ಕೋಫ಼್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಬ್ರಿಜಿ ಕೊಫ್ಟಾವು ಇರಾನ್ನಿಂದ ಪ್ರಾದೇಶಿಕ ಮಾರ್ಪಾಡಾಗಿದೆ, ಇದು ಹಳದಿ ಒಡೆದ ಬಟಾಣಿಗಳನ್ನು ಕೊಚ್ಚಿದ ಮಾಂಸದೊಂದಿಗೆ ಸೇರಿಸುತ್ತದೆ
ಅಕ್ಕಾಬಾತ್ನಿಂದ ಅಕ್ಕಾಬಾತ್ ಕೋಫ್ಟೆಸಿ, ಟರ್ಕಿಶ್ ಪಾಕಪದ್ಧತಿಯಲ್ಲಿ ಪ್ರಸಿದ್ಧ ಭಕ್ಷ್ಯವಾಗಿದೆ
ಕೊಲ್ಕತ್ತಾದಲ್ಲಿ (ಕೊಲ್ಕತ್ತಾ), ಕೊಫ್ಟಾವನ್ನು ಹೆಚ್ಚಾಗಿ ಪನಿಯರ್ನಿಂದ ತಯಾರಿಸಲಾಗುತ್ತದೆ
ತರಕಾರಿ ಕೊಫ್ಟಾ ಮೇಲೋಗರ, ಭಾರತದಲ್ಲಿ ಬೇಯಿಸಿದ ಅನ್ನದೊಂದಿಗೆ ಬಡಿಸಲಾಗುತ್ತದೆ
ವಿಶಿಷ್ಟವಾದ ಅರಬ್ ಪ್ರಪಂಚದ ಶೈಲಿಯಲ್ಲಿ "ಬೆರಳುಗಳು" ಎಂದು ತಯಾರಿಸಲ್ಪಡುವ ಈಜಿಪ್ಟಿನ ಕಾಫ್ಟಾ, ಫ್ರೆಂಚ್ ಫ್ರೈಸ್ ಮತ್ತು ಸಲಾಡ್ನೊಂದಿಗೆ ಪಿಟಾದಲ್ಲಿ ಬಡಿಸಲಾಗುತ್ತದೆ
ಫಿಶ್ ಕೋಫ್ಟಾ ಮೇಲೋಗರ, ಪಾಕಿಸ್ತಾನದಲ್ಲಿ

ಕೋಫ಼್ತಾ ಒಂದು ಬಗೆಯ ಮಾಂಸದುಂಡೆ ಅಥವಾ ಮಾಂಸತುಂಡು ಮತ್ತು ಅಫ಼್ಘಾನ್, ಭಾರತೀಯ, ಇರಾನೀ, ಪಾಕಿಸ್ತಾನಿ ಮುಂತಾದ ಪಾಕಪದ್ಧತಿಗಳಲ್ಲಿ ಒಂದು ಜನಪ್ರಿಯ ಖಾದ್ಯವಾಗಿದೆ. ಅತ್ಯಂತ ಸರಳ ರೂಪದಲ್ಲಿ, ಕೋಫ಼್ತಾಗಳು ಸಂಬಾರ ಪದಾರ್ಥಗಳು ಹಾಗೂ/ಅಥವಾ ಈರುಳ್ಳಿಗಳೊಂದಿಗೆ ಮಿಶ್ರಣಮಾಡಿದ ಕೊಚ್ಚಿದ ಅಥವಾ ರುಬ್ಬಿದ ಮಾಂಸದ ಉಂಡೆಗಳನ್ನು- ಸಾಮಾನ್ಯವಾಗಿ ಗೋಮಾಂಸ, ಚಿಕನ್, ಹಂದಿಮಾಂಸ ಅಥವಾ ಕುರಿಮಾಂಸ ಹೊಂದಿರುತ್ತವೆ. ಭಾರತದಲ್ಲಿ, ಸಸ್ಯಾಹಾರಿ ವಿಧಗಳು ಆಲೂಗಡ್ಡೆ, ಸೋರೆಕಾಯಿ, ಪನೀರ್ ಅಥವಾ ಬಾಳೆಯಿಂದ ತಯಾರಿಸಲಾದ ಕೋಫ಼್ತಾಗಳನ್ನು ಒಳಗೊಂಡಿವೆ. ಭಾರತದಲ್ಲಿ ಕೋಫ಼್ತಾಗಳನ್ನು ಸಾಮಾನ್ಯವಾಗಿ ಮಸಾಲೆಭರಿತ ಕರಿ/ಗ್ರೇವಿಯಲ್ಲಿ ಬೇಯಿಸಿ ಬಡಿಸಲಾಗುತ್ತದೆ ಮತ್ತು ಅನ್ನ ಅಥವಾ ಭಾರತೀಯ ಬ್ರೆಡ್‍ಗಳೊಂದಿಗೆ ತಿನ್ನಲಾಗುತ್ತದೆ. ಟರ್ಕಿದೇಶದಲ್ಲಿ ಇನ್ನೂರು ತೊಂಬತ್ತೊಂದು ತರದ ಕೋಫ್ತಾಗಳಿವೆ. ಚುಟ್ಟ ಆಕಾರದ ಕೋಫ್ತಾಗಳನ್ನು ಅರಬ್‍ನಲ್ಲಿ ತಯಾರಿಸುತ್ತಾರೆ.[೧][೨][೩]

ಉಲ್ಲೇಖಗಳು[ಬದಲಾಯಿಸಿ]

  1. Abdel Fattah, Iman Adel. "Bites Fil Beit: Koftet el Gambari – Shrimp kofta". Daily News Egypt. {{cite web}}: Cite has empty unknown parameter: |dead-url= (help)
  2. "Türkiye'nin tam 291 köftesi var". Sabah (in ಟರ್ಕಿಶ್). 6 March 2005. {{cite news}}: Cite has empty unknown parameter: |dead-url= (help)
  3. Oxford Companion to Food, s.v. kofta
"https://kn.wikipedia.org/w/index.php?title=ಕೋಫ಼್ತಾ&oldid=787350" ಇಂದ ಪಡೆಯಲ್ಪಟ್ಟಿದೆ