ವಿಷಯಕ್ಕೆ ಹೋಗು

ಕೆಂಪರಾಜ ಅರಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂಪರಾಜ ಅರಸ್
ಜನನಫೆಬ್ರವರಿ ೫. ೧೯೧೭
ಮರಣ೧೮ ಮೇ ೧೯೮೨
ವೃತ್ತಿಗಳುನಟ,ನಿರ್ದೇಶಕ
ಸಕ್ರಿಯ ವರ್ಷಗಳು೧೯೪೨ - ೧೯೮೨

ಡಿ. ಕೆಂಪರಾಜ್ ಅರಸ್ (೧೯೧೭-೧೯೮೨) ಇವರು ಕನ್ನಡ ಚಲನಚಿತ್ರ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿದ್ದಾರೆ. ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲೂ ಸಹ ಕೆಲಸ ಮಾಡಿದ್ದಾರೆ.[]

ಪ್ರಾರಂಭಿಕ ಜೀವನ

[ಬದಲಾಯಿಸಿ]

ಮೈಸೂರು ಜಿಲ್ಲೆಹುಣಸೂರಿನಲ್ಲಿ ತಾಲೂಕಿನ ಕಲ್ಲಳ್ಳಿಯಲ್ಲಿ ಇವರು ಜನಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ್‌ ಅವರ ಸಹೋದರರಾಗಿದ್ದಾರೆ.[]

ವೃತ್ತಿ ಜೀವನ

[ಬದಲಾಯಿಸಿ]

ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು ಮೂರು ವರ್ಷಗಳ ಕಾಲ ವೈದ್ಯಕೀಯ ವ್ಯಾಸಂಗವನ್ನೂ ಮಾಡಿದ್ದರು.೧೯೪೨ರಲ್ಲಿ ಗುಬ್ಬಿ ವೀರಣ್ಣನವರು ನಿರ್ಮಿಸಿದ್ದ "ಜೀವನ ನಾಟಕ" ಎಂಬ ಚಲನಚಿತ್ರದಲ್ಲಿ ನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ೧೯೫೧ರಲ್ಲಿ ಬಿಡುಗಡೆಯಾದ "ರಾಜಾ ವಿಕ್ರಮ" ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಲ್ಲದೇ, ಈ ಚಿತ್ರದ ನಿರ್ದೇಶಿಸಿದದ್ದರೂ ಕೂಡ. ೧೯೪೮ರಲ್ಲಿ ಭಕ್ತ ರಾಮದಾಸ ಸಿನಿಮಾದಲ್ಲಿ ಬಾದಶಹನ ಪಾತ್ರ ನಿರ್ವಹಿಸುವ ಮೂಲಕ ಕೆಂಪರಾಜ ಅರಸ್ ಹೆಸರು ಪಡೆದಿದ್ದರು.[]

ರಾಜಕೀಯ ಕ್ಷೇತ್ರ

[ಬದಲಾಯಿಸಿ]

ಸಹೋದರ ದೇವರಾಜ್ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೧೯೮೦ರಲ್ಲಿ ನಡೆದೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಪರವಾಗಿ ಪ್ರಚಾರ ಮಾಡಿದರು. ೧೯೭೯ರಲ್ಲಿ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಿತ್ರದ ಶೀರ್ಷಿಕೆ ನಿರ್ವಹಿಸಿದ ಕಾರ್ಯಗಳು ಭಾಷೆ ಪಾತ್ರದ ಹೆಸರು ಟಿಪ್ಪಣಿ
ನಿರ್ದೇಶನ ನಿರ್ಮಾಣ ನಟ
೧೯೪೨ ಜೀವನ ನಾಟಕ Red XRed XGreen tick ಕನ್ನಡ ಮೋಹನ್ ಮೊದಲ ಚಿತ್ರ
೧೯೪೭ ಮಹಾನಂದ Red XRed XGreen tick ಕನ್ನಡ
೧೯೪೭ ಕೃಷ್ಣಲೀಲಾ Red XRed XGreen tick ಕನ್ನಡ ಕಂಸ
೧೯೪೮ ಭಕ್ತ ರಾಮದಾಸ Green tickRed XGreen tick ಕನ್ನಡ ಬಾದಶಾ
ಟ೯೫೦ ಶಿವ ಪಾರ್ವತಿ Red XRed XGreen tick ಕನ್ನಡ
೧೯೫೦ ರಾಜಾ ವಿಕ್ರಮ Green tickGreen tickGreen tick ಕನ್ನಡ
ತಮಿಳು
ವಿಕ್ರಮ
೧೯೫೩ ಶ್ರೀ ಕೃಷ್ಣ Red XRed XGreen tick ಕನ್ನಡ
೧೯೫೪ ಕಾರ್ಕೋಟೈ Green tickGreen tickGreen tick ತಮಿಳು ಜಲದುರ್ಗ ಕನ್ನಡ ಚಿತ್ರದ ತಮಿಳು ಅವತರಣಿಕೆ
೧೯೫೪ ಜಲದುರ್ಗ Green tickGreen tickGreen tick ಕನ್ನಡ
೧೯೫೭ ನಳ ದಮಯಂತಿ Green tickGreen tickGreen tick ಕನ್ನಡ
ತೆಲುಗು
ತಮಿಳು
೧೯೫೯ ಅಲಮರಲೈ ಕಾಲಂ Green tickGreen tickRed X ತಮಿಳು
೧೯೬೪ ನವ ಜೀವನ Red XRed XGreen tick ಕನ್ನಡ

ಉಲ್ಲೇಖಗಳು

[ಬದಲಾಯಿಸಿ]
  1. ""ಚಿತ್ರಪಥ" ದಲ್ಲಿ ಪ್ರಕಟವಾಗಿರುವ ಲೇಖನ".
  2. "40ರ ದಶಕದ ಕನ್ನಡದ ಪ್ರಮುಖ ನಟ ರಾಜಾವಿಕ್ರಮ 'ಕೆಂಪರಾಜ ಅರಸ್'ರವರ ಸ್ಮರಣೆʼಸುದ್ದಿ".
  3. "ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನ". Archived from the original on 2024-08-04. Retrieved 2024-08-04.