ಓಎನ್ಜಿಸಿ
ಚಿತ್ರ:ONGC Logo.svg | |
ಸಂಸ್ಥೆಯ ಪ್ರಕಾರ | State-owned enterprise Public (ಬಿಎಸ್‌ಇ: 500312, ಎನ್‌ಎಸ್‌ಇ: ONGC) |
---|---|
ಸ್ಥಾಪನೆ | 14 August 1956 |
ಮುಖ್ಯ ಕಾರ್ಯಾಲಯ | Dehradun, Uttaranchal, India |
ಪ್ರಮುಖ ವ್ಯಕ್ತಿ(ಗಳು) | R. S. Sharma (Chairman & MD) |
ಉದ್ಯಮ | Oil and Gas |
ಉತ್ಪನ್ನ | Petroleum Natural gas Petrochemicals |
ಆದಾಯ | US$ 21.447 billion (2010)[೧] |
ನಿವ್ವಳ ಆದಾಯ | US$ 4.089 billion (2010)[೧] |
ಒಟ್ಟು ಆಸ್ತಿ | US$ 37.264 billion (2010)[೧] |
ಒಟ್ಟು ಪಾಲು ಬಂಡವಾಳ | US$ 22.590 billion (2010)[೧] |
ಉದ್ಯೋಗಿಗಳು | 33,924 (2010)[೧] |
ಜಾಲತಾಣ | www.ONGCIndia.com |
ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್/ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ (ONGC ) (ಬಿಎಸ್‌ಇ: 500312, ಎನ್‌ಎಸ್‌ಇ: ONGC) ಎಂಬುದೊಂದು ಭಾರತದಲ್ಲಿನ ಸರ್ಕಾರಿ ಒಡೆತನದ ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿಯಾಗಿದೆ. ಇದು ಫಾರ್ಚ್ಯೂನ್ ಗ್ಲೋಬಲ್ 500 ಮಟ್ಟದ ಕಂಪೆನಿಯಾಗಿದ್ದು 413,[೧] ನೇ ಶ್ರೇಯಾಂಕ(ರ್ರ್ಯಾಂಕ್)ವನ್ನು ಪಡೆದಿರುವುದಲ್ಲದೇ ಭಾರತದ ಕಚ್ಚಾ ತೈಲ ಉತ್ಪಾದನೆಯ 77%ರಷ್ಟು ಮತ್ತು ಭಾರತದ ನೈಸರ್ಗಿಕ ಅನಿಲ ಉತ್ಪಾದನೆಯ 81%ರಷ್ಟು ಉತ್ಪಾದನೆಯನ್ನು ಕೊಡುಗೆಯಾಗಿ ನೀಡುತ್ತಿದೆ. ಇದು ಭಾರತದಲ್ಲೇ ಅತಿ ಹೆಚ್ಚು ಲಾಭವನ್ನು ಗಳಿಸುತ್ತಿರುವ ಸಂಸ್ಥೆ/ಕಾರ್ಪೋರೇಷನ್ ಆಗಿದೆ. ಈ ಸಂಸ್ಥೆಯನ್ನು 14ನೇ ಆಗಸ್ಟ್ 1956ರಂದು ಆಯೋಗವೊಂದರ ರೂಪದಲ್ಲಿ ಸ್ಥಾಪಿಸಲಾಗಿತ್ತು. ಈ ಕಂಪೆನಿಯಲ್ಲಿ ಭಾರತೀಯ ಸರ್ಕಾರವು 74.14%ರಷ್ಟು ಈಕ್ವಿಟಿ(ಸಾಮಾನ್ಯ ಷೇರು)ಗಳಷ್ಟು ಹೂಡಿಕೆಯನ್ನು ಹೊಂದಿದೆ. ONGC ಸಂಸ್ಥೆಯು ತೈಲನಿಕ್ಷೇಪಗಳ ಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಏಷ್ಯಾದ ಅತಿದೊಡ್ಡ ಹಾಗೂ ಬಹು ಚಟುವಟಿಕೆಯ ಕಂಪೆನಿಯಾಗಿದೆ.[೨] ಭಾರತದ 26 ಜಲಜಶಿಲಾವೃತ ರೇವುಗಳಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪಗಳ ಕುರಿತು ಶೋಧನೆ ಹಾಗೂ ಅವುಗಳ ಬಳಕೆಯಲ್ಲಿ ಈ ಸಂಸ್ಥೆಯು ತೊಡಗಿಕೊಂಡಿದೆ. ಭಾರತದ ಸರಿಸುಮಾರು ಕಚ್ಚಾ ತೈಲ ಅಗತ್ಯತೆಯಲ್ಲಿ 30%ರಷ್ಟು ಉತ್ಪಾದಿಸುವ ಸಾಮರ್ಥ್ಯವನ್ನು ಈ ಸಂಸ್ಥೆಯು ಹೊಂದಿದೆ. ಭಾರತದಲ್ಲಿರುವ 11,000 ಕಿಲೋಮೀಟರ್‌ಗಳಿಗೂ ಮಿಕ್ಕಿರುವಷ್ಟು ದೂರದ ಕೊಳಾಯಿ ಮಾರ್ಗಗಳ ಸ್ವಾಮ್ಯವನ್ನು ಹೊಂದಿದ್ದು, ಈ ಸಂಸ್ಥೆಯು ಅವುಗಳ ಮೂಲಕ ಕಾರ್ಯಾಚರಿಸುತ್ತದೆ. 2010ರ ಸಾಲಿನಲ್ಲಿ, ಈ ಸಂಸ್ಥೆಯು ಪ್ಲಾಟ್ಸ್ ಅಗ್ರ 250 ಜಾಗತಿಕ ಇಂಧನಶಕ್ತಿ ಕಂಪೆನಿಗಳ ಶ್ರೇಯಾಂಕಪಟ್ಟಿಯಲ್ಲಿ 18ನೇ ಸ್ಥಾನವನ್ನು ಪಡೆದುಕೊಂಡಿತ್ತು.[೩]. ಇಷ್ಟೇ ಅಲ್ಲದೇ ಸಂಸ್ಥೆಯು ವಿಶ್ವದ no.1 ಅಗ್ರಮಾನ್ಯ E&P ಕಂಪೆನಿ ಕೂಡಾ ಆಗಿದೆ.
ಇತಿಹಾಸ
[ಬದಲಾಯಿಸಿ]ಸ್ಥಾಪನೆ/ತಳಪಾಯ
[ಬದಲಾಯಿಸಿ]1960ರ ಆಗಸ್ಟ್‌ನಲ್ಲಿ, ತೈಲ ಮತ್ತು ನೈಸರ್ಗಿಕ ಅನಿಲ ಆಯೋಗವನ್ನು ರಚಿಸಲಾಯಿತು. ಕೇವಲ ನಿರ್ವಾಹಕ ಮಂಡಳಿಯ ದರ್ಜೆಯಿಂದ ಆಯೋಗದ ಮಟ್ಟಕ್ಕೇರಿದ ಸಂಸ್ಥೆಯು ಹೆಚ್ಚುವರಿ ಅಧಿಕಾರಗಳನ್ನು ಹೊಂದಿತ್ತು. 1959ರಲ್ಲಿ, ಭಾರತೀಯ ಸಂಸತ್ತಿನ ಕಾಯಿದೆಯೊಂದರ ಮುಖಾಂತರ ಈ ಆಯೋಗವನ್ನು ಶಾಸನವಿಹಿತ ಸಂಸ್ಥೆಯನ್ನಾಗಿ ಪರಿವರ್ತಿಸಿದುದರಿಂದ ಇನ್ನಷ್ಟು ಹೆಚ್ಚುವರಿ ಅಧಿಕಾರಗಳು ದೊರಕಿದವು.
1960-2007
[ಬದಲಾಯಿಸಿ]ಈ ಸಂಸ್ಥೆಗೆ ಬುನಾದಿ ಹಾಕಿದಂದಿನಿಂದ, ONGC ಸಂಸ್ಥೆಯು ತೈಲ ಮತ್ತು ಸೈಸರ್ಗಿಕ ಅನಿಲದ ಬಗೆಗಿನ ಭಾರತದ ದೃಷ್ಟಿಕೋನವನ್ನು ಬದಲಾಯಿಸಿ ರಾಷ್ಟ್ರದ ಸೀಮಿತ ತೈಲ ಪ್ರವಾಹದ ಕ್ಷಮತೆಯನ್ನು ಬೃಹತ್ ಕಾರ್ಯಸಾಧುವಾದ ಕಾರ್ಯಕ್ಷೇತ್ರವನ್ನಾಗಿ ಕಾಣಿಸಿಕೊಳ್ಳುವಂತೆ ಮಾಡಿದೆ. 1959ನೇ ಇಸವಿಯಿಂದ, ಭಾರತದ ಬಹುತೇಕ ಭಾಗಗಳಲ್ಲಿ ಹಾಗೂ ಸಾಗರೋತ್ತರ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ONGC ಸಂಸ್ಥೆಯು ಗಮನಾರ್ಹ ಪ್ರಮಾಣದಲ್ಲಿ ಕಂಡುಕೊಂಡಿದೆ. ONGC ಸಂಸ್ಥೆಯು ನವೀನ ಸಂಪನ್ಮೂಲಗಳನ್ನು ಅಸ್ಸಾಂನಲ್ಲಿ ಪತ್ತೆಹಚ್ಚಿದೆಯಲ್ಲದೇ ಕ್ಯಾಂಬೆ (ಗುಜರಾತ್) ರೇವುಪಟ್ಟಣದಲ್ಲಿ ನವೀನ ತೈಲ ಹೊರತೆಗೆಯುವ ಕಾರ್ಯಕ್ಷೇತ್ರವನ್ನು ಸ್ಥಾಪಿಸಿದೆ. 1970ರಲ್ಲಿ ಬಾಂಬೆ ಹೈ ನಿಕ್ಷೇಪದ ಪತ್ತೆಹಚ್ಚುವಿಕೆಯೊಂದಿಗೆ (ಈಗ ಮುಂಬಯಿ ಹೈ ಎಂದು ಕರೆಯಲ್ಪಡುತ್ತಿದೆ), ONGC ಸಂಸ್ಥೆಯು ಕಡಲಕರೆಯಾಚೆಯೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು. ಈ ತೈಲನಿಕ್ಷೇಪದ ಪತ್ತೆಹಚ್ಚುವಿಕೆ ಮತ್ತು ತದನಂತರದ ಪಾಶ್ಚಿಮಾತ್ಯ ಕಡಲಕರೆಯಾಚೆಗಳಲ್ಲಿ ಬೃಹತ್ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಿದ ನಂತರ ರಾಷ್ಟ್ರದಲ್ಲಿ ಒಟ್ಟು 5 ಶತಕೋಟಿ ಟನ್ನುಗಳಷ್ಟು ಹೈಡ್ರೋಕಾರ್ಬನ್ ಲಭ್ಯವಿದೆ ಎಂಬುದು ತಿಳಿದುಬಂದಿತು. ಇಷ್ಟೆಲ್ಲದರ ಮಧ್ಯೆ, ONGC ಸಂಸ್ಥೆಯ ನಿಜಕ್ಕೂ ಗಮನಾರ್ಹವಾದ ಕೊಡುಗೆಯೆಂದರೆ, ಸಂಸ್ಥೆಯ ಸ್ವಾವಲಂಬನೆ ಹಾಗೂ ತೈಲನಿಕ್ಷೇಪದಿಂದ ಹೊರತೆಗೆಯುವಿಕೆ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ಸಾಧಿಸಿದ ಜಾಗತಿಕವಾಗಿ ಸ್ಪರ್ಧೆ ನೀಡಬಲ್ಲ ಮಟ್ಟಿಗಿನ ಪ್ರಮುಖ ಪ್ರಾವೀಣ್ಯತೆಯಾಗಿದೆ.
1990ರ ಅನಂತರ
[ಬದಲಾಯಿಸಿ]1990ರ ನಂತರ, ಆರ್ಥಿಕ ಉದಾರೀಕರಣ ನೀತಿಯನ್ನು ಜಾರಿಗೆ ತರಲಾಯಿತಾದುದರಿಂದ, ತದನಂತರದ ಸಾರ್ವಜನಿಕ ಕ್ಷೇತ್ರಗಳ ಉದ್ಯಮಗಳಲ್ಲಿ ಹೂಡಿದ್ದ ಸರ್ಕಾರಿ ಹೂಡಿಕೆಗಳ ಭಾಗಶಃ ಹಿಂಪಡೆಯುವಿಕೆಯನ್ನು ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ, ONGC ಸಂಸ್ಥೆಯನ್ನು ಲಿಮಿಟೆಡ್ ಕಂಪೆನಿಯನ್ನಾಗಿ ಮರು-ಸಂಘಟಿಸಲಾಯಿತು, ಹಾಗೂ ಈ ಹಿಂದಿದ್ದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ಉದ್ಯಮ/ವ್ಯವಹಾರವನ್ನು 1993ರಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ Ltd ಆಗಿ ಪರಿವರ್ತಿಸಿದ ನಂತರ, ಷೇರುಗಳಲ್ಲಿ ಪ್ರತಿಶತ 2ರಷ್ಟನ್ನು ಸ್ಪರ್ಧಾತ್ಮಕ ಹರಾಜಿನ ಮೂಲಕ ಹೂಡಿಕೆ ಹಿಂಪಡೆತ ಮಾಡಲಾಯಿತು. ಈ ಹೂಡಿಕೆಯ ಮತ್ತಷ್ಟು ವಿಸ್ತರಣೆಯನ್ನು ONGC ನೌಕರರಿಗೆ ಪ್ರತಿಶತ 2ರಷ್ಟು ಷೇರುಗಳನ್ನು ಪಡೆಯಲು ಸಾಧ್ಯವಾಗಿಸುವುದರ ಮೂಲಕ ಕೈಗೊಳ್ಳಲಾಯಿತು. ONGC, ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC) ಮತ್ತು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ Ltd.(GAIL) ಸಂಸ್ಥೆಗಳು ಒಟ್ಟಾಗಿ ಸೇರಿ ಪರಸ್ಪರರ ಷೇರುಗಳಲ್ಲಿ ಪರಸ್ಪರ ಹೂಡಿಕೆಗಳನ್ನು ಹೊಂದಲು ನಿರ್ಧರಿಸಿದಾಗ ಮಾರ್ಚ್ 1999ರಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ ಸರ್ಕಾರವು ONGCಯಲ್ಲಿನ ಹೂಡಿಕೆಯಲ್ಲಿನ ಪ್ರತಿಶತ 10ರಷ್ಟನ್ನು IOC ಸಂಸ್ಥೆಗೆ ಹಾಗೂ ಪ್ರತಿಶತ 2.5ರಷ್ಟನ್ನು GAILಗೆ ಮಾರಿತು. ಈ ಒಂದು ನಿರ್ಧಾರದ ಪರಿಣಾಮವಾಗಿ, ONGC ಸಂಸ್ಥೆಯಲ್ಲಿನ ಸರ್ಕಾರಿ ಹೂಡಿಕೆಯು ಪ್ರತಿಶತ 84.11ಕ್ಕೆ ಇಳಿಮುಖವಾಯಿತು. 2002-03ರ ಸಾಲಿನಲ್ಲಿ ONGC ಸಂಸ್ಥೆಯು ಮ್ಯಾಂಗಲೋರ್ ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಂಪೆನಿಯನ್ನು ಬಿರ್ಲಾ ಸಮೂಹದಿಂದ ಸ್ವಾಧೀನಪಡಿಸಿಕೊಂಡಿತಲ್ಲದೇ, ಚಿಲ್ಲರೆ ವ್ಯವಹಾರಕ್ಕೆ ONGC ಸಂಸ್ಥೆಯು ತನ್ನ ಪ್ರವೇಶವನ್ನು ಘೋಷಿಸಿತು. ONGC ಸಂಸ್ಥೆಯು ತನ್ನ ಅಂಗಸಂಸ್ಥೆಯಾದ, ONGC ವಿದೇಶ್ Ltd. (OVL) ಎಂಬುದರ ಮೂಲಕ ಜಾಗತಿಕ ತೈಲ ಕ್ಷೇತ್ರಗಳತ್ತವೂ ತನ್ನ ಕಬಂಧ ಬಾಹು ಚಾಚಿದೆ. ONGC ಸಂಸ್ಥೆಯು 1 ಶತಕೋಟಿ ಬ್ಯಾರೆಲ್‌ಗಳಷ್ಟು ಬೃಹತ್ ಪ್ರಮಾಣದ ಭಾರೀ ಕಚ್ಚಾತೈಲ ನಿಕ್ಷೇಪವನ್ನು ಇರಾನ್‌ನ ಕರಾವಳಿಯ ಹೊರಚಾಚಿನಲ್ಲಿರುವ ಪರ್ಷಿಯನ್ ಕೊಲ್ಲಿಯಲ್ಲಿ 2009ರಲ್ಲಿ ಪತ್ತೆಹಚ್ಚಿತು.[೪] ಇದರೊಂದಿಗೆ, ONGC ಸಂಸ್ಥೆಯು 1.1 ಶತಕೋಟಿ ಘನಅಡಿಗಳಷ್ಟು ನೈಸರ್ಗಿಕ ಅನಿಲವನ್ನು ಫರ್ಜಾದ್ B ಅನಿಲ ನಿಕ್ಷೇಪದಿಂದ ಹೊರತೆಗೆಯಲು US$3 ಶತಕೋಟಿಯಷ್ಟು ಮೊತ್ತವನ್ನು ಹೂಡಿಕೆ ಮಾಡಲು ಇರಾನ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತು.[೫]
ONGC ವಿದೇಶ್
[ಬದಲಾಯಿಸಿ]ONGC ವಿದೇಶ್ ಸಂಸ್ಥೆಯು ONGCಯ ಅಂತರರಾಷ್ಟ್ರೀಯ ಅಂಗಸಂಸ್ಥೆಯಾಗಿದೆ. ONGC ಸಂಸ್ಥೆಯು ವಿಯೆಟ್ನಾಮ್, ಸಖಾಲಿನ್ ಮತ್ತು ಸೂಡಾನ್ ರಾಷ್ಟ್ರಗಳಲ್ಲಿ ಪ್ರಮುಖ ಹೂಡಿಕೆಗಳನ್ನು ಹೊಂದಿದ್ದು ತನ್ನ ಪ್ರಥಮ ಹೈಡ್ರೋಕಾರ್ಬನ್ ಹೂಡಿಕೆಯಿಂದ ಪಡೆದ ಆದಾಯವು ವಿಯೆಟ್ನಾಮ್‌ನಲ್ಲಿನ ಅದರ ಹೂಡಿಕೆಯಿಂದ ಬಂದಿದ್ದಾಗಿದೆ.
ಅಂತರರಾಷ್ಟ್ರೀಯ ಶ್ರೇಯಾಂಕಗಳು
[ಬದಲಾಯಿಸಿ]- ಫೋರ್ಬ್ಸ್ ನಿಯತಕಾಲಿಕೆಯು 2007ರ ಸಾಲಿನ ತನ್ನ ಫೋರ್ಬ್ಸ್ ಜಾಗತಿಕ 2000 ಸಂಸ್ಥೆಗಳು ಪಟ್ಟಿಯಲ್ಲಿ 198ನೇ ಸ್ಥಾನವನ್ನು ONGC ಸಂಸ್ಥೆಗೆ ನೀಡಿತ್ತು [೬].
- ONGC ಸಂಸ್ಥೆಯು ಫಾರ್ಚ್ಯೂನ್ ಜಾಗತಿಕ/ಗ್ಲೋಬಲ್ 500 ಕಂಪೆನಿಗಳ 2008ರ ಪಟ್ಟಿಯಲ್ಲಿ 335ನೇ,[೭] ಸ್ಥಾನವನ್ನು ಪಡೆದು 2007ರಲ್ಲಿ ಪಡೆದಿದ್ದ 369ನೇ ಸ್ಥಾನದಿಂದ 34 ಸ್ಥಾನಗಳಷ್ಟು ಏರಿಕೆ ಕಂಡಿತ್ತು.
- ONGC ಸಂಸ್ಥೆಯು ‘ಗ್ಲೋಬಲ್ ಫೈನಾನ್ಸ್’ ಎಂಬ US-ಮೂಲದ ನಿಯತಕಾಲಿಕೆಯು ಇತ್ತೀಚೆಗೆ ನಡೆಸಿದ್ದ ಸಮೀಕ್ಷೆಯೊಂದರಲ್ಲಿ ಏಷ್ಯಾದ ಅತ್ಯುತ್ತಮ ತೈಲ ಮತ್ತು ಅನಿಲ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ
- ಪ್ಲಾಟ್ಸ್ ಇಂಧನ/ಎನರ್ಜಿ ವ್ಯವಹಾರ ತಂತ್ರಜ್ಞಾನ/ಟೆಕ್ನಾಲಜಿ (EBT) ಸಂಸ್ಥೆಯು 2004ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ 2ನೇ ಅತಿದೊಡ್ಡ E&P ಕಂಪೆನಿಯಾಗಿದೆ (ಹಾಗೂ ಲಾಭದ ದೃಷ್ಟಿಯಿಂದ 1st ಸ್ಥಾನದಲ್ಲಿದೆ)
- ಮಾರುಕಟ್ಟೆಯ ಬಂಡವಾಳೀಕರಣದ ಆಧಾರದಲ್ಲಿ PFC ಇಂಧನ/ಎನರ್ಜಿ 50 ಪಟ್ಟಿ (ಡಿಸೆಂಬರ್ 2004) ಸಂಸ್ಥೆಯಿಂದ ಜಾಗತಿಕ ಇಂಧನ/ಎನರ್ಜಿ ಕಂಪೆನಿಗಳ ಪಟ್ಟಿಯಲ್ಲಿ 24ನೇ ಸ್ಥಾನವನ್ನು ಪಡೆದಿದೆ.
- ಇಕನಾಮಿಕ್ ಟೈಮ್ಸ್ 500, ಬಿಜಿನೆಸ್ ಟುಡೇ 500, ಬಿಜಿನೆಸ್ ಬ್ಯಾರನ್ 500 ಮತ್ತು ಬಿಜಿನೆಸ್ ವೀಕ್ ಸಂಸ್ಥೆಗಳು ONGCಯನ್ನು ಮಾರುಕಟ್ಟೆಯ ಬಂಡವಾಳೀಕರಣ ಮೌಲ್ಯ, ನಿವ್ವಳ ಮೌಲ್ಯ ಮತ್ತು ನಿವ್ವಳ ಲಾಭಾಂಶಗಳ ದೃಷ್ಟಿಯಿಂದ ಅತೀ ಬೆಲೆಬಾಳುವ ಭಾರತೀಯ ಸಂಸ್ಥೆಯೆಂದು ಮಾನ್ಯತೆ ನೀಡಿವೆ.[೮]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ "Fortune Global 500 Rankings". Fortune. 26 July 2010. Retrieved 24 November 2010.
- ↑ "ONGC beats China's CNOOC to become Asia's No.1 E&P firm" (in English). SINGAPORE: The Economic Times. November 3, 2010. Retrieved 3 November 2010.
{{cite news}}
: Unknown parameter|coauthors=
ignored (|author=
suggested) (help)CS1 maint: unrecognized language (link) - ↑ Platts, Nov 2, 2010. "Platts Top 250 Global Energy Company Rankings". Retrieved 2010-11-03.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ "PGಯಲ್ಲಿ ಹೊಸದೊಂದು ತೈಲ ನಿಕ್ಷೇಪವನ್ನು ಇರಾನ್ ಪತ್ತೆಹಚ್ಚಿದೆ". Archived from the original on 2012-01-06. Retrieved 2021-08-27.
- ↑ [೧]
- ↑ ದ ಗ್ಲೋಬಲ್ 2000 - Forbes.com
- ↑ ಫಾರ್ಚ್ಯೂನ್ 500
- ↑ "ONGC :: ಹೂಡಿಕೆದಾರ ಕೇಂದ್ರ :: ಪ್ರೊಫೈಲ್". Archived from the original on 2008-04-30. Retrieved 2011-01-21.
ಇವನ್ನೂ ನೋಡಿ
[ಬದಲಾಯಿಸಿ]- ಪೆಟ್ರೋಲಿಯಮ್ ಉತ್ಪನ್ನ ಕಂಪೆನಿಗಳ ಪಟ್ಟಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 errors: unsupported parameter
- CS1 maint: unrecognized language
- CS1 maint: multiple names: authors list
- CS1 maint: numeric names: authors list
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ಮುಂಬೈ ಶೇರು ಪೇಟೆಯಲ್ಲಿ ನಮೂದಿಸಲಾಗಿರುವ ಕಂಪನಿಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- BSE ಸೆನ್ಸೆಕ್ಸ್ ಸೂಚ್ಯಂಕ
- ಬಾಂಬೆ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿರುವ ಕಂಪೆನಿಗಳು
- ಭಾರತದ ಅನಿಲ ಮತ್ತು ತೈಲ ಕಂಪೆನಿಗಳು
- ರಾಷ್ಟ್ರೀಯ ತೈಲ ಮತ್ತು ಅನಿಲ ಕಂಪೆನಿಗಳು
- ಡೆಹ್ರಾಡೂನ್ ಮೂಲದ ಸಂಸ್ಥೆಗಳು
- ಭಾರತದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳು
- ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್/ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ
- ಉತ್ತರಾಖಂಡದ ಆರ್ಥಿಕತೆ