ಕೆ. ಎಸ್. ಭಗವಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ಎಸ್. ಭಗವಾನ್
ಮಾನಸ ಗಂಗೋತ್ರಿಯ ಕಾರ್ಯಕ್ರಮವೊಂದರಲ್ಲಿ ಭಗವಾನ್
ಜನನಜುಲೈ 14, 1945
ಕಲ್ಲಹಳ್ಳಿ, ಮೈಸೂರು ಜಿಲ್ಲೆ
ವೃತ್ತಿಲೇಖಕ, ಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿವಿಮರ್ಶೆ, ವೈಚಾರಿಕ ಸಾಹಿತ್ಯ, ಅನುವಾದ
ವಿಷಯವಿಚಾರ
ಸಾಹಿತ್ಯ ಚಳುವಳಿಬಂಡಾಯ

ಪ್ರಭಾವಗಳು
 • ಕಾರ್ಲ್ ಮಾರ್ಕ್ಸ್, ಗೌತಮ ಬುದ್ಧ

ಪ್ರೊ. ಕೆ. ಎಸ್. ಭಗವಾನ್ ಅವರು ಒಬ್ಬ ವಿಮರ್ಶಕ, ಅನುವಾದಕ ಹಾಗೂ ಚಿಂತಕ. ಮೈಸೂರಿಮಹಾರಾಜ ಕಾಲೇಜಿಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರು[ಸೂಕ್ತ ಉಲ್ಲೇಖನ ಬೇಕು]. ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು[ಸೂಕ್ತ ಉಲ್ಲೇಖನ ಬೇಕು]. ಸರಳ ಮದುವೆ ಚಳವಳಿಯಲ್ಲಿ ನೂರಾರು ಲಗ್ನಗಳನ್ನು ನೆರವೇರಿಸಿದ್ದಾರೆ[ಸೂಕ್ತ ಉಲ್ಲೇಖನ ಬೇಕು]. ಅವರು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ.

ಜೀವನ

ಜನನ

ಕೆ. ಎಸ್. ಭಗವಾನ್ ಅವರು ಜುಲೈ 14, 1945ರಲ್ಲಿ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು.

ಶಿಕ್ಷಣ

ಭಗವಾನ್ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿಯನ್ನೂ, ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿಯನ್ನೂ ಪಡೆದಿದ್ದಾರೆ.

ವೃತ್ತಿಜೀವನ

ಪ್ರೊ. ಕೆ.ಎಸ್. ಭಗವಾನ್ ಅವರು ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು.

ಸಾಹಿತ್ಯ ಕೃಷಿ

ಭಗವಾನ್ ಅವರು ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರು[ಸೂಕ್ತ ಉಲ್ಲೇಖನ ಬೇಕು]. ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು[ಸೂಕ್ತ ಉಲ್ಲೇಖನ ಬೇಕು]. ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ವಿವಾದಿತ ಕೃತಿ 'ಶಂಕರಾಚಾರ್ಯ ಮತ್ತು ಪ್ರತಿಗಾಮಿತನ' ೧೫ ಮುದ್ರಣಗಳನ್ನು ಕಂಡಿದ್ದು ಅನ್ಯಭಾಷೆಗಳಿಗೂ ಅನುವಾದಗೊಂಡಿದೆ.

ಅವರ ಕೃತಿಗಳ ಪಟ್ಟಿ ಈ ರೀತಿ ಇದೆ:

ವಿಮರ್ಶೆ

 1. ಬದಲಾವಣೆ
 2. ಕುವೆಂಪು ಯುಗ
 3. ಆಂತರ್ಯ
 4. ಕಣಿಗಲೆ

ವಿಚಾರ

 1. ಭಾಷೆ ಮತ್ತು ಸಂಸ್ಕೃತಿ
 2. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
 3. ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?
 4. ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್
 5. ಸುಖದ ಹಾದಿ
 6. ಅನನ್ಯತೆ
 7. Violence in Hinduism

ಅನುವಾದ

ಸೃಜನಶೀಲ

 1. ಜೂಲಿಯಸ್ ಸೀಸರ್
 2. ವೆನಿಸಿನ ವರ್ತಕ
 3. ಹ್ಯಾಮ್ಲೆಟ್
 4. ಆಂಟನಿ ಮತ್ತು ಕ್ಲಿಯೋಪಾತ್ರ
 5. ಒಥೆಲೊ
 6. ನಿಮ್ಮಿಷ್ಟ
 7. ಮ್ಯಾಕ್ ಬೆತ್
 8. ಮಹಾರಾಜ ಲಿಯರ್
 9. ರೋಮಿಯೊ ಮತ್ತು ಜೂಲಿಯೆಟ್
 10. ವೃದ್ಧ ಮತ್ತು ಸಮುದ್ರ

ಸೃಜನೇತರ

 1. ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು (ಸಂ. ೩, ೭ ಮತ್ತು ೧೧)
 2. ಇತಿಹಾಸದ ಪಾಠಗಳು
 3. ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ

ಚರಿತ್ರೆ

 1. ಇತಿಹಾಸ ಚಕ್ರ

ಸಂಪಾದನೆ

 1. ಗಂಗೋತ್ರಿ
 2. ಚಂಪಾ: ಆಯ್ದ ಕವನಗಳು
 3. ಜಿಜ್ಞಾಸು
 4. ಸಾಹಿತ್ಯ ವಿಮರ್ಶೆ ೧೯೮೫
 5. ಕೆಂಗಲ್ಲರ ಭಾಷಣಗಳು
 6. As You Like It
 7. Macbeth
 8. Othello
 9. The Merchant of Venice

ಮಕ್ಕಳ ಸಾಹಿತ್ಯ

 1. ಮಂತ್ರದ ಉಂಗುರ
 2. ಷೇಕ್ಸ್ ಪಿಯರ್ ಕತೆಗಳು:
 • ನಲಿವಿನಾಟಗಳು
 • ನೋವಿನಾಟಗಳು
 • ಚರಿತ್ರಾಟಗಳು

ನುಡಿಮುತ್ತುಗಳು

 • ಸಹೃದಯ ಸಂತೋಷವೇ ಸಾಹಿತಿಯ ಸಂಪತ್ತು.
 • ಸಹೃದಯ ಸಹಾನುಭೂತಿಯೇ ಸಾಹಿತಿಗೆ ಸಂಜೀವಿನಿ.

ಪ್ರಶಸ್ತಿ ಪುರಸ್ಕಾರ

 1. ಕಾವ್ಯಾನಂದ ಪ್ರಶಸ್ತಿ (1982)
 2. ಕುವೆಂಪು ಬಹುಮಾನ (1985)
 3. ಕರ್ನಾಟಕ ಸರ್ಕಾರರಾಜ್ಯೋತ್ಸವ ಪ್ರಶಸ್ತಿ (1999)
 4. ನಾಡ ಚೇತನ ಪ್ರಶಸ್ತಿ (2003)
 5. ಕುವೆಂಪು ಶತಮಾನೋತ್ಸವ ಪ್ರಶಸ್ತಿ (2004)
 6. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2007)
 7. ಕುವೆಂಪು ಪ್ರಶಸ್ತಿ (2011)
 8. ಶೂನ್ಯಪೀಠ ಪ್ರಶಸ್ತಿ (2011)
 9. ಸಾಹಿತ್ಯ ಕಲಾರತ್ನ (2011)
 10. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (೨೦೧೩) [೧]
 11. ದಾವಣಗೆರೆಯ ಪ್ರೊ. ಬಿ. ವಿ. ವೀರಭದ್ರಪ್ಪ ಪ್ರತಿಷ್ಠಾನ ನೀಡುವ 'ಲೋಕಾಯತ' ಪ್ರಶಸ್ತಿ (2014)
 12. ಕರ್ನಾಟಕ ಕ್ರಾಂತಿರತ್ನ (2015)

ಗೌರವ

 1. ಪ್ರೊ. ಭಗವಾನ್ ಅವರು ೨೦೧೧ರಲ್ಲಿ ಹುಣಸೂರಿನಲ್ಲಿ ನಡೆದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ವಿವಾದಗಳು

ಕಟುವಾದ ಎಡಪಂಥೀಯ ಹಾಗೂ ಹಿಂದೂ ವಿರೋಧಿ ಆಲೋಚನಾ ಧಾಟಿಯನ್ನು ಹೊಂದಿರುವ ಆರೋಪ ಹೊತ್ತಿರುವ ಭಗವಾನ್ ಅವರು ಹಿಂದೂ ಧರ್ಮವನ್ನು, ಹಿಂದೂ ಧರ್ಮ ದೇವತೆಗಳನ್ನು, ಪುರಾಣಗಳನ್ನು, ಶಂಕರಾಚಾರ್ಯರನ್ನು, ಭಗವದ್ಗೀತೆಯನ್ನು, ಪೂಜಾಸ್ಥಳಗಳನ್ನು ಕಟುವಾಗಿ ಟೀಕಿಸಿ ಅನೇಕ ಬಾರಿ ವಿವಾದಗಳನ್ನು ಸೃ‌ಷ್ಟಿಸಿದರು.[೨] [೩]ಹಿಂದುಗಳು ದೇವರೆಂದು ಆರಾಧಿಸುವ "ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ" ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದರು[೪]. ಹಾಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ದೂರುಗಳೂ ಅವರ ವಿರುದ್ಧ ದಾಖಲಾದವು.[೫] [೬] ಇವರಿಗೆ ನೀಡಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ವಿರೋಧ ಮತ್ತು ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕೆಂಬ ಆಗ್ರಹ ಅನೇಕ ಜನರಿಂದ ವ್ಯಕ್ತವಾಯಿತು.[೭]

ಉಲ್ಲೇಖಗಳು