ವಿಷಯಕ್ಕೆ ಹೋಗು

ಗುರ್ರಂ ಜಾಷುವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರ್ರಂ ಜಾಷುವಾ
ಜನನಸೆಪ್ಟೆಂಬರ್ ೨೮, ೧೮೯೫
ವಿನುಕೊಂಡ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ, ಭಾರತ
ಮರಣಜುಲೈ ೨೪, ೧೮೯೫
ಗುಂಟೂರು
ವೃತ್ತಿಕವಿ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಮರಿಯಮ್ಮ
ಮಕ್ಕಳುಹೇಮಲತ ಲವಣಂ

ಗುರ್ರಂ ಜಾಷುವಾ (ಅಥವಾ ಜಿ ಜೋಶುವಾ) (తెలుగు:గుర్రం జాషువా) (೨೮ ಸೆಪ್ಟೆಂಬರ್ ೧೮೯೫ - ೨೪ ಜುಲೈ ೧೯೭೧) ಒಬ್ಬ ತೆಲುಗು ಕವಿ. ಇವರಿಗೆ ಸರ್ಕಾರ, ಪ್ರಶಸ್ತಿ ಪುರಸ್ಕಾರಗಳಿಂದ ಮಾನ್ಯತೆ ನೀಡಿದೆ. ಇವರ ಸಾಹಿತ್ಯವು, ಸಾಮಾಜದ ಮೇಲೆ ಮಾಡಿರುವ ಪರಿಣಾಮವನ್ನು ಸಂಶೋದಕರು ಅಧ್ಯಯನ ನಡೆಸಿದ್ದಾರೆ. ಇವರ ನೆನಪಿನಲ್ಲಿ ಹಲವು ಸಾಹಿತ್ಯಿಕ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ.

ಬಾಲ್ಯ[ಬದಲಾಯಿಸಿ]

ಗುರ್ರಂ ಜಾಶುವಾ ೧೮೯೫ ಸೆಪ್ಟೆಂಬರ್ ೨೮ರಂದು ಜನಿಸಿದರು. ಇವರ ತಂದೆ ವೀರಯ್ಯಾ ಹಾಗು ಇವರ ತಾಯಿ ಲಿಂಗಮ್ಮ. ವಿನುಕೊಂಡ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ, ಭಾರತ ಇವರ ಹುಟ್ಟೂರು. ಇವರ ತಂದೆ ಯಾದವ್ ಜಾತಿಗೆ ಸೇರಿದ್ದವರು ಹಾಗು ಇವರ ತಾಯಿ ಮಡಿಗಾ ಜಾತಿಗೆ ಸೇರಿದ್ದವರು. ಬಡತನ ಮತ್ತು ಹೆತ್ತವರ ಅಂತರ್ಜಾತಿ ವಿವಾಹದ ಕಾರಣ, ಕೆಲವು ಜಾತಿಗಳನ್ನು ಅಸ್ಪೃಶ್ಯ ಎಂದು ಪರಿಗಣಿಸಿದ್ದ ಸಾಮಾಜದಲ್ಲಿ ಇವರ ಬಾಲ್ಯ ಜೀವನ ಕಷ್ಟಕರವಾಗಿತ್ತು.ಇವರ ಪೋಷಕರು ಜಶುವ ಮತ್ತು ಈತನ ಸಹೋದರನನ್ನು ಕ್ರೈಸ್ತರನ್ನಾಗಿ ಬೆಳಸಿದರು. ಜಶುವರವರು ಉಬಯ ಭಾಷಾ(ತೆಲುಗು ಹಾಗು ಸಂಸ್ಕೃತ) ಪ್ರವೀಣರಾಗಿ ಪದವಿ ಪಡೆದಿರುವರು.

ವೃತ್ತಿ ಜೀವನ[ಬದಲಾಯಿಸಿ]

ಜಶುವ ಆರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡಿದರು. ನಂತರ ತೆಲುಗು ನಿರ್ಮಾಪಕನಾಗಿ ಆಲ್ ಇಂಡಿಯಾ ರೇಡಿಯೋ, ಮದ್ರಾಸಿನಲ್ಲಿ(೧೯೪೬-೧೯೬೦) ಕೆಲಸ ಮಾಡಿದರು."ಅಸ್ಪೃಶ್ಯತೆ", ದಲಿತರ ಹಕ್ಕುಗಳ, ಮತ್ತು ಬೇರ್ಪಡಿಸುವಿಕೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಇವು ಎಲ್ಲಾ ಇವರ ಕೆಲಸಗಳಲ್ಲಿ ಸಾಮಾನ್ಯ ವಿಷಯಗಳಾಯಿತು. ಅವರ ಪ್ರಮುಖ ಕೃತಿಗಳಲ್ಲಿ ಗಬ್ಬಿಲಾನ್, ಫಿರಡೌಸಿ ಮತ್ತು ಕಂಡೀಸೀಕುಡು ಸೇರಿವೆ. ಜಶುವನ ಚರಣಗಳನ್ನು ಜನಪ್ರಿಯ ಪೌರಾಣಿಕ ನಾಟಕದಲ್ಲಿ ಸೇರಿಸಲಾಗಿದೆ. ವಿಶೇಷವಾಗಿ ಹರಿಶ್ಚಂದ್ರ ನಾಟಕದಲ್ಲಿ ಶ್ಮಶಾನದ ದೃಶ್ಯ. ಆಂಧ್ರಪ್ರದೇಶದ ದಲಿತ ಸಮುದಾಯ ಕವಿ ಜಶುವವನ್ನು ಆಧುನಿಕ ತೆಲುಗು ದಲಿತ ಕವಿ ಎಂದು ಪರಿಗಣಿಸಿದೆ. ೧೯೯೫ ರಲ್ಲಿ ಆಂಧ್ರಪ್ರದೇಶದ ದಲಿತ ಸಮುದಾಯಗಳು ಜಶುವ ಫಾರ್ ಜನ್ಮ ಶತಮಾನೋತ್ಸವದ ಆಚರಣೆಯನ್ನು ಆಯೋಜಿಸಿ,ಜಶುವರವರ ಸಾಹಿತ್ಯಕ ಕೊಡುಗೆಗಳ ಪುನರ್ವಸತಿ ಪ್ರಯತ್ನವನ್ನು ಆರಂಭಿಸಿವೆ. [೧]

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಗಬ್ಬಿಲಾನ್(೧೯೪೧) ಜಶುವರ ಪ್ರಸಿದ್ಧ ಕೆಲಸ, ಕಾಳಿದಾಸನ ಮೇಗದತ್ತ(ಒಬ್ಬ ಗಡಿಪಾರು ಪ್ರೇಮಿ ತನ್ನ ಪ್ರೀತಿಯ ಪತ್ನಿಯ ಬಗ್ಗೆ) ಸ್ಪೂರ್ತಿಗೊಂಡು ಇದನ್ನು ರಚಿಸಿರುವರು. ಕಾಳಿದಾಸನ ಕವಿತೆಯಲ್ಲಿ ಮೊಡದಲ್ಲಿರುವ ಸಂದೇಶಗಾರ ಯಕ್ಷ, ಜಶುವರವರ ಕವಿತೆಯಲ್ಲಿ ಬನಾರಸ್ನ ದೇವರಿಗೆ ಬಾವಲಿ(ಅಥವಾ ಗಬ್ಬಿಲಂ) ಮೂಲಕ ಒಬ್ಬ ಹಸಿದ ಮತ್ತು ಬಡವ ದಲಿತ ಕಳುಹಿಸಿದ ಸಂದೇಶ ವಿವರಣೆ. ಜಶುವ ಮಾಡಿರುವ ಬಾವಲಿಯ ಆಯ್ಕೆಯು ಸಾಕಷ್ಟು ಗಮನಾರ್ಹವಾಗಿದೆ.ಸಾಮಾನ್ಯವಾಗಿ ಅಂಧಕಾರ, ವಿಕಾರತೆ, ಮತ್ತು ಕೆಟ್ಟ ಶಕುನವು ಸಂಬಂಧಿಸಿದ ಜೀವಿ, ಬಾವಲಿಗಳು ದಲಿತ ಜನರನ್ನು ಪ್ರತಿನಿಧಿಸುತ್ತದೆ ಮತ್ತು ದಲಿತ ಜನರಲ್ಲಿ ಸಾಮಾಜಿಕ ಪ್ರಜ್ಞೆ ಏರಿಸಲು ಇದನ್ನು ಶಸ್ತ್ರಾಸ್ತ್ರಗಳಾಗಿ ಬಳಸಿದರು.[೨],[೩]

ಫಿರಡೌಸಿ(೧೯೩೨) ತನ್ನ ಮತ್ತೊಂದು ಪ್ರಮುಖ ಕೃತಿ. ಈ ಕಥೆಯು ಘಜ್ನಿ ರಾಜ ಮಹಮೂದ್ ಆಸ್ಥಾನದಲ್ಲಿರುವ ಪರ್ಷಿಯನ್ ಕವಿ ಫಿರಡೌಸಿರವರ ಬಗ್ಗೆ. ಕಥೆಯ ಪ್ರಕಾರ, ರಾಜನು ಕವಿಯು ಬರೆದ ಪ್ರತಿ ಪದಕ್ಕೂ ಒಂದೊಂದು ಚಿನ್ನದ ಮೋಹರ್ ಕೊಡುವುದಾಗಿ ಭರವಸೆ ನೀಡುತ್ತಾರೆ. ಕವಿಯು ಒಂದು ಅದ್ಬುತ ಕಾವ್ಯವನ್ನು ರಚಿಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದರು, ಇದಕ್ಕೆ ತನ್ನ ಜೀವನದ ಹತ್ತು ವರ್ಷಗಳ ಕಳೆಯುತ್ತಾನೆ ಆದರೆ ಅಲ್ಲಿಯ ಕೆಲವು ಆಸ್ಥಾನಿಕರ ಪ್ರಭಾವದಿಂದ ರಾಜನು ಬರೀಯ ಬೆಳ್ಳಿ ನಾಣ್ಯಗಳನ್ನು ನೀಡುತ್ತಾನೆ. ಮನನೊಂದ ಕವಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕವಿಯ ದುಃಖ ಅಮೋಘವಾಗಿ ಚಿತ್ರಣಗೊಂಡಿದೆ ಮತ್ತು ಓದುಗರಲ್ಲಿ ಕಣ್ಣೀರು ಬರುವಂತೆ ಮಾಡುತ್ತದೆ.

ಬಾಪೂಜೀ (೧೯೪೮) ಮಹಾತ್ಮ ಗಾಂಧಿಯವರ ಹತ್ಯೆಯ ವಿಚಾರವನ್ನು ಅರಿತ ಅವರ ದುಃಖ ಅಭಿವ್ಯಕ್ತಯಾಗಿದೆ. ಜಶುವರಿಗೆ ಗಾಂಧೀಜಿ ಅವರ ಮೇಲಿದ್ದ ಅಪಾರ ಪ್ರೀತಿ ಮತ್ತು ಗೌರವ ಈ ೧೫ ಕವನಗಳಲ್ಲಿ ತಿಳಿದುಬರುತ್ತದೆ. ಗಾಂಧೀಜಿ ಅವರ ಜೀವನ, ಕೆಲಸ ಮತ್ತು ದುರದೃಷ್ಟ ಮರಣದ ರೋದನೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.

ಅವರ ಕೊಡುಗೆಗಳು[ಬದಲಾಯಿಸಿ]

ವರ್ಷ ಕೃತಿಗಳು
೧೯೧೯ ರುಕ್ಮಿಣಿ ಕಲ್ಯಾಣಂ
೧೯೨೨ ಚಿದಾನಂದ ಪ್ರಭಾತಂ, ಕುಶಲವೊಪಖ್ಯನಂ
೧೯೨೪ ಕೊಕಿಲ
೧೯೨೫ ದ್ರುವ ವಿಜಯಂ, ಕೃಷ್ಣನಡಿ, ಸಂಸಾರ ಸಾಗರಂ
೧೯೨೬ ಶಿವಾಜಿ ಪ್ರಭಂದಂ, ವೀರಭಾಯಿ, ಕೃಷ್ಣದೇವರಾಯಲು
೧೯೨೭ ಭಾರತ ವೀರುಡು, ಸೂರ್ಯೋದಯಂ, ಚಂದ್ರೋದಯಂ
೧೯೨೮ ರಣಜ್ಯೋತಿ, ಅಂದ್ರುದನು, ತುಮ್ಮೆದ ಪೆನ್‌ಡ್ಲಿಕೊಡುಕು
೧೯೨೯ ಶಕ್ತಿ, ಬುಧುಡು, ತೆಲುಗು ತಲ್ಲಿ, ಶಿಶುವು, ಭಸ್ಪ ಸಂದೇಶಂ
೧೯೩೧ ಬೀಷ್ಮೂಡು, ಯುಗಂದಾರ ಮಂತ್ರಿ, ಸಮದೃಷ್ಟಿ, ನೇಲ ಬಾಲುಡು, ನೆಮಲಿ ನೆಲತ, ಲೋಕ ಬಾಂದವುಡು, ಅನಸೂಯ, ಶಾಲ್ಯ ಸಾರಥ್ಯಮು, ಸಂದೇಹ ಡೊಲ
೧೯೩೨ ಸ್ವಪ್ನ ಕಥ, ಅನಾಥ, ಫಿರದೌಸಿ, ಮುಂತಾಜ್ ಮಹಾಲ್, ಸಿಂಧೂರಮು, ಬುದ್ಧ ಮಹಿಮ, ಕ್ರಿಸ್ತು, ಗುಂಟೂರು ಸೀಮ, ವಿವೇಕಾನಂದ, ಚಿಟ್ಲಪೆಕ, ಜೆಬುನ್ನಿಸಾ, ಪಸ್ಚಾತ್ತಾಪಂ.
೧೯೩೩ ಅಯೊಮಯಮು, ಅಖಂಡ ಗೌತಮಿ, ಆಶ್ವಾಸಮು, ಮೇಘುಡು, ಸ್ಮಶಾನವಾಟಿಕ.
೧೯೩೪ ಆಂದ್ರ ಭೋಜುದು
೧೯೪೧ ಗಬ್ಬಿಲಮು
೧೯೪೫ ಕಾಂದಿಶಿಕುಡು
೧೯೪೬ ತೆರಚಾಟು
೧೯೪೮ ಚಿನ್ನ ನಾಯಕುಡು, ಬಾಪೂಜಿ, ನೇತಾಜಿ
೧೯೫೦ ಸ್ವಯಂವರಂ
೧೯೫೭ ಕೊತ್ತಲೋಕಂ
೧೯೫೮ ಕ್ರಿಸ್ತು ಛರಿತ್ರ
೧೯೬೩ ರಾಷ್ರ್ಟ ಪೂಜ
೧೯೬೬ ನಾಗಾರ್ಜುನಸಾಗರಂ, ನಾ ಕಥ

ಪ್ರಶಸ್ತಿಗಳು[ಬದಲಾಯಿಸಿ]

 • ೧೯೬೪ರಲ್ಲಿ ಕ್ರಿಸ್ತು ಚರಿತ್ರಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. [೪]
 • ೧೯೬೪ ರಲ್ಲಿ ಆಂಧ್ರ ಪ್ರದೇಶ ವಿಧಾನ ಪರಿಷತ್ ಸದಸ್ಯ.
 • ೧೯೭೦ ರಲ್ಲಿ ಆಂಧ್ರ ವಿಶ್ವವಿದ್ಯಾಲಯದಿಂದ ಕಲಾ ಪ್ರಪೂರಣ ಪ್ರಶಸ್ತಿ.
 • ೧೯೭೦ ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ.[೫]

ಅವರ ನೆನಪಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗಳು[ಬದಲಾಯಿಸಿ]

ಗುರ್ರಂ ಜಾಶುವಾ ಅವರು ೨೪ ಜುಲೈ ೧೯೭೧ ರಲ್ಲಿ ನಿಧನರಾದರು. ಇವರ ನೆನಪಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಅವು: ಜಶುವ ಫೌಂಡೇಷನ್‌ "ಜಶುವ ಸಾಹಿತ್ಯ ಪುರಸ್ಕಾರಂ" ಎಂಬ ವಾರ್ಷಿಕ ಪ್ರಶಸ್ತಿಯನ್ನು ಮಾನವ ಮೌಲ್ಯಗಳೊಳಗೊಂಡ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸುವ ವಿವಿಧ ಭಾರತೀಯ ಭಾಷೆಗಳ ಕವಿಗಳಿಗೆ ನೀಡುತ್ತಾರೆ. ಇದರ ಸ್ಥಾಪಕಿ ಹಾಗು ಕಾರ್ಯದರ್ಶಿ ಜಶುವರವರ ಮಗಳು ಹೇಮಲತ ಲವನಂ[೬]. ನೀಲಮಣಿ ಪುಕ್ಕನ್, ಅಸ್ಸಾಮಿ ಕವಿಗೆ ೨೦೦೨ ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ತೆಲುಗು ಸಾಹಿತ್ಯಕ್ಕೆ ಕೊಡುಗೆ ನೀಡುವ ಕವಿಗಳು ಹಾಗು ಬರಹಗಾರರಿಗೆ, ಪದ್ಮ ಭೂಷನ್ ಡಾ. ಗುರ್ರಂ ಜಶುವ ಪರಿಶೋಧನಾ ಕೇಂದ್ರ ತೆಲುಗು ಅಕಾಡೆಮಿ ವತಿಯಿಂದ ೩ ಪ್ರಶಸ್ತಿಗಳು. ಇವನ್ನು ಅರವತ್ತು ಅಥವಾ ಹೆಚ್ಚು ವಯಸುಳ್ಳ ಪುರುಷ ಕವಿಗಳಿಗೆ ಜಶುವ ಜೀವಿತ ಸಪಲ್ಯ ಪುರಸ್ಕಾರಂ , ಐವತ್ತು ಅಥವಾ ಹೆಚ್ಚು ವಯಸುಳ್ಳ ಮಹಿಳಾ ಕವಿಯತ್ರಿಗೆ ಜಸುವ ವಿಶಿಷ್ಟ ಮಹಿಲಾ ಪುರಸ್ಕಾರಂ ಹಾಗೂ ದಲಿತ ಸಾಹಿತ್ಯಕ್ಕೆ ಕೊಡುಗೆ ನೀಡುವವರಿಗೆ ಜಶುವ ಸಾಹಿತ್ಯ ವಿಶಿಷ್ಟ ಪುರಸ್ಕಾರಂ. ಈ ಪ್ರಶಸ್ತಿಗಳನ್ನು ಮೊಟ್ಟ ಮೊದಲನೇಯ ಬಾರಿ ಜಶುವ ಅವರ ೧೧೮ನೇ ಜನ್ಮ ವಾರ್ಷಿಕೋತ್ಸವ, ೨೮ ಸೆಪ್ಟೆಂಬರ್ ೨೦೧೩ದಂದು ನೀಡಲಾಯಿತು. ಪ್ರಶಸ್ತಿ ಮೊತ್ತ 2 ಲಕ್ಷ.[೭] ದಾಸರತಿ ರಂಗಚಾರ್ಯರಿಗೆ ಜಶುವ ಜೀವಿತ ಸಪಲ್ಯ ಪುರಸ್ಕಾರಂ , ಕೊಲಕಕುಲಿ ಸ್ವರೂಪ ರಾಣಿ ಅವರಿಗೆ ವಿಶಿಷ್ಟ ಮಹಿಲಾ ಪುರಸ್ಕಾರಂ ಹಾಗೂ ಕಲುವ ಮಲೈಯರಿಗೆ ಜಶುವ ಸಾಹಿತ್ಯ ವಿಶಿಷ್ಟ ಪುರಸ್ಕಾರಂ ನೀಡಲಾಯಿತು. ದಾಮೋದರ್ ರಾಜಾ ನರಸಿಂಹ, ಉಪಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಿದರು. ಯಾದಗಿರಿ ಅವರು (ನಿರ್ದೇಶಕ, ತೆಲುಗು ಅಕ್ಯಾಡಮಿ) ಅಧ್ಯಕ್ಷತೆ ವಹಿಸಿದ್ದರು. ಡೊಕ್ಕ ಮಾಣಿಕ್ಯ ವಾರಾ ಪ್ರಸಾದ್( ಗ್ರಾಮೀಣ ಅಭಿವೃದ್ಧಿ ಸಚಿವ), ಕಾಕಿ ಮಾಧವ ರಾವ್(ಮಾಜಿ ಮುಖ್ಯ ಕಾರ್ಯದರ್ಶಿ) ಹಾಗೂ ಮೇದಾಸಾನಿ ಮೋಹನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಶುವ ಅವರ ಸ್ಮಾರಕ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ಉಲ್ಲೇಖಗಳು[ಬದಲಾಯಿಸಿ]

 1. "ಗುರ್ರಂ ಜಾಶುವಾರ ೧೯೯ನೇಯ ಜನ್ಮ ವಾರ್ಷಿಕೋತ್ಸವ".
 2. "ಗಬ್ಬಿಲಂ ಭಾಗ ೧".
 3. "ಗಬ್ಬಿಲಂ ಭಾಗ ೨".
 4. "ಸಾಹಿತ್ಯ ಅಕಾಡಮಿ ಪ್ರಶಸ್ತಿ ವೀಜೆತರ ಪಟ್ಟಿ". Archived from the original on 2015-09-17. Retrieved 2015-10-27.
 5. "ಪದ್ಮ ಭೂಷಣ ಪ್ರಶಸ್ತಿ ವಿಜೇತರ ಪಟ್ಟಿ". Archived from the original on 2016-03-04. Retrieved 2015-10-27.
 6. "ಹೇಮಲತ ಲವನಂ".
 7. "೧೧೮ನೇಯ ಜನ್ಮ ವಾರ್ಷಿಕೋತ್ಸವದಂದು ನಡೆದ ಜಶುವ ಪ್ರಶಸ್ತಿ ಕಾರ್ಯಕ್ರಮ".