ಚಕ್ ದೇ! ಇಂಡಿಯಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Chak De! India
ಚಿತ್ರ:ChakDePoster.GIF
Publicity poster for Chak De! India
ನಿರ್ದೇಶನ Shimit Amin
ನಿರ್ಮಾಪಕ Aditya Chopra
Yash Chopra
ಲೇಖಕ Jaideep Sahni
ಪಾತ್ರವರ್ಗ Shahrukh Khan
Vidya Malvade
Sagarika Ghatge
Chitrashi Rawat
Shilpa Shukla
Tanya Abrol
Anaitha Nair
Shubhi Mehta
Seema Azmi
Nisha Nair
Arya Menon
Sandia Furtado
Masochon V. Zimik
Kimi Laldawla
Raynia Mascerhanas
Vivan Bhatena
ಸಂಗೀತ Salim Merchant
Sulaiman Merchant
ಛಾಯಾಗ್ರಹಣ Sudeep Chatterjee
ಸಂಕಲನ Amitabh Shukla
ವಿತರಕರು Yash Raj Films
ಬಿಡುಗಡೆಯಾಗಿದ್ದು ೧೦ August ೨೦೦೭
ಅವಧಿ ೧೫೩ min.
ದೇಶ  ಭಾರತ
ಭಾಷೆ Hindi, English
ಬಂಡವಾಳ Indian Rupee symbol.svg ೨೪ crore [೧]
ಬಾಕ್ಸ್ ಆಫೀಸ್ Indian Rupee symbol.svg ೯೧,೯೭,೦೦,೦೦೦
$ ೨೧,೫೦೫,೨೪೪[೧]

ಚಕ್ ದೇ! ಇಂಡಿಯಾ ( ಚಕ್ ದೇ! ಇಂಡಿಯಾ (ಹಿಂದಿ: चक दे इंडिया ಇಂಗ್ಲೀಷ್: "Go For It, India!")[೨][೨] ಎನ್ನುವುದು ೨೦೦೭ ರಲ್ಲಿ ನಿರ್ಮಾಣವಾದ ಭಾರತದ ಹಾಕಿ ಕುರಿತ ಬಾಲಿವುಡ್ ಕ್ರೀಡಾ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶಿಮಿತ್ ಅಮೀನ್ ನಿರ್ದೇಶಿಸಿ, ಯಶ್ ರಾಜ್ ಫಿಲ್ಮ್ಸ್ ಅವರು ನಿರ್ಮಿಸಿದ್ದಾರೆ, ಮತ್ತು ಶಾರುಖ್ ಖಾನ್ ಅವರು ಕಬೀರ್ ಖಾನ್ ಅವರ ಪಾತ್ರದಲ್ಲಿ ಭಾರತದ ಹಾಕಿ ತಂಡದ ನಾಯಕರಾಗಿ ನಟಿಸಿದ್ದಾರೆ. ಪಾಕಿಸ್ತಾನಿ ಹಾಕಿ ತಂಡ ದೊಂದಿಗಿನ ಹೀನಾಯ ಸೋಲಿನ ನಂತರ ಖಾನ್‌ನನ್ನು ಕ್ರೀಡೆಯಿಂದ ಬಹಿಷ್ಕರಿಸಲಾಗುತ್ತದೆ ಅವನು ಮತ್ತು ಅವನ ತಾಯಿಯನ್ನು ಕೋಪಗೊಂಡ ನೆರೆಹೊರೆಯವರು ಅವರ ಪೂರ್ವಿಕರ ಮನೆಯಿಂದ ಹೊರಹೋಗುವಂತೆ ಮಾಡುತ್ತಾರೆ. ಏಳು ವರ್ಷಗಳ ನಂತರ ತನ್ನ ಪ್ರತಿಷ್ಠೆಯನ್ನು ಮರಳಿ ಪಡೆಯುವ ಯತ್ನವಾಗಿ, ಹದಿನಾರು ಕಲಹಶೀಲ ಪ್ರವೃತ್ತಿಯ ಆಟಗಾರ್ತಿಯರ ತಂಡವನ್ನು ಚಾಂಪಿಯನ್ ಆಗಿ ಪರಿವರ್ತಿಸುವ ಗುರಿಯೊಂದಿಗೆ ಖಾನ್, ಭಾರತ ಮಹಿಳಾ ಹಾಕಿ ತಂಡದ ತರಬೇತುಗಾರನಾಗುತ್ತಾನೆ. ಮಹಿಳಾ ತಂಡವು ಚಿನ್ನದ ಪದಕವನ್ನು ಗೆಲ್ಲಲು ಕಾರಣೀಭೂತನಾದ ಖಾನ್ ತನ್ನ ಗೌರವವನ್ನು ಮರಳಿ ಪಡೆದುಕೊಳ್ಳುತ್ತಾನೆ ಮತ್ತು ತನ್ನ ತಾಯಿಯೊಂದಿಗೆ ತನ್ನನ್ನು ವರ್ಷಗಳ ಹಿಂದೆ ತಿರಸ್ಕರಿಸಿದ ಅದೇ ವ್ಯಕ್ತಿಗಳ ಸ್ವಾಗತದೊಂದಿಗೆ ತವರೂರಿಗೆ ಮರಳುತ್ತಾನೆ.

ಚಕ್ ದೇ! ಇಂಡಿಯಾ ವು ಧಾರ್ಮಿಕ ಅಂಧಾಭಿಮಾನ, ವಿಭಜನೆಯ, ಜನಾಂಗೀಯ/ಧಾರ್ಮಿಕ ಪೂರ್ವಾಗ್ರಹ, ಮತ್ತು ಹಾಕಿ ಕ್ಷೇತ್ರದ ಮೂಲಕ ಸಮಕಾಲೀನ ಭಾರತದಲ್ಲಿ ಲಿಂಗಭೇದಭಾವವನ್ನು ಅನ್ವೇಷಿಸುತ್ತದೆ.[೩][೪][೫] ಚಿತ್ರಕಥೆಗಾರ ಜೈದೀಪ್ ಸಾಹಿ ಅವರು ೨೦೦೨ ಕಾಮನ್‌ವೆಲ್ತ್ ಆಟಗಳಲ್ಲಿ ಭಾರತೀಯ ಮಹಿಳಾ ತಂಡವು ಚಿನ್ನದ ಪದಕವನ್ನು ಗೆದ್ದುದದನ್ನು ವಾರ್ತಾಪತ್ರಿಕೆಯಲ್ಲಿ ಓದಿದ ಬಳಿಕ ಅದನ್ನು ಆಧರಿಸಿ ಕಾಲ್ಪನಿಕ ಚಿತ್ರಕಥೆಯನ್ನು ಬರೆಯಲು ನಿರ್ಧರಿಸಿದರು. ನೈಜ ತಂಡ ಮತ್ತು ತರಬೇತುದಾರರಿಂದ ಸ್ಪೂರ್ತಿ ಪಡೆಯುವ ಮೂಲಕ ಪಾತ್ರಗಳನ್ನು ಸಾಹ್ನಿಯವರು ಅನ್ವೇಷಣೆ ಮಾಡಿದರು.[೬] ಕೆಲವು ಮಾಧ್ಯಮ ಸರಕುಗಳು ಕಬೀರ್ ಖಾನ್‌ರನ್ನು ನೈಜ-ಜೀವನದ ಹಾಕಿ ಆಟಗಾರ ಮೀರ್ ರಂಜನ್ ನೇಗಿಯವರಿಗೆ ಹೋಲಿಸಿದರೂ ಸಹ,[೭] ಚಿತ್ರಕಥೆಯನ್ನು ಬರೆಯುವಾಗ ನೇಗಿಯವರ ಯಾತನೆಯ ಬಗ್ಗೆ ತಿಳಿಯದಾಗಿತ್ತು ಮತ್ತು ನೇಗಿಯವರ ಜೀವನದ ಹೋಲಿಕೆಯು ಕಾಕತಾಳೀಯವಾಗಿತ್ತು ಎಂದು ಸಾಹ್ನಿಯವರು ತಿಳಿಸಿದರು.[೮]

೬೩೯ ದಶಲಕ್ಷಗಳಿಗೂ ಹೆಚ್ಚು ರೂಪಾಯಿಗಳನ್ನು ಸಂಪಾದಿಸಿದ, ಚಕ್ ದೇ! ಇಂಡಿಯಾ ವು ೨೦೦೭ ರಲ್ಲಿ ಭಾರತದ ನಾಲ್ಕನೇ ಅತೀಹೆಚ್ಚು ಗಳಿಕೆಯ ಚಲನಚಿತ್ರವಾಗಿತ್ತು [೯] ಮತ್ತು ಅದನ್ನು ವಿಮರ್ಶಾತ್ಮಕವಾಗಿ ಪ್ರಶಂಸಿಸಲಾಯಿತು.[೧೦] ಚಕ್ ದೇ! ಇಂಡಿಯಾ ವು ಹತ್ತು ಹಲವು ಪ್ರಶಸ್ತಿಗಳನ್ನು (ಅತ್ಯುತ್ತಮ ಚಲನಚಿತ್ರ ಕ್ಕಾಗಿ ಎಂಟು ಪ್ರಶಸ್ತಿಗಳನ್ನೂ ಒಳಗೊಂಡು) ಗಳಿಸಿತು ಮತ್ತು ಸಂಪೂರ್ಣ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಮನರಂಜನೆಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿತು.[೧೧] ಏಪ್ರಿಲ್ ೮ ರಲ್ಲಿ ಭಾರತೀಯ ಹಾಕಿ ಫೆಡರೇಶನ್ ಅನ್ನು ಅಮಾನತು ಮಾಡಿದುದು ಈ ಚಿತ್ರದ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಹೊಸ ಹಾಕಿ ಕೌನ್ಸಿಲ್ ರೂಪುಗೊಂಡ ನಂತರ, ಮಾಜಿ ಹಾಕಿ ಆಟಗಾರ, ಅಸ್ಲಮ್ ಶೇರ್ ಖಾನ್ ಅವರು ಸಂದರ್ಶನವೊಂದರಲ್ಲಿ ಈ ರೀತಿ ಹೇಳಿದರು, "ನೀವು ಬಾಲಿವುಡ್‌ನ ಜನಪ್ರಿಯ ಚಲನಚಿತ್ರ ಚಕ್ ದೇ! ಇಂಡಿಯಾ ದಲ್ಲಿ ನೋಡಿದಂತೆ ಭಾರತ ತಂಡವನ್ನು ನಾವು ರೂಪಿಸಬೇಕಾಗಿದೆ. ರಾಷ್ಟ್ರದ ಹಲವು ಭಾಗಗಳಿಂದ ಆಟಗಾರರು ಇದ್ದಾರೆ. ಬಲಶಾಲಿಯಾದ ತಂಡವನ್ನು ನಿರ್ಮಿಸಲು ಅವರನ್ನು ನಾವು ಒಂದುಗೂಡಿಸಬೇಕು."[೧೨]

ಕಥಾವಸ್ತು[ಬದಲಾಯಿಸಿ]

ಚಿತ್ರವು ಭಾರತದ, ದೆಹಲಿಯಲ್ಲಿ ಹಾಕಿ ವಿಶ್ವಕಪ್ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ. ಆಟವು ಪಾಕಿಸ್ತಾನ ಪುರುಷರ ಹಾಕಿ ತಂಡ ಮತ್ತು ಭಾರತದ ಪುರುಷರ ಹಾಕಿ ತಂಡದ ನಡುವೆ ಆಗಿರುತ್ತದೆ ಮತ್ತು, ಪಾಕಿಸ್ತಾನವು, ೧-೦ ಯಲ್ಲಿ ಮುನ್ನಡೆ ಸಾಧಿಸಿರುತ್ತದೆ. ಭಾರತ ತಂಡ ನಾಯಕ ಮತ್ತು ಹಾಕಿ ಸೂಪರ್‌ಸ್ಟಾರ್, ಕಬೀರ್ ಖಾನ್ (ಶಾರುಖ್ ಖಾನ್) ರನ್ನು ಫೌಲ್ ಮಾಡಿದಾಗ, ಅವರು ತಾವೇ ಪೆನಾಲ್ಟಿ ಸ್ಟ್ರೋಕ್ ತೆಗೆದುಕೊಳ್ಳಲು ಆಯ್ಕೆ ಮಾಡುತ್ತಾರೆ. ಆದರೆ, ಅವರ ಹೊಡೆತವು ಗೋಲಿನ ಮೇಲ್ಭಾಗದಲ್ಲಿ ಹಾದು ಹೋಗುತ್ತದೆ, ಮತ್ತು ಭಾರತವು ಹೀನಾಯ ಸೋಲು ಅನುಭವಿಸುತ್ತದೆ. ತಕ್ಷಣವೇ, ಮಾಧ್ಯಮದವರು ಕಬೀರ್ ಅವರು ಪಾಕಿಸ್ತಾನ ತಂಡದ ನಾಯಕನೊಡನೆ ಹಸ್ತಲಾಘವ ಮಾಡುತ್ತಿರುವ ಸನ್ನಿವೇಶದ ಚಿತ್ರವನ್ನು, ಖಾನ್ ಅವರು (ಅವರು ಮುಸ್ಲಿಂ)[೫] ಪಾಕಿಸ್ತಾನದ ಪರವಾಗಿನ ಅನುಕಂಪದ ಕಾರಣದಿಂದ ಪಂದ್ಯವನ್ನು "ಬಿಟ್ಟು ಕೊಟ್ಟರು" ಎಂದು ಶಂಕಿಸಿ ಪ್ರಸಾರ ಮಾಡಲು ಪ್ರಾರಂಭಿಸುತ್ತಾರೆ. ಸಮಾಜದ ಬಹುಪ್ರಮಾಣದವರು ಖಾನ್ ಅವರ ಪರವಾಗಿ ತೋರಿಸಿದ ಧಾರ್ಮಿಕ ಪೂರ್ವಾಗ್ರಹವು [೪][೫] ಅವರನ್ನು ಮತ್ತು ಅವರ ತಾಯಿಯವರನ್ನು ಪೂರ್ವಜರ ಮನೆಬಿಟ್ಟು ದೂರಹೋಗುವಂತೆ ಮಾಡುತ್ತದೆ.

ಏಳು ವರ್ಷಗಳ ನಂತರ, ಬೇರೇ ಯಾರೂ ಬಯಸದ,(ಅಧಿಕಾರಿಗಳು ಸೂಚಿಸುವಂತೆ, ಮಹಿಳೆಯರಿಗಾಗಿನ ದೀರ್ಘಾವಧಿಯ ಒಂದೇ ಪಾತ್ರವೆಂದರೆ "ಅಡುಗೆ ಮತ್ತು ಸ್ವಚ್ಛತೆ") ಭಾರತೀಯ ಮಹಿಳಾ ಹಾಕಿ ತಂಡ ತರಬೇತುದಾರನಾಗಿ ಕಾರ್ಯನಿರ್ವಹಿಸಲು ಬಯಸುತ್ತಿರುವುದನ್ನು ಕೇಳಿ ಭಾರತೀಯ ಕ್ರೀಡಾ ಅಧಿಕಾರಿಗಳು ಆಶ್ಚರ್ಯಗೊಳ್ಳುತ್ತಾರೆ. ಈ ಪ್ರಕಾರವಾಗಿ ಖಾನ್ ಅವರು ಭಾರತದ ವಿವಿಧ ವಿಭಾಗಗಳಿಂದ ಬಂದಂತಹ, ತಮ್ಮ ಸ್ವಂತ ಸ್ಪರ್ಧಾತ್ಮಕ ಗುಣ ಮತ್ತು ವೈಯಕ್ತಿಕ ಪೂರ್ವಾಗ್ರಹದಿಂದ ಭಿನ್ನಾಭಿಪ್ರಾಯ ಹೊಂದಿರುವ ೧೬ ಜನರ ಮಹಿಳಾ ತಂಡದ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಆಟಗಾರರಲ್ಲಿ ಕಿರಿಯಳೊಬ್ಬಳಾದ, ಕೋಮಲ್ ಚೌತಾಲಾ (ಚಿತ್ರಶೀ ರಾವತ್) (ಹರಿಯಾಣ ಗ್ರಾಮದವಳು) ಪ್ರೀತಿ ಸಭರವಾಲ್ (ಸಾಗರಿಕಾ ಘಾಟ್ಕೆ) ಚಂಡೀಗಢದವಳಿಗೆ ಅಪಹಾಸ್ಯದ "ಮೇಮ್ ಸಾಬ್" ಎಂದು ಕರೆದು ಸಂಘರ್ಷಕ್ಕಿಳಿದರೆ, ಪಂಜಾಬ್ನಿಂದ ಬಂದ ಘಾಟಿ ಹುಡುಗಿ ಬಲಬೀರ್ ಕೌರ್ (ತನ್ಯಾ ಅಬ್ರೋಲ್) ಅತಿಯಾದ ಮುಂಗೋಪವನ್ನು ಹೊಂದಿದ್ದು ಅದು ತಂಡಕ್ಕೆ ಪರಿಣಾಮ ಬೀರುತ್ತದೆ. ಜಾರ್ಖಂಡ್ನ ಕುಗ್ರಾಮದಿಂದ ಬಂದಂತಹ ರಾಣಿ ದಿಸ್‌ಪೊಟ್ಟಾ (ಸೀಮಾ ಅಜ್ಮಿ) ಮತ್ತು ಸೋಯಿಮೋಯಿ ಕೆರ್ಕೆಟಾ (ನಿಶಾ ನಾಯರ್) ಇಬ್ಬರಿಗೂ ಬಲಬೀರ್ ಬೆದರಿಸುತ್ತಾಳೆ. ಮಿಜೋರಂನ ಮೇರಿ ರಾಲ್ಟೆ (ಕಿಮಿ ಲಾಲ್ಡಾವ್ಲಾ) ಮತ್ತು ಈಶಾನ್ಯ ಭಾರತದ) ಮಣಿಪುರದ ಮೊಲ್ಲಿ ಜಿಮಿಕ್ (ಮಾಸೋಚೋನ್ "ಚೋನ್ ಚೋನ್" ಜಿಮಿಕ್) ಅವರನ್ನು ಭೇಟಿ ಮಾಡುವ ಭಾಗಶಃ ಪ್ರತಿಯೊಬ್ಬರು "ವಿದೇಶಿಯರು" ಎಂದು ಪರಿಗಣಿಸುತ್ತಿರುತ್ತಾರೆ ಮತ್ತು ಅವರುಗಳು ನಿರಂತರ ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಾರೆ. ತಂಡದ ನಾಯಕಿ, ವಿದ್ಯಾ ಶರ್ಮಾ (ವಿದ್ಯಾ ಮಲ್ವಾಡೆ) ಅವರು ಹಾಕಿ ಮತ್ತು ಅವರ ಗಂಡನ ಕುಟುಂಬದವರ ಅಪೇಕ್ಷೆಯ ಮಧ್ಯೆಯ ಸಂಘರ್ಷದಲ್ಲಿದ್ದರೆ, ಪ್ರೀತಿಯ ಪ್ರಿಯಕರನಾದ, ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ (ಕಾಲ್ಪನಿಕ) ಉಪ ನಾಯಕನಾದ ಅಭಿಮನ್ಯು ಸಿಂಗ್ (ವಿವಾನ್ ಭಟೇನಾ), ತಂಡದೊಂದಿಗಿನ ಪ್ರೀತಿಯ ಒಳಗೊಳ್ಳುವಿಕೆಯಿಂದ ತೀರಾ ಭೀತಿಗೊಂಡಿರುತ್ತಾನೆ.

ಈ ವಿಭಜನೆಯಿಂದ ಹೊರಬರಲು ಅವರಿಗೆ ತಾನು ಸಹಾಯ ಮಾಡಿದರೆ ಮತ್ತು ಪ್ರತಿಯೊಬ್ಬರೊಂದಿಗೆ ಸಹಕಾರದಂದಿದ್ದು ಸಹಾಯ ಮಾಡಲು ಕಲಿತಲ್ಲಿ ಹುಡುಗಿಯರನ್ನು ಗೆಲ್ಲುವ ತಂಡವನ್ನಾಗಿ ಮಾರ್ಪಡಿಸಬಹುದೆಂದು ಖಾನ್ ಮನಗಂಡನು. ಆದ್ದರಿಂದ ಮೊದಲ ಕೆಲವು ದಿನಗಳಲ್ಲಿ, ಅವರ ನಿಯಮಗಳನ್ನು ಪಾಲಿಸಲು ನಿರಾಕರಿಸಿದ, ಅತೀ ಅನುಭವಿ ಆಟಗಾರ್ತಿಯಾದ ಬಿಂದಿಯಾ ನಾಯ್ಕ್ (ಶಿಲ್ಪಾ ಶುಕ್ಲಾ) ಅವಳನ್ನು ಒಳಗೊಂಡು ಹಲವು ಆಟಗಾರ್ತಿಯರನ್ನು ಅವರು ಹೊರ ಕೂರಿಸುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಖಾನ್ ವಿರುದ್ಧ ಪ್ರತಿಭಟನೆ ಮಾಡುವಂತೆ ನಿರಂತರವಾಗಿ ಅವಳು ಆಟಗಾರ್ತಿಯರಿಗೆ ಪ್ರೋತ್ಸಾಹಿಸಲು ಪ್ರಯತ್ನಿಸುತ್ತಾಳೆ. ಅಂತಿಮವಾಗಿ ಅದರಲ್ಲಿ ಬಿಂದಿಯಾ ಯಶಸ್ವಿಯಾಗುತ್ತಾಳೆ, ಮತ್ತು ಸಿಟ್ಟಿನಲ್ಲಿ ಖಾನ್ ರಾಜೀನಾಮೆ ನೀಡುತ್ತಾನೆ. ಭಾಂದವ್ಯದ ಸಂಕೇತವಾಗಿ, ಅವನು ಸಿಬ್ಬಂದಿಯವರನ್ನು ಮತ್ತು ಆಟಗಾರ್ತಿಯರನ್ನು ಮ್ಯಾಕ್‌ ಡೊನಾಲ್ಡ್ಸ್ ಗೆ ಭೋಜನಕ್ಕೆ ಆಹ್ವಾನಿಸುತ್ತಾನೆ. ಖಾನ್ ವಿರುದ್ಧ ಮತ್ತು ಪರಸ್ಪರ ತಂಡವು ಹೊಂದಿದ್ದ ಸಿಟ್ಟು ಉಪಶಮನಗೊಳ್ಳುತ್ತದೆ, ಆದರೆ, ಕೆಲವು ಸ್ಥಳೀಯ ಹುಡುಗರು ಮೇರಿ ಮತ್ತು ಮೊಲ್ಲಿ ವಿರುದ್ಧ ಉಪೇಕ್ಷೆ ಮಾಡುತ್ತಾರೆ. ಪ್ರತಿಕ್ರಿಯೆಯಾಗಿ, ಬಲಬೀರ್ ಅವರ ಮೇಲೆ ಆಕ್ರಮಣ ಮಾಡುತ್ತಾಳೆ, ಇದರ ಪರಿಣಾಮವಾಗಿ ಹುಡುಗರು ಮತ್ತು ಇಡೀ ತಂಡದ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ತಂಡವಾಗಿ ಅವರು ಕಾರ್ಯನಿರ್ವಹಿಸುತ್ತಿರುವ ಪ್ರಥಮ ಸಂದರ್ಭವು ಇದಾಗಿದೆಯೆಂದು ಗುರುತಿಸಿದ ಖಾನ್, ಪುನಃ ಪುನಃ ಸಿಬ್ಬಂದಿಯವರು ಮಧ್ಯಪ್ರವೇಶಿಸದಂತೆ ತಡೆಯುತ್ತಾನೆ. ಮಹಿಳೆಯೋರ್ವಳಿಗೆ ಪುರುಷನೊಬ್ಬನು ಹಿಂದಿನಿಂದ ಕ್ರಿಕೆಟ್ ಬ್ಯಾಟ್ನಿಂದ ಹೊಡೆಯದಂತೆ ನಿಲ್ಲಿಸುವುದರ ಜೊತೆಗೆ ಹಾಕಿಯಲ್ಲಿ ಹೇಡಿಗಳು ಯಾರೂ ಇಲ್ಲ ಎಂದು ಅವನಿಗೆ ಹೇಳುವುದು ಮಾತ್ರ ಅವನ ಪ್ರತಿಕ್ರಿಯೆಯಾಗಿರುತ್ತದೆ.[೧೩] ಜಗಳದ ನಂತರ, ಮಹಿಳೆಯರು (ಇದೀಗ ತಂಡವಾಗಿ ಒಂದಾಗಿರುವವರು) ತಮ್ಮ ತರಬೇತುಗಾರಾಗಿಯೇ ಉಳಿಯುವಂತೆ ಖಾನ್ ಅವರನ್ನು ಕೋರುತ್ತಾರೆ.

ಈ ಹೊಸತಾಗಿ ಕಂಡುಬಂದ ಒಗ್ಗಟ್ಟು ಅವರ ಮೂಲಕ ಹಲವು ಹೆಚ್ಚುವರಿ ಸವಾಲುಗಳನ್ನು ಹುಟ್ಟುಹಾಕುತ್ತದೆ. ಹಾಕಿ ಅಧಿಕಾರಿಗಳು ಒಮ್ಮೆಲೇ ವಿಶ್ವ ಚಾಂಪಿಯನ್‌ಶಿಪ್ ಗಾಗಿ ಆಸ್ಟ್ರೇಲಿಯಕ್ಕೆ ತಂಡವನ್ನು ಕಳುಹಿಸದಿರಲು ನಿರ್ಧರಿಸುತ್ತಾರೆ, ಪುರುಷರ ತಂಡದ ವಿರುದ್ಧ ಸವಾಲಿನ ಪಂದ್ಯದಲ್ಲಿ ಹುಡುಗಿಯರೆಲ್ಲರೂ ಒಂದಾಗುತ್ತಾರೆ. ಪಂದ್ಯವನ್ನು ಸೋತ ಬಳಿಕವೂ, ಪಂದ್ಯದಲ್ಲಿನ ಅವರ ಅಮೋಘ ಪ್ರದರ್ಶನವು ತಮ್ಮ ಮನಸ್ಸನ್ನು ಬದಲಾಯಿಸುವಂತೆ ಅಧಿಕಾರಿಗಳಿಗೆ ಮಾಡುತ್ತದೆ ಮತ್ತು ಅವರು ವಿಶ್ವ ಚಾಂಪಿಯನ್‌ಶಿಪ್ ಗೆ ತಂಡವನ್ನು ಕಳುಹಿಸುತ್ತಾರೆ. ಆಸ್ಟ್ರೇಲಿಯವನ್ನು ತಲುಪಿದ ಬಳಿಕ, ತಂಡವು ಹಾಕಿರೂಸ್ (ಆಸ್ಟ್ರೇಲಿಯಾ), ಬ್ಲಾಕ್ ಸ್ಟ್ಕಿಕ್ಸ್ ವುಮೆನ್ (ನ್ಯೂಜಿಲ್ಯಾಂಡ್), ಲಾಸ್ ಲಿಯೋನಾಸ್ (ಅರ್ಜೆಂಟೀನಾ), ಮತ್ತು ದಕ್ಷಿಣ ಆಫ್ರಿಕಾದ ತಂಡ (ವ್ಯಕ್ತಿಯಿಂದ-ವ್ಯಕ್ತಿಗೆ ಗುರುತಿಸುವ ತಂತ್ರಕ್ಕೆ ಹೆಸರುವಾಸಿಯಾದ) ದಂತಹ ತಂಡಗಳ ವಿರುದ್ಧ ಕಠಿಣ ಪಂದ್ಯಗಳನ್ನು ಎದುರಿಸುತ್ತದೆ. ಪಂದ್ಯದಾದ್ಯಂತ ತಮ್ಮ ನಡುವಿನ ಭಿನ್ನಾಭಿಪ್ರಾಯಗಳಿಂದ ಹೊರಬರಲು ಇನ್ನೂ ಪ್ರಯತ್ನಿಸಿರುವಂತೆ ಪ್ರಾರಂಭದಲ್ಲಿ ಕಂಡುಬಂದರೂ, ಹುಡುಗಿಯರು ಒಂದೇ ತಂಡವಾಗಿ ಕಂಡುಬರಲು ಪ್ರಯತ್ನಿಸುತ್ತಾರೆ. ಈ ನಡವಳಿಕೆಯು ಅಂತಿಮವಾಗಿ ಜಯದಲ್ಲಿ ಮತ್ತು ಖಾನ್ ಅವರಿಗೆ ಒಳ್ಳೆಯ ಹೆಸರನ್ನು ಪುನಃ ತಂದುಕೊಡುವುದರೊಂದಿಗೆ ಕೊನೆಗೊಳ್ಳುತ್ತದೆ. ಹಾಗೆ ಮಾಡುವ ಮೂಲಕ, ಅವರನ್ನು ಬೇರ್ಪಡಿಸಿದ ಪೂರ್ವಾಗ್ರಹವನ್ನು ಅವರು ಕೊನೆಗೊಳಿಸಿದ್ದಲ್ಲದೇ, ಅವರ ಕುಟುಂಬದವರಿಗೆ ಮತ್ತು ದೇಶಕ್ಕೆ ಮಹಿಳಾ ಕ್ರೀಡೆಯ ಹಿರಿಮೆಯನ್ನು ಸಾಧಿಸಿ ತೋರಿಸುತ್ತಾರೆ. ಕೊನೆಯಲ್ಲಿ, ತನ್ನ ತಾಯಿಯೊಂದಿಗೆ ತನ್ನನ್ನು ವರ್ಷಗಳ ಹಿಂದೆ ತಿರಸ್ಕರಿಸಿದ ಅದೇ ವ್ಯಕ್ತಿಗಳ ಸ್ವಾಗತದೊಂದಿಗೆ ಪೂರ್ವಜರ ಮನೆಗೆ ಮರಳುತ್ತಾನೆ.

ತಯಾರಿಕೆ[ಬದಲಾಯಿಸಿ]

ಹಿನ್ನೆಲೆ[ಬದಲಾಯಿಸಿ]

೨೦೦೨ ಕಾಮನ್‌ವೆಲ್ತ್ ಕ್ರೀಡೆ ಗಳಲ್ಲಿ ಮಹಿಳಾ ತಂಡವು ಚಿನ್ನದ ಪದಕವನ್ನು ಗೆದ್ದ ಬಗೆಗಿನ ಚಿಕ್ಕ ಲೇಖನವು ಚಿತ್ರಕಥೆಗಾರ ಜೈದೀಪ್ ಸಾಹ್ನಿಯವರಿಗೆ ಭಾರತೀಯ ಮಹಿಳಾ ಹಾಕಿ ತಂಡದ ಬಗ್ಗೆ ಚಿತ್ರವನ್ನು ರಚಿಸಲು ಪ್ರೇರೇಪಣೆ ನೀಡಿತು.[೬] ಮಹಿಳಾ ತಂಡಕ್ಕೆ ಮಾಧ್ಯಮದವರು ಪ್ರಚಾರ ನೀಡುವಲ್ಲಿ ತೋರುತ್ತಿರುವ ನಿರಾಸಕ್ತಿಯನ್ನು ಗಮನಿಸಿದ ನಿರ್ದೇಶಕ ಶಾಮಿತ್ ಅಮಿನ್ ಅವರು "ಈ ಆಟಗಾರರು ಎದುರಿಸುವುದು ಇನ್ನೂ ಸಾಕಷ್ಟಿದೆ" ಎಂದು ಹೇಳಿದ್ದರು.[೧೪]

ಮಾಧ್ಯಮದವರು ಆಗಾಗ್ಗೆ ಹಾಕಿ ಆಟಗಾರ ಮೀರ್ ರಂಜನ್ ನೇಗಿ (ಇವರು ೧೯೮೨ ಏಷ್ಯನ್ ಕ್ರೀಡೆಗಳ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಪಂದ್ಯವನ್ನು ಬಿಟ್ಟು ಕೊಟ್ಟ ಆರೋಪ ಹೊಂದಿದ್ದರು) ಅವರನ್ನು ಕಬೀರ್ ಖಾನ್ ಪಾತ್ರದೊಂದಿಗೆ ಮಾಧ್ಯಮದಲ್ಲಿ ಹೋಲಿಸಿದ್ದರು.[೭][೧೫][೧೬][೧೭][೧೮] ಉತ್ತರವಾಗಿ ನೇಗಿಯವರು, "ಈ ಚಿತ್ರವು ಮೀರ್ ರಂಜನ್ ನೇಗಿಯವರ ಜೀವನದ ಸಾಕ್ಷ್ಯ ಚಿತ್ರ ಅಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದರು.[೧೯] ಚಿತ್ರಕಥೆಯನ್ನು ಬರೆಯುವಾಗ ನೇಗಿಯವರ ಯಾತನೆಯ ಬಗ್ಗೆ ನನಗೆ ತಿಳಿದಿರಲಿಲ್ಲ ಮತ್ತು ನೇಗಿಯವರ ಜೀವನದೊಂದಿಗಿನ ಹೋಲಿಕೆಯ ಕಾಕತಾಳೀಯವಾಗಿದೆ ಎಂದು ಸಹಾನಿಯವರು ಸಹ ಹೇಳಿದ್ದರು.[೮][೨೦] ೨೦೦೨ ರ ಕಾಮನ್‌ವೆಲ್ತ್ ಕ್ರೀಡೆಯ ಚಿನ್ನದ ಪದಕ ವನ್ನು ಗೆದ್ದ ತಂಡದೊಂದಿಗೆ ಇದ್ದ ಮಹಿಳಾ ತಂಡದ ರಾಷ್ಟ್ರೀಯ ತರಬೇತುದಾರ ಮಹಾರಾಜ್ ಕೃಷ್ಣನ್ ಕೌಶಿಕ್ ಅವರು ನೇಗಿಯವರ ಹೆಸರನ್ನು ಸೂಚಿಸಿದ ಬಳಿಕ ಅವರು ನಿರ್ಮಾಣ ತಂಡವನ್ನು ಸೇರಿಕೊಂಡರು.

ಚಿತ್ರಕಥೆಯನ್ನು ಪ್ರಸ್ತುತ ಮಹಿಳಾ ಹಾಕಿ ತಂಡದ ಸದಸ್ಯರು ಮತ್ತು ತರಬೇತುದಾರರೊಂದಿಗೆ ಸಂದರ್ಶನ ಕೈಗೊಂಡ ಬಳಿಕ ರಚಿಸಲಾಯಿತು. ಕೌಶಿಕ್ ಅವರು ನಂತರ ಈ ರೀತಿ ಹೇಳಿದರು:

ಚಲನಚಿತ್ರದಲ್ಲಿ ತೋರಿಸಿದ ಬಹಳಷ್ಟು ಘಟನೆಗಳು ನೈಜವಾಗಿದೆ. ಹುಡುಗಿಯೋರ್ವರು ಮಾತನ್ನು ಕೇಳದೇ ಇದ್ದಾಗ ತರಬೇತುದಾರನು ಹೇಗೆ ವಾಸ್ತವಾಗಿ ಅವಳನ್ನು ಹೊರಕಳಿಸುತ್ತಾರೆ, ನಂತರ ತಾನೇ ಹೊರ ತೆರಳುತ್ತಾನೆ ಮತ್ತು ಇತರ ಮೂರು ಅಥವಾ ನಾಲ್ಕು ಹುಡುಗಿಯರು ಸಹ ಅವರ ಸೂಚನೆಯನ್ನು ಪಾಲಿಸಿದ ಕಾರಣದಿಂದ ಅಲ್ಲಿ ನಿಂತಿರುತ್ತಾರೆ. ಇದು ಪ್ರೀತಮ್ ಸಿವಾಚ್ ಅವರೊಂದಿಗೆ ನಡೆಯುತ್ತದೆ [...] ಅವರು ಜಗಳವನ್ನು ಮಾಡಲು ಪ್ರಾರಂಭಿಸುವ ದೃಶ್ಯವು, ನಾವು ಕ್ರೀಡಾಕೂಟವೊಂದರಲ್ಲಿ ಭಾಗವಹಿಸಿ ಬೆಂಗಳೂರಿನಿಂದ ಹಿಂತಿರುಗುವಾಗ ನಮ್ಮೊಂದಿಗೂ ಸಂಭವಿಸಿತ್ತು, ಮತ್ತು ಕೆಲವು ಹುಡುಗರು ಟೀಕೆಯನ್ನು ಮಾಡಲು ಪ್ರಾರಂಭಿಸಿದರು [...] ವಾಸ್ತವವಾದ ಆಟದ ಪರಿಸ್ಥಿತಿಗಳೆಂದರೆ, ಅಂತರಾಷ್ಟ್ರೀಯ ಅರ್ಹತಾ ಪಂದ್ಯಾವಳಿಯೊಂದರಲ್ಲಿ ಭಾಗವಹಿಸಲು ಅನುಮತಿಸದೇ ಇದ್ದ ನಂತರ ಮತ್ತೊಂದು ತಂಡಕ್ಕೆ ನಾವು ಸವಾಲೊಡ್ಡಬೇಕಾಯಿತು, ಮತ್ತು ನಾವು ಗೆಲ್ಲುತ್ತೇವೆಂದು ಲಿಖಿತವಾಗಿ ತಿಳಿಸಬೇಕಾಯಿತು [...] ಮತ್ತು ಅಂತಿಮವಾಗಿ ತರಬೇತುದಾರನ ನಿರೂಪಣೆ, ಅವನು ಪಂದ್ಯಕ್ಕೆ ಸ್ಕೂಟರ್‌ನಲ್ಲಿ ಹೋಗುವುದು. ತಂಡವು ಗೆಲ್ಲುತ್ತದೆ, ಆದರೆ ಅವನು ಇನ್ನೂ ಸಹ ಸ್ಕೂಟರ್‌ನಲ್ಲಿ ಹಿಂತಿರುಗುವುದು. ಆದ್ದರಿಂದ ನೀವು ತಿಳಿದಂತೆ ತರಬೇತುದಾರನ ಉದಾತ್ತತೆ ಮತ್ತು ಮಾನ್ಯತೆ ಇಲ್ಲಿ ಯಾವಾಗಲೂ ಇದೆ.[೨೦]

ಹೆಚ್ಚಿನದಾಗಿ, ಸಾಹ್ನಿಯವರು ಹೇಳಿದಂತೆ, "ಚಕ್ ದೇ ಯು ಮಾಜಿ ಮುಖ್ಯ ರಾಷ್ಟ್ರೀಯ ತರಬೇತುದಾರ ಮಹಾರಾಜ್ ಕೃಷ್ಣನ್ ಕೌಶಿಕ್ ಮತ್ತು ಅವರ ಅವರ ಮಹಿಳಾ ಹಾಕಿ ತಂಡದ ಕಾಮನ್‌ವೆಲ್ತ್ ಮತ್ತು ಇತರ ಹಲವು ಚಾಂಪಿಯನ್‌ಶಿಪ್‌ಗಳಲ್ಲಿನ ಗಮನಾರ್ಹ ಯಶಸ್ಸಿನಿಂದ ಭಾರೀ ಪ್ರೇರಣೆ ಪಡೆದಿದೆ."[೨೧]

ಬೆಳವಣಿಗೆ[ಬದಲಾಯಿಸಿ]

ಸಾಹ್ನಿಯವರು ಇಬ್ಬರನ್ನೂ ಸಂಪರ್ಕಿಸಿದ ನಂತರ, ಕೌಶಿಕ್ ಮತ್ತು ನೇಗಿಯವರು ಚಿತ್ರದ ಬೆಳವಣಿಗೆಯಲ್ಲಿ ಒಳಗೊಂಡರು. ಸಾಹ್ನಿಯವರು ಮೊದಲು ಕೌಶಿಕ್‌ರೊಂದಿಗೆ ಭೇಟಿಯಾದರು ಮತ್ತು ಈ ರೀತಿಯಾಗಿ ನೆನಪು ಮಾಡಿಕೊಳ್ಳುತ್ತಾರೆ, "ಎಂ ಕೆ ಕೌಶಿಕ್ ಮತ್ತು ಅವರ ಹುಡುಗಿಯರು ಹಾಕಿಯ ಬಗ್ಗೆ ನಾವು ತಿಳಿದಿದ್ದೆಲ್ಲವನ್ನೂ ನಮಗೆ ಕಲಿಸಿದರು. ನಂತರ ಅವರು ನೇಗಿಯವರನ್ನು ನಮಗೆ ಶಿಫಾರಸು ಮಾಡಿದರು, ಏಕೆಂದರೆ, ಬರವಣಿಗೆ ಮತ್ತು ಪಾತ್ರ ಹಂಚಿಕೆಯನ್ನು ಮುಗಿಸಿದಾಗ ಹುಡುಗಿಯರಿಗೆ ತರಬೇತಿ ನೀಡಲು ಒಬ್ಬರ ಅಗತ್ಯತೆ ನಮಗಿತ್ತು. ಹುಡುಗಿಯರಿಗೆ ತರಬೇತಿ ನೀಡಲು ನೇಗಿಯವರು ಹಾಕಿ ಆಟಗಾರರ ತಂಡವೊಂದನ್ನು ಸಜ್ಜುಗೊಳಿಸಿದರು."[೨೦] ಕೌಶಿಕ್ ಅವರು ಅದೇ ಸಂದರ್ಶನದಲ್ಲಿ ಹೇಳುವಂತೆ, "ಶಿಬಿರವನ್ನು ಹೇಗೆ ಆಯೋಜಿಸಲಾಗುತ್ತದೆ ಎಂಬುದರಿಂದ ಪ್ರಾರಂಭಿಸಿ, ಹುಡುಗಿಯರು ಹೇಗೆ ವಿವಿಧ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದಿರುತ್ತಾರೆ, ಒಳಗೊಂಡಿರುವ ಮಾನಸಿಕ ಅಂಶಗಳು. ಹಾಗೆಯೇ, ವಿವಿಧ ರಾಜ್ಯಗಳು ಮತ್ತು ತಂಡಗಳಿಂದ ಹುಡುಗಿಯರನ್ನು ಆಯ್ಕೆ ಮಾಡಲು ತರಬೇತುದಾರನು ಹೇಗೆ ಒತ್ತಡವನ್ನು ಎದುರಿಸುತ್ತಾನೆ, ಹೀಗೆ ಆಟದ ಬಗ್ಗೆ ಎಲ್ಲವನ್ನೂ ನಾನು ಅವರಿಗೆ ಕಲಿಸಿದೆ."[೨೦]

ನಂತರ ಸಾಹ್ನಿಯವರು ನೇಗಿಯವರನ್ನು ಸಂಪರ್ಕಿಸಿ ಹಾಕಿ ತಂಡವನ್ನು ನಿರೂಪಿಸುವ ನಟರಿಗೆ ತರಬೇತಿ ನೀಡುವಂತೆ ಕೇಳಿಕೊಂಡರು. ಚಿತ್ರದೊಂದಿಗೆ ಪಾಲ್ಗೊಳ್ಳಲು ಪ್ರಾರಂಭಿಕವಾಗಿ ಅಷ್ಟು ಆಸಕ್ತಿಯನ್ನು ತೋರಿಸದಿದ್ದರೂ, ಚಿತ್ರಕಥೆಯನ್ನು ಓದಿದ ಬಳಿಕ ನೇಗಿಯವರು ತಮ್ಮ ಮನಸ್ಸನ್ನು ಬದಲಾಯಿಸಿದರು. ನಟರಿಗೆ ತರಬೇತಿಯನ್ನು ನೀಡಿದ ನೇಗಿಯವರು ಹೇಳುವಂತೆ, "ನಾನು ಹುಡುಗಿಯರಿಗೆ ಆರು ತಿಂಗಳವರೆಗೆ ತರಬೇತಿಯನ್ನು ನೀಡಿದೆ. ೪ ಗಂಟೆಗೆ ಎದ್ದು, ಕಾಂಡಿವಿಲಿಯಿಂದ ಚರ್ಚ್‌ಗೇಟ್‌ವರೆಗೆ ಪ್ರಯಾಣ ಮಾಡುತ್ತಿದ್ದೆವು. ನಾವು ರಾತ್ರಿ ೧೧ ಗಂಟೆಗೆ ವಿಶ್ರಾಂತಿಗೆ ಮರಳುತ್ತಿದ್ದೆವು. ತುಂಬಾ ಆಯಾಸವಾಗುತ್ತಿತ್ತು. ಆದರೆ ನಮಗೆ ಗುರಿಯಿತ್ತು [...] ಅವರಿಗೆ ಓಡಲು ಆಗುತ್ತಿರಲಿಲ್ಲ; ಹಾಕಿ ದಾಂಡನ್ನು ಹಿಡಿದುಕೊಳ್ಳಲು ಆಗುತ್ತಿರಲಿಲ್ಲ. ಅವರು ಯಾರೂ ಸಹ [ಮಾಡಬಾರದೆಂದು] ಉಗುರನ್ನು ಮತ್ತು ಕಣ್ಣಿನ ಹುಬ್ಬುಗಳನ್ನು ಕತ್ತರಿಸದಂತೆ (ಸಾಮಾನ್ಯವಾಗಿ ಆಟಗಾರರು ಮಾಡುವಂತೆ) ಖಚಿತಪಡಿಸಿಕೊಂಡೆ. ಹುಡುಗಿಯರು ಕಠಿಣವಾಗಿ ಕಾರ್ಯನಿರ್ವಹಿಸಿದರು. ಅವರಿಗೆ ನಾನು ವಂದಿಸುತ್ತೇನೆ."[೭] ಚಿತ್ರಶೀ, ಸಾಂದಿಯಾ ಮತ್ತು ರೇನಿಯಾರಂತಹ ಕೆಲವು ನಟಿಯರು ವಾಸ್ತವಿಕವಾಗಿ ಹಾಕಿ ಆಟಗಾರರಾಗಿದ್ದರಿಂದ ಪಾತ್ರಧಾರಿಗಳಾಗಿದ್ದರು.[೨೨] ಕ್ರೀಡಾ ಸಾಹಸ ನಿರ್ದೇಶಕರಾದ ರಾಬ್ ಮಿಲ್ಲರ್ ಅಡಿಯಲ್ಲಿನ ರೀಲ್‌ಸ್ಪೋರ್ಟ್ಸ್,[೨೩][೨೪] ಅವರೂ ಸಹ ಚಿತ್ರಕ್ಕಾಗಿ ಹುಡುಗಿಯರು ಮತ್ತು ಶಾರುಖ್ ಖಾನ್ ಅವರಿಗೆ ತರಬೇತಿ ನೀಡಲು ನೇಗಿಯವರೊಂದಿಗೆ ಕಾರ್ಯನಿರ್ವಹಿಸಿದರು. ಖಾನ್ ಅವರೊಂದಿಗೆ ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ, ನೇಗಿಯವರು ನೆನಪಿಸಿಕೊಳ್ಳುವಂತೆ "ಎಸ್‌ಆರ್‌ಕೆಯವರು ತಪ್ಪಿಸಿದ ಪೆನಾಲ್ಟಿ ಸ್ಟ್ರೋಕ್ ಅನ್ನು ಒಳಗೊಂಡು ಪ್ರತಿಯೊಂದು ಯೋಜಿತವಾಗಿತ್ತು. ಅದರ ಚಿತ್ರೀಕರಣವು ನೈಜವಾಗಿರಬೇಕೆಂಬ ಬಗ್ಗೆ ನಾನು ಉತ್ಸುಕನಾಗಿದ್ದರಿಂದ ಆ ಒಂದು ದೃಶ್ಯದ ಚಿತ್ರೀಕರಣಕ್ಕೆ ಸುಮಾರು ೨೦ ಗಂಟೆಗಳು ತಗುಲಿತು. ನನ್ನ ಹಲವು ಮಾಜಿ ತಂಡದ ಸಹಯೋಗಿಗಳ ನೆರವನ್ನು ನಾನು ಪಡೆದುಕೊಂಡೆ. ಆದರೆ ಹೆಚ್ಚು ಪ್ರಮುಖವಾಗಿ, ಎಸ್ಆರ್‌ಕೆಯವರೊಂದಿಗೆ ಕಾರ್ಯನಿರ್ವಹಿಸುವುದು ತೀರಾ ಸುಲಭವಾಗಿತ್ತು. ಅವರು ನಂಬಲಸಾಧ್ಯವಾದ ವಿನೀತ ಸ್ವಭಾವದವರು ಮತ್ತು ನಮಗೆ ಬಯಸಿದಷ್ಟು ಮಟ್ಟಿಗೆ ಮರು-ಚಿತ್ರೀಕರಣ ಮಾಡಲು ಅವರು ಒಪ್ಪುತ್ತಿದ್ದರು."[೨೫]

ಚಕ್ ದೇ! ಇಂಡಿಯಾ ವನ್ನು ಭಾರತ ಮತ್ತು ಆಸ್ಟ್ರೇಲಿಯಾ ದಲ್ಲಿ ಚಿತ್ರೀಕರಿಸಲಾಯಿತು. ಆಸ್ಟ್ರೇಲಿಯಾದಲ್ಲಿನ ಭಾಗವನ್ನು ಸಿಡ್ನಿ ಮತ್ತು ಮೆಲ್ಬೋರ್ನ್ ನಲ್ಲಿ ಚಿತ್ರೀಕರಿಸಲಾಯಿತು ಮತ್ತು ರೀಲ್‌ಸ್ಪೋರ್ಟ್ಸ್‌ ಸೊಲ್ಯೂಶನ್ಸ್‌ನ ೯೦ ಹಾಕಿ ಆಟಗಾರರ ಪಾತ್ರಧಾರಿಗಳು ಮತ್ತು ೯೦೦೦ ಇತರೆಯವರನ್ನು ಬಳಸಿಕೊಳ್ಳಲಾಯಿತು.[೨೬]

ಚಕ್ ದೇ ಹುಡುಗಿಯರು[ಬದಲಾಯಿಸಿ]

ಚಿತ್ರದ ಬಿಡುಗಡೆಯ ಬಳಿಕ, ತಂಡದ ಸದಸ್ಯರಾಗಿ ನಿರೂಪಿಸಿದ ೧೬ ನಟಿಯರನ್ನು ಮಾಧ್ಯಮದವರು ಚಕ್ ದೇ ಹುಡುಗಿಯರು ಎಂದು ಉಲ್ಲೇಖಿಸಲು ಪ್ರಾರಂಭಿಸಿದರು.[೨೭][೨೮] ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳ ತೀರ್ಪುಗಾರರ ತಂಡದವರೂ ಸಹ ಅವರು ೨೦೦೮ ರ ಅತ್ಯುತ್ತಮ ಬೆಂಬಲ ನಟಿಯರಿಗಾಗಿನ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಯನ್ನು ಚಕ್ ದೇ ಹುಡುಗಿಯರಿಗೆ ನೀಡುವಾಗ ಇದೇ ಪದವನ್ನು ಬಳಸಿದರು.[೨೯]

 • ಅಲಿಯಾ ಬೋಸ್ (ಅನೈತಾ ನಾಯರ್), ಪಶ್ಚಿಮ ಬಂಗಾಳದ ಹಿರಿಯ ಆಟಗಾರ್ತಿ.
 • ಬಲಬೀರ್ ಕೌರ್ (ತನ್ಯಾ ಅಬ್ರೋಲ್) ಪಂಜಾಬ್ನವಳು.
 • ಬಿಂದಿಯಾ ನಾಯಕ್ (ಶಿಲ್ಪಾ ಶುಕ್ಲಾ), ಮಹಾರಾಷ್ಟ್ರದ ಹಿರಿಯ ಆಟಗಾರ್ತಿ. ತಂಡದ ಹೆಚ್ಚು ಅನುಭವಿ ಆಟಗಾರ್ತಿಯಾಗಿ, ತನ್ನ ಇಬ್ಬರು ಅತ್ಯುತ್ತಮ ಸ್ನೇಹಿತೆಯರಾದ ಅಲಿಯಾ ಮತ್ತು ಗುಂಜನ್ ಹೊರತುಪಡಿಸಿ ಪ್ರತಿಯೊಬ್ಬರಿಗೂ ದೊಡ್ಡಸ್ತಿಕೆ ತೋರಿಸಿ ವರ್ತಿಸುತ್ತಿದ್ದಳು. ಅವಳ ಅನುಭವಕ್ಕೆ ತಕ್ಕಂತೆ ಸ್ಥಾನವನ್ನು ನೀಡಲು ನಿರಾಕರಿಸಿದ ಖಾನ್ ಅವರನ್ನು ಪದಚ್ಯುತಿ ಮಾಡಲು ಅವಳು ಪ್ರಯತ್ನಿಸಿದಳು.
 • ಗುಲ್ ಇಕ್ಬಾಲ್ (ಆರ್ಯ ಮೆನನ್), ಉತ್ತರ ಪ್ರದೇಶದವಳು
 • ಗುಂಜನ್ ಲಖಾನಿ (ಶುಭಿ ಮೆಹ್ತಾ), ಆಂಧ್ರಪ್ರದೇಶದ ಹಿರಿಯ ಆಟಗಾರ್ತಿ.
 • ಕೋಮಲ್ ಚೌತಾಲಾ (ಚಿತ್ರಶೀ ರಾವತ್), ಹರಿಯಾಣದಿಂದ. ಕೋಮಲ್‌ಳ ಪಾತ್ರವು ಭಾರತೀಯ ಮಹಿಳಾ ಹಾಕಿ ತಂಡದ ಪ್ರಸ್ತುತ ನಾಯಕಳಾಗಿರುವ ಮಮತಾ ಖರಾಬ್ ಅವರನ್ನು ಆಧರಿಸಿದೆ.[೩೦]
 • ಮೇರಿ ರಾಲ್ಟೆ (ಕಿಮಿ ಲಾಲ್ಡ್‌ವಾಲಾ) ಮಿಜೋರಂನ ಬದಲಿ ಆಟಗಾರ್ತಿ ಮತ್ತು ಪೆನಾಲ್ಟಿ ಸ್ಟ್ರೋಕ್ ತಜ್ಞೆ.
 • ಮೊಲ್ಲಿ ಜಿಮಿಕ್ (ಮಾಸೋಚೋನ್ "ಚೊನ್ ಚೊನ್" ಜಿಮಿಕ್), ಮಣಿಪುರದಿಂದ. ಮೇರಿ ಮತ್ತು ಮೊಲ್ಲಿ ಅವರು ಈಶಾನ್ಯ ಭಾರತ ದವರು ಮತ್ತು ಪ್ರಾರಂಭದಲ್ಲಿ ಅವರನ್ನು ಅವರ ತಂಡದ ಸಹೋಯೋಗಿಗಳು "ವಿದೇಶಿ" ಎಂದು ಪರಿಗಣಿಸಿದರು.
 • ನೇತ್ರಾ ರೆಡ್ಡಿ (ಸಾಂಡಿಯಾ ಫುರ್ಟಾಡೋ), ಆಂಧ್ರ ಪ್ರದೇಶದವಳು.
 • ನಿಕೋಲಾ ಸಿಕ್ವೆರಾ (ನಿಕೋಲಾ ಸಿಕ್ವೆರಾ), ಮಹಾರಾಷ್ಟ್ರದವಳು.
 • ಪ್ರೀತಿ ಸಭರವಾಲ್ (ಸಾಗರಿಕಾ ಘಾಟ್ಗೆ), ಚಂಡೀಗಢ ತಂಡದ ನಾಯಕಿ. ಅವಳ ಪ್ರಿಯಕರ (ವಿವನ್ ಭಟೇನಾ)ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡ ಉಪನಾಯಕ (ಕಾಲ್ಪನಿಕ) ನಾಗಿದ್ದು, ಅವನು ಪ್ರೀತಿಯ ಹಾಕಿಯ ಬಗೆಗಿನ ಬದ್ಧತೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
 • ರಚ್ನಾ ಪ್ರಸಾದ್ (ಕಿಂಬರ್ಲಿ ಮಿರಾಂಡಾ), ಬಿಹಾರದಿಂದ.
 • ರಾಣಿ ಡಿಸ್ಪೋಟ್ಟಾ (ಸೀಮಾ ಅಜ್ಮಿ), ಜಾರ್ಖಂಡ್ನಿಂದ. ಕುಗ್ರಾಮದಿಂದ ರಾಂಚಿಗೆ ರಾಣಿ ಬಂದಳು ಮತ್ತು ಅವಳ ನಗರ ಪ್ರದೇಶದ ಸಹಪಾಠಿಗಳೊಂದಿಗೆ ಹೇಗೆ ಬದುಕುವುದೆಂದು ಕಲಿತಳು.
 • ರೇನಿಯಾ ಫರ್ನಾಂಡಿಸ್ (ರೇನಿಯಾ ಮಾಸ್ಕರೆನ್ಹಾಸ್).
 • ಸೋಯಿಮೋಯಿ ಕೆರ್ಕೆಟ್ಟಾ (ನಿಶಾ ನಾಯರ್), ಜಾರ್ಖಂಡ್ನಿಂದ ಬಂದ ಬದಲಿ ಆಟಗಾರ್ತಿ. ಇವಳೂ ಸಹ ಕುಗ್ರಾಮದವಳು, ಭಾಷೆಯ ಸಮಸ್ಯೆಯೊಂದಿಗೆ ಸೆಣಸಾಡಿ ಹೊಂದಿಕೊಂಡವಳು.
 • ವಿದ್ಯಾ ಶರ್ಮಾ (ವಿದ್ಯಾ ಮಲ್ವಾಡೆ), ಮಧ್ಯಪ್ರದೇಶದಿಂದ ಬಂದ ಗೋಲಿ ಮತ್ತು ನಾಯಕಿ. ರೈಲ್ವೇಸ್ ನ ಮಾಜಿ ಗೋಲ್‌ಕೀಪರ್ ಇತ್ತೀಚೆಗೆ ಮದುವೆಯಾಗಿದ್ದು, ಹಾಕಿ ಮತ್ತು ಕುಟುಂಬದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾಳಿಗೆ ಅವಳ ಗಂಡ ಒತ್ತಾಯಿಸಲು ಪ್ರಯತ್ನಿಸುತ್ತಾನೆ.

ಬಿಡುಗಡೆ[ಬದಲಾಯಿಸಿ]

ಗಲ್ಲಾ ಪೆಟ್ಟಿಗೆ[ಬದಲಾಯಿಸಿ]

ಚಕ್ ದೇ! ಇಂಡಿಯಾ ವು ೧೦ ನೇ ಆಗಸ್ಟ್ ೨೦೦೭ ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿತು. ದೇಶೀಯವಾಗಿ ರೂ. ೬೭,೬೯,೦೦,೦೦೦ ಗಳಿಕೆಯೊಡನೆ ಇದು ೨೦೦೭ ರಲ್ಲಿ ಭಾರತದಲ್ಲಿ ಮೂರನೇ ಅತೀ ಹೆಚ್ಚು ಆದಾಯಗಳಿಸಿದ ಚಲನಚಿತ್ರವಾಯಿತು,[೯] ಮತ್ತು ಇದನ್ನು "ಬ್ಲಾಕ್‌ಬಸ್ಟರ್" ಎಂದು ಘೋಷಿಸಲಾಯಿತು.[೯] ಅಮೇರಿಕದ ಪಟ್ಟಿಯಲ್ಲಿ ಇದು ೨೦ ನೇ ಸಂಖ್ಯೆಯಾಗಿ ಪ್ರಾರಂಭವಾದರೆ, ಇಂಗ್ಲೆಂಡ್‌ನಲ್ಲಿ ೧೧ ನೇ ಪಟ್ಟಿಯಲ್ಲಿ, ಮತ್ತು ಆಸ್ಟ್ರೇಲಿಯದಲ್ಲಿ ೧೨ ನೇ ಸಂಖ್ಯೆಯಾಗಿ ಪಟ್ಟಿ ಮಾಡಲ್ಪಟ್ಟಿತು.[೩೧] ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇದು ರೂ ೩೫ ದಶಲಕ್ಷದ ಗಳಿಕೆ ಮಾಡಿದರೆ, ಉತ್ತರ ಅಮೇರಿಕದಲ್ಲಿ ರೂ ೪೭.೫ ದಶಲಕ್ಷ, ಮತ್ತು ಇತರ ವಿದೇಶೀ ಗಳಿಕೆಯು ರೂ ೩೫ ದಶಲಕ್ಷವಾಗಿದ್ದಿತು.[೩೨]

ವಿಮರ್ಶಾ ಮನ್ನಣೆ[ಬದಲಾಯಿಸಿ]

ವಿಮರ್ಶಾ ಸಮೂಹವಾದ ರೋಟೆನ್ ಟೊಮಾಟೋಸ್ಚಕ್ ದೇ! ಇಂಡಿಯಾ ಗೆ ೫ ವಿಮರ್ಶೆಯೊಂದಿಗೆ (೪ ಹೊಸತಾದ ಮತ್ತು ೧ ಅಸಮರ್ಪಕ) ೮೦%, ಮೌಲ್ಯವನ್ನು ನೀಡಿತು.[೩೩]

ಚಕ್ ದೇ! ಇಂಡಿಯಾ ವನ್ನು ವಿಮರ್ಶಾತ್ಮಕವಾಗಿ ಭಾರತ ಮತ್ತು ವಿದೇಶದಲ್ಲಿ ಪ್ರಶಂಸಿಸಲಾಯಿತು. ಸುಭಾಷ್ ಕೆ. ಝಾ (ಚಿತ್ರ ವಿಮರ್ಶಕ ಮತ್ತು ದಿ ಎಸೆನ್ಸ್ ಗೈಡ್ ಟು ಬಾಲಿವುಡ್ ) ಪುಸ್ತಕದ ಲೇಖಕರು ಚಿತ್ರಕ್ಕೆ ಅತೀ ವಿರಳವಾದ "ಮೊದಲ ವಿಷಯಗಳು ಮೊದಲು ಎಂದು ವಿಮರ್ಶೆಯನ್ನು ನೀಡಿದರು. ಚಕ್ ದೇ ಇಂಡಿಯಾ ಒಂದು ಸಂಪೂರ್ಣವಾದ ವಿಜಯಶಾಲಿಯಾಗಿದೆ. ಉತ್ಸಾಹದ ಮತ್ತು ಕಲೆಗಾರಿಕೆಯ ವಿಜಯೋತ್ಸವ. ನಿರ್ದೇಶಕರಾದ ಶಿಮಿತ್ ಅಮೀನ್ ಅವರು ಚಲನಚಿತ್ರವನ್ನು ಅಪಾರವಾದ ಶಕ್ತಿ, ಮತ್ತು ಅಸಾಧಾರಣವಾದ ಏಕತೆ ಮತ್ತು ಹುಮ್ಮಸ್ಸಿನೊಂದಿಗೆ ನಿರ್ಮಿಸಿದ್ದರೆ, ಅಕ್ಕರೆಯ ಪ್ರಯತ್ನದ ಹಿಂದಿನ ಯೋಚನಾ ಪ್ರಕ್ರಿಯೆಯು, ತಂಡದ ಉತ್ಸಾಹ, ಕುಗ್ಗಿದ-ಉತ್ಸಾಹದ ಚಿಲುಮೆಯ ಬಗ್ಗೆ ಮತ್ತು ಶಕ್ತಿ ಕುಂದಿದ, ಅಪಮಾನ ಹೊಂದಿದ, ದೇಶಭ್ರಷ್ಟ ತರಬೇತುದಾರನು ತಂಡಕ್ಕೆ ಸ್ಪೂರ್ತಿ ತುಂಬುವ ಮತ್ತು ಅವನ ಸ್ವಂತ ಸುಪ್ತ ಉತ್ಸಾಹವನ್ನು ವ್ಯಾಪಕವಾದ ಎಚ್ಚರಿಕೆಯ ಸ್ಥಿತಿಗೆ ಹುರಿದುಂಬಿಸುವ ಅತ್ಯುತ್ತಮವಾಗಿ ನಿರ್ಮಿಸಲಾದ ಸಾಕಷ್ಟು ಹಾಲಿವುಡ್ ಚಲನಚಿತ್ರಗಳ ನೆನಪಿಗೆ ಮರಳುತ್ತದೆ." ದಿ ಟೈಮ್ಸ್ ಆಫ್ ಇಂಡಿಯಾ[೩೪] ನಿಖತ್ ಕಜ್ಮಿ ಅವರು ಚಲನಚಿತ್ರಕ್ಕೆ ೪ ರಲ್ಲಿ ೪ ಸ್ಟಾರ್ ನೀಡಿದರು ಮತ್ತು ಅವರು ಹೇಳಿದಂತೆ ಇದು "ಅಪರಿಚಿತರ ತಂಡದ ಅತ್ಯುತ್ತಮ ನಟನೆಯಾಗಿದ್ದು, ದಿಟ್ಟತನದ ಪ್ರದರ್ಶನ ಮತ್ತು ಅಸಾಧಾರಣವಾದ ಸಂಯವು ಚಕ್ ದೇ ಇಂಡಿಯಾವನ್ನು ಯಾವುದೇ ಭಾವೋದ್ರೇಕದ ಪರಮಾವಧಿಯಿಲ್ಲದೇ ರಾಷ್ಟ್ರಭಕ್ತಿಯ ಅನಿಯಂತ್ರಿತ ಸ್ತುತಿಯಾಗಿದೆ. ಮತ್ತು ಹೌದು, ಎಲ್ಲಾ ಎಸ್‌ಆರ್‌ಕೆ ಅಭಿಮಾನಿಗಳಿಗೆ, ಈ ಬಾರಿ ಫಲಿತಾಂಶವು ಸರ್ವಾನುತದಿಂದ: ಚಕ್‌ದೇ ಶಾರೂಖ್! ನೀವು ಇದನ್ನು ಉತ್ತಮಪಡಿಸುವಿರಾ?"[೩] ಇಂಡಿಯಾ ಟುಡೇ ಚಕ್ ದೇ! ಇಂಡಿಯಾ ಅನ್ನು ಈ ರೀತಿ ವರ್ಣಿಸಿದೆ, "ಇಲ್ಲಿಯವರೆಗೆ ಬಾಲಿವುಡ್ ನಲ್ಲಿ ತೆರೆಕಂಡ ಆಕ್ರಮಣಕಾರಿ ಮಹಿಳಾ ಶಕ್ತಿಯ ಚಲನಚಿತ್ರವಾಗಿದೆ. ಜಗಳಗಂಟಿ ಹರ್ಯಾನ್ವಿ ಕೋಮಲ್‌ಳಿಂದ ಹಿಡಿದು ಕೋಪಿಷ್ಠೆ ಬಿಂದಿಯಾವರೆಗಿನ ಹುಡುಗಿಯರು, ಪಂಜಾಬಿ ಬಲಬೀರ್‌ಳಿಂದ ಅತೀ ಸಂಭಾವಿತೆ, ಚಂಡೀಗಢದ ಗೊಂಬೆ ಪ್ರೀತಿಯವರನ್ನು ರೂಢಮಾದರಿಯಲ್ಲಿ ಆಯ್ಕೆ ಮಾಡಿರಬಹುದು, ಆದರೆ ಅವರು ಕೆಚ್ಚೆದೆಯ ಅಭಿನಯದಿಂದ, ಕಣ್ಣಿನಲ್ಲಿ ಖಾನ್ ಅವರನ್ನು ದುರುಗುಟ್ಟಿ ನೋಡುವುದು, ಭಾರತೀಯ ಪುರುಷ ಹಾಕಿ ತಂಡವನ್ನು ಬಹುಪಾಲು ಸೋಲಿಸುವುದು, ಹುಡುಗರ ಗುಂಪನ್ನು ಹಲ್ಲೆ ಮಾಡುವುದು, ಮತ್ತು ಆರು-ಪಟ್ಟು ಆಸ್ಟ್ರೇಲಿಯ ತಂಡಕ್ಕೆ ಹೇಗೆ ಗೆಲ್ಲುವುದೆಂದು ತೋರಿಸಿಕೊಡುವ ಮೂಲಕ ಮನಸೂರೆಗೊಳ್ಳುತ್ತಾರೆ." ದಿ ಹಿಂದೂ[೩೫] ಸುಧೀಶ್ ಕಾಮತ್ ' ಕೇಳುತ್ತಾರೆ " ಕ್ರೀಡೆಗಳ ಬಗ್ಗೆ ನಾವು ಯಾವಾಗ ಕೊನೆಯದಾಗಿ ಸ್ಥಿರ ಹಾಗೂ ಸಮಗ್ರವಾದ ಚಿತ್ರವನ್ನು ಮಾಡಿದೆವು - ಕೆಲವು ಆಟಗಾರರು ತಾತ್ಕಾಲಿಕವಾಗಿ ಆಧಾರವಾಗಿರುವುದಿಲ್ಲ ಆದರೆ ತಂಡಕಾರ್ಯದ ವಿಜಯೋತ್ಸಾಹವಾಗಿದೆ? 'ಚಕ್ ದೇ' ಎನ್ನುವುದು ಒಂದು ಚಲನಚಿತ್ರವಾಗಿದ್ದು ಅಲ್ಲಿ ನಾಯಕನು ಹೊರಗಿನಿಂದ ವೀಕ್ಷಿಸುತ್ತಾನೆ ಮತ್ತು "ಮತ್ತೆ -ಅವಳ-ಹೆಸರೇನು" ಹುಡುಗಿಯರ ಸಮೂಹಕ್ಕೆ ಜಯಗಳಿಸಲು ಬಿಡುತ್ತಾನೆ [...] ಮತ್ತೊಂದು ಹಂತದಲ್ಲಿ, ‘ಚಕ್ ದೇ’ ಎನ್ನುವುದು ಮಹಿಳೆಯರ ಬಂಧವಿಮುಕ್ತಿಯಾಗಿದೆ. ಇದು ನಮ್ಮ ಕಾಲದ ಅತ್ಯುತ್ತಮ ಸ್ತ್ರೀಸಮಾನತಾವಾದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಮುಂದೆ, ನಾವು ನೋಡಿದ ಯಾವುದೇ ಕ್ರೀಡಾ ಚಲನಚಿತ್ರಗಳಲ್ಲಿ ಹುಡುಗಿಯರು ತಮ್ಮಷ್ಟಕ್ಕೇ ಭಾರತವನ್ನು ಅತೀ ಹತ್ತಿರದಿಂದ ಪ್ರತಿನಿಧಿಸಿದವರಾಗಿದ್ದಾರೆ. ಅವರು ೧೬ ಆಕರ್ಷಕವಾದ ಯುವ ವಸ್ತುವಾಗಿದ್ದಾರೆ. ಪಾತ್ರ ಹಂಚಿಕೆಯು ಅತ್ಯದ್ಭುತವಾಗಿದೆ. ಪಾತ್ರಾಭಿನಯದಲ್ಲಿನ ತಾಜಾತನವು ವಾಸ್ತವವಾಗಿ ಈ ನಟರನ್ನು ಮರೆಯುವಂತೆ ಮಾಡುತ್ತದೆ. ಆಟಗಾರರಲ್ಲಿ ಜನಾಂಗ/ ಕುಲದ ಭೇದಭಾವದವರೆಗೆ ನಾವು ಉತ್ತೇಜಿತರಾದರೂ, ಸ್ವಲ್ಪ ಸಮಯದಲ್ಲೇ, ಅಮೀನ್ ಅವರು ಅವರ ಪರಸ್ಪರ-ಜನಾಂಗೀಯ ಸಂಘರ್ಷಗಳನ್ನು ಸಮವಸ್ತ್ರದ ಹಿಂದೆ ಮುಚ್ಚುತ್ತಾರೆ, ಅತ್ಯುತ್ತಮ ಸಮತಾವಾದಿ."[೩೬]

ದಿ ಟೈಮ್ಸ್ ನ ಅನಿಲ್ ಸಿನಾನನ್ ಈ ರೀತಿಯಾಗಿ ಸೇರಿಸುತ್ತಾರೆ, " ಚೊಚ್ಚಲ ನಿರ್ದೇಶಕ ಶಿಮಿತ್ ಅಮಿನ್ ಅವರು ಹಿಡಿತದ ಚಲನಚಿತ್ರವನ್ನು ಜನಪ್ರಿಯವಾಗಿಸಿದ್ದಾರೆ: ಅಂತಿಮ ಫಲಿತಾಂಶ ಏನೆಂದು ತಿಳಿದಿದ್ದರೂ ನಮ್ಮ ಹುಡುಗಿಯರನ್ನು ನಾವು ಶೋಧಿಸುತ್ತಿರುತ್ತೇವೆ. ಇದನ್ನು ಸಾಮಾನ್ಯ ಲಕ್ಷಣಗಳ ಒಡ್ಡುವಿಕೆಯನ್ನು ಹೊಡೆದೋಡಿಸಿದ ಮತ್ತು ಆಟದ ಮೇಲೆ ಕೇಂದ್ರೀಕರಿಸುವ ಚಿತ್ರಕಥೆಯ ಮೂಲಕ ಸಾಧಿಸಲಾಗಿದೆ. ಪ್ರಣಯವೇ ಇಲ್ಲ, ಪೋಷಕರನ್ನು ಬದಿಗೆ ತಳ್ಳಲಾಗಿದೆ ಮತ್ತು ಯಾರೂ ಸಹ ಹಾಡು ಮತ್ತು ನೃತ್ಯಕ್ಕೆ ಜೋತು ಬೀಳುವುದಿಲ್ಲ, ಲಗಾನ್ -ಶೈಲಿ ಅವಧಿಯ ತರಬೇತಿ."[೨] ದಿ ಬಿಬಿಸಿ ಯ ಅವರು ಚಕ್ ದೇ! ಇಂಡಿಯಾ ಗೆ ೫ ರಲ್ಲಿ ೪ ನಕ್ಷತ್ರಗಳನ್ನು ನೀಡುತ್ತಾ ಹೇಳುತ್ತಾರೆ, "ಕ್ರೀಡಾಸಕ್ತ ಪರಾಧೀನತೆಯ ಕಥನವು ಹೊಸತಾಗಿಲ್ಲದಿದ್ದರೂ, ಜೈದೀಪ್ ಸಾಹ್ನಿಯವರ ಚಿತ್ರಕಥೆಯು ಕ್ರಿಕೆಟ್‌ನಿಂದ ಮೂಲೆಗುಂಪಾಗಿರುವ ಜನಪ್ರಿಯ ಭಾರತೀಯ ಕ್ರೀಡೆಯತ್ತ ಅಪರೂಪದ ನೋಟವನ್ನು ಬೀರುತ್ತದೆ. ಆದರೆ ಬ್ಯಾಟ್ ಅಥವಾ ಬಾಲ್ ಪ್ರಕಾರ ಅಥವಾ ಅಭ್ಯಾಸ ಅವಧಿಯ ಸಂಖ್ಯೆಯು ಇಲ್ಲಿ ಸಮಸ್ಯೆಯೇ ಅಲ್ಲ. ಬದಲಿಗೆ, ಲಿಂಗ ಮತ್ತು ಆಟಗಾರರ ವೈಯಕ್ತಿಕ ಪೂರ್ವಾಗ್ರಹತೆಯು ಕಥೆಯನ್ನು ಬಲಪಡಿಸುತ್ತದೆ."[೩೭] ದಿ ನ್ಯೂಯಾರ್ಕ್ ಟೈಮ್ಸ್ ‌ ನ ಆಂಡಿ ವೆಬ್‌ಸ್ಟಾರ್ ಅವರು ಚಿತ್ರವು ಸಾಂಪ್ರದಾಯಿಕ ಪರಾಧೀನತೆಯ ಕ್ರೀಡಾ ಚಲನಚಿತ್ರಕ್ಕೆ ಹೊಸ ನೋಟವನ್ನು ನೀಡಿದೆ ಎಂದು ವಾದಿಸುತ್ತಾರೆ ಮತ್ತು ಪೀಠಿಕೆಯನ್ನು ಫಿಫಾ ಮಹಿಳೆಯರ ವಿಶ್ವ ಕಪ್ ನಲ್ಲಿನ ಗೆಲುವಿಗೆ ಹೋಲಿಸಿದ್ದಾರೆ.[೩೮] ದಿ ಹಾಲಿವುಡ್ ರಿಪೋರ್ಟರ್ ನ ಕಿರ್ಕ್ ಹನಿಕಟ್ ಅವರು ಚಲನಚಿತ್ರವು "ಭಾವಾತಿರೇಕ ಅಥವಾ ಮುನ್ನುಡಿಯ ಬಗ್ಗೆ ಖಂಡಿತವಾಗಿ ಬಾಲಿವುಡ್ ತಲೆತಗ್ಗಿಸಬೇಕು ಎಂದು ವಾದಿಸುತ್ತಾರೆ. ಆದರೂ ಅದರ ಭಾರತೀಯ ಸಮಾಜದ ಕುರಿತಾಗಿನ ತೀಕ್ಷ್ಣ ನೋಟವು ಹಳೆಯ-ಶೈಲಿಯ, ಸಿಹಿ-ಮಿಶ್ರಿತ ಬಾಲಿವುಡ್ ಚಲನಚಿತ್ರಗಳಿಗೆ ಹೋಲಿಸಿದರೆ ಪ್ರತ್ಯೇಕವನಿಸುತ್ತದೆ."[೩೯] ವೆರೈಟಿ ಯ ಡೆರೆಕ್ ಎಲ್ಲಿ ಅವರು ಚಿತ್ರವನ್ನು ಹೀಗೆ ವರ್ಣಿಸುತ್ತಾರೆ " ರಾಷ್ಟ್ರಭಕ್ತಿಯ ಎದೆಬೆಚ್ಚಗಾಗಿಸುವ, ಕೆಲವು ಹಳೆಯ-ಶೈಲಿಯ ಮನರಂಜನೆಯ ಗುರಿಗಳನ್ನು ಮುಟ್ಟುವ" ಚಿತ್ರವಾಗಿದೆ ಮತ್ತು ಅದು ಭಾರತೀಯ ಹೊಸ ಆರ್ಥಿಕ ಸಾಮರ್ಥ್ಯ ಮತ್ತು ಅದರ ಇತ್ತೀಚಿನ ಬ್ರಿಟಿಷರಿಂದ ಪಡೆದ ೬೦ ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಬಹುತೇಕ ರಾಷ್ಟ್ರಗೀತೆಯಾಗಿದೆ ಮತ್ತು ಸಲೀಮ್-ಸುಲೇಮಾನ್ ಮತ್ತು ಸಂಗೀತರಚನೆಕಾರ ಜೈದೀಪ್ ಸಾಹ್ನಿ (ಅವರು ಚಿತ್ರಕಥೆಗಾರರೂ ಹೌದು) ಅವರ ಜೋಡಿಯ ಸ್ಪೂರ್ತಿದಾಯಕ ಶೀರ್ಷಿಕೆ ಗೀತೆಯನ್ನು ಪಡೆದಿದೆ. ಈ ಮೂಲಕ, ಭಾರದಾದ್ಯಂತದ ೧೬ ಹುಡುಗಿಯರ ತಂಡವು ಅಂತಿಮವಾಗಿ ಒಂದುಗೂಡಿ ಅವರ ಅಂತರಾಷ್ಟ್ರೀಯ ಎದುರಾಳಿಗಳನ್ನು ಬಗ್ಗುಬಡಿಯುವುದು ಆಶ್ಚರ್ಯವಾಗದೇ ಇರದು." [೪೦] ವಿಮರ್ಶೆಗಿಂತ ಹೆಚ್ಚಿನದಾಗಿ, ಚಕ್ ದೇ! ಇಂಡಿಯಾ ವು ವಿವಿಧ ಬಾಲಿವುಡ್ ಚಿತ್ರ ನಿರ್ದೇಶಕರುಗಳಾದ ಮಧುರ್ ಭಂಡಾರ್ಕರ್, ಡೇವಿಡ್ ಧವನ್, ರಾಕೇಶ್ ಓಂಪ್ರಕಾಸ್ ಮೆಹ್ರಾ, ಅನುರಾಗ್ ಬಸು, ಮತ್ತು ಶ್ರೀರಾಮ್ ರಾಘವನ್ ಅವರ ಪ್ರಕಾರ ೨೦೦೭ರ ಅತ್ಯುತ್ತಮ ಚಿತ್ರವಾಗಿ ತಾರೇ ಜಮೀನ್ ಪರ್ ನೊಂದಿಗೆ ಸಮಬಲ ಸಾಧಿಸಿದೆ.[೧೦]

೩೦ ನೇ ಆಗಸ್ಟ್ ೨೦೦ ರಂದು, ಚಲನಚಿತ್ರ ಕಲಾ ಮತ್ತು ವಿಜ್ಞಾನ ಅಕಾಡಮೆಯು ಚಕ್ ದೇ! ಇಂಡಿಯಾ ದ ಚಿತ್ರಕಥೆಯ ಪ್ರತಿಯನ್ನು ಮಾರ್ಗರೇಟ್ ಹೆರ್ರಿಕ್ ಗ್ರಂಥಾಲಯದಲ್ಲಿಡಲು ನೀಡುವಂತೆ ವಿನಂತಿಸಿತು.[೪೧]

ಪ್ರಶಸ್ತಿಗಳು[ಬದಲಾಯಿಸಿ]

ಚಕ್ ದೇ! ಇಂಡಿಯಾ ಹಲವು ಪ್ರಶಸ್ತಿಗಳನ್ನು ಗೆದ್ದಿದೆ, ಇವುಗಳಲ್ಲಿ ಎಂಟನ್ನು ಅತ್ಯುತ್ತಮ ಚಲನಚಿತ್ರ ಕ್ಕಾಗಿ: ಅಪ್ಸರಾ ಫಿಲ್ಮ್ & ಟೆಲಿವಿಷನ್ ನಿರ್ಮಾಪಕರ ಸಂಘ , ಆಸ್ಟ್ರೇಲಿಯನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ , ಬಿಲ್ಲಿ ಪ್ರಶಸ್ತಿಗಳು, ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಪ್ರಶಸ್ತಿಗಳು (ಐಐಎಫ್ಎ), ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು, ಯುಎನ್‌ಎಫ್‌ಪಿಎ-ಲಾಡ್ಲಿ ಮಾಧ್ಯಮ ಪ್ರಶಸ್ತಿಗಳು , ವಿ. ಶಾಂತಾರಾಮ್ ಪ್ರಶಸ್ತಿಗಳು, ಮತ್ತು ಝೀ ಸಿನೆ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಚಿತ್ರವು ಸಂಪೂರ್ಣ ಮನರಂಜನೆಯನ್ನು ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಯನ್ನು ಸಹ ಸ್ವೀಕರಿಸಿದೆ.[೧೧]

ವಿಶೇಷ ಪ್ರದರ್ಶನಗಳು[ಬದಲಾಯಿಸಿ]

ಚಕ್ ದೇ! ಇಂಡಿಯಾ ವನ್ನು ೩೦ ನೇ ಮೇ ೨೦೦೯ ರಂದು ಭಾರತೀಯ ಮಹಿಳಾ ರಾಷ್ಟ್ರೀಯ ಹಾಕಿ ತಂಡವನ್ನು ಸ್ವಾಗತಿಸಲು ಡರ್ಬಾನ್, ದಕ್ಷಿಣ ಆಫ್ರಿಕ ದಲ್ಲಿ ನಡೆದ ಸ್ಪಾರ್ ಕಪ್‌ನ ಪ್ರಾರಂಭೋತ್ಸವದಲ್ಲಿ ಪ್ರದರ್ಶಿಸಲಾಯಿತು.[೪೨] ಸ್ಪಾರ್ ಕಪ್ ಎನ್ನುವುದು ಅಕ್ಟೋಬರ್‌ನಲ್ಲಿ ನಡೆಯುವ ೨೦೦೯ ರ ಹಾಕಿ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಮುನ್ನುಡಿಯಾಗಿದೆ. ಭಾರತವು ಮೂರು ಇತರ ತಂಡಗಳಾದ: ಹಾಕಿರೂಸ್, ಲಾಸ್ ಲಿಯೋನಾಸ್, ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ಹಾಕಿ ತಂಡದೊಂದಿಗೆ ಸ್ಪರ್ಧಿಸಿತು.[೪೩]

ಪ್ರಭಾವ[ಬದಲಾಯಿಸಿ]

ಐಹೆಚ್ಎಫ್ ಅಮಾನತು[ಬದಲಾಯಿಸಿ]

ಏಪ್ರಿಲ್ ೨೦೦೮ ರಲ್ಲಿ ಭಾರತೀಯ ಹಾಕಿ ಫೆಡರೇಶನ್ ಅನ್ನು ಅಮಾನತು ಪಡಿಸಿದ್ದು ಚಲನಚಿತ್ರದ ಪ್ರಭಾವನ್ನು ಎತ್ತಿ ತೋರಿಸುತ್ತದೆ. ಇಂಡಿಯಾ ಟುಡೇ ಘಟನೆಯನ್ನು ವಿವರಿಸಲು ಚಿತ್ರವನ್ನು ಎರಡು ಲೇಖನಗಳಲ್ಲಿ, "ಆಪರೇಶನ್ ಚಕ್ ದೇ ಇಂಪ್ಯಾಕ್ಟ್: ಜ್ಯೋತಿಕುಮಾರನ್ ರಿಸೈನ್ಸ್" [೪೪] ಮತ್ತು "ಆಪರೇಶನ್ ಚಕ್ ದೇ ಇಂಪ್ಯಾಕ್ಟ್: ಪ್ಯುರೋರ್ ಇನ್ ಲೋಕಸಭಾ"[೪೫] ಎನ್ನುವ ಎರಡು ಶೀರ್ಷಿಕೆಗಳಲ್ಲಿ ಬಳಸಿತು. ದಿ ಇಂಡಿಯಾಟೈಮ್ಸ್, ತನ್ನ, "ಫೈವ್ ವೈಸ್ ಮೆನ್ ಸೆಟ್ ಫೋರ್ ಎ 'ಚಕ್ ದೇ' ಆಕ್ಟ್" ಎಂಬ ಶೀರ್ಷಿಕೆಯೊಂದಿಗೆ, "ಇಟ್ ಲುಕ್ಸ್ ಲೈಕ್ ಇಂಡಿಯನ್ ಹಾಕಿ ಹ್ಯಾಸ್ ಡನ್ ಎ ರಿಯಲ್ 'ಚಕ್ ದೇ' ದಿಸ್ ಟೈಮ್ ಎರೌಂಡ್"[೪೬] ಎನ್ನುವ ಶೀರ್ಷಿಕೆಯೊಂದಿಗೆ ಚರ್ಚೆ ಮಾಡಿತು. ಹೆಚ್ಚಿನದಾಗಿ, ಐಹೆಚ್‌ಎಫ್ ಅನ್ನು ಸ್ಥಾನಾಂತರಿಸುವ ಕಮಿಟಿಯ ನಾಯಕತ್ವ ವಹಿಸಲು ಭಾರತೀಯ ಒಲಂಪಿಕ್ ಅಸೋಸಿಯೇಶನ್ ನೇಮಕ ಮಾಡಿದ ಹಾಕಿ ಆಟಗಾರ, ಅಸ್ಲಮ್ ಶೇರ್ ಖಾನ್ ಅವರು, ಕಾರ್ಯನಿರ್ವಹಿಸಲು ಚಲನಚಿತ್ರವು ಮಾದರಿಯಾಗಿದೆ ಎಂದು ಹೇಳಿದರು. ಸಂದರ್ಶನವೊಂದರಲ್ಲಿ ಅವರು, "ಬಾಲಿವುಡ್ ಬ್ಲಾಕ್‌ಬಸ್ಟರ್ ಚಕ್ ದೇ! ಇಂಡಿಯಾ ದೇಶದ ವಿವಿಧ ಭಾಗಗಳಿಂದ ಆಟಗಾರರು ಇದ್ದಾರೆ. ಚಿತ್ರದಲ್ಲಿ ನೀವು ನೋಡಿದಂತೆಯೇ ಭಾರತ ತಂಡವನ್ನು ರೂಪಿಸಬೇಕು ಎಂದು ತಿಳಿಸಿದರು. ಶಕ್ತಿಶಾಲಿ ತಂಡವನ್ನು ರಚಿಸಲು ಅವರನ್ನು ನಾವು ಒಂದುಗೂಡಿಸಬೇಕು." [೧೨] ಮತ್ತೊಂದು ಸಂದರ್ಶನದಲ್ಲಿ, ಭಾರತದಲ್ಲಿ ಹಾಕಿಯ ಮೇಲೆ "ಚಕ್ ದೇ ಪರಿಣಾಮವನ್ನು" ಅವರು ರಚಿಸಬೇಕೆಂದಿರುವುದಕ್ಕೆ ಒತ್ತು ನೀಡಿದ್ದರು.[೪೭]

ಧ್ವನಿಪಥ[ಬದಲಾಯಿಸಿ]

Chak De! India
ಚಿತ್ರ:Chak De India Music CDCover.jpg
Salim-Sulaiman ಅವರ ಧ್ವನಿಸುರಳಿ ಸಂಪುಟ
ಬಿಡುಗಡೆ ೧ August ೨೦೦೭
ಶೈಲಿ Feature film soundtrack
ಕಾಲಾವಧಿ ೨೮:೯೨
ನಿರ್ಮಾಪಕ Aditya Chopra
Salim-Sulaiman ಕಾಲಕ್ರಮ
Dor
(೨೦೦೬)
Chak De! India
(೨೦೦೭)
Aaja Nachle
(೨೦೦೭)

ಚಕ್ ದೇ! ಇಂಡಿಯಾ ಧ್ವನಿಪಥವನ್ನು ೧ ನೇ ಆಗಸ್ಟ್ ೨೦೦೭ ರಂದು ಬಿಡುಗಡೆ ಮಾಡಲಾಯಿತು ಅದನ್ನು ಸಲೀಮ್-ಸುಲೇಮಾನ್ ಅವರು ಜೈದೀಪ್ ಸಾಹ್ನಿ ಅವರ ಸಾಹಿತ್ಯದೊಂದಿಗೆ ಸಂಗೀತ ನಿರ್ದೇಶಿಸಿದರು. ಶೀರ್ಷಿಕೆ ಗೀತೆ, ಚಕ್ ದೇ! ಇಂಡಿಯಾ ವು,

ಚಕ್ ದೇ! ಇಂಡಿಯಾ ಧ್ವನಿಪಥವನ್ನು ೧ ನೇ ಆಗಸ್ಟ್ ೨೦೦೭ ರಂದು ಬಿಡುಗಡೆ ಮಾಡಲಾಯಿತು ಅದನ್ನು ಸಲೀಮ್-ಸುಲೇಮಾನ್ ಅವರು ಜೈದೀಪ್ ಸಾಹ್ನಿ ಅವರ ಸಾಹಿತ್ಯದೊಂದಿಗೆ ಸಂಗೀತ ನಿರ್ದೇಶಿಸಿದರು. ಶೀರ್ಷಿಕೆ ಗೀತೆ, ಚಕ್ ದೇ! ಇಂಡಿಯಾ ವು,ಭಾರತದ ಅನಧಿಕೃತ ಕ್ರೀಡಾ ಗೀತೆಯಾಯಿತು.[೪೮] ಸಲೀಮ್ ಮತ್ತು ಸುಲೇಮಾನ್ ಮರ್ಚೆಂಟ್ ಅವರು ಗೀತೆಯನ್ನು ಈ ಉದ್ದೇಶದೊಂದಿಗೆ ನಿರ್ದೇಶಿಸಿದರು.[೪೯]

No. Title Singers Length
1. "Chak De! India"   Sukhwinder Singh, Salim Merchant, Marianne D'Cruz 4:43
2. "Badal Pe Paon Hain"   Hema Sardesai 4:05
3. "Ek Hockey Doongi Rakh Ke"   K K, Shahrukh Khan 5:36
4. "Bad Bad Girls"   Anushka Manchanda 3:39
5. "Maula Mere Le Le Meri Jaan"   Krishna Beura, Salim Merchant 4:47
6. "Hockey Remix"   Midival Punditz 5:17
7. "Sattar Minute"   Shahrukh Khan 2:05

ಡಿವಿಡಿ[ಬದಲಾಯಿಸಿ]

ಡಿವಿಡಿಯನ್ನು ಯಶ್ ರಾಜ್ ಫಿಲ್ಮ್ಸ್ನವರು ೩ ನೇ ನವೆಂಬರ್ ೨೦೦೭ ರಂದು ೨ ಡಿವಿಡಿ ಪ್ಯಾಕ್ ಆಗಿ ಬಿಡುಗಡೆ ಮಾಡಿದರು. ಚಲನಚಿತ್ರಕ್ಕಾಗಿ ಇಂಗ್ಲೀಷ್, ಅರೇಬಿಕ್, ಸ್ಪ್ಯಾನಿಶ್, ಡಚ್, ಪೋರ್ಚುಗೀಸ್, ತಮಿಳು ಮತ್ತು ಮಲೆಯಾಳಗಳಲ್ಲಿ ಉಪಶೀರ್ಷಿಕೆಗಳು ಲಭ್ಯವಿದೆ. ವಿಶೇಷ ವೈಶಿಷ್ಟ್ಯ್ಗಳೊಡನೆ ಕಂಪಾನಿಯನ್ ಡಿವಿಡಿಯು ೩೨ ನಿಮಿಷಗಳ ಅಳಿಸಿದ ದೃಶ್ಯಗಳು (ಉಪಶೀರ್ಷಿಕೆಗಳಿಲ್ಲದೇ), ಸಂಗೀತದ ವೀಡಿಯೋಗಳು, ಚಿತ್ರವನ್ನು ತಯಾರಿಸಿದ ಬಗ್ಗೆ ಸಾಕ್ಷ್ಯಚಿತ್ರ, ಮತ್ತು ಸಿಎನ್‌ಎನ್-ಐಬಿಎನ್ ಮತ್ತು ಎನ್‌ಡಿಟಿವಿಯಲ್ಲಿ ಚಕ್ ದೇ ಹುಡುಗಿಯರು ಮತ್ತು ಭಾರತೀಯ ಮಹಿಳಾ ಹಾಕಿ ತಂಡದ ಸದಸ್ಯರ ಅತಿಥಿ ಪಾತ್ರವನ್ನು ಒಳಗೊಂಡಿದೆ.[೫೦]

ಟಿಪ್ಪಣಿಗಳು[ಬದಲಾಯಿಸಿ]

 1. http://www.boxofficemojo.com/movies/?id=chakdeindia.htm
 2. ೨.೦ ೨.೧ ೨.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. ೪.೦ ೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ೫.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ೬.೦ ೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. ೭.೦ ೭.೧ ೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. ೯.೦ ೯.೧ ೯.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. ೧೦.೦ ೧೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ೧೧.೦ ೧೧.೧ "55th NATIONAL FILM AWARDS FOR THE YEAR 2007" (PDF). 
 12. ೧೨.೦ ೧೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. ೨೦.೦ ೨೦.೧ ೨೦.೨ ೨೦.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

Awards
ಪೂರ್ವಾಧಿಕಾರಿ
Lage Raho Munna Bhai
Filmfare Critics Award for Best Movie
೨೦೦೮
ಉತ್ತರಾಧಿಕಾರಿ
Mumbai Meri Jaan