರಾಸಾಯನಿಕ ತಜ್ಞರು ಬಳಸುವ ಸಂಕುಚಿತ ಅರ್ಥವು ಆಧುನಿಕ ವಿಜ್ಞಾನದಲ್ಲಿ ಆದ ಅಸಾಧಾರಣತೆಯ ಪರಿಣಾಮಗಳಾಗಿವೆ. ಕೆಲವರು 1960ರಲ್ಲಿ ಬಳಸಲಾದ , ಗ್ರಹದ ಎಲ್ಲಾ ಜೈವಿಕ ಮತ್ತು ಭೌತಿಕ ಘಟಕಗಳನ್ನು ಒಳಗೊಂಡ ಪರಿಸರ ಮಂಡಲ , ಎಂಬ ಪದವನ್ನೂ ಬಳಸಬಹುದು.

ಸಂವೃತ ಜೀವ ವ್ಯವಸ್ಥೆಗಳ ಎರಡನೇ ಅಂತರಾಷ್ಟ್ರೀಯ ಸಮ್ಮೇಳನವು ಜೈವಿಕ ಗೋಳಗಳನ್ನು ಭೂಮಿಯ ಜೀವಮಂಡಲದ, ಅಂದರೆ ಭೂಮಿಯಂತಹ ಕೃತಕ ಜೀವಮಂಡಲವನ್ನು ವಿಜ್ಞಾನ ಮತ್ತು ತಂತ್ರಜ್ಜಾನದ ಭೌಮಿಕ ಮಾದರಿಗಳನ್ನಾಗಿ ಹಾಗೂ ಸ್ವರೂಪಗಳನ್ನಾಗಿ ವ್ಯಾಖ್ಯಾನಿಸಿದೆ. ಕೆಲವು ಭೌಗೋಳಿಕವಲ್ಲದ ಕೃತಕ ಜೀವಮಂಡಲಗಳನ್ನು ಒಳಗೊಂಡಿವೆ-ಉದಾಹರಣೆಗೆ, ಜೀವಮಂಡಲಗಳ ಕ್ಷೇತ್ರದ- ಮಾನವ ಕೇಂದ್ರಿತ ಜೀವಮಂಡಲಗಳು ಅಥವಾ ಒಂದು ಮೂಲ ಮಾರ್ಟಿಯನ್ ಜೀವಮಂಡಲ.

ಗಯಾ ಸಿದ್ಧಾಂತ

[ಬದಲಾಯಿಸಿ]

ಜೀವಮಂಡಲವೇ ಒಂದು ಸಜೀವಿ ಎಂಬ ಪರಿಕಲ್ಪನೆಯು , ವಾಸ್ತವವಾಗಿ ಅಥವಾ ಅಲಂಕಾರಿಕವಾಗಿ ಗೈಯಾ ಉಹಾ ಪ್ರಜ್ಞೆಯಾಗಿದೆ.

ಜೇಮ್ಸ್ ಲವ್ ಲಾಕ್ ಎಂಬ ಯುನೈಟೆಡ್ ಸಾಮ್ರಾಜ್ಯದ ಒಬ್ಬ ವಾತಾವರಣ ತಜ್ಞರು , ಜೀವಮಂಡಲದಲ್ಲಿ ಜೈವಿಕ ಮತ್ತು ಅಜೈವಿಕ ಘಟಕಗಳು ಹೇಗೆ ಪರಸ್ಪರ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿವರಿಸಲು ಗೈಯಾ ಊಹಾ ಪ್ರಜ್ಞೆಯನ್ನು ಪ್ರತಿಪಾದಿಸಿದರು. ಈ ಊಹಾ ಪ್ರಜ್ಞೆಯು ಇಡೀ ಭೂಮಿಯನ್ನೇ ಒಂದು ಬಗೆಯ ಜೀವಿ ಎಂದು ಪರಿಗಣಿಸುತ್ತದೆ ಇದರ ವಾತಾವರಣ, ಶಿಲಾವರಣ, ಮತ್ತು ಜಲಾವರಣಗಳು ಸಹಕಾರಿ ವ್ಯವಸ್ಥೆಗಳಾಗಿದ್ದು ಜೀವರಾಶಿಯನ್ನು ಹೊಂದಿರುವ ಒಂದು ಸಂಪೂರ್ಣ ಜೀವಮಂಡಲಕ್ಕೆ ಕಾರಣವಾಗಿದೆ. 1970ರ ಆರಂಭದಲ್ಲಿ , ಅಮೇರಿಕಾ ಸಂಯುಕ್ತ ಸಂಸ್ಥಾನದ ಒಬ್ಬ ಅಣುಜೀವ ಶಾಸ್ತ್ರಜ್ಞರಾದ ಲಿನ್ ಮಾರ್ಗುಲಿಸ್ ಎಂಬುವವರು, ಜೀವಮಂಡಲ ಮತ್ತು ಇತರೆ ಭೌಗೋಳಿಕ ವ್ಯವಸ್ಥೆಗಳ ನಡುವೆ ಇರುವ ಸಂಬಂಧಗಳನ್ನು ಸೂಚಿಸಿ, ಈ ಊಹಾ ಪ್ರಜ್ಞೆಯ ಮತ್ತಷ್ಟು ಬೆಳವಣಿಗೆಗೆ ಕಾರಣರಾದರು. ಉದಾಹರಣೆಗೆ , ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ಹೆಚ್ಚಾದಾಗ ,ಸಸ್ಯಗಳು ವೇಗವಾಗಿ ಬೆಳೆಯುತ್ತವೆ. ಅವು ಬೆಳದಂತೆಲ್ಲಾ, ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋಗುತ್ತವೆ.

ಇಂದು ಅನೇಕ ವಿಜ್ಞಾನಿಗಳು ಭೂ ಜೀವಶಾಸ್ತ್ರ ಹಾಗೂ ಭೂ ಅಣುಜೀವಶಾಸ್ತ್ರದಂತಹ ನೂತನ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವ ಮೂಲಕ ಜೀವಮಂಡಲದಲ್ಲಿನ ಜೈವಿಕ ಮತ್ತು ಅಜೈವಿಕ ಅಂಶಗಳ ಹೇಗೆ ಪರಸ್ಪರ ಪ್ರತಿಕ್ರಿಯಿಸುತ್ತವೆ ಎಂಬುದರ ಅಧ್ಯಯನದಲ್ಲಿ ತೊಡಗಿದ್ದಾರೆ.

ಸಮುದಾಯಗಳು ಮತ್ತು ಅವುಗಳ ಭೌತಿಕ ಪರಿಸರಗಳು ಒಟ್ಟಾಗಿ ಒಂದು ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಿದಾಗ ಪರಿಸರ ವ್ಯವಸ್ಥೆಗಳು ಉಗಮಗೊಳ್ಳುತ್ತವೆ. ಇದಕ್ಕೂ ಮತ್ತು ಜೀವಮಂಡಲಕ್ಕೂ ಇರುವ ವ್ಯತ್ಯಾಸ ಸರಳವಾಗಿದ್ದು, ಒಟ್ಟಾರೆ ಹೇಳುವುದಾದರೆ ಜೀವಮಂಡಲವು ಎಲ್ಲವನ್ನೂ ಒಳಗೊಂಡಿದೆ.

ಭೂಮಿಯ ಜೀವಗೋಳದ ವಿಸ್ತಾರ

[ಬದಲಾಯಿಸಿ]
ಭೂಮಿಯ 71%ನಷ್ಟು ಮೇಲ್ಪದರವು ನೀರಿನಿಂದ ಆವೃತವಾಗಿದೆ. ಅಪೋಲೊ 17ರಿಂದ ತೆಗೆದ ಭೂಮಿಯ ಚಿತ್ರ.

ಗ್ರಹದ ದ್ರುವ ಭಾಗಗಳ ಹಿಮ ಪ್ರದೇಶಗಳಿಂದ ಹಿಡಿದು ಸಮಭಾಜಕ ವೃತ್ತದವರೆಗೂ, ಒಂದಲ್ಲಾ ಒಂದು ಜೀವಿಯು ವಾಸಿಸುವುದಕ್ಕೆ ನೆರವಾಗುವಂತಿದೆ ಅಣುಜೀವ ವಿಜ್ಞಾನ ದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳು ಸೂಕ್ಷ್ಮಾಣು ಜೀವಿಗಳು ಭೂಮಿಯ ಮೇಲ್ಮೈ ನ ಅತ್ಯಂತ ಕೆಳಭಾಗದಲ್ಲಿ ವಾಸಿಸುತ್ತಿವೆ ಎಂಬುದನ್ನು ತೋರಿಸುತ್ತವೆ ಹಾಗೂ "ಜೀವಿಗಳು ವಾಸಿಸದೇ ಇರುವ ವಲಯಗಳು" ಎಂದು ಕರೆಯಲಾಗುವ ಈ ಭಾಗದಲ್ಲಿರುವ ಸೂಕ್ಷ್ಮಾಣು ಜೀವಿ ಗಳ ಒಟ್ಟು ಜೀವರಾಶಿಯು ಮೇಲ್ಮೈ ಭಾಗದಲ್ಲಿ ವಾಸಿಸುವ ಎಲ್ಲಾ ಪ್ರಾಣಿ ಹಾಗೂ ಸಸ್ಯ ಜೀವರಾಶಿಯನ್ನೂ ಮೀರುತ್ತದೆ. ಭೂಮಿಯ ಮೇಲಿನ ಜೀವಮಂಡಲದ ದಪ್ಪವನ್ನು ಅಳೆಯುವುದು ಕಷ್ಟ ಸಾಧ್ಯ. ಪಕ್ಷಿಗಳು ಸಾಮಾನ್ಯವಾಗಿ 650 ರಿಂದ 1,800 ಮೀಟರ್ ಗಳವರೆಗಿನ ಎತ್ತರದಲ್ಲಿ ಹಾರಾಡುತ್ತವೆ ಹಾಗೂ ನೀರಿನ ಆಳದಲ್ಲಿ ವಾಸಿಸುವ ಮೀನುಗಳು ಪ್ಯೂರ್ಟೋ ರಿಕೊ ಟ್ರೆಂಚ್ ನಲ್ಲಿ -8,372 ನಷ್ಟು ಆಳದಲ್ಲಿ ಕಂಡುಬರುತ್ತವೆ.[]

ಗ್ರಹದ ಮೇಲೆ ಜೀವಿಗಳಿರುವ ಇನ್ನೂ ಉನ್ನತ ಉದಾಹರಣೆಗಳು ಇವೆ. ರಪೆಲ್ ಗಿಡುಗ 11,300 ಮೀಟರ್ ಎತ್ತರದಲ್ಲಿ ಕಂಡು ಬರುತ್ತದೆ. ಸ್ತಂಬ ತಲೆಯುಳ್ಳ ಬಾತುಕೋಳಿಗಳು ಕನಿಷ್ಟ 8,300 ಮೀಟರ್‌ನಷ್ಟು ಎತ್ತರ ವಲಸೆ ಹೋಗುತ್ತವೆ ( ಮೌಂಟ್ ಎವೆರೆಸ್ಟ್ ಗಿಂತಲೂ ಎತ್ತರ); ಚಮರೀ ಮೃಗಗಳು ಸಮುದ್ರ ಮಟ್ಟದಿಂದ 3,200 ದಿಂದ 5,400 ಮೀಟರ್ ಎತ್ತರಗಳಲ್ಲಿ ವಾಸಿಸುತ್ತವೆ; ಪರ್ವತ ಪ್ರದೇಶದಲ್ಲಿ ವಾಸಿಸುವ ಆಡುಗಳು 3,050 ಮೀಟರ್ ಎತ್ತರದಲ್ಲಿ ಕಂಡು ಬರುತ್ತವೆ. ಈ ಔನತ್ಯಗಳಲ್ಲಿ ಸಸ್ಯಹಾರಿ ಪ್ರಾಣಿಗಳು ಕಲ್ಲುಹೂ, ಹುಲ್ಲು ಮತ್ತು ಕೆಲವು ಸಸ್ಯಗಳನ್ನು ಅವಲಂಬಿಸಿರುತ್ತವೆ.

ಸೂಕ್ಷ್ಮಾಣು ಜೀವಿಗಳು ಎಷ್ಟು ಉಚ್ಚ ಮಟ್ಟದಲ್ಲಿ ವಾಸಿಸುತ್ತವೆ ಎಂದರೆ, ಅವುಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಜೀವಮಂಡಲದ ದಪ್ಪ ಇನ್ನೂ ಅಧಿಕವಾಗುತ್ತದೆ. ಪೋಷಣಾ ಮಾಧ್ಯಮದಲ್ಲಿ ಬೆಳೆಸಬಹುದಾದ ಸೂಕ್ಷ್ಮಾಣು ಜೀವಿಗಳು ಭೂಮಿಯ ವಾತಾವರಣದ ಎತ್ತರ ಭಾಗದಲ್ಲಿ ಕಂಡು ಬರುತ್ತವೆ 41 km (25 mi) (ವೈ ರೈಟ್ , 2003ರಲ್ಲಿನ ಎಫ್‌ಇಎಮ್‌ಎಸ್ ಅಣು ಜೀವ ವಿಜ್ಞಾನದ ಲೇಖನಗಳು) ಆದರೆ, ಉಷ್ಣತೆ ಹಾಗೂ ಒತ್ತಡ ಅತ್ಯಂತ ಕಡಿಮೆ ಇರುವ ಮತ್ತು ನೇರಳಾತೀತ ವಿಕಿರಣಗಳು ಹೆಚ್ಚಾಗಿರುವ ಇಂತಹ ಎತ್ತರಗಳಲ್ಲಿ ಸೂಕ್ಷ್ಮಾಣು ಜೀವಿಗಳು ಕ್ರಿಯಾಶೀಲವಾಗಿರುತ್ತವೆ. ಈ ಸೂಕ್ಷ್ಮಾಣು ಜೀವಿಗಳು ಮಾರುತಗಳು ಅಥವಾ ಜ್ವಾಲಾಮುಖಿ ಸ್ಪೋಟಗಳಿಂದ ವಾತಾವರಣದ ಮೇಲ್ಭಾಗಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ. ಮರಿಯಾನಾಸ್ ದ್ವೀಪದ 10 km (6 mi)ಕ್ಕಿಂತಲೂ ಆಳದ ಗುಂಡಿಗಳಲ್ಲಿ ಬ್ಯಾರೊಫಿಲಿಕ್ ಮೆರೈನ್ ಮೈಕ್ರೋಬ್ಸ್‌ಗಳು ಪತ್ತೆಯಾದವು (ತಕಮಿಯಾ ಎಟ್ ಅಲ್., 1997, ಇನ್ ಎಫ್‌ಇಎಮ್‌ಎಸ್ ಮೈಕ್ರೋಬಯಾಲಜಿ ಲೆಟರ್ಸ್). ಸೂಕ್ಷ್ಮಾಣು ಜೀವಿಗಳು ಕೇವಲ ಗಾಳಿ, ನೀರು ಅಥವಾ ಭೂಮಿಯ ಮೇಲ್ಮೈಗೆ ಸೀಮಿತವಾಗಿಲ್ಲ. ಸ್ವೀಡನ್ ನ ಭೂಕವಚದಲ್ಲಿ ( ಗೋಲ್ಡ್1992, ಹಾಗೂ ಝೈವಿಕ್ 1994 ಎರಡೂPNASನಲ್ಲಿ) ಸುಮಾರು 65-75 °C. ಉಷ್ಣತೆಯಲ್ಲಿ ಬಂಡೆಗಳಿಂದ ಕೊರೆದು ತೆಗೆಯಲಾದ ಉಷ್ಣ ಸೂಕ್ಷ್ಮಾಣು ಜೀವಿಗಳು ಭೂಮಿಯ ಕವಚದ ಆಳ ಹೆಚ್ಚಾದಂತೆಲ್ಲಾ ಅವುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುವುದು ಕಂಡುಬಂದಿತು. ಉಷ್ಣವು ಯಾವ ವೇಗದಲ್ಲಿ ಹೆಚ್ಚಾಗುತ್ತದೆ ಎಂಬುದು ಕವಚದ ವಿಧ, ಕಲ್ಲಿನ ವಿಧ ,ಭೌಗೋಳಿಕ ಸ್ಥಾನಗಳನ್ನೊಳಗೊಂಡಂತೆ ಅನೇಕ ಅಂಶಗಳನ್ನು ಅವಲಂಬಿಸಿದೆ. ಸೂಕ್ಷ್ಮಾಣಿ ಜೀವಿಗಳು ವಾಸಿಸಬಹುದಾದ ಮೇಸ್ತರದ ಉಷ್ಣತೆಯೆಂದರೆ 122 °C (ಮೆಥನೋಪೈರಸ್ ಕಂಡ್ಲೆರಿ ಸ್ಟ್ರೈನ್ 116) ಹಾಗೂ ಇದು ವಾಸ್ತವ ಆಳಕ್ಕಿಂತ ಜೀವಮಂಡಲದ ಆಳದಲ್ಲಿರಬಹುದಾದ ಜೀವಿಗಳಿಗೆ ಅನುಕೂಲಕರವಾದ ಉಷ್ಣತೆಯ ಮಿತಿಯಾಗಿದೆ.

ನಮ್ಮ ಜೀವಮಂಡಲವನ್ನು ಸಸ್ಯ ವರ್ಗ ಮತ್ತು ಪ್ರಾಣಿವರ್ಗಗಳು ವಾಸಿಸುವ ಅನೇಕ ಬಯೋಮ್ ಗಳನ್ನಾಗಿ ವಿಂಗಡಿಸಲಾಗಿದೆ ಭೂಮಿಯ ಮೇಲೆ ಬಯೋಮ್‌ಗಳು ,ಮೂಲಭೂತವಾಗಿ ಅಕ್ಷಾಂಶಗಳ ಮೂಲಕ ಪ್ರತ್ಯೇಕಿಸಲ್ಪಟ್ಟಿವೆ. ಆರ್ಕಟಿಕ್ ಮತ್ತು ಅಂಟಾರ್ಕಟಿಕ್ ವೃತ್ತದಲ್ಲಿನ ಭೂ ಬಯೋಮ್‌ಗಳು ಸಾಪೇಕ್ಷವಾಗಿ ವಿರಳವಾದ ಸಸ್ಯ ಹಾಗೂ ಪ್ರಾಣಿ ವರ್ಗವನ್ನು ಹೊಂದಿವೆ, ಆದರೆ ಹೆಚ್ಚು ಪಾಲಿನ ಬಯೋಮ್‌ಗಳುಸಮಭಾಜಕ ವೃತ್ತ ಪ್ರದೇಶದಲ್ಲಿ ಕಂಡು ಬರುತ್ತವೆ. ಉಷ್ಣವಲಯದಲ್ಲಿ ಹಾಗೂ ಆರ್ಕಟಿಕ್ ಬಯೋಮ್‌ಗಳಲ್ಲಿ ಕಂಡು ಬರುವ ನೆಲವಾಸಿ ಜೀವಿಗಳು ಸಾಪೇಕ್ಷವಾಗಿ ಸಣ್ಣ ಪ್ರಮಾಣದ ಜೀವರಾಶಿಯನ್ನೂ ಮತ್ತು ಶಕ್ತಿ ಬಜೆಟ್‍ನ್ನೂ ಹೊಂದಿರುತ್ತವೆ. ಪ್ರಪಂಚದ ಸ್ಪಾನಿಂಗ್ ವಲಸೆ, ಸಾಮಾಜಿಕ ಹೊಂದಾಣಿಕೆ, ಸಮರೂಪ ಉಷ್ಣತೆ, ಬೇಸಿಗೆ ಹಾಗೂ ನಿರೋಧತೆಯ ಬಹುಪದರಗಳನ್ನು ಒಳಗೊಂಡಂತೆ ಶೀತವಾತಾವರಣಕ್ಕೆ ಗಣನೀಯ ಹೊಂದಾಣಿಕೆಯನ್ನು ತೋರಿಸುತ್ತವೆ.

ವಿಭಿನ್ನ ಜೀವ ಮಂಡಲಗಳು

[ಬದಲಾಯಿಸಿ]

ಇದನ್ನು ಸಂಖ್ಯೆಗಳಲ್ಲಿ ಹೇಳಬೇಕೆಂದರೆ ಸಾಮಾನ್ಯವಾಗಿ ಒಂದು ವಿಶೇಷ ವ್ಯವಸ್ಥೆ ಅಥವಾ ಸಂಖ್ಯೆಯನ್ನು ಹೇಳಬೇಕಾಗುತ್ತದೆ. ಹೀಗಾಗಿ:

  • ಜೀವ ಮಂಡಲ 1, ಗ್ರಹಭೂಮಿ
  • ಜೀವ ಮಂಡಲ 2, 3.15 ಎಕ್ರೆಗಳು (13,000 m²)ಗಳಷ್ಟು ಪರಿಸರ ವ್ಯವಸ್ಥೆಯಿಂದ ಸುತ್ತುವರಿದ ಅರಿಝೋನಾದ ಪ್ರಯೋಗಶಾಲೆ.
  • ಬಯೋಸ್-3, ಸೈಬೀರಿಯಾದ ಕ್ರಸ್ನೊಯಾರ್ಸ್ಕ್ನಲ್ಲಿರುವ ಬಯೋಫಿಸಿಕ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಒಂದು ಸುತ್ತುವರಿದ ಪರಿಸರ ವ್ಯವಸ್ಥೆ, ಸೋವಿಯತ್ ಯೂನಿಯನ್ನಲ್ಲಿ ಮೊದಲಿದ್ದ ಹಾಗೆ.
  • ಜೀವ ಮಂಡಲ J (ಸಿಇ‌ಇಎಫ್, ಪ್ರಯೋಗಾತ್ಮಕ ಸೌಲಭ್ಯಗಳ ಸುತ್ತುವರಿದ ಪರಿಸರ ವ್ಯವಸ್ಥೆ), ಜಪಾನ್‌ನಲ್ಲಿನ ಒಂದು ಪ್ರಯೋಗ.[][]

ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal box

  • ಮಣ್ಣಿನ ಜೈವಿಕ ಪದರ
  • ಜೀವಮಂಡಲ ನಿಕ್ಷೇಪ
  • ಜೀವ ಮಂಡಲದ ಛಾಯೆ
  • ಜೀವ ಮಂಡಲದ ಸರಳವಾದ ಮಾದರಿ
  • ಜೀವ ಮಂಡಲದ ಸರಳವಾದ ಪರಿಶೀಲಿತ ಮಾದರಿ (ಎಸ್‌ಐಬಿ-2)
  • ಸುತ್ತುವರಿದ ಪರಿಸರ ವ್ಯವಸ್ಥೆ
  • ಜೀವವಲಯ
  • ಪರಿಸರ ವ್ಯವಸ್ಥೆ
  • ಕ್ರಯೋಸ್ಪಿಯರ್
  • ಜೀವಗೋಳ
  • ಜೀವನಾಧಾರಿತ ವ್ಯವಸ್ಥೆ
  • ನೂಸ್ಪಿಯರ್
  • ವಾರ್ಡಿಯನ್ ಕೇಸ್
  • ವಿನೋಗ್ರಾಂಡ್‌ಸ್ಕಿ ಕಾಲಮ್
  • ಸಂತುಲನ
  • ಥಾಮಸ್ ಗೋಲ್ಡ್
  • ಮಾಂಟ್ರಿಯಲ್ ಜೀವ ಮಂಡಾಲ

ಉಲ್ಲೇಖಗಳು‌

[ಬದಲಾಯಿಸಿ]
  1. "ಆರ್ಕೈವ್ ನಕಲು". The Columbia Encyclopedia, Sixth Edition. Columbia University Press. 2004. Archived from the original on 2011-10-27. Retrieved 2010-11-12.
  2. ೨.೦ ೨.೧ Campbell, Neil A. (2006). Biology: Exploring Life. Boston, Massachusetts: Pearson Prentice Hall. ISBN 0-13-250882-6. {{cite book}}: Unknown parameter |coauthors= ignored (|author= suggested) (help)
  3. "Meaning of biosphere". WebDictionary.co.uk. WebDictionary.co.uk. Retrieved 2010-11-12.
  4. ಸೆಯಸ್ಸ್, ಇ. (1875) ಡೈ ಎಂಟ್‌ಸ್ಟೆಹಂಗ್ ದೆರ್ ಆಲ್ಪೆನ್ [ದಿ ಆರಿಜಿನ್ ಆಫ್ ದಿ ಆಲ್ಪ್ಸ್ ]. ವಿಯೆನ್ನಾ: ಡಬ್ಲು. ಬ್ರಾನ್ಮುಲ್ಲರ್.
  5. ನಕನೊ et al. (1998)"ಡೈನಮಿಕ್ ಸಿಮುಲೇಶನ್ ಆಫ್ ಪ್ರೆಶರ್ ಕಂಟ್ರೋಲ್ ಸಿಸ್ಟಂ ಫಾರ್ ದಿ ಕ್ಲೋಸ್ಡ್ ಎಕಾಲಜಿ ಎಕ್ಸ್‌ಪೆರಿಮೆಂಟ್ ಫೆಸಿಲಿಟಿ", ಮೆಕಾನಿಕಲ್ ಇಂಜಿನಿಯರ್‌ಗಳ ಜಪಾನ್ ಸಂಘದ ವಹಿವಾಟುಗಳು. 64 :107-114.
  6. ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟಲ್ ಸೈನ್ಸಸ್


ಬಾಹ್ಯ ಕೊಂಡಿಗಳು‌

[ಬದಲಾಯಿಸಿ]
  • ಎನ್‌ಸೈಕ್ಲೋಪೀಡಿಯಾ ಆಫ್ ಅರ್ತ್‌ನಲ್ಲಿ ಜೀವ ಮಂಡಲದ ಬಗೆಗಿನ ಲೇಖನ
  • GLOBIO.info, ಜೀವ ಮಂಡಲದ ಮೇಲೆ ಮಾನವರ ಚಟುವಟಿಕೆಗಳಿಂದ ಭೂತ, ವರ್ತಮಾನ ಹಾಗೂ ಭವಿಷ್ಯದಲ್ಲಿನ ಪರಿಣಾಮಗಳ ಬಗ್ಗೆ ನಿರಂತರ ನಡೆಯುವ ಒಂದು ಕಾರ್ಯ
  • ಪಾಲ್‌ ಕ್ರುಟ್ಜೆನ್‌ ಸಂದರ್ಶನ ಓಝೋನ್‌ನ ವಿಘಟನೆಯ ಕುರಿತಾದ ತನ್ನ ಕೆಲಸಕ್ಕಾಗಿ ನೊಬೆಲ್‌ ಪ್ರಶಸ್ತಿ ಪಡೆದ ಪಾಲ್‌ ಕ್ರುಟ್ಜೆನ್‌, ನೊಬೆಲ್‌ ಪ್ರಶಸ್ತಿ ವಿಜೇತ ಹ್ಯಾರಿ ಕ್ರೋಟೋ ಜೊತೆಯಲ್ಲಿ ಮಾತನಾಡುತ್ತಿರುವುದನ್ನು ಚಿತ್ರಿಸಿರುವ ವೆಗಾ ಸೈನ್ಸ್‌ ಟ್ರಸ್ಟ್‌ನ ಮುಕ್ತನೋಟದ ವಿಡಿಯೋ.

ಟೆಂಪ್ಲೇಟು:Nature nav