ಆಡುವ ಗೊಂಬೆ
ಆಡುವ ಗೊಂಬೆ | |
---|---|
Directed by | ಎಸ್.ಕೆ. ಭಗವಾನ್ |
Screenplay by | ಎಸ್. ಕೆ. ಭಗವಾನ್ |
Story by | ಎಸ್. ಕೆ. ಭಗವಾನ್ |
Produced by | ಶಿವಪ್ಪ .ಎ ವೇಣುಗೋಪಾಲ್ .ಕೆ |
Starring | ಸಂಚಾರಿ ವಿಜಯ್ ಅನಂತ್ ನಾಗ್ ಸುಧಾ ಬೆಳವಾಡಿ |
Cinematography | ಜಾಬೆಜ಼್ ಕೆ. ಗಣೇಶ್ |
Edited by | ಶಿವಪ್ರಸಾದ್ ಯಾದವ್ ಭರತ್ ಗೌಡ |
Music by | ಹೇಮಂತ್ ಕುಮಾರ್ |
Production company | ಕಸ್ತೂರಿ ನಿವಾಸ ಕ್ರಿಯೇಷನ್ಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Country | ಭಾರತ |
Language | ಕನ್ನಡ |
ಆಡುವ ಗೊಂಬೆ (ಇಂಗ್ಲೀಷ್: Playing Doll) 2019ರ ಎಸ್. ಕೆ. ಭಗವಾನ್ ನಿರ್ದೇಶನದ ಕನ್ನಡ ಭಾಷೆಯ ಚಿತ್ರ. 22 ವರ್ಷದ ಬಳಿಕ ಭಗವಾನ್ ಅವರು ನಿರ್ದೇಶನಕ್ಕೆ ಮರಳಿದರು. [೧] ಕಸ್ತೂರಿ ನಿವಾಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವನ್ನು ಶಿವಪ್ಪ.ಎ ಮತ್ತು ವೇಣುಗೋಪಾಲ್.ಕೆ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. [೨] ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ರಿಷಿತಾ ಮಲ್ನಾಡ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್, ಸುಧಾ ಬೆಳವಾಡಿ ಮತ್ತು ಇತರರು ಇದ್ದಾರೆ . ಚಿತ್ರದ ಹಿನ್ನಲೆ ಸಂಗೀತ ಮತ್ತು ಧ್ವನಿಪಥವನ್ನು ಹೇಮಂತ್ ಕುಮಾರ್ ಮತ್ತು ಛಾಯಾಗ್ರಹಣವನ್ನು ಗಣೇಶ್ ಸಂಯೋಜಿಸಿದ್ದಾರೆ.
ಈ ಚಿತ್ರವು 4 ಜನವರಿ 2019 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಮತ್ತು ಈ ಚಿತ್ರ ಕನ್ನಡ ಚಿತ್ರರಂಗದ ವರ್ಷದ ಮೊದಲ ಬಿಡುಗಡೆ.[೩]
ಪಾತ್ರವರ್ಗ
[ಬದಲಾಯಿಸಿ]- ಮಾಧವನಾಗಿ ಸಂಚಾರಿ ವಿಜಯ್
- ಕಿಶನ್ ಆಗಿ ಅನಂತ್ ನಾಗ್
- ರಿಶಿತಾ ಮಲ್ನಾಡ್
- ರುಕ್ಮಿಣಿಯಾಗಿ ಸುಧಾ ಬೆಳವಾಡಿ
- ನಿರೋಶಾ ಶೆಟ್ಟಿ
ಧ್ವನಿಪಥ
[ಬದಲಾಯಿಸಿ]ಹೇಮಂತ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಧ್ವನಿಸುರುಳಿ 26 ಅಕ್ಟೋಬರ್ 2018 ರಂದು ಅಭಿಮಾನಿಗಳ ನಡುವೆ ಬಿಡುಗಡೆಯಾಯಿತು ಮತ್ತು ಇದು ನಟ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಆಡಿಯೊ ಲೇಬಲ್‌ನ ಒಡೆತನದಲ್ಲಿದೆ. [೪] ಮೂವರು ಸಹೋದರರಾದ ಶಿವ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಮತ್ತು ಅವರ ಸೋದರಸಂಬಂಧಿ ನಟ ವಿಜಯ್ ರಾಘವೇಂದ್ರ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. [೫]
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಹಾಡುಗಾರ(ರು) | ಸಮಯ |
1. | "ಪಿಸುಮಾತಿಗೆ ತುಸು" | ಶಿವರಾಜ್‍ಕುಮಾರ್, ಮಾನಸ ಹೊಳ್ಳ | 06:11 |
2. | "ಆ ದೇವ ರೂಪಿಸಿದ" | ಪುನೀತ್ ರಾಜ್‍ಕುಮಾರ್ | 04:46 |
3. | "ಆಡಿಸಿ ನೋಡು ಬೀಳಿಸಿ ನೋಡು" | ರಾಘವೇಂದ್ರ ರಾಜಕುಮಾರ್ | 04:31 |
4. | "ಮದರಂಗಿ ಮದರಂಗಿ" | ವಿಜಯ ರಾಘವೇಂದ್ರ, ಅನುರಾಧ ಭಟ್ | 06:24 |
5. | "ಓ ಮದನ" | ರೆಮೋ | 04:52 |
6. | "ನಾಟ್ಯರಾಣಿ ಶಾಂತಲೆ" | ಸುಪ್ರಿಯಾ ಲೋಹಿತ್ | 05:04 |
ಉಲ್ಲೇಖಗಳು
[ಬದಲಾಯಿಸಿ]- ↑ "S K Bhagwan returns to direction". ದಿ ಟೈಮ್ಸ್ ಆಫ್ ಇಂಡಿಯಾ. 22 July 2017.
- ↑ "Bhagwan film on floor". Indiaglitz.com. 7 November 2017.
- ↑ "Aduva Gombe – Kannada Drama Film – Releasing on 4th Jan, 2019". Filmgappa.com. 30 December 2018.
- ↑ "Grand Audio Launch for Aduva Gombe". Chitratara.com. 26 October 2018.
- ↑ "S K Bhagwan film Raj sons sing". Indiaglitz.com. 4 May 2018.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Aduva Gombe
- ಅಡುವಾ ಗೊಂಬೆ ಅಧಿಕೃತ ಪುಟ