ಹೀರೆ
Luffa acutangula | |
---|---|
Scientific classification | |
Unrecognized taxon (fix): | Luffa |
ಪ್ರಜಾತಿ: | L. acutangula
|
Binomial name | |
Luffa acutangula | |
Synonyms[೧] | |
|
ಹೀರೆಯನ್ನು ವಾಣಿಜ್ಯ ತರಕಾರಿಯಾಗಿ ಅದರ ಬಲಿಯದ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಲ್ಯುಫಾ ಅಕ್ಯುಟಾಂಗುಲ ಎಂಬ ಪ್ರಭೇದದ ಈ ಬಳ್ಳಿಯು ಕುಕರ್‌ಬಿಟೇಸಿ ಕುಟುಂಬಕ್ಕೆ ಸೇರುತ್ತದೆ. ಇದರ ಹಣ್ಣು ಸ್ವಲ್ಪಮಟ್ಟಿಗೆ ಏಣುಗೆರೆಗಳಿರುವ ಸೌತೆಕಾಯಿ ಅಥವಾ ಜ಼ುಕೀನಿಯನ್ನು ಹೋಲುತ್ತದೆ.
ಇತರ ಭಾಷೆಗಳಲ್ಲಿ
[ಬದಲಾಯಿಸಿ]ಇದನ್ನು ಆಂಗ್ಲಭಾಷೆಯಲ್ಲಿ ರಿಬ್ಬರ್‌ಗಾರ್ಡ್/ರಿಡ್ಜಗಾರ್ಡ, ವೆಜಿಟೇಬಲ್‌ಸ್ಪಾಂಜ್, ಹಿಂದಿಯಲ್ಲಿ ಕಾಲಿ ಟೊರೈ, ಜಿಂಗಾ ಮತ್ತು ಕನ್ನಡದಲ್ಲಿ ಹೀರೆಕಾಯಿ ಎಂದು ಕರೆಯುತ್ತಾರೆ.
ವಿವರ
[ಬದಲಾಯಿಸಿ]ಉಷ್ಣವಲಯದಲ್ಲಿ ಬೆಳೆಯುವ ಈ ಸಸ್ಯ ನೆಲದ ಮೇಲೆ ಬೆಳೆಯುವ ವಾರ್ಷಿಕ ಬಳ್ಳಿ. ಏಷ್ಯದ ವಿವಿಧ ದೇಶಗಳಲ್ಲಿ ಬೆಳೆಯುತ್ತದೆ. ಭಾರತದ ಎಲ್ಲ ಭಾಗಗಳಲ್ಲಿ ಬೆಳೆಯುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಬಲಿತ ಹಣ್ಣುಗಳನ್ನು ನೈಸರ್ಗಿಕ ಸ್ವಚ್ಛಗೊಳಿಸುವ ಸ್ಪಂಜುಗಳಾಗಿ ಬಳಸಲಾಗುತ್ತದೆ.
ಹೀರೆಕಾಯಿ ತರಕಾರಿಯ ರೂಪದಲ್ಲಿ ಅಡುಗೆಗೆ ಉಪಯೋಗವಾಗುತ್ತದೆ.[೨] ಒಣಗಿದ ಹಣ್ಣುಗಳಿಂದ ಪಡೆಯುವ ತಂತುಮಯ ಪದಾರ್ಥವು ಕಾರ್ಖಾನೆಗಳಲ್ಲಿ ಸೋಸುವ ಅರಿವೆಯಾಗಿ ಮತ್ತು ಸ್ನಾನದ ಸ್ಪಂಜಿನ ಬದಲಾಗಿ ಉಪಯುಕ್ತವಾಗುತ್ತದೆ.
ಹಿರೇಕಾಯಿಯಿಂದ ಆರೋಗ್ಯ ಪ್ರಯೋಜನಗಳು
[ಬದಲಾಯಿಸಿ]ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ
[ಬದಲಾಯಿಸಿ]- ಹೀರೆಕಾಯಿಯಲ್ಲಿ ವಿಟಮಿನ್ ' ಎ ' ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ.
ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ ಬೀಟಾ - ಕ್ಯಾರೋಟಿನ್ ಎಂಬ ವಿಟಮಿನ್ ' ಎ ' ಅಂಶದ ರೂಪ ಸರಿ ಪಡಿಸುತ್ತದೆ. ಇದರ ಜೊತೆಗೆ ಕಣ್ಣಿನ ಹಲವು ಸಮಸ್ಯೆಗಳನ್ನು ಹೀರೆಕಾಯಿ ಯಲ್ಲಿರುವ ಔಷಧೀಯ ಪರಿಣಾಮಗಳು ಸರಿ ಮಾಡುತ್ತವೆ.
- ಹೀರೆಕಾಯಿ ಒಂದು ರೀತಿಯಲ್ಲಿ ಆಂಟಿ - ಆಕ್ಸಿಡೆಂಟ್ ಕೂಡ ಆಗಿದ್ದು, ಇದರಲ್ಲಿರುವ ಬೀಟಾ - ಕ್ಯಾರೋಟಿನ್ ಅಂಶ ಕಣ್ಣಿನ ನರಗಳನ್ನು ಮತ್ತು ಕಣ್ಣಿಗೆ ಸಂಪರ್ಕ ಮಾಡುವ ರಕ್ತ ನಾಳಗಳನ್ನು ಯಾವುದೇ ವಿಷಕಾರಿ ಅಂಶಗಳಿಂದ ಪ್ರಭಾವಿತ ಆಗದಂತೆ ನೋಡಿಕೊಂಡು ಫ್ರೀ ರಾಡಿಕಲ್ ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.[೩]
ಅನೇಮಿಯ ಸಮಸ್ಯೆಗೆ ರಾಮಬಾಣ
[ಬದಲಾಯಿಸಿ]- ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು ತಯಾರು ಮಾಡುವ ನೆಪದಲ್ಲಿ ಬಳಸಬಹುದು. ನೀವು ಇಡೀ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ದೇಹದಲ್ಲಿನ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸುತ್ತದೆ.
- ಅದು ಅಲ್ಲದೆ ಹೀರೆಕಾಯಿಯಲ್ಲಿ ವಿಟಮಿನ್ ' ಬಿ6 ' ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.[೪]
ಚಿತ್ರಸಂಪುಟ
[ಬದಲಾಯಿಸಿ]-
ಹೀರೆ ಬಳ್ಳಿಯಲ್ಲಿ ಪುಷ್ಪಬಾಹ್ಯ ಮಕರಂದ ಗ್ರಂಥಿಗಳು[೫] ಮತ್ತು ಇರುವೆಗಳು
-
ಹೀರೆ ಬಳ್ಳಿಯ ಹೆಣ್ಣು ಹೂವು.
-
ಹೀರೆ ಬಳ್ಳಿಯ ಗಂಡು ಹೂವು.
ಉಲ್ಲೇಖಗಳು
[ಬದಲಾಯಿಸಿ]- ↑ "The Plant List: A Working List of All Plant Species". Archived from the original on 28 ಮೇ 2019. Retrieved 21 November 2014.
- ↑ Grubben, G.J.H.; Africa, P.R.o.T. (2004). Vegetables. Backhuys. ISBN 9789057821479.
- ↑ "ಹೀರೆಕಾಯಿ ಸೇವನೆ ಯಾರಿಗೆಲ್ಲಾ ಒಳ್ಳೆಯದಲ್ಲ". Vijay Karnataka. Retrieved 30 August 2024.
- ↑ "ಹೀರೆಕಾಯಿಯ ಒಂದರ ಮೇಲೊಂದು ಪ್ರಯೋಜನಗಳು, ಕೇಳಿದ್ರೆ ಅಚ್ಚರಿಪಡುವಿರಿ!". Vijay Karnataka. Retrieved 30 August 2024.
- ↑ Chakravarty, H. L. (October 1948). "Extrafloral Glands of Cucurbitaceæ". Nature. 162 (4119): 576–577. Bibcode:1948Natur.162..576C. doi:10.1038/162576b0. S2CID 4128826.