ವಿಷಯಕ್ಕೆ ಹೋಗು

ಗೌರೀಶ ಕಾಯ್ಕಿಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಗೌರೀಶ ಕಾಯ್ಕಿಣಿ
ಜನನ(೧೯೧೨-೦೯-೧೨)೧೨ ಸೆಪ್ಟೆಂಬರ್ ೧೯೧೨
ಗೋಕರ್ಣ, ಉತ್ತರ ಕನ್ನಡ ಜಿಲ್ಲೆ
ನಿಧನNovember 14, 2002(2002-11-14) (aged 90)
ಗೋಕರ್ಣ, ಉತ್ತರ ಕನ್ನಡ ಜಿಲ್ಲೆ
ಲೇಖನ ನಾಮ
  • ವೈಶ್ವಾನರ
  • ಗೌರೀಶಂಕರ
  • ಅಡುಗೆ ಭಟ್ಟ
  • ಜಿವಿಕೆ
ಉದ್ಯೋಗ
  • ವಿಚಾರವಾದಿ
  • ಬರಹಗಾರ
  • ಶಿಕ್ಷಕ (೧೯೩೭-೧೯೭೬)
  • ಪತ್ರಿಕಾ ಪ್ರಧಾನ ಸಂಪಾದಕ
ಭಾಷೆ
  • ಕನ್ನಡ
  • ಕೊಂಕಣಿ
  • ಮರಾಠಿ
  • ಇಂಗ್ಲಿಷ್
ವಿದ್ಯಾನಿಲಯ
  • ೧ನೇ ನಂಬರ್ ಶಾಲೆ, ಗೋಕರ್ಣ
  • ಗಿಬ್ಬ ಹೈಸ್ಕೂಲ್, ಕುಮಟಾ
  • ಕರ್ನಾಟಕ ಕಾಲೇಜು,ಧಾರವಾಡ
ಶೈಲಿ
  • ನಾಟಕ
  • ವಿಮರ್ಶೆ
  • ಕಾವ್ಯ
  • ಗದ್ಯ
  • ಅನುವಾದ
ಪ್ರಮುಖ ಕೃತಿಗಳು
  • ನವಮಾನವತಾವಾದ
  • ನಾಸ್ತಿಕ ಮತ್ತು ದೇವರು
  • ಸತ್ಯಾರ್ಥಿ
ಪ್ರಶಸ್ತಿಗಳು
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ
  • ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಂಗಾತಿಶಾಂತಾಬಾಯಿ ರಾಮಚಂದ್ರ ವೆಂಟೇಕರ್, ತದಡಿ, ಗೋಕರ್ಣ (ಮದುವೆ: ೧೯೫೩)
ಮಕ್ಕಳುಜಯಂತ್ ಕಾಯ್ಕಿಣಿ

ಡಾ. ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.[][] ಇವರ ತಂದೆ ತಹಶೀಲ್ದಾರ ವಿಠಲರಾವ್ ಮತ್ತು ತಾಯಿ ಸೀತಾಬಾಯಿ ಕುಲಕರ್ಣಿ.

ಶಿಕ್ಷಣ

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು(೧ನೇ ನಂಬರ್ ಶಾಲೆ). ೧೯೨೯ರಲ್ಲಿ,[] ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಕುಮಟಾದ ಗಿಬ್ಬ ಹೈಸ್ಕೂಲಿನಿಂದ ಉತ್ತೀರ್ಣರಾಗಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆ ಬಳಿಕ ೧೯೪೫ರ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ. ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು. ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಂಡ - ತುಂಡವಾಗಿ ನಿರಾಕರಿಸುತ್ತಿದ್ದರು.[]

ವೃತ್ತಿ

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು ೧೯೩೭ರಲ್ಲಿ ಎಂ.ವಿ. ಸ್ಕೂಲಿನಲ್ಲಿ, ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು.

೧೯೩೯ರಲ್ಲಿ, ಬಂಕಿಕೊಡ್ಲುವಿನ ಎ.ವಿ. ಶಾಲೆಗೆ ಸೇರಿ, ಅದನ್ನು ಮಿಡ್ಲ್ ಸ್ಕೂಲ್‍ನಿಂದ ಮಾಧ್ಯಮಿಕ, ನಂತರ ಪ್ರೌಢಶಾಲೆಯಾಗಿ ಪರಿವರ್ತಿಸುವುದಕ್ಕೂ ಅವರು ಕೊಡುಗೆ ನೀಡಿದರು[] ೧೫ವರ್ಷಗಳ ಕಾಲ ಪ್ರತಿನಿತ್ಯ ಗೋಕರ್ಣದಿಂದ ೬ ಕಿ.ಮಿ. ನಡೆದುಕೂಂಡು ಹೋಗಿ ಸೇವೆಸಲ್ಲಿಸುತ್ತಿದ್ದರು. ೧೯೫೪ರಲ್ಲಿ, ಗೋಕರ್ಣದ ಭದ್ರಕಾಳಿ ಹೈಸ್ಕೂಲಿಗೆ ಅಧ್ಯಾಪಕರಾಗಿ ಸೇರಿಕೊಂಡರು.

೧೯೭೩ರಲ್ಲಿ "ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ" ದೊರೆಯುತು[]

೧೯೭೬ರಲ್ಲಿ ನಿವೃತ್ತರಾದರು.[] ಇದೇ ಕಾರಣದಿಂದ, 'ಗೌರೀಶ್ ಮಾಸ್ತರರು' ಎಂದೇ ಕರೆಯಲ್ಪಡುತ್ತಿದ್ದರು.

ಕೌಟಂಬಿಕ ಜೀವನ

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು.[] ಇವರದು ಅಂತರ್ಜಾತೀಯ ವಿವಾಹ. ೧೯೫೪ರಲ್ಲಿ ಇವರ ಮಗ, ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.

ಸಾಹಿತ್ಯ

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.

ಕೃತಿಗಳು

[ಬದಲಾಯಿಸಿ]

ಕಾವ್ಯ

[ಬದಲಾಯಿಸಿ]
  • ಶಾಂಡಿಲ್ಯ ಪ್ರೇಮಸುಧಾ
  • ಗಂಡು ಹೆಣ್ಣು
  • ಪ್ರೀತಿ
  • ಒಲವಿನ ಒಗಟು
  • ಕ್ರೌಂಚಧ್ವನಿ (ಗೀತರೂಪಕಗಳು)

ರೇಡಿಯೊ ನಾಟಕ

[ಬದಲಾಯಿಸಿ]
  • ಕರ್ಣಾಮೃತ
  • ಆಕಾಶ ನಾಟಕಗಳು
  • ಮೇನಕಾ
  • ತಾರಾ
  • ದೀಪಾವಳಿ
  • ನರಕ-ಚತುರ್ದಶಿ
  • ನೃಸಿಂಹಾವತಾರ
  • ಅಂಬಾ (ಕೊಂಕಣಿ)
  • ಶಬರಿ
  • ಗೋಪಿಕೃಷ್ಣ
  • ವಿಷಯ ಪತ್ರಲೇಖನ
  • ಧ್ರುವಕುಮಾರ (ಕೊಂಕಣಿ)

ಕಥಾಸಂಕಲನ

[ಬದಲಾಯಿಸಿ]
  • ವಿಶ್ವದ ಆಖ್ಯಾಯಿಕೆಗಳು

ಪ್ರವಾಸ ಸಾಹಿತ್ಯ

[ಬದಲಾಯಿಸಿ]
  • ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)

ವ್ಯಕ್ತಿಚಿತ್ರಣ

[ಬದಲಾಯಿಸಿ]
  • ಪಶ್ಚಿಮದ ಪ್ರತಿಭೆ -ಭಾಗ-೧
  • ಪಶ್ಚಿಮದ ಪ್ರತಿಭೆ -ಭಾಗ-೨,
  • ಸತ್ಯಾರ್ಥಿ
  • ಭಾರತೀಯ ವಿಜ್ಞಾನಿಗಳು, ಭಾಗ-೧
  • ಭಾರತೀಯ ವಿಜ್ಞಾನಿಗಳು, ಭಾಗ-೨
  • ಕೇಶವಸುತ
  • ನಾನಾಲಾಲ
  • ಶ್ಯಾಮರಾವ ವಿಠ್ಠಲ ಕಾಯ್ಕಿಣಿ
  • ಥಾಮಸ್ ಎಡಿಸನ್
  • ಪಾಂಡೇಶ್ವರ ಗಣಪತಿರಾವ
  • ಗ್ರೀಕ ದಾರ್ಶನಿಕರು

ಪರಿಚಯ ಲೇಖನ

[ಬದಲಾಯಿಸಿ]
  • ಗೋಕರ್ಣದ ಕಥೆ (ಪರಿಚಯ )
  • ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡದ ಜನ ಜಾತಿ ಪರಿಚಯ)

ಸಾಹಿತ್ಯ ಸಮೀಕ್ಷೆ

[ಬದಲಾಯಿಸಿ]

ವೈಚಾರಿಕ

[ಬದಲಾಯಿಸಿ]
  • ಮನೋವಿಜ್ಞಾನದ ರೂಪರೇಖೆಗಳು
  • ಮಾರ್ಕ್ಸವಾದ
  • ಬಾಳಿನ ಗುಟ್ಟು
  • ವಿಚಾರವಾದ
  • ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
  • ಸಂಪ್ರದಾಯ ಮತ್ತು ಸಣ್ಣ ಕುಟುಂಬ
  • ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
  • ನವಮಾನವತಾವಾದ
  • ನಾಸ್ತಿಕನು ಮತ್ತು ದೇವರು
  • ಆರ್ಕೆಸ್ಟ್ರಾ ಮತ್ತು ತಂಬೂರಿ
  • ಲೋಕಾಯತ (ಚಾರ್ವಾಕ ದರ್ಶನ)

ಅನುವಾದ

[ಬದಲಾಯಿಸಿ]
  • ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ)
  • ಪಂಜಾಬಿ ಕತೆಗಳು
  • ಬಿಳಿಯ ಕೊಕ್ಕರೆ
  • ಮಣ್ಣಿನ ಮನುಷ್ಯ
  • ಮಲೆನಾಡಿಗರು
  • ಬರ್ಲಿನ್ ಬಂದಿತು ಗಂಗೆಯ ತಡಿಗೆ
  • ವ್ಯಾಸಪರ್ವ (ಮೂಲ ಮರಾಠಿ:ದುರ್ಗಾ ಭಾಗವತ)
  • ಶ್ಯಾಮರಾವ ವಿಠ್ಠಲ ಕಾಯ್ಕಿಣಿ
  • ನ್ಯಾಷನಲ್ ಇಂಟಗ್ರೇಷನ್ ಇನ್ ಆಕ್ಶನ್
  • ಸರ್ ಎಂ. ವಿಶ್ವೇಶ್ವರಯ್ಯ
  • ಮೀನಾಕ್ಷಿ (ಕವನ ಸಂಕಲನ)

ಸಮಗ್ರ

[ಬದಲಾಯಿಸಿ]
  • ಸಮಗ್ರ ಸಂಪುಟ ಭಾಗ-೧
  • ಸಮಗ್ರ ಸಂಪುಟ ಭಾಗ-೨
  • ಸಮಗ್ರ ಸಂಪುಟ ಭಾಗ-೩
  • ಸಮಗ್ರ ಸಂಪುಟ ಭಾಗ-೪
  • ಸಮಗ್ರ ಸಂಪುಟ ಭಾಗ-೫
  • ಸಮಗ್ರ ಸಂಪುಟ ಭಾಗ-೬
  • ಸಮಗ್ರ ಸಂಪುಟ ಭಾಗ-೭
  • ಸಮಗ್ರ ಸಂಪುಟ ಭಾಗ-೮

ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.

ಸಾಮಾಜಿಕ

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:

  • ಪ್ರೊಗ್ರೆಸಿವ್ ಆಫ಼್ ಮೈಸೂರು ಪತ್ರಿಕಾ ಮಂಡಳಿ ಸದಸ್ಯ (೧೯೬೪)
  • ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೬೫ - ೧೯೭೦)
  • ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (೧೯೭೩ - ೧೯೮೩)
  • ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ (೧೯೭೩)
  • ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೭೪-೭೫)
  • ಉತ್ತರ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು

ಪತ್ರಿಕೋದ್ಯಮ

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು ನಾಗರಿಕ (ಕಾರವಾರ) ಹಾಗು ಬೆಳಕು (ಧಾರವಾಡ) ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು

ಅಂಕಣಗಳು

[ಬದಲಾಯಿಸಿ]
  • ವಾರದ ಉಪ್ಪಿನಕಾಯಿ (ಕಾವ್ಯನಾಮ: 'ಅಡಿಗೆ ಭಟ್ಟ') - ಜನಸೇವಕ ಪತ್ರಿಕೆ(ಅಂಕೋಲಾ)
  • ವಾರದ ವಿಶ್ವ (ಕಾವ್ಯನಾಮ: 'ವೈಶ್ವಾನರ') - ಜನಸೇವಕ ಪತ್ರಿಕೆ(ಅಂಕೋಲಾ)
  • ಸಾಹಿತ್ಯ ದರ್ಪಣ (ಕಾವ್ಯನಾಮ: 'ಜಿ. ವಿ. ಕೆ') - ಜನಸೇವಕ ಪತ್ರಿಕೆ(ಅಂಕೋಲಾ)
  • 'ಜನಪ್ರಗತಿ' ಸಾಪ್ತಾಹಿಕದಲ್ಲಿ 'ವೈಶ್ವಾನರ' ಹೆಸರಿನಲ್ಲಿ
  • 'ಸಮನ್ವಯ'ದಲ್ಲಿ(ಸಿರ್ಸಿ) 'ಗೌರೀಶಂಕರ' ಹೆಸರಿನಲ್ಲಿ
  • ಕಂಡದ್ದು ಆಡದ್ದು - 'ಕರಾವಳಿ ಗ್ರಾಮ ವಿಕಾಸ' (ಹೊನ್ನಾವರ)
  • ನನಗೆ ನೆನಪಾದಂತೆ - ಕಸ್ತೂರಿ ಮಾಸಿಕ
  • ಹೊಂಗಿರಣ - ಮಲ್ಲಿಗೆ ಪತ್ರಿಕೆ (೧೯೮೧-೧೯೮೩)
  • ಮಿಂಚು ಗೊಂಚಲು - ತರಂಗ ವಾರಪತ್ರಿಕೆ

ಪ್ರಶಸ್ತಿಗಳು

[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:

ಗೌರೀಶ ಕಾಯ್ಕಿಣಿಯವರು, ೯೦ರ ವಯಸ್ಸಿನಲ್ಲಿ, ೧೪ ನವೆಂಬರ ೨೦೦೨ರಂದು ಗೋಕರ್ಣದಲ್ಲಿ ನಿಧನರಾದರು.[][]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ - ಸಂಪುಟ ೧೦ - ಸಂಕೀರ್ಣ
  2. ೨.೦ ೨.೧ "Litterateur Gourish Kaikini is dead". ದಿ ಟೈಮ್ಸ್ ಆಫ್‌ ಇಂಡಿಯಾ. 14 November 2002. Retrieved 21 July 2007.
  3. Na. Su. Bharatanahalli (1997). ಡಾ. ಗೌರೀಶ ಕಾಯ್ಕಿಣಿ – ಬದುಕು ಬರಹ.
  4. "Kannada litterateur Kaikini remembered". Deccan Herald. Archived from the original on 29 September 2007. Retrieved 21 July 2007.
  5. Na. Su. Bharatanahalli (1997). ಡಾ. ಗೌರೀಶ ಕಾಯ್ಕಿಣಿ – ಬದುಕು ಬರಹ.
  6. Na. Su. Bharatanahalli (1997). ಡಾ. ಗೌರೀಶ ಕಾಯ್ಕಿಣಿ – ಬದುಕು ಬರಹ.