ಎಂ ಬಿ ರವೀಂದ್ರನಾಥ

ವಿಕಿಪೀಡಿಯ ಇಂದ
Jump to navigation Jump to search
Colonel
Magod Basappa Ravindranath
Magod Basappa Ravindranath 01.jpg
Born೧೫ ಮೇ ೧೯೫೯[೧]
Shimoga district, Karnataka, India [೨]
Diedಏಪ್ರಿಲ್ 8, 2018(2018-04-08) (ವಯಸ್ಸು 58)
Jayanagar, Bangalore, Karnataka, India
Allegianceಭಾರತ
Service/branchIndian Army
Years of service1980 - 1999
RankColonel of the Indian Army.svg
Service numberIC-38662[೨]
Unit2 Rajputana Rifles
Commands held2 Rajputana Rifles
Battles/wars
Awards
Spouse(s)Anitha[೩]
Relations
  • Magodu Basappa (father)
  • Sarojamma Basappa (mother)
[೩]

ಮಗೊಡ್ ಬಸಪ್ಪ ರವಿಂದ್ರನಾಥ ಅವರು ಭಾರತೀಯ ಸೈನ್ಯದ ಆಫೀಸರ್ ಆಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ಇವರ ಶೌರ್ಯಕ್ಕೆ ವೀರಚಕ್ರ ದೊರಕಿತ್ತು 

ಕುಟುಂಬ[ಬದಲಾಯಿಸಿ]

ಇವರು 1959ರಲ್ಲಿ ಶಿವಮೊಗ್ಗದ ಮಾಗೋಡು ಎಂಬಲ್ಲಿ ಜನಿಸಿದರು. ಯಾವರ ತಂದೆ ಬಸಪ್ಪ ಮತ್ತು ತಾಯಿ ಸರೋಜಮ್ಮ. ಇವರ ತಂದೆ ಶಾಲಾ ಶಿಕ್ಷಕರಾಗಿದ್ದರು. ಇವರು ತಮ್ಮ ಶಿಕ್ಷಣವನ್ನು ಬಿಜಾಪುರದ ಸೈನಿಕ ಶಾಲೆಯಲ್ಲಿ ಪೂರ್ತಿ ಗೊಳಿಸಿದರು.

ಮಿಲಿಟರಿ ಜೀವನ [ಬದಲಾಯಿಸಿ]

ಬಿಜಾಪುರದಲ್ಲಿ PUC ಮುಗಿಸಿದ ನಂತರ ಇವರು ಪುಣೆಯ ಖಡಕ್ ವಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡಮಿಯಲ್ಲಿ ಮೂರು ವರ್ಷಗಳ ಕೋರ್ಸ್ ಮುಗಿಸಿ ನಂತರ 1980ರಲ್ಲಿ ಡೆಹ್ರಾಡೂನ್ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡಮಿ ಸೇರಿದರು. ಅಲ್ಲಿ ಅವರು ಆಫೀಸ್ ಆಗಿ ಅಧಿಕಾರ ಸ್ವೀಕರಿಸಿ ತಮ್ಮ ಮೊದಲ ಯೂನಿಟ್ ರಜಪೂತಾನ ರೈಫಾಲ್ಸ್ ಗೆ ಸೇರಿದರು.. ಇವರ ಮೊದಲ ಪೋಸ್ಟಿಂಗ್ ಅರುಣಾಚಲ ಪ್ರದೇಶ ಆಗಿತ್ತು. ಅಲ್ಲಿ ಕೆಲ ವರ್ಷಗಳಕಾಲ ಸೇವೆಯನ್ನು ಸಲ್ಲಿಸಿ ನಂತರ ಮಧ್ಯಪ್ರದೆಶದಲ್ಲಿರುವ ಮಹು ಕಮಾಂಡೋ ಸೆಂಟರ್ ನಲ್ಲಿ ತರಭೇತಿದಾರರಾಗಿ ಸೇವೆಯನ್ನು ಸಲ್ಲಿಸಿದರು. ಅಲ್ಲಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಆಪರೇಶನ್ ಕೌಂಟರ್ ಟೆರರಿಸ್ಟ್ ನಲ್ಲಿ ಭಾಗವಹಿಸಿದರು. ಅವರು ಸುಮಾರು 8 ವರ್ಷಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದರು[೪][೫]

ಕಾರ್ಗಿಲ್ ಯುದ್ಧ [ಬದಲಾಯಿಸಿ]

ಕಾರ್ಗಿಲ್ ಯುದ್ಧದ ಸಮಯದಲ್ಲಿ ಇವರು ರಾಜಪೂತಾನ ರೈಫಾಲ್ಸ್ ನ ಎರಡನೇ ಬೆಟಾಲಿಯನ್ ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿದ್ದರು. ಇವರ ಯೂನಿಟ್ ಗೆ ಭಾರತಕ್ಕೆ ಅತೀ ಮುಖ್ಯವಾದ ಟೋಲೋಲಿಂಗ ಪರ್ವತವನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ನೀಡಲಾಯಿತು. ಇವರು ಮತ್ತು ಇವರ ಯೂನಿಟ್ ನ ವೀರ ಯೋಧರ ಶೌರ್ಯದಿಂದ ಈ ಪರ್ವತವು ಭಾರತದ ವಶವಾಗಿ ಇಡೀ ಯುದ್ಧವನ್ನೇ ಗೆದ್ದಿತು. [೬]

ಜೂನ್ 12,1999ರಲ್ಲಿ ಎರಡನೇ ರಾಜಪೂತಾನ ರೈಫಾಲ್ಸ್ ಅವರು ತೊಲೋಲಿಂಗ್ ಪರ್ವತವನ್ನು ವಶಪಡಿಸುವತ್ತ ಹೋಗುತ್ತಿದ್ದಾಗ ಪಾಕಿಸ್ತಾನದ ಕಡೆಯಿಂದ ಭಾರೀ ಗಾತ್ರದ ಶೆಲ್ಲಿಂಗ್ ನಡೆಯುತ್ತಿತ್ತು. ಆದರೂ ರವಿಂದ್ರನಾಥ್ ಅವರು ಖುದ್ದಾಗಿ ಯುದ್ಧ ಭೂಮಿಗೆ ಹೋಗಿ ಅಲ್ಲಿದ್ದ ಸೈನಿಕರನ್ನು ಹುರಿದುಂಭಿಸಿ ಅಲ್ಲಿ ಅಡಗಿದ್ದ ಪಾಕಿಸ್ತಾನೀ ನರಿಗಳನ್ನು ಒದ್ದೋಡಿಸಿ ಭಾರತದ ಸೇನೆಯ ಗರಿಮೆಗೆ ಒಂದು ಮುಡಿಯನ್ನು ಕೊಟ್ಟರು. 

ಅವರ ಈ ಶೌರ್ಯವನ್ನು ಮೆಚ್ಚಿ ಭಾರತ ಸರಕಾರ ಆಗಸ್ಟ್ 15,1999 ಗೆ ಶೌರ್ಯ ಚಕ್ರವನ್ನು ನೀಡಿ ಗೌರವಿಸಿತು. 

ಮುಂದಿನ ಜೀವನ[ಬದಲಾಯಿಸಿ]

ರವೀಂದ್ರನಾಥ್ ಅವರು 1999ರಲ್ಲಿ ಸೈನ್ಯದಿಂದ ನಿವೃತ್ತಿಯನ್ನು ಪಡೆದು ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಸಿದರು. ಹಲವಾರು ಕಂಪೆನಿಗಳನ್ನು ತೆರೆದು ಅದರ ನಿರ್ದೇಶಕರಾಗಿ ಕೂಡ ಇದ್ದರು. [೭]


ಜೀವನ ಕಥೆ[ಬದಲಾಯಿಸಿ]

ಜೆ ಪಿ ದತ್ತ ಅವರು ನಿರ್ದೇಶಿಸಿದ LOC ಕಾರ್ಗಿಲ್ ಚಿತ್ರದಲ್ಲಿ ನಟ ಆಶಿಶ್ ವಿಧ್ಯಾರ್ಥಿ ಅವರು ರವೀಂದ್ರನಾಥ್ ಅವರ ಪಾತ್ರವನ್ನು ಪೋಷಿಸಿದ್ದರು.

ಪತ್ರಕರ್ತ ರವಿ ಬೆಳಗರೆ ಅವರು ಬರೆದ ಹಿಮಾಗ್ನಿ ಕಾದಂಬರಿಯ ನಾಯಕನಾಗಿ ರವೀಂದ್ರನಾಥ ವರನ್ನು ಬಳಸಿದ್ದರು.

ನಿಧನ[ಬದಲಾಯಿಸಿ]

ಕರ್ನಲ್ ಅವರು ಏಪ್ರಿಲ್ 8,2018ರಂದು ಹೃದಯಾಘಾತದಿಂದ ಮೃತಪಟ್ಟರು. ಇವರು ತೀರಿಕೊಂಡ ಸಮಯ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಇವರಿಗೆ ಸರ್ಕಾರಿ ಮರ್ಯಾದೆಯಿಂದ ಅಂತ್ಯ ಸಂಸ್ಕಾರ ಮಾಡಲಿಲ್ಲ ಎಂದು ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮದವರು ಪ್ರತಿಭಟನೆ ಮಾಡಿದ್ದರು. ಸರ್ಕಾರವು ಇವರನ್ನು ಮರೆತಿದೆ ಎಂದು ಇವರ ಮಿತ್ರ, ಬರಹಗಾರ ರವಿ ಬೆಳಗರೆ ಅವರು ಹೇಳಿಕೆ ಕೊಟ್ಟಿದ್ದರು [೮]

ಉಲ್ಲೇಖಗಳು[ಬದಲಾಯಿಸಿ]