ವಿಷಯಕ್ಕೆ ಹೋಗು

ಖನನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖನನ (ಅಗೆಯುವಿಕೆ) ಎಂದರೆ ಒಂದು ಘನ ಮೇಲ್ಮೈಯಿಂದ ವಸ್ತುವನ್ನು ತೆಗೆಯಲು (ಸಾಮಾನ್ಯವಾಗಿ ಭೂಮಿಯ ಮೇಲ್ಮೈ ಮೇಲಿನ ಮಣ್ಣು ಅಥವಾ ಮರಳು) ಪಂಜಗಳು, ಕೈಗಳು, ಅಥವಾ ಪರಿಕರಗಳಂತಹ ಯಾವುದೋ ಉಪಕರಣವನ್ನು ಬಳಸುವ ಪ್ರಕ್ರಿಯೆ. ಖನನವು ವಾಸ್ತವಿಕವಾಗಿ ಎರಡು ಪ್ರಕ್ರಿಯೆಗಳ ಸಂಯೋಜನೆಯಾಗಿದೆ, ಮೊದಲನೆಯದು ಮೇಲ್ಮೈಯನ್ನು ಒಡೆಯುವುದು ಅಥವಾ ಛೇದಿಸುವುದು, ಮತ್ತು ಎರಡನೆಯದು ಅಲ್ಲಿ ಸಿಕ್ಕ ವಸ್ತುವನ್ನು ತೆಗೆದು ಸ್ಥಳಾಂತರಿಸುವುದು.[]

ಐತಿಹಾಸಿಕವಾಗಿ, ಮಾನವರು ಹಳ್ಳ ತೆಗೆಯುವ ಅಥವಾ ನೆಲದ ಕೆಳಗೆ ಆಹಾರ ಅಥವಾ ನೀರನ್ನು ಹುಡುಕುವ ಕಾರಣಗಳಿಗಾಗಿ ಅಗೆಯುವಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳ ಜೊತೆಗೆ ಇನ್ನೂ ಹೆಚ್ಚಿನ ಕಾರಣಗಳಿವೆ, ಉದಾಹರಣೆಗೆ ಕೃಷಿ ಹಾಗೂ ತೋಟಗಾರಿಕೆಯಲ್ಲಿ ತೊಡಗಲು, (ಗಣಿಗಾರಿಕೆ ಹಾಗೂ ಕಲ್ಲುಗಣಿಗಾರಿಕೆಯಿಂದ) ಖನಿಜಗಳು, ಲೋಹಗಳು, ಮತ್ತು ಇತರ ಕಚ್ಚಾವಸ್ತುಗಳನ್ನು ಹುಡುಕಲು, ನಿರ್ಮಾಣಕ್ಕೆ ಸಿದ್ಧವಾಗಲು, ಕೋಟೆಗಳು ಮತ್ತು ನೀರಾವರಿಯನ್ನು ಸೃಷ್ಟಿಸಲು, ಮತ್ತು ಪ್ರಾಕ್ತನ ಶಾಸ್ತ್ರದಲ್ಲಿ ಉತ್ಖನನಗಳು ಕೂಡ, ಪ್ರಾಗ್ಜೀವ ಶಾಸ್ತ್ರ ಹಾಗೂ ಭೂವಿಜ್ಞಾನದಲ್ಲಿ ಪಳೆಯುಳಿಕೆಗಳು ಹಾಗೂ ಕಲ್ಲುಗಳನ್ನು ಹುಡುಕಲು ಮತ್ತು ಮೃತರನ್ನು ಹೂಳಲು.

ಉಲ್ಲೇಖಗಳು

[ಬದಲಾಯಿಸಿ]
  1. Carl Dreher, "The Right Way to Dig", Popular Science (March 1957), p. 179.


"https://kn.wikipedia.org/w/index.php?title=ಖನನ&oldid=893107" ಇಂದ ಪಡೆಯಲ್ಪಟ್ಟಿದೆ