ಮಠದ ಪಾಟೀಲ್ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಂ. ಪಿ. ಪ್ರಕಾಶ್ ಇಂದ ಪುನರ್ನಿರ್ದೇಶಿತ)
ಎಂ ಪಿ ಪ್ರಕಾಶ್

ಮತಕ್ಷೇತ್ರ ಹೂವಿನ ಹಡಗಲಿ

ಗೃಹ ಖಾತೆ
ಮತಕ್ಷೇತ್ರ ಹೂವಿನ ಹಡಗಲಿ
ಮತಕ್ಷೇತ್ರ ಹೂವಿನ ಹಡಗಲಿ
ವೈಯಕ್ತಿಕ ಮಾಹಿತಿ
ಜನನ (೧೯೪೦-೦೭-೧೧)೧೧ ಜುಲೈ ೧೯೪೦
ರಾಷ್ಟ್ರೀಯತೆ  ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ರುದ್ರಾಂಬ
ಮಕ್ಕಳು ಲತಾ, ವೀಣಾ, ಸುಮಾ, ರವೀಂದ್ರ

ಮಠದ ಪಾಟೀಲ್ ಪ್ರಕಾಶ್ ಅಥವಾ ಎಮ್ ಪಿ ಪ್ರಕಾಶ್ (೧೯೪೦-೨೦೧೧), ಕರ್ನಾಟಕದ ಹಿರಿಯ ರಾಜಕಾರಣಿ. ಇವರು ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು.

ಅಪ್ಪನ 'ಕಾಂಗ್ರೆಸ್ ರಾಜಕಾರಣ' ಮಗನಿಗೆ, ಸರಿಬೀಳಲಿಲ್ಲ. ಸಾಹಿತ್ಯ,ರಾಜಕೀಯ,ಶೈಲಿಯ ಬುದ್ಧಿಜೀವಿಯಾಗಿ ರಾಜಕಾರಣಿಯಾಗುವ ಪ್ರಯತ್ನ ಮಾಡಿದರು. ವೀರ ಶೈವರ ನಾಯಕರಾದರು. ಆಳವಾದ ಜ್ಞಾನ,ಸಣ್ಣ ರಾಜಕೀಯ ತರ್ಕವನ್ನೂ ತಾತ್ವಿಕ ಮಟ್ಟಕ್ಕೇರಿಸುವ ಮಾತುಗಳು, ಬುದ್ಧಿಜೀವಿಯ ಗುಣವಿಶೇಷಗಳು, ಅವರಿಗೆ ರಾಜಕೀಯ ಜೀವನದಲ್ಲಿ ಹೆಚ್ಚಿಗೆ ಸಹಾಯವಾಗಲಿಲ್ಲ.

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರಕಾಶ್ ರವರು ಬಳ್ಳಾರಿ (ಈಗಿನ ವಿಜಯನಗರ) ಜಿಲ್ಲೆಯ ಹೂವಿನಹಡಗಲಿ ಯಲ್ಲಿ, ಜುಲೈ ೧೧ ೧೯೪೦ ರಂದು, ಲಿಂಗಾಯತರ ಕುಟುಂಬದಲ್ಲಿ ಜನಿಸಿದರು. ಇವರು ಎಮ್.ಎ., ಎಲ್.ಎಲ್.ಬಿ. ಪದವಿ ಪಡೆದಿದ್ದರೆ. ಇವರು ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಲ್ಲದೆ ಹಲವು ನಾಟಕಗಳನ್ನು ರಚಿಸಿ ಅದರಲ್ಲಿ ನಟನೆ ಕೂಡ ಮಾಡಿದ್ದಾರೆ.

’ಮಾಗಳ’ ಪ್ರಕಾಶರ ತಾಯಿಯ ತವರೂರು. ನಾರಾಯಣದೇವರಕೆರೆ, ಹುಟ್ಟೂರಾದರು ’ಹೂವಿನ ಹಡಗಲಿ’ ಅವರಿಗೆ ತವರಿನಷ್ಟು ಪ್ರೀತಿ. ನಂತರ, ಹೊಸಪೇಟೆ, ಬಳ್ಳಾರಿ, ಬೆಂಗಳೂರುಗಳಲ್ಲಿ, 'ಎಮ್. ಎ.ಪದವಿ' ಗಳಿಸಿದರು. ಕಾನೂನಿನ ಪದವಿಯನ್ನು(ಎಲ್.ಎಲ್.ಬಿ) ಬೊಂಬಾಯಿನಲ್ಲಿ ಪಡೆದರು. ೧೯೬೩ ರಲ್ಲಿ 'ರುದ್ರಾಂಬ'ರೊಂದಿವೆ ವಿವಾಹವಾದರು. ೧೯೬೪ ರಲ್ಲಿ ’ವಕೀಲಿವೃತ್ತಿ’ ಆರಂಭಿಸಿದರು. ತಮ್ಮ ಸಹಪಾಠಿಗಳಾಗಿದ್ದ ಮಾಜೀಶಾಸಕ, ಟಿ. ಸೋಮಪ್ಪ, ಮಾಜೀ ಸಚಿವ ಇ.ಟಿ.ಶಂಭುನಾಥ, ಜತೆಗೂಡಿ ’ಕಿತ್ ಅಂಡ್ ಕಿನ್ ಸಂಘ’ಸ್ಥಾಪನೆಮಾಡಿದರು. ಹೂವಿನಹಡಗಲಿಯಲ್ಲಿ ೫ ದಶಕಗಳಕಾಲದ ರಾಜಕೀಯದಲ್ಲಿ ಒಡನಾಡಿಯಾಗಿದ್ದು, ಹಿಂದುಳಿದಿದ್ದ ನಾಡನ್ನು ರಾಜ್ಯದಲ್ಲಿ ಗುರುತಿಸುವಂತಹ ಅಪೂರ್ವ ಸಾಧನೆಮಾಡಿದರು. ೧೯೭೮ ರಲ್ಲಿ 'ಜನತಾ ವಿಧಾನಸಭೆಗೆ' ಸ್ಪರ್ಧಿಸಿ, 'ಕೋಗಳಿ ಕರಿಬಸವ ಗೌಡ'ರವಿರುದ್ಧ ನಿಂತು, ಪರಾಜಿತರಾದರು. ೧೯೭೯ ರಲ್ಲಿ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಗೆ ಸ್ಪರ್ಧಿಸಿದಾಗ ಮತ್ತೊಮ್ಮೆ ಪರಾಜಯವಾಯಿತು. ೧೯೮೩ ರಲ್ಲಿ 'ಜನತಾ ಪಕ್ಷ'ದಿಂದ ಕಾಂಗ್ರೆಸ್ 'ಬನ್ನಿಮಟ್ಟೆ ಲಂಕೆಪ್ಪ'ನವರನ್ನು ಸೋಲಿಸಿ, ವಿಧಾನಸಭೆಯನ್ನು ಪ್ರವೇಶಿಸಿದರು. ಆಗಿನ 'ರಾಮಕೃಷ್ಣ ಹೆಗ್ಗಡೆ'ಯವರ ಮಂತ್ರಿಮಂಡಲದಲ್ಲಿ, ಸಾರಿಗೆ ಮತ್ತು ಕಾರ್ಮಿಕ ಸಚಿವರಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸಿದರು. ೨೦೦೪ ರಲ್ಲಿ, 'ಧರಂಸಿಂಗ್' ರವರ ಸಚಿವ ಸಂಪುಟದಲ್ಲಿ, 'ಕಂದಾಯ ಸಚಿವ'ರಾಗಿದ್ದರು. ನಂತರ, 'ಉಪಮುಖ್ಯಮಂತ್ರಿ'ಗಳಾಗಿದ್ದರು. ೨೦೦೮ ರಲ್ಲಿ ಕಾಂಗ್ರೆಸ್ ಗೆ ಸೇರಿದರು. ಅವರ ಊರಿನಲ್ಲೆ ಸೋತರು.ಸೋಲಿಗಿಂತ ಅಗಾಧ ಅಂತರದ ಸೋಲು ಅವರನ್ನು ಚಿಂತಿಸುವಂತೆ ಮಾಡಿತ್ತು.ಸುಮಾರು ೨೫೦೦೦ ಮತಗಳ ಅಂತರದ ಸೋಲು ಅದು !. ರಾಜಕೀಯ ಜೀವನದ ಏರುಪೇರುಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. 'ಜನತಾ ಪರಿವಾರ'ದಲ್ಲಿ ಜನತಾದಳದ ಆಂತರಿಕ ಭಿನ್ನಭಿಪ್ರಾಯಗಳಿಂದ ಬೇಸತ್ತು, ೨೦೦೮ ರಲ್ಲಿ 'ಸೋನಿಯಾಗಾಂಧಿ'ಯವರ ಸಮ್ಮುಖದಲ್ಲಿ 'ಕಾಂಗ್ರೆಸ್ ಪಕ್ಷಕ್ಕೆ' ಸೇರಿದ್ದರು.

ಜನತಾದಳದ ಆಂತರಿಕ ಕಲಹಗಳು[ಬದಲಾಯಿಸಿ]

ಬಿಡುವಿನ ವೇಳೆಯಲ್ಲಿ ನಾಟಕ, ಕ್ರೀಡೆ, ಮತ್ತಿತರ ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ರಂಗಭೂಮಿಯಲ್ಲಿ ಮೇರು ಕಲಾವಿದರಾದಾಗ್ಯೂ ತಮ್ಮ ದೊಡ್ಡಪ್ಪ, ಕೊಟ್ರಗೌಡರ ಪ್ರಭಾವಕ್ಕೊಳಗಾಗಿ ಹುಚ್ಚಿ ಕರಿಯಲ್ಲಪ್ಪ ಮತ್ತು ಕೆಲ ಯುವಕರೊಡಗೂಡಿ ೬೦ ರ ದಶಕದಲ್ಲಿ ಹಡಗಲಿಯಲ್ಲಿ ’ರಂಗಭಾರತಿ'ಯೆಂಬ 'ರಂಗತಂಡ'ವನ್ನು ಹುಟ್ಟುಹಾಕಿದ್ದರು ಈ ಸಂಸ್ಥೆ, ದೇಶದ ನಾನಾರಾಜ್ಯಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ. ಅವರು, ಸ್ಥಾಪಕ ಅಧ್ಯಕ್ಷರಾಗಿ, ನಟರಾಗಿ,ನಿರ್ದೇಶಕರಾಗಿ 'ಪರಿಪಕ್ವ ರಂಗಕರ್ಮಿ'ಯೆಂದು ಸಾಬೀತು ಪಡಿಸಿದರು. 'ರಂಗಶಿಬರ'ವನ್ನೂ ಆಯೋಜಿಸಿದ್ದರು. ಪುಸ್ತಕ ಪ್ರೇಮಿ, ಓದುವ-ಬರೆಯುವ ಗೀಳು ವಿಪರೀತವಾಗಿತ್ತು. 'ನಿಜಲಿಂಗಪ್ಪ'ನವರ ಇಂಗ್ಲೀಷ್ ಕೃತಿಯೊಂದನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು. ಮನೆಯಲ್ಲಿ 'ಪುಸ್ತಕಭಂಡಾರ'ವನ್ನೇ ಸ್ಥಾಪಿಸಿದ್ದು, 'ಲಾರಿಲೋಡಿ'ನಷ್ಟು ಅತ್ಯಮೂಲ್ಯ ಪುಸ್ತಕಗಳನ್ನು ಹೊಂದಿದ್ದರು. ಪ್ರೀತಿವಿಶ್ವಾಸದ ಮಾತುಗಳು, ಯಾರನ್ನೂ ಲಭುವಾಗಿ ಕಾಣದ ಸದ್ವರ್ತನೆ,ಅವರ ರಾಜಕೀಯ ವಲಯದಲ್ಲಿ ಯಶಸ್ವಿಯಾಗಲು ಕಾರಣ. 'ಕ್ಯಾನ್ಸರ್' ನಂತಹ ಭಯಾನಕ ರೋಗದ ಶಿಕಾರಿಯಾಗಿಯೂ ಸಹಿತ, ಅದರ ವಿರುದ್ಧ 'ಸ್ಥಿತಪ್ರಜ್ಞ'ರಾಗಿಯೇ ಹೋರಾಡಿ ಆ ಕಾಯಿಲೆಯನು ತಮ್ಮ ದೇಹದಿಂದ ದೂರ ಅಟ್ಟುವ ಕಾರ್ಯದಲ್ಲಿ ಹಲವು ವರ್ಷಗಳ ಕಾಲ ಯಶನ್ನು ಕಂಡಿದ್ದರು. ಯಾವಾಗಲೂ ಲವಲವಿಕೆಯಿಂದಿರುತ್ತಿದ್ದ, ಯಾರಬಗ್ಗೆಯೂ ಕೆಟ್ಟಮಾತಾಡದ, ಸದಾ ಹಸನ್ಮುಖಿ ಅಜಾತಶತೃವೆಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡ ಪ್ರಕಾಶ್, ಒಳ್ಳೆಯ ವಾಗ್ಮಿಗಳು.

ಸಮಾಜಸೇವೆ[ಬದಲಾಯಿಸಿ]

೧೯೭೧ ರಿಂದ ೮೧ ರವರೆಗೆ ಜೆ.ಬಿ.ಆರ್ ಕಾಲೇಜ್ ನ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಜನಪದ ಕಲೆಗಳಾದ 'ಯಕ್ಷಗಾನ', 'ಬಯಲಾಟ', ಪ್ರದರ್ಶಿಸಿ 'ಹೂವಿನ ಹಡಗಲಿ'ಯಹೆಸರನ್ನು ೨೦೦೨ ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜಿಸಿ ಆ ಪ್ರದೇಶದ ಅಭಿವೃದ್ಧಿಯ 'ಹರಿಕಾರ'ರೆಂದು ಹೆಸರಾದರು. ಸಿಂಗಟಾಲೂರು ನೀರಾವರಿ ಯೋಜನೆ ಚಾಲನೆಮಾಡಿದರು. ಹಿಂದುಳಿದ ಪ್ರದೇಶದಲ್ಲಿ 'ಸರಕಾರಿ ಇಂಜಿನಿಯರಿಂಗ್ ಕಾಲೇಜ್' ಸ್ಥಾಪಿಸಿದರು. 'ಪಾಲಿಟೆಕ್ನಿಕ್' ಆರಂಭವಾಯಿತು. ಪೋಲೀಸ್ ತರಬೇತಿ ಕೆಂದ್ರ ದ ಸ್ಥಾಪನೆಯಾಯಿತು.ಕೊಯಿಲಾರಗಟ್ಟಿಗ್ರಾಮದ ಹತ್ತಿರ ಚಂಡೀಘರ್ ನ ಮಾದರಿಯಲ್ಲಿ ದೊಡ್ಡ ನಗರ ನಿರ್ಮಾಣದ ಕಲ್ಪನೆಯಿತ್ತು. ಕರ್ನಾಟಕದ ಎರಡನೆಯ ರಾಜಧಾನಿಮಾಡುವ ಸಾಹಸದ ಕೆಲಸದ ಆರಂಭವಾಯಿತು. ಉದ್ಯಾನವನದ ನಿರ್ಮಾಣಕಾರ್ಯವನ್ನು ಆರಂಭಿಸಿದರು.

ಎಂ. ಪಿ. ಪ್ರಕಾಶ್ ನಡೆದು ಬಂದ ಹಾದಿ[ಬದಲಾಯಿಸಿ]

  • ೧೯೪೦, ಜುಲೈ ೧೧ : ನಾರಾಯಣದೇವರಕೆರೆಯಲ್ಲಿ ಜನನ.
  • ನಾರಾಯಣದೇವರಕೆರೆ, ಹೊಸಪೇಟೆ, ಬಳ್ಳಾರಿಗಳಲ್ಲಿ ವ್ಯಾಸಂಗ, ಬೆಂಗಳೂರಿನಲ್ಲಿ ಎಂಎ, ಮುಂಬಯಿಯಲ್ಲಿ ಕಾನೂನು ಪದವಿಗಳ ಅಧ್ಯಯನ.
  • ೧೯೬೩ : ರುದ್ರಾಂಬ ಅವರೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಿವಾಹ.
  • ಹೊಸಪೇಟೆಯಲ್ಲಿ ಕಾನೂನು ಪ್ರಾಕ್ಟೀಸ್‌ ಆರಂಭ.
  • ೧೯೬೪ : ಹಡಗಲಿಯಲ್ಲಿ ವಕೀಲರಾಗಿ ಕೆಲಸ ಶುರು.
  • ೧೯೬೭ : ಸಮಾಜವಾದಿ ಚಳವಳಿಯಲ್ಲಿ ಭಾಗಿ.
  • ೧೯೭೩ : ಬಳ್ಳಾರಿ ಜಿಲ್ಲಾ ಸಮಾಜವಾದಿ ಪಕ್ಷದ ಅಧ್ಯಕ್ಷತೆ.
  • ಪ್ರಕಾಶ್‌ ಅವರ ನೇತೃತ್ವದಲ್ಲಿ ಸಂಡೂರು ಹೋರಾಟ ಸಮಿತಿ ಸ್ಥಾಪನೆ.
  • ಮಾ. ೨೩- ಸಂಡೂರು ರಾಜಮನೆತನದ ಶೋಷಣೆಯ ವಿರುದ್ಧ ಮುಖ್ಯಮಂತ್ರಿ ದೇವರಾಜ್‌ ಅರಸು ಅವರಿಗೆ ಪ್ರಕಾಶ್‌ ನೇತೃತ್ವದಲ್ಲಿ ಮನವಿ ಸಲ್ಲಿಕೆ.
  • ೧೯೭೧-೮೧ ರವರೆಗೆ: ಹಡಗಲಿ ಜಿಬಿಆರ್‌ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ.
  • ೧೯೭೩ : ಅಖೀಲ ಕರ್ನಾಟಕ ಸೋಷಿಯಲಿಸ್ಟ್‌ ಸಮ್ಮೇಳನವನ್ನು ಹಡಗಲಿಯಲ್ಲಿ ಸಂಘಟಿಸಿದರು.
  • ೧೯೭೫ : ತುರ್ತು ಪರಿಸ್ಥಿತಿ ವಿರುದ್ಧದ ಚಳವಳಿಯಲ್ಲಿ ಸಕ್ರಿಯ ಪಾತ್ರ.
  • ೧೯೭೮ : ವಿಧಾನಸಭಾ ಚುನಾವಣೆಗೆ ಜನತಾ ಪಕ್ಷದಿಂದ ಹಡಗಲಿ ಕ್ಷೇತ್ರದಲ್ಲಿ ಸ್ಪರ್ಧೆ, ಸೋಲು.
  • ೧೯೭೯ : ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಸ್ಪರ್ಧಿಸಿ ಸೋಲು.
  • ೧೯೮೩ : -ವಿಧಾನಸಭೆಗೆ ಮತ್ತೆ ಹಡಗಲಿ ಕ್ಷೇತ್ರದಿಂದ ಸ್ಪರ್ಧೆ, ಜಯ.
  • -ಮೊದಲ ಬಾರಿ ಆರಿಸಿಬಂದಿದ್ದರೂ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಸ್ಥಾನ. ಸಾರಿಗೆ ಮತ್ತು ಕಾರ್ಮಿಕ ಖಾತೆಗಳ ಸಮರ್ಥ ನಿರ್ವಹಣೆ.
  • -ಹಡಗಲಿಯಲ್ಲಿ ೪ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ.
  • ೧೯೮೪ : ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ, ಸೋಲು.
  • ೧೯೮೫ : -ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ್ತೆ ಗೆಲುವು.
  • -ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಏಕ ಸದಸ್ಯ ಆಯೋಗ ರಚನೆ.
  • -ಕೃಷಿ ಸಚಿವರಾಗಿ ಧಾರವಾಡದಲ್ಲಿ ಕೃಷಿ ವಿವಿ ಸ್ಥಾಪನೆ.
  • ೧೯೮೭ : ಜನತಾದಳದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.
  • ೧೯೮೯ : ವಿಧಾನಸಭೆ ಚುನಾವಣೆಗೆ ಸ್ಪರ್ಧೆ, ಸೋಲು.
  • ೧೯೯೪ : ವಿಧಾನಸಭೆ ಚುನಾವಣೆಗೆ ಸ್ಪರ್ಧೆ, ಗೆಲುವು. ದೇವೇಗೌಡ ಅವರ ಸಂಪುಟದಲ್ಲಿ ಸಚಿವ ಸ್ಥಾನ.
  • ೧೯೯೫ : ಹಡಗಲಿಯಲ್ಲಿ ರಾಜ್ಯಮಟ್ಟದ ಜಾನಪದ ಸಮ್ಮೇಳನದ ಸಂಘಟನೆ.
  • ೧೯೯೯ : -೧೯೯೮ ರ 'ನಾಟಕ ಅಕಾಡೆಮಿ ಫೆಲೋಶಿಪ್‌' ಗೌರವ.
  • -ವಿಧಾನಸಭೆ ಚುನಾವಣೆಗೆ ಸ್ಪರ್ಧೆ, ಸೋಲು.
  • -ಹಡಗಲಿಯಲ್ಲಿ ೧೧ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ.
  • ೨೦೦೦: ವಿಧಾನ‌ಪರಿಷತ್‌ಗೆ ಅವಿರೋಧ‌ ಆಯ್ಕೆ, ಹಿರಿಯರ ಸದನ ಎಂದೇ ಕರೆಸಿಕೊಳ್ಳುವ ಮೇಲ್ಮನೆ ಸದಸ್ಯರಾಗಿ ೨೦೦೪ ರವರೆಗೆ ಕಾರ್ಯನಿರ್ವಹಣೆ.
  • ೨೦೦೪ : ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ೩೩ ಸಾವಿರ ಮತಗಳ ಅಂತರದಿಂದ ಗೆಲುವು. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌- ಜಾತ್ಯತೀತ ಜನತಾದಳ ಸಮ್ಮಿಶ್ರ ಸರ್ಕಾರದಲ್ಲಿ ಕಂದಾಯ ಸಚಿವ ಸ್ಥಾನ.
  • ೨೦೦೫ : ಆಗಸ್ಟ್‌ನಲ್ಲಿ ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ, ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಕ.
  • ೨೦೦೬ : ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕಾರ.
  • ೨೦೦೭ : ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ
  • ೨೦೦೮ : ವಿಧಾನಸಭೆಗೆ ಹರಪನಹಳ್ಳಿಯಿಂದ ಸ್ಪರ್ಧೆ, ಸೋಲು.

ಎಂ.ಪಿ. ಪ್ರಕಾಶ್‌ ಅವರು ಸಚಿವರಾಗಿ ನಿರ್ವಹಿಸಿರುವ ಖಾತೆಗಳು[ಬದಲಾಯಿಸಿ]

  • ಸಾರಿಗೆ
  • ಕಾರ್ಮಿಕ
  • ಕನ್ನಡ ಮತ್ತು ಸಂಸ್ಕೃತಿ
  • ವಾರ್ತಾ ಮತ್ತು ಪ್ರವಾಸೋದ್ಯಮ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌
  • ವಕ್‌³
  • ಕಾನೂನು ಮತ್ತು ಸಂಸದೀಯ ವ್ಯವಹಾರ
  • ಕಂದಾಯ ಮತ್ತು ಮುಜರಾಯಿ
  • ಗೃಹ, ಉಪಮುಖ್ಯಮಂತ್ರಿ.

ಅನುವಾದ ಸಾಹಿತ್ಯ[ಬದಲಾಯಿಸಿ]

  • ಪ್ರೀತಿಯೇ ದೇವರು ಮತ್ತು ಇತರ ಕಥೆಗಳು (ಅನುವಾದಿತ ಕಥಾಸಂಕಲನ)
  • ಸೂರ್ಯಶಿಖಾರಿ (ಅನುವಾದಿತ ನಾಟಕ)
  • ಡೊಮಿಂಗೋ ಪಿಯಾಸ್ ಕಂಡ ವಿಜಯನಗರ (ಅನುವಾದ)
  • ಅಲೆಕ್ಸಾಂದಡರ ಜೆ. ಗ್ರೀನ್ ಲಾ ಮತ್ತು ಕಾಲಿನ್ಗ್ಸ್ ಕಂಡ ವಿಜಯನಗರ (ಅನುವಾದ)
  • ಚುನಾವಣಾ ಸುಧಾರಣೆಗಳು (ಅನುವಾದ: ಮೂಲ- ರಾಮಕೃಷ್ಣ ಹೆಗಡೆ)
  • ನನ್ನ ಜೀವನ ಮತ್ತು ರಾಜಕೀಯ (ಎಸ್. ನಿಜಲಿಂಗಪ್ಪ ಅವರ ಆತ್ಮಕಥನ ಅನುವಾದ)

ಅಭಿನಂದನ ಗ್ರಂಥಗಳು[ಬದಲಾಯಿಸಿ]

  • ಬಹುಮುಖಿ
  • ಕ್ರಿಯಾಶೀಲ
  • ಮಲ್ಲಿಗೆ ಮುಡಿಲು

ಪ್ರವಾಸ ಕಥನಗಳು[ಬದಲಾಯಿಸಿ]

  • ಕಳಿಂಗ ಸೂರ್ಯ
  • ಥೈಲ್ಯಾಂಡ್ ಪ್ರವಾಸ
  • ಅಮೇರಿಕಾ ಪ್ರವಾಸ

ಸಾಂಸ್ಕೃತಿಕ ಲೇಖನಗಳು[ಬದಲಾಯಿಸಿ]

  • ರಂಗಾಯಣದ ಕುಸುಮಬಾಲೆ: ಒಂದು ಅನುಭವ
  • ಯಾರ ತಲೆದಂಡ?
  • ಯಾತಕ್ಕೆ ಮಳೆ ಹೋದವೋ...

ರಾಜಕೀಯ ಲೇಖನಗಳು[ಬದಲಾಯಿಸಿ]

  • ಒಂದು ಕೋಟಿ ರುಪಾಯಿ ಹಗರಣ
  • ಕೊರಳಿಗೆ ಉರುಳಾಡುತ್ತಿರುವ ಡನ್ಕೆಲ್ ಪ್ರಸ್ತಾಪ
  • ಮೂಲೆಗುಂಪಾದ ರೋಜಗಾರ್

ರಾಜಕೀಯ ಜೀವನ[ಬದಲಾಯಿಸಿ]

  • ೧೯೮೩-೧೯೮೫-ವಿಧಾನ ಸಭಾ ಸದಸ್ಯ, ಸಾರಿಗೆ ಮತ್ತು ಕಾರ್ಮಿಕ ಸಚಿವ.
  • ೧೯೮೫-೮೭-ಕೃಷಿ ಸಚಿವ.
  • ೧೯೮೭-೮೮-ಪ್ರವಾಸೋದ್ಯಮ, ಸಂಸ್ಕೃತಿ, ಮಾಹಿತಿ ಹಾಗು ಪ್ರಚಾರ ಹಾಗು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಚಿವ.
  • ೧೯೯೪-೯೯ ವಿಧಾನ ಸಭಾ ಸದಸ್ಯ ಹಾಗು ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಹಾಗು ವಕ್ಫ್ಸ್ ಸಚಿವ.
  • ೧೯೯೯ ರಿಂದ ಮೇ ೨೦೦೪ ರ ವರೆಗೆ -ಶಾಸನಸಭೆಯು ಸದಸ್ಯ
  • ೨೦೦೪ ಜೆ ಡಿ ಎಸ್ ಸರ್ಕಾರದಲ್ಲಿ ಕಂದಾಯ ಮಂತ್ರಿ

ಕ್ಯಾನ್ಸರ್ ವಿರುದ್ಧ ಹೋರಾಟ ಹಾಗು ನಿಧನ[ಬದಲಾಯಿಸಿ]

ಪ್ರಕಾಶ್ ದೀರ್ಘ ಕಾಲ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಾಗು ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆದಿದ್ದಾಗಿಯೂ ಸುದ್ಧಿ ಬಂದಿತ್ತು. ಆದರೆ, ಫೆಬ್ರವರಿ ೯ ೨೦೧೧ ಬುಧವಾರ ಬೆಳಗಿನ ಜಾವ ೫ ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಟೆಂಪ್ಲೇಟು:ಕರ್ನಾಟಕದ ಉಪಮುಖ್ಯಮಂತ್ರಿಗಳು