ವಿಷಯಕ್ಕೆ ಹೋಗು

ಕರಡು:ಹೇಮಂತ್ ಎಂ.ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇಮಂತ್ ಎಂ.ರಾವ್

ಹೇಮಂತ್ ಎಂ.ರಾವ್ ಅವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿದ್ದು, ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಯಶಸ್ಸಿನ ನಂತರ ಅವರು ಖ್ಯಾತಿಗೆ ಏರಿದರು. []

ವೃತ್ತಿ

[ಬದಲಾಯಿಸಿ]

ರಾವ್ ೨೦೦೫ರಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಸಂಕ್ಷಿಪ್ತ ಶಿಕ್ಷಣವನ್ನು ಪೂರೈಸಿದ ನಂತರ ಚಲನಚಿತ್ರಗಳಿಗೆ ನಡೆದರು. [] [] ೨೦೦೮ರ ಚಲನಚಿತ್ರ 'ಗುಲಾಬಿ ಟಾಕೀಸ್‌'ನಲ್ಲಿ ಗಿರೀಶ್ ಕಾಸರವಳ್ಳಿಯವರೊ೦ದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು, ನ೦ತರ ಜೇಕಬ್ ವರ್ಗೀಸ್ ಅವರೊಂದಿಗೆ ಸವಾರಿ (೨೦೦೯) ಮತ್ತು ಪೃಥ್ವಿ (೨೦೧೦) ಚಿತ್ರಗಳಲ್ಲಿ ಕೆಲಸ ಮಾಡಿದರು. []

ಮಾಹಿತಿ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹೇಳಲಾದ ಲವ್ ಚುರುಮುರಿ -ಯುವ ಕೇಂದ್ರಿತ ರೋಮ್ಯಾಂಟಿಕ್ ಕಥೆಯೊಂದಿಗೆ ಅವರು ೨೦೧೩ರಲ್ಲಿ ನಿರ್ದೇಶನದ ಮೊದಲ ಹೆಜ್ಜೆ ತುಣಿದರು. ಆದರೆ, ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು. []

ಅವರು ೨೦೧೬ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶನ ಮಾಡಿದರು. ಈ ಚಿತ್ರ ಕಾಣೆಯಾದ ತನ್ನ ೬೬ ವರ್ಷದ ತಂದೆಯನ್ನು ಹುಡುಕುವ ಮಗನ ಕಥೆಯನ್ನು ಹೇಳುತ್ತದೆ. ಇದರಲ್ಲಿ ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಆಯಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. []

ಲಾಸ್ಟ್ & ಫೌಂಡ್ ಫಿಲ್ಮ್ಸ್ ಎಂಬ ಬ್ಯಾನರ್ ಅಡಿಯಲ್ಲಿ, ಅವರು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಅನ್ನು ಸಹ-ನಿರ್ಮಿಸಿದರು. ಈ ಚಿತ್ರ ದಿ ಕ್ಯಾಂಪೇನ್ ನಿಂದ ಪ್ರೇರಿತವಾದ ರಾಜಕೀಯ ವಿಡಂಬನೆಯ ಹಾಸ್ಯ ಚಲನಚಿತ್ರವಾಗಿದೆ . []

೨೦೧೮ರ ಹಿಂದಿ ಚಲನಚಿತ್ರ ಅಂಧಾಧುನ್‌ ಗೆ ಚಿತ್ರಕಥೆ ನೀಡಿದ ಕಾರಣಕ್ಕಾಗಿ ಇವರು ಇತರ ಬರಹಗಾರರೊಂದಿಗೆ ಜಂಟಿಯಾಗಿ ೨೦೧೯ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. []

ಅವರ ಎರಡನೇ ನಿರ್ದೇಶನದ ಚಿತ್ರ ಕವಲುದಾರಿ ನಟ ಪುನೀತ್ ರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಮಾಡಿದ ಮೊದಲ ಚಿತ್ರ. []

ಚಿತ್ರಕಥೆ

[ಬದಲಾಯಿಸಿ]
ವರ್ಷ ಚಲನಚಿತ್ರ
ನಿರ್ದೇಶಕ ಸಹಾಯಕ ನಿರ್ದೇಶಕ ನಿರ್ಮಾಪಕ ಚಿತ್ರಕಥೆಗಾರ ಟಿಪ್ಪಣಿಗಳು
೨೦೦೮ ಗುಲಾಬಿ ಟಾಕೀಸ್ ☒N ಎನ್ಎನ್ checkY ವೈವೈ ☒N ಎನ್ಎನ್ ☒N ಎನ್ಎನ್ []
೨೦೦೯ ಸವಾರಿ ☒N ಎನ್ಎನ್ checkY ವೈವೈ ☒N ಎನ್ಎನ್ ☒N ಎನ್ಎನ್
೨೦೧೦ ಪೃಥ್ವಿ ☒N ಎನ್ಎನ್ checkY ವೈವೈ ☒N ಎನ್ಎನ್ ☒N ಎನ್ಎನ್
೨೦೧೬ ಗೋಧಿ ಬಣ್ಣ ಸಾಧಾರಣ ಮೈಕಟ್ಟು checkY ವೈವೈ ☒N ಎನ್ಎನ್ ☒N ಎನ್ಎನ್ checkY ವೈವೈ []
೨೦೧೮ ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ☒N ಎನ್ಎನ್ ☒N ಎನ್ಎನ್ checkY ವೈವೈ ☒N ಎನ್ಎನ್
೨೦೧೮ ಅಂಧಾಧುನ್ ☒N ಎನ್ಎನ್ ☒N ಎನ್ಎನ್ ☒N ಎನ್ಎನ್ checkY ವೈವೈ []
೨೦೧೯ ಕವಲುದಾರಿ checkY ವೈವೈ ☒N ಎನ್ಎನ್ ☒N ಎನ್ಎನ್ checkY ವೈವೈ []

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Yerasala, Kyatha (8 June 2016). "Hemanth Rao and the masters of film verse". Retrieved 1 February 2017.
  2. Waseem, Mohammed (24 January 2017). "It's easy to direct intelligent actors". Retrieved 1 February 2017.
  3. ೩.೦ ೩.೧ Nathan, Archana (16 April 2016). "'I tried to keep my ego out of the equation'". Retrieved 1 February 2017.
  4. https://chitraloka.com/news/3167-love-churumuri-launched.html
  5. http://www.newindianexpress.com/entertainment/kannada/2017/apr/15/voices-of-reason-in-humble-politician-nograj-1593712.html
  6. https://www.filmfare.com/news/bollywood/nominations-for-the-64th-vimal-filmfare-awards-2019_-32898-1.html
  7. http://www.newindianexpress.com/entertainment/kannada/2017/jun/14/rishi-as-police-officer-in-thrilling-kavalu-daari-1616752.html
  8. https://indianexpress.com/article/entertainment/bollywood/sriram-raghavan-andhadhun-audience-reaction-5411378/
  9. "Hemanth Rao's next titled as Kavalu Daari". The Times of India. 14 June 2017. Retrieved 24 June 2017.
  10. "Awards for Thithi, Godhi Banna... directors". The Times of India. Retrieved 1 February 2017.
  11. "Awards for Thithi, Godhi Banna... directors". The Times of India. Retrieved 1 February 2017.
  12. "Kannada director Hemanth Rao wins 2017 Gollapudi Srinivas award". The Hindu. 16 March 2017. Retrieved 17 March 2017.

ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]