ಕಿರಣ್ ಖೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿರಣ್ ಖೇರ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಕಿರಣ್ ಠಾಕೂರ್ ಸಿಂಗ್
(1955-06-14) ಜೂನ್ ೧೪, ೧೯೫೫ (ವಯಸ್ಸು ೬೮)
ಮುಂಬಯಿ, ಭಾರತ
ಬೇರೆ ಹೆಸರುಗಳು ಕಿರಣ್ ಠಾಕೂರ್ ಸಿಂಗ್ ಖೇರ್ [೧]
ವೃತ್ತಿ ನಟಿ
ಪತಿ/ಪತ್ನಿ ಅನುಪಮ್ ಖೇರ್ (೧೯೮೫ - ಇಲ್ಲಿವರೆಗೆ)
Gautam Berry (divorced)


ಕಿರಣ್ ಖೇರ್‌ (1955ರ ಜೂನ್ 4ರಂದು ಜನಿಸಿದರು) ಒಬ್ಬ ಭಾರತೀಯ ರಂಗಭೂಮಿ, ಚಲನಚಿತ್ರ ಮತ್ತು ದೂರದರ್ಶನ ನಟಿ ಹಾಗೂ ಟಿವಿ ಸಂಭಾಷಣೆ ಕಾರ್ಯಕ್ರಮ ನಡೆಸಿಕೊಡುವಾಕೆ.

ಆರಂಭಿಕ ಜೀವನ[ಬದಲಾಯಿಸಿ]

ಕಿರಣ್ ಖೇರ್‌ ಮುಂಬಯಿಯಲ್ಲಿ ಪಂಜಾಬಿ ಹಿನ್ನೆಲೆಯ ಸಿಖ್ ಕುಟುಂಬದಲ್ಲಿ ಜನಿಸಿದರು. ಆಕೆ ಪಂಜಾಬ್‌ನ ಚಂಡಿಗಢ್‌ನಲ್ಲಿ ಬೆಳೆದರು, ಅಲ್ಲಿಯೇ ತನ್ನ ಶಾಲಾ ವ್ಯಾಸಂಗವನ್ನು ಹಾಗೂ ನಂತರ ಚಂಡಿಗಢ್‌ನ ಪಂಜಾಬ್ ಯೂನಿವರ್ಸಿಟಿಯಲ್ಲಿ ಕಾಲೇಜನ್ನು ಪೂರ್ಣಗೊಳಿಸಿದರು. ಶಾಲೆಯಲ್ಲಿ ಆಕೆ ತನ್ನ ಸಹೋದರಿ ಅರ್ಜುನ ಪ್ರಶಸ್ತಿ ವಿಜೇತೆ ಕನ್ವಾಲ್ ತಾಕರ್ ಸಿಂಗ್ ಒಂದಿಗೆ ಹುರುಪಿನ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಅವರ ತಾಯಿ ದಿಲ್ಜಿತ್ ಸಿಂಗ್ ವಿಭಾಗವಾಗುವುದಕ್ಕಿಂತ ಮೊದಲಿನ ಪಂಜಾಬ್‌ನಲ್ಲಿ ತನ್ನ ಕಾಲೇಜು ದಿನಗಳಲ್ಲಿ ಕ್ರೀಡೆ ಮತ್ತು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.[೨] ಕಿರಣ್‌ರವರ ಸಹೋದರ ಕಲಾವಿದ ಅಮರ್‌ದೀಪ್ ಸಿಂಗ್ 2003ರಲ್ಲಿ ಸಾವನ್ನಪ್ಪಿದರು.[೩]

ವೃತ್ತಿಜೀವನ[ಬದಲಾಯಿಸಿ]

ಕಿರಣ್ ಖೇರ್‌ ಮೊದಲ ಬಾರಿಗೆ ಚಲನಚಿತ್ರದಲ್ಲಿ 1983ರಲ್ಲಿ ಪಂಜಾಬಿ ದೀರ್ಘಚಿತ್ರ ಆಸ್ರಾ ಪ್ಯಾರ್ ದಾ ದಲ್ಲಿ ನಟಿಸಿದರು ಹಾಗೂ ಅವರ ಈ ನಟನೆಗೆ ಭಾರಿ ವಿಮರ್ಶೆಗಳನ್ನು ಪಡೆದರು. ಆಕೆ ಮಗ ಸಿಕಂದರ್ ಖೇರ್‌ನನ್ನು ಬೆಳೆಸಲು ವಿವಾಹ ವಿಚ್ಛೇದನ ಪಡೆದ ನಂತರ ಶೀಘ್ರದಲ್ಲಿ ಚಲನಚಿತ್ರ ರಂಗದಿಂದ[೪] ಹಿಂದಕ್ಕೆ ಸರಿದರು. ನಂತರ ಆಕೆ ಎರಡನೇ ಪತಿ ಅನುಪಮ್ ಖೇರ್‌ಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದರು ಹಾಗೂ ಆ ಮಧ್ಯೆ 1988ರಲ್ಲಿ ಪೆಸ್ಟೋಂಜೀ ಚಿತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಆಕೆ ಪತಿ ಅನುಪಮ್ ಖೇರ್ ಜತೆಗೆ ಅಭಿನಯಿಸಿದರು.

ಚಿತ್ರ:Kirron Kher in Khamosh Pani (2003).jpg
ಖಾಮೋಶ್ ಪಾನಿಯಲ್ಲಿ (2003) ಕಿರಣ್ ಖೇರ್‌, ಇದು ಆಕೆಗೆ 56ನೇ ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (2003) ಅತ್ಯುತ್ತಮ ನಟಿ ಲಿಯೊಪಾರ್ಡ್ ಪ್ರಶಸ್ತಿಯನ್ನು ತಂದುಕೊಟ್ಟಿತು.

ಆಕೆ ಮತ್ತೆ ತನ್ನ ನಟನೆಯನ್ನು ಆರಂಭಿಸಿದುದು ಸಾಲ್ಗಿರಾಹ್ ನಾಟಕದಲ್ಲಿ, ಇದನ್ನು ನಾಟಕರಚನೆಕಾರ ಜಾವೆದ್ ಸಿದ್ದಿಕ್ವಿ ರಚಿಸಿದರು ಮತ್ತು ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶಿಸಿದರು.[೫] ಅತಿ ಶೀಘ್ರದಲ್ಲಿ ಆಕೆ ಮೂರು ದೂರದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆರಂಭದಲ್ಲಿ ಜೀ ಟಿವಿಯಲ್ಲಿ ಪುರುಶ್‌ಕ್ಷೇತ್ರ , ಇದರ ಮೂಲಕ ಆಕೆ ಮೊದಲ ಬಾರಿಗೆ ಲೈಂಗಿಕತೆಯ ಬಗೆಗಿನ ಚರ್ಚೆಯನ್ನು ನ್ಯಾಯಸ್ಥಾನಕ್ಕೆ ತಂದುದಕ್ಕಾಗಿ ಮತ್ತು ಅದೇ ಸಂದರ್ಭದಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಒತ್ತುನೀಡಿದುದಕ್ಕಾಗಿ ಹೆಚ್ಚಿನ ಪ್ರಶಂಸೆಯನ್ನು ಪಡೆದರು. ನಂತರ ಆಕೆ ಬಾಲಿವುಡ್ ಚಲನಚಿತ್ರಗಳನ್ನು ಮಾಡುವುದಕ್ಕಿಂತ ಮೊದಲು [೬] ಕಿರಣ್ ಖೇರ್ ಟುಡೆ ಮತ್ತು ಜಗ್ತೆ ರಹೊ ವಿದ್ ಕಿರಣ್ ಖೇರ್ ನಡೆಸಿಕೊಟ್ಟರು.[೭]

ಆಕೆ ನಟನೆಗೆ ಹಿಂದಿರುಗಿದ ನಂತರ ಮಾಡಿದ ಚಿತ್ರ ಕರಣ್ ಅರ್ಜುನ್ (1995). ನಂತರ ನಟಿಸಿದ ಶ್ಯಾಮ್ ಬೆನೆಗಲ್‌ರ ಸರ್ದಾರಿ ಬೇಗಂ (1996) ಚಿತ್ರವು ಆಕೆಗೆ ಮತ್ತಷ್ಟು ಯಶಸ್ಸನ್ನು ತಂದುಕೊಟ್ಟಿತು. ಈ ಚಿತ್ರಕ್ಕಾಗಿ ಆಕೆ 1997ರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಗೆದ್ದುಕೊಂಡರು.

2000ರಲ್ಲಿ ಆಕೆ ಚಲನಚಿತ್ರ-ನಿರ್ದೇಶಕ ರಿತುಪರ್ನೊ ಘೋಶ್‌ರ ಬಂಗಾಳಿ ಚಿತ್ರ ಬರಿವಾಲಿ 1999ರಲ್ಲಿ ನಟಿಸಿದರು.[೮] ಈ ಚಿತ್ರಕ್ಕಾಗಿ ಆಕೆ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಾಗ, ಬಾಂಗ್ಲಾ ಚಲನಚಿತ್ರ ನಟಿ ರೀಟಾ ಕೊಯ್ರಾಲ್ ಕಿರಣ್‌ರ ಪಾತ್ರಕ್ಕೆ ತಾನು ಡಬ್ ಮಾಡಿದುದರಿಂದ ತಾನು ಆ ಪ್ರಶಸ್ತಿಗೆ ಸಮಾನ ಹಕ್ಕುದಾರಳಾಗಿದ್ದೇನೆಂದು ದೂರಿದುದರಿಂದ ವಿವಾದವೊಂದು ಕಂಡುಬಂದಿತು. ಕಿರಣ್ ತಾನು ಆಕೆಯ ಸಂಭಾಷಣೆಯನ್ನು ಒಪ್ಪಿಸಲು ಪೂರ್ವತಯಾರಿಗಾಗಿ ಗಂಟೆಗಟ್ಟಲೆ ಕಳೆದಿದ್ದೇನೆಂದು ಹೇಳುವ ಮೂಲಕ ಇದನ್ನು ನಿರಾಕರಿಸಿದರು ಹಾಗೂ ಅಂತಿಮವಾಗಿ ಆ ಪ್ರಶಸ್ತಿಯನ್ನು ಪಾಲುಮಾಡಿಕೊಡಲಾಗಲಿಲ್ಲ.[೮][೯]

2002ರಲ್ಲಿ ಕಿರಣ್ ದೇವದಾಸ್ (2002) ಚಿತ್ರದಲ್ಲಿ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಒಂದಿಗೆ ನಟಿಸಿದರು. ಈ ಚಿತ್ರದಲ್ಲಿನ ನಟನೆಗಾಗಿ ಆಕೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

ಖಾಮೋಶ್ ಪಾನಿ (ಸೈಲೆಂಟ್ ವಾಟರ್ಸ್ ) (2003)[೧೦] ಚಿತ್ರದಲ್ಲಿನ ಆಕೆಯ ಪಾತ್ರವು ಭಾರತ ವಿಭಜನೆಯ ಸಂದರ್ಭದಲ್ಲಿ ಅಪಹರಿಸಲ್ಪಟ್ಟ ಮಹಿಳೆಯೊಬ್ಬಳ ಅವಸ್ಥೆಯ ಬಗ್ಗೆ ಚಿತ್ರಿಸುತ್ತದೆ. ಅದರಲ್ಲಿ ಆಕೆ ತನ್ನ ಕುಟುಂಬದವರು ಸೂಚಿಸಿದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಒಪ್ಪದೆ ಅಹರಿಸಿದವನನ್ನೇ ಮದುವೆಯಾಗುತ್ತಾಳೆ ಹಾಗೂ ಅವನ ಸಾವಿನ ನಂತರ ಜೀವನ ಸಾಗಿಸುವುದಕ್ಕಾಗಿ ಸ್ಥಳೀಯ ಮಕ್ಕಳಿಗೆ ಖುರಾನ್ ಕಲಿಸಿಕೊಡುತ್ತಾಳೆ. 1979ರಲ್ಲಿ ಜಿಯಾ-ಉಲ-ಹಕ್‌ನ ಆಳ್ವಿಕೆಯ ಸಂದರ್ಭದಲ್ಲಿ ಮತ್ತು ಆತನ ಪಾಕಿಸ್ತಾನದ ಇಸ್ಲಾಮೀಕರಣ ಕಾರ್ಯಾಚರಣೆಯ ಸಂದರ್ಭದಲ್ಲಿ ಆಕೆಯ ಮಗ ಇಸ್ಲಾಮಿಕ್ ಉಗ್ರಗಾಮಿತ್ವವನ್ನು ತೆಗೆದುಕೊಂಡಾಗ ಹೇಗೆ ಅವಳ ಜೀವನವು ಹಠಾತ್ತಾಗಿ ಬದಲಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ.[೧೧] ಈ ಪಾತ್ರಕ್ಕಾಗಿ ಆಕೆ ಸ್ವಿಟ್ಜರ್ಲ್ಯಾಂಡ್‌ನ ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಕರಾಚಿಯ ಕರಾಚಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ಅರ್ಜೆಂಟೈನಾದ[೧೨] ಸೈಪೀ ಮತ್ತು ದಕ್ಷಿಣಾ ಆಫ್ರಿಕಾ[೮][೧೩] ಕೇಪ್ ಟೌನ್‌ನ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಚಿತ್ರವು ಲೊಕಾರ್ನೊದಲ್ಲಿ ಅತ್ಯುತ್ತಮ ಚಿತ್ರ - ಗೋಲ್ಡನ್ ಲಿಯೊಪಾರ್ಡ್, ಫೆಸ್ಟಿವಲ್ ಗ್ರ್ಯಾಂಡ್ ಪ್ರೈಜ್ ಅನ್ನು ಗೆದ್ದುಕೊಂಡಿತು.[೧೪]

ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಲಾಸ್ ಏಂಜಲೀಸ್ (IFFLA) 2004 ಅದರ ವಾರ್ಷಿಕೋತ್ಸವದಂದು ಕಿರಣ್‌ಗೆ ಗೌರವ ಕಾಣಿಕೆಯನ್ನು ಸಲ್ಲಿಸಿತು.[೧೫][೧೬]

2004ರ ಅಕ್ಟೋಬರ್‌ನಲ್ಲಿ ಕಿರಣ್ ಅಮೆರಿಕಾದ ಟಿವಿ ಸರಣಿ ER ನಲ್ಲಿ ತನ್ನ ಪತಿಯೊಂದಿಗೆ ಪರ್ಮಿಂದರ್ ನಾಗ್ರಾನ ತಾಯಿ ಶ್ರೀಮತಿ ರಸ್ಗೋತ್ರ ಆಗಿ "ಡ್ಯಾಮೇಜ್ಡ್ ಎಪಿಸೋಡ್‌ನಲ್ಲಿ ನಟಿಸಿದರು."[೧೭]

2005ರಲ್ಲಿ ಆಕೆ ಸಹಾರ ಒನ್ ಚಾನೆಲ್‌ನ ಟೆಲಿ-ಸರಣಿ ಪ್ರಾತಿಮ ದಲ್ಲಿ ಸುನಂದ ಪಾತ್ರದಲ್ಲಿ ಅಭಿನಯಿಸಿದರು. ಅದಕ್ಕಿಂತ ಮೊದಲು ಆಕೆ ದಿಲ್ ನ ಜಾನೆ ಕ್ಯೂ (ಜಿ ಟಿವಿ), ಇಸಿ ಬಹಾನೆ ಮತ್ತು ಚೌಸಾತ್ ಪನ್ನೆ ಮೊದಲಾದ ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು.[೧೮]

ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದರೂ ಆಕೆಯ ಯಶಸ್ವಿ ಚಿತ್ರಗಳೆಂದರೆ ಮೈ ಹೂ ನಾ (2004), ಹಮ್ ತುಮ್ (2004), ವೀರ್-ಝರಾ (2004) ಮತ್ತು Mangal Pandey: The Rising (2005), ಇದರಲ್ಲಿ ಆಕೆಯ ನಟನೆಯು ಭಾರಿ ವಿಮರ್ಶೆಗಳನ್ನು ಪಡೆಯಿತು.[೧೯] ರಂಗ್ ದೆ ಬಸಂತಿ (2006) ಚಿತ್ರದಲ್ಲಿನ ಆಕೆಯ ಪಾತ್ರವು ಬಹುಪ್ರಶಂಸೆಯನ್ನು ಗಳಿಸಿತು ಹಾಗೂ ಆಕೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಎರಡನೇ ಬಾರಿ ನಾಮನಿರ್ದೇಶನಗೊಳ್ಳುವಂತೆ ಮಾಡಿತು. ಫನಾ (2006) ಮತ್ತು ಕಭಿ ಅಲ್ವಿದ ನಾ ಕೆಹ್ನಾ (2006) ಚಿತ್ರಗಳಲ್ಲಿನ ಆಕೆಯ ನಟನೆಯೂ ಸಹ ಮೆಚ್ಚಿಕೆಯನ್ನು ಪಡೆಯಿತು. ಆಕೆ 2008ರಲ್ಲಿ ಸಿಂಗ್ ಈಸ್ ಕಿಂಗ್ , ಸಾಸ್ ಬಹು ಔರ್ ಸೆನ್ಸೆಕ್ಸ್ ಮತ್ತು ದೋಸ್ತಾನ ಮೊದಲಾದ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2009ರಲ್ಲಿ ಆಕೆ ಗಾಟ್ ಟ್ಯಾಲೆಂಟ್ ಸರಣಿಯ ಭಾರತದ ವಿನಾಯಿತಿಯಾದ ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಪ್ರತಿಭೆ ಪ್ರದರ್ಶನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.

ವೈಯಕ್ತಿಕ ಜೀವನ[ಬದಲಾಯಿಸಿ]

ಆಕೆಗೆ 1985ರಲ್ಲಿ ವಿವಾಹ ವಿಚ್ಛೇದನವಾಗುವುದಕ್ಕಿಂತ ಮೊದಲು ಜನಿಸಿದ ಸಿಕಂದರ್ ಖೇರ್[೨೦] ಎಂಬ ಹೆಸರಿನ ಒಬ್ಬ ಮಗನಿದ್ದಾನೆ. ನಂತರ ಆಕೆ ನಟ ಅನುಪಮ್ ಖೇರ್‌ನನ್ನು ಮದುವೆಯಾದರು, ಆತನನ್ನು ಆಕೆ 1974ರಲ್ಲಿ ಚಂಡಿಗಢ್‌ನ ಡಿಪಾರ್ಟ್ಮೆಂಟ್ ಆಫ್ ಇಂಡಿಯನ್ ಥಿಯೇಟರ್‌‍ನಲ್ಲಿ ಭೇಟಿಯಾದರು; ನಂತರ ಅನುಪಮ್ ಖೇರ್ ದೆಹಲಿಗೆ ಹೋದರು ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಕ್ಕೆ (NSD) ಸೇರಿಕೊಂಡರು. ಅದೇ ಸಂದರ್ಭದಲ್ಲಿ ಕಿರಣ್ ಬಾಂಬೆಗೆ ಹೋದರು ಮತ್ತು ಮೊದಲ ಪತಿಯೊಂದಿಗೆ ವಿವಾಹವಾದರು. ಕಿರಣ್ ಮತ್ತು ಅನುಪಮ್ ಖೇರ್ ಅನಂತರ ಚನದ್ಪುರಿ ಕಿ ಚಂಪಾಬಾಯ್ ಎಂಬ ನಾಟಕದಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ನಂತರ ಅವರಿಬ್ಬರು 1985ರಲ್ಲಿ ಮದುವೆಯಾದರು; ಈಗ ಅವರು ಒಂದು ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ.[೩][೨೧]

2003ರಲ್ಲಿ ಆಕೆ ಸಂಖ್ಯಾಭವಿಷ್ಯಶಾಸ್ತ್ರದಲ್ಲಿನ ನಂಬಿಕೆಯಿಂದಾಗಿ ತನ್ನ ಹೆಸರನ್ನು "Kiron" ನಿಂದ "Kirron" ಗೆ ಬದಲಾಯಿಸಿಕೊಂಡರು.[೨೨]

ಆಕೆ ಆಭರಣ ಮತ್ತು ಸೀರೆಗಳನ್ನು ಸಂಗ್ರಹಿಸುವುದರಲ್ಲಿ ಅತಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಹೆಚ್ಚಿನ ಚಲನಚಿತ್ರಗಳಲ್ಲಿ ಆಕೆ ತನ್ನ ಸ್ವಂತ ಆಭರಣ ಮತ್ತು ಬಟ್ಟೆಗಳನ್ನು ಧರಿಸುತ್ತಾರೆ.ಆಕೆ ಇತ್ತೀಚೆಗೆ ಇಂಡಿಯಾ ಹಾಸ್ ಗಾಟ್ ಟಾಲೆಂಟ್‌ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.

ಪ್ರಶಸ್ತಿಗಳು[ಬದಲಾಯಿಸಿ]

 • 1997: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ / ವಿಶೇಷ ಜ್ಯೂರಿ ಪ್ರಶಸ್ತಿ / ವಿಶೇಷ ಮೆನ್ಶನ್ (ದೀರ್ಘ ಚಿತ್ರ): ಸರ್ದಾರಿ ಬೇಗಂ
 • 2000: ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬರಿವಾಲಿ
 • 2003: IIFA ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ: ದೇವದಾಸ್
 • 2003: ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಬ್ರಾಂಜ್ ಲಿಯೊಪಾರ್ಡ್ ಪ್ರಶಸ್ತಿ : ಖಾಮೋಶ್ ಪಾನಿ (ಸೈಲೆಂಟ್ ವಾಟರ್ಸ್) [೨೩]
 • 2003: ಕರಾಚಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ: ಖಾಮೋಶ್ ಪಾನಿ (ಸೈಲೆಂಟ್ ವಾಟರ್ಸ್) [೨೪]
 • 2006: ಅತ್ಯುತ್ತಮ ಪೋಷಕ ನಟಿಗಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ: ರಂಗ್ ದೆ ಬಸಂತಿ
 • 2010: ಪೋಷಕ ನಟಿಗಾಗಿ ಅಪ್ಸಾರ ಪ್ರಶಸ್ತಿ: ಕುರ್ಬಾನ್
ನಾಮನಿರ್ದೇಶನಗಳು
 • 2003: ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ: ದೇವದಾಸ್
 • 2007: ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ: ರಂಗ್ ದೆ ಬಸಂತಿ
 • 2008: ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ: ದೋಸ್ತಾನ

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಚಲನಚಿತ್ರ[ವರ್ಷ] ಪಾತ್ರ ಟಿಪ್ಪಣಿಗಳು
2000ರ ದಶಕ
2010 ಆಕ್ಷನ್ ರೀಪ್ಲೆ ನಾನಿ
2010 ರೈಟ್ ಯಾ ರಾಂಗ್ TBA
2009 ಕುರ್ಬಾನ್‌‌ ಆಪ
2009 ಕಂಬಖ್ತ್ ಇಶ್ಕ್ ಆಂಟ್‌ ಡಾಲಿ
2008 ದೋಸ್ತಾನಾ ಸೀಮಾ
2008 ಸಾಸ್ ಬಹು ಔರ್ ಸೆನ್ಸೆಕ್ಸ್ ಬಿನಿತಾ
2008 ಸಿಂಗ್ ಈಸ್ ಕಿಂಗ್ ರೋಸ್ ಲೇಡಿ (ಸೋನಿಯಾಳ ತಾಯಿ)
2007 ಮಮ್ಮಿ-ಜಿ
2007 ಓಂ ಶಾಂತಿ ಓಂ ಬೇಲ ಮಖಿಜ (ಓಮ್‌ನ ತಾಯಿ)
2007 ಅಪ್ನೇ ರಾವಿ ಚೌದರಿ
2007 ಜಸ್ಟ್ ಮ್ಯಾರೀಡ್ ಮಿಸೆಸ್ ಚತುರ್ವೇದಿ
2007 ಐ ಸೀ ಯು ಮಿಸೆಸ್ ದತ್ತ್
2006 ಕಭೀ ಅಲ್ವಿದ ನಾ ಕೆಹ್ನಾ ಕಮಲ್‌ಜೀತ್ ಶರಣ್
2006 ಫನಾ ನಫಿಸಾ ಆಲಿ ಬೇಗಂ (ಜೂನಿಯ ತಾಯಿ)
2006 ರಂಗ್ ದೇ ಬಸಂತಿ ಮಿಟ್ರೊ (DJ ತಾಯಿ)
2005 Mangal Pandey: The Rising ಲಾಲ್ ಬಿಬಿ
2004 ವೀರ್‌-ಝರಾ ಮರಿಯಾಮ್ ಹಯಾತ್ ಖಾನ್ (ಝರಾನ ತಾಯಿ)
2004 ಹಮ್ ತುಮ್ ಪರ್ಮಿಂದರ್ ಪ್ರಕಾಶ್ ಅಥವಾ ಬಾಬಿ (ರಿಯಾಳ ತಾಯಿ)
2004 ಮೈ ಹೂ ನಾ ಮಧು ಶರ್ಮಾ
2004 ಖಾಮೋಶ್ ಪಾನಿ: ಸೈಲೆಂಟ್ ವಾಟರ್ಸ್ ವೀರೊ/ಅಯಿಶಾ
2004 ಕರ್ಜ್
2002 ದೇವದಾಸ್‌‌ ಸುಮಿತ್ರಾ
1990ರ ದಶಕ
1999 ಬರಿವಾಲಿ ಬನಲತ ವಿಜೇತೆ , ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1997 ದರ್ಮಿಯಾನ್ ಜೀನತ್ ಬೇಗಂ
1996 ಸರ್ದಾರಿ ಬೇಗಂ ಸರ್ದಾರಿ ಬೇಗಂ ವಿಜೇತೆ , ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಶೇಷ ಜ್ಯೂರಿ ಪ್ರಶಸ್ತಿಗಳು
1980ರ ದಶಕ
1988 ಪೆಸ್ಟೋಂಜೀ ಸೂನ ಮಿಸ್ಟ್ರಿ
1983 ಆಸ್ರಾ ಪ್ಯಾರ್ ದಾ (ಪಂಜಾಬಿ)

ಕಿರುತೆರೆ[ಬದಲಾಯಿಸಿ]

 • 2004: ಪ್ರಾತಿಮ ಟಿವಿ ಸರಣಿ
 • 1988: ಇಸಿ ಬಹಾನೆ ಟಿವಿ ಸರಣಿ

ಉಲ್ಲೇಖಗಳು[ಬದಲಾಯಿಸಿ]

 1. Showtime Jan 1988
 2. ಆಲ್ವೇಸ್ ದೇರ್, ಫ್ರಮ್ ಟೈನಿ ಸ್ಟೆಪ್ಸ್ ಟು ಬಿಗ್ ಲೀಪ್ಸ್ ಇಂಡಿಯನ್ ಎಕ್ಸ್‌ಪ್ರೆಸ್ , 12 ಮೇ 2002.
 3. ೩.೦ ೩.೧ ಆಲ್ ಲವ್ ಆಂಡ್ ಖೇರ್ Archived 2008-12-10 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು , 19 ಆಗಸ್ಟ್ 2004.
 4. ಫಿಲ್ಮ್ಸ್ ಆರ್ ಟು ಎಂಟರ್ಟೈನ್, ನಾಟ್ ಪ್ರೀಚ್: ಕಿರಣ್ ಖೇರ್‌ Archived 2009-03-30 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಪೆನಿನ್ಸುಲ , 28 ಎಪ್ರಿಲ್ 2008.
 5. ಒನ್ಸ್ ಮೋರ್, ವಿದ್ ಫೀಲಿಂಗ್ Archived 2008-12-10 ವೇಬ್ಯಾಕ್ ಮೆಷಿನ್ ನಲ್ಲಿ..
 6. ದಿ ಮೇಕಿಂಗ್ ಆಫ್ ನಿಯೊಲಿಬರಲ್ ಇಂಡಿಯಾ: ನ್ಯಾಷನಲಿಸಮ್, ಜಂಡರ್ ಆಂಡ್ ದಿ ಪ್ಯಾರಡಾಕ್ಸಸ್ ಆಫ್ ಗ್ಲೋಬಲೈಸೇಶನ್ - ರೂಪಲ್ ಓಜ, CRC ಪ್ರೆಸ್ ಪ್ರಕಟಿಸಿತು, 2006. ISBN 0415951860. ಪುಟ 63
 7. ಕಿರಣ್ ಖೇರ್ಸ್ ಸ್ಟಾಕ್ ಜೂಮ್ಸ್ ಹೈಯರ್! ಟೈಮ್ಸ್ ಆಫ್ ಇಂಡಿಯಾ , 22 ಸೆಪ್ಟೆಂಬರ್ 2008.
 8. ೮.೦ ೮.೧ ೮.೨ 'ಆರ್ಟ್ ನೋಸ್ ನೊ ಬೌಂಡರಿ' ಡೈಲಿ ಸ್ಟಾರ್ , 3 ಡಿಸೆಂಬರ್ 2003.
 9. ಕಿರಣ್ ಖೇರ್ ಇನ್ ದಿ ಮಿಡ್ಲ್ ಆಫ್ ಕಾಂಟ್ರವರ್ಸಿ apunkachoice.com. 12 ಆಗಸ್ಟ್ 2000 .
 10. 56ತ್ ಲೊಕಾರ್ನೊ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಇನ್ ಸ್ವಿಟ್ಜರ್ಲ್ಯಾಂಡ್ ದಿ ಟ್ರಿಬ್ಯೂನ್ , 18 ಆಗಸ್ಟ್ 2003.
 11. ಕಿರಣ್ ಖೇರ್ಸ್ ಫಿಲ್ಮ್ ರಿಲೀಸಸ್ ಇನ್ ನ್ಯೂಯಾರ್ಕ್ Rediff.com , 8 ಅಕ್ಟೋಬರ್ 2004.
 12. ವಿಸಿಟಿಂಗ್ ಪಾಕಿಸ್ತಾನ್ ವಾಸ್ ಲೈಕ್ ಎ ಪಿಲ್ಗ್ರಿಮೇಜ್: ಕಿರಣ್ ಖೇರ್ ಟೈಮ್ಸ್ ಆಫ್ ಇಂಡಿಯಾ , 20 ಜುಲೈ 2004.
 13. ಮಿಸೆಸ್ ಖೇರ್ ಕಮ್ಸ್ ಕಾಲಿಂಗಿ - ಪೇಜ್ 2 ಟೈಮ್ಸ್ ಆಫ್ ಇಂಡಿಯಾ, 16 ಅಕ್ಟೋಬರ್ 2004.
 14. ಸೈಲೆಂಟ್ ವೇವ್ಸ್, ಸ್ಟಿಲ್ ವಾಟರ್ಸ್ Archived 2008-12-10 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು , 2 ಡಿಸೆಂಬರ್ 2004.
 15. IFFLA 2004 ಫಿಲ್ಮ್ ಶೆಡ್ಯೂಲ್, 8:00pm: ಟ್ರಿಬ್ಯೂಟ್ ಟು ಕಿರಣ್ ಖೇರ್‌ Archived 2009-01-16 ವೇಬ್ಯಾಕ್ ಮೆಷಿನ್ ನಲ್ಲಿ. ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಲಾಸ್ ಏಂಜಲೀಸ್ (IFFLA).
 16. ಎ ಟ್ರಿಬ್ಯೂಟ್ ಟು ಎವಾರ್ಡ್-ವಿನ್ನಿಂಗ್ ಆಕ್ಟ್ರೆಸ್ ಕಿರಣ್ ಖೇರ್ ಟ್ರಿಬ್ಯೂನ್ , 22 ಮಾರ್ಚ್ 2004.
 17. "ER" Damaged (2004) @ ಐ ಎಮ್ ಡಿ ಬಿ ಅನುಪಮ್ ಖೇರ್ ಪ್ಲೇಯ್ಡ್ ಹರ್ ಹಸ್ಬ್ಯಾಂಡ್ ಇನ್ ದಿ ಎಪಿಸೋಡ್, ಆನ್ ಅಜಯ್ ರಸ್ಗೋತ್ರ .
 18. ಮೆನಿ ಶೇಡ್ಸ್, ಸೇಮ್ ಡಿಲೈಟ್ Archived 2005-02-07 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು, 31 ಜನವರಿ 2005.
 19. ಕಿರಣ್ ಖೇರ್ - ರೊಟೆಂಟೊಮೆಟೋಸ್.
 20. ಕಿರಣ್ ಖೇರ್‌ ಆನ್ ಹರ್ ಸನ್, ಸಿಕಂದರ್ Rediff.com , 2 ಜೂನ್ 2008.
 21. ರಿಲೇಟಿವ್ ವ್ಯಾಲ್ಯೂಸ್ Archived 2004-05-14 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್ಸ್ ಆಫ್ ಇಂಡಿಯಾ , 20 ಜುಲೈ 2003.
 22. ನ್ಯೂಮರಾಲಜಿ: ಬಸ್ಟ್ ಆರ್ ಬೂಮ್? Archived 2005-04-26 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್ಸ್ ಆಫ್ ಇಂಡಿಯಾ , 20 ಆಗಸ್ಟ್ 2003.
 23. ಪ್ರಶಸ್ತಿಗಳು ಇಂಟರ್ನೆಟ್ ಮೂವೀ ಡೇಟಾಬೇಸ್ .
 24. ಎವಾರ್ಡ್ ಸೈಟೇಶನ್ಸ್ - 2003 ಕಾರ ಎವಾರ್ಡ್ಸ್ Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ. ಕರಾಚಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಫೀಶಿಯಲ್ ವೆಬ್ಸ್‌ಸೈಟ್.
Awards
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಪೂರ್ವಾಧಿಕಾರಿ
Shabana Azmi
for Godmother
Best Actress
for Bariwali

2000
ಉತ್ತರಾಧಿಕಾರಿ
Raveena Tandon
for Daman

ಬಾಹ್ಯ ಕೊಂಡಿಗಳು[ಬದಲಾಯಿಸಿ]