ವಿಷಯಕ್ಕೆ ಹೋಗು

ಉಪ್ಪಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಪ್ಪಾರ
Classification ಹಿಂದುಳಿದ ಜಾತಿ
Religions ಹಿಂದೂ
Country ಭಾರತ
Populated States ಆಂಧ್ರ ಪ್ರದೇಶ
ತೆಲಂಗಾಣ
ಕರ್ನಾಟಕ
ತಮಿಳುನಾಡು

ಸಗರ ಎಂದೂ ಕರೆಯಲ್ಪಡುವ ಉಪ್ಪಾರ ಒಂದು ಹಿಂದೂ ಜಾತಿಯಾಗಿದ್ದು, ಇದು ಪ್ರಧಾನವಾಗಿ ಭಾರತದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಕಂಡುಬರುತ್ತದೆ. [] [] [] ಇವರನ್ನು ಇತರೆ ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ. [] []

ವ್ಯುತ್ಪತ್ತಿ

[ಬದಲಾಯಿಸಿ]

ಸಾಂಪ್ರದಾಯಿಕವಾಗಿ ಉಪ್ಪಾರರು ಉಪ್ಪು ತಯಾರಿಕೆ ಮತ್ತು ಉಪ್ಪು ಮಾರಾಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ (ಶೆಟ್ಟಿ ಉಪ್ಪಾರ ಕುಲ). [] [] [] [] ಇವರ ಉದ್ಯೋಗವು ತೆಲುಗು ಮತ್ತು ಕನ್ನಡದಲ್ಲಿ ಉಪ್ಪು ಎಂದು ಕರೆಯಲ್ಪಡುವ ಉಪ್ಪನ್ನು ಉತ್ಪಾದಿಸುವುದಾಗಿರುವುದರಿಂದ ಇವರನ್ನು ಉಪ್ಪಾರರು ಎಂದು ಕರೆಯಲಾಯಿತು. [] [] []

ಔದ್ಯೋಗಿಕವಾಗಿ, ಉತ್ತರ ಭಾರತದ ಲೋನಿಯಾ/ಲೂನಿಯಾ ಸಮುದಾಯವನ್ನು ಉಪ್ಪಾರರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. []

ಇತಿಹಾಸ

[ಬದಲಾಯಿಸಿ]

ಫ್ರಾನ್ಸಿಸ್ ಬುಕಾನನ್-ಹ್ಯಾಮಿಲ್ಟನ್ ಪ್ರಕಾರ, ತೆಲುಗು ಉಪ್ಪಾರರ ಪ್ರಮುಖ ಉದ್ಯೋಗವೆಂದರೆ ಉಪ್ಪು ಮಾಡುವುದು. ಟೆಂಪ್ಲೇಟು:A Journey from Madras through the countries of Mysore, Canara and Malabar, Vol.I-III., Francis Buchanan, Assian educational services, 1807

೨೦ ನೇ ಶತಮಾನದ ಆರಂಭದ ಮೈಸೂರು ಜನಗಣತಿ ವರದಿಗಳು ಉಪ್ಪಾರರ ಬಗ್ಗೆ ಈ ಕೆಳಗಿನಂತೆ ಸೂಚಿಸಿವೆ: "ಈ ಜಾತಿಯನ್ನು ತೆಲುಗು ಮತ್ತು ಕರ್ನಾಟಕ ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಜಾತಿಯ ಸುಸ್ಥಿತಿಯಲ್ಲಿರುವ ವಿಭಾಗವು ಗುತ್ತಿಗೆಯ ಮೇಲೆ ಸಾರ್ವಜನಿಕ ಕಾರ್ಯಗಳನ್ನು ಕೈಗೊಳ್ಳುತ್ತದೆ. ಇವರಲ್ಲಿ ಕೆಲವರು ಸಾಮಾನ್ಯ ಹಿಂದೂ ಮನೆಗಳ ಕಟ್ಟುವ ಉತ್ತಮ ವಾಸ್ತುಶಿಲ್ಪಿಗಳಾಗಿದ್ದಾರೆ. ಇವರಲ್ಲಿ ಕೃಷಿಕರು ಮತ್ತು ವ್ಯಾಪಾರಿಗಳು ಕೂಡಾ ಇದ್ದಾರೆ. ಟೆಂಪ್ಲೇಟು:A Journey from Madras through the countries of Mysore, Canara and Malabar, Vol.I-III., Francis Buchanan, Assian educational services, 1807

೧೯೬೮ ರಲ್ಲಿ ಆಂಧ್ರಪ್ರದೇಶ ಸರ್ಕಾರವು ರಚಿಸಿದ ಏಕವ್ಯಕ್ತಿ ಅನಂತ ರಾಮನ್ ಆಯೋಗವು ತನ್ನ ವರದಿಯಲ್ಲಿ ಉಪ್ಪಾರ ಸಮುದಾಯಕ್ಕೆ ಸಂಬಂಧಿಸಿದಂತೆ ಕೆಲವು ಅವಲೋಕನಗಳನ್ನು ಮತ್ತು ಶಿಫಾರಸ್ಸುಗಳನ್ನು ಮಾಡಿದೆ. ಈ ವರದಿಯಲ್ಲಿ ಉಲ್ಲೇಖಿಸಲಾದ ಕೆಲವು ಅಂಶಗಳು ಹೀಗಿವೆ:

  • ಉಪ್ಪಾರರು ಈ ಹಿಂದೆ ಉಪ್ಪು ತಯಾರಿಕೆಯಲ್ಲಿ ತೊಡಗಿದ್ದರು.
  • ಬ್ರಿಟಿಷರ ಆಳ್ವಿಕೆಯಲ್ಲಿ ಉಪ್ಪು ತಯಾರಿಸುವ ಖಾಸಗಿತನವನ್ನು ನಿಷೇಧಿಸಿದಾಗ, ಈ ಸಮುದಾಯದ ಜನರು ಇತರ ಉದ್ಯೋಗಗಳತ್ತ ಮುಖ ಮಾಡಿದರು. ಉಪ್ಪು ತಯಾರಕರಾದ ಇವರು ತಮ್ಮ ಜಾತಿ ಆಧಾರಿತ ಕುಲಕಸುಬನ್ನು ಕಳೆದುಕೊಂಡು, ನಂತರದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಹೊಂದಿಕೊಂಡರು.

ಉಪ್ಪಾರರು ಉಪ್ಪುನ್ನು ಸಾಂಪ್ರದಾಯಿಕವಾಗಿ ತಯಾರಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ ಮತ್ತು ಪ್ರಾಥಮಿಕವಾಗಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಕುಮಾರ್ ಸುರೇಶ್ ಸಿಂಗ್ ಅವರು ೧೯೯೮ ರಲ್ಲಿ ದಾಖಲಿಸಿದ್ದಾರೆ. [೧೦] ಉಪ್ಪಾರರು ಸೂರ್ಯವಂಶಿ ಸಗರ ಚಕ್ರವರ್ತಿಯ (ಸಗರ ಉಪ್ಪಾರ ಕುಲ) ವಂಶಸ್ಥರು. [೧೧]

ಸಂಸ್ಕೃತಿ

[ಬದಲಾಯಿಸಿ]

ಜಾತಿಯ ಕೆಲವು ಸದಸ್ಯರು ವೈಷ್ಣವರು ಮತ್ತು ಕೆಲವರು ಶೈವರು ಆಗಿದ್ದಾರೆ. ಇವರು ವಿವಿಧ ರೀತಿಯ ಗ್ರಾಮ ದೇವತೆಗಳನ್ನು ಪೂಜಿಸುತ್ತಾರೆ. ಈ ಆರಾಧನಾ ಕ್ರಮವು ಪ್ರಾದೇಶಿಕತೆಗೆ ಅನುಗುಣವಾಗಿ ಬದಲಾಗುತ್ತದೆ. ಕರ್ನಾಟಕ ಸರ್ಕಾರವು ಘೋಷಿಸಿದಂತೆ ಉಪ್ಪಾರರು ಪ್ರತಿ ವರ್ಷ ಗಂಗಾ ಸಪ್ತಮಿಯ ದಿನದಂದು ರಾಜರ್ಷಿ ಭಗೀರಥ ಜಯಂತಿಯನ್ನು ಆಚರಿಸುತ್ತಾರೆ.

ಶ್ರೀಮದ್ ಜಗದ್ಗುರು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಪೀಠ, ಮಹಾಸಂಸ್ಥಾನ ಮಠ, ಬ್ರಹ್ಮವಿದ್ಯಾನಗರ ಸುಕ್ಷೇತ್ರ, ಹೊಸದುರ್ಗತಾಲೂಕು, ಚಿತ್ರದುರ್ಗ ಜಿಲ್ಲೆ, ಕರ್ನಾಟಕ - ಇದು ಈ ಸಮುದಾಯವನ್ನು ಪ್ರತಿನಿಧಿಸುವ ಧಾರ್ಮಿಕ ಮಠವಾಗಿದೆ.

ಜನಸಂಖ್ಯೆ

[ಬದಲಾಯಿಸಿ]

ಉಪ್ಪಾರರು ಕರ್ನಾಟಕದ ಜನಸಂಖ್ಯೆಯ ಸುಮಾರು ೧.೧೮ ಪ್ರತಿಶತವನ್ನು ಹೊಂದಿದ್ದಾರೆ ಎಂದು ಚಿನ್ನಪ್ಪ ರೆಡ್ಡಿ ವರದಿ (೧೯೯೦) ಯು ಸೂಚಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Specification of OBCs in respect of Andhra Pradesh, Assam, Bihar, Goa, Gujarat, Haryana, Himachal Pradesh, Karnataka, Kerala, Madhya Pradesh, Maharashtra, Punjab, Tamil Nadu and Uttar Pradesh (No. 12011/68/1993-BCC)"" (PDF). The Gazette of India: Extraordinary (in Hindi and English). Department of Publication: 38. 13 September 1993. ISSN 0254-6779. OCLC 1752771.{{cite journal}}: CS1 maint: unrecognized language (link)
  2. ೨.೦ ೨.೧ Srinivasulu, K. "Caste, Class and Social Articulation in Andhra Pradesh: Mapping Differential Regional Trajectories". Overseas Development Institute. Retrieved 27 December 2009.
  3. Thurston, Edgar; Rangachari, K. "'Uppara'". Castes and Tribes of Southern India. Vol. 7. pp. 228 to 241. OCLC 11676577. Reprint. Originally published: Madras : Supt. Govt. Press, 1909
  4. "Inclusion/Amendment in the Central Lists of OBCs in respect of the State of Andhra Pradesh and Telangana. (No. 12011/04/2014-BC-II)" (PDF). The Gazette of India: Extraordinary (in Hindi and English). Department of Publication: 13. 11 August 2016. ISSN 0254-6779. OCLC 1752771.{{cite journal}}: CS1 maint: unrecognized language (link)
  5. ೫.೦ ೫.೧ ೫.೨ Devi, Dr V. Vasanthi (2021-05-03). A Crusade for Social Justice: P.S.Krishnan : Bending Governence Towards The Deprived (in ಇಂಗ್ಲಿಷ್). South Vision Books. pp. 55, 56.
  6. Krishnamurti, Bhadriraju; Vijayasree, Changanti (2004). Gold Nuggets: Selected Post-independence Telugu Short Stories (in ಇಂಗ್ಲಿಷ್). Sahitya Akademi. p. 470. ISBN 978-81-260-1930-4.
  7. Singh, K. S. (1992). People of India: Andhra Pradesh (in ಇಂಗ್ಲಿಷ್). Anthropological Survey of India. p. 1847. ISBN 978-81-7671-006-0.
  8. Thurston, Edgar; Rangachari, K. "'Uppara'". Castes and Tribes of Southern India. Vol. 7. pp. 228 to 241. OCLC 11676577. Reprint. Originally published: Madras : Supt. Govt. Press, 1909
  9. Karnataka State Gazetteer: Bangalore District (in ಇಂಗ್ಲಿಷ್). Director of Print, Stationery and Publications at the Government Press. 1993. p. 171.
  10. Singh, K. S. (1998). India's Communities (in ಇಂಗ್ಲಿಷ್). Anthropological Survey of India. pp. 3539–3541. ISBN 978-0-19-563354-2.
  11. Bulletin of the Anthropological Survey of India (in ಇಂಗ್ಲಿಷ್). Director, Anthropological Survey of India, Indian Museum. 1971. p. 162.


"https://kn.wikipedia.org/w/index.php?title=ಉಪ್ಪಾರ&oldid=1196034" ಇಂದ ಪಡೆಯಲ್ಪಟ್ಟಿದೆ