ಇಬ್ಬಡ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಬ್ಬಡ್ಲ
ಇಬ್ಬಡ್ಲ ಹಣ್ಣುಗಳು (ಮಾಗಿದಾಗ ಒಡೆದಿವೆ) ಮತ್ತು ಕೊಯ್ದ ಹಣ್ಣು
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಯುಡಿಕಾಟ್
(ಶ್ರೇಣಿಯಿಲ್ಲದ್ದು):
ರೊಸಿಡ್
ಗಣ:
ಕುಕುರ್ಬಿಟೇಲ್
ಕುಟುಂಬ:
ಕುಲ:
ಕುಕುಮಿಸ್
ಪ್ರಜಾತಿ:
ಕು. ಮೆಲೊ
Subspecies:
ಕು. ಮೆಲೊ ಉಪ್ರ. ಅಗ್ರೆಸ್ಟಿಸ್
Variety:
ಕು. ಮೆಲೊ ಅಗ್ರೆಸ್ಟಿಸ್
ತಳಿ ಮೊಮರ್ಡಿಕ
Trinomial name
ಕುಕುಮಿಸ್ ಮೆಲೊ
ಉಪ್ರ. ಅಗ್ರೆಸ್ಟಿಸ್
ತಳಿ ಮೊಮರ್ಡಿಕ[೧][೨]

ಜೆ. ಎಫ್, ಡುಥಿ ಮತ್ತು ಜೆ.ಬಿ. ಫುಲರ್
Synonyms[೧]
  • ಕುಕುಮಿಸ್ ಮೊಮರ್ಡಿಕ
    ರಾಕ್ಸ್‌ಬರ್ಗ್
    * (ವಿವರಗಳಿಗೆ ಲೇಖನ ನೋಡಿ)

ಇಬ್ಬಡ್ಲ ಒಂದು ಹಣ್ಣು, ತರಕಾರಿ ಬೆಳೆ. ಕನ್ನಡದಲ್ಲಿ ಅದಕ್ಕಿರುವ ಇತರ ಹೆಸರುಗಳು ಇಬ್ಬಟ್ಟಲು, ಬನಸ್ಪತ್ರೆ, ಕ್ಯಾಕ್ರಿಕೆ, ಚಿಬ್ಬಳ್ಳು. ಇತರ ಕೆಲವು ಭಾಷೆಯಲ್ಲಿನ ಹೆಸರುಗಳು ಇಂಗ್ಲೀಶ್ –ಸ್ನ್ಯಾಪ್ ಮೆಲನ್, ಮಲೆಯಾಳ- ಕಕ್ಕರಿ ಮತ್ತು ಪೊಟ್ಟು ವೆಳ್ಳರಿ,[೩] ಹಿಂದಿ – ಫೂಟ್, ಕಾಕರಿ. ಇದನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕುಕುರ್ಬಿಟೇಸಿಯೆ ಕುಂಟುಂಬಕ್ಕೆ ಸೇರಿದ ಹಲವು ತರಕಾರಿ, ಹಣ್ಣುಗಳ ಸಾಲಿಗೆ ಸೇರುವ ಇದು ಕರಬೂಜದ ಪ್ರಭೇದಕ್ಕೆ ಸೇರಿದೆ. ಹಣ್ಣು ಮಾಗಿರದಾಗ ತರಕಾಯಿಯಾಗಿಯೂ, ಮಾಗಿದ ನಂತರ ಹಣ್ಣಾಗಿಯೂ ಬಳಸಲಾಗುತ್ತದೆ. ಹಣ್ಣು ಉರುಳೆಯ (ಸಿಲಿಂಡರು) ಆಕಾರದಲ್ಲಿರುತ್ತದೆ ಮತ್ತು ಮಾಗಿದಾಗ ಒಡೆಯುತ್ತದೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಇಬ್ಬಡ್ಲ ಹಲವು ಉಪಯುಕ್ತ ಸಸ್ಯಗಳು ಇರುವ ಕುಕುರ್ಬಿಟೇಸಿಯೆ ಕುಟುಂಬಕ್ಕೆ ಸೇರಿದೆ. ಇದೇ ಕುಟುಂಬಕ್ಕೆ ಸೇರಿದ ಕುಂಬಳಕಾಯಿ, ಕರಬೂಜ, ಕಲ್ಲಂಗಡಿ, ಸೌತೆಕಾಯಿ, ಬೂದುಗುಂಬಳ, ಸೋರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಹೀರೇಕಾಯಿ, ತುಪ್ಪದ ಹೀರೆಕಾಯಿ, ತೊಂಡೆಕಾಯಿ ಮತ್ತು ಕಾಡುಪಡುವಲ ಆಹಾರಗಳಾಗಿ ಬಳಕೆಯಲ್ಲಿವೆ. ಇದರ ವೈಜ್ಞಾನಿಕ ಹೆಸರನ್ನು ಭಾರತದಲ್ಲಿ ಹೆಚ್ಚಾಗಿ ಕುಕುಮಿಸ್ ಮೆಲೊ' ತಳಿ ಮೊಮರ್ಡಿಕ ಎಂದು ಬಳಸಲಾಗುತ್ತದೆ.[೪][೫][೬][೭] ಕೆಲವೊಮ್ಮೆ ಕುಕುಮಿಸ್ ಮೊಲೊ ಉಪಪ್ರಭೇದ ಮೆಲೊ ತಳಿ ವೊಮರ್ಡಿಕ ಎಂದು ಸಹ ಬಳಕೆ ಇದೆ.[೮] ಮೇಲೆ ಕೊಡಲಾದ ವೈಜ್ಞಾನಿಕ ಹೆಸರು (ಬಾಕ್ಸ್‌ನಲ್ಲಿ) ಕು. ಮೆಲೊ ಅಗ್ರೆಸ್ಟಿಸ್ ತಳಿ ಮೊಮರ್ಡಿಕ ಮತ್ತು ಇದನ್ನು ಇಪ್ಲೋರಆಫ್ಇಂಡಿಯ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಜರ್ಮ್‌ಪ್ಲಾಸಂನಲ್ಲಿಯೂ ಬಳಸಲಾಗುತ್ತಿದೆ.[೧][೨]

ಬೆಳೆ ಮತ್ತು ಇತರ ವಿವರಗಳು[ಬದಲಾಯಿಸಿ]

ಇಬ್ಬಡ್ಲ ಬಿಸುಪಿನ ಪ್ರದೇಶದ ಸಸ್ಯ, ಇದನ್ನು ವಷ್ಣವಲಯ ಮತ್ತು ಅರೆ-ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯ ಬಹುದು. ಇದನ್ನು ಶೀತವಲಯದಲ್ಲಿ ಕೆಲವು ನಿರ್ದಿಷ್ಟ ಪ್ರಾಂತಗಳಲ್ಲಿ ಮುಖ್ಯವಾಗಿ ದೀರ್ಘ ಬೇಸಿಗೆಕಾಲವಿರುವ ಪ್ರದೇಶಗಳಲ್ಲಿ ಬೆಳಯಲಾಗುತ್ತದೆ. ಭಾರತದಲ್ಲಿ ಇದನ್ನು ಪ್ರಮುಖವಾಗಿ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಬಿಹಾರ್‌ನಲ್ಲಿ ಬೆಳಯಲಾಗುತ್ತದೆ. ಕೆಲವೊಮ್ಮೆ ಇದನ್ನು ಜೋಳ, ಮೆಕ್ಕೆಜೋಳ ಮತ್ತು ಹತ್ತಿಯೊಂದಿಗೆ ಅಂತರ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಚೀನ ಇದನ್ನು ಅತಿ ಹೆಚ್ಚು ಉತ್ಪಾದಿಸು ದೇಶ.[೫]

ಇದೊಂದು ಬಳ್ಳಿ ಬೆಳೆ. ಇದರ ಹೂವುಗಳು ಸಣ್ಣವು ಮತ್ತು ಗಾಢ ಹಳದಿ ಬಣ್ಣದವು. ಇವುಗಳ ಹಣ್ಣುಗಳು ತಳಿಯ ಹಲವು ವೈವಿದ್ಯತೆಗಳನ್ನು ತೋರುತ್ತವೆ. ಹಣ್ಣುಗಳು ಉರುಳೆಯಾಕಾರವಲ್ಲದೆ, ದುಂಡುನ್ನೂ ಒಳಗೊಂಡು ಹಲವು ಆಕಾರಗಳಲ್ಲಿಯೂ ಇರಬಹುದು. ಹಣ್ಣುಗಳ ತೂಕ 1 ರಿಂದ 5 ಕಿಲೊಗ್ರಾಂ ವರೆಗೂ ಇರುತ್ತದೆ.[೯] ಕೇರಳದಲ್ಲಿ ಇದನ್ನು ಗದ್ದೆಗಳಲ್ಲಿ ಬತ್ತ ಕಟಾವಿನ ನಂತರ ಬಿತ್ತಲಾಗುತ್ತದೆ ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮತ್ತು ಮೇವರೆಗೂ ಸೀಸನ್. ಕರ್ನಾಟಕದಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ ಬೆಳಯಲು ಪ್ರಯತ್ನಿಸಲಾಗುತ್ತಿದ್ದು ಇತ್ತೀಚಿನ ಇಂತಹ ಪ್ರಯತ್ನ "ನಿಖರ ಕೃಷಿ" (ಪ್ರೆಸಿಶನ್ ಫ್ರಾರ್ಮಿಂಗ್) ಮೂಲಕ ಬೆಳೆಯುವುದು. ಇದರಲ್ಲಿ ಪ್ಲಾಸ್ಟಿಕ್ ಮುಚ್ಚಿಗೆ (ಮಲ್ಚ್), ಹನಿ ನೀರಾವರಿ, ಗೊಬ್ಬರಗಳು ಮತ್ತು ಪೋಷಕಾಂಶಕಗಳನ್ನು ಬಳಸಲಾಗುತ್ತಿದೆ. ಇಲ್ಲಿಯ ಬಿತ್ತನೆಯ ಕಾಲಮಾನ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಎಂದು ವರದಿಯಾಗಿದೆ.[೩]

ರಾಜಸ್ಥಾನದ ಬಿಕನೇರ್‌ನಲ್ಲಿರುವ ಕೇಂದ್ರ ಒಣ ತೋಟಗಾರಿಕೆ ಸಂಸ್ಥೆಯು ಎಹೆಚ್‌ಎಸ್-10 ಮತ್ತು ಎಹೆಚ್‌ಎಸ್-82 ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಎಹೆಚ್ಎಸ್‌-10 ತಳಿಯು 62-69 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಹಣ್ಣುಗಳು ಉರುಳೆಯ (ಸಿಲಿಂಡರ್) ಆಕಾರದಲ್ಲಿದ್ದು, ತೂಕವು 850-950 ಗ್ರಾಂಗಳು, ಉದ್ದ 17 ರಿಂದ 20 ಸೆಂಮೀ, ವ್ಯಾಸವು 9.7 ರಿಂದ 10.5 ಸೆಂಮೀ ಇರುತ್ತದೆ. ಉತ್ಪಾದಕತೆಯು ಹೆಕ್ಟೇರಿಗೆ 20-22 ಟನ್‌ಗಳು. ಎಹೆಚ್‌ಎಸ್-82 ಹಣ್ಣುಗಳು ಉರುಳೆಯ ಆಕಾರದಲ್ಲಿದ್ದು ತೂಕವು 900-950 ಗ್ರಾಂ, ಉದ್ದ 22.5 ರಿಂದ 24.5 ಸೆಂಮೀ ಇರುತ್ತದೆ. ಇದರ ಉತ್ಪಾದಕತೆಯು ಹೆಕ್ಟೇರಿಗೆ 22.5-24.8 ಟನ್‌ಗಳು.[೧೦] ಉತ್ತರ ಭಾರತದಲ್ಲಿ ಇದನ್ನು ಕಾಯಿಯಾಗಿದ್ದಾಗ ತರಕಾರಿಯಾಗಿಯೂ (ಹಸಿ ಹಾಗೂ ಬೇಯಿಸಿದ ರೂಪದಲ್ಲಿ) ಮತ್ತು ಮಾಗಿದಾಗ ಹಣ್ಣಾಗಿಯೂ ಬಳಸಲಾಗುತ್ತದೆ.[೧೦] ಕರ್ನಾಟಕ ಮತ್ತು ಕೇರಳಗಳಲ್ಲಿ ಇದನ್ನು ಹಣ್ಣಿನ ರೂಪದಲ್ಲಿ, ಹಣ್ಣಿನ ರಸವಾಗಿಯೂ ಬಳಸಲಾಗುತ್ತದೆ.[೩] ಹಣ್ಣುಗಳು ಕರಬೂಜಕ್ಕೆ ಹೋಲಿಸಿದಲ್ಲಿ ಕಡಿಮೆ ಸಿಹಿ ಇರುತ್ತವೆ.[೬] ಕೋಣೆಯ ತಾಪಮಾನದಲ್ಲಿ ಹಣ್ಣುಗಳನ್ನು 2 ರಿಂದ 4 ದಿವಸಗಳವರೆಗೆ ಮಾತ್ರ ಇರಿಸ ಬಹುದು. ಶೈತಾಗಾರದಲ್ಲಿ 2 ರಿಂದ 4 ಡಿಗ್ರಿ ಸೆ. ನಲ್ಲಿ ಮತ್ತು 85-90ಶೇ ಆರ್‌ಹೆಚ್‌ನಲ್ಲಿ 2 ರಿಂದ 3 ವಾರಗಳವರೆಗೂ ಇರಿಸಬಹುದು. ಹಣ್ಣುಗಳನ್ನು ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಐಸ್‌ಕ್ರೀಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.[೫]

ಇಬ್ಬಡ್ಲದಲ್ಲಿನ ಪೋಷಕಾಂಶಗಳು[೬][೭]
ಪೋಷಕಾಂಶಗಳು 100 ಗ್ರಾಂ ತಾಜ ಇಬ್ಬಡ್ಡದಲ್ಲಿ
ಶಕ್ತಿ 74.0 (ಕಿಲೊಕ್ಯಾಲ್‌)
ತೇವಾಂಶ 80.0 (ಗ್ರಾಂ)
ಪ್ರೋಟೀನ್ 0.37 (ಗ್ರಾಂ)
ಕೊಬ್ಬು 1.12 (ಗ್ರಾಂ)
ನಾರು 1.3 (ಗ್ರಾಂ)
ಕಾರ್ಬೊಹೈಡ್ರೇಟ್‌ 15.6 (ಗ್ರಾಂ)
ವಿಟಾಮಿನ್ ಸಿ 18.6 (ಮಿಗ್ರಾಂ)
ಕಬ್ಬಿಣ 0.84 (ಮಿಗ್ರಾಂ)
ಕ್ಯಾಲ್ಸಿಎಮ್ 0.76 (ಮಿಗ್ರಾಂ)
ರಂಜಕ 0.088 (ಮಿಗ್ರಾಂ)

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ Cucumis melo L. subsp. agrestis (Naudin) Pangalo var. momordica (Roxb.) Duthie & J. B. Fuller, Germplasm Resources Information Network (GRIN). United States Department of Agriculture, Agricultural Research Service, Retrieved on 2016-11-11.
  2. ೨.೦ ೨.೧ Cucumis melo subsp. agrestis var. momordica, efloraofindia, Database of Indian Plants- developed by the members of Efloraofindia Google Group, Retrieved on 2016-11-11
  3. ೩.೦ ೩.೧ ೩.೨ ಇಬ್ಬಡ್ಲ ಕೃಷಿ ಕೇರಳದ ಪಾಠಗಳು Archived 2016-11-19 ವೇಬ್ಯಾಕ್ ಮೆಷಿನ್ ನಲ್ಲಿ., 8 ನವೆಂಬರ್, 2008, ಪ್ರಜಾವಾಣಿ (ವೆಬ್), ಪಡೆದ ದಿನಾಂಕ 2016-11-25
  4. Snapmelon (Cucumis melo L. Momordica group), an indigenous cucurbit from India with immense value for melon breeding retrived on 2016-11-11
  5. ೫.೦ ೫.೧ ೫.೨ DEVENDRA KUMAR, R.B. RAM1, SANJAY KUMAR1, SUTANU MAJI1 AND MANOJ KUMAR Variability and physico-chemical studies in snap melon (Cucumis melo var. momordica)[ಶಾಶ್ವತವಾಗಿ ಮಡಿದ ಕೊಂಡಿ] retrieved on 2016-11-08
  6. ೬.೦ ೬.೧ ೬.೨ Genetic diversity in Indian snapmelon (Cucumis melo var. momordica) accessions revealed by ISSR markers, Plants Omic Journal, POJ 8(1):9-16 (2015), retrieved on 2016-11-08
  7. ೭.೦ ೭.೧ Goyal Madhu and S. K. Sharma Traditional wisdom and value addition prospects of arid foods of desert region of North West India, Indian Journal of Traditional Knowledge, vol. 8(4), October 2009, pp. 581-585, retrieved on 2016-11-08
  8. Scientific name: Cucumis melo L. subsp. melo var. momordica (Roxb.) Duthie & J. B. Fuller Field & garden crops 2:50. 1883 Botany on line retrived on 2016-11-25
  9. Sing Sheo Pujan, CUCURBITS Biodiversity, Breeding, and Production in Uttar Pradesh Archived 2020-06-22 ವೇಬ್ಯಾಕ್ ಮೆಷಿನ್ ನಲ್ಲಿ. retrived on 2016-11-411
  10. ೧೦.೦ ೧೦.೧ Gopalakrishnan T. R. Vegetable crops, New India Publishing, 2007, 119 page
"https://kn.wikipedia.org/w/index.php?title=ಇಬ್ಬಡ್ಲ&oldid=1201725" ಇಂದ ಪಡೆಯಲ್ಪಟ್ಟಿದೆ