ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ

ವಿಕಿಪೀಡಿಯ ಇಂದ
Jump to navigation Jump to search

ಹಿನ್ನೆಲೆ[ಬದಲಾಯಿಸಿ]

 • ಕಿತ್ತೂರಿನ ರಾಣಿ ಚನ್ನಮ್ಮ ಕನ್ನಡ ನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು. ಇವಳು ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರಮೂರ್ತಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟಗಾರ್ತಿ, ಈ ವೀರಾಗ್ರಣಿ ಕಿತ್ತೂರು ರಾಣಿ ಚನ್ನಮ್ಮ ನ ಹೆಸರಿನಲ್ಲಿ ಕರ್ನಾಟಕದ ಮಹಿಳಾ ಸಾಧಕರಿಗೆ ಕರ್ನಾಟಕ ಸರ್ಕಾರ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡುತ್ತದೆ.
 • ಅದರ ವಿವರ:
 • 2010-11ರ ಪ್ರಶಸ್ತಿಗಳು.
 • 2011-12ರ ಪ್ರಶಸ್ತಿಗಳು.
 • 2012-13ರ ಪ್ರಶಸ್ತಿಗಳು.
 • 2013-14ರ ಪ್ರಶಸ್ತಿಗಳು.

2014-15 ರ ಪ್ರಶಸ್ತಿಗಳು[ಬದಲಾಯಿಸಿ]

 • ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸರ್ಕಾರ ನೀಡುವ 2014–15ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಮಾರ್ಚ್‌ 8ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಿಳಾ ಅಭಿವೃದ್ಧಿ ಸಂಸ್ಥೆ
 • ಅಸ್ರ(AASRA)– ಬೆಂಗಳೂರು, ವರ್ಲ್ಡ್ ವಿಷನ್ ಇಂಡಿಯಾ–ವಿಜಯಪುರ, ಶ್ರೀ ಸತ್ಯ ಪ್ರೇಮ ಸಾಯಿ ಮಹಿಳಾ ಸಮಾಜ– ತುಮಕೂರು,
 • ಜಾಗೃತ ಮಹಿಳಾ ಸಂಘ– ದಾವಣಗೆರೆ,
 • ನವಜ್ಯೋತಿ ಇನ್‌ಸ್ಟಿಟ್ಯೂಟ್ ಫಾರ್ ಸೆಲ್ಫ್ ಹೆಲ್ಪ್ ಅಂಡ್ ರೂರಲ್ ಡೆವಲಪ್ ಮೆಂಟ್, ರಾಣಿಬೆನ್ನೂರು,
 • ಚಿಕ್ಕಮಗಳೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್.
ಮಹಿಳಾ ಅಭಿವೃದ್ಧಿ
ವ್ಯಕ್ತಿ

ಸಾಗರದ ಚೂಡಾಮಣಿ ರಾಮಚಂದ್ರ ಅವರು ಗಂಡು ಕಲೆ ಎಂದು ಪರಿಗಣಿಸಲಾದ ಡೊಳ್ಳು ಕುಣಿತವನ್ನು ಮಹಿಳೆಯರೂ ಪ್ರದರ್ಶೀಸಬಹುದೆಂದು ತೋರಿಸಿಕೊಟ್ಟವರು. ರಾಜ್ಯದಲ್ಲೇ ಪ್ರಥಮ ಬಾರಿಗೆ ಮಹಿಳಾ ಡೊಳ್ಳು ಕುಣಿತದ ತಂಡವನ್ನು ಕಟ್ಟಿದ ಶ್ರೇಯಸ್ಸು ಅವರದು. ತಮ್ಮ ಮಹಿಳಾ ಸಂಘಟನೆಯ ಮೂಲಕ ನಾಟಕ ಸ್ಪರ್ಧೆ, ಸಾಗರದಲ್ಲಿ ಮಹಿಳಾ ಬರಹಗಾರರ ಸಮ್ಮೇಳನ, ವಿವಿಧ ತರಬೇತಿ ಶಿಬಿರ, ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಇವುಗಳನ್ನು ಮಹಿಳಾಸಂಘದ ಅದ್ಯಕ್ಷರಾಗಿ ಆಯೋಜಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಡೊಳ್ಳು ಕುಣಿತದ ತಂಡ ರಾಜ್ಯಾದ್ಯಂತ ಪ್ರದರ್ಶನ ನೀಡಿದ್ದಲ್ಲದೆ ವಿದೇಶಗಳಲ್ಲೂ ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನು ನೀಡಿದೆ.(ಆಧಾರ:ಪ್ರಜಾವಾಣಿ ೯-೩-೨೦೧೬) .


ಕಲಾ
ಸಾಹಿತ್ಯ
ಕ್ರೀಡಾ
 • ಪ್ರೇಮಾ ಆರ್.ಹುಚ್ಚಣ್ಣನವರ್–ಗದಗ,
 • ಮೈತ್ರಾ ಉದಯ ಬನ್ನಿಕೊಪ್ಪ– ಧಾರವಾಡ.
ಶಿಕ್ಷಣ ಕ್ಷೇತ್ರ

[೧]

ನೋಡಿ[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

 • ಪ್ರಜಾವಾಣಿ -೯-೩-೨೦೧೬ ಪುಟ 3B (ಆನ್ಲೈನ್ ಇಲ್ಲ)
 1. [[೧]]