ಒಕ್ಕೂಟ ಸರ್ಕಾರ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2010) |
Part of a series on |
Politics |
---|
Politics portal |
ಒಕ್ಕೂಟ ಸರ್ಕಾರ ಎನ್ನುವುದು ಸಂಸದೀಯ ಸರ್ಕಾರದ ಮಂತ್ರಿಮಂಡಳವಾಗಿದ್ದು ಅಲ್ಲಿ ಬಹಳಷ್ಟು ಪಕ್ಷಗಳು ಸಹಯೋಗ ನೀಡುತ್ತವೆ. ಯಾವುದೇ ಪಕ್ಷವು ತನ್ನ ಸ್ವಂತ ಬಲದಲ್ಲಿ ಬಹುಮತವನ್ನು ಸಂಸತ್ನಲ್ಲಿ ಹೊಂದದೇ ಇರುವಾಗ ಸಾಮಾನ್ಯವಾಗಿ ಇಂತಹ ವ್ಯವಸ್ಥೆಗೆ ಕಾರಣವಾಗುತ್ತದೆ. ಒಕ್ಕೂಟ ಸರ್ಕಾರವು ರಾಷ್ಟ್ರೀಯ ಆಪತ್ತು ಅಥವಾ ಸಮಸ್ಯೆಯ ಸಂದರ್ಭದಲ್ಲೂ ರಚನೆಯಾಗಬಹುದು, ಉದಾಹರಣೆಗಾಗಿ ಯುದ್ಧದ ಸಮಯದಲ್ಲಿ, ಆಂತರಿಕ ರಾಜಕೀಯ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಪಾತ್ರವನ್ನು ವಹಿಸುವುದರ ಜೊತೆಗೆ ಸರ್ಕಾರಕ್ಕೆ ಅಗತ್ಯವಾದ ಉನ್ನತ ಮಟ್ಟದ ರಾಜಕೀಯ ಗ್ರಹಿಕೆಯ ಔಚಿತ್ಯವನ್ನು ನೀಡಲು ರಚಿಸಬಹುದು. ಅಂತಹ ಸಮಯಗಳಲ್ಲಿ, ರಾಜಕೀಯ ಪಕ್ಷಗಳು ಸರ್ವ-ಪಕ್ಷ ಒಕ್ಕೂಟಗಳ ಸರ್ಕಾರಗಳನ್ನು ರಚಿಸಿವೆ (ರಾಷ್ಟ್ರೀಯ ಏಕತೆಯ ಸರ್ಕಾರಗಳು, ಮಹತ್ತರವಾದ ಒಕ್ಕೂಟಗಳು). ಒಂದು ವೇಳೆ ಒಕ್ಕೂಟವು ಬಿದ್ದು ಹೋದರೆ, ವಿಶ್ವಾಸ ಮತವು ನಡೆಯುತ್ತದೆ ಅಥವಾ ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನು ತೆಗೆದುಕೊಳ್ಳಲಾಗುತ್ತದೆ.
ಬಳಕೆಯಲ್ಲಿರುವುದು
[ಬದಲಾಯಿಸಿ]This section possibly contains original research. (June 2009) |
ಸಾಮಾನ್ಯ ಚುನಾವಣೆಗಳ ಬಳಿಕ ಯಾವುದೇ ಸ್ಪಷ್ಟ ಬಹುಮತ ಬಾರದೇ ಇರುವ ಸಂದರ್ಭವನ್ನು ನಿರ್ವಹಿಸಲು, ಸಂಸತ್ತಿನ ಬಹುಮತದಿಂದ ಬೆಂಬಲಿತವಾದ ಸಮ್ಮಿಶ್ರ ಸಚಿವ ಸಂಪುಟಗಳನ್ನು, ಇಲ್ಲವೇ ಒಂದು ಅಥವಾ ಹೆಚ್ಚು ಪಕ್ಷಗಳು ಒಳಗೊಂಡಿರುವ ಅಲ್ಪಸಂಖ್ಯಾತ ಸಚಿವ ಸಂಪುಟವನ್ನು ಪಕ್ಷಗಳು ರಚಿಸುತ್ತವೆ. ಸಾಮಾನ್ಯವಾಗಿ ಅಲ್ಸಸಂಖ್ಯಾತ ಸಚಿವ ಸಂಪುಟಗಳಿಗೆ ಹೋಲಿಸಿದರೆ ಸಂಸತ್ತಿನಲ್ಲಿರುವ ಬಹುಮತದ ಬೆಂಬಲವನ್ನು ಹೊಂದಿರುವ ಸಚಿವ ಸಂಪುಟಗಳು ಹೆಚ್ಚು ಸ್ಥಿರವಾಗಿರುತ್ತವೆ. ಮೊದಲನೆಯ ಸಚಿವ ಸಂಪುಟವು ಆಂತರಿಕ ಕಚ್ಚಾಟಕ್ಕೆ ಒಳಗಾಗುವ ಸಾಧ್ಯತೆಯಿದ್ದರೂ, ಅವಿಶ್ವಾಸ ಮತದ ಹೆದರಿಕೆಯ ಸಾಧ್ಯತೆಗಳು ಕಡಿಮೆ ಇರುತ್ತದೆ. ಬಹುಮತವನ್ನು ಕಾಯ್ದುಕೊಳ್ಳುವ ತನಕವೂ, ಏಕ ಪಕ್ಷ ಆಧಾರಿತ ಬಹುಮತ ಸರ್ಕಾರಗಳು ಸಾಮಾನ್ಯವಾಗಿ ಇನ್ನೂ ಹೆಚ್ಚಿನ ಸ್ಥಿರತೆಯನ್ನು ಹೊಂದಿರುತ್ತದೆ.
ಹಲವು ಸುವ್ಯವಸ್ಥಿತ ರಾಜಕೀಯ ಪಕ್ಷಗಳು ಪ್ರಾತಿನಿಧಿತ್ಯ ಹೊಂದಿರುವುದರೊಂದಿಗೆ ಸಂಸತ್ತು ಅನುಗುಣವಾಗಿ ಪ್ರತಿನಿಧಿಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಕ್ಕೂಟ ಸಚಿವ ಸಂಪುಟಗಳು ಸಾಮಾನ್ಯವಾಗಿದೆ. ಯುನೈಟೆಡ್ ಸ್ಟೇಟ್ಸ್ ನಂತಹ ಕೆಳಗಿನ ಮನೆಯ ಮೂಲಕ ಹೊರತುಪಡಿಸಿ ಪ್ರತಿನಿಧಿಗಳ ಮುಖಾಂತರ ಮಂತ್ರಿ ಮಂಡಳವನ್ನು ರಚಿಸುವ ರಾಷ್ಟ್ರಗಳಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ (ಆದರೆ, ಬ್ರೆಜಿಲ್ನಲ್ಲಿ ಒಕ್ಕೂಟ ಸರ್ಕಾರಗಳು ಸಾಮಾನ್ಯವಾಗಿದೆ). ಅಧ್ಯಕ್ಷರು ಔಪಚಾರಿಕವಾಗಿ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಿದರೂ ಸಹ ಸರ್ಕಾರವೇ ಸಂಸತ್ತಿನಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುವ ಫ್ರಾನ್ಸ್ ನಂತಹ ದೇಶದಲ್ಲಿ ಜಾರಿಯಲ್ಲಿರುವ ಭಾಗಶಃ- ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಒಕ್ಕೂಟದ ಸರ್ಕಾರಗಳು ಹೆಚ್ಚು ಸಾಮಾನ್ಯವಾಗಿ ಸಂಭವಿಸುತ್ತದೆ.
ವಿಶ್ವದಾದ್ಯಂತ ಒಕ್ಕೂಟ ಸರ್ಕಾರಗಳು
[ಬದಲಾಯಿಸಿ]ಆಗಾಗ್ಗೆ ಒಕ್ಕೂಟದ ಸಚಿವ ಸಂಪುಟಗಳನ್ನು ನಿರ್ವಹಣೆ ಮಾಡುವ ದೇಶಗಳಲ್ಲಿ ಇವುಗಳು ಸೇರಿವೆ: ನಾರ್ಡಿಕ್ ದೇಶಗಳು, ಬೆನೆಲುಕ್ಸ್ ದೇಶಗಳು, ಆಸ್ಟ್ರೇಲಿಯಾ, ಆಸ್ಟ್ರಿಯಾ, ಜರ್ಮನಿ, ಐರ್ಲೆಂಡ್, ಇಟಲಿ, ಜಪಾನ್, ಟರ್ಕಿ, ಇಸ್ರೇಲ್, ನ್ಯೂಜಿಲೆಂಡ್, ಕೊಸೊವೋ, ಪಾಕಿಸ್ತಾನ, ಕೀನ್ಯಾ, ಭಾರತ, ಟ್ರಿನಿಡಾಡ್ ಮತ್ತು ಟೊಬಾಗೋ ಮತ್ತು ಉಕ್ರೇನ್. 1959 ರಿಂದ 2008 ರವೆಗೆ "ಮ್ಯಾಜಿಕ್ ಫಾರ್ಮ್ಯುಲಾ" ಎಂಬ ಹೆಸರಿನಲ್ಲಿ ಪಾರ್ಲಿಮೆಂಟಿನ ನಾಲ್ಕು ಬಲಶಾಲಿ ಪಕ್ಷಗಳ ಒಕ್ಕೂಟವು ಸ್ವಿಟ್ಜರ್ಲ್ಯಾಂಡ್ನಲ್ಲಿ ಅಧಿಕಾರ ನಡೆಸಿತು. ಕನ್ಸರ್‌ವೇಟಿವ್ ಮತ್ತು ಲಿಬರಲ್ ಡೆಮೋಕ್ರಾಟಿಕ್ ಪಕ್ಷಗಳ ನಡುವೆ ವ್ಯವಸ್ಥಿತ ಸಚಿವ ಸಂಪುಟವನ್ನು ಸಹ ಯುನೈಟೆಡ್ ಕಿಂಗ್‌ಡಮ್ ನಿರ್ವಹಿಸುತ್ತದೆ.
ಕೆಲವು ಪಕ್ಷಗಳನ್ನು ಒಳಗೊಂಡ ಒಕ್ಕೂಟಗಳು
[ಬದಲಾಯಿಸಿ]ಜರ್ಮನಿಯಲ್ಲಿ, ಉದಾಹರಣೆಗಾಗಿ, ಕ್ರಿಶ್ಚಿಯನ್-ಡೆಮೋಕ್ರಾಟಿಕ್ ಯೂನಿಯನ್ ಆಫ್ ಜರ್ಮನಿ ಮತ್ತು ಕ್ರಿಶ್ಚಿಯನ್ ಸೋಷಿಯಲ್ ಯೂನಿಯನ್ ಇನ್ ಬವರಿಯಾ (ಸಿಡಿಯು/ಸಿಎಸ್‌ಯು) ಅಥವಾ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಜರ್ಮನಿ (ಎಸ್‌ಪಿಡಿ) ಪಕ್ಷಗಳು ರಾಷ್ಟ್ರೀಯ ಚುನಾವಣೆಯಲ್ಲಿ ಸಂಪೂರ್ಣವಾದ ಬಹುಮತವನ್ನು ಗಳಿಸುವ ಸಾಧ್ಯತೆಯು ಅಪರೂಪವಾದುದರಿಂದ, ಒಕ್ಕೂಟ ಸರ್ಕಾರವು ರೂಢಿಯಾಗಿದೆ. ಆದ್ದರಿಂದ, ಫೆಡರಲ್ ಹಂತದಲ್ಲಿ, ಕನಿಷ್ಠ ಒಂದು ಚಿಕ್ಕ ಪಕ್ಷಗಳೊಂದಿಗೆ ಸರ್ಕಾರವನ್ನು ರಚಿಸಲಾಗುತ್ತದೆ. ಉದಾಹರಣೆಗಾಗಿ, ಹೆಲ್ಮಟ್ ಕೋಹ್ಲ್ ಅವರ ಸಿಡಿಯು ಸರ್ಕಾರವು ಫ್ರೀ ಡೆಮೋಕ್ರಾಟಿಕ್ ಪಾರ್ಟಿ (ಎಫ್‌ಡಿಪಿ) ಯೊಂದಿಗೆ, 1998 ರಿಂದ 2005 ರ ವರೆಗೆ ವರ್ಷಗಳ ತನಕ ಅಧಿಕಾರ ನಿರ್ವಹಿಸಿತು, ಜೆರಾಲ್ಡ್ ಶ್ರೋಲ್ಡರ್ ಅವರ ಎಸ್‌ಪಿಡಿಯು ಗ್ರೀನ್ಸ್ ನೊಂದಿಗೆ ಅಧಿಕಾರದಲ್ಲಿತ್ತು ಮತ್ತು 2009 ರಿಂದ ಆಂಜೆಲಾ ಮರ್ಕೆಲ್‌ರ, ಸಿಡಿಯು/ಸಿಎಸ್‌ಯು ಪಕ್ಷವು ಎಫ್‌ಡಿಪಿಯೊಂದಿಗೆ ಅಧಿಕಾರದಲ್ಲಿತ್ತು.
ಎರಡೂ ರಾಷ್ಟ್ರಗಳಲ್ಲಿ, ಎರಡು ದೊಡ್ಡ ಪಕ್ಷಗಳ ಪ್ರಧಾನವಾದ ಒಕ್ಕೂಟಗಳು ಸಹ ಘಟಿಸುತ್ತದೆ, ಆದರೆ ದೊಡ್ಡ ಪಕ್ಷಗಳು ಸಾಮಾನ್ಯವಾಗಿ ಚಿಕ್ಕ ಪಕ್ಷಗಳೊಂದಿಗೆ ಪಾಲುದಾರರಾಗಲು ಆದ್ಯತೆ ನೀಡುವುದರಿಂದ ಮೇಲಿನ ಸ್ಥಿತಿ ಅಪರೂಪವಾಗಿರುತ್ತದೆ ಆದರೆ, ಯಾವುದೇ ಪಕ್ಷಗಳು ಅವುಗಳ ಆದ್ಯತೆಯ ಒಕ್ಕೂಟವನ್ನು ರಚಿಸಲು ಸಾಕಷ್ಟು ಮತಗಳನ್ನು ಪಡೆಯದೇ ಇರುವ ಸಂದರ್ಭದಲ್ಲಿ, ಸರ್ಕಾರವನ್ನು ರಚಿಸಲು ಪ್ರಧಾನವಾದ ಒಕ್ಕೂಟವು ಅವುಗಳ ಏಕೈಕ ಆಯ್ಕೆಯಾಗಿರುತ್ತದೆ. ಏಂಜೆಲಾ ಮರ್ಕೆಲ್ ಅವರು ಚಾನ್ಸೆಲರ್ ಆಗಿ ನೇಮಕಗೊಂಡಾಗ 2005 ರಲ್ಲಿ ಜರ್ಮನಿಯಲ್ಲಿ ಇದೇ ಪರಿಸ್ಥಿತಿಯಾಗಿತ್ತು: ಮುಂಚಿನ ಚುನಾವಣೆಗಳಲ್ಲಿ, ಸಿಡಿಯು/ಸಿಎಸ್‌ಯು ಎಫ್‌ಡಿಪಿಯೊಂದಿಗೆ ಬಹುಮತದ ಒಕ್ಕೂಟವನ್ನು ರಚಿಸಲು ಸಾಕಷ್ಟು ಮತಗಳನ್ನು ಗಳಿಸಿರಲಿಲ್ಲ; ಅದೇ ರೀತಿ ಎಸ್‌ಪಿಡಿ ಮತ್ತು ಗ್ರೀನ್ಸ್ ಪಕ್ಷಗಳು ತಮ್ಮ ಮುಂಚಿನ ಅಧಿಕಾರ ನಿರ್ವಹಣೆಯ ಒಕ್ಕೂಟವನ್ನು ಮುಂದುವರಿಸಲು ಸಾಕಷ್ಟು ಮತಗಳನ್ನು ಹೊಂದಿರಲಿಲ್ಲ. ಈ ಪ್ರಕಾರವಾಗಿ ಸಿಡಿಯು/ಸಿಎಸ್‌ಯು ಮತ್ತು ಎಸ್‌ಪಿಡಿ ನಡುವೆ ಪ್ರಧಾನವಾದ ಒಕ್ಕೂಟ ಸರ್ಕಾರವನ್ನು ರಚಿಸಲಾಯಿತು. ಇಂತಹ ಪಾಲುದಾರಿಕೆಗಳು ಸಾಮಾನ್ಯವಾಗಿ ಎಚ್ಚರಿಕೆಯಿಂದ ನಿರ್ಮಿಸಿದ ಸಚಿವ ಸಂಪುಟಗಳನ್ನು ಒಳಗೊಂಡಿರುತ್ತವೆ. ಅಂತಿಮವಾಗಿ ಸಿಡಿಯು/ಸಿಎಸ್‌ಯು ಚಾನ್ಸೆಲರನ ಹುದ್ದೆಯನ್ನು ನಿರ್ವಹಿಸಿದರೆ, ಸಿಪಿಡಿಯು ಸಚಿವ ಸಂಪುಟದ ಬಹುಪಾಲು ಹುದ್ದೆಗಳನ್ನು ಪಡೆದುಕೊಂಡಿತು.
ಐರ್ಲೆಂಡ್‌ನಲ್ಲಿ, ೧೯೮೯ ರಿಂದ ಯಾವುದೇ ಏಕೈಕ ಪಕ್ಷವು ಅಧಿಕಾರ ನಡೆಸದೇ ಇರುವುದರಿಂದ ಒಕ್ಕೂಟದ ಸರ್ಕಾರಗಳು ಅತೀ ಸಾಮಾನ್ಯವಾಗಿದೆ. ಒಕ್ಕೂಟಗಳನ್ನು ಸಾಮಾನ್ಯವಾಗಿ ದೊಡ್ಡ ಪಕ್ಷಗಳಾದ ಫಿಯನ್ನಾ ಫೇಲ್ ಮತ್ತು ಫೈನ್ ಗೇಲ್ ಇವುಗಳಲ್ಲಿ ಒಂದನ್ನು ಯಾವಾಗಲೂ ಒಳಗೊಂಡಂತೆ ಎರಡು ಅಥವಾ ಹೆಚ್ಚು ಪಕ್ಷಗಳು ಮತ್ತು ಒಂದು ಅಥವಾ ಹೆಚ್ಚು ಚಿಕ್ಕ ಪಕ್ಷಗಳು ಅಥವಾ ಪಾರ್ಲಿಮೆಂಟಿನ ಪಕ್ಷೇತರ ಸದಸ್ಯರೊಂದಿಗೆ ರಚಿಸಲಾಗುವುದು. ಪ್ರಸ್ತುತ ಸರ್ಕಾರವು ಫಿಯನ್ನಾ ಫೇಲ್ ಮತ್ತು ಗ್ರೀನ್ ಪಾರ್ಟಿ ಪಕ್ಷವನ್ನು ಒಳಗೊಂಡಿದ್ದು, ಪಕ್ಷೇತರರು ಬೆಂಬಲಿಸಿದ್ದಾರೆ.
ಹಲವು ಪಕ್ಷಗಳನ್ನು ಒಳಗೊಂಡ ಒಕ್ಕೂಟಗಳು
[ಬದಲಾಯಿಸಿ]ಒಕ್ಕೂಟ ಸರ್ಕಾವು ಹಲವು ಪಕ್ಷಗಳನ್ನು ಒಳಗೊಂಡಿರಬಹುದು.
ಒಕ್ಟೂಟಗಳ ಉದಾಹರಣೆಗಳು
[ಬದಲಾಯಿಸಿ]ಜರ್ಮನಿ
[ಬದಲಾಯಿಸಿ]ಜರ್ಮನಿ ಯಲ್ಲಿ, ಒಕ್ಕೂಟಗಳು ಅಪರೂಪಕ್ಕೆ ಎರಡಕ್ಕಿಂತ ಹೆಚ್ಚು ಪಕ್ಷಗಳನ್ನು ಒಳಗೊಂಡಿರುತ್ತದೆ (ಅಲ್ಲಿ ಎರಡು ಪರಸ್ಪರ ಸ್ಪರ್ಧಿಸದ, ಯಾವಾಗಲೂ ಏಕೈಕ ಪಕ್ಷ ಸಮಿತಿಯನ್ನು ರೂಪಿಸುವ ಸಿಡಿಯು ಮತ್ತು ಸಿಎಸ್ ಪಕ್ಷಗಳನ್ನು ಇದಕ್ಕೆ ಸಂಬಂಧಿಸಿದಂತೆ ಏಕೈಕ ಪಕ್ಷವೆಂದು ಪರಿಗಣಿಸಲಾಗುತ್ತದೆ).
ಬೆಲ್ಜಿಯಂ
[ಬದಲಾಯಿಸಿ]ಪ್ರತಿ ರಾಜಕೀಯ ಸಮೂಹಕ್ಕೆ ಪ್ರತ್ಯೇಕ ಡಚ್ ಮತ್ತು ಫ್ರೆಂಚ್ ಮಾತನಾಡುವ ಪಕ್ಷಗಳನ್ನು ಹೊಂದಿರುವ ಬೆಲ್ಜಿಯಂ ನಲ್ಲಿ, ಆರು ಪಕ್ಷಗಳವರೆಗೆ ಒಕ್ಕೂಟದ ಸಚಿವ ಸಂಪುಟಗಳು ಅತೀ ಸಾಮಾನ್ಯವಾಗಿರುತ್ತದೆ.
ಫಿನ್‌ಲ್ಯಾಂಡ್
[ಬದಲಾಯಿಸಿ]ಫಿನ್‌ಲ್ಯಾಂಡ್ ನಲ್ಲಿ, ಸ್ವಾತಂತ್ರ್ಯ ಬಂದಾಗಿನಿಂದ ಯಾವುದೇ ಪಕ್ಷವು ಪಾರ್ಲಿಮೆಂಟಿನಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿಲ್ಲ, ಮತ್ತು ಬಹು-ಪಕ್ಷದ ಒಕ್ಕೂಟಗಳು ರೂಢಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ "ರೇನ್ ಬೋ ಗರ್ವನ್‌ಮೆಂಟ್" ಎಂದು ಕರೆಯಲ್ಪಡುವ ಐದು ಪಕ್ಷದ ಆಡಳಿತ ಒಕ್ಕೂಟದೊಂದಿಗೆ ಹೆಚ್ಚು ಸ್ಥಿರವಾದ ಸರ್ಕಾರ (ಲಿಪ್ಪೋನೆನ್ I ಮತ್ತು II) ಅನ್ನು ಫಿನ್‌ಲ್ಯಾಂಡ್ ಪಡೆದಿದೆ. ಲಿಪ್ಪೋನೆನ್ ಸಚಿವ ಸಂಪುಟಗಳು ಸ್ಥಿರವಾಗಿರುವ ದಾಖಲೆಯನ್ನು ಸೃಷ್ಟಿಸಿದೆ, ಮತ್ತು ಮಧ್ಯಮಪಂಥಿ (ಎಸ್‌ಡಿಪಿ) ಮತ್ತು ಕಟ್ಟಾ ಎಡ ಪಂಥೀಯ (ಎಡ ಒಕ್ಕೂಟ) ಎರಡೂ ಸಹ ಪ್ರಮುಖ ಬಲ ಪಂಧೀಯ ಪಕ್ಷವಾದ (ನ್ಯಾಷನಲ್ ಒಕ್ಕೂಟ) ದೊಂದಿಗೆ ಸರ್ಕಾರದಲ್ಲಿರುವುದು ಅಸಾಮಾನ್ಯವಾಗಿದೆ. ಪ್ರಸ್ತುತ ಸರ್ಕಾರವಾದ (ವನ್ಹಾನೆನ್ II) ನಾಲ್ಕು ಪಕ್ಷಗಳ ಒಕ್ಕೂಟವಾಗಿದೆ.
ಭಾರತ
[ಬದಲಾಯಿಸಿ]ಭಾರತ ದಲ್ಲಿ ಪ್ರಸ್ತುತ 13 ಪ್ರತ್ಯೇಕ ಪಕ್ಷಗಳನ್ನು ಒಳಗೊಂಡಿರುವ ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟ ಅಧಿಕಾರ ನಡೆಸುತ್ತಿದೆ.
ಇಸ್ರೇಲ್
[ಬದಲಾಯಿಸಿ]ಇಂತಹುದೇ ಸನ್ನಿವೇಶವು ಇಸ್ರೇಲ್ ನಲ್ಲಿದ್ದು, ಅಲ್ಲಿನ ನೀಸೆಟ್ ನಲ್ಲಿ ಹತ್ತಾರು ವಿವಿಧ ಪಕ್ಷಗಳು ಪ್ರಾತಿನಿಧ್ಯವನ್ನು ಪಡೆದಿವೆ. ಇಲ್ಲಿಯವರೆಗೂ ನೀಸೆಟ್‌ನ ಬಹುಮತವನ್ನು ಪಡೆದ ಏಕೈಕ ಪಕ್ಷವು ಲೇಬರ್ ಪಕ್ಷ ಮತ್ತು ಮಾಪಮ್ ನ ಒಕ್ಕೂಟವಾದ ಅಲೈನ್‌ಮೆಂಟ್ ಆಗಿದ್ದು, ಅದು 1968-1960 ರ ಅಲ್ಪಾವಧಿಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿತ್ತು. ಐತಿಹಾಸಿಕವಾಗಿ, ಇಸ್ರೇಲಿ ಸರ್ಕಾರದ ನಿಯಂತ್ರಣವು ಹಲವು ಬಲ-ಪಂಧೀಯ ಮತ್ತು ಧಾರ್ಮಿಕ ಪಕ್ಷಗಳ ಮೈತ್ರಿಕೂಟದೊಂದಿಗೆ ಮಧ್ಯ-ಬಲ ಪಂಥೀಯ ಲಿಕುಡ್ ಆಡಳಿತದ ಅವಧಿ ಹಲವು ಎಡ-ಪಂಥೀಯ ಪಕ್ಷಗಳ ಮೈತ್ರಿಕೂಟದೊಡನೆ ಮಧ್ಯ-ಎಡ ಪಂಥೀಯ ಲೇಬರ್ ಪಕ್ಷದ ಆಡಳಿತದ ನಡುವೆ ಬದಲಾವಣೆಗೊಂಡಿದೆ. 2006 ರಲ್ಲಿ ಏರಿಯಲ್ ಶರೋನ್ ಅವರು ರಚಿಸಿದ ಮಧ್ಯಮಾರ್ಗಿ ಕಾಡಿಮಾ ಪಕ್ಷವು ಹಿಂದಿನ ಲೇಬರ್ ಮತ್ತು ಲಿಕುಡ್ ಸದಸ್ಯರಿಂದ ಬೆಂಬಲವನ್ನು ಗಳಿಸಿತು ಮತ್ತು ಕಡಿಮಾ ಪಕ್ಷವು ಲೇಬರ್ ಮತ್ತು ಹಲವು ಇತರ ಪಕ್ಷಗಳ ಒಕ್ಕೂಟದೊಂದಿಗೆ ಆಡಳಿತವನ್ನ ನಡೆಸಿತು.
ಜಪಾನ್
[ಬದಲಾಯಿಸಿ]ಎರಡನೇ ವಿಶ್ವ ಯುದ್ಧದ ನಂತರ ಐತಿಹಾಸಿಕವಾಗಿ ಲಿಬರಲ್ ಡೆಮೋಕ್ರಾಟಿಕ್ ಪಾರ್ಟಿ ಯುಜಪಾನ್ ನಲ್ಲಿ ಪ್ರಾಬಲ್ಯವನ್ನು ಸಾಧಿಸಿತು, ಆದರೆ 1993 ಚುನಾವಣೆ ಯಲ್ಲಿ ಎಲ್‌ಡಿಪಿಯು 1955 ರ ನಂತರ ಮೊದಲ ಬಾರಿಗೆ ಪ್ರಜಾಪ್ರತಿನಿಧಿಗಳ ಸಭೆ ಯಲ್ಲಿ ಒಟ್ಟಾರೆ ಬಹುಮತವನ್ನು ಕಳೆದುಕೊಂಡ ನಂತರ ಅಲ್ಪಾವಧಿಗೆ ಒಕ್ಕೂಟದ ಸರ್ಕಾರ ರಚನೆಯಾಯಿತು.
ಆಸ್ಟ್ರೇಲಿಯಾ
[ಬದಲಾಯಿಸಿ]ಆಸ್ಟ್ರೇಲಿಯಾ ದಲ್ಲಿ, ಸಂಪ್ರದಾಯವಾದಿ ಲಿಬರಲ್/1} ಮತ್ತು ನ್ಯಾಷನಲ್ ಪಕ್ಷಗಳು ಪರಿಣಾಮಕಾರಿ ಖಾಯಂ ಒಕ್ಕಟ್ಟಾಗಿ ಕೋವಲಿಷನ್ ಎಂಬುದಾಗಿ ಸರಳವಾಗಿ ಒಗ್ಗೂಡಿವೆ. ಒಕ್ಕೂಟವು ಕನಿಷ್ಠ ಫೆಡರಲ್ ಹಂತದಲ್ಲಾದರೂ ಎಷ್ಟು ಸ್ಥಿರವಾಗಿದೆಯೆಂದರೆ, ಕೋಯಲಿಷನ್ ಮತ್ತು ಲೇಬರ್ ಪಾರ್ಟಿಗಳು ಪ್ರಮುಖ ಪಕ್ಷಗಳಾಗಿ ಪಾರ್ಲಿಮೆಂಟಿನ ಕೆಳಗಿನ ಮನೆಯು ಕಾರ್ಯತಃ ಎರಡು-ಪಕ್ಷದ ಸದನವಾಗಿಬಿಟ್ಟಿದೆ.
ಇತರ ಒಕ್ಕೂಟಗಳು ಸಮಯದಿಂದ ಸಮಯಕ್ಕೆ ರಚನೆಯಾಗಿವೆ. ರಾಜ್ಯ/ಪ್ರಾಂತ್ಯದ ಹಂತದಲ್ಲಿ ರಚಿತವಾಗಿರುವ ಒಕ್ಕೂಟಗಳು ಇವುಗಳನ್ನು ಒಳಪಡಿಸಿಕೊಂಡಿವೆ:
- ತಾಸ್ಮಾನಿಯದಲ್ಲಿ:
-
- ಲಿಬರಲ್– 1996 ರಲ್ಲಿ ಗ್ರೀನ್ಸ್ ಒಕ್ಕೂಟ ;
- ಲೇಬರ್–1989 ಮತ್ತು 2010 ರಲ್ಲಿ ಗ್ರೀನ್ಸ್ ಒಕ್ಕೂಟವನ್ನು ರಚಿಸಲಾಯಿತು.
- ಆಸ್ಟ್ರೇಲಿಯನ್ ಕ್ಯಾಪಿಟಲ್ ಪ್ರಾಂತ್ಯದಲ್ಲಿ:
-
- ಲಿಬರಲ್–1998 ರಲ್ಲಿ ಸ್ವತಂತ್ರ್ಯ ಒಕ್ಕೂಟ ;
- ಲೇಬರ್–2001 ಮತ್ತು 2008 ರಲ್ಲಿ ಗ್ರೀನ್ಸ್ ಒಕ್ಕೂಟ.
ಯುನೈಟೆಡ್ ಕಿಂಗ್‌ಡಮ್
[ಬದಲಾಯಿಸಿ]ಯುನೈಟೆಡ್ ಕಿಂಗ್‌ಡಮ್ನಲ್ಲಿ, ಒಕ್ಕೂಟ ಸರ್ಕಾರಗಳನ್ನು (ಕೆಲವೊಮ್ಮೆ ರಾಷ್ಟ್ರೀಯ ಸರ್ಕಾರಗಳು ಎಂದು ಕರೆಯಲಾಗುತ್ತದೆ) ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಮಾತ್ರ ನೇಮಕ ಮಾಡಲಾಗುತ್ತದೆ. ಅತ್ಯಂತ ಪ್ರಮುಖವಾದುದೆಂದರೆ ೧೯೩೧ ರಿಂದ ೧೯೪೦ ರವರೆಗಿನ ರಾಷ್ಟ್ರೀಯ ಸರ್ಕಾರ ವಾಗಿದೆ. ಎರಡೂ ವಿಶ್ವ ಯುದ್ಧಗಳ ಸಂದರ್ಭದಲ್ಲಿ ಬಹು-ಪಕ್ಷದ ಒಕ್ಕೂಟಗಳಿದ್ದವು. ಇದನ್ನು ಹೊರತುಪಡಿಸಿ, ಯಾವುದೇ ಪಕ್ಷವು ಬಹುಮತವನ್ನು ಹೊಂದಿಲ್ಲದಿದ್ದಾಗ, ಸರ್ಕಾರವು ಕಾರ್ಯನಿರ್ವಹಿಸಲು ಅಗತ್ಯವಾದ ಮಸೂದೆಯ ಪರವಾಗಿ ಮತ ಚಲಾಯಿಸಲು ಒಂದು ಅಥವಾ ಹೆಚ್ಚು ವಿರೋಧ ಪಕ್ಷಗಳು ಒಪ್ಪುವುದರೊಂದಿಗೆ ಸಾಮಾನ್ಯವಾಗಿ ಅಲ್ಪಮತದ ಸರ್ಕಾರವನ್ನು ರಚಿಸಲಾಯಿತು. ಆದರೆ, ೧೯೯೭ ರಲ್ಲಿ ಲೇಬರ್ ಪಕ್ಷದ ಪ್ರಚಂಡ ವಿಜಯದ ಸಮಯದಲ್ಲಿ ಲೇಬರ್-ಲಿಬ್ಡೆಮ್ ಒಕ್ಕೂಟವು ಎರಡೂ ಭಾಗಗಳಿಂದ ಗಂಭೀರವಾದ ಪರಿಶೀಲನೆಗೆ ಒಳಗಾಗಿತ್ತು[೧]. ಮೇ 2010 ರ ಸಾಮಾನ್ಯ ಚುನಾವಣೆಯು ಅತಂತ್ರ ಪಾರ್ಲಿಮೆಂಟ್ ಗೆ ಕಾರಣವಾಯಿತು, ಇದರ ಪರಿಣಾಮವಾಗಿ ಹೆಚ್ಚು ಸ್ಥಾನಗಳಲ್ಲಿ ಜಯಿಸಿದ ಕನ್ಸರ್‌ವೇಟಿವ್‌ಗಳು ಪಕ್ಷವು ಪಾರ್ಲಿಮೆಂಟಿನಲ್ಲಿ ಬಹುಮತವನ್ನು ಪಡೆಯುವ ಉದ್ದೇಶದಿಂದ ಲಿಬರಲ್ ಡೆಮೋಕ್ರಾಟಿಕ್ಸ್ ಪಕ್ಷದೊಂದಿಗೆ ಒಕ್ಕೂಟವನ್ನು ರಚಿಸಿಕೊಂಡಿತು. ವೆಸ್ಟ್‌ಮಿನಿಸ್ಟರ್‌ನಲ್ಲಿ ಕನ್ಸರ್‌ವೇಟಿವ್‌ಗಳು ಮತ್ತು ಲಿಬ್ ಡೆಮ್ಸ್ ಪಕ್ಷಗಳು ಅಧಿಕಾರ- ಹಂಚಿಕೆಯ ಒಪ್ಪಂದವನ್ನು ಮಾಡಿಕೊಂಡಿದ್ದು ಇದೇ ಮೊದಲ ಬಾರಿಯಾಗಿತ್ತು.[೨] ಅಕ್ಟೋಬರ್ 1974 ಚುನಾವಣೆಯಲ್ಲಿ ಗಳಿಸಿದ ಲೇಬರ್ಸ್ ಪಕ್ಷವು ಗಳಿಸಿದ ಮೂರು ಸ್ಥಾನಗಳ ಬಹುಮತವನ್ನು ನಿರಂತರ ಉಪ ಚುನಾವಣೆಗಳ ಸೋಲುಗಳು ಕೊರೆದು ಹಾಕಿದ ನಂತರ [೩] ಲೇಬರ್ ಮತ್ತು ಲಿಬರಲ್ ಪಕ್ಷಗಳ ನಡುವೆ ಪೂರ್ಣ ಪ್ರಮಾಣದ ಒಕ್ಕೂಟವನ್ನು ನಿಲ್ಲಿಸುವ ಬಗ್ಗೆ ಒಪ್ಪಂದವು ಮಾರ್ಚ್ 1977 ರಿಂದ ಜುಲೈ 1978 ರವರೆಗೆ ಇತ್ತಾದರೂ, ಅದು 1945 ರ ನಂತರ ವಾಸ್ತವಿಕವಾಗಿ ವಿನ್‌ಸ್ಟನ್ ಚರ್ಚಿಲ್ ಅವರ ಯುದ್ಧಸಮಯದ ಒಕ್ಕೂಟವು ಸ್ಥಾಪಿತವಾದ 70 ವರ್ಷಗಳ ನಂತರ ಬ್ರಿಟನ್‌ನಲ್ಲಿ ಸ್ಥಾಪಿತವಾದ ಮೊದಲ ಪೂರ್ಣ ಪ್ರಮಾಣದ ಒಕ್ಕೂಟವಾಗಿತ್ತು.
ಕೆನಡಾ
[ಬದಲಾಯಿಸಿ]ಕೆನಡಾದಲ್ಲಿ 1864 ರಲ್ಲಿ ಕ್ಲಿಯರ್ ಗ್ರಿಟ್ಸ್, ಪಾರ್ಟಿ ಬ್ಲೂ, ಮತ್ತು ಲಿಬರಲ್-ಕನ್ಸರ್ವೇಟಿವ್ ಪಾರ್ಟಿಗಳಿಂದ ಗ್ರೇಟ್ ಕೊಯಲಿಷನ್ ಅನ್ನು ರಚಿಸಲಾಯಿತು. 1867 ರಲ್ಲಿ ನ ಮೈತ್ರಿ ಯ ನಂತರ ರಚಿತವಾದ ಕೆನಡಾದ ಪ್ರಥಮ ಸರ್ಕಾರವು 1872 ರವರೆಗೆ ನಡೆಯಿತು ಮತ್ತು ಅದು ಪ್ರಧಾನ ಮಂತ್ರಿ ಜಾನ್ ಎ ಮ್ಯಾಕ್‌ಡೊನಾಲ್ಡ್ ಅವರ ನೇತೃತ್ವದ ಒಕ್ಕೂಟವಾಗಿತ್ತು. ಮೊದಲ ವಿಶ್ವ ಯುದ್ದ ದ ಸಂದರ್ಭದಲ್ಲಿ ವಿವಾದಿತ ಯುದ್ಧಗಂದಾಯ ಮಸೂದೆಗೆ ಬೆಂಬಲನ್ನು ಒಗ್ಗೂಡಿಸಲು ವಿರೋಧಿ ಲಿಬರಲ್‌ಗಳ ನೆರವಿನೊಂದಿಗೆ ಒಕ್ಕೂಟವನ್ನು ರಚಿಸಲು ಪ್ರಧಾನ ಮಂತ್ರಿ ರಾಬರ್ಟ್ ಬೋರ್ಡನ್ ಪ್ರಯತ್ನಿಸಿದರು. ಲಿಬರಲ್ ಪಕ್ಷವು ಆಹ್ವಾನವನ್ನು ತಿರಸ್ಕರಿಸಿತು, ಆದರೆ ಅದರ ಕೆಲವು ಸದಸ್ಯರು ಪಕ್ಷಾಂತರ ಮಾಡಿ ಸರ್ಕಾರದೊಂದಿಗೆ ಶಾಮೀಲಾದರು. ಕೆಲವೊಮ್ಮೆ ಒಕ್ಕೂಟ ಸರ್ಕಾರವೆಂದು ಉಲ್ಲೇಖಿಸಲಾದರೂ, ಮೇಲಿನ ನಿರೂಪಣೆಯ ಪ್ರಕಾರ, ಅದು ಅಲ್ಲ. ಯುದ್ಧದ ನಂತರ ಅದನ್ನು ವಿಸರ್ಜಿಸಲಾಯಿತು.[೪]
2008 ಕೆನಡಾದ ಪಾರ್ಲಿಮೆಂಟಿನ ವಿವಾದ ದ ಸಂದರ್ಭದಲ್ಲಿ, ಕೆನಡಾದ ಮೂರು ವಿರೋಧ ಪಕ್ಷಗಳು ಒಂದು ವೇಳೆ ಅವರು ಅವಿಶ್ವಾಸ-ನಿರ್ಣಯದಲ್ಲಿ ಕನ್ಸರ್ವೇಟಿವ್ ಅಲ್ಪಮತದ ಸರ್ಕಾರವನ್ನು ಸೋಲಿಸಿ[೫] ಸ್ಟೀಫನ್ ಹಾರ್ಪರ್ ಅವರನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ, ಮೈತ್ರಿಯ ನಂತರದ ರಾಷ್ಟ್ರದ ಎರಡನೆಯ ಒಕ್ಕೂಟ ಸರ್ಕಾರವೆಂದೇ ಆಗಬಹುದಾದ ಸರ್ಕಾರವನ್ನು ರಚಿಸಲು ಒಪ್ಪಂದವೊಂದಕ್ಕೆ ಸಹಿ ಹಾಕಿರುವುದಾಗಿ ಪ್ರಕಟಿಸಿದರು. ಒಪ್ಪಂದವು ಎರಡು ವಿರೋಧ ಪಕ್ಷಗಳಾದ ಲಿಬರಲ್ ಪಾರ್ಟಿ ಮತ್ತು ನ್ಯೂ ಡೆಮೋಕ್ರಾಟಿಕ್ ಪಾರ್ಟಿ ಯನ್ನು ಒಳಗೊಂಡಿರುವ ಔಪಚಾರಿಕ ಒಕ್ಕೂಟದ ರೂಪುರೇಖೆ ಮಾಡಿತು. ೧೮ ತಿಂಗಳವರೆಗೆ ವಿಶ್ವಾಸ ವಿಷಯಗಳಿಗೆ ಸಂಬಂಧಿಸಿದಂತೆ ಉದ್ದೇಶಿತ ಒಕ್ಕೂಟಕ್ಕೆ ಬೆಂಬಲ ಸೂಚಿಸಲುಬ್ಲಾಕ್ ಕ್ವೆಬೆಕೋಯ್ಸ್ ಒಪ್ಪಿಗೆ ಸೂಚಿಸಿತು. ಕೊನೆಯಲ್ಲಿ, ಪಾರ್ಲಿಮೆಂಟ್ ಅನ್ನು ವಜಾ ಮಾಡಲಾಯಿತು ಮತ್ತು ಒಕ್ಕೂಟವನ್ನು ವಿಸರ್ಜಿಸಲಾಯಿತು.
ಒಕ್ಕೂಟ ಸರ್ಕಾರದ ಪರ ಮತ್ತು ವಿರುದ್ಧದ ಚರ್ಚೆಗಳು
[ಬದಲಾಯಿಸಿ]ಸಮಾನುಪಾತ ಪ್ರಾತಿನಿಧ್ಯದ ವಕೀಲರು ಸೂಚಿಸುವಂತೆ ಒಕ್ಕೂಟ ಸರ್ಕಾರವು ಹೆಚ್ಚಿನ ಒಮ್ಮತ- ಆಧಾರಿತ ರಾಜಕೀಯಕ್ಕೆ ಕಾರಣವಾಗುತ್ತದೆ, ಅದರಲ್ಲಿ ಸರ್ಕಾರಿ ನೀತಿಗೆ ಸಂಬಂಧಿಸಿದಂತೆ ವಿವಿಧ ಪಕ್ಷಗಳನ್ನು ಒಳಗೊಂಡಿರುವ (ಆಗಾಗ್ಗೆ ವಿವಿಧ ಸಿದ್ಧಾಂತಗಳನ್ನು ಆಧರಿಸಿ) ಸರ್ಕಾರವು ಘಟಿಸುತ್ತದೆ. ಇನ್ನೊಬ್ಬರು ಹೇಳುವ ಪ್ರಕಾರ ಒಕ್ಕೂಟ ಸರ್ಕಾರದ ಲಾಭವೆಂದರೆ ಅದು ರಾಷ್ಟ್ರದೊಳಗೆ ಮತದಾರರ ಜನಪ್ರಿಯ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ.
ಇಂತಹ ಸರ್ಕಾರಗಳು ಹತೋಟಿ ಮೀರುವ ಪ್ರವೃತ್ತಿಯನ್ನು ಹೊಂದಿರುತ್ತದೆ ಮತ್ತು ಅಸಾಮರಸ್ಯಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ ಎಂದು ಒಕ್ಕೂಟ ಸರ್ಕಾರವನ್ನು ಅನುಮೋದಿಸದೇ ಇರುವವವರು ನಂಬುತ್ತಾರೆ. ಇದು ಏಕೆಂದರೆ ಒಕ್ಕೂಟಗಳು ಅಗತ್ಯವಾಗಿ ಭಿನ್ನವಾಗಿರುವ ನಂಬಿಕೆಗಳ ವಿವಿಧ ಪಕ್ಷಗಳನ್ನು ಒಳಗೊಂಡಿರುತ್ತದೆ, ಆದ್ದರಿಂದ ಸರ್ಕಾರಿ ನೀತಿಯ ಸರಿಯಾದ ಮಾರ್ಗವನ್ನು ಯಾವಾಗಲೂ ಒಪ್ಪದೇ ಇರಬಹುದು. ಕೆಲವೊಮ್ಮೆ ಚುನಾವಣೆಗಳ ಫಲಿತಾಂಶಗಳು ಹೇಗಾಗಿರುತ್ತದೆ ಎಂದರೆ ಫ್ಲಾಂಡರ್ಸ್ ಅಥವಾ ಉತ್ತರ ಐರ್ಲೆಂಡ್ ನಲ್ಲಿರುವಂತೆ ಖಚಿತವಾಗಿ ಹೆಚ್ಚು ಸಂಭವನೀಯವಾದ ಒಕ್ಕೂಟಗಳು ಸೈದ್ಧಾಂತಿಕವಾಗಿ ಕಾರ್ಯಸಾಧ್ಯವಾಗುತ್ತವೆ. ಚಿಕ್ಕ ಪಕ್ಷಗಳು "ಕಿಂಗ್‌ಮೇಕರ್" ಆಗಿ ಪಾತ್ರ ವಹಿಸುವ ಸಾಮರ್ಥ್ಯ ಮತ್ತು ನಿರ್ದಿಷ್ಟವಾಗಿ ನಿಕಟ ಚುನಾವಣೆಗಳಲ್ಲಿ, ಅವುಗಳು ಗಳಿಸಿದ ಮತಕ್ಕೆ ಹೋಲಿಸಿದರೆ ಬೆಂಬಲಕ್ಕಾಗಿ ಅವರು ಪಡೆಯುವ ಹೆಚ್ಚಿನ ಲಾಭವು ಎರಡನೆಯ ತೊಡಕಾಗಿರಬಹುದು.
ಭಿನ್ನಾಭಿಪ್ರಾಯ ಮತ್ತು ಕ್ರಮಬದ್ಧವಾದ ಚರ್ಚೆಯು ಹೆಚ್ಚು ಫಲಪ್ರದವಾಗಿರುವಾಗ ಸಮಸ್ಯೆಗಳ ಕುರಿತಂತೆ ಒಮ್ಮತ ವನ್ನು ಕಾಯ್ದುಕೊಳ್ಳುವ ಕುರಿತಂತೆಯೂ ಒಕ್ಕೂಟ ಸರ್ಕಾರಗಳನ್ನು ಟೀಕೆ ಮಾಡಲಾಗಿದೆ. ಒಮ್ಮತವನ್ನು ಸೃಷ್ಟಿಸಲು, ವಿರೋಧಿಗಳ ವಿರುದ್ಧ ಒಕ್ಕೂಟವನ್ನು ಒಂದುಗೂಡಿಸಲು ಯಾವುದೇ ಸಮಸ್ಯೆಗಳ ಕುರಿತಂತೆ ಆಡಳಿತಾರೂಢ ಒಕ್ಕೂಟದ ನಾಯಕರುಗಳು ಅವರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಲು ಒಪ್ಪಬಹುದು. ಒಕ್ಕೂಟದ ಪಾಲುದಾರರು, ಒಂದು ವೇಳೆ ಅವರು ಸಂಸತ್ತಿನ ಬಹುಮತವನ್ನು ನಿಯಂತ್ರಿಸಿದರೆ, ವಿಷಯಗಳ ಬಗ್ಗೆ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷಗಳಲ್ಲಿ ಸಮಸ್ಯೆಯ ಕುರಿತು ಭಿನ್ನಾಭಿಪ್ರಾಯ ವಿದ್ದರೂ, ವಿರೋಧಿಗಳ ಚರ್ಚೆಯ ಕುರಿತು ಆಗಾಗ್ಗೆ ಉಪೇಕ್ಷೆ ಮಾಡುವ ಮೂಲಕ ಮತ್ತು ವಿರೋಧಿಗಳ ಪ್ರಸ್ತಾಪದ ವಿರುದ್ಧ ಮತ ಚಲಾಯಿಸುವ ಮೂಲಕ ಸಮಸ್ಯೆಯ ಕುರಿತ ಚರ್ಚೆಯನ್ನು ಅಪ್ರಸ್ತುತಗೊಳಿಸಲು ಒಳಸಂಚು ಹೂಡಬಹುದು.
ಅಭಿವೃದ್ದಿ ಹೊಂದುತ್ತಿರುವ ಪಕ್ಷಗಳ ಬೆಳವಣಿಗೆಗೆಯನ್ನು ನಿಗ್ರಹಿಸಲು ಬಲಶಾಲಿ ಪಕ್ಷಗಳು ಒಕ್ಕೂಟವೊಂದನ್ನು ರೂಪಿಸಲು ಅಲ್ಪಸಂಖ್ಯಾಪ್ರಭುತ್ವ ದ ರೀತಿಯಲ್ಲಿಯೂ ಸಹ ಕೆಲಸ ನಿರ್ವಹಿಸಬಹುದು. ಖಂಡಿತವಾಗಿ, ಬೆಳವಣಿಗೆ ಹೊಂದುವ ಪಕ್ಷಗಳ ನಿಗ್ರಹಿಸುವಿಕೆಯ, ಕೆಲವೊಮ್ಮೆ ತಾರತಮ್ಯದ ನಾಮಕರಣ ನಿಯಮಗಳು ನಿಯಂತ್ರಣಗಳು ಮತ್ತು ಬಹುತ್ವ ಮತದಾನದ ವ್ಯವಸ್ಥೆ ಯ ಮತ್ತು ಇತರವುಗಳ ಮೂಲಕ ಕಾರಣದಿಂದ ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಎರಡು-ಪಕ್ಷ ವ್ಯವಸ್ಥೆಗೆ ಹೋಲಿಸಿದರೆ ಅಂತಹ ಘಟನೆಗಳು ಒಕ್ಕೂಟ ಸರ್ಕಾರದಲ್ಲಿ ಅಪರೂಪವಾಗಿರುತ್ತದೆ.
ಏಕೈಕ, ಹೆಚ್ಚು ಶಕ್ತಿಶಾಲಿಯಾದ ಪಕ್ಷವು ಒಕ್ಕೂಟದ ನೀತಿಗಳನ್ನು ಅಸಮಾನವಾಗಿ ರೂಪಿಸಬಹುದು . ಚಿಕ್ಕದಾದ ಅಥವಾ ಕಡಿಮೆ ಶಕ್ತಿಶಾಲಿಯಾದ ಪಕ್ಷಗಳು ಮುಕ್ತವಾಗಿ ಒಪ್ಪದಿರುವಂತೆ ಭಯ ಹುಟ್ಟಿಸಬಹುದು. ಒಕ್ಕೂಟವನ್ನು ನಿರ್ವಹಣೆ ಮಾಡಲು, ಅವರು ಪಾರ್ಲಿಮೆಂಟಿನಲ್ಲಿ ಪಕ್ಷದ ವೇದಿಕೆಯ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ ಅವರು ಹಾಗೆ ಮಾಡದಿದ್ದರೆ, ಪಕ್ಷವು ಸರ್ಕಾರವನ್ನು ತೊರೆಯಬೇಕಾಗುತ್ತದೆ ಮತ್ತು ಆಡಳಿತ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಇದನ್ನು ಸಹ ನೋಡಿ
[ಬದಲಾಯಿಸಿ]- ಪ್ರಜಾಪ್ರಭುತ್ವ ಮತ್ತು ಚುನಾವಣೆ-ಸಂಬಂಧಿತ ವಿಷಯಗಳ ಪಟ್ಟಿ
- ಒಕ್ಕೂಟ ಸರ್ಕಾರಗಳೊಂದಿಗಿನ ರಾಷ್ಟ್ರಗಳ ಪಟ್ಟಿ
- ಸಹಜೀವನ
- ಸಹಯೋಗದ ನಾಯಕತ್ವ
- ಬಹುತ್ವ ಮತದಾನ ಪದ್ಧತಿ
- ಮತದಾರರ ಐಕ್ಯತೆ
- ಜನಪ್ರಿಯ ರಂಗ
- ಸಂಯುಕ್ತ ಮೈತ್ರಿಕೂಟ
- ಬಹುಮತದ ಸರ್ಕಾರ
- ಅತಂತ್ರ ಸಂಸತ್ತು
- ಅಲ್ಪಮತದ ಸರ್ಕಾರ
- ವರ್ಗ:ಪಕ್ಷಗಳ ಒಕ್ಕೂಟ
ಉಲ್ಲೇಖಗಳು
[ಬದಲಾಯಿಸಿ]- ↑ "Making Minority Government Work:Hung Parliaments and the Challenges for Westminster and Whitehall" (PDF). 2008-12-02. Retrieved 2009-12-07.
- ↑ "Tories and Lib Dems enter full coalition government". The New Statesman.
- ↑ ಚರ್ಚಿಲ್ ಅವರು 10 ಮೇ ೧೯೪೦ ರಂದು, ಡೇವಿಡ್ ಕ್ಯಾಮರೂನ್ ಅವರು 11 ಮೇ ೨೦೧೦ ರಂದು ಪ್ರಧಾನ ಮಂತ್ರಿಯಾದರು. ಚರ್ಚಿಲ್ ಅವರು ತಮ್ಮ ಯುದ್ಧ ಸಚಿವ ಸಂಪುಟವನ್ನು 11 ಮೇ ರಂದು ರಚಿಸಿದರು: ವಿನ್‌ಸ್ಟನ್ ಎಸ್. ಚರ್ಚಿಲ್ (1949) ದೆರ್ ಫೈನೆಸ್ಟ್ ಅವರ್ .
- ↑ "Coalition Government: Precedents from around the world". CBC News. 2010-05-13. Retrieved 2009-05-14.
- ↑ Menon, Nirmala (2008-12-02). "Coalition Set To Topple Canada PM". Wall Street Journal. Retrieved 2008-12-02.
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Articles needing additional references from May 2010
- All articles needing additional references
- Articles that may contain original research from June 2009
- All articles that may contain original research
- Articles with hatnote templates targeting a nonexistent page
- ಒಕ್ಕೂಟ ಸರ್ಕಾರಗಳು