ಗೌರೀಶ ಕಾಯ್ಕಿಣಿ
ಡಾ. ಗೌರೀಶ ಕಾಯ್ಕಿಣಿ | |
---|---|
ಜನನ | ಗೋಕರ್ಣ, ಉತ್ತರ ಕನ್ನಡ ಜಿಲ್ಲೆ | ೧೨ ಸೆಪ್ಟೆಂಬರ್ ೧೯೧೨
ಮರಣ | Error: Need valid death date (first date): year, month, day ಗೋಕರ್ಣ, ಉತ್ತರ ಕನ್ನಡ ಜಿಲ್ಲೆ |
ಕಾವ್ಯನಾಮ |
|
ವೃತ್ತಿ |
|
ಭಾಷೆ |
|
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ |
|
ಪ್ರಕಾರ/ಶೈಲಿ |
|
ಪ್ರಮುಖ ಕೆಲಸ(ಗಳು) |
|
ಪ್ರಮುಖ ಪ್ರಶಸ್ತಿ(ಗಳು) |
|
ಬಾಳ ಸಂಗಾತಿ | ಶಾಂತಾಬಾಯಿ ರಾಮಚಂದ್ರ ವೆಂಟೇಕರ್, ತದಡಿ, ಗೋಕರ್ಣ (ಮದುವೆ: ೧೯೫೩) |
ಮಕ್ಕಳು | ಜಯಂತ್ ಕಾಯ್ಕಿಣಿ |
ಪ್ರಭಾವಗಳು
| |
ತಂದೆ | ವಿಠಲರಾವ್ ವೆಂಕಟರಾವ್ ಕಾಯ್ಕಿಣಿ (ಮರಣ: ೧೯೧೨) |
ತಾಯಿ | ಸೀತಾಬಾಯಿ ಕುಲಕರ್ಣಿ(ಬಂಕಿಕೊಡ್ಲು, ಗೋಕರ್ಣ) (ಮರಣ: ೧೯೧೯) |
ಡಾ. ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.[೧][೨]
ಶಿಕ್ಷಣ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ಬ ಹಾಯ್ಸ್ಕೂಲಿನಿಂದ ಉತ್ತೀರ್ಣರಾಗಿ , ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ. ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು. ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಂಡ - ತುಂಡವಾಗಿ ನಿರಾಕರಿಸುತ್ತಿದ್ದರು.[೩]
ವೃತ್ತಿ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರು ೧೯೩೭ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ೧೯೭೬ರಲ್ಲಿ ನಿವೃತ್ತರಾದರು.[೧] ಇದೇ ಕಾರಣದಿಂದ, 'ಗೌರೀಶ್ ಮಾಸ್ತರರು' ಎಂದೇ ಕರೆಯಲ್ಪಡುತ್ತಿದ್ದರು.
ಕೌಟಂಬಿಕ ಜೀವನ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು.[೧] ಇವರದು ಅಂತರ್ಜಾತೀಯ ವಿವಾಹ. ೧೯೫೪ರಲ್ಲಿ ಇವರ ಮಗ, ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.
ಸಾಹಿತ್ಯ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.
ಕೃತಿಗಳು
[ಬದಲಾಯಿಸಿ]ಕಾವ್ಯ
[ಬದಲಾಯಿಸಿ]- ಶಾಂಡಿಲ್ಯ ಪ್ರೇಮಸುಧಾ
- ಗಂಡು ಹೆಣ್ಣು
- ಪ್ರೀತಿ
ನಾಟಕ
[ಬದಲಾಯಿಸಿ]- ಒಲವಿನ ಒಗಟು
- ಕ್ರೌಂಚಧ್ವನಿ (ಗೀತರೂಪಕಗಳು)
ರೇಡಿಯೊ ನಾಟಕ
[ಬದಲಾಯಿಸಿ]- ಕರ್ಣಾಮೃತ
- ಆಕಾಶ ನಾಟಕಗಳು
- ಮೇನಕಾ
- ತಾರಾ
- ದೀಪಾವಳಿ
- ನರಕ-ಚತುರ್ದಶಿ
- ನೃಸಿಂಹಾವತಾರ
- ಅಂಬಾ (ಕೊಂಕಣಿ)
- ಶಬರಿ
- ಗೋಪಿಕೃಷ್ಣ
- ವಿಷಯ ಪತ್ರಲೇಖನ
- ಧ್ರುವಕುಮಾರ (ಕೊಂಕಣಿ)
ಕಥಾಸಂಕಲನ
[ಬದಲಾಯಿಸಿ]- ವಿಶ್ವದ ಆಖ್ಯಾಯಿಕೆಗಳು
ಪ್ರವಾಸ ಸಾಹಿತ್ಯ
[ಬದಲಾಯಿಸಿ]- ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)
ವ್ಯಕ್ತಿಚಿತ್ರಣ
[ಬದಲಾಯಿಸಿ]- ಪಶ್ಚಿಮದ ಪ್ರತಿಭೆ -ಭಾಗ-೧
- ಪಶ್ಚಿಮದ ಪ್ರತಿಭೆ -ಭಾಗ-೨,
- ಸತ್ಯಾರ್ಥಿ
- ಭಾರತೀಯ ವಿಜ್ಞಾನಿಗಳು, ಭಾಗ-೧
- ಭಾರತೀಯ ವಿಜ್ಞಾನಿಗಳು, ಭಾಗ-೨
- ಕೇಶವಸುತ
- ನಾನಾಲಾಲ
- ಶ್ಯಾಮರಾವ ವಿಠ್ಠಲ ಕಾಯ್ಕಿಣಿ
- ಥಾಮಸ್ ಎಡಿಸನ್
- ಪಾಂಡೇಶ್ವರ ಗಣಪತಿರಾವ
- ಗ್ರೀಕ ದಾರ್ಶನಿಕರು
ಪರಿಚಯ ಲೇಖನ
[ಬದಲಾಯಿಸಿ]- ಗೋಕರ್ಣದ ಕಥೆ (ಪರಿಚಯ )
- ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡದ ಜನ ಜಾತಿ ಪರಿಚಯ)
ಸಾಹಿತ್ಯ ಸಮೀಕ್ಷೆ
[ಬದಲಾಯಿಸಿ]- ಪ್ರಜ್ಞಾನೇತ್ರದ ಬೆಳಕಿನಲ್ಲಿ (ಶಂ.ಬಾ.ಜೋಶಿ ಕೃತಿಗಳ ಸಮೀಕ್ಷೆ)
- ಕಣವಿ ಕಾವ್ಯದೃಷ್ಟಿ (ಚನ್ನವೀರ ಕಣವಿಯವರ ಕಾವ್ಯ ಸಮೀಕ್ಷೆ)
- ಕಂಪಿನ ಕರೆ (ಬೇಂದ್ರೆ ಕಾವ್ಯಸಮೀಕ್ಷೆ)
- ದಿನಕರ ದೇಸಾಯಿಯವರ ಕಾವ್ಯ
- ವಾಲ್ಮೀಕಿ ತೂಕಡಿಸಿದಾಗ (ವಿಚಾರ ವಿಮರ್ಶೆ)
- ನವ್ಯದ ನಾಲ್ಕು ನಾಯಕರು (ಕವಿ ಕಾವ್ಯ ಪರಿಚಯ)
- ಮಾನವ್ಯ ಕವಿ (ಬಿ.ಎ.ಸನದಿಯವರ ಕಾವ್ಯ ಸಮೀಕ್ಷೆ)
- ಉತ್ತರಣ (ವಿಷ್ಣು ನಾಯ್ಕರ ಕಾವ್ಯ ಸಮೀಕ್ಷೆ)
ವೈಚಾರಿಕ
[ಬದಲಾಯಿಸಿ]- ಮನೋವಿಜ್ಞಾನದ ರೂಪರೇಖೆಗಳು
- ಮಾರ್ಕ್ಸವಾದ
- ಬಾಳಿನ ಗುಟ್ಟು
- ವಿಚಾರವಾದ
- ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
- ಸಂಪ್ರದಾಯ ಮತ್ತು ಸಣ್ಣ ಕುಟುಂಬ
- ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
- ನವಮಾನವತಾವಾದ
- ನಾಸ್ತಿಕನು ಮತ್ತು ದೇವರು
- ಆರ್ಕೆಸ್ಟ್ರಾ ಮತ್ತು ತಂಬೂರಿ
- ಲೋಕಾಯತ (ಚಾರ್ವಾಕ ದರ್ಶನ)
ಅನುವಾದ
[ಬದಲಾಯಿಸಿ]- ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ)
- ಪಂಜಾಬಿ ಕತೆಗಳು
- ಬಿಳಿಯ ಕೊಕ್ಕರೆ
- ಮಣ್ಣಿನ ಮನುಷ್ಯ
- ಮಲೆನಾಡಿಗರು
- ಬರ್ಲಿನ್ ಬಂದಿತು ಗಂಗೆಯ ತಡಿಗೆ
- ವ್ಯಾಸಪರ್ವ (ಮೂಲ ಮರಾಠಿ:ದುರ್ಗಾ ಭಾಗವತ)
- ಶ್ಯಾಮರಾವ ವಿಠ್ಠಲ ಕಾಯ್ಕಿಣಿ
- ನ್ಯಾಷನಲ್ ಇಂಟಗ್ರೇಷನ್ ಇನ್ ಆಕ್ಶನ್
- ಸರ್ ಎಂ. ವಿಶ್ವೇಶ್ವರಯ್ಯ
- ಮೀನಾಕ್ಷಿ (ಕವನ ಸಂಕಲನ)
- ಕನ್ನಡ ಸಾಹಿತ್ಯಾಚಾ ಇತಿಹಾಸ (ಕನ್ನಡ ಮೂಲ: ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ)
- ಭಗವಾನ ನಿತ್ಯಾನಂದ (ಕನ್ನಡ ಮೂಲ: ರಮೇಶ ನಾಡಕರ್ಣಿ)
- ಮಾಝೀ ರಸಯಾತ್ರಾ (ಕನ್ನಡ ಮೂಲ: ಮಲ್ಲಿಕಾರ್ಜುನ ಮನಸೂರರ ಆತ್ಮಚರಿತ್ರೆ)
- ಅಗ್ನಿವರ್ಣ (ಕನ್ನಡ ಮೂಲ: ರಂ.ಶ್ರೀ.ಮುಗಳಿ)
ಸಮಗ್ರ
[ಬದಲಾಯಿಸಿ]- ಸಮಗ್ರ ಸಂಪುಟ ಭಾಗ-೧
- ಸಮಗ್ರ ಸಂಪುಟ ಭಾಗ-೨
- ಸಮಗ್ರ ಸಂಪುಟ ಭಾಗ-೩
- ಸಮಗ್ರ ಸಂಪುಟ ಭಾಗ-೪
- ಸಮಗ್ರ ಸಂಪುಟ ಭಾಗ-೫
- ಸಮಗ್ರ ಸಂಪುಟ ಭಾಗ-೬
- ಸಮಗ್ರ ಸಂಪುಟ ಭಾಗ-೭
- ಸಮಗ್ರ ಸಂಪುಟ ಭಾಗ-೮
ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.
ಸಾಮಾಜಿಕ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:
- ಪ್ರೊಗ್ರೆಸಿವ್ ಆಫ಼್ ಮೈಸೂರು ಪತ್ರಿಕಾ ಮಂಡಳಿ ಸದಸ್ಯ (೧೯೬೪)
- ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೬೫ - ೧೯೭೦)
- ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (೧೯೭೩ - ೧೯೮೩)
- ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ (೧೯೭೩)
- ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೭೪-೭೫)
- ಉತ್ತರ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು
ಪತ್ರಿಕೋದ್ಯಮ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರು ನಾಗರಿಕ (ಕಾರವಾರ) ಹಾಗು ಬೆಳಕು (ಧಾರವಾಡ) ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು
ಅಂಕಣಗಳು
[ಬದಲಾಯಿಸಿ]- ವಾರದ ಉಪ್ಪಿನಕಾಯಿ (ಕಾವ್ಯನಾಮ: 'ಅಡಿಗೆ ಭಟ್ಟ') - ಜನಸೇವಕ ಪತ್ರಿಕೆ(ಅಂಕೋಲಾ)
- ವಾರದ ವಿಶ್ವ (ಕಾವ್ಯನಾಮ: 'ವೈಶ್ವಾನರ') - ಜನಸೇವಕ ಪತ್ರಿಕೆ(ಅಂಕೋಲಾ)
- ಸಾಹಿತ್ಯ ದರ್ಪಣ (ಕಾವ್ಯನಾಮ: 'ಜಿ. ವಿ. ಕೆ') - ಜನಸೇವಕ ಪತ್ರಿಕೆ(ಅಂಕೋಲಾ)
- 'ಜನಪ್ರಗತಿ' ಸಾಪ್ತಾಹಿಕದಲ್ಲಿ 'ವೈಶ್ವಾನರ' ಹೆಸರಿನಲ್ಲಿ
- 'ಸಮನ್ವಯ'ದಲ್ಲಿ(ಸಿರ್ಸಿ) 'ಗೌರೀಶಂಕರ' ಹೆಸರಿನಲ್ಲಿ
- ಕಂಡದ್ದು ಆಡದ್ದು - 'ಕರಾವಳಿ ಗ್ರಾಮ ವಿಕಾಸ' (ಹೊನ್ನಾವರ)
- ನನಗೆ ನೆನಪಾದಂತೆ - ಕಸ್ತೂರಿ ಮಾಸಿಕ
- ಹೊಂಗಿರಣ - ಮಲ್ಲಿಗೆ ಪತ್ರಿಕೆ (೧೯೮೧-೧೯೮೩)
- ಮಿಂಚು ಗೊಂಚಲು - ತರಂಗ ವಾರಪತ್ರಿಕೆ
ಪ್ರಶಸ್ತಿಗಳು
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:
- ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ (೧೯೭೩)
- ಕನ್ನಡ ಸಾಹಿತ್ಯ ಪರಿಷತ್ತಿನವಜ್ರಮಹೋತ್ಸವ ಗೌರವ ಪ್ರಶಸ್ತಿ (೧೯೭೭)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೦)
- ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೮೮) - "ವಾಲ್ಮೀಕಿ ತೂಕಡಿಸಿದಾಗ" ಕೃತಿಗೆ
- ವರ್ಧಮಾನ ಸಾಹಿತ್ಯ ಪ್ರಶಸ್ತಿ (೧೯೯೨)
- ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೧೯೯೩)
- ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೯೩)
- ನವಮಾನವತಾವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೫)
- ಮಂಗಳೂರಿನ ಸಂದೇಶ ಪ್ರಶಸ್ತಿ (೧೯೯೬)
- ಮೀನಾಕ್ಷಿ ಕೊಂಕಣಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೬)
- ಬೆಂಗಳೂರಿನ ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ (೧೯೯೭)
ನಿಧನ
[ಬದಲಾಯಿಸಿ]ಗೌರೀಶ ಕಾಯ್ಕಿಣಿಯವರು, ೯೦ರ ವಯಸ್ಸಿನಲ್ಲಿ, ೧೪ ನವೆಂಬರ ೨೦೦೨ರಂದು ಗೋಕರ್ಣದಲ್ಲಿ ನಿಧನರಾದರು.[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ - ಸಂಪುಟ ೧೦ - ಸಂಕೀರ್ಣ
- ↑ ೨.೦ ೨.೧ "Litterateur Gourish Kaikini is dead". ದಿ ಟೈಮ್ಸ್ ಆಫ್ ಇಂಡಿಯಾ. 14 November 2002. Retrieved 21 July 2007.
- ↑ "Kannada litterateur Kaikini remembered". Deccan Herald. Archived from the original on 29 September 2007. Retrieved 21 July 2007.
- Pages using the JsonConfig extension
- Age error
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with LCCN identifiers
- ಕನ್ನಡ ಸಾಹಿತ್ಯ
- ಸಾಹಿತಿಗಳು
- ಪತ್ರಕರ್ತರು
- ಕನ್ನಡ ಕವಿಗಳು