ಕಾರ್ನ್ಟೆನ್

Coordinates: 46°45′40″N 13°49′08″E / 46.761°N 13.819°E / 46.761; 13.819
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Carinthia
Kärnten
Koroška
Flag of Carinthia
Coat of arms of Carinthia
Location of Carinthia
Country Austria
CapitalKlagenfurt
Government
 • GovernorGerhard Dörfler (FPK)
Area
 • Total೯,೫೩೫.೯೭ km (೩,೬೮೧.೮೬ sq mi)
Population
 • Total೫,೫೯,೮೯೧
 • Density೫೯/km (೧೫೦/sq mi)
Time zoneUTC+1 (CET)
 • Summer (DST)UTC+2 (CEST)
ISO 3166 codeAT-2
NUTS RegionAT2
Votes in Bundesrat4 (of 62)
Websitewww.ktn.gv.at

ಕಾರಿಂಥಿಯಾ (German: [Kärnten] Error: {{Lang}}: text has italic markup (help), Slovene: [Koroška] Error: {{Lang}}: text has italic markup (help)) ಎಂಬುದು ದಕ್ಷಿಣ ತುದಿಯಲ್ಲಿರುವ ಆಸ್ಟ್ರಿಯನ್ ರಾಜ್ಯ ಅಥವಾ ನೆಲ . ಪೂರ್ವ ಆಲ್ಪ್ಸ್ ನಲ್ಲಿ ನೆಲೆಗೊಂಡಿರುವ ಇದು ಮುಖ್ಯವಾಗಿ ಪರ್ವತಗಳು ಹಾಗು ಸರೋವರಗಳಿಗೆ ಪ್ರಸಿದ್ಧವಾಗಿದೆ.

ಇಲ್ಲಿನ ಜನರು ಪ್ರಧಾನವಾಗಿ ಜರ್ಮನ್ ಭಾಷೆಯನ್ನು ಮಾತನಾಡುವುದರ ಜೊತೆಗೆ ವಿಶಿಷ್ಟವಾದ(ಸುಲಭವಾಗಿ ಗುರುತಿಸಬಹುದಾದ) ಸದರನ್ ಆಸ್ಟ್ರೋ-ಬವಾರಿಯನ್ ಉಪಭಾಷೆಯನ್ನು ಮಾತನಾಡುತ್ತಾರೆ, ಇದರಲ್ಲಿ ಎರಡು ವ್ಯಂಜನಗಳ ಮೊದಲು ಬರುವ ಜರ್ಮನ್ ಭಾಷೆಯ ಎಲ್ಲ ಚಿಕ್ಕ ಸ್ವರಾಕ್ಷರಗಳು ಉದ್ದವಾಗಿರುತ್ತದೆ("ಕಾರಿಂಥಿಯನ್ ವೋವಲ್ ಸ್ಟ್ರೆಚಿಂಗ್") ಕಾರಿಂಥಿಯನ್ ಸ್ಲೋವೀನ್ಸ್ ಎಂದು ಕರೆಯಲಾಗುವ ಸ್ಲೊವೆನ್‌-ಭಾಷೆಯನ್ನು ಮಾತನಾಡುವ ಅಲ್ಪಸಂಖ್ಯಾತರು, ರಾಜ್ಯದ ದಕ್ಷಿಣ ಹಾಗು ಆಗ್ನೇಯ ಭಾಗದಲ್ಲಿ ನೆಲೆಗೊಂಡಿದ್ದಾರೆ. ಇದರ ಗಾತ್ರವನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ. ಏಕೆಂದರೆ ಜನಾಂಗೀಯ ಗುಂಪಿನ ಪ್ರತಿನಿಧಿಗಳು ಗಣನೆಗೆ ನಿರಾಕರಿಸುತ್ತಾರೆ. ೨೦೦೧ರ ಜನಗಣತಿಯಲ್ಲಿ ಅವರು ಮಾತನಾಡುವ ದಿನಬಳಕೆಯಲ್ಲಿ ಬಳಸುವ ಭಾಷೆಯ ಬಗ್ಗೆ ಪಡೆಯಲಾದ ಅಂಕಿಅಂಶವು ಪ್ರಶ್ನಾರ್ಹವಾದ ಕಾರಣಕ್ಕೆ ಜನಗಣತಿಯನ್ನು ಬಹಿಷ್ಕರಿಸಲು ಶಿಫಾರಸುಗಳನ್ನು ಮಾಡಲಾಯಿತು. (೧೨,೫೫೪ ಜನರು ಅಥವಾ ೫೨೭,೩೩೩ರಷ್ಟು ಒಟ್ಟು ಜನಸಂಖ್ಯೆಯಲ್ಲಿ ೨.೩೮%ರಷ್ಟು ಜನರು[೧]).

ಕಾರಿಂಥಿಯಾದ ಪ್ರಮುಖ ಉದ್ಯೋಗಗಳೆಂದರೆ ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್, ಅರಣ್ಯಶಾಸ್ತ್ರ ಹಾಗು ಕೃಷಿ. ಬಹುರಾಷ್ಟ್ರೀಯ ಸಂಸ್ಥೆಗಳಾದ ಫಿಲಿಪ್ಸ್ ಹಾಗು ಸೈಮನ್ಸ್ ಇಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆಗಳನ್ನು ಹೊಂದಿವೆ.

ಹೆಸರು[ಬದಲಾಯಿಸಿ]

ಹೈಲಿಜನ್‌ಬ್ಲಟ್ ಗ್ರಾಸ್‌ಗ್ಲೆಕ್‌ನರ್ ಜತೆಯಲ್ಲಿ.

ಈ ಪ್ರದೇಶದ ಹೆಸರು ಮೂಲತಃ ಸೆಲ್ಟಿಕ್ ಭಾಷೆಯಿಂದ ಜನ್ಯವಾಗಿದೆಯೆಂದು ಪರಿಗಣಿಸಲಾಗುತ್ತದೆ, ಆದಾಗ್ಯೂ ಇದರ ಎರಡು ಮೂಲಗಳ ಬಗ್ಗೆ ಈ ಕೆಳಕಂಡಂತೆ ಪ್ರಸ್ತಾಪಿಸಲಾಗಿದೆ:[೨]

 1. ಕಾರಂಟ್ ಎಂಬ ಪದವು "ಸ್ನೇಹಿತ" ಅಥವಾ "ಸಂಬಂಧಿ" ಎಂಬ ಅರ್ಥವನ್ನು ನೀಡುತ್ತದೆ - ಅರ್ಥಾತ್ "ಸ್ನೇಹಿತರ ನೆಲ", ಇದು ಕಂಚಿನ ಯುಗದಲ್ಲಿದ್ದ ಇಲ್ಲಿರಿಯನ್ ಬುಡಕಟ್ಟನ್ನು ಉಲ್ಲೇಖಿಸಬಹುದು.
 2. ಕರಂಟೊ (ಪೂರ್ವ-ಇಂಡೋ-ಯುರೋಪಿಯನ್ ಮೂಲ), ಎಂಬ ಪದವು "ಕಲ್ಲು, ಬಂಡೆ" ಎಂಬ ಅರ್ಥವನ್ನು ನೀಡುತ್ತದೆ. ಹಾಗಿದ್ದಲ್ಲಿ, ಈ ಹೆಸರು ಕಾರ್ನ್ಬರ್ಗ್, ಕರವನ್ಕೆನ್ ಹಾಗು ಇದೆ ರೀತಿ ಸದೃಶವಾದ ಪದಗಳೊಂದಿಗೆ ತನ್ನ ಮೂಲವನ್ನು ಹಂಚಿಕೊಂಡಿದೆ.

ಕರಂಟಾನಿಯ ಎಂಬುದು ಹಳೆಯ ಸ್ಲೊವೇನಿಯನ್ ಕೊರೋಟನ್ ಗೆ ಸಂಬಂಧಿಸಿದೆ, ಇದರಿಂದ ಕೊರೋಸ್ಕ ಎಂಬ ನೂತನ ಪದವು ಜನ್ಯವಾಗಿದೆ, ಹಾಗು ಇದು ಪೂರ್ವ-ಸ್ಲಾವಿಕ್ "ಕರಂಟಿಯಾ" ಪದದಿಂದ ವ್ಯುತ್ಪತ್ತಿಯನ್ನು ಹೊಂದಿದೆ.

ಭೌಗೋಳಿಕತೆ[ಬದಲಾಯಿಸಿ]

ಕಾರಿಂಥಿಯಾ ಪ್ರದೇಶವು ಬಹುತೇಕವಾಗಿ ಕ್ಲಾಗೇನ್ಫರ್ಟ್ ಜಲಾನಯನ ಭೂಮಿ ಹಾಗು ಮೇಲ್ಮೈ ಕಾರಿಂಥಿಯಾದ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ. ಕಾರ್ನಿಕ್ ಆಲ್ಪ್ಸ್ ಹಾಗು ಕರವಂಕೆನ್/ಕರಾವಂಕೆ, ಇಟಾಲಿಯನ್ ಪ್ರದೇಶದ ಫ್ರಿಯುಲಿ-ವೆನೆಜಿಯಾ ಗಿಯುಲಿಯಾ ಹಾಗು ಸ್ಲೊವೇನಿಯಾಕ್ಕೆ ಗಡಿಯಾಗಿದೆ. ಗ್ರೋಸ್ಸ್ ಗ್ಲಾಕ್ನರ್ ಪರ್ವತದೊಂದಿಗೆ3,798 m (12,460.63 ft) ಹೊಹೆ ಟೌಯೆರ್ನ್ ಪರ್ವತ ಶ್ರೇಣಿಯು ಈ ಪ್ರದೇಶವನ್ನು ಸಾಲ್ಜ್ ಬರ್ಗ್ ಉತ್ತರ ರಾಜ್ಯದಿಂದ ಪ್ರತ್ಯೇಕಿಸುತ್ತದೆ. ಪ್ಯಾಕ್ಸಟ್ಟೆಲ್ ಪರ್ವತ ಕಣಿವೆಯ ಈಶಾನ್ಯ ಮತ್ತು ಪೂರ್ವ ಭಾಗದ ಆಚೆಗೆ ಸ್ಟಿರಿಯಾ ರಾಜ್ಯವಿದೆ(ಜರ್ಮನ್: ಸ್ಟೆಯೆರ್‌ರ್ಮಾರ್ಕ್ , ಸ್ಲೊವೇನಿಯನ್: ಸ್ಟಜೆರ್ಸ್ಕ ). ಈ ಪ್ರದೇಶದ ಪ್ರಮುಖ ನದಿಯೆಂದರೆ ಡ್ರೌ(ಡ್ರಾವ ), ಇದು ಪೂರ್ವ ಟೈರೋಲ್ ನೊಂದಿಗೆ ಪಶ್ಚಿಮಕ್ಕೆ ಸತತವಾದ ಕಣಿವೆಯನ್ನು ರೂಪಿಸುತ್ತದೆ. ಗುರ್ಕ್, ಗ್ಲಾನ್, ಲವಂಟ್ ಹಾಗು ಗೈಲ್ ನದಿಗಳು ಡ್ರೌ ಉಪನದಿಗಳಾಗಿವೆ. ಕಾರಿಂಥಿಯಾ ಸರೋವರಗಳಲ್ಲಿ ವೊರ್ಥರ್ ಸೀ, ಮಿಲ್ ಸ್ಟಾಟರ್ ಸೀ, ಓಸ್ಸಿಯಾಚೆರ್ ಸೀ ಹಾಗು ಫಾಕರ್ ಸೀಗಳು ಒಳಗೊಂಡಿವೆ. ಇವುಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ.

ಫಾಕರ್ ಸೀ ಮತ್ತು ಕರಾವಾಂಕನ್

ಕ್ಲಾಗೇನ್ಫರ್ಟ್ ರಾಜಧಾನಿ ನಗರವಾಗಿದ್ದು, ಇದನ್ನು ಸ್ಲೊವೇನಿಯನ್ ಭಾಷೆಯಲ್ಲಿ ಸೆಲೋವೆಕ್ ಎಂದು ಕರೆಯಲಾಗುತ್ತದೆ. ಇದರ ನಂತರದ ಪ್ರಮುಖ ನಗರವೆಂದರೆ ವಿಲ್ಲಾಚ್(ಬೆಲ್ಜಕ್ ), ಈ ಎರಡೂ ನಗರಗಳು ಆರ್ಥಿಕವಾಗಿ ಪ್ರಬಲ ಸಂಪರ್ಕ ಹೊಂದಿವೆ. ಇತರ ಪಟ್ಟಣಗಳೆಂದರೆ ಅಲ್ತೋಫೆನ್, ಬ್ಯಾಡ್ ಸಂಕ್ಟ್ ಲಿಯೋನ್ಹಾರ್ಡ್ ಇಂ ಲವನ್ಟ್ಟಲ್, ಬ್ಲೆಯಿಬರ್ಗ್(ಪ್ಲಿಬರ್ಕ್ ), ಫೆಲ್ಡ್ ಕಿರ್ಚೆನ್(Trg ) ಫೆರ್ಲಚ್(ಬೋರೋವ್ಲ್ಜೆ ), ಫ್ರಿಯೇಸಚ್(ಬ್ರೆಜೆ ), ಜಿಮಂಡ್, ಹರ್ಮಗೋರ್(ಸ್ಮೊಹೊರ್ ),ರಾದೆನ್ಥೆಯಿನ್, ಸಂಕ್ಟ್ ಅಂದ್ರಾ, ಸಂಕ್ಟ್ ವೆಯಿಟ್ ಎನ್ ಡೆರ್ ಗ್ಲಾನ್(ಸೆಂಟ್ವಿದ್ ನ ಗ್ಲಿನಿ ), ಸ್ಪಿಟ್ಟಲ್ ಎನ್ ಡೆರ್ ಡ್ರೌ, ಸ್ಟ್ರಾಬ್ ಬರ್ಗ್, ವೋಲ್ಕೆರ್ ಮರ್ಕ್ಟ್(ವೆಲಿಕೊವೆಕ್ ), ವೂಲ್ಫ್ಸ್ ಬರ್ಗ್(ವೋಲ್ಸ್ ಪರ್ಕ್). ಇವುಗಳಲ್ಲಿ ಕೆಲವು ಸ್ಲೋವೀನ್ ಸ್ಥಳದ ಹೆಸರುಗಳು ಅಧಿಕೃತ ಹೆಸರುಗಳಾಗಿದ್ದು, ಬಹುತೇಕ ಸ್ಲೋವೀನ್ ಆಡುಭಾಷೆಯಲ್ಲಿ ಬಳಕೆಯಲ್ಲಿವೆ.

ಕಾರಿಂಥಿಯಾ ಭೂಖಂಡೀಯ ವಾಯುಗುಣವನ್ನು ಹೊಂದಿರುವುದರ ಜೊತೆಗೆ ಬಿಸಿಲಿನ ಹಾಗು ಸಾಧಾರಣ ಆರ್ದ್ರ ಬೇಸಿಗೆಗಳು ಹಾಗು ದೀರ್ಘಕಾಲಿಕವಾದ ಚಳಿಗಾಲಗಳನ್ನು ಹೊಂದಿದೆ. ಇತ್ತೀಚಿನ ದಶಕಗಳಲ್ಲಿ ಚಳಿಗಾಲಗಳು ಅಸಾಧಾರಣ ರೀತಿಯಲ್ಲಿ ನಿರಾರ್ದ್ರವಾಗಿರುತ್ತವೆ. ಆಸ್ಟ್ರಿಯಾದಲ್ಲಿ, ಸೂರ್ಯ ಬೆಳಕಿನ ಅವಧಿಯ ಸರಾಸರಿ ಪ್ರಮಾಣವು ಅಧಿಕವಾಗಿರುತ್ತದೆ. ಶರತ್ಕಾಲ ಹಾಗು ಚಳಿಗಾಲದ ತಾಪಮಾನದ ವ್ಯತ್ಯಯವು ಹವಾಮಾನದಲ್ಲಿ ಮೇಲುಗೈ ಹೊಂದಿರುತ್ತದೆ, ಇದು ಗಾಳಿಯ ನಿಶ್ಚಲತೆ, ಹಿಮ ಕವಿದ ಕಣಿವೆಗಳನ್ನು ಆವರಿಸುವ ದಟ್ಟವಾದ ಮಂಜಿನಿಂದ ವಿಶಿಷ್ಟವಾಗಿರುತ್ತದೆ ಹಾಗು ಮಾಲಿನ್ಯವನ್ನು ತಡೆದುನಿಲ್ಲಿಸಿ ಹೊಗೆ ತುಂಬಿದ ಮಂಜನ್ನು ಉಂಟುಮಾಡುತ್ತದೆ. ಹಿತವಾದ ಸೂರ್ಯನ ಬೆಳಕು ತಪ್ಪಲುಗಳಲ್ಲಿ ಹಾಗು ಪರ್ವತಗಳಲ್ಲಿ ಅಧಿಕವಾಗಿರುತ್ತದೆಂದು ದಾಖಲಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಡಚಿ(ಡ್ಯೂಕ್ ನ ಆಳ್ವಿಕೆಯ ಪ್ರದೇಶ)[ಬದಲಾಯಿಸಿ]

ಕ್ರಿಸ್ತಶಕ ೭೪೫ರಲ್ಲಿ ಕರಂಟಾನಿಯಾದ ಹಿಂದಿನ ಸ್ಲಾವಿಕ್ ಸಂಸ್ಥಾನವು, ಡ್ಯೂಕ್ ಒಡಿಲೋನ ಅಧೀನದ ಬೆವಾರಿಯ ಸ್ಟೆಮ್ ಡಚಿಗಳ ಮಾರ್‌ಗ್ರೇವ್ ಆಡಳಿತದ ಪ್ರದೇಶವಾಯಿತು. ಒಡಿಲೊ ಪುತ್ರ ಡ್ಯೂಕ್ ಟಸ್ಸಿಲೋ IIIನನ್ನು ಅಂತಿಮವಾಗಿ ಚಾರ್ಲೆಮ್ಯಾಗ್ನೆ ಪದಚ್ಯುತಗೊಳಿಸಿದ ಹಾಗು ಆತನ ಭೂಪ್ರದೇಶವನ್ನು ಫ್ರ್ಯಾಂಕಿಶ್ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲಾಯಿತು. ೮೪೩ರ ವರ್ಡುನ್ ಒಪ್ಪಂದದಿಂದಾಗಿ, ಹಿಂದಿನ ಕರಂಟಾನಿಯನ್ ಪ್ರದೇಶಗಳು ಪೂರ್ವ ಫ್ರಾನ್ಸಿಯ ಪ್ರಭುತ್ವದ ವಶವಾಯಿತು. ಇದನ್ನು ಚಾರ್ಲೆಮ್ಯಾಗ್ನೆಯ ಮೊಮ್ಮಗ ಲೂಯಿಸ್ ದಿ ಜರ್ಮನ್ ಆಳ್ವಿಕೆ ಮಾಡುತ್ತಿದ್ದ. ಕರಂಟಿನಿಯನ್ ಡ್ಯೂಕ್‌ಗಳ ಪಟ್ಟಾಭಿಷೇಕ ಆಚರಣೆಯು, ಸ್ಲೊವೇನಿಯನ್ ಭಾಷೆಯಲ್ಲಿ ಕರೆಯಲಾಗುವ ಕಾರ್ನ್ಬರ್ಗ್ ಸಮೀಪದ ಪ್ರಿನ್ಸಸ್ ಸ್ಟೋನ್ ನಲ್ಲಿ ನಡೆಯಿತು, ಇದನ್ನು ಕಾರಿಂಥಿಯಾದ ಡ್ಯೂಕ್ ಆಗಿ ೧೪೧೪ರಲ್ಲಿ ಸಿಂಹಾಸನಕ್ಕೇರಿದ ಅರ್ನೆಸ್ಟ್ ದಿ ಐರನ್ ನವರೆಗೂ ಸಂರಕ್ಷಿಸಲಾಗಿತ್ತು.

೮೬೫ ರಿಂದ ೮೮೦ರವರೆಗೂ ಬವಾರಿಯಾದ ರಾಜನಾಗಿದ್ದ ಲೂಯಿಸ್ ನ ಪುತ್ರ ಕಾರ್ಲೊಮಾನ್ ಅವನ ಅಕ್ರಮ ಸಂಬಂಧದ ಪುತ್ರ ಅರ್ನುಲ್ಫ್ ಆಫ್ ಕಾರಿಂಥಿಯಾಗೆ ೮೮೯ರಲ್ಲಿ ಉಯಿಲು ಬರೆದ ಪ್ರದೇಶದಿಂದ , ಕಾರಿಂಥಿಯಾದ ಗಡಿಪ್ರದೇಶವು ಹುಟ್ಟಿಕೊಂಡಿತು. ಅರ್ನುಲ್ಫ್, ೮೮೦ರಲ್ಲೇ ಕಾರಿಂಥಿಯನ್ ಡ್ಯೂಕ್ ಎಂಬ ಬಿರುದನ್ನು ಪಡೆದಿದ್ದ ಹಾಗು ತನ್ನ ಸೋದರಮಾವ ಚಾರ್ಲ್ಸ್ ದಿ ಫ್ಯಾಟ್ ನನ್ನು ಅನುಸರಿಸಿ, ೮೮೭ರಲ್ಲಿ ಬವಾರಿಯಾ ಹಾಗೂ ಈಸ್ಟ್ ಫ್ರಾನ್ಸಿಯ ರಾಜನಾಗಿದ್ದ. ಕಾರಿಂಥಿಯಾದ ಡಚಿ ವಿಸ್ತಾರವಾದ ಬವಾರಿಯನ್ ಡಚಿಯಿಂದ ಅಂತಿಮವಾಗಿ ೯೭೬ರಲ್ಲಿ ಚಕ್ರವರ್ತಿ ಒಟ್ಟೊ II ಡ್ಯೂಕ್ ಹೆನ್ರಿ II ದಿ ರಾಂಗ್ಲರ್ ನ ಜೊತೆಗಿನ ಕದನಗಳಲ್ಲಿ ಜಯಗಳಿಸಿದ ನಂತರ ಪ್ರತ್ಯೇಕಿಸಿದ. ಈ ರೀತಿಯಾಗಿ ಕಾರಿಂಥಿಯಾ ಪವಿತ್ರ ರೋಮನ್ ಸಾಮ್ರಾಜ್ಯದ ಮೊದಲ ಹೊಸ ಡಚಿ ಎನಿಸಿತು ಹಾಗು ಅಲ್ಪಾವಧಿಗೆ ಆಡ್ರಿಯಾಟಿಕ್ ಸಮುದ್ರದಿಂದ ಬಹುತೇಕವಾಗಿ ದನುಬೆವರೆಗೂ ವಿಸ್ತರಿಸಿದ ಭೂಮಿಯ ಒಡೆತನವನ್ನು ಹೊಂದಿತ್ತು. ೧೦೪೦ರಲ್ಲಿ, ಕಾರ್ನಿಯೋಲದ ಗಡಿಪ್ರದೇಶವು ಅದರಿಂದ ಪ್ರತ್ಯೇಕಗೊಂಡಿತು ಹಾಗು ಸುಮಾರು ೧೧೮೦ರಲ್ಲಿ, "ಕಾರಿಂಥಿಯನ್ ಗಡಿಪ್ರದೇಶ"ವಾದ ಸ್ಟಿರಿಯಾ, ಸ್ವಂತ ಹಕ್ಕಿನಿಂದ ಡಚಿ(ಡ್ಯೂಕ್ ಆಡಳಿತ ಪ್ರದೇಶ) ಎನಿಸಿತು. ೧೩೩೫ರಲ್ಲಿ, ಡ್ಯೂಕ್ ಗೊರಿಜಿಯಾ-ಟೈರೋಲ್ ನ ಹೆನ್ರಿ VIನ ಮರಣಾನಂತರ, ಕಾರಿಂಥಿಯಾ, ಹೌಸ್ ಆಫ್ ಹ್ಯಾಬ್ಸ್ ಬರ್ಗ್ ನ ಸದಸ್ಯನಾಗಿದ್ದ ಒಟ್ಟೊ IVನಿಗೆ ವರ್ಗಾವಣೆಯಾಯಿತು ಹಾಗು ಈ ಪ್ರಭುತ್ವವು ಕಾರಿಂಥಿಯಾವನ್ನು ೧೯೧೮ರವರೆಗೂ ಆಳಿತು. ೧೮೦೬ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ವಿಸರ್ಜನೆಯ ನಂತರ, ಕಾರಿಂಥಿಯಾವನ್ನು ಆಸ್ಟ್ರಿಯನ್ ಸಾಮ್ರಾಜ್ಯದ ಇಲ್ಲಿರಿಯಾ ಪ್ರಭುತ್ವಕ್ಕೆ ಸೇರ್ಪಡೆಗೊಳಿಸಲಾಯಿತು, ಇದು ನೆಪೋಲಿಯನ್ನನ ಇಲ್ಲಿರಿಯನ್ ಪ್ರಾಂತಗಳ ವಿರುದ್ಧ ಜಯಗಳಿಸಿತ್ತು. ಆದರೆ ೧೮೪೯ ತನ್ನ ಹಿಂದಿನ ಸ್ಥಾನಮಾನವನ್ನು ಮತ್ತೆ ಪಡೆಯುವುದರ ಜೊತೆಗೆ ೧೮೬೭ರಲ್ಲಿ ಆಸ್ಟ್ರಿಯಾ-ಹಂಗೇರಿಯ ಸಿಸ್ಲೆಯಿಥಾನಿಯನ್ ಪ್ರಭುತ್ವದ ನೆಲಗಳಲ್ಲಿ ಒಂದಾಯಿತು.

ರಾಜ್ಯದ ರಚನೆ[ಬದಲಾಯಿಸಿ]

೧೯೧೮ರ ಉತ್ತರಾರ್ಧದಲ್ಲಿ, ಮುರಿದುಬೀಳುತ್ತಿದ್ದ ಹ್ಯಾಬ್ಸ್ ಬರ್ಗ್ ರಾಜಪ್ರಭುತ್ವದ ಪತನವು ಸನ್ನಿಹಿತವಾಗಿತ್ತು, ಹಾಗು ೨೧ ಅಕ್ಟೋಬರ್ ೧೯೧೮ರಲ್ಲಿ ಆಸ್ಟ್ರಿಯಾದಲ್ಲಿ ಜರ್ಮನ್ ಮಾತನಾಡುವ ಭೂಪ್ರದೇಶಗಳ ರೆಯಿಕ್‌ಸ್ರಾಟ್ ನ ಸದಸ್ಯರು ವಿಯೆನ್ನಾದಲ್ಲಿ ಸಂಧಿಸಿ, ಜರ್ಮನ್-ಆಸ್ಟ್ರಿಯಾಗಾಗಿ "ಪ್ರಾವಿಷನಲ್ ನ್ಯಾಷನಲ್ ಕೌನ್ಸಿಲ್" ನ್ನು ರಚಿಸಿದರು. ಸಭೆಗೆ ಮುನ್ನ, ಪ್ರತಿನಿಧಿಗಳು, ಜರ್ಮನ್-ಆಸ್ಟ್ರಿಯಾದಲ್ಲಿ "ಯುಗೊಸ್ಲಾವ್ ವಸಾಹತು ಪ್ರದೇಶ" ಗಳನ್ನು ಸೇರಿಸಿಕೊಳ್ಳದಿರಲು ಒಪ್ಪಿಗೆ ನೀಡಿದರು, ಇದು ಕೆಳ ಸ್ಟೈರಿಯಾ ಹಾಗು ಕರವಂಕೆನ್ ಶ್ರೇಣಿಯ ದಕ್ಷಿಣದಲ್ಲಿದ್ದ ಸ್ಲೋವೀನ್-ಮಾತನಾಡುವ ಎರಡು ಕಾರಿಂಥಿಯನ್ ಕಣಿವೆಗಳನ್ನು ಉಲ್ಲೇಖಿಸಿವೆ. ಸೀಲ್ಯಾಂಡ್(ಸ್ಲೊವೇನಿಯನ್: ಜೆಜೆರ್ಸ್ಕೊ) ಹಾಗು ಮಿಯೆಬ್ಟಲ್(ಮೆಜಾ ನದಿಯ ಕಣಿವೆ) ೧೯೧೮ರ ನವೆಂಬರ್ ೧೨ ರಂದು, ವಿಯೆನ್ನಾದಲ್ಲಿ ನಡೆದ ಪ್ರಾವಿಷನಲ್ ನ್ಯಾಷನಲ್ ಅಸೆಂಬ್ಲಿ ಅಧಿಕೃತವಾಗಿ ಅಂಗೀಕರಿಸಿದ ಜರ್ಮನ್-ಆಸ್ಟ್ರಿಯಾ ರಾಜ್ಯದ ಸ್ಥಾಪನೆಗೆ ಸಂಬಂಧಿಸಿದ ಕಾಯಿದೆಯಲ್ಲಿ, ಸ್ಟೇಟ್ ಚ್ಯಾನ್ಸಲರ್, ಕಾರ್ಲ್ ರೆನ್ನೆರ್ ಈ ರೀತಿಯಾದ ಸ್ಪಷ್ಟ ನಿರೂಪಣೆ ನೀಡುತ್ತಾರೆ,"...ವಿದೇಶದ ಆಸ್ತಿಯನ್ನು ನಾವು ಸೇರಿಸಲು ಬಯಸಿದ್ದೇವೆಯೋ ಎಂಬಂತಹ ಜಗತ್ತು ಹೊಂದಿರುವ ಪೂರ್ವಗ್ರಹವನ್ನು ಎದುರಿಸಲು" [೩], ಅದರ ಹಿಂದಿನ ದಿವಸ ೧೧ ನವೆಂಬರ್ ೧೯೧೮ರಲ್ಲಿ ಕಾರಿಂಥಿಯಾದ ಹಂಗಾಮಿ ಶಾಸಕಾಂಗ ಜರ್ಮನ್-ಆಸ್ಟ್ರಿಯಾ ರಾಜ್ಯಕ್ಕೆ ಕಾರಿಂಥಿಯಾದ ಸೇರ್ಪಡೆಯನ್ನು ಔಪಚಾರಿಕವಾಗಿ ಘೋಷಣೆ ಮಾಡಿತ್ತು.[೪] ೨೨ ನವೆಂಬರ್ ೧೯೧೮ರ ಎಕ್ಸ್‌ಟೆಂಟ್, ದಿ ಬಾರ್ಡರ್ಸ್ ಎಂಡ್ ದಿ ಸ್ಟೇಟ್ ಟೆರಿಟರೀಸ್‌ಗೆ ಸಂಬಂಧಿಸಿದ ಫೆಡರಲ್ ಕಾಯಿದೆಯು ವಿಧಿ ೧ರಲ್ಲಿ ಸ್ಪಷ್ಟವಾಗಿ ನಿರೂಪಿಸಿದೆ : "ಯುಗೊಸ್ಲಾವ್ ನ ಸದೃಶ ವಸಾಹತು ನೆಲೆಗಳನ್ನು ಹೊರತುಪಡಿಸಿ ಸ್ಟಿರಿಯಾ ಹಾಗು ಕಾರಿಂಥಿಯಾದ ಡಚಿಗಳು".[೫] ಒಬ್ಬ ಸೋಶಿಯಲ್-ಡೆಮೋಕ್ರ್ಯಾಟ್, ಫ್ಲೋರಿಯನ್ ಗ್ರೋಗೆರ್ ರನ್ನು ಹೊರತುಪಡಿಸಿ, ಕಾರಿಂಥಿಯಾದ ಇತರ ಎಲ್ಲ ಪ್ರತಿನಿಧಿಗಳು - ಹನ್ಸ್ ಹೋಫರ್, ಜೇಕಬ್ ಲುಟ್ಸ್ಚೋಯುನಿಗ್, ಜೋಸೆಫ್ ನಗೆಲೇ, ಆಲೋಯಿಸ್ ಪಿರ್ಕರ್, ಲೆಪೋಲ್ಡ್ ಪಾಂಗ್ ಗ್ರ್ಯಾಟ್ಜ್, ಡಾ. ಒಟ್ಟೊ ಸ್ಟೆಯಿನ್ವೆಂಡರ್, ಡಾ. ವಿಕ್ಟರ್ ವಾಲ್ಡ್ನರ್ - ಜರ್ಮನ್ ರಾಷ್ಟ್ರೀಯ ಪಕ್ಷಗಳ ಹಾಗು ಸಂಸ್ಥೆಗಳ ಸದಸ್ಯರುಗಳಾಗಿದ್ದರು.[೬]

ವಿವಾದಿತ ಗಡಿನಾಡುಗಳು[ಬದಲಾಯಿಸಿ]

ಆದಾಗ್ಯೂ, ಮೊದಲ ವಿಶ್ವಸಮರವು ಕೊನೆಯಾದ ನಂತರ, ಕಾರಿಂಥಿಯಾ ಒಂದು ವಿವಾದಿತ ಪ್ರದೇಶವಾಯಿತು. ೫ ನವೆಂಬರ್ ೧೯೧೮ರಲ್ಲಿ, ಸ್ಲೋವೀನ್ ಸ್ವಯಂಸೇವಕ ಫ್ರಾಂಜೋ ಮಲ್ಗಜ್ ನೇತೃತ್ವದ ಮೊದಲ ಸಶಸ್ತ್ರ ಪ್ರಜಾಸೈನ್ಯವು ಕಾರಿಂಥಿಯಾದ ಮೇಲೆ ಆಕ್ರಮಣ ನಡೆಸಿತು ಹಾಗು ಈ ಆಕ್ರಮಣಕ್ಕೆ ನಂತರದಲ್ಲಿ ರುಡಾಲ್ಫ್ ಮೈಸ್ಟರ್ ನ ನೇತೃತ್ವದ ಸ್ಲೋವೀನ್ ಪಡೆಗಳು ಸೇರಿಕೊಂಡವು. ತರುವಾಯ ಕಾಯಂ ಯುಗೊಸ್ಲಾವ್ ಸೇನೆಯ ಸಹಾಯದೊಂದಿಗೆ ಇವರು ದಕ್ಷಿಣ ಕಾರಿಂಥಿಯವನ್ನು ವಶಪಡಿಸಿಕೊಂಡು, ಈ ಪ್ರದೇಶವನ್ನು ಸರ್ಬ್ಸ್, ಕ್ರೋವೆಟ್ಸ್ ಹಾಗು ಸ್ಲೋವೀನ್ಸ್(ಯುಗೋಸ್ಲಾವಿಯ) ಪ್ರಭುತ್ವಕ್ಕೆ ಹಕ್ಕು ಪ್ರತಿಪಾದಿಸಿತು. ಕಾರಿಂಥಿಯಾದ ಹಂಗಾಮಿ ರಾಜ್ಯ ಸರ್ಕಾರವು ಸ್ಪಿಟ್ಟಲ್ ಎನ್ ಡೆರ್ ಡ್ರೌಗೆ ಸ್ಥಳಾಂತರಗೊಂಡಿತು ಹಾಗು ಸ್ಥಳೀಯ ಸ್ವಯಂಸೇವಕರು ಹಾಗು ಆಕ್ರಮಣಕಾರರ ನಡುವಿನ ಕದನವನ್ನು ಗಮನದಲ್ಲಿರಿಸಿಕೊಂಡು, ಡಿಸೆಂಬರ್ ೫ರಂದು ಸಶಸ್ತ್ರ ಪ್ರತಿರೋಧವನ್ನು ಘೋಷಿಸಲು ನಿರ್ಧರಿಸಲಾಯಿತು. ಯುಗೊಸ್ಲಾವ್ ಸೇನೆಯು ಎದುರಿಸಿದರ ಪ್ರತಿರೋಧವು, ಅದರಲ್ಲೂ ವಿಶೇಷವಾಗಿ ವೋಲ್ಕರ್ಮರ್ಕ್ಟ್ ಪಟ್ಟಣದ ಸುತ್ತಮುತ್ತದ ಡ್ರಾವ ನದಿಯ ಉತ್ತರ ಭಾಗದಲ್ಲಿ ಅದು ಎದುರಿಸಿದ ಹಿಂಸಾತ್ಮಕ ಘರ್ಷಣೆಯು, ಪ್ಯಾರಿಸ್ ಪೀಸ್ ಕಾನ್ಫರೆನ್ಸ್ ನಲ್ಲಿ, ವಿಜಯಿಯಾದ ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿತು.

USನ ಲೆಫ್ಟಿನೆಂಟ್ ಕರ್ನಲ್. ಶೆರ್ಮನ್ ಮಿಲ್ಸ್ ನೇತೃತ್ವದ ಒಕ್ಕೂಟದ ಸಮಿತಿಯು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವುದರ ಜೊತೆಗೆ ಕ್ಲಾಗೇನ್ಫರ್ಟ್ ಜಲಾನಯನ ಭೂಮಿಯನ್ನು ಸಂಪೂರ್ಣವಾಗಿ ಹಾಗೆ ಉಳಿಸಿಕೊಳ್ಳಬೇಕಾದರೆ ಕರವಂಕೆನ್ ಮುಖ್ಯ ಬೆಟ್ಟಸಾಲನ್ನು ಸ್ವಾಭಾವಿಕ ಗಡಿಯಾಗಿ ಪರಿಗಣಿಸಬೇಕೆಂದು ಶಿಫಾರಸು ಮಾಡಿತು, ಆದರೆ ವುಡ್ರೋ ವಿಲ್ಸನ್ ರ ಫೋರ್ಟೀನ್ ಪಾಯಿಂಟ್ಸ್ ನಲ್ಲಿ ಹತ್ತನೇ ನಿಬಂಧನೆಗೆ ಅನುಸಾರವಾಗಿ ಮಾಡಿಕೊಂಡ ಒಪ್ಪಂದದ ಪ್ರಕಾರ, ವಿವಾದಿತ ಪ್ರದೇಶದಲ್ಲಿ ಒಂದು ಜನಾಭಿಪ್ರಾಯ ಸಂಗ್ರಹಕ್ಕೆ ಸಲಹೆ ನೀಡಿತು. ಜನವರಿ ೧೪ರಂದು ಕದನವಿರಾಮಕ್ಕೆ ಸಮ್ಮತಿ ಸೂಚಿಸಲಾಯಿತು ಹಾಗು ೭ ಮೇ ೧೯೧೯ರ ಹೊತ್ತಿಗೆ ಯುಗೊಸ್ಲಾವ್ ಸೇನೆಗಳು, ರಾಜ್ಯದಿಂದ ಹೊರಟುಹೋದವು, ಆದರೆ ರುಡಾಲ್ಫ್ ಮೈಸ್ಟರ್ ನೇತೃತ್ವದ ನಿಯಮಿತ ಪಡೆಗಳು ಹಿಂದಿರುಗಿ ಜೂನ್ ೬ರಂದು ಕ್ಲಾಗೇನ್ಫರ್ಟ್ ನ್ನು ಆಕ್ರಮಿಸಿದವು. ಪ್ಯಾರಿಸ್‌‌ನಲ್ಲಿದ್ದ ಅಲೈಡ್ ಸುಪ್ರೀಂ ಕೌನ್ಸಿಲ್‌ನ ಮಧ್ಯಸ್ಥಿಕೆಯೊಂದಿಗೆ, ಸೇನೆಯು ನಗರದಿಂದ ಹಿಂದಕ್ಕೆ ಸರಿಯಿತು. ಆದರೆ ೧೩ ಸೆಪ್ಟೆಂಬರ್ ೧೯೨೦ರವರೆಗೂ ಕಾರಿಂಥಿಯಾದ ವಿವಾದಿತ ಪ್ರದೇಶದಲ್ಲಿ ಉಳಿಯಿತು.

೧೦ ಸೆಪ್ಟೆಂಬರ್ ೧೯೧೯ರಲ್ಲಿ ಸೈಂಟ್-ಜರ್ಮೈನ್ ಒಪ್ಪಂದದಲ್ಲಿ, ಕರವಂಕೆನ್ ಪರ್ವತ ಶ್ರೇಣಿಯ ದಕ್ಷಿಣದಲ್ಲಿದ್ದ, ಸ್ಲೋವೀನ್-ಭಾಷೆಯನ್ನು ಮಾತನಾಡುವ ಎರಡು ಸಣ್ಣ ಕಾರಿಂಥಿಯನ್ ಕಣಿವೆಗಳು, ಜೆಜೆರ್ಸ್ಕೋ ಹಾಗು ಮೆಜಾ ನದಿಯ (ಮೆಜಿಸ್ಕ ಡೋಲಿನ) ಸುತ್ತಮುತ್ತಲಿನ ಕಣಿವೆ ಜೊತೆಯಲ್ಲಿ ಡ್ರಾವೋಗ್ರಡ್ ಪಟ್ಟಣವನ್ನು ಒಳಗೊಂಡಂತೆ — ಒಟ್ಟಾರೆ ೧೨೮ ಚದರ ಮೈಲಿಗಳು[೭] ಅಥವಾ 331 km2 (127.80 sq mi) — ಸರ್ಬ್ಸ್, ಕ್ರೋವೇಟ್ಸ್ ಹಾಗು ಸ್ಲೋವೀನ್ಸ್ ಪ್ರಭುತ್ವಕ್ಕೆ ಸೇರ್ಪಡೆಗೊಳಿಸಲಾಯಿತು(ಇದು ನಂತರದಲ್ಲಿ ಯುಗೋಸ್ಲಾವಿಯಾ ಪ್ರಭುತ್ವವೆಂದು ಪರಿಚಿತವಾಯಿತು): ಇಂದು ಈ ಪ್ರದೇಶಗಳು ರಿಪಬ್ಲಿಕ್ ಆಫ್ ಸ್ಲೊವೇನಿಯಾದಲ್ಲಿರುವ ಕೊರೋಸ್ಕ ದ ಭಾಗವಾಗಿವೆ, ಈ ಪ್ರದೇಶವನ್ನು ಸಾಂಪ್ರದಾಯಿಕವಾಗಿ ಕಾರಿಂಥಿಯಾ ಎಂದೂ ಸಹ ಸೂಚಿಸಲಾಗುತ್ತದೆ. ದಕ್ಷಿಣದಲ್ಲಿ ಪೊನ್ಟೆಬ್ಬದವರೆಗೂ ವಿಸ್ತರಿಸಿದ್ದ ಕನಲ್ಟಲ್(ಇಟಾಲಿಯನ್ ನಲ್ಲಿ: ವಾಲ್ ಕಾನಲೆ), ಆ ಸಮಯದಲ್ಲಿ ಜರ್ಮನ್-ಸ್ಲೋವೀನ್ ಜನಾಂಗೀಯ ಮಿಶ್ರಣವಾಗಿದ್ದ ಪ್ರದೇಶವಾಗಿತ್ತು, ಟರ್ವಿಸಿಯೋ ಗಡಿ ಪಟ್ಟಣ(German: [Tarvis] Error: {{Lang}}: text has italic markup (help)ದೊಂದಿಗೆ Slovene: [Trbiž] Error: {{Lang}}: text has italic markup (help)) ಅದರ ಪವಿತ್ರ ಯಾತ್ರಾ ಸ್ಥಳ ಮರಿಯಾ ಲುಸ್ಚಾರಿ(೧೭೨ ಚದರ ಮೈಲಿಗಳು[೭] ಅಥವಾ ೪೪೫ km²) ವನ್ನು ಇಟಲಿಗೆ ಅಧೀನಪಡಿಸಲಾಯಿತು ಹಾಗು ಉಡೈನ್ ಪ್ರಾಂತಕ್ಕೆ ಸೇರ್ಪಡೆಗೊಳಿಸಲಾಯಿತು.

ಅದೇ ಒಪ್ಪಂದದ ಪ್ರಕಾರ, ಅಲೈಡ್ ಕಮಿಷನ್ ಸೂಚಿಸಿದಂತೆ ಒಂದು ಜನಾಭಿಪ್ರಾಯ ಸಂಗ್ರಹವನ್ನು ದಕ್ಷಿಣ ಕಾರಿಂಥಿಯಾನಲ್ಲಿ ನಡೆಸಬೇಕಿತ್ತು, ಇದನ್ನು ಆಧರಿಸಿ SHS-ರಾಜ್ಯವು ಬೇಡಿಕೆಯಿಟ್ಟ ಪ್ರದೇಶವು ಆಸ್ಟ್ರಿಯಾದಲ್ಲೇ ಉಳಿಯಬೇಕೆ ಅಥವಾ ಯುಗೋಸ್ಲಾವಿಯಾಕ್ಕೆ ಸೇರಬೇಕೆ ಎಂಬುದನ್ನು ನಿರ್ಧರಿಸಬೇಕಿತ್ತು. ದಕ್ಷಿಣ ಕಾರಿಂಥಿಯಾದ ಹೆಚ್ಚಿನ ಪ್ರದೇಶಗಳನ್ನು ಎರಡು ವಲಯಗಳಾಗಿ ವಿಂಗಡಿಸಲಾಯಿತು. ಪ್ರಮುಖವಾಗಿ ಸ್ಲೋವೀನ್‌ಗಳು-ನೆಲೆಯಾಗಿದ್ದ ಪ್ರದೇಶದಲ್ಲಿ ವಲಯ Aಯನ್ನು ರಚಿಸಲಾಯಿತು(ಸರಿಸುಮಾರು ಇಂದಿನ ವೋಲ್ಕರ್ಮರ್ಕ್ಟ್ ಜಿಲ್ಲೆ, ವೋರ್ಥೆರ್ಸೀ ಸರೋವರದ ದಕ್ಷಿಣದಲ್ಲಿದ್ದ ಕ್ಲಾಗೇನ್ಫರ್ಟ್-ಲ್ಯಾಂಡ್ ಜಿಲ್ಲೆ, ಹಾಗು ವಿಲ್ಲಾಚ್-ಲ್ಯಾಂಡ್ ನ ಆಗ್ನೇಯ ಭಾಗದಲ್ಲಿರುವ ಹಾಲಿ ಜಿಲ್ಲೆ), B ವಲಯವು, ಕ್ಲಾಗೇನ್ಫರ್ಟ್ ನಗರ, ವೆಲ್ಡೆನ್ ಆಮ್ ವೋರ್ಥೆರ್ಸೀ ಹಾಗು ಜರ್ಮನ್ ಭಾಷಿಕರು ಬಹುಸಂಖ್ಯಾತರಾಗಿರುವ ಸುತ್ತಮುತ್ತಲಿನ ಹಳ್ಳಿಗಾಡು ಪ್ರದೇಶಗಳು. A ವಲಯದ ಜನರು ಯುಗೋಸ್ಲಾವಿಯಾಕ್ಕೆ ತೆರಳಲು ನಿರ್ಧರಿಸಿದ್ದರೆ, B ವಲಯದಲ್ಲಿ ಮತ್ತೊಂದು ಜನಾಭಿಪ್ರಾಯ ಸಂಗ್ರಹವನ್ನು ಮಾಡಲಾಗುತ್ತಿತ್ತು. ಅಕ್ಟೋಬರ್ ೧೦, ೧೯೨೦ರಲ್ಲಿ, A ವಲಯದಲ್ಲಿ ಕಾರಿಂಥಿಯನ್ ಸಾರ್ವಜನಿಕ ಅಭಿಪ್ರಾಯವನ್ನು ಏರ್ಪಡಿಸಲಾಗಿತ್ತು, ೬೦%ರಷ್ಟು ಜನಸಂಖ್ಯೆಯು ಆಸ್ಟ್ರಿಯಾದಲ್ಲೇ ಉಳಿಯಲು ನಿರ್ಧರಿಸಿ ಮತ ಹಾಕಿತು. ಇದರರ್ಥ ೪೦%ರಷ್ಟು ಸ್ಲೋವೀನ್-ಮಾತನಾಡುವ ಜನಸಂಖ್ಯೆಯು ಕಾರಿಂಥಿಯಾದ ವಿಭಜನೆಯ ವಿರುದ್ಧ ಮತವನ್ನು ನೀಡಿರಬೇಕು. ವಿದೇಶಿ ವೀಕ್ಷಕರಿಂದ ಜನಾಭಿಪ್ರಾಯ ಸಂಗ್ರಹದ ನಿಕಟ ಮೇಲ್ವಿಚಾರಣೆಯ ದೃಷ್ಟಿಯಿಂದ ಹಾಗು ಜನಾಭಿಪ್ರಾಯ ಸಂಗ್ರಹಕ್ಕೆ ನಾಲ್ಕು ವಾರಗಳ ಮುಂಚೆ ಆ ಪ್ರದೇಶದಲ್ಲಿ ಯುಗೊಸ್ಲಾವ್ ಸ್ವಾಧೀನದಿಂದಾಗಿ, ತೀವ್ರವಾಗಿ ನಿರಾಶೆಗೊಂಡ ಯುಗೋಸ್ಲಾವ್ ಬೆಂಬಲಿಗರು ಅಕ್ರಮಗಳ ಆರೋಪ ಮಾಡಿದರೂ ಒಟ್ಟಾರೆ ನಿರ್ಧಾರವನ್ನು ಗಣನೀಯವಾಗಿ ಬದಲಿಸಲಾಗಲಿಲ್ಲ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ನಂತರವೂ SHS-ರಾಜ್ಯ ಮತ್ತೊಮ್ಮೆ ಆ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಪ್ರಯತ್ನ ನಡೆಸಿತು, ಆದರೆ ಗ್ರೇಟ್ ಬ್ರಿಟನ್, ಫ್ರಾನ್ಸ್ ಹಾಗು ಇಟಲಿಯ ಸೇನಾಪಡೆಗಳ ಕಾರ್ಯಾಚರಣೆಗಳ ಕಾರಣದಿಂದ ಇದು ತನ್ನ ಪಡೆಗಳನ್ನು ಆಸ್ಟ್ರಿಯಾದಿಂದ ಹಿಂದಕ್ಕೆ ಕರೆಸಿಕೊಂಡಿತು, ಈ ರೀತಿಯಾಗಿ ೨೨ ನವೆಂಬರ್ ೧೯೨೦ರ ಹೊತ್ತಿಗೆ ಕಾರಿಂಥಿಯಾದ ಸ್ಟೇಟ್ ಡಯಟ್(ರಾಜ್ಯ ಶಾಸಕಾಂಗ) ಅಂತಿಮವಾಗಿ ಸಂಪೂರ್ಣ ರಾಜ್ಯದ ಮೇಲೆ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಲು ಸಾಧ್ಯವಾಯಿತು.[೮]

೧೯೨೦ರಿಂದ ಇಂದಿನವರೆಗೆ[ಬದಲಾಯಿಸಿ]

ಮೂಲತಃ ಒಂದು ರೈತಾಪಿ ರಾಷ್ಟ್ರವಾದ ಕಾರಿಂಥಿಯಾ, ೧೯೨೦ರ ದಶಕದಲ್ಲಿ ಗ್ರೋಸ್ಸ್ ಗ್ಲೋಕ್ನರ್ ಹೈ ಆಲ್ಪೈನ್ ರಸ್ತೆ ಹಾಗು ಕ್ಲಾಗೇನ್ಫರ್ಟ್ ವಿಮಾನ ನಿಲ್ದಾಣ ಹಾಗು ಆಸ್ಟ್ರಿಯನ್ ಆಲ್ಪೈನ್ ಕ್ಲಬ್ ಮೂಲಕ ಆಲ್ಪ್ಸ್ ಗೆ ಮಾರ್ಗವನ್ನು ಕಲ್ಪಿಸುವುದರೊಂದಿಗೆ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ ಪ್ರಯತ್ನ ಮಾಡಿತು. ಆದಾಗ್ಯೂ, ರಾಷ್ಟ್ರವು ೧೯೩೦ರ ಸುಮಾರಿಗೆ ಮಹಾ ಹಿಂಜರಿತ ದಿಂದ ತೀವ್ರವಾದ ಸಂಕಷ್ಟಕ್ಕೆ ಗುರಿಯಾಯಿತು. ಇದು ಆಸ್ಟ್ರಿಯಾದ ರಾಜಕೀಯ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಉಗ್ರಗಾಮಿತ್ವದೆಡೆಗೆ ತಳ್ಳಿತು. ಈ ವಿದ್ಯಮಾನವು ಆಸ್ಟ್ರೋಫ್ಯಾಸಿಸಂ ನ ವರ್ಷಗಳಲ್ಲಿ ಮೊದಲಿಗೆ ಹಾಗು ನಂತರ೧೯೩೮ರಲ್ಲಿ ನಾಜಿ ಜರ್ಮನಿ ಆಸ್ಟ್ರಿಯವನ್ನು ಸೇರಿಸಿಕೊಳ್ಳುವ ಮೂಲಕ(ಆನ್ಸ್ಚ್‌ಲಸ್ ) ಉಚ್ಛ್ರಾಯ ಸ್ಥಿತಿಯನ್ನು ತಲುಪಿತು. ಅದೇ ಸಮಯದಲ್ಲಿ ನಾಜಿ ಪಕ್ಷವು ಕಾರಿಂಥಿಯಾದ ಪ್ರತಿ ಪ್ರದೇಶದಲ್ಲೂ ತನ್ನ ಅಧಿಕಾರವನ್ನು ಸ್ಥಾಪಿಸಿತು. ಇದು ಪೂರ್ವ ಟೈರೋಲ್ಜತೆ ರೆಯಿಚ್‌ಗಾ ಸೃಷ್ಟಿಸಿತು. ಫ್ರಾಂಜ್ ಕುಟ್ಸ್ಚೇರ, ಹುಬರ್ಟ್ ಕ್ಲುಸ್ನರ್ ಹಾಗು ಫ್ರೆಡ್ರಿಕ್ ರೈನರ್ ರಂತಹ ನಾಜಿ ನಾಯಕರುಗಳು, ಗೌಲೇಟರ್ ಹಾಗು ರೆಯಿಚ್ಸ್ ಸ್ಟಾಟ್ಟ್ ಹಾಲ್ಟರ್ ನ ಅಧಿಕಾರವನ್ನು ವಹಿಸಿಕೊಂಡರು.

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಈ ಪ್ರಾಂತದ ದಕ್ಷಿಣದ ಪ್ರದೇಶಗಳಲ್ಲಿ ಸ್ಲೋವೀನ್ ಪಾರ್ಟಿಸನ್ ಪ್ರತಿರೋಧವು ಸಕ್ರಿಯವಾಗಿದ್ದು, ೩೦೦೦ ಸಶಸ್ತ್ರ ಜನರನ್ನು ಮುಟ್ಟಿದ್ದರು. ಕ್ಲಾಗೇನ್‌ಫರ್ಟ್ ಮತ್ತು ವಿಲ್ಲಾಚ್ ನಗರಗಳು ವಾಯುದಾಳಿಗಳಿಗೆ ಗುರಿಯಾಯಿತು. ಆದರೆ ಒಕ್ಕೂಟದ ಪಡೆಗಳು ೧೯೪೫ ರ ಮೇ ೮ ಕ್ಕೆ ಮುಂಚೆ ಕ್ಯಾರಿಂಥಿಯವನ್ನು ಮುಟ್ಟಲಿಲ್ಲ. ಯುದ್ಧದ ಕೊನೆಯಲ್ಲಿ, ಕ್ಯಾರಿಂಥಿಯಾಗೆ ವಿಸ್ತರಿಸಿದ ನಾಜಿ ರಾಷ್ಟ್ರೀಯ ಹಂಗಾಮಿ ಕೋಟೆ (ಆಲ್ಪೆನ್‌ಫೆಸ್ಟಂಗ್ )ಯ ಭಾಗವಾಗಲು ಗಲೈಟರ್ ರೈನರ್ ನಾಜಿ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರು. ಈ ಪ್ರಯತ್ನಗಳು ವಿಫಲವಾದವು ಮತ್ತು ರೈನರ್ ನಿಯಂತ್ರಣದಲ್ಲಿರುವ ಪಡೆಗಳು ಬ್ರಿಟಿಷ್ ಸೇನೆಯ ಪಡೆಗಳಿಗೆ ಶರಣಾದವು. ಮತ್ತೊಮ್ಮೆ ಒಂದನೇ ವಿಶ್ವ ಯುದ್ಧದ ಕೊನೆಯಲ್ಲಿ, ಯುಗೋಸ್ಲಾವ್ ಪಡೆಗಳು ಕ್ಯಾರಿಂಥಿಯದ ಭಾಗಗಳನ್ನು ಕ್ಲಾಗನ್‌ಫರ್ಟ್ ರಾಜಧಾನಿ ನಗರ ಸೇರಿದಂತೆ ಆಕ್ರಮಿಸಿದವು. ಆದರೆ ಸೋವಿಯಟ್ ಒಕ್ಕೂಟದ ಅನುಮತಿಯೊಂದಿಗೆ ಬ್ರಿಟಿಷ್ ಪಡೆಗಳ ಬಲಪ್ರಯೋಗದಿಂದ ಅವು ಹಿಂದೆಸರಿಯಬೇಕಾಯಿತು.

ಕ್ಯಾರಿಂಥಿಯಾ, ಪೂರ್ವ ಟೈರಾಲ್ ಮತ್ತು ಸ್ಟಿರಿಯ ನಂತರ ಒಕ್ಕೂಟ ಆಡಳಿತದ ಆಸ್ಟ್ರಿಯದ UK ಆಕ್ರಮಿತ ವಲಯವನ್ನು ರಚಿಸಿತು. ಈ ಪ್ರದೇಶವು ೧೯೪೫ರಲ್ಲಿ ಜರ್ಮನ್ ಒಕ್ಕೂಟದ ಕೊಸ್ಯಾಕರು ರೆಡ್ ಆರ್ಮಿಗೆ ವರ್ಗಾವಣೆಯಾಗುವುದಕ್ಕೆ ಸಾಕ್ಷಿಯಾಯಿತು. ಆಸ್ಟ್ರಿಯ ರಾಜ್ಯದ ಒಪ್ಪಂದದ ಮೂಲಕ ಒಕ್ಕೂಟದ ಸ್ವಾಧೀನವನ್ನು ೧೯೫೫ರಲ್ಲಿ ರದ್ದು ಮಾಡಲಾಯಿತು ಮತ್ತು ಇದು ಆಸ್ಟ್ರಿಯದ ಸಾರ್ವಬೌಮತ್ವನ್ನು ಮರುಸ್ಥಾಪನೆ ಮಾಡಿತು. ಜರ್ಮನ್ ಮತ್ತು ಸ್ಲೋವೀನ್ ಭಾಷೆ ಮಾತನಾಡುವ ಕ್ಯಾರಿಂಥಿಯರನ್ನರ ನಡುವೆ ಸಂಬಂಧಗಳು ಸಮಸ್ಯಾತ್ಮಕವಾಗಿತ್ತು. ಆಸ್ಟ್ರಿಯ ರಾಜ್ಯ ಒಪ್ಪಂದದ ೭ನೇ ವಿಧಿಯಲ್ಲಿ ಖಾತರಿಮಾಡಿರುವ ಅಲ್ಪಸಂಖ್ಯಾತ ರಕ್ಷಣೆ ಹಕ್ಕುಗಳ ಅನುಷ್ಠಾನದ ಬಗ್ಗೆ ವೈವಿಧ್ಯದ ದೃಷ್ಟಿಕೋನಗಳು ಕಳೆದ ಐವತ್ತು ವರ್ಷಗಳಲ್ಲಿ ಎರಡು ಬಣಗಳ ನಡುವೆ ಅಸಂಖ್ಯಾತ ಉದ್ವೇಗಗಳನ್ನು ಸೃಷ್ಟಿಸಿದೆ.

ಆಡಳಿತಾತ್ಮಕ ವಿಭಾಗಗಳು[ಬದಲಾಯಿಸಿ]

ರಾಜ್ಯವು ಎಂಟು ಗ್ರಾಮೀಣ ಮತ್ತು ಎರಡು ನಗರ ಜಿಲ್ಲೆಗಳಾಗಿ(ಬೆಜಿರ್ಕೆ ) ವಿಭಾಗವಾಗಿದೆ. ನಂತರದ್ದು ಕ್ಲಾಗನ್‌ಫರ್ಟ್ ಮತ್ತು ವಿಲ್ಲಾಚ್‌ನ ಕಾನೂನುಸಮ್ಮತ ನಗರಗಳು ಸ್ಟಾಟ್ಯುಟರ್‌ಸ್ಟಾಡೆ . ೧೩೨ ಪೌರಸಂಸ್ಥೆಗಳಿದ್ದು, ಅವುಗಳಲ್ಲಿ ೧೭ ನ್ನು ಪಟ್ಟಣಗಳಾಗಿ ಸೇರಿಸಲಾಗಿದೆ ಮತ್ತು ೪೦ ನ್ನು ಮಾರ್ಕ್‌ಟಗೆಮೇಂಡನ್ ಸ್ಥಾನಮಾನದಲ್ಲಿ ಕಡಿಮೆ ದರ್ಜೆಯ ಮಾರುಕಟ್ಟೆ ಪಟ್ಟಣಗಳಾಗಿ ಸೇರಿಸಲಾಗಿದೆ.

ಕ್ಯಾರಿಂಥಿಯಾದ ಜಿಲ್ಲೆಗಳು

ಶಾಸನಬದ್ಧ ನಗರಗಳು[ಬದಲಾಯಿಸಿ]

 • ಕ್ಲೆಗೆನ್‌ಫರ್ಟ್ (ಪರವಾನಗಿ ಪ್ಲೇಟ್ ಕೋಡ್: K)
 • ವಿಲ್ಲಾಚ್ (VI)

ಗ್ರಾಮೀಣ ಜಿಲ್ಲೆಗಳು[ಬದಲಾಯಿಸಿ]

 • ಸ್ಪಿಟ್ಟಲ್ ಎನ್ ಡರ್ ಡ್ರಾ/೦} (SP)
 • ಹರ್ಮಾಗೋರ್ (HE)
 • ವಿಲ್ಲಾಚ್-ಲ್ಯಾಂಡ್ (VL)
 • ಫೆಲ್ಡ್‌ಕಿರ್ಚೆನ್ (FE)
 • ಸೇಂಟ್ ವೇಟ್ ಎನ್ ಡೆರ್ ಗ್ಲಾನ್ (SV)
 • ಕ್ಲಾಗನ್‌ಫರ್ಟ್-ಲ್ಯಾಂಡ್ (KL)
 • ವೋಲ್ಕರ್‌ಮಾರ್ಕ್ (VK)
 • ವೂಲ್ಫ್ಸ್‌ಬರ್ಗ್ (WO)

ರಾಜಕೀಯ[ಬದಲಾಯಿಸಿ]

ರಾಜ್ಯ ವಿಧಾನಸಭೆಯು ಕಾರ್ನ್‌ಟರ್ ಲ್ಯಾಂಡ್‌ಟ್ಯಾಗ್ (ಕ್ಯಾರಿಂಥಿಯಾನ್ ಸ್ಟೇಟ್ ಡೈಟ್) ಏಕಸಭೆಯ ಶಾಸಕಾಂಗವಾಗಿದ್ದು, ಅದು ರಾಜ್ಯದ ಗವರ್ನರ್ ಅವರನ್ನು ಕೂಡ ಆಯ್ಕೆ ಮಾಡುತ್ತದೆ. ಅವರ ಪ್ರಾಚೀನ ಹೆಸರು ಲ್ಯಾಂಡೇಶ್‌ಆಪ್ಟ್‌ಮಾನ್ ("ರಾಜ್ಯದ ಕ್ಯಾಪ್ಟನ್") ಸಂಪುಟದ ಇತರ ಸದಸ್ಯರನ್ನು ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆ ಅನ್ವಯ ಆಯ್ಕೆ ಮಾಡಲಾಗುತ್ತದೆ. ಲ್ಯಾಂಡ್‌ಟಾಗ್‌ ಗೆ ಆಯ್ಕೆಯಾದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಂಖ್ಯೆಯನ್ನು ಇದು ಆಧರಿಸಿದೆ. ೨೦೦೯ನೇ ಚುನಾವಣೆಗಳ ಫಲಿತಾಂಶಗಳು ಅಲೈಯನ್ಸ್ ಫಾರ್ ದಿ ಫ್ಯೂಚರ್ ಆಫ್ ಆಸ್ಟ್ರಿಯ(BZÖ )ಕ್ಕೆ ೧೭ಸ್ಥಾನಗಳ ಪೈಕಿ ೪೪.೯%, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಆಸ್ಟ್ರಿಯದ(SPÖ ), ೧೧ ಸ್ಥಾನಗಳ ಪೈಕಿ ೨೮.೮%, ಆಸ್ಟ್ರಿಯನ್ ಪೀಪಲ್ಸ್ ಪಾರ್ಟಿಗೆ (ÖVP ) ೬ ಸ್ಥಾನಗಳ ಪೈಕಿ ೧೬.೮% ಮತ್ತು ಗ್ರೀನ್ಸ್‌ಗೆ ೨ ಸ್ಥಾನಗಳಲ್ಲಿ ೫.೧%ಸ್ಥಾನಗಳು ಸಿಕ್ಕಿವೆ. ನ್ಯಾಷನಲ್ ಲಿಬರಲ್ BZÖ ಬಹುತ್ವವು ಎಲ್ಲ ಆಸ್ಟ್ರಿಯನ್ ರಾಜ್ಯಗಳ ಪೈಕಿ ವಿಶಿಷ್ಠವಾಗಿದ್ದು, ಸಂಪ್ರದಾಯವಾದಿ ಪಾದ್ರಿ ತತ್ತ್ವದ ÖVP ಯ ಫಲಿತಾಂಶಗಳು ಗಮನಾರ್ಹವಾಗಿ ದುರ್ಬಲವಾಗಿತ್ತು. ೨೦೦೫ರ ಏಪ್ರಿಲ್‌ನಲ್ಲಿ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯ(FPÖ )ದಿಂದ BZÖ ಹೊರಹೊಮ್ಮಿತು. ಒಬ್ಬರನ್ನು ಹೊರತುಪಡಿಸಿ FPÖ ನ ಎಲ್ಲ MP ಗಳು ಹೊಸ ಪಕ್ಷಕ್ಕೆ ಸೇರಿದರು.

BZÖ ಸಂಸ್ಥಾಪಕರಲ್ಲಿ ಒಬ್ಬರು ಮಾಜಿ ಲ್ಯಾಂಡೇಶಾಪ್ಟ್‌ ಮನ್ (ರಾಜ್ಯ ನಾಯಕ) ಆಗಿರುವ ಸುದೀರ್ಘ ಕಾಲದ FPÖ ನಾಯಕ ಜಾರ್ಗ್ ಹೈಡರ್. ವಿವಾದಾತ್ಮಕ ವ್ಯಕ್ತಿತ್ವದ ಹೈಡರ್, ೧೯೮೯ರಲ್ಲಿ ಕ್ಯಾರಿಂಥಿಯಾನ್ ಗವರ್ನರ್ ಆಗಿ ಆಯ್ಕೆಯಾಗಿದ್ದರು. ಆದರೆ ರಾಜ್ಯ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಕಾಲದಲ್ಲಿ ಥರ್ಡ್ ರೇಕ್‌(ನಾಜಿ ಜರ್ಮನಿ)ಯ ಸೂಕ್ತ ಉದ್ಯೋಗ ನೀತಿಯ ಬಗ್ಗೆ ಪ್ರತಿಕ್ರಿಯೆಗಳ ನಂತರ ಎರಡು ವರ್ಷಗಳ ನಂತರ ಬಲವಂತವಾಗಿ ರಾಜೀನಾಮೆ ನೀಡಿದರು. ಆದಾಗ್ಯೂ, ಅವರು ೧೯೯೯ ಮತ್ತು ೨೦೦೪ರಲ್ಲಿ ಲ್ಯಾಂಡ್‌ಶಾಪ್ಟ್‌ಮನ್(ರಾಜ್ಯ ನಾಯಕ) ಆಗಿ ಪುನಃ ಆಯ್ಕೆಯಾದರು. ಈ ಬಾರಿ SPÖ ಮತ್ತು ÖVP ಯ ಪ್ರತಿನಿಧಿಗಳ ಅನುಮತಿಯೊಂದಿಗೆ ಆಯ್ಕೆಯಾದರು. ಆಸ್ಟ್ರಿಯದ ಸಂವಿಧಾನ ಖಾತರಿ ನೀಡಿದ ಕ್ಯಾರಿಂಥಿಯನ್ ಸ್ಲೋವೆನೀಸ್‌ನ ಅಲ್ಪಸಂಖ್ಯಾತ ಹಕ್ಕುಗಳ ಪುನರಾವರ್ತಿತ ಉಪೇಕ್ಷೆಗಾಗಿ ಹೈಡರ್ ಟೀಕೆಗೆ ಗುರಿಯಾದರು. ಅವರು ೨೦೦೮ರಲ್ಲಿ ಕಾರ್ ಅಪಘಾತದಲ್ಲಿ ನಿಧನರಾದರು ಮತ್ತು ಅವರ ಪಕ್ಷದ ಸಹಯೋಗಿ ಗೆರ್‌ಹಾರ್ಡ್ ಡಾರ್ಫ್‌ಲರ್ ಅಧಿಕಾರಕ್ಕೆ ಬಂದರು. ಹಿಂದಿನ ಚುನಾವಣೆಯಲ್ಲಿ BZÖ ತನ್ನ ಮೃತ ಸಂಸ್ಥಾಪಕನನ್ನು ಬಲವಾಗಿ ಉಲ್ಲೇಖಿಸಿ, ತನ್ನ ಮತಗಳ ಪಾಲನ್ನು ಉಳಿಸಿಕೊಳ್ಳಲು ಅಥವಾ ವಿಸ್ತರಿಸಲು ಯಶಸ್ವಿಯಾಯಿತು. ಆದರೆ FPÖ ಲ್ಯಾಂಡ್‌ಟ್ಯಾಗ್ ‌(ಪ್ರಾತಿನಿಧಿಕ ಅಸೆಂಬ್ಲಿ)ಗೆ ಪ್ರವೇಶಿಸಲು ವಿಫಲವಾಯಿತು. ೨೦೦೯ರ ಡಿಸೆಂಬರ್ ೧೬ರಂದು ಕ್ಯಾರಿಂಥಿಯಾನ್ BZÖಶಾಖೆಯ ಬಹುತೇಕ ಮಂದಿ ದಿ ಫ್ರೀಡೊಮೈಟ್ಸ್ ಇನ್ ಕ್ಯಾರಿಂಥಿಯಾ ರಾಜಕೀಯ ಪಕ್ಷ (FPK )ವನ್ನು ರಚಿಸಿದರು ಮತ್ತು FPÖ ಸಹಕಾರಕ್ಕಾಗಿ ಕೋರಿದರು.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಗುರ್ಕ್ ಕೆಥೆಡ್ರಲ್

ಪ್ರಮುಖ ಸ್ಥಳಗಳಲ್ಲಿ ಕ್ಲಾಗೆನ್‌ಫರ್ಟ್ ಮತ್ತು ವಿಲ್ಲಾಚ್ ಮತ್ತು ಮಧ್ಯಯುಗೀನ ಪಟ್ಟಣಗಳಾದ ಫ್ರೈಸಾಕ್ ಅಥವಾ ಜಿಮಂಡ್ ಸೇರಿವೆ. ಕ್ಯಾರಿಂಥಿಯ ಝಾಲ್‌ಫೆಲ್ಡ್ ಪ್ರಸ್ಥಭೂಮಿಯ ರೋಮನೆಸ್ಕ್ ಶೈಲಿಯ ಗುರ್ಕ್ ಪ್ರಧಾನ ಇಗರ್ಜಿ ಅಥವಾ ಮಾರಿಯ ಸಾಲ್, ಸೇಂಟ್ ಪಾಲ್‌ನ ಆಬಿಗಳು ಓಸಿಯಾಕ್, ಮಿಲ್‌ಸ್ಟಾಟ್ ಮತ್ತು ವಿಕ್ಟ್ರಿಂಗ್ ಜತೆಗೆ ದೊಡ್ಡ ಪ್ರಮಾಣದ ದುರ್ಗಗಳು ಮತ್ತು ಅರಮನೆಗಳಾದ ಹೋಕೋಸ್ಟರ್ವಿಟ್ಜ್, ಗ್ರಿಫಿನ್ ಅಥವಾ ಪೋರ್ಸಿಯಮುಂತಾದ ಅಸಂಖ್ಯಾತ ಧಾರ್ಮಿಕ ಕೇಂದ್ರಗಳು ಮತ್ತು ಚರ್ಚ್‌ಗಳನ್ನು ಒಳಗೊಂಡಿದೆ.

ರಮಣೀಯ ದೃಶ್ಯಗಳಲ್ಲಿ ಮುಖ್ಯ ಸ್ನಾನದ ಸರೋವರಗಳಾದ ವೋರ್ಥರ್‌ಸೀ, ಮಿಲ್‌ಸ್ಟಾಟರ್ ಸೀ,ಓಸ್ಸಿಯಾಚರ್ ಸೀ ಮತ್ತು ಫೇಕರ್ ಸೀ ಜತೆಗೆ ಸಣ್ಣ ಸರೋವರಗಳು ಮತ್ತು ಕೊಳಗಳ ವೈವಿಧ್ಯಗಳನ್ನು ಒಳಗೊಂಡಿವೆ. ಚಳಿಗಾಲದಲ್ಲಿ ಕ್ಯಾರಿಂಥಿಯ ಸ್ಕೀಯಿಂಗ್ ಮುಂತಾದ ಕ್ರೀಡೆಗಳಿಗೆ ವಿಹಾರಧಾಮಗಳಾದ ಹೆರ್ಮಾಗರ್ ಬಳಿಯ ನ್ಯಾಸ್‌ಫೆಲ್ಡ್,ಗೆರ್ಲಿಟ್‌ಜೆನ್ಪರ್ವತ, ಬ್ಯಾಡ್ ಕ್ಲೈನ್‌ಕಿರ್ಚೆಂ, ಫ್ಲಾಟಾಕ್ ಮತ್ತು ಆಸ್ಟ್ರಿಯದ ಉನ್ನತ ಪರ್ವತದ ಹೈಲ್ಜೆನ್‌ಬ್ಲಟ್ , ಗ್ರಾಸ್‌ಗ್ಲಾಕ್‌ನರ್ ಜತೆಗೆ ಹೋಹೆ ಟಾರೆನ್ ಮತ್ತು ನಾಕ್ ಪರ್ವತಗಳು ಮತ್ತು ಎಲ್ಲ ರೀತಿಯ ಆಲ್ಪೈನ್ ಕ್ರೀಡೆಗಳಿಗೆ ರಾಷ್ಟ್ರೀಯ ಉದ್ಯಾನಗಳನ್ನು ಮತ್ತು ಪರ್ವತಾರೋಹಣವನ್ನು ಒಳಗೊಂಡಿದೆ.

ಗಣ್ಯ ವ್ಯಕ್ತಿಗಳು[ಬದಲಾಯಿಸಿ]

ಕ್ಯಾರಿಂಥಿಯದಲ್ಲಿ ಜನಿಸಿದವರು[ಬದಲಾಯಿಸಿ]

 • ಆರ್ನಫ್ ಆಫ್ ಕ್ಯಾರಿಂಥಿಯ, ಪವಿತ್ರ ರೋಮನ್ ಚಕ್ರವರ್ತಿ,೮೫೦ರಲ್ಲಿ ಜನಿಸಿದರು. ಮೂಸ್‌ಬರ್ಗ್‌ನಲ್ಲಿ ಬೆಳೆದರು ೮೯೯ ಡಿಸೆಂಬರ್ ೮ ರಂದು ರೀಗೆನ್ಸ್‌ಬರ್ಗ್‌ನಲ್ಲಿ ಮೃತರಾದರು.
 • ಪೋಪ್ ಗ್ರೆಗರಿ V,ಕ್ಯಾರಿಂಥಿಯದ ನಿ ಬ್ರನ್ ಅಥವಾ ಬ್ರೂನೊ. ೯೭೨ರಲ್ಲಿ ಜನಿಸಿದರು. ಜನಿಸಿದ ಸ್ಥಳ ಅಜ್ಞಾತ, ರೋಮ್‌ನಲ್ಲಿ ೯೯೯ ಫೆಬ್ರವರಿ ೧೮ರಂದು ನಿಧನರಾದರು.
 • ಸೇಂಟ್ ಹೆಮ್ಮಾ ಆಫ್ ಗುರ್ಕ್,ಬಹುಶಃ ಫ್ರೈಸಾಕ್‌ನ ಜೆಲ್ಟ್‌ಸ್ಚಾಕ್‌ನಲ್ಲಿ ೯೮೦ರಲ್ಲಿ ಜನಿಸಿದರು. ಗುರ್ಕ್‌‍ನಲ್ಲಿ ೧೦೪೫ರಲ್ಲಿ ಜೂನ್‌ ೨೭ರಂದು ನಿಧನರಾದರು.
 • ಹೈನ್‌ರಿಕ್

ವಾನ್ ಡೆಂ ಟುರೆಲಿನ್, ಪ್ರಣಯಕವಿ ಮತ್ತು ಮಹಾಕಾವ್ಯದ ಕವಿ, ೧೩ನೇ ಶತಮಾನದ ಪೂರ್ವದಲ್ಲಿ, ಬಹುಶಃ ಸಾಂಕ್ಟ್ ವೇಟ್ ಆನ್ ಡರ್ ಗ್ಲಾನ್ನಲ್ಲಿ ಜನಿಸಿದರು.

 • ವುಲ್ರಿಕ್ ವಾನ್ ಡೆಂ ಟರ್ಲಿನ್, ೧೩ನೇ ಶತಮಾನದ ಮಹಾಕಾವ್ಯದ ಕವಿ, ಬಹುಶಃ ಸೇಂಟ್ ವೇಟ್ ಎನ್ ಡರ್ ಗ್ಲಾನ್‌ನಲ್ಲಿ ಜನಿಸಿದರು.
 • ಹೆನ್ರಿ ಆಫ್ ಕ್ಯಾರಿಂಥಿಯಾ, ಬೊಹೆಮಿಯರಾಜ, (ಜಿಂಡ್ರಿಕ್ ಕೊರುಟ್ಯಾನ್ಸ್‌ಕಿ) ಮತ್ತು ಪೋಲೆಂಡ್ ಹಕ್ಕುದಾರಿಯ ರಾಜ. ಸುಮಾರು ೧೨೬೫ರಲ್ಲಿ ಜನಿಸಿದರು, ಏಪ್ರಿಲ್ ೨, ೧೩೩೫ರಂದು ಕ್ಯಾಸಲ್ ಟೈರಾಲ್‌ನಲ್ಲಿ ನಿಧನರಾದರು.
 • ಜೋಸೆಫ್ ಸ್ಟೀಫಾನ್, ವೈದ್ಯ, ೧೮೩೫ರ ಮಾರ್ಚ್ ೨೪ರಂದು ಕ್ಲೆಗೆನ್‌ಫರ್ಟ್‌ ಸಮೀಪ ಜನಿಸಿದರು. ವಿಯೆನ್ನಾದಲ್ಲಿ ೧೮೯೩ರ ಜನವರಿ ೭ರಂದು ನಿಧನರಾದರು.
 • ರಾಬರ್ಟ್ ಮುಸಿಲ್, ಲೇಖಕ, ೧೮೮೦, ನವೆಂಬರ್ ೬ ರಂದು ಕ್ಲಾಗನ್‌ಫರ್ಟ್‌ನಲ್ಲಿ ಜನಿಸಿದರು, ಏಪ್ರಿಲ್ ೧೫, ೧೯೪೨ರಂದು ಜಿನೀವಾದಲ್ಲಿ ನಿಧನರಾದರು.
 • ಆಂಟನ್ ವೈಗೆಲೆ, ವರ್ಣಚಿತ್ರ ಕಲಾವಿದ, ಫೆಬ್ರವರಿ ೨೩, ೧೮೮೭ರಂದು ನಾಶ್ಚ್ ಇಮ್ ಗೈಲ್‌ಟಾಲ್‌ನಲ್ಲಿ ಜನಿಸಿದರು. ಡಿಸೆಂಬರ್ ೧೭, ೧೯೪೪ರಂದು ನಾಶ್ಚ್ ಇಮ್ ಗೈಲ್‌ಟಾಲ್‌ನಲ್ಲಿ ನಿಧನರಾದರು.
 • ಹರ್ಬರ್ಟ್ ಬೋಯಿಕಲ್, ವರ್ಣಚಿತ್ರ ಕಲಾವಿದ , ಜೂನ್ ೩, ೧೮೯೪ರಂದು ಕ್ಲಾಗನ್‌ಫರ್ಟ್‌ನಲ್ಲಿ ಜನಿಸಿದರು , ಜನವರಿ ೨೦, ೧೯೬೬ರಂದು ವಿಯೆನ್ನಾದಲ್ಲಿ ನಿಧನರಾದರು.
 • ರಡೋಲ್ಫ್ ಕ್ಯಾಟ್‌ನಿಗ್, ಸಂಗೀತರಚನಕಾರ, ಏಪ್ರಿಲ್ ೯, ೧೮೯೫ ರಂದು ಟ್ರೆಫೆನ್‌ನಲ್ಲಿ ಜನಿಸಿದರು. ೧೯೫೫ರ ಸೆಪ್ಟೆಂಬರ್ ೨ರಂದು ವಿಯೆನ್ನಾದಲ್ಲಿ ನಿಧನರಾದರು.
 • ಜೋಸೆಫ್ ಕ್ಲಾಸ್, ರಾಜಕಾರಣಿ,ಆಗಸ್ಟ್ ೧೫, ೧೯೧೦ರಂದು ಕೋಟ್‌ಶ್ಚಾ-ಮಾವ್‌ಥೇನ್‌ನಲ್ಲಿ ಜನಿಸಿದರು. ಜುಲೈ ೨೫, ೨೦೦೧ರಂದು ವಿಯೆನ್ನಾದಲ್ಲಿ ನಿಧನರಾದರು.
 • ಹೈನ್ರಿಕ್ ಹಾರರ್, ಪರ್ವತಾರೋಹಿ ಮತ್ತು ಜನಾಂಗ ವಿವರಣೆಕಾರ, ೧೯೧೨ರ ಜುಲೈ ೬ರಂದು ಹಟ್ಟೆನ್‌ಬರ್ಗ್, ಒಬೆರ್‌ಗಾಸನ್‌ನಲ್ಲಿ ಜನಿಸಿದರು. ಫ್ರೈಸಾಕ್‌ನಲ್ಲಿ ೨೦೦೬ರ ಜನವರಿ ೭ರಂದು ನಿಧನರಾದರು.
 • ಕ್ರಿಶ್ಚೈನ್ ಲಾವಂಟ್,ಕವಿ, ಜುಲೈ ೪, ೧೯೧೫ರಂದು ವೂಲ್ಫ್‌ಬರ್ಗ್‌ನ ಗ್ರೊಬೆಡ್ಲಿಂಗ್‌ನಲ್ಲಿ ಜನಿಸಿದರು.೧೯೭೩ರ ಜೂನ್ ೭ರಂದು ವೂಲ್ಫ್‌ಬರ್ಗ್‌ನಲ್ಲಿ ನಿಧನರಾದರು.
 • ಮಾರಿಯ ಲಾಸ್‌ನಿಗ್, ವರ್ಣಚಿತ್ರ ಕಲಾವಿದ, ೧೯೧೯ರ ಸೆಪ್ಟೆಂಬರ್ ೯ರಂದು ಕ್ಯಾಪಲ್ ಎಮ್ ಕ್ರಾಫ್‌ಫೆಲ್ಡ್ನಲ್ಲಿ ಜನಿಸಿದರು.
 • ಪಾಲ್ ವಾಟ್ಜಲ್‌ವಿಕ್, ಮನಃಶಾಸ್ತ್ರಜ್ಞ, ಜುಲೈ ೨೫, ೧೯೨೧ರಂದು ವಿಲ್ಲಾಚ್‌‌ನಲ್ಲಿ ಜನಿಸಿದರು.ಮಾರ್ಚ್ ೩೧, ೨೦೦೭ರಂದು ಪ್ಯಾಲೊ ಆಲ್ಟೊನಲ್ಲಿ ನಿಧನರಾದರು.
 • ಫೆಲಿಕ್ಸ್ ಎರ್ಮಾಕೋರಾ, ಅಂತಾರಾಷ್ಟ್ರೀಯ ಕಾನೂನಿನಲ್ಲಿ ತಜ್ಞ, ೧೯೨೩ರ ಅಕ್ಟೋಬರ್ ೧೩ರಂದು ಕ್ಲಾಗನ್‌ಫರ್ಟ್‌ನಲ್ಲಿ ಜನಿಸಿದರು. ೧೯೯೫ ಫೆಬ್ರವರಿ ೨೪ರಂದು ವಿಯೆನ್ನಾದಲ್ಲಿ ನಿಧನರಾದರು.
 • ಇಂಗೆಬಾರ್ಗ್ ಬಾಚ್‌ಮನ್,ಕವಿ ಮತ್ತು ಲೇಖಕ, ಜೂನ್ ೨೫, ೧೯೨೬ರಂದು ಕ್ಲಾಗನ್‌ಫರ್ಟ್‌ನಲ್ಲಿ ಜನಿಸಿದರು. ಅಕ್ಟೋಬರ್ ೧೭, ೧೯೭೩ರಂದು ರೋಮ್‌ನಲ್ಲಿ ನಿಧನರಾದರು.
 • ಗೆರ್‌ಹಾರ್ಡ್ ಲ್ಯಾಂಪರ್ಸ್‌ಬರ್ಗ್, ಗೀತರಚನೆಕಾರ, ಹೆರ್ಮಾಗರ್‌ನಲ್ಲಿ ೧೯೨೮ರ ಜುಲೈ ೫ರಂದು ಜನಿಸಿದರು. ಮೇ ೨೯, ೨೦೦೨ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ನಿಧನರಾದರು.
 • ಗುಂಥುರ್ ಡೊಮೆನಿಗ್, ವಾಸ್ತುಶಿಲ್ಪಿ, ಜುಲೈ ೬, ೧೯೩೪ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಉಡೊ ಜರ್ಗನ್ಸ್, ಗಾಯಕ ಮತ್ತು ಗೀತರಚನೆಕಾರ, ಸೆಪ್ಟೆಂಬರ್ ೩೦, ೧೯೩೪, ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಕಿಕಿ ಕೊಗೆಲ್‌ನಿಕ್, ವರ್ಣಚಿತ್ರ ಕಲಾವಿದ , ಜನವರಿ ೨೨, ೧೯೩೫ರಂದು ಬ್ಲೈಬರ್ಗ್‌ನಲ್ಲಿ ಜನಿಸಿದರು. ಫೆಬ್ರವರಿ ೧, ೧೯೯೭ರಂದು ವಿಯೆನ್ನಾದಲ್ಲಿ ನಿಧನರಾದರು.
 • ಬ್ರೂನೊ ಗಿರೊನ್ಕೊಲಿ,ಶಿಲ್ಪಿ, ಸೆಪ್ಟೆಂಬರ್ ೨೭, ೧೯೩೬ರಂದು ವಿಲ್ಲಾಚ್‌ನಲ್ಲಿ ಜನಿಸಿದರು.
 • ಎಂಗೆಲ್‌ಬರ್ಟ್ ಒಬರ್‌ನಾಸ್ಟರರ್, ಲೇಖಕ, ಡಿಸೆಂಬರ್ ೨೮, ೧೯೩೬ರಂದುಲೆಸಾಕ್ಟಲ್‌ ಸಾಂಕ್ಟ್ ಲಾರೆಂಜನ್‌ನಲ್ಲಿ ಜನಿಸಿದರು.
 • ಡಾಗ್ಮರ್ ಕೋಲರ್, ನಟಿ ಮತ್ತು ಗಾಯಕಿ, ಆಗಸ್ಟ್ ೨೬, ೧೯೩೯ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಪೀಟರ್ ಹ್ಯಾಂಡ್ಕೆ, ನಾಟಕಕಾರ, ಲೇಖಕ ಡಿಸೆಂಬರ್ ೬, ೧೯೪೨ರಂದು ಗ್ರಿಫೆನ್‌ನಲ್ಲಿ ಜನಿಸಿದರು.
 • ಆರ್ನಲ್ಫ್ ಕಾಂಪೋಶ್ಚ್, ಕನ್ನಡಿ ಕಲಾವಿದ, ೧೯೪೨ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಪೀಟರ್ ಟರ್ರಿನಿ, ನಾಟಕಕಾರ, ಸೆಪ್ಟೆಂಬರ್ ೨೬, ೧೯೪೪ರಂದು ವೂಲ್ಫ್ಸ್‌ಬರ್ಗ್‌ನ ಸೇಂಟ್ ಮಾರ್ಗರೆಥನ್ ಇಮ್ ಲಾವಂಟಲ್‌ನಲ್ಲಿ ಜನಿಸಿದರು.
 • ಗರ್ಟ್ ಜಾಂಕೆ,ನಾಟಕಕಾರ,ಫೆಬ್ರವರಿ ೮, ೧೯೪೬ ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು. ಜನವರಿ ೪, ೨೦೦೯ರಂದು ನಿಧನರಾದರು.
 • ವರ್ನರ್ ಕಾಫ್ಲರ್, ಲೇಖಕ, ಜುಲೈ ೨೩, ೧೯೪೭, ವಿಲ್ಲಾಚ್‌ನಲ್ಲಿ ಜನಿಸಿದರು.
 • ವೂಲ್ಫ್‌ಗ್ಯಾಂಗ್ ಪೆಟ್ರಿಶ್ಚ್, ರಾಜತಾಂತ್ರಿಕ, ಆಗಸ್ಟ್ ೨೬, ೧೯೪೭ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಎರಿಕ್ ಸ್ಕಿನೆಗ್ಗರ್, ಅಂತರಲಿಂಗಿ ಆಲ್ಪೈನ್ ಸ್ಕೀಯರ್, ಜೂನ್ ೧೯, ೧೯೪೮ರಂದು ಸಾಂಕ್ಟ್ ಅರ್ಬನ್ನ ಆಗ್ಸ್‌ಡಾರ್ಫ್‌ನಲ್ಲಿ ಜನಿಸಿದರು.
 • ವೂಲ್ಫ್‌ಗ್ಯಾಂಗ್ ಪಕ್, ಪ್ರಸಿದ್ಧ ಮುಖ್ಯ ಬಾಣಸಿಗ, ಜುಲೈ ೮, ೧೯೪೯ರಂದು ಸಾಂಕ್ಟ್ ವೇಟ್ ಎನ್ ಡರ್ ಗ್ಲಾನ್‌ನಲ್ಲಿ ಜನಿಸಿದರು.
 • ಫ್ರಾಂಜ್ ಕ್ಲಾಮರ್, ಆಲ್ಪೈನ್ ಸ್ಕೀಯರ್, ಡಿಸೆಂಬರ್ ೩, ೧೯೫೩ರಂದು ಮೂಸ್‌ವಾಲ್ಡ್, ಫ್ರೆಸಾಕ್‌ನಲ್ಲಿ ಜನಿಸಿದರು.
 • ಉರ್ಸುಲಾ ಪ್ಲಾಸ್ನಿಕ್, ರಾಜಕಾರಣಿ, ೧೯೫೬, ಮೇ ೨೩ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಪೀಟರ್ ಲಾಶ್ಚರ್, ವ್ಯವಸ್ಥಾಪಕ, ೧೯೫೭ಸೆಪ್ಟೆಂಬರ್ ೧೭ರಂದು ವಿಲ್ಲಾಚ್‌ನಲ್ಲಿ ಜನಿಸಿದರು.
 • ಜಾಂಕೊ ಫರ್ಕ್, ಲೇಖಕ,೧೯೫೮ ಡಿಸೆಂಬರ್ ೧೧ರಂದು ಸಾಂಕ್ಟ್ ಕಾಂಜಿಯನ್ ಆಮ್ ಕ್ಲೊಪೈನರ್ ಸೀನಲ್ಲಿ ಜನಿಸಿದರು.
 • ಮಾರ್ಟಿನ್ ಕುಸೇಜ್, ರಂಗಭೂಮಿ ನಿರ್ದೇಶಕ, ೧೯೬೧ ಮೇ ೧೪ರಂದು ವೂಲ್ಫ್ಸ್‌ಬರ್ಗ್‌ನಲ್ಲಿ ಜನಿಸಿದರು.
 • ಲಿಡಿಯ ಮಿಶ್ಚ್‌ಕಲ್‌ನಿಗ್, ಲೇಖಕ, ೧೯೬೩, ಆಗಸ್ಟ್ ೨ರಂದು ಕ್ಲಾಗನ್‌ಫರ್ಟ್‌‌ನಲ್ಲಿ‌ ಜನಿಸಿದರು.
 • ಪ್ಯಾಟ್ರಿಕ್ ಫ್ರೈಸಾಚರ್, ಫಾರ್ಮುಲಾ ಒನ್ ಚಾಲಕ, ೧೯೮೦ ಸೆಪ್ಟೆಂಬರ್ ೨೬ರಂದು ವೂಲ್ಫ್ಸ್‌ಬರ್ಗ್‌ನಲ್ಲಿ ಜನಿಸಿದರು.
 • ಗೆರ್‌ಹಾರ್ಡ್ ಫ್ರೈಡಲ್, ಪುರುಷ ರೂಪದರ್ಶಿ,೧೯೮೩ ಡಿಸೆಂಬರ್ ೨೮ರಂದು ಆಲ್ತೊಫೆನ್‌ನಲ್ಲಿ ಜನಿಸಿದರು.
 • ವಿಲ್ಲಿಬಾಲ್ಡ್ ರಚ್, ಪ್ರೊಫೆಸರ್ ಆಫ್ ಪರ್ಸನಾಲಿಟಿ ಎಂಡ್ ಅಸ್ಸೆಸ್‌ಮೆಂಟ್ (ಹ್ಯೂಮರ್ ರಿಸರ್ಚ್), ೦೭. ೧೯೫೬ at ಕುನ್ಸ್‌ಢಾರ್ಫ್‌ನಲ್ಲಿ ೨೨.೦೭.೧೯೫೬ರಂದು ಜನಿಸಿದರು.


ಕ್ಯಾರಿಂಥಿಯಾದಲ್ಲಿ ಮೃತಪಟ್ಟವರು[ಬದಲಾಯಿಸಿ]

 • ಮಾಡೆಸ್ಟಸ್, ಮತಪ್ರಚಾರಕ, ೭೨೦ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದರು. ಮಾರಿಯ ಸಾಲ್‌ನಲ್ಲಿ ಬಹುಶಃ೭೭೨ರಲ್ಲಿ ನಿಧನರಾದರು.
 • ಬೋಲ್‌ಸ್ಲಾ II ದಿ ಬೋಲ್ಡ್, ಪೋಲಂಡ್ ರಾಜ, ಸುಮಾರು೧೦೪೨ರಲ್ಲಿ ಜನಿಸಿದರು. ಚರಿತ್ರೆಯ ಪ್ರಕಾರ, ಮಾರ್ಚ್ ೨೨, ೧೦೮೧ರಂದು ಓಸಿಯಾಚ್‌ನಲ್ಲಿ ನಿಧನರಾದರು. ](?).
 • ಕಾರ್ಲ್ ಆಯರ್ ವಾನ್ ವೆಲ್ಸ್‌ಬ್ಯಾಕ್, ರಸಾಯನಶಾಸ್ತ್ರಜ್ಞ ಮತ್ತು ಸಂಶೋಧಕ, ಸೆಪ್ಟೆಂಬರ್ ೧, ೧೮೫೮ರಂದು ವಿಯೆನ್ನಾದಲ್ಲಿ ಜನಿಸಿದರು. ಆಗಸ್ಟ್ ೪, ೧೯೨೯ರಂದು ಮಾಲ್‌ಬ್ಲಿಂಗ್‌ನಲ್ಲಿ ನಿಧನರಾದರು.
 • ಆಂಟೋನ್ ಕಾಲಿಗ್ , ವರ್ಣಚಿತ್ರ ಕಲಾವಿದ , ಜುಲೈ ೧, ೧೮೮೬ರಂದು ನ್ಯೂಟಿಟ್‌ಶ್ಚೈನ್‌ನಲ್ಲಿ ಜನಿಸಿದರು. (ಇಂದು ನೋವಿ ಜಿಸಿನ್, ಜೆಕ್ ರಿಪಬ್ಲಿಕ್), ಮೇ ೧೭, ೧೯೫೦ರಂದು ನಾಶ್ಚ್ ಇಂ ಗೈಲ್‌ಟಾಲ್‌ನಲ್ಲಿ ನಿಧನರಾದರು.
 • ವರ್ನರ್ ಬರ್ಗ್, ವರ್ಣಚಿತ್ರ ಕಲಾವಿದ , ಏಪ್ರಿಲ್ ೪, ೧೯೧೧ರಂದು ಈಗ ಜರ್ಮನಿಯ ವುಪರ್‌ಟಾಲ್ನಲ್ಲಿರುವ ಎಲ್ಬರ್‌ಫೆಲ್ಡ್‌ನಲ್ಲಿ ಜನಿಸಿದರು. ಸೆಪ್ಟೆಂಬರ್ ೭, ೧೯೮೧ರಂದು ಸಾಂಕ್ಟ್ ವೈಟ್ ಇಂ ಜಾಂಟಾಲ್‌ ಸಾಂಕ್ಟ್ ಕಾಂಜಿಯನ್ ಆಮ್ ಕ್ಲೊಪೈನರ್ ಸೀನಲ್ಲಿ ನಿಧನರಾದರು.

ಕ್ಯಾರಿಂಥಿಯಾದಲ್ಲಿ ವಾಸ[ಬದಲಾಯಿಸಿ]

 • ಮಿಲಿವೋಜ್ ಆಸ್ನರ್, ಏಪ್ರಿಲ್ ೨೧, ೧೯೧೩ರಂದು ಕ್ರೊಯೇಶಿಯದ ಡಾರುವಾರ್‌ನಲ್ಲಿ ಜನಿಸಿದರು, ಉಸ್ಟಾಸೆ ಯುದ್ಧಾಪರಾಧದ ಆರೋಪಿ.

ಇವನ್ನೂ ನೋಡಿ[ಬದಲಾಯಿಸಿ]

 • ಸ್ಲೋವೆನಿಯನ್ ಕ್ಯಾರಿಂಥಿಯಾ
 • ಕ್ಯಾರಿಂಥಿಯಾ (ಸ್ಲೊವೇನಿಯದ ಸಂಖ್ಯಾಶಾಸ್ತ್ರೀಯ ಪ್ರದೇಶ)
 • ಕ್ಯಾರಿಂಥಿಯಾದ ಜನಾಭಿಪ್ರಾಯ ಸಂಗ್ರಹಣೆ
 • ಕ್ಯಾರಿಂಥಿಯಾದ ಸ್ಲೋವೀನರು

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. "Bevölkerung mit österreichischer Staatsbürgerschaft nach Umgangssprache seit 1971" (in German). Statistik Austria. Archived from the original on 2009-06-20. Retrieved 2009-04-13.{{cite web}}: CS1 maint: unrecognized language (link)
 2. cf. H.D. ಪೋಹಲ್: ಕಾರ್ನ್ಟೆನ್ - ಡೈಚಿ ಎಂಡ್ ಸ್ಲೊವೆನಿಶ್ಚಿ ನಾಮೆನ್ . ಹರ್ಮಾಗೊರಾಸ್, ಕ್ಲಾಗನ್‌ಫರ್ಟ್‌ ೨೦೦೦, pp ೮೪f., ೮೭-೧೧೮.
 3. ಮಿನಿಟ್ಸ್ ಆಫ್ ದಿ ಥರ್ಡ್ ಸೆಷನ್ ಆಫ್ ದಿ ಪ್ರಾವಿಷನಲ್ ನ್ಯಾಷನಲ್ ಅಸೆಂಬ್ಲಿ ಆಫ್ ಜರ್ಮನ್-ಆಸ್ಟ್ರಿಯ ಆನ್ 12 ನವೆಂಬರ್ 1918 , : ಆಸ್ಟ್ರಿಯನ್ ನ್ಯಾಷನಲ್ ಲೈಬ್ರರಿಯಲ್ಲಿ, ಮಿನಿಟ್ಸ್ ಆಫ್ ದಿ ಪಾರ್ಲಿಯಮೆಂಟರಿ ಸೆಷನ್ಸ್, p. ೬೬
 4. Kurze Geschichte Kärntens' , ಇನ್: ಡ್ಯುಟ್‌ಸ್ಕೋಸ್ಟೆರಿಕ್, ಡು ಹೆರಿಲಿಚಸ್ ಲ್ಯಾಂಡ್ ೯೦ Jahre Konstituierung der Provisorischen Nationalversammlung. Broschüre zum Festakt der österreichischen LandtagspräsidentInnen am ೨೦. Oktober ೨೦೦೮, p.೨೪
 5. ಬಿಲ್ ಬೈ ದಿ ಸ್ಟೇಟ್ ಕೌನ್ಸಿಲ್, ಅಪೆಂಡಿಕ್ಸ್ ನಂ. 3 PDF
 6. Deutschösterreich, du herrliches Land, p.18
 7. ೭.೦ ೭.೧ ”ಕಾರ್ನ್ಟೆನ್.” ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ. ಅಲ್ಟಿಮೇಟ್‌ ರೆಫರೆನ್ಸ್‌ ಸೂಟ್‌. Chicago ೨೦೧೦.
 8. Claudia Fräss-Ehrfeld, Geschichte Kärntens ೧೯೧೮-೧೯೨೦. Abwehrkampf-Volksabstimmung-Identitätssuche, ಕ್ಲಾಗನ್‌ಫರ್ಟ್‌: ಜೋಹಾನ್ಸ್ ಹೈನ್ ೨೦೦೦. ISBN ೩-೮೫೩೬೬-೯೫೪-೯

46°45′40″N 13°49′08″E / 46.761°N 13.819°E / 46.761; 13.819