ಆಕ್ವಾ (ವಾದ್ಯವೃಂದ)
Aqua | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Copenhagen, Denmark |
ಸಂಗೀತ ಶೈಲಿ | Bubblegum dance, europop, eurodance |
ಸಕ್ರಿಯ ವರ್ಷಗಳು | 1989–1995 as Joyspeed 1996–2001; 2007–present as Aqua |
Labels | Universal Music Denmark |
Associated acts | Lazyboy Hej Matematik |
ಅಧೀಕೃತ ಜಾಲತಾಣ | aquaofficial.com |
ಸಧ್ಯದ ಸದಸ್ಯರು | Lene Nystrøm René Dif Søren Rasted Claus Norreen |
ಆಕ್ವಾ ಎಂಬುದು ಡೆನ್ಮಾರ್ಕಿನ-ನಾರ್ವೆಯ[೧] ಒಂದು ನೃತ್ಯ-ಪಾಪ್ ಸಂಗೀತದ ತಂಡವಾಗಿದ್ದು, 1997ರಲ್ಲಿ ಪ್ರಚಂಡ ಯಶಸ್ಸು ದಾಖಲಿಸಿದ "ಬಾರ್ಬೀ ಗರ್ಲ್" ಎಂಬ ತನ್ನ ಏಕಗೀತೆಯಿಂದಾಗಿ ಇದು ಸುಪರಿಚಿತವಾಗಿದೆ. 1985ರಲ್ಲಿ ಈ ತಂಡವು ರೂಪುಗೊಂಡಿತು ಮತ್ತು 1990ರ ದಶಕದ ಅಂತ್ಯಭಾಗದಲ್ಲಿ ಹಾಗೂ 2000ರ ದಶಕದ ಆರಂಭದಲ್ಲಿ ಇದು ಜಗತ್ತಿನಾದ್ಯಂತ ಬೃಹತ್ ಯಶಸ್ಸನ್ನು ಸಾಧಿಸಿತು. ತನ್ನ ಮೊದಲ ಮೂರು ಏಕಗೀತೆಗಳ ನೆರವಿನಿಂದಾಗಿ ಈ ತಂಡವು UK ಏಕಗೀತೆಗಳ ಕೋಷ್ಟಕದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆಯುವಲ್ಲಿ ಸಮರ್ಥವಾಯಿತು. 2001ರ ಜುಲೈನಲ್ಲಿ ವಿಘಟನೆಯಾಗುವುದಕ್ಕೆ ಮುಂಚಿತವಾಗಿ ಈ ತಂಡವು ಎರಡು ಗೀತಸಂಪುಟಗಳನ್ನು ಬಿಡುಗಡೆಮಾಡಿತು. ಅವೆಂದರೆ: 1997ರಲ್ಲಿ ಬಂದ ಆಕ್ವೇರಿಯಂ ಮತ್ತು 2000ರಲ್ಲಿ ಬಂದ ಆಕ್ವೇರಿಯಸ್ . ಒಂದು ಅಂದಾಜಿನ ಪ್ರಕಾರ, ಈ ತಂಡವು 33 ದಶಲಕ್ಷದಷ್ಟು ಗೀತಸಂಪುಟಗಳು ಮತ್ತು ಏಕಗೀತೆಗಳನ್ನು ಮಾರಾಟ ಮಾಡಿದ್ದು, ತನ್ಮೂಲಕ ಡೆನ್ಮಾರ್ಕಿನ ಇದುವರೆಗಿನ ಅತ್ಯಂತ ಯಶಸ್ವೀ ವಾದ್ಯವೃಂದವೆನಿಸಿಕೊಂಡಿದೆ.[೧] ತಮ್ಮ ಪರಾಕಾಷ್ಠೆಯ ಅವಧಿಯಲ್ಲಿ ಆಕ್ವಾ ತಂಡದ ಏಕಗೀತೆಗಳು, ಯುರೋಪ್ ಖಂಡದ ಪಾಪ್ ಪ್ರಸ್ತುತಿಗಳು ಸಾಮಾನ್ಯವಾಗಿ ಯಶಸ್ವಿಯಾಗದ ಹಲವಾರು ದೇಶಗಳ ಗೀತ-ಕೋಷ್ಟಕಗಳಲ್ಲಿನ ಅಗ್ರಗಣ್ಯ ಹತ್ತು ಗೀತೆಗಳ ಪೈಕಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದವು; ಅಮೆರಿಕಾ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯಾ, ಮತ್ತು ಜಪಾನ್ ಇಂಥ ದೇಶಗಳಲ್ಲಿ ಸೇರಿದ್ದವು. ತಂಡವು ತನ್ನ "ಬಾರ್ಬೀ ಗರ್ಲ್" ಏಕಗೀತೆಯಲ್ಲಿ ದ್ವಂದ್ವಾರ್ಥಕ ಸಾಲುಗಳನ್ನು ಬಳಸುವ ಮೂಲಕ ವಿವಾದವನ್ನೂ ಸೃಷ್ಟಿಸಿತು; ಇದರಿಂದಾಗಿ ಬಾರ್ಬೀ ಗೊಂಬೆ ತಯಾರಕರಾದ ಮ್ಯಾಟೆಲ್ ಕಂಪನಿಯು ತಂಡದ ವಿರುದ್ಧವಾಗಿ ಮೊಕದ್ದಮೆಯೊಂದನ್ನು ಹೂಡುವಂತಾಯಿತು. ಅಂತಿಮವಾಗಿ, ಸದರಿ ಮೊಕದ್ದಮೆಯನ್ನು 2002ರಲ್ಲಿ ವಜಾಗೊಳಿಸಿದ ನ್ಯಾಯಮೂರ್ತಿಯು, "ನಿರಾಳವಾಗಿರುವಂತೆ ಪ್ರಕರಣದ ಸಹಭಾಗಿಗಳಿಗೆ ಸಲಹೆ ನೀಡಲಾಗಿದೆ" ಎಂಬುದಾಗಿ ತೀರ್ಪುನೀಡಿದ.[೨] ವಾದ್ಯವೃಂದದ ಸದಸ್ಯರಲ್ಲಿ ಹಾಡುಗಾರರಾದ ಲೆನೆ ನೈಸ್ಟ್ರೋಮ್ ಮತ್ತು ರೆನೆ ಡಿಫ್, ಕೀಬೋರ್ಡ್ ವಾದಕ ಸೋರೆನ್ ರಾಸ್ಟೆಡ್, ಮತ್ತು ಗಿಟಾರ್ ವಾದಕ ಕ್ಲೌಸ್ ನೊರೀನ್ ಸೇರಿದ್ದಾರೆ. ತಂಡದ ವಿಘಟನೆಯ ಸಂದರ್ಭದಲ್ಲಿ, ನೈಸ್ಟ್ರೋಮ್, ಡಿಫ್ ಮತ್ತು ರಾಸ್ಟೆಡ್ ಇವರೆಲ್ಲರೂ ಒಂಟಿಗೀತೆಯ ಕೋಷ್ಟಕದಲ್ಲಿ ಯಶಸ್ಸನ್ನು ಸಾಧಿಸಿದರೆ, ಇತರ ಕಲಾವಿದರ ಮೂಲಸಂಗೀತ-ಸಾಮಗ್ರಿಗಳನ್ನು ಮರುಮಿಶ್ರಣ (ರೀಮಿಕ್ಸಿಂಗ್) ಮಾಡುವ ಮೂಲಕ ನೊರೀನ್ ಸಂಗೀತದ ಉದ್ಯಮದಲ್ಲಿ ಮುಂದುವರಿದ. 2007ರ ಅಕ್ಟೋಬರ್ 26ರ ಶುಕ್ರವಾರದಂದು ಆಯೋಜಿಸಲ್ಪಟ್ಟಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ, ಮರುವಿಲೀನದ ಪ್ರವಾಸವೊಂದರ ಕುರಿತು, ಮತ್ತು ಹೊಸ ಮೂಲದ್ರವ್ಯವನ್ನು ಒಳಗೊಂಡಿರುವ ಸಂಕಲನದ ಗೀತಸಂಪುಟವೊಂದರ ಬಿಡುಗಡೆಯ ಕುರಿತು ತಂಡವು ಘೋಷಿಸಿತು. 2009ರಲ್ಲಿ ಆಕ್ವಾ ತಂಡವು ಮೂರು ಸಂಗೀತ ಕಚೇರಿಗಳನ್ನು ನಡೆಸಲಿದೆ ಎಂದು 2008ರ ಡಿಸೆಂಬರ್‌ನಲ್ಲಿ ಘೋಷಿಸಲಾಯಿತು.[೩][೪]
ಇತಿಹಾಸ
[ಬದಲಾಯಿಸಿ]1989–1996: ಜಾಯ್‌ಸ್ಪೀಡ್ ಆಗಿ ಆರಂಭಗೊಂಡ ವೃತ್ತಿಜೀವನದ ಹಂತಗಳು
[ಬದಲಾಯಿಸಿ]ಒಟ್ಟಾರೆಯಾಗಿ ಹೇಳುವುದಾದರೆ, ಆಕ್ವಾದ ಇತಿಹಾಸವು 1989ರಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸದರಿ ತಂಡವನ್ನು ಮೂಲತಃ ಜಾಯ್‌ಸ್ಪೀಡ್ ಎಂದು ಕರೆಯಲಾಗುತ್ತಿತ್ತು. 1989ರಲ್ಲಿ ಕ್ಲೌಸ್ ನೊರೀನ್ ಮತ್ತು ಸೋರೆನ್ ರಾಸ್ಟೆಡ್ ಭೇಟಿಯಾದರು, ಮತ್ತು 1990ರ ದಶಕದ ಉದ್ದಕ್ಕೂ ಅವರು ಹಾಡುಗಳನ್ನು ಒಟ್ಟಾಗಿ ಬರೆಯಲು ಆರಂಭಿಸಿದರು. ಆ ಸಮಯದಲ್ಲಿ, ರೆನೆ ಡಿಫ್ ಹಾಲೆಂಡ್‌ನಲ್ಲಿ ಓರ್ವ ಕ್ಲಬ್ DJ ಆಗಿ ಕೆಲಸಮಾಡುತ್ತಿದ್ದ, ಹಾಗೂ ಸೋರೆನ್ ಮತ್ತು ಜೋನ್‌ಫಾರ್ ಈ ಇಬ್ಬರೂ ನಿರ್ಮಾಪಕರಾಗಿ ಪಾದಾರ್ಪಣ ಮಾಡುತ್ತಿದ್ದರು. ಸೋರೆನ್ ರಾಸ್ಟೆಡ್ ಮತ್ತು ಕ್ಲೌಸ್ ನೊರೀನ್ ಸ್ಪರ್ಧೆಯೊಂದರಲ್ಲಿ ಗೆದ್ದಿದ್ದರು ಹಾಗೂ ಧ್ವನಿಪಥವೊಂದನ್ನು ನಿರ್ಮಿಸಲೆಂದು ಅವರನ್ನು ನೇಮಿಸಿಕೊಳ್ಳಲಾಗಿತ್ತು. ಕೆಲವೊಂದು ಹಾಡುಗಳಿಗಾಗಿ ಅವರು ರೆನೆ ಡಿಫ್‌ನನ್ನು ನೇಮಿಸಿಕೊಂಡರು. ಫ್ರೇಕ್ಕೆ ಫ್ರಿಂಡಾ ಒಗ್ ಡೆ ಫ್ರೈಟ್‌ಲೋಸ್ ಸ್ಪಿಯೋನರ್ ಎಂಬ ಶೀರ್ಷಿಕೆಯನ್ನು ಹೊಂದಿದ್ದ, ಅಷ್ಟೇನೂ-ಹೆಸರು ಪಡೆಯದ ಚಲನಚಿತ್ರವೊಂದಕ್ಕೆ ಸಂಬಂಧಿಸಿದ ಧ್ವನಿಪಥದ ಭಾಗವೊಂದನ್ನು ನಿರ್ಮಿಸಲು ಈ ಮೂವರನ್ನೂ ಕರೆತರಲಾಗಿತ್ತು. ಧ್ವನಿಪಥದ ಧ್ವನಿಮುದ್ರಣವು 1993ರಲ್ಲಿ ಆರಂಭವಾಯಿತು, ಮತ್ತು ಎಲ್ಲವೂ ಸುಸೂತ್ರವಾಗಿ ನಡೆದುದನ್ನು ಕಂಡನಂತರ, ಭವಿಷ್ಯದ ಯೋಜನೆಯೊಂದರ ಕುರಿತಾಗಿ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡುವುದೆಂದು ಅವರು ನಿರ್ಧರಿಸಿದರು. 1994ರಲ್ಲಿ ಸದರಿ ಚಲನಚಿತ್ರವು ಬಿಡುಗಡೆಯಾದ ಕೆಲವು ತಿಂಗಳುಗಳ ನಂತರ, ನಾರ್ವೆಯ ಮೆ. ಪೀಟರ್ ವೆಸ್ಸೆಲ್ ಎಂಬ ಹೆಸರಿನ ನಾರ್ವೆ–ಡೆನ್ಮಾರ್ಕ್ ಮಾರ್ಗದ ಹಾಯುವ ದೋಣಿಯಲ್ಲಿ ಲೆನೆ ನೈಸ್ಟ್ರೋಮ್ ಹಾಡುತ್ತಿರುವುದನ್ನು ರೆನೆ ಡಿಫ್ ಗುರುತಿಸಿದ. ಆಗ ಅವಳನ್ನು ಸಂಪರ್ಕಿಸಿದ ಅವನು, ನಂತರದಲ್ಲಿ ಆಕ್ವಾ ಎಂಬುದಾಗಿ ಮರುನಾಮಕರಣಗೊಂಡ ಜಾಯ್‌ಸ್ಪೀಡ್ ತಂಡದ ಪ್ರಮುಖ ಗಾಯಕಿಯನ್ನಾಗಿ ಅವಳನ್ನು ನೇಮಿಸಿಕೊಂಡ. ಇದರ ಜೊತೆಗೆ, ಬೆಕ್ ಲುವೀನ್ ಮೂಲ ಜಾಯ್‌ಸ್ಪೀಡ್ ತಂಡದ ಭಾಗವಾಗಿದ್ದು, ತ್ರಿಕೋನ ಕಂಬಿವಾದ್ಯವನ್ನು ನುಡಿಸುತ್ತಿದ್ದಳು; ಆದರೆ ಅವಳ ಅಗಾಧ ಪ್ರತಿಭೆಯಿಂದಾಗಿ ದೊರೆತ ಮಿತಿಮೀರಿದ ಬೇಡಿಕೆಯಿಂದಾಗಿ ಅತ್ಯಲ್ಪ ಅವಧಿಯಲ್ಲಿಯೇ ಅವಳು ತಂಡವನ್ನು ತೊರೆದಳು. ಕ್ಲೌಸ್ ಮತ್ತು ಸೋರೆನ್ ಇಬ್ಬರೂ ಸಹ ತಂಡಕ್ಕೆ ಸಂಬಂಧಿಸಿದ ನಿರ್ಮಾಣಕಾರ್ಯವನ್ನು ಕೈಗೊಳ್ಳುವುದು, ರೆನೆ ಡಿಫ್ ತಾಳವಾದ್ಯಗಳನ್ನು ಬಡಿಯುವುದು ಮತ್ತು ಲೆನೆ ನೈಸ್ಟ್ರೋಮ್ ಮುಖ್ಯ ಗಾಯನ ಭಾಗಗಳನ್ನು ಪ್ರಸ್ತುತಪಡಿಸುವುದು ಎಂಬುದರ ಆಧಾರದ ಮೇಲೆ ಜಾಯ್‌ಸ್ಪೀಡ್ ರೂಪುಗೊಂಡಿತ್ತು. 1994ರಲ್ಲಿ ಸ್ವೀಡನ್ನಿನ ಸಣ್ಣ ಧ್ವನಿಮುದ್ರಣ ಕಂಪನಿಯೊಂದು ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತು, ಹಾಗೂ "ಇಟ್ಜಿ ಬಿಟ್ಜಿ ಸ್ಪೈಡರ್" ಎಂಬ ಅವರ ಮೊಟ್ಟಮೊದಲ ಏಕಗೀತೆಯು ಸ್ವೀಡನ್‌ನಲ್ಲಿ ಬಿಡುಗಡೆಯಾಯಿತು. ಜನಪ್ರಿಯತೆ ಗಳಿಸುವಲ್ಲಿ ಸದರಿ ಏಕಗೀತೆಯು ವಿಫಲಗೊಂಡಿತು ಮತ್ತು ಸ್ವೀಡನ್ನಿನ ಗೀತ-ಕೋಷ್ಟಕಗಳಲ್ಲಿನ ಕೆಳಗಿನ ತುದಿಯಲ್ಲಿ ಒಂದು ವಾರವನ್ನು ಕಳೆದ ನಂತರ ಅದು ಸಂಪೂರ್ಣವಾಗಿ ಕಾಣೆಯಾಯಿತು. ಇದನ್ನು ಕಂಡು ನಾಲ್ಕೂ ಮಂದಿ ನಿರಾಶೆಗೊಂಡರು ಹಾಗೂ ಸದರಿ ಧ್ವನಿಮುದ್ರಣ ಕಂಪನಿಯೊಂದಿಗಿನ ತಮ್ಮ ಒಪ್ಪಂದವನ್ನು ರದ್ದುಮಾಡಿದರು (ಆದರೂ ಸಹ, ಆ ಧ್ವನಿಮುದ್ರಣ ಕಂಪನಿಯು ತನ್ನ ಮುಂದಿನ ಗೀತೆಗಳ ಬಿಡುಗಡೆಗಳಿಗೆ ಸಂಬಂಧಿಸಿದಂತೆ ತಂಡವನ್ನು ಮುಂದುವರಿಸಲು ಬಯಸಿತ್ತು).
1996–1998: ಆಕ್ವೇರಿಯಂ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಚಂಡ ಯಶಸ್ಸು
[ಬದಲಾಯಿಸಿ]ಯಾವುದೇ ಧ್ವನಿಮುದ್ರಣ ವ್ಯವಹಾರವಿಲ್ಲದ ತಂಡವು ಓರ್ವ ಹೊಸ ವ್ಯವಸ್ಥಾಪಕನನ್ನು ಇಟ್ಟುಕೊಂಡು ಪುನರಾರಂಭವಾಯಿತು ಹಾಗೂ ತನ್ನದೇ ಆದ ಪ್ರಸಿದ್ಧ ಬಬಲ್‌ಗಮ್ ಪಾಪ್ ಧ್ವನಿಯನ್ನು ಅಭಿವೃದ್ಧಿಪಡಿಸಲು ಶುರುಮಾಡಿತು. ಈ ನಾಲ್ವರೂ ಮಾಧುರ್ಯಪೂರ್ಣವಾದ, ಮನಸೆಳೆಯುವ ಐರೋಪ್ಯ ಪಾಪ್ ಹಾಡುಗಳನ್ನು ಬರೆಯಲು ಮತ್ತು ನಿರ್ಮಿಸಲು ಆರಂಭಿಸಿದರು. ಇದು ಯೂನಿವರ್ಸಲ್ ಮ್ಯೂಸಿಕ್ ಡೆನ್ಮಾರ್ಕ್ ಎಂಬ ಪ್ರಮುಖ ಧ್ವನಿಮುದ್ರಣ ಕಂಪನಿಯ ಗಮನವನ್ನು ಸೆಳೆಯಿತು. ತಮ್ಮ ಅಲಂಕಾರದ ಕೊಠಡಿಯಲ್ಲಿನ ಆಕ್ವೇರಿಯಂ ಒಂದಕ್ಕಾಗಿ ಭಿತ್ತಿಪತ್ರವೊಂದರ ಮೇಲೆ ಕಂಡ ಹೆಸರನ್ನು ಆಯ್ಕೆಮಾಡುವಾಗ, ತಂಡದ ಸದಸ್ಯರು ತಮ್ಮನ್ನು (ತಮ್ಮ ತಂಡವನ್ನು) ಆಕ್ವಾ ಎಂಬುದಾಗಿ ಮರುನಾಮಕರಣ ಮಾಡಿಕೊಂಡರು, ಮತ್ತು ಒಂದು ಧ್ವನಿಮುದ್ರಣದ ಒಪ್ಪಂದಕ್ಕೆ ಸಂಬಂಧಿಸಿದ ಯೂನಿವರ್ಸಲ್ ಮ್ಯೂಸಿಕ್ ಡೆನ್ಮಾರ್ಕ್ ಕಂಪನಿಯ ಪ್ರಸ್ತಾವವನ್ನು 1996ರಲ್ಲಿ ಅಂಗೀಕರಿಸಿದರು. "ರೋಸಸ್ ಆರ್ ರೆಡ್" ಎಂಬುದು ತಂಡದ ಹೊಸ ಹೆಸರಿನ ಅಡಿಯಲ್ಲಿ ಆದ ಅದರ ಮೊದಲ ಬಿಡುಗಡೆ ಎನಿಸಿಕೊಂಡಿತು. ಇದು ಒಂದು ವಿಶಿಷ್ಟ ಪಾಪ್ ಧ್ವನಿಯನ್ನು ಹೊಂದಿದ್ದ ಒಂದು ನೃತ್ಯಗೀತೆಯಾಗಿತ್ತು. 1996ರ ಸೆಪ್ಟೆಂಬರ್‌ನಲ್ಲಿ, ಡೆನ್ಮಾರ್ಕ್‌ನಲ್ಲಿ ಇದು ಬಿಡುಗಡೆಯಾಯಿತು, ಮತ್ತು ಇದು ಡೆನ್ಮಾರ್ಕಿನ ಹತ್ತು ಅಗ್ರಗಣ್ಯ ಗೀತೆಗಳ ಕೋಷ್ಟಕದೊಳಗೆ ನುಗ್ಗಿ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸಲಾಯಿತು. ಧ್ವನಿಮುದ್ರಣ ಕಂಪನಿಯು ನಿಗದಿಪಡಿಸಿಕೊಂಡಿದ್ದ ಎಲ್ಲಾ ನಿರೀಕ್ಷೆಗಳನ್ನು ಈ ಏಕಗೀತೆಯು ದಾಟಿಕೊಂಡು ಹೋಯಿತು, ಮತ್ತು ಎರಡು ತಿಂಗಳುಗಳಿಗೂ ಹೆಚ್ಚಿನ ಅವಧಿಗೆ ಸಂಗೀತ-ಕೋಷ್ಟಕಗಳಲ್ಲಿ ಉಳಿದುಕೊಂಡಿತು. ಅಷ್ಟೇ ಅಲ್ಲ, ಪ್ಲಾಟಿನಂ ಸಾಧನೆಯ ಪ್ರಮಾಣೀಕರಣಕ್ಕೆ ಒಳಪಡಲು ಅಗತ್ಯವಿರುವಷ್ಟು ಪ್ರತಿಗಳು ಮಾರಾಟವಾದವು. "ಡೆನ್ಮಾರ್ಕಿನ ಅತ್ಯುತ್ತಮ ನೃತ್ಯ ಪ್ರಸ್ತುತಿ" ಎಂಬ ವರ್ಗಕ್ಕೆ ಸಂಬಂಧಿಸಿದಂತಿರುವ ನಾಮಕರಣವೊಂದನ್ನು ಆಕ್ವಾ ತಂಡವು ಸ್ವೀಕರಿಸಿದಾಗ ಸದರಿ ಏಕಗೀತೆಯ ಯಶಸ್ಸು ಮತ್ತಷ್ಟು ಸಾಬೀತಾಯಿತಾದರೂ, ತಂಡವು ಈ ವರ್ಗದಲ್ಲಿ ಗೆಲ್ಲಲಿಲ್ಲ. "ರೋಸಸ್ ಆರ್ ರೆಡ್"ನ ದಿಢೀರ್ ಯಶಸ್ಸಿನಿಂದಾಗಿ, ಸಾರ್ವಜನಿಕರ ವಲಯದಲ್ಲಿ ತಮ್ಮ ಹೊಸ ಧ್ವನಿಯು ಜನಪ್ರಿಯವಾಗಿದೆ ಎಂಬ ಅಂಶವು ಆಕ್ವಾ ತಂಡಕ್ಕೆ ಮನವರಿಕೆಯಾಯಿತು. ಇದರ ಫಲವಾಗಿ ತಂಡದ ಮುಂಬರಿಕೆ ಏಕಗೀತೆಯು ಇದೇ ಸೂತ್ರವನ್ನು ಅನುಸರಿಸಿಕೊಂಡು ಹೊರಬಂದಿತು. "ಮೈ ಓಹ್ ಮೈ" ಎಂಬ ಶೀರ್ಷಿಕೆಯನ್ನು ಹೊಂದಿದ್ದ ಈ ಏಕಗೀತೆಯು, ಒಂದು ನವಿರಾದ, ಮಾಧುರ್ಯದ ಲಯದ ಜೊತೆಜೊತೆಗೆ ಮತ್ತೊಮ್ಮೆ ಮನಸೆಳೆಯುವ ಸಾಹಿತ್ಯವನ್ನು ಒಳಗೊಂಡಿತ್ತು. 1997ರ ಫೆಬ್ರುವರಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ "ಮೈ ಓಹ್ ಮೈ" ಏಕಗೀತೆಯು ಡೆನ್ಮಾರ್ಕಿನ ಎಲ್ಲಾ ಮಾರಾಟ ದಾಖಲೆಗಳನ್ನು ಮುರಿದು, ಆರೇ ದಿನಗಳ ಒಳಗಾಗಿ ಬಂಗಾರದ ಸಾಧನೆಯ ಪ್ರಮಾಣೀಕರಣಕ್ಕೆ ಒಳಗಾಯಿತು. ಈ ಏಕಗೀತೆಯು ಡೆನ್ಮಾರ್ಕ್‌ನಲ್ಲಿ ಮೊದಲನೇ ಸ್ಥಾನಕ್ಕೆ ನೇರವಾಗಿ ತಲುಪಿತು, ಮತ್ತು ಆ ದೇಶದಲ್ಲಿ ಆಕ್ವಾ ತಂಡದ ಹೆಸರು ಮನೆಮಾತಾಯಿತು. ಮೊದಲ ಎರಡು ಏಕಗೀತೆಗಳ ಅಭೂತಪೂರ್ವ ಯಶಸ್ಸಿನಿಂದಾಗಿ, ಆಕ್ವಾ ತಂಡವು ಒಂದು ಮಾರುಕಟ್ಟೆ ಮಾಡಬಹುದಾದ ತಂಡ ಎಂಬ ಅಂಶವು ಯೂನಿವರ್ಸಲ್ ಮ್ಯೂಸಿಕ್ ಡೆನ್ಮಾರ್ಕ್ ಸಂಸ್ಥೆಗೆ ಮನವರಿಕೆಯಾಯಿತು. ಇದರ ಪರಿಣಾಮವಾಗಿ ಖಂಡದ ಉದ್ದಗಲಕ್ಕೂ ಆಕ್ವಾ ತಂಡದ ಸಂಗೀತದ ಮಾರುಕಟ್ಟೆ ಮಾಡುವಿಕೆಯನ್ನು ಆರಂಭಿಸಲು ಆ ಧ್ವನಿಮುದ್ರಣ ಕಂಪನಿಯು ಯೋಜಿಸಿತು. 1997ರ ಮಾರ್ಚ್ 26ರಂದು, ಆಕ್ವೇರಿಯಂ ಎಂಬ ಹೆಸರಿನ ತನ್ನ ಪ್ರಥಮ ಪ್ರವೇಶದ ಗೀತಸಂಪುಟವನ್ನು ಡೆನ್ಮಾರ್ಕ್‌ನಲ್ಲಿ ಆಕ್ವಾ ಬಿಡುಗಡೆಮಾಡಿತು. ತಂಡದ ಮೊದಲ ಎರಡು ಏಕಗೀತೆಗಳು ಮತ್ತು "ಬಾರ್ಬೀ ಗರ್ಲ್" ಎಂಬ ಅದರ ಮುಂಬರಲಿದ್ದ ಮೂರನೇ ಏಕಗೀತೆಯೂ ಸೇರಿದಂತೆ, 11 ಧ್ವನಿಪಥಗಳನ್ನು ಈ ಗೀತಸಂಪುಟವು ಒಳಗೊಂಡಿತ್ತು. 1996ರ ವರ್ಷದ ಅಂತ್ಯದ ವೇಳೆಗೆ ಯುರೋಪ್ ಖಂಡದಾದ್ಯಂತದ ಹಲವಾರು ದೇಶಗಳಲ್ಲಿ ಮತ್ತು 1997ರ ಫೆಬ್ರುವರಿಯಲ್ಲಿ ಜಪಾನ್ ದೇಶದಲ್ಲಿ "ರೋಸಸ್ ಆರ್ ರೆಡ್" ಏಕಗೀತೆಯನ್ನು ಬಿಡುಗಡೆ ಮಾಡುವ ಮೂಲಕ, ಯೂನಿವರ್ಸಲ್ ಮ್ಯೂಸಿಕ್ ಸಮೂಹವು ಅಷ್ಟುಹೊತ್ತಿಗೆ ಆಕ್ವಾ ತಂಡವನ್ನು ಇತರ ದೇಶಗಳಲ್ಲಿ ಮಾರುಕಟ್ಟೆ ಮಾಡುವುದಕ್ಕೆ ಪ್ರಾರಂಭಿಸಿತ್ತು. ಸದರಿ ಏಕಗೀತೆಯು ಮಾರಾಟವಾದ ಕಡೆಯಲ್ಲೆಲ್ಲಾ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿತು. ಅಷ್ಟೇ ಅಲ್ಲ, ಕೇವಲ ಡೆನ್ಮಾರ್ಕಿನ ಮಾರುಕಟ್ಟೆಯ ಮೇಲೆ ಮಾತ್ರವೇ ಅಲ್ಲದೇ, ಸಾರ್ವತ್ರಿಕ ಐರೋಪ್ಯ ಮಾರುಕಟ್ಟೆಯ ಮೇಲೂ ಸಮೂಹವು ಗಮನ ಹರಿಸಬೇಕಾಗುತ್ತದೆ ಎಂಬುದನ್ನು ಯೂನಿವರ್ಸಲ್ ಕಂಪನಿಗೆ ಮನವರಿಕೆ ಮಾಡಿಕೊಟ್ಟಿತು. "ಬಾರ್ಬೀ ಗರ್ಲ್" ಎಂಬ ತನ್ನ ಮೂರನೇ ಏಕಗೀತೆಯನ್ನು 1997ರ ಮೇ ತಿಂಗಳಲ್ಲಿ ಆಕ್ವಾ ಬಿಡುಗಡೆಮಾಡಿತು. ಈ ಗೀತೆಯು ಮೊದಲ ನೋಟದಲ್ಲಿ, ಮಕ್ಕಳ ವಲಯದಲ್ಲಿ ಜನಪ್ರಿಯವಾಗಿರುವ ಬಾರ್ಬೀ ಗೊಂಬೆಯ ಕುರಿತಾಗಿರುವಂಥದ್ದು ಎಂಬಂತೆ ಕಾಣಿಸುತ್ತದೆ. ಆದಾಗ್ಯೂ, ಎರಡನೇ ನೋಟದ ಹೊತ್ತಿಗೆ, ಇದು ಹಲವಾರು ಲೈಂಗಿಕ ಸೂಚ್ಯಾರ್ಥಗಳನ್ನು ಹೊಂದಿರುವುದು ಕಂಡುಬರುತ್ತದೆ; ಹಾಡಿನಲ್ಲಿರುವ "ಯೂ ಕೆನ್ ಬ್ರಷ್ ಮೈ ಹೇರ್, ಅನ್‌ಡ್ರೆಸ್ ಮಿ ಎವೆರಿವೇರ್," "ಯೂ ಕೆನ್ ಟಚ್, ಯೂ ಕೆನ್ ಪ್ಲೇ," ಮತ್ತು "ಐ ಆಮ್ ಎ ಬ್ಲಾಂಡ್ ಬಿಂಬೋ ಗರ್ಲ್" ಎಂಬಂಥ ಸಾಲುಗಳು ಇದಕ್ಕೆ ಸಾಕ್ಷಿಯಾಗಿವೆ. ಸದರಿ ಗೀತೆಯು ಡೆನ್ಮಾರ್ಕ್‌ನಲ್ಲಿ ಬಿಡುಗಡೆಯಾದ ನಂತರ, ಈ ಅಂಶವು ಒಂದಷ್ಟು ವಿವಾದವನ್ನು ಸೃಷ್ಟಿಸಿತು. ಆದರೆ ಈ ವಿವಾದದ ಹೊರತಾಗಿಯೂ ಮತ್ತು ಪ್ರಾಯಶಃ ವಿವಾದದ ಭಾಗಶಃ ಕಾರಣದಿಂದಾಗಿಯೂ, ಗೀತೆಯು ಅತ್ಯುತ್ತಮವಾಗಿ ಮಾರಾಟವಾಯಿತು ಮತ್ತು ಸಂಗೀತ-ಕೋಷ್ಟಕಗಳಲ್ಲಿ ಮೊದಲನೇ ಸ್ಥಾನಕ್ಕೆ ಸುಲಭವಾಗಿ ಏರಿತು. ಈ ಹಾಡು ಎಷ್ಟರಮಟ್ಟಿಗೆ ಜನಪ್ರಿಯವಾಯಿತೆಂದರೆ, ನೃತ್ಯ ಸಂಗೀತವನ್ನು ಬಿತ್ತರಿಸದಿದ್ದ ರೇಡಿಯೋ ಕೇಂದ್ರಗಳಲ್ಲೂ ಸಹ ಇದು ನಿಯತವಾಗಿ ಪ್ರಸಾರವಾಯಿತು. "ಬಾರ್ಬೀ ಗರ್ಲ್" ಗೀತೆಯಲ್ಲಿರುವ ದ್ವಂದ್ವಾರ್ಥಗಳ ಕುರಿತಾದ ದೂರುಗಳನ್ನು ಉಪೇಕ್ಷಿಸಲು ಯೂನಿವರ್ಸಲ್ ಮ್ಯೂಸಿಕ್ ಕಂಪನಿಯು ನಿರ್ಧರಿಸಿತು. ಅಷ್ಟೇ ಅಲ್ಲ, 1997ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಈ ಏಕಗೀತೆಯನ್ನು ವಿಶ್ವದಾದ್ಯಂತ ಯಶಸ್ವಿಯಾಗಿ ಬಿಡುಗಡೆಮಾಡಿತು. ಸದರಿ ಬಿಡುಗಡೆಯು ಅತೀವವಾಗಿ ಯಶಸ್ವಿಯಾದುದೇ ಅಲ್ಲದೇ, ಯುನೈಟೆಡ್ ಕಿಂಗ್‌ಡಂನಲ್ಲಿ ನಾಲ್ಕು ವಾರಗಳವರೆಗೆ, ಆಸ್ಟ್ರೇಲಿಯಾದಲ್ಲಿ ಮೂರು ವಾರಗಳವರೆಗೆ ಮೊದಲನೇ ಸ್ಥಾನದಲ್ಲಿ ಮೆರೆಯಿತು. ಅಷ್ಟೇ ಅಲ್ಲ, ಬಿಲ್‌ಬೋರ್ಡ್ ಹಾಟ್ 100 ಕೋಷ್ಟಕದ ಅಗ್ರಗಣ್ಯ ಹತ್ತು ಗೀತೆಗಳ ಪೈಕಿ ಜಾಗವನ್ನು ಗಿಟ್ಟಿಸಿಕೊಳ್ಳುವ ಮೂಲಕ, ಆ ಸಮಯದಲ್ಲಿ ಐರೋಪ್ಯ ಪಾಪ್ ಪ್ರಸ್ತುತಿಗಳಿಗೆ ಒಂದುರೀತಿಯಲ್ಲಿ ಅಪರೂಪವೇ ಆಗಿದ್ದ ಯಶಸ್ಸನ್ನು ಸಾಧಿಸಿತು. ಈ ಗೀತೆ ಮತ್ತು ಆಕ್ವಾ ತಂಡ ಎರಡೂ ಸಹ ರಾತ್ರೋರಾತ್ರಿಯಲ್ಲಿ ಒಂದು ಮನೆಮಾತಾಗಿಹೋದವಾದರೂ, ಪ್ರಪಂಚದ ಬಹುತೇಕ ಭಾಗಗಳಲ್ಲಿ ಇದನ್ನು ಏಕೈಕ-ಜನಪ್ರಿಯ ಯಶಸ್ಸಿನ ಅಚ್ಚರಿ ಎಂಬಂತೆ ಬರೆಯಲಾಯಿತು. "ಬಾರ್ಬೀ ಗರ್ಲ್" ಗೀತೆಯಲ್ಲಿನ ದ್ವಂದ್ವಾರ್ಥಗಳು ನಿರೀಕ್ಷಿತ ವಿವಾದವನ್ನು ಉಂಟುಮಾಡಿದವು ಹಾಗೂ ಧ್ವನಿಪಥವನ್ನು ಬಿಡುಗಡೆ ಮಾಡಿದ್ದಕ್ಕಾಗಿ ಯೂನಿವರ್ಸಲ್ ಕಂಪನಿಯನ್ನು ಗುರಿಯಾಗಿರಿಸಿಕೊಂಡು ಅನೇಕ ದೂರುಗಳು ಹೊರಬಂದವು. ಮ್ಯಾಟೆಲ್ ಕಂಪನಿಯೂ ಸಹ ಸಮೂಹದ ಧ್ವನಿಮುದ್ರಣ ಕಂಪನಿಯ ವಿರುದ್ಧ ಒಂದು ಮೊಕದ್ದಮೆಯನ್ನು (ಮ್ಯಾಟೆಲ್, ಇಂಕ್. v. MCA ರೆಕಾರ್ಡ್ಸ್ , 296 F.3d 894 (9ನೇ ಸುಮಾರು 2002)) ಹೂಡಿ, ಸದರಿ ಗೀತೆಯು ಬಾರ್ಬೀ ಬ್ರಾಂಡ್‌ನ ಪ್ರತಿಷ್ಠೆಯನ್ನು ಹಾನಿಗೊಳಿಸಿದೆ ಎಂದು ಸಮರ್ಥಿಸಿತು. ನ್ಯಾಯಮೂರ್ತಿ ಅಲೆಕ್ಸ್ ಕೊಜಿನ್ಸ್ಕಿಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಒಂಬತ್ತನೇ ಸಂಚಾರಿ ಪೀಠಕ್ಕೆ ಸಂಬಂಧಿಸಿದ ಮೇಲ್ಮನವಿಗಳ ನ್ಯಾಯಾಲಯಕ್ಕಾಗಿ ತನ್ನ ಅಭಿಪ್ರಾಯವನ್ನು ಬರೆಯುತ್ತಾ, ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ; "ಬಾರ್ಬೀ ಗರ್ಲ್"ನಲ್ಲಿ ಬಳಸಲಾಗಿರುವ ಮ್ಯಾಟೆಲ್‌ನ ಸರಕುಮುದ್ರೆಯು, ಸರಕುಮುದ್ರೆಯ ದುರ್ಬಲಗೊಳಿಸುವಿಕೆಗೆ ಸಂಬಂಧಿಸಿದ ಒಕ್ಕೂಟದ ಕಾಯಿದೆಗೆ ನೀಡಲಾಗಿರುವ ವಾಣಿಜ್ಯೇತರ ಬಳಕೆಯ ವಿನಾಯಿತಿಯೊಳಗೆ ಬರುತ್ತದೆ ಎಂಬುದು ಆ ತೀರ್ಪಾಗಿತ್ತು. "ನಿರಾಳವಾಗಿರಲು ಸಹಭಾಗಿಗಳಿಗೆ ಸಲಹೆ ನೀಡಲಾಗಿದೆ" ಎಂಬುದಾಗಿ ಬರೆಯುವ ಮೂಲಕ, ನ್ಯಾಯಮೂರ್ತಿ ಕೊಜಿನ್ಸ್ಕಿಯು ತನ್ನ ಅಭಿಪ್ರಾಯವನ್ನು ಸಮಾಪ್ತಗೊಳಿಸಿದ. 1997ರ ಶರತ್ಕಾಲದಲ್ಲಿ, ಆಕ್ವಾ ತಂಡವು ತನ್ನ ಆಕ್ವೇರಿಯಂ ಗೀತಸಂಪುಟವನ್ನು ವಿಶ್ವದಾದ್ಯಂತ ಬಿಡುಗಡೆಮಾಡಿತು. ಸದರಿ ಗೀತಸಂಪುಟವು ಚೆನ್ನಾಗಿ ಮಾರಾಟವಾಯಿತಾದರೂ, ಆಗಲೂ ತಂಡದ ಕುರಿತು ಅನೇಕರು ಏಕೈಕ-ಜನಪ್ರಿಯ ಯಶಸ್ಸಿನ ಅಚ್ಚರಿ ಎಂಬುದಾಗಿಯೇ ಬರೆದರು. ಇದನ್ನು ಹೊರತುಪಡಿಸಿ, ಮತ್ತು ಮಾಧ್ಯಮಗಳಿಂದ ಬಂದ ಹೆಚ್ಚಿನ ಟೀಕೆಗಳ ಹೊರತಾಗಿ, ಆಕ್ವಾ ತಂಡವು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಚಂಡ ಯಶಸ್ಸನ್ನು ದಾಖಲಿಸಿತು ಹಾಗೂ ಈಗ ವಿಶ್ವದಾದ್ಯಂತ ಚಿರಪರಿಚಿತವಾಗುವಂತಾಯಿತು. "ಡಾಕ್ಟರ್ ಜೋನ್ಸ್" ಎಂಬ ಗೀತೆಯು ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ "ಬಾರ್ಬೀ ಗರ್ಲ್"ಗೆ ಸಂಬಂಧಿಸಿದ ಆಕ್ವಾದ ಮುಂಬರಿಕೆ ಗೀತೆಯಾಗಿತ್ತಾದರೂ, "ಲಾಲಿಪಾಪ್ (ಕ್ಯಾಂಡಿಮ್ಯಾನ್)" ಎಂಬ ಮತ್ತೊಂದು ಏಕಗೀತೆಯು MCA ರೆಕಾರ್ಡ್ಸ್ ಕಂಪನಿಯ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಬಿಡುಗಡೆಯಾಯಿತು. ಹಲವಾರು ದೇಶಗಳಲ್ಲಿ "ಡಾಕ್ಟರ್ ಜೋನ್ಸ್" ಗೀತೆಯು ಮೊದಲನೇ ಸ್ಥಾನಕ್ಕೆ ಪ್ರವೇಶಿಸಿತು. ಯುನೈಟೆಡ್ ಕಿಂಗ್‌ಡಂನಲ್ಲಿನ ಗೀತಕೋಷ್ಟಕದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಎರಡು ವಾರಗಳವರೆಗೂ ಉಳಿದುಕೊಂಡರೆ, ಆಸ್ಟ್ರೇಲಿಯಾದಲ್ಲಿ ಈ ಗೀತೆಯು #1 ಸ್ಥಾನದಲ್ಲಿ ಏಳು ವಾರಗಳನ್ನು ಕಳೆಯಿತು. ಇದೇ ರೀತಿಯ ಯಶಸ್ಸನ್ನು "ಲಾಲಿಪಾಪ್ (ಕ್ಯಾಂಡಿಮ್ಯಾನ್)" ಗೀತೆಯು USAಯಲ್ಲಿ ದಾಖಲಿಸಲಿಲ್ಲ; "ಬಾರ್ಬೀ ಗರ್ಲ್"ಗೆ ಹೋಲಿಸಿದಾಗ ಅದರ ಕಾರ್ಯಕ್ಷಮತೆಯು ಕಳಪೆಯಾಗಿತ್ತು. ಆದಾಗ್ಯೂ, ಈ ಗೀತೆಯು ಆಸ್ಟ್ರೇಲಿಯಾದಲ್ಲಿ #3 ಸ್ಥಾನದಲ್ಲಿ ಉತ್ತುಂಗಕ್ಕೇರಿತು. ಜಪಾನ್‌ನಲ್ಲಿ ಎರಡೂ ಹಾಡುಗಳು ಒಂದು ಜೋಡಿ-A ಪಾರ್ಶ್ವವಾಗಿ ಬಿಡುಗಡೆಯಾದವು, ಮತ್ತು ಏಕಗೀತೆಗಳ ಕೋಷ್ಟಕದಲ್ಲಿ ಯಥೋಚಿತವಾದ ಯಶಸ್ಸನ್ನು ಸಾಧಿಸಿದವು. "ಡಾಕ್ಟರ್ ಜೋನ್ಸ್" ಗೀತೆಯನ್ನು ಅನುಸರಿಸಿಕೊಂಡು "ಟರ್ನ್ ಬ್ಯಾಕ್ ಟೈಮ್" ಎಂಬ ಗೀತೆಯು ಬಂದಿತು. ಈ ಗೀತೆಯು ಆಕ್ವಾ ಅಭಿಮಾನಿಗಳ ಮತ್ತು ವಿಮರ್ಶಕರ ವಲಯಗಳೆರಡರಿಂದಲೂ ಉತ್ತಮ ರೀತಿಯಲ್ಲಿ ಸ್ವೀಕರಿಸಲ್ಪಡುವ ರೀತಿಯಲ್ಲಿತ್ತು. ಇತರೆಲ್ಲಾ ಹಿಂದಿನ ಬಿಡುಗಡೆಗಳಿಗಿಂತ ಭಿನ್ನವಾಗಿದ್ದ ಈ ಗೀತೆಯು, ಒಂದು ನಿಧಾನದ, ಮುಖ್ಯವಾಹಿನಿ ಲಯದ ಪರವಾಗಿ ಬಬಲ್‌ಗಮ್ ಪಾಪ್ ಧ್ವನಿಯನ್ನು ಕೈಬಿಟ್ಟಿತು. ಸ್ಲೈಡಿಂಗ್ ಡೋರ್ಸ್ ಎಂಬ ಚಲನಚಿತ್ರಕ್ಕೆ ಸಂಬಂಧಿಸಿದ ಧ್ವನಿಪಥದಲ್ಲಿ ಈ ಗೀತೆಯು ಕಾಣಿಸಿಕೊಂಡಿತು, ಮತ್ತು ಆಕ್ವಾದ ಇತರೆಲ್ಲಾ ಬಿಡುಗಡೆಗಳಿಗಿಂತ ಭಿನ್ನವಾಗಿ, ಒಂದು ದೊಡ್ಡ ಪ್ರಮಾಣದಲ್ಲಿ ರೇಡಿಯೋ ಮತ್ತು ವಿಡಿಯೋ ಬಾನುಲಿ ಪ್ರಸಾರದ ಸಾಧನೆಯನ್ನು ಇದು ಸಾಧಿಸಿತು. ಯುನೈಟೆಡ್ ಕಿಂಗ್‌ಡಂನಲ್ಲಿನ ಸಂಗೀತ-ಕೋಷ್ಟಕದಲ್ಲಿ ಮೊದಲನೇ ಸ್ಥಾನವನ್ನು ಗಳಿಸುವಲ್ಲಿ ಈ ಗೀತೆಯು ತಂಡದ ಮೂರನೇ ಏಕಗೀತೆ ಎನಿಸಿಕೊಂಡಿತು. 2005ರ ವೇಳೆಗೆ ಇದ್ದಂತೆ, ಕೇವಲ ಒಂದು ಕೈಬೆರಳೆಣಿಕೆಯಷ್ಟಿರುವ ಇತರ ಕಲಾವಿದರು, UKಯಲ್ಲಿ ಆ ಬಗೆಯಲ್ಲಿನ ಆರಂಭಿಕ ಯಶಸ್ಸನ್ನು ಸಾಧಿಸುವಲ್ಲಿ ಸಮರ್ಥರಾಗಿದ್ದಾರೆ (ವೆಸ್ಟ್‌ಲೈಫ್ ಮತ್ತು ಸ್ಪೈಸ್ ಗರ್ಲ್ಸ್‌ನ್ನು ಒಳಗೊಂಡಿರುವ ಪ್ರಸ್ತುತಿಗಳು). ಆಸ್ಟ್ರೇಲಿಯಾದಲ್ಲಿ #10 ಸ್ಥಾನವನ್ನು ತಲುಪಿದ್ದೂ ಸೇರಿದಂತೆ, ಈ ಗೀತೆಯು ಎಲ್ಲೆಡೆಯಲ್ಲೂ ಉತ್ತಮ ಸಾಧನೆಯನ್ನು ದಾಖಲಿಸಿತು; ಆದಾಗ್ಯೂ, USನಲ್ಲಿ ಒಂದು ದೊಡ್ಡಮಟ್ಟದ ಯಶಸ್ಸನ್ನು ದಾಖಲಿಸಲು ಇದಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಕಡೆ ತೊಡಗಿಸಿಕೊಳ್ಳುವ ಆಕ್ವಾದ ಪ್ರಯತ್ನಕ್ಕೆ ತೆರೆಬಿದ್ದಂತಾಯಿತು. ಡೆನ್ಮಾರ್ಕಿಗೆ ಸಂಬಂಧಿಸಿದ ಆಕ್ವಾ ತಂಡದ ಎರಡನೇ ಏಕಗೀತೆಯಾದ "ಮೈ ಓಹ್ ಮೈ"ನ್ನು 1998ರ ಆಗಸ್ಟ್‌ನಲ್ಲಿ ಪುನರುಜ್ಜೀವನಗೊಳಿಸಲಾಯಿತು. ಆರಂಭದಲ್ಲಿ ಬಿಡುಗಡೆಯಾಗಿರದಿದ್ದ ಇತರ ಹಲವಾರು ಐರೋಪ್ಯ ದೇಶಗಳಲ್ಲೂ ಈ ಏಕಗೀತೆಯು ಬಿಡುಗಡೆಯಾಯಿತು. "ಗುಡ್ ಮಾರ್ನಿಂಗ್ ಸನ್‌ಶೈನ್"ನ ಬಿಡುಗಡೆಯನ್ನು ಅನುಸರಿಸಿ, ತನ್ನ ಎರಡನೇ ಗೀತಸಂಪುಟದ ಮೇಲೆ ಗಮನಹರಿಸಲು, ಮತ್ತು ಆಸ್ಟ್ರೇಲಿಯಾದ ಸುತ್ತಮುತ್ತಲಲ್ಲಿ ಪ್ರವಾಸ ಕೈಗೊಳ್ಳುವುದರ ಕುರಿತು ಆಕ್ವಾ ತಂಡವು ನಿರ್ಧರಿಸಿತು; ಇದು ತೀರಾ ಮಧ್ಯಸ್ಥವಾದ ಯಶಸ್ಸನ್ನು ದಾಖಲಿಸಿತು ಹಾಗೂ "ಆಕ್ವೇರಿಯಂ ಯುಗ" ಎಂಬುದಾಗಿ ಆಕ್ವಾದ ಅಭಿಮಾನಿಗಳಿಂದ ಸಿಕ್ಕಿದ್ದ ಬಿರುದಿನ ಅವಧಿಯು ಅಂತ್ಯವಾಗುವ ಕಾಲವು ಸನ್ನಿಹಿತವಾಯಿತು. 1998ರ ಡಿಸೆಂಬರ್ 1ರಂದು ತಂಡವು ಒಂದು ಸಾಕ್ಷ್ಯಚಿತ್ರವನ್ನು ಬಿಡುಗಡೆಮಾಡಿತು. ಆಕ್ವೇರಿಯಂ ಗೀತಸಂಪುಟಕ್ಕೆ ಸೇರಿದ್ದ ಗೀತೆಗಳ ಹಲವಾರು ಪ್ರತ್ಯಕ್ಷ ಪ್ರಸ್ತುತಿಗಳು ಹಾಗೂ ಸದಸ್ಯರೊಂದಿಗಿನ ಸಂದರ್ಶನಗಳನ್ನು ಈ ಸಾಕ್ಷ್ಯಚಿತ್ರವು ಒಳಗೊಂಡಿತ್ತು.
1999–2001: ಆಕ್ವೇರಿಯಸ್ ಮತ್ತು ಹಠಾತ್ ವಿಘಟನೆ
[ಬದಲಾಯಿಸಿ]ಆಕ್ವೇರಿಯಸ್ ಗೀತಸಂಪುಟದ ಧ್ವನಿಮುದ್ರಣದ ಕುರಿತಾಗಿ ಗಮನಹರಿಸಬೇಕೆಂದು ನಿರ್ಧರಿಸಿದ್ದ ಆಕ್ವಾ ತಂಡವು, 1999ರ ಅವಧಿಯಲ್ಲಿ ಗಡಿಬಿಡಿಯನ್ನು ತೋರಿಸದೆ ಸಾಕಷ್ಟು ಶಾಂತವಾಗಿತ್ತು. ತಂಡದೊಂದಿಗೆ ನಡೆಸಲಾದ ಪ್ರಚಾರದ ಸಂದರ್ಶನಗಳ ಸನುಸಾರ, ಗೀತಸಂಪುಟಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚಿನ ಹಾಡುಗಳನ್ನು ಧ್ವನಿಮುದ್ರಿಸಲಾಯಿತಾದರೂ, ಅಂತಿಮವಾಗಿ ಕೇವಲ ಹನ್ನೆರಡು ಹಾಡುಗಳನ್ನಷ್ಟೇ ಅಂತಿಮ ಆವೃತ್ತಿಗಾಗಿ ಪರಿಗಣಿಸಲಾಯಿತು. 2000ರ ಫೆಬ್ರುವರಿಯಲ್ಲಿ ಆಕ್ವೇರಿಯಸ್ ಎಂಬ ತನ್ನ ಎರಡನೇ ಗೀತಸಂಪುಟವನ್ನು ತಂಡವು ಬಿಡುಗಡೆಮಾಡಿತು. ತಂಡವು ತನ್ನ ಧ್ವನಿವ್ಯವಸ್ಥೆಗೆ ಮಾಡಿಕೊಂಡ ಕೆಲವೊಂದು ಬದಲಾವಣೆಗಳ ಹೊರತಾಗಿಯೂ, ತನ್ನ ಅಭಿಮಾನಿ ಬಳಗದ ದೆಸೆಯಿಂದಾಗಿ ಸದರಿ ಗೀತಸಂಪುಟವು ಜನಪ್ರಿಯತೆಯನ್ನು ದಿಢೀರನೆ ಸಾಬೀತು ಮಾಡಿತು. ಆಕ್ವೇರಿಯಂ ಗಿಂತ ಭಿನ್ನವಾಗಿದ್ದ ಆಕ್ವೇರಿಯಸ್ ಗೀತಸಂಪುಟವು ಕೇವಲ ಒಂದು ಸೂತ್ರವನ್ನಷ್ಟೇ ಅನುಸರಿಸಲಿಲ್ಲ, ಬದಲಿಗೆ ಸಂಗೀತದ ಹಲವಾರು ವಿಭಿನ್ನ ಶೈಲಿಗಳನ್ನು ಒಳಗೊಂಡಿತ್ತು. "ಕಾರ್ಟೂನ್ ಹೀರೋಸ್" ಮತ್ತು "ಬಂಬಲ್ ಬೀಸ್"ನಂಥ ಧ್ವನಿಪಥಗಳು ತಂಡದ ಪ್ರಥಮ ಪ್ರವೇಶದ ಗೀತಸಂಪುಟದ ಪಾಪ್ ಧ್ವನಿಯನ್ನು ಜೋಪಾನ ಮಾಡಿದವು. ಗೀತಸಂಪುಟದ ಜೊತೆಯಲ್ಲಿ "ಕಾರ್ಟೂನ್ ಹೀರೋಸ್" ಏಕಗೀತೆಯೂ ಬಿಡುಗಡೆಯಾಯಿತು. ಒಂದಷ್ಟು "ಹರ್ಷಗೀತೆಯ" ಧ್ವನಿಗಳನ್ನು ಈ ಗೀತೆಯು ಒಳಗೊಂಡಿತ್ತಾದರೂ, ಆಕ್ವೇರಿಯಂ ನ್ನು ತುಂಬಾ ಯಶಸ್ವಿಯಾಗಿಸಿದ ಬಹುಪಾಲು ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಂಡಿತ್ತು. ಒಂದು ಅಲ್ಪಪ್ರಮಾಣದ ನಿರಾಶೆ ಎನ್ನುವ ರೀತಿಯಲ್ಲಿ ಈ ಏಕಗೀತೆಯು ಯುನೈಟೆಡ್ ಕಿಂಗ್‌ಡಂನಲ್ಲಿ #7 ಸ್ಥಾನವನ್ನು ಅಲಂಕರಿಸಿತು. ಯುರೋಪ್ ಮತ್ತು ಆಸ್ಟ್ರೇಲಿಯಾದಾದ್ಯಂತ ಚೆನ್ನಾಗಿ ಮಾರಾಟವಾದ ಈ ಏಕಗೀತೆಯು ಆಸ್ಟ್ರೇಲಿಯಾದ ಕೋಷ್ಟಕಗಳಲ್ಲಿ #16 ಸ್ಥಾನದಲ್ಲಿ ಉತ್ತುಂಗಕ್ಕೇರಿತು. ಈ ಗೀತೆಯು ಅದರ ಸಂಗೀತ ವಿಡಿಯೋದಿಂದಾಗಿ ಅನೇಕವೇಳೆ ನೆನಪಿನಲ್ಲುಳಿಯುತ್ತದೆ. ಗೀತಸಂಪುಟವು ಯುನೈಟೆಡ್ ಕಿಂಗ್‌ಡಂನ ಸಂಗೀತ ಕೋಷ್ಟಕದಲ್ಲಿ #10 ಸ್ಥಾನದಲ್ಲಿ ಮೆರೆಯಿತು. UKಗೆ ಸಂಬಂಧಿಸಿದಂತೆ "ಅರೌಂಡ್ ದಿ ವರ್ಲ್ಡ್" ಎಂಬ ತನ್ನ ಮುಂಬರಿಕೆ ಏಕಗೀತೆಯನ್ನು ಆಕ್ವಾ ತಂಡವು 2000ದ ಜೂನ್‌ನಲ್ಲಿ ಬಿಡುಗಡೆಮಾಡಿತಾದರೂ, ಕೋಷ್ಟಕದಲ್ಲಿ #26 ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರಿಂದಾಗಿ ಅದು ನಿರಾಶೆಯುಂಟುಮಾಡಿತು. ಆಸ್ಟ್ರೇಲಿಯಾದಲ್ಲಂತೂ ಇದು #62 ಸ್ಥಾನದಲ್ಲಿ ನೆಲೆಗೊಳ್ಳಬೇಕಾಯಿತು. ಆ ಸಮಯದಲ್ಲಿ ಹೀಗೆಂದು ನಿರೀಕ್ಷಿಸಲು ಅಸಾಧ್ಯವಾಗಿತ್ತಾದರೂ, ಅರೌಂಡ್ ದಿ ವರ್ಲ್ಡ್ ಗೀತೆಯು ಆಕ್ವಾ ತಂಡವು UKಯಲ್ಲಿ ಬಿಡುಗಡೆ ಮಾಡಿದ ಅಂತಿಮ ಏಕಗೀತೆಯಾಯಿತು. "ಬಂಬಲ್ ಬೀಸ್" ಮತ್ತು "ವಿ ಬಿಲಾಂಗ್ ಟು ದಿ ಸೀ" ಗೀತೆಗಳನ್ನು ಏಕಗೀತೆಗಳಾಗಿ ಸ್ಕ್ಯಾಂಡಿನೇವಿಯಾ, ಯುರೋಪ್‌ನ ಪ್ರಧಾನಭಾಗ ಮತ್ತು ಆಸ್ಟ್ರೇಲಿಯಾಗಳಲ್ಲಿ ಆಕ್ವಾ ಬಿಡುಗಡೆಮಾಡಿತು. ಈ ಎರಡೂ ಗೀತೆಗಳೂ ಯಥೋಚಿತವಾದ ಯಶಸ್ಸನ್ನು ದಾಖಲಿಸಿದವು. 2001ರ ಆರಂಭದಲ್ಲಿ, ಫ್ರೀಕಿ ಫ್ರೈಡೆ ಗೀತೆಯನ್ನು UKಯಲ್ಲಿನ ಒಂದು ಮೂರನೇ ಏಕಗೀತೆಯಾಗಿ ಬಿಡುಗಡೆ ಮಾಡಲು ತಂಡವು ಯೋಜಿಸಿತು. "ಫ್ರೀಕಿ ಫ್ರೈಡೆ"ಯನ್ನು ಬಿಡುಗಡೆಗಾಗಿ ನಿಗದಿಪಡಿಸಲಾಯಿತಾದರೂ, ತಿಳಿಯಪಡಿಸಲಾಗದ ಕಾರಣಗಳಿಗಾಗಿ ಅದು ರದ್ದಾಯಿತು. ಆಕ್ವೇರಿಯಸ್ ಗೀತಸಂಪುಟಕ್ಕೆ ಸೇರಿದ ಮತ್ತಷ್ಟು ಏಕಗೀತೆಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ, ತನ್ನ ಮೂರನೇ ಗೀತಸಂಪುಟದ ಕುರಿತಾಗಿ ಕೆಲಸವನ್ನು ಆರಂಭಿಸುವುದರ ಕಡೆಗೆ ಗಮನ ಹರಿಸಲು ಆಗ ಆಕ್ವಾ ತಂಡವು ನಿರ್ಧರಿಸಿತು. 2001ರ ಮೊದಲ ಕೆಲವು ತಿಂಗಳುಗಳನ್ನು ಆಕ್ವಾ ತಂಡವು ವಿಶ್ವದಾದ್ಯಂತ ಪ್ರವಾಸಮಾಡುತ್ತಾ ಕಳೆಯಿತು, ಮತ್ತು ತನ್ನ ಮೂರನೇ ಗೀತಸಂಪುಟಕ್ಕೆ ಸಂಬಂಧಿಸಿದ ಮೂಲಸಾಮಗ್ರಿಯ ಕುರಿತು ಕಾರ್ಯನಿರ್ವಹಿಸುವಲ್ಲಿಯೂ ತೊಡಗಿಸಿಕೊಂಡಿತು. ಸಾಫ್ರಿ ಡ್ಯುಯೊ ಸಹಯೋಗದಲ್ಲಿ 2001ರ ಯೂರೋವಿಷನ್ ಹಾಡಿನ ಸ್ಪರ್ಧೆಯಲ್ಲಿಯೂ ತಂಡವು ಸಂಗೀತ ಪ್ರಸ್ತುತಿಯನ್ನು ನೀಡಿತು ಹಾಗೂ ಸ್ಪರ್ಧೆಯ ಮತದಾನದ ಹಂತಗಳ ಅವಧಿಯಲ್ಲಿ ಸಂಗೀತವನ್ನು ಒದಗಿಸಿತು. "ಬಾರ್ಬೀ ಗರ್ಲ್" ಗೀತೆಯ (ಇದು ಒಂದು ಪ್ರಮುಖ ಮೊಕದ್ದಮೆಯಲ್ಲಿ ತೊಡಗಿಸಿಕೊಂಡಿತ್ತು) ಪ್ರಸ್ತುತಿಯ ಸಂದರ್ಭದಲ್ಲಿ ಅನೇಕ ಅಸಹ್ಯಕರ ಪದಗುಚ್ಛಗಳು ಮತ್ತು ಭಂಗಿಗಳನ್ನು ಸೇರ್ಪಡೆ ಮಾಡಿದ್ದರಿಂದಾಗಿ, ಈ ಪ್ರಸ್ತುತಿಯೂ ಸಹ ವಿವಾದವನ್ನು ಉಂಟುಮಾಡಿತು. ಡೆನ್ಮಾರ್ಕ್‌ನಲ್ಲಿ ನಡೆದ ಅಷ್ಟೇನೂ ಪ್ರಧಾನವಲ್ಲದ ಒಂದೆರಡು ಕಾರ್ಯಕ್ರಮಗಳ ಸಂದರ್ಭದಲ್ಲಿ, ಮೂರನೇ ಗೀತಸಂಪುಟದಲ್ಲಿನ ಸೇರ್ಪಡೆಗಾಗಿ ಉದ್ದೇಶಿಸಲಾಗಿದ್ದ ಗೀತೆಗಳ ಪ್ರತ್ಯಕ್ಷ ಆವೃತ್ತಿಗಳನ್ನು ತಂಡವು ಸಾದರಪಡಿಸಿತು. "ಕೂಚ್ ಪೊಟೆಟೊ" ಮತ್ತು "ಷೇಕಿಂಗ್ ಸ್ಟೀವನ್ಸ್ (ಈಸ್ ಎ ಸೂಪರ್‌ಸ್ಟಾರ್)" ಗೀತೆಗಳು ಇದರಲ್ಲಿ ಸೇರಿದ್ದವು ಹಾಗೂ "ಷೇಕಿಂಗ್ ಸ್ಟೀವನ್ಸ್ (ಈಸ್ ಎ ಸೂಪರ್‌ಸ್ಟಾರ್)" ಗೀತೆಯನ್ನು 1980ರ ದಶಕದ ಪ್ರಸ್ತುತಿಕಾರ ಷೇಕಿಂಗ್ ಸ್ಟೀವನ್ಸ್ ಎಂಬಾತನಿಗೆ ಒಂದು ಗೌರವಾರ್ಪಣೆಯಾಗಿ ಸಾದರಪಡಿಸಲಾಯಿತು. ಸದರಿ ಗೀತೆಗಳು ತಮ್ಮ ಸಂಗೀತದೊಳಗೆ ಒಂದು ರಾಕ್ ಧ್ವನಿಯನ್ನು ಅಳವಡಿಸಿಕೊಂಡಿದ್ದವು ಎಂದು ತಿಳಿದುಬಂತು. ಆದಾಗ್ಯೂ, 2001ರ ಬೇಸಿಗೆಯ ವೇಳೆಗೆ ಆಕ್ವಾದ ಸದಸ್ಯರ ನಡುವಿನ ಸಮಸ್ಯೆಗಳು ನಿಚ್ಚಳವಾಗಿ ಗೋಚರಿಸಲು ಶುರುವಾದವು. ಆಕ್ವಾ ಹೆಸರಿನ ಅಡಿಯಲ್ಲಿ ತಂಡವು ಮೂಲದ್ರವ್ಯವನ್ನು ಬಿಡುಗಡೆ ಮಾಡಲು ಮೊದಲಿಗೆ ಆರಂಭಿಸಿದಾಗ, ರೆನೆಯು ಲೆನೆಯ ಜೊತೆಯಲ್ಲಿ ಪ್ರಣಯ-ವಿಹಾರವನ್ನು ನಡೆಸುತ್ತಿದ್ದ. ಆದರೆ, ಈ ಹೊತ್ತಿಗೆ ಸೋರೆನ್ ಜೊತೆಯಲ್ಲಿ ಲೆನೆ ಪ್ರಣಯ-ವಿಹಾರವನ್ನು ಶುರುಮಾಡಿದ್ದಳು, ಮತ್ತು ಈ ಮೂವರ ನಡುವಿನ ಒಂದು ಬಿರುಕಿನ ಕುರಿತಾಗಿ ಡೆನ್ಮಾರ್ಕಿನ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆಕ್ವೇರಿಯಸ್ ಗೀತಸಂಪುಟಕ್ಕೆ ಸಂಬಂಧಿಸಿದಂತೆ ತನ್ನ ಪಾತ್ರವು ತೀರಾ ಗೌಣವಾಗಿದ್ದುದಕ್ಕೆ ರೆನೆಯು ಕಿರಿಕಿರಿಗೊಂಡಿದ್ದ ಎಂಬಂಥ, ಮತ್ತು ತಂಡದಲ್ಲಿ ಇತರ ಸೃಜನಶೀಲ ಭಿನ್ನಾಭಿಪ್ರಾಯಗಳು ಮೊಳಕೆಯೊಡೆಯಲು ಪ್ರಾರಂಭವಾಗಿದ್ದವು ಎಂಬಂಥ ಸುದ್ದಿಗಳು ಇದೇ ಸಂದರ್ಭದಲ್ಲಿ ಬಂದ ಇತರ ವರದಿಗಳಲ್ಲಿ ಸೇರಿದ್ದವು. ತಂಡದ ಬಿಡುವಿಲ್ಲದ ಕಾರ್ಯಸೂಚಿಯ ಫಲವಾಗಿ ಉಂಟಾದ ಬಳಲಿಕೆಯ ಕಾರಣದಿಂದಾಗಿ, ತಂಡದ 2001ರ ಪ್ರವಾಸದ ಸಂದರ್ಭದಲ್ಲಿ ಕುಸಿದುಬಿದ್ದಿದ್ದ ಲೆನೆ ಕೂಡಾ ಒಂದಷ್ಟು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಳು. ತಂಡದ ವಿಘಟನೆಯು ಸಾಕಷ್ಟು ಪ್ರಮುಖವಾಗಿರುವ ಒಂದು ಘಟನೆ ಎಂಬ ರೀತಿಯಲ್ಲಿ ಯುರೋಪ್‌ನ ಉದ್ದಗಲಕ್ಕೂ ಸಂಚಲನೆಯನ್ನು ಸೃಷ್ಟಿಸಿತು. ಈ ನಾಲ್ವರೂ ತಮ್ಮ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲು ನಿರ್ಧರಿಸಿದ್ದು ಏಕೆಂದು ಮಾಧ್ಯಮಗಳ ಅನೇಕ ಮೂಲಗಳು ಊಹಿಸಲು ಶುರುಮಾಡಿದವು. ತಂಡದ ವಿಘಟನೆಯ ನಂತರ ನಡೆದ ಸಂದರ್ಶನವೊಂದರಲ್ಲಿ ರೆನೆಯು ಮಾತನಾಡುತ್ತಾ, ತಂಡದ ಸದಸ್ಯರ ನಡುವೆ ಬಿರುಕಿತ್ತೆಂಬ ಅಭಿಪ್ರಾಯವನ್ನು ನಿರಾಕರಿಸಿದ, ಮತ್ತು ನಾಲ್ಕೂ ಮಂದಿ ಸದಸ್ಯರು ಒಳ್ಳೆಯ ರೀತಿಯಲ್ಲೇ ಬೇರೆಬೇರೆಯಾಗಿರುವುದಾಗಿ ತಿಳಿಸಿದ. ತಿಳಿದುಬಂದ ಮಾಹಿತಿಯಂತೆ, ನಾಲ್ಕೂ ಮಂದಿಯೂ ಒಟ್ಟಾಗಿ ಭೋಜನದಲ್ಲಿ ಪಾಲ್ಗೊಂಡಿದ್ದಾಗ "ಪರಸ್ಪರ ಬೇರೆಯಾಗುವುದೊಂದೇ ಈಗ ಉಳಿದಿರುವ ಅತ್ಯುತ್ತಮ ಮಾರ್ಗ" ಎಂದು ನಿರ್ಧರಿಸಿ, ಬೇರೆಯಾಗಲು ಸಮ್ಮತಿಸಿದ್ದರು. ಇದನ್ನೆಲ್ಲ ಲೆಕ್ಕಿಸದ ತಂಡದ ಅನೇಕ ಅಭಿಮಾನಿಗಳು, ವಾದ್ಯವೃಂದದ ಸದಸ್ಯರ ನಡುವೆ ಒಂದು ಬಿರುಕೇನಾದರೂ ಇದ್ದರೆ ಅದು ಕಡೇಪಕ್ಷ ಒಂದು ಭಾಗಶಃ ಕಾರಣವಾಗಿರುತ್ತದೆ ಎಂದು ನಂಬಿದ್ದರು; ಅದರಲ್ಲೂ ವಿಶೇಷವಾಗಿ, ಲೆನೆ ಮತ್ತು ಸೋರೆನ್ ನಡುವಿನ ಹಿಂದಿನ ಲೈಂಗಿಕ ಸಂಬಂಧಗಳು, ಅದರಲ್ಲೂ ಅವಳು ಇನ್ನೂ ರೆನೆಯ ಜೊತೆಗಿದ್ದಾಗಿನ ಸಂಬಂಧಗಳು ತಂಡದ ಬಿರುಕಿಗೆ ಕಾರಣವಾಗಿರಬಹುದು ಎಂದು ಸದರಿ ಅಭಿಮಾನಿಗಳು ನಂಬಿದ್ದರು. 2004ರಲ್ಲಿ ಪ್ರಕಟಗೊಂಡ "ಹಿಂದೆಂದೂ ಕಂಡಿರದ, ವಿಘಟನೆಯಾದ 100 ಅಗ್ರಗಣ್ಯ ಅತ್ಯುತ್ತಮ ವಾದ್ಯವೃಂದಗಳು" ಎಂಬ ಸಂದರ್ಶನದಲ್ಲಿ ಲೆನೆಯು ಪಾಲ್ಗೊಳ್ಳುವವರೆಗೂ ರೆನೆಗೆ ಈ ಕುರಿತು ಗೊತ್ತಾಗಿರಲಿಲ್ಲ. ಈ ಕುರಿತಾಗಿ ತನಗೆ ತೀರಾ ವಿಷಾದವಾಗುತ್ತಿದೆ ಎಂಬುದಾಗಿ ಅವಳು ಈ ಸಂದರ್ಭದಲ್ಲಿ ಉದ್ಗರಿಸಿದಳು; ಅವಳನ್ನು ತಾನು ಮತ್ತೆಂದೂ ಕ್ಷಮಿಸುವುದಿಲ್ಲ ಎಂಬುದಾಗಿ ರೆನೆ ಹೇಳಿದ. 100 ಅಗ್ರಗಣ್ಯ ತಂಡಗಳ ಪಟ್ಟಿಯಲ್ಲಿ ವಾದ್ಯವೃಂದವು 24ನೇ ಶ್ರೇಯಾಂಕ ಪಡೆಯಿತು. Cartoon Heroes: The Best of Aqua ಎಂಬ ಹೆಸರಿನ, ಜನಪ್ರಿಯ ಯಶಸ್ವೀ ಗೀತೆಗಳ ಒಂದು ಮಹೋನ್ನತ ಗೀತಸಂಪುಟವು 2002ರ ಮೇ 22ರಂದು ಜಪಾನ್‌ನಲ್ಲೂ ಮತ್ತು 2006ರಲ್ಲಿ USನಲ್ಲೂ ಬಿಡುಗಡೆಯಾಯಿತು. "ಡಿಡ್ ನಾಟ್ ಐ", "ಗುಡ್ ಮಾರ್ನಿಂಗ್ ಸನ್‌ಶೈನ್", ಮತ್ತು "ವಿ ಬಿಲಾಂಗ್ ಟು ದಿ ಸೀ" ಎಂಬ ಗೀತೆಗಳನ್ನು ಹೊರತುಪಡಿಸಿ, ತಂಡದ ಮಿಕ್ಕೆಲ್ಲಾ ಏಕಗೀತೆಗಳನ್ನೂ ಇದು ಒಳಗೊಂಡಿತ್ತು. "ಬ್ಯಾಕ್ ಫ್ರಂ ಮಾರ್ಸ್", "ಹ್ಯಾಪಿ ಬಾಯ್ಸ್ ಅಂಡ್ ಗರ್ಲ್ಸ್", "ಹ್ಯಾಲೋವೀನ್", "ಕಾಲಿಂಗ್ ಯೂ", ಮತ್ತು "ಆನ್ ಆಪಲ್ ಎ ಡೇ" ಇವೇ ಮೊದಲಾದ, ಏಕಗೀತೆಗಳ ಸ್ವರೂಪದ್ದಲ್ಲದ ಹಲವಾರು ಗೀತೆಗಳನ್ನೂ ಇದು ಒಳಗೊಂಡಿತ್ತು; ಅಷ್ಟೇ ಅಲ್ಲ, ತಂಡದ ಜನಪ್ರಿಯ ಯಶಸ್ಸಿನ ಏಕಗೀತೆಯಾದ "ಕಾರ್ಟೂನ್ ಹೀರೋಸ್"ನ ಒಂದು ಹ್ಯಾಂಪೆನ್‌ಬರ್ಗ್ ಮರುಮಿಶ್ರಣ ಹಾಗೂ "ಕಾರ್ಟೂನ್ ಹೀರೋಸ್" ಮತ್ತು "ಅರೌಂಡ್ ದಿ ವರ್ಲ್ಡ್" ಗೀತೆಗಳಿಗೆ ಸಂಬಂಧಿಸಿದ ಸಂಗೀತ ವಿಡಿಯೋಗಳೂ ಇದರಲ್ಲಿ ಸೇರಿದ್ದವು.
2002–2006: ವಿಘಟನೆಯ ನಂತರದ ಚಿತ್ರಣ
[ಬದಲಾಯಿಸಿ]ತಂಡದ ವಿಘಟನೆಯ ನಂತರ, ಆಕ್ವಾ ತಂಡದ ಎಲ್ಲಾ ನಾಲ್ಕೂ ಸದಸ್ಯರು ಸಂಗೀತ ಉದ್ಯಮದೊಳಗೇ ಮುಂದುವರಿದರು. 2007ರ ಫೆಬ್ರುವರಿಯಲ್ಲಿ, ತನ್ನ ಅತ್ಯಂತ ಹೊಸದಾದ ಗೀತಸಂಪುಟದ ಕುರಿತು ಕೆಲಸವನ್ನು ಪುನರಾರಂಭಿಸುವುದಾಗಿ ರೆನೆ ಘೋಷಿಸಿದ. ಈ ಗೀತಸಂಪುಟವು 2007ರಲ್ಲಿ ಬಿಡುಗಡೆಯಾಯಿತು.[ಸೂಕ್ತ ಉಲ್ಲೇಖನ ಬೇಕು] "ವೇ ಟು ಗೋ" ಎಂಬ ಅದರ ಮೊದಲ ಏಕಗೀತೆಯು, ಅವನ ಮೈಸ್ಪೇಸ್ ಪುಟದಲ್ಲಿ ಪ್ರಸಕ್ತವಾಗಿ ನುಡಿಸಲ್ಪಡುತ್ತಿದೆ.[೫] www.mrbreakfast.com ಎಂಬ ತಾಣದಲ್ಲಿ ಮಿಸ್ಟರ್ ಬ್ರೇಕ್‌ಫಾಸ್ಟ್ ಆಗಿ ತನ್ನನ್ನು ಒಡ್ಡಿಕೊಳ್ಳುವ ಮೂಲಕವೂ ರೆನೆ ಡಿಫ್ ಕೀರ್ತಿ ಪಡೆದುಕೊಂಡ.[೬] ಪ್ಲೇ ವಿತ್ ಮಿ ಎಂಬ ಹೆಸರಿನ ತನ್ನ ಮೊದಲ (ಮತ್ತು ಏಕೈಕ) ಗೀತಸಂಪುಟವನ್ನು 2003ರ-ಮಧ್ಯಭಾಗದಲ್ಲಿ ಲೆನೆ ಬಿಡುಗಡೆಮಾಡಿದಳು. ಗೀತಸಂಪುಟದ "ಇಟ್ಸ್ ಯುವರ್ ಡ್ಯೂಟಿ" ಎಂಬ ಮೊದಲ ಏಕಗೀತೆಯು, ಸಂಗೀತ ಪ್ರಪಂಚದಲ್ಲಿ ಅವಳು ಸಾಗುತ್ತಿದ್ದ ದಿಕ್ಕಿನಲ್ಲಿ ಒಂದು ಸ್ಪಷ್ಟ ಬದಲಾವಣೆ ಇರುವುದನ್ನು ತೋರಿಸಿತು; ಒಂದು ರಾಕ್ ಮತ್ತು R&B ಪ್ರಭಾವಿತ ಧ್ವನಿಯ ಪರವಾಗಿ ಬಬಲ್‌ಗಮ್ ಪಾಪ್ ಗಾಯನ ಭಾಗವನ್ನು ಕೈಬಿಟ್ಟಿದ್ದು ಇದರಲ್ಲಿ ಕಂಡುಬಂದಿತು. ಸದರಿ ಏಕಗೀತೆಯು ಉತ್ತಮ ರೀತಿಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ಮೆರೆದು, ಡೆನ್ಮಾರ್ಕಿನ ಕೋಷ್ಟಕಗಳಲ್ಲಿ #3 ಸ್ಥಾನವನ್ನೂ, ನಾರ್ವೆಯ ಕೋಷ್ಟಕಗಳಲ್ಲಿ #9 ಸ್ಥಾನವನ್ನೂ ದಕ್ಕಿಸಿಕೊಂಡಿತು; ಆದರೆ ಗೀತಸಂಪುಟವು ಅವಳ ಸ್ವದೇಶವಾದ ನಾರ್ವೆಯಲ್ಲಿ ಕೇವಲ #74 ಸ್ಥಾನವನ್ನು ಗಳಿಸುವ ಮೂಲಕ ನಿರಾಶಾದಾಯಕವಾದ ಫಲಿತಾಂಶವನ್ನು ನೀಡಿತು. ಸದರಿ ಗೀತಸಂಪುಟಕ್ಕೆ ಸೇರಿದ "ಪ್ರೆಟಿ ಯಂಗ್ ಥಿಂಗ್" ಮತ್ತು "ಹಿಯರ್ ವಿ ಗೋ"ನಂಥ ಮತ್ತಷ್ಟು ಏಕಗೀತೆಗಳನ್ನು ಬಿಡುಗಡೆ ಮಾಡಲಾಯಿತಾದರೂ, ಅವ್ಯಾವುವೂ ಅಷ್ಟೊಂದು ಪ್ರಭಾವ ಬೀರಲಿಲ್ಲ. ಸದ್ಯದಲ್ಲಿ ಎರಡನೇ ಗೀತಸಂಪುಟವೊಂದನ್ನು ಬಿಡುಗಡೆಮಾಡುವ ಯಾವುದೇ ಆಶಯವನ್ನು ಲೆನೆಯು ಸೂಚಿಸಿಲ್ಲವಾದರೂ, ಡೆನ್ಮಾರ್ಕಿನ ಅನಾಥಾಶ್ರಮಕ್ಕಾಗಿ ನೀಡಲಾದ ಒಂದು ಕಾರ್ಯಕ್ರಮದಲ್ಲಿ ಏಕಗೀತೆಯನ್ನು ಅವಳು ಪ್ರಸ್ತುತಪಡಿಸಿದಳು. ಇಂಡೋನೇಷಿಯಾ, ಶ್ರೀಲಂಕಾ, ಭಾರತ, ಮತ್ತು ಥೈಲೆಂಡ್ ಇವೇ ಮೊದಲಾದ ದೇಶಗಳನ್ನು ಪ್ರಧಾನವಾಗಿ ಅಪ್ಪಳಿಸಿದ 2004ರ ಹಿಂದೂ ಮಹಾಸಾಗರದ ಸುನಾಮಿಯ ಬಲಿಪಶುಗಳಿಗೆ ಪ್ರಯೋಜನವಾಗಲೆಂದು ಈ ಕಾರ್ಯಕ್ರಮವನ್ನು ನೀಡಲಾಗಿತ್ತು. ಲೇಜಿಬಾಯ್ ಎಂಬ ಯೋಜನೆಯನ್ನು ಆರಂಭಿಸುವುದಕ್ಕೆ ಮುಂಚಿತವಾಗಿ, 2004ರವರೆಗೂ ಇತರ ಕಲಾವಿದರಿಗಾಗಿ ಮೂಲಸಾಮಗ್ರಿಯನ್ನು ನಿರ್ಮಿಸುವುದನ್ನು ಸೋರೆನ್ ಮುಂದುವರಿಸಿದ. ಸದರಿ ಯೋಜನೆಯ ಮೊದಲ ಗೀತಸಂಪುಟವಾದ ಲೇಜಿಬಾಯ್ TV , 2004ರ ಅಂತ್ಯಭಾಗದಲ್ಲಿ ಬಿಡುಗಡೆಗೊಂಡು ಉತ್ತಮ ವಿಮರ್ಶೆಗಳನ್ನು ಸ್ವೀಕರಿಸಿತು. ಅಷ್ಟೇ ಅಲ್ಲ, "ಅಂಡರ್‌ವೇರ್ ಗೋಸ್ ಇನ್‌ಸೈಡ್ ದಿ ಪ್ಯಾಂಟ್ಸ್" ಎಂಬ ಮೊದಲ ಏಕಗೀತೆಯು ಆಸ್ಟ್ರೇಲಿಯಾದ ಕೋಷ್ಟಕಗಳ ಐದು ಅಗ್ರಗಣ್ಯ ಗೀತೆಗಳಲ್ಲಿ ಸ್ಥಳವನ್ನು ಗಿಟ್ಟಿಸಿಕೊಂಡಿತು ಮತ್ತು ಯುರೋಪ್, ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತವೂ ಬಾನುಲಿಯಲ್ಲಿ ಪ್ರಸಾರವಾಗುವ ಭಾಗ್ಯವನ್ನು ಪಡೆದುಕೊಂಡಿತು. 2007ರಲ್ಲಿ, ತನ್ನ ಸೋದರಳಿಯನಾದ ನಿಕೋಲಾಜ್ ರಾಸ್ಟೆಡ್ ಜೊತೆಯಲ್ಲಿ ಸೇರಿಕೊಂಡು ಹೆಜ್ ಮೇಟ್‌ಮ್ಯಾಟಿಕ್ ಎಂಬ ಸಾಂಗೀತಕ ಜೋಡಿಯನ್ನು ಅವನು ಆರಂಭಿಸಿದ. ನಾಲ್ಕು ಸದಸ್ಯರ ಪೈಕಿ, ಕ್ಲೌಸ್ ನೊರೀನ್ ಅತ್ಯಂತ ಶಾಂತಸ್ವಭಾವದವ ಎನಿಸಿಕೊಂಡಿದ್ದಾನೆ. ಡ್ಯಾನಿ ರೆಡ್ ಎಂಬ ಮಿಥ್ಯಾನಾಮದ ಅಡಿಯಲ್ಲಿ ಇತರ ಕಲಾವಿದರಿಗಾಗಿ ಮೂಲಸಾಮಗ್ರಿಯನ್ನು ಮರುಮಿಶ್ರಣ ಮಾಡುವ ಮೂಲಕ, ಅವನೂ ಸಹ ಉದ್ಯಮದಲ್ಲಿ ಉಳಿದುಕೊಂಡ. "ಬಾರ್ಬೀ ಗರ್ಲ್" ಹಾಡಿಗೆ ಸಂಬಂಧಿಸಿದಂತೆ ಮ್ಯಾಟೆಲ್ ಕಂಪನಿಯಿಂದ ಸಲ್ಲಿಸಲ್ಪಟ್ಟಿದ್ದ ಮೊಕದ್ದಮೆಯನ್ನು 2002ರಲ್ಲಿ ತಳ್ಳಿಹಾಕಲಾಯಿತು; ಗೊಂಬೆಯ ಪ್ರತಿಷ್ಠೆಗೆ ಸದರಿ ಗೀತೆಯು ಹಾನಿಯುಂಟುಮಾಡಿತು ಎಂಬರ್ಥದ ಮ್ಯಾಟೆಲ್ ಕಂಪನಿಯ ಸಮರ್ಥನೆಗಳನ್ನು ನ್ಯಾಯಮೂರ್ತಿಯು ತಿರಸ್ಕರಿಸುವುದರೊಂದಿಗೆ ಈ ತೀರ್ಮಾನವು ಹೊರಬಿದ್ದಿತು. ಈ ಕುರಿತಾಗಿ ಸಮರ್ಥನೆಯನ್ನು ನೀಡಿದ ನ್ಯಾಯಮೂರ್ತಿಯು, ಸದರಿ ಗೀತೆಯು ಗೊಂಬೆಯ ಒಂದು ಅಣಕು ಆಗಿದ್ದು, ಅದು ಕಾನೂನುಬದ್ಧವಾಗಿ ಅಂಗೀಕಾರಾರ್ಹವಾಗಿದೆ ಎಂದು ತಿಳಿಸಿದ. ಆತ ಪ್ರಕರಣದ ಸಹಭಾಗಿಗಳಿಗೆ "ನಿರಾಳವಾಗಿರುವಂತೆಯೂ" ಸಲಹೆ ನೀಡಿದ. 2004ರಲ್ಲಿ, ಭಾರತ ಮತ್ತು ಥೈಲೆಂಡ್‌ನಲ್ಲಿ Aqua: The Hits VCD Karaoke ಬಿಡುಗಡೆಯಾಯಿತು. 2005ರಲ್ಲಿ, ಡೆನ್ಮಾರ್ಕಿನ ಓರ್ವ ನಿರ್ದೇಶಕನು, ಟರ್ನ್ ಬ್ಯಾಕ್ ಟೈಮ್ ಎಂಬ ಹೆಸರಿನ (ಅದೇ ಹೆಸರನ್ನು ಹೊಂದಿದ್ದ ಗೀತೆಯ ಹೆಸರನ್ನೇ ಇಡಲಾಗಿತ್ತು) ಒಂದು ಸಾಕ್ಷ್ಯಚಿತ್ರಕ್ಕಾಗಿ ವಾದ್ಯವೃಂದದ ಎಲ್ಲ ಸದಸ್ಯರನ್ನೂ ಒಟ್ಟಾಗಿ ಸೇರಿಸಿದ. ಒಂದು ಬೇಸಿಗೆ ನಿವಾಸದಲ್ಲಿ ಇದರ ಚಿತ್ರೀಕರಣವು ನಡೆದ ಸಂದರ್ಭದಲ್ಲಿ, ಮನೆಯ ಒಳಗಡೆ ಹನ್ನೆರಡು ಗಂಟೆಗಳ ಅವಧಿಯವರೆಗೆ ವಾದ್ಯವೃಂದದ ಸದಸ್ಯರು ಉಳಿದುಕೊಂಡಿದ್ದರು; ಕಂಪ್ಯೂಟರ್ ಒಂದರಿಂದ ಮನಬಂದಂತೆ ಆರಿಸಲ್ಪಟ್ಟ ವಿಷಯಗಳ ಕುರಿತಾಗಿ ಮಾತನಾಡುತ್ತಾ ಹೋಗಿದ್ದು ಈ ಸಂದರ್ಭದಲ್ಲಿ ಕಂಡುಬಂತು; ಲೆನೆ ಮತ್ತು ಸೋರೆನ್‌ರ ಮದುವೆಗೆ ಸಂಬಂಧಿಸಿದ ಹಾಗೂ ರೆನೆಯ ಪುಸ್ತಕಕ್ಕೆ ಸಂಬಂಧಿಸಿದ ವಿಷಯಗಳೂ ಈ ಮಾತುಕತೆಯಲ್ಲಿ ಸುಳಿದಿದ್ದವು ಎಂಬುದು ಗಮನಾರ್ಹ ಸಂಗತಿ. ವಿಷಯವೊಂದರ ಕುರಿತಾಗಿ ವಾದ್ಯವೃಂದದ ಸದಸ್ಯರು ಮಾತನಾಡುತ್ತಿರುವಾಗ, ಅದರ ನಡುವೆ ಸಂಗೀತ ವಿಡಿಯೋಗಳು ಮತ್ತು ಪ್ರತ್ಯಕ್ಷ ಪ್ರಸ್ತುತಿಗಳ ತುಣುಕುಗಳು ಇಣುಕುತ್ತಿದ್ದವು.
2007–2009: ಮರುವಿಲೀನ ಮತ್ತು ಜನಪ್ರಿಯ ಯಶಸ್ವೀ ಮಹೋನ್ನತ ಗೀತೆಗಳು
[ಬದಲಾಯಿಸಿ]2007ರ ಅಕ್ಟೋಬರ್ 26ರಂದು, ಆಕ್ವಾ ತಂಡವು ಮರುವಿಲೀನಗೊಂಡಿತು ಮತ್ತು 2008ರ ಬೇಸಿಗೆಯ ಅವಧಿಯಲ್ಲಿ ಶುರುವಾಗಲಿದ್ದ, 25-ಸಂಗೀತ ಕಚೇರಿಗಳನ್ನು ಒಳಗೊಂಡಿದ್ದ ಪ್ರವಾಸವೊಂದರ ಕುರಿತಾಗಿ ಅದು ಭರವಸೆ ನೀಡಿತು. ಡೆನ್ಮಾರ್ಕ್, ಕೆನಡಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು U.K.ಗಳಲ್ಲಿನ ತಾಣಗಳಿಗೆ ಸೇರಿದ ಧ್ವನಿಮುದ್ರಣ ಕಂಪನಿಗಳಿಂದ ಪ್ರಸ್ತಾವಗಳು ಸ್ವೀಕರಿಸಲ್ಪಟ್ಟವು. ಅಂತಿಮವಾಗಿ, "ಗ್ರೋನ್ ಕೊನ್ಸರ್ಟ್" ಉತ್ಸವದ ಭಾಗವಾಗಿ ಡೆನ್ಮಾರ್ಕ್‌ನ ಸುತ್ತಮುತ್ತ 8 ಸಂಗೀತ ಕಚೇರಿಗಳನ್ನು ಆಕ್ವಾ ತಂಡವು ನಡೆಸಿಕೊಟ್ಟಿತು. 2009ರ ಜೂನ್ 15ರಂದು, ತಂಡವು ತನ್ನ ಜನಪ್ರಿಯ ಯಶಸ್ಸಿನ ಮಹೋನ್ನತ ಗೀತೆಗಳ ಎರಡನೇ ಗೀತಸಂಪುಟವನ್ನು ಬಿಡುಗಡೆಮಾಡಿತು. ಹೊಸಮಾತೃಕೆಯಿಂದ ತಯಾರಿಸಲಾದ 16 ಹಳೆಯ ಧ್ವನಿಪಥಗಳು ಮತ್ತು ಮೂರು ಹೊಸ ಹಾಡುಗಳನ್ನು ಇದು ಒಳಗೊಂಡಿದೆ. "ಮೈ ಮಾಮ್ಮಾ ಸೆಡ್", "ಲಿವ್ ಫಾಸ್ಟ್, ಡೈ ಯಂಗ್"[೭] ಮತ್ತು "ಬ್ಯಾಕ್ ಟು ದಿ 80'ಸ್" ಇವೇ ಆ ಮೂರು ಹೊಸ ಗೀತೆಗಳಾಗಿದ್ದು, ಇವುಗಳ ಪೈಕಿ ಬ್ಯಾಕ್ ಟು ದಿ 80'ಸ್ ಎಂಬ ಗೀತೆಯು 8 ವರ್ಷಗಳಲ್ಲಿನ ತಂಡದ ಮೊದಲ ಏಕಗೀತೆಯಾಗಿದೆ ಮತ್ತು ಇದನ್ನು 2009ರ ಮೇ 25ರಂದು ಡೆನ್ಮಾರ್ಕ್‌ನಲ್ಲಿ ಬಿಡುಗಡೆ ಮಾಡಲಾಯಿತು. 2009ರ ಮೇ ಮತ್ತು ಆಗಸ್ಟ್ ತಿಂಗಳುಗಳ ನಡುವೆ ಆಕ್ವಾ ತಂಡವು ಸ್ಕ್ಯಾಂಡಿನೇವಿಯಾ ಪ್ರವಾಸವನ್ನೂ ಕೈಗೊಂಡಿತು ಮತ್ತು ಜರ್ಮನಿ, UK ಹಾಗೂ ಫ್ರಾನ್ಸ್‌ಗಳಲ್ಲಿನ ಹಲವಾರು ಗಿಗ್ ಕಾರ್ಯಕ್ರಮಗಳಲ್ಲಿ ಸಂಗೀತ-ಪ್ರಸ್ತುತಿಯನ್ನು ನೀಡಿತು. ಜನಪ್ರಿಯ ಯಶಸ್ಸಿನ ಮಹೋನ್ನತ ಗೀತೆಗಳ CDಯನ್ನು ಉತ್ತರ ಅಮೆರಿಕಾ ಮತ್ತು ಅನೇಕ ಐರೋಪ್ಯ ದೇಶಗಳಲ್ಲಿ 2009ರ ಸೆಪ್ಟೆಂಬರ್ 22ರಂದು ಹಾಗೂ UKಯಲ್ಲಿ 2009ರ ಸೆಪ್ಟೆಂಬರ್ 29ರಂದು ಬಿಡುಗಡೆ ಮಾಡಲಾಯಿತು.
2010ರಿಂದ ಇಂದಿನವರೆಗೆ: ಮೂರನೇ ಸ್ಟುಡಿಯೋ ಗೀತಸಂಪುಟ
[ಬದಲಾಯಿಸಿ]ಮೂರನೇ ಗೀತಸಂಪುಟವೊಂದನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಆಕ್ವಾ ತಂಡವು ಮತ್ತೊಮ್ಮೆ ಕೈಗೆತ್ತಿಕೊಂಡಿದೆ ಮತ್ತು 2010ರ ಆರಂಭದಲ್ಲಿ ಅದನ್ನು ಧ್ವನಿಮುದ್ರಿಸಲಿದೆ.[೮]
ಸಂಗೀತ ಶೈಲಿ
[ಬದಲಾಯಿಸಿ]1990ರ ದಶಕದಲ್ಲಿ ಯುರೋಪ್, ಓಷಿಯಾನಿಯಾ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಜನಪ್ರಿಯವಾಗಿದ್ದ ಯುರೋನೃತ್ಯ ಪ್ರಕಾರದಿಂದ ಆಕ್ವಾ ತಂಡವು ಸಾಂಗೀತಕವಾಗಿ ಪ್ರಭಾವಿಸಲ್ಪಟ್ಟಿತ್ತು.[ಸೂಕ್ತ ಉಲ್ಲೇಖನ ಬೇಕು] ABBA, ಏಸ್ ಆಫ್ ಬೇಸ್, ಬೋನಿ M. ಮತ್ತು C+C ಮ್ಯೂಸಿಕ್ ಫ್ಯಾಕ್ಟರಿಯಂಥ ವಾದ್ಯವೃಂದಗಳಿಂದಲೂ ಆಕ್ವಾ ತಂಡದ ಸದಸ್ಯರು ಪ್ರಭಾವಿತರಾಗಿದ್ದರು.[ಸೂಕ್ತ ಉಲ್ಲೇಖನ ಬೇಕು] ಯುರೋನೃತ್ಯದ ಶೈಲಿಯು, ಓರ್ವ ಗಾಯಕಿ ಹಾಗೂ ಓರ್ವ ರ್ಯಾಪ್ ತಾಳವಾದ್ಯ ಪಟುವನ್ನು ಒಳಗೊಂಡಿದ್ದ ನೃತ್ಯ ಸಂಗೀತವಾಗಿತ್ತು. ಒಂದು ಹೆಚ್ಚು ಸಾಂಪ್ರದಾಯಿಕವಾದ ಕಿರುಗವಿತೆ-ವೃಂದಗಾನದ ಸ್ವರೂಪವನ್ನು ಆಕ್ವಾ ತಂಡವು ಅನುಸರಿಸಿತು. ಸಾಮಾನ್ಯವಾಗಿ, ಕಿರುಗವಿತೆಯನ್ನು ಲೆನೆಯು ಆರಂಭಿಸುತ್ತಿದ್ದಳು ಮತ್ತು ಮುಗಿಸುತ್ತಿದ್ದಳು. ಅದರ ಮಧ್ಯಭಾಗದಲ್ಲಿ ರೆನೆಯು ಹಾಡುತ್ತಿದ್ದ. "ಬಾರ್ಬೀ ಗರ್ಲ್", "ಡಾಕ್ಟರ್ ಜೋನ್ಸ್", "ಲಾಲಿಪಾಪ್ (ಕ್ಯಾಂಡಿಮ್ಯಾನ್)" ಮತ್ತು "ಮೈ ಓಹ್ ಮೈ"ನಂಥ ನೃತ್ಯ ಧ್ವನಿಪಥಗಳಿಗೆ ಸಂಬಂಧಿಸಿದಂತೆ ಆಕ್ವಾ ತಂಡದ ಸದಸ್ಯರು ಸುಪರಿಚಿತರಾಗಿದ್ದಾರೆ. ಆದರೂ, "ಟರ್ನ್ ಬ್ಯಾಕ್ ಟೈಮ್", "ಗುಡ್ ಮಾರ್ನಿಂಗ್ ಸನ್‌ಶೈನ್" ಮತ್ತು "ವಿ ಬಿಲಾಂಗ್ ಟು ದಿ ಸೀ"ನಂಥ ನಿಧಾನಗತಿಯ ಧ್ವನಿಪಥಗಳನ್ನೂ ಅವರು ನಿರ್ಮಿಸಿದರು. ಈ ಧ್ವನಿಪಥಗಳು ಸಾರ್ವತ್ರಿಕ ಬಬಲ್‌ಗಮ್ ಪಾಪ್ ಪ್ರಕಾರಕ್ಕೆ ಸೇರುವುದಿಲ್ಲ. ಮೊದಲ ಗೀತಸಂಪುಟವಾದ ಆಕ್ವೇರಿಯಂ ಹಾಗೂ ಎರಡನೇ ಗೀತಸಂಪುಟವಾದ ಆಕ್ವೇರಿಯಸ್ ನಡುವೆಯೂ ವ್ಯತ್ಯಾಸಗಳಿವೆ. ಆಕ್ವೇರಿಯಂ ಗೀತಸಂಪುಟವು ಅನೇಕ ಹೋಲುವ ಧ್ವನಿಪಥಗಳನ್ನು ಹೊಂದಿದ್ದರೆ, ವಿದ್ಯುತ್ತಿಲ್ಲದೆ ಧ್ವನಿತರಂಗಗಳಿಂದಲೇ ನುಡಿಯುವ ವಾದ್ಯಗಳು ಹಾಗೂ ಹಳ್ಳಿಗಾಡಿನ ಸಂಗೀತ ಹಾಗೂ ಲ್ಯಾಟಿನ್ ಸಂಗೀತದಂಥ ಪ್ರಕಾರಗಳೊಂದಿಗೆ ಆಕ್ವೇರಿಯಸ್ ಗೀತಸಂಪುಟವು ಪ್ರಯೋಗಶೀಲವಾಗಿತ್ತು. 1990ರ ದಶಕದ ದ್ವಿತೀಯಾರ್ಧದಲ್ಲಿ, ಯುರೋನೃತ್ಯ ಸಂಗೀತಕ್ಕೆ ಸಂಬಂಧಿಸಿದ ಆಸಕ್ತಿಯು ಕುಸಿಯಲಾರಂಭಿಸಿತು. 2000ನೇ ಇಸವಿಯಲ್ಲಿ ಬಿಡುಗಡೆಯಾದ ಆಕ್ವಾ ತಂಡದ ಎರಡನೇ ಗೀತಸಂಪುಟವಾದ ಆಕ್ವೇರಿಯಸ್ , ಈ ಕಾರಣದಿಂದಾಗಿ ಮೊದಲಿನ ಗೀತಸಂಪುಟದಷ್ಟು ಕಾಲೋಚಿತತೆಯನ್ನು ಹೊಂದಿರಲಿಲ್ಲ. ಆಕ್ವೇರಿಯಂ ಗೀತಸಂಪುಟದಲ್ಲಿ ಧ್ವನಿಪಥಗಳಿಗೆ ಮೀಸಲಾದ ಸರಾಸರಿ ಉದ್ದವು 3:43 ನಿಮಿಷಗಳಷ್ಟಿದೆ.[೨] ಇದು ಪಾಪ್ ಸಂಗೀತದ ಒಂದು ವಿಶಿಷ್ಟ ಲಕ್ಷಣವೂ ಆಗಿದೆ. ಬಿಡುಗಡೆಯಾಗದ ಹಾಡುಗಳಲ್ಲಿ 2001ರ ಗ್ರೋನ್ ಕೊನ್ಸರ್ಟ್‌ಗೆ ಸೇರಿದ "ವೊವ್, ವೊವ್, ವೊವ್", "ಷೇಕಿಂಗ್ ಸ್ಟೀವನ್ಸ್ (ಈಸ್ ಎ ಸೂಪರ್‌ಸ್ಟಾರ್)", "ಕೂಚ್ ಪೊಟೆಟೊ", "ಹೈ-ಫೈ ಸ್ಟೀರಿಯೋ", ಮತ್ತು "ಹಿಯರ್ ಕಮ್ಸ್ ದಿ ಬರ್ಡ್ಸ್" ಮೊದಲಾದವು ಸೇರಿವೆ.
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]- ಆಕ್ವೇರಿಯಂ (1997)
- ಆಕ್ವೇರಿಯಸ್ (2000)
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2010-07-12. Retrieved 2010-11-08.
- ↑ CNN — ಜನವರಿ 7, 2003 - "ಸುಪ್ರೀಂ ಕೋರ್ಟ್ ರಿಜೆಕ್ಟ್ಸ್ ಅಗ್ಲಿ ಫೈಟ್ ಓವರ್ ಬಾರ್ಬೀ ಡಾಲ್ — http://www.cnn.com/2003/LAW/01/27/scotus.barbie.song/"
- ↑ http://www.horsensrocker.dk/[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.nibefestival.dk/NewsletterPreview.aspx?newsletterid=67[ಶಾಶ್ವತವಾಗಿ ಮಡಿದ ಕೊಂಡಿ]
- ↑ MySpace.com - rene dif - Pop / Rock - www.myspace.com/difpop
- ↑ breakfast recipes - Mr Breakfast .com - breakfast restaurants
- ↑ "New Aqua Greatest Hits on the way". Aquarama.tk. 21 March 2009. Archived from the original on 27 ಮೇ 2009. Retrieved 12 October 2009.
- ↑ "Aqua indspiller nyt album". GAFFA. 29 August 2009. Archived from the original on 5 ಅಕ್ಟೋಬರ್ 2015. Retrieved 12 October 2009.
- ಜಾಕ್ವಿ ಸ್ವಿಫ್ಟ್ ಬರೆದಿರುವ ಆಕ್ವಾ: ದಿ ಅಫಿಷಿಯಲ್ ಬುಕ್
- ದಿ ಆಕ್ವಾ ಡೈರಿ , 1998ರ ಒಂದು VHS ಬಿಡುಗಡೆ
- ರೆನೆ ಡಿಫ್ಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್
- UK, US, ಜಪಾನ್, ಆಸ್ಟ್ರೇಲಿಯಾ, ಡೆನ್ಮಾರ್ಕ್ ಮತ್ತು ಇತರ ಹಲವಾರು ದೇಶಗಳ ಅಧಿಕೃತ ಏಕಗೀತೆ/ಗೀತಸಂಪುಟದ ಕೋಷ್ಟಕಗಳು
- ಲೇಜಿ-Bಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ Archived 2006-08-21 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ವೆಬ್ಸೈಟ್
- ಬಬಲ್‌ಗಮ್ ಡಾನ್ಸರ್ನಲ್ಲಿನ ಆಕ್ವಾ Archived 2010-10-26 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧಿಕೃತ ಆಕ್ವಾ ಮೈಸ್ಪೇಸ್ Archived 2009-10-23 ವೇಬ್ಯಾಕ್ ಮೆಷಿನ್ ನಲ್ಲಿ.
- ಆಕ್ವಾ @ ಮೈ ಆಕ್ವೇರಿಯಂ Archived 2014-07-14 ವೇಬ್ಯಾಕ್ ಮೆಷಿನ್ ನಲ್ಲಿ.
- ಆಕ್ವಾರಾಮಾ Archived 2018-05-03 ವೇಬ್ಯಾಕ್ ಮೆಷಿನ್ ನಲ್ಲಿ.
- ರಷ್ಯನ್ ಅಭಿಮಾನಿಗಳ ಅನಧಿಕೃತ ಕ್ಲಬ್ "ಆಕ್ವೇರಿಯಸ್"
- ಆಕ್ವಾ 2001 Archived 2010-10-30 ವೇಬ್ಯಾಕ್ ಮೆಷಿನ್ ನಲ್ಲಿ.
- ರೋಲಿಂಗ್ ಸ್ಟೋನ್ನಲ್ಲಿನ ಆಕ್ವಾ Archived 2009-05-28 ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Articles with hCards
- Articles with unsourced statements from January 2009
- Articles with unsourced statements from July 2010
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons link is locally defined
- Commons category with local link different than on Wikidata
- ಆಕ್ವಾ (ವಾದ್ಯವೃಂದ)
- 1990ರ ದಶಕದ ಸಂಗೀತ ತಂಡಗಳು
- 2000ರ ದಶಕದ ಸಂಗೀತ ತಂಡಗಳು
- 2010ರ ದಶಕದ ಸಂಗೀತ ತಂಡಗಳು
- ಬಹುರಾಷ್ಟ್ರೀಯ ಸಾಂಗೀತಕ ಸಮೂಹಗಳು
- 1989ರಲ್ಲಿ ಸ್ಥಾಪನೆಯಾದ ಸಂಗೀತದ ತಂಡಗಳು
- 2001ರಲ್ಲಿ ಸ್ಥಾಪಿತಸ್ಥಿತಿ ಭಂಗಮಾಡಲ್ಪಟ್ಟ ಸಂಗೀತ ಸಮೂಹಗಳು
- 2007ರಲ್ಲಿ ಮರುಸ್ಥಾಪಿಸಲ್ಪಟ್ಟ ಸಂಗೀತದ ತಂಡಗಳು
- ಡೆನ್ಮಾರ್ಕಿನ ಗೃಹದ ಸಂಗೀತ ಸಮೂಹಗಳು
- ಯುರೋನೃತ್ಯ ಸಮೂಹಗಳು
- ಸಂಗೀತದ ಚತುಷ್ಕಗಳು
- ಡೆನ್ಮಾರ್ಕಿನ ಪಾಪ್ ಸಂಗೀತದ ಸಮೂಹಗಳು
- ಟೆಕ್ನೋ ಸಂಗೀತ ಸಮೂಹಗಳು
- MCA ರೆಕಾರ್ಡ್ಸ್ ಕಲಾವಿದರು
- ವಿಶ್ವ ಸಂಗೀತ ಪ್ರಶಸ್ತಿಗಳ ವಿಜೇತರು.
- ಪಾಪ್ ಶೈಲಿಯ ಸಂಗೀತಗಾರರು