ಚೇತೇಶ್ವರ ಪೂಜಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೇತೇಶ್ವರ ಅರವಿಂದ್ ಪೂಜಾರ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಲೆಗ್ ಬ್ರೇಕ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡುತ್ತಾರೆ.

ಚೇತೇಶ್ವರ ಪೂಜಾರ

ಆರಂಭಿಕ ಜೀವನ[ಬದಲಾಯಿಸಿ]

ಪೂಜಾರರವರು ಜನವರಿ ೨೫,೧೯೮೮ರಂದು ಗುಜರಾತ್ರಾಜಕೋಟ್ನಲ್ಲಿ ಅರವಿಂದ ಪುಜಾರ ಹಾಗು ರೀಮಾ ಪುಜಾರ ದಂಪತಿಗೆ ಜನಿಸಿದರು.ಇವರು ತಮ್ಮ ೧೪ರ ವಯೋಮಿತಿ ತಂಡದಲ್ಲಿ ತ್ರಿಶತಕ ಬಾರಿಸಿದ್ದರು. ನಂತರ ೧೯ರ ವಯೋಮಿತಿ ತಂಡದಲ್ಲಿ ಆಡುವಾಗ ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು.[೧]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಮಾರ್ಚ್ ೧೨, ೨೦೧೦ರಂದು ಮುಂಬೈನ ಡಾ. ಡಿ ವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಮೊದಲನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಐಪಿಎಲ್‍ನಲ್ಲಿ ೩೯೦ ರನ್‍ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಯಾವುದೇ ತಂಡಕ್ಕೆ ಆಡುತ್ತಿಲ್ಲ. ಹಾಗಾಗಿ ಇಂಗ್ಲೆಂಡ್ಕೌಂಟಿ ಕ್ರಿಕೆಟ್ನಲ್ಲಿ ಯಾಕ್‍ಶೈರ್ಸ್ ತಂಡಕ್ಕೆ ಆಡುತ್ತಾರೆ. [೨][೩][೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಅಕ್ಟೋಬರ್ ೦೨, ೨೦೧೦ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಪುಜಾರರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ೦೭ ಬೌಂಡರಿ ಸಹಿತ ಅರ್ಧ ಶತಕ ಬಾರಿಸಿದರು. ಆಗಸ್ಟ್ ೦೧, ೨೦೧೩ರಲ್ಲಿ ಜಿಂಬಾಬ್ವೆಯ ಬುಲಾವಯ್ಯೋದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೫][೬]

ಶ್ರೇಯಾಂಕ[ಬದಲಾಯಿಸಿ]

ಪಂದ್ಯಗಳು[ಬದಲಾಯಿಸಿ]

 • ಟೆಸ್ಟ್ ಕ್ರಿಕೆಟ್ : ೫೭ ಪಂದ್ಯಗಳು[೯][೧೦]
 • ಏಕದಿನ ಕ್ರಿಕೆಟ್ : ಪಂದ್ಯಗಳು
 • ಐಪಿಎಲ್ ಕ್ರಿಕೆಟ್ : ೩೦ ಪಂದ್ಯಗಳು


ದ್ವಿಶತಕಗಳು[ಬದಲಾಯಿಸಿ]

 1. ಟೆಸ್ಟ್ ಪಂದ್ಯಗಳಲ್ಲಿ  : '100

ಶತಕಗಳು[ಬದಲಾಯಿಸಿ]

 1. ಟೆಸ್ಟ್ ಪಂದ್ಯಗಳಲ್ಲಿ : ೧೪


ಅರ್ಧ ಶತಕಗಳು[ಬದಲಾಯಿಸಿ]

 1. ಟೆಸ್ಟ್ ಪಂದ್ಯಗಳಲ್ಲಿ : ೧೭
 2. ಐಪಿಎಲ್ ಪಂದ್ಯಗಳಲ್ಲಿ  :

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. https://en.wikipedia.org/wiki/Cheteshwar_Pujara
 2. http://www.cricbuzz.com/live-cricket-scorecard/10677/deccan-chargers-vs-kolkata-knight-riders-1st-match-indian-premier-league-2010
 3. https://www.deccanchronicle.com/sports/cricket/290118/indian-premier-league-ipl-2018-player-auction-no-bids-cheteshwar-pujar.html
 4. https://timesofindia.indiatimes.com/sports/cricket/news/yorkshire-signs-cheteshwar-pujara-for-second-stint/articleshow/62709145.cms
 5. http://www.cricbuzz.com/live-cricket-scorecard/3347/india-vs-australia-2nd-test-australia-in-india-2010
 6. http://www.cricbuzz.com/live-cricket-scorecard/12566/zimbabwe-vs-india-4th-odi-india-tour-of-zimbabwe-2013
 7. https://www.icc-cricket.com/
 8. https://www.icc-cricket.com/rankings/mens/player-rankings/test/batting
 9. http://www.espncricinfo.com/india/content/player/32540.html
 10. http://www.cricbuzz.com/profiles/1448/cheteshwar-pujara