ಅರ್ಮಾನ್ ಮಲ್ಲಿಕ್

ವಿಕಿಪೀಡಿಯ ಇಂದ
Jump to navigation Jump to search

ಅರ್ಮಾನ್ ಮಲ್ಲಿಕ್[ಬದಲಾಯಿಸಿ]

ವೈಯಕ್ತಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಅರ್ಮಾನ್ ಮಲ್ಲಿಕ್, 1995 ಜುಲೈ 22 ರಂದು ಮುಂಬೈ, ಮಹಾರಾಷ್ಟ್ರದಲ್ಲಿ ಜನಿಸಿದರು. ಇಸ್ಲಾಂ ಧರ್ಮಕ್ಕೆ ಸೇರಿದ ಅರ್ಮಾನ್‍ನ ತಂದೆ ದ.ಬೂ. ಮಲ್ಲಿಕ್, ಪ್ರಸಿದ್ದ ಸಂಗೀತ ನಿರ್ದೇಶಕ, ತಾಯಿ ಜ್ಯೋತಿ ಮಲ್ಲಿಕ್. ಅಣ್ಣ ಅಮಾಲ್ ಮಲ್ಲಿಕ್ ಕೂಡ ಪ್ರಸಿದ್ದ ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ. ಅರ್ಮಾನ್ ಗೆ ಬಾಲ್ಯದಿಂದಲೂ ಸಂಗೀತ ಕ್ಷೇತ್ರದಲ್ಲೆ ಬೆಳೆಯಬೇಕು ಎಂಬ ಹಂಬಲವಿತ್ತು. ಮೂರು ವಂಶಾವಳಿಯಿಂದ ಗಾಯನವನ್ನು ನಂಬುತ್ತಾ ಬಂದಿರುವ ಮಲ್ಲಿಕ್ ಕುಟುಂಬ ಸದ್ಯ ಮುಂಬೈಯಲ್ಲಿ ನೆಲೆಸಿದೆ. ಅಜ್ಜ ಸರ್ದಾರ ಮಲ್ಲಿಕ್ ಕೂಡ ಗಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಂದೆ ಮುಸ್ಲಿಂ, ತಾಯಿ ಮದುವೆಯ ನಂತರ ಮುಸ್ಲಿಂ ಸಮುದಾಯಕ್ಕೆ ಮತಾಂತರ ಹೊಂದಿದರು. ಶಾಲಾ ವಿದ್ಯಾಭ್ಯಾಸವನ್ನು ಜಮ್ನಾಬಾಯ್ ನರ್ಸರಿ ಸ್ಕೂಲ್ ಹಾಗೂ ಕಾಲೇಜು ದಿನಗಳನ್ನು ಬೆರ್ಕೇ ಮ್ಯೂಸಿಕ್ ಕಾಲೇಜು ಮೆಚಾಸ್ಯೂಚೆಟ್ಸ ಅಲ್ಲಿ ಮುಗಿಸಿದ್ದಾರೆ. 4 ನೇ ವರ್ಷದಲ್ಲಿರುವಾಗಲೇ ಹಾಡಲು ಆರಂಬಿಸಿದ್ದರು. ರೀತುಕೌಲ್ ಹಾಗೂ ಖಾದಿರ್ ಮುಸ್ತಫಾ ಇವರಿಂದ ಗಾಯನದ ವಿದ್ಯಾಭ್ಯಾಸ ಮಾಡಿದರು.

ವೃತ್ತಿಜೀವನ[ಬದಲಾಯಿಸಿ]

2006 ರಲ್ಲಿ ಸರಿಗಮಪ ರಿಯಾಲಿಟಿ ಶೋದಲ್ಲಿ ಫೈನಲ್ ಗೆ ಆಯ್ಕೆಯಾಗಿದ್ದರು. ಅಭಿಮಾನಿಗಳ ಓಟುಗಳಿಂದ 8ನೇ ಸ್ಥಾನವನ್ನು ಪಡೆದಿದ್ದರು. 2008ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ಭೂತನಾಥ್ ಸಿನಿಮಾದಲ್ಲಿ ಹಾಡೊಂದನ್ನು ಹಾಡುವುದರ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದರು. 2010ರಲ್ಲಿ ತೆರೆಕಂಡ ‘ರಕ್ತಚರಿತಾ’ ಚಿತ್ರದ ಮೂಲಕ ಪ್ರಸಿದ್ಧಿ ಪಡೆದರು. 2011ರಲ್ಲಿ ‘ಚಿಲ್ಲರ ಪಾರ್ಟಿ’ ಸಿನಿಮಾದಲ್ಲಿ 4 ಹಾಡುಗಳಿಗೆ ಧ್ವನಿ ಕೊಟ್ಟರು. 2012ರ ನಂತರ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಹಾಡುವುದರ ಮೂಲಕ ಭಾರತದೆಲ್ಲೆಡೆ ಮನೆಮಾತಾಗಿದ್ದಾರೆ. ಬಾಲಿವುಡ್‍ ನೊಂದಿಗೆ ದಕ್ಷಿಣ ಭಾರತದ ಚಿತ್ರಗಳಿಗೂ ಧ್ವನಿ ನೀಡಿದ್ದಾರೆ. ಉರ್ದು, ಗುಜರಾತಿ, ಬಂಗಾಲಿ, ಮಲಯಾಳಂ, ಕನ್ನಡ, ತೆಲುಗು, ತಮಿಳು, ಮರಾಠಿ ಸಿನಿಮಾ ಇಂಡಸ್ಟ್ರಿಯಲ್ಲೂ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ‘ಫರಾರಿ’ ಎಂಬ ಸೋಲೊ ಆಲ್ಬಮ್ ಯೂಟ್ಯೂಬ್‍ನಲ್ಲಿ ಕೋಟ್ಯಾಂತರ ಜನ ವೀಕ್ಷಿಸಿದರು. ತಾಯಿ ಹೈದರಾಬಾದ್‍ನ ವೈಜಾಕ್‍ನವರಾಗಿದ್ದರಿಂದ ತೆಲುಗು ಭಾಷೆಯನ್ನು ಸರಾಗವಾಗಿ ಮಾತನಾಡುತ್ತಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಸಲ್ಮಾನ್‍ಖಾನ್ ಅಭಿನಯದ ‘ಜೈ ಹೋ’ ಚಿತ್ರದಿಂದ ಭಾರಿ ಮನ್ನಣೆ ಪಡೆದ ಟೈಟಲ್‍ಟ್ರಾಕ್ ಅರ್ಮಾನ್ ಮಲ್ಲಿಕ್ ಜೀವನಕ್ಕೆ ಹೊಸ ತಿರುವು ನೀಡಿತ್ತು. 2015ರಲ್ಲಿ ಇಮ್ರಾನ್ ಹಶ್ಮಿ ಮತ್ತು ಇಶಾ ಗುಪ್ತಾ ಅಭಿನಯಿಸಿದ, ಅಮಾಲ್ ಮಲಿಕ್ ಕಂಪೋಸ್ ಮಾಡಿದ ‘ಮೇ ರಹೂ ಯಾ ನ ರಹೂ’ ಆಲ್ಬಮ್‍ಗೆ ಧ್ವನಿ ನೀಡುವುದರ ಮೂಲಕ ಬೆಸ್ಟ್ ಹಿಂದಿ ಪೋಪ್ ಸಾಂಗ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಆಲ್ಬಮ್ ಅಣ್ಣ, ತಮ್ಮ ಇಬ್ಬರಿಗೂ ಬಾಲಿವುಡ್ ಅಷ್ಟೆ ಅಲ್ಲದೆ ಭಾರತೀಯ ಚಿತ್ರರಂಗದಲ್ಲೇ ಹೊಸ ತಿರುವು ಕಲ್ಪಿಸಿಕೊಟ್ಟಿತು.

ಇಮ್ರಾನ್ ಹಶ್ಮಿ ಅಭಿನಯದ ‘ಅಝರ್’ ಚಿತ್ರದಲ್ಲಿ ‘ಬೋಲ ದೋ ನಾ ಜರಾ’ ಹಾಡಿದ ಹಾಡಿಗೆ 23ರ ಸೋಲ್ ಲಯನ್ಸ್ ಗೋಲ್ಡ್ ಅವಾಡ್ರ್ಸ ಕಾರ್ಯಕ್ರಮಲ್ಲಿ ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿ ದೊರಕಿತು. 2014ರಲ್ಲಿ ಪ್ರಥಮಆಲ್ಬಮ್ ‘ಕ್ರೇಜಿಕನೆಕ್ಷನ್’ ಹೊರತಂದರು. 2014 ಜನವರಿ 30ರಂದು ಸಲ್ಮಾನ್‍ಖಾನ್‍ಇವರಿಂದಇದನ್ನು ಬಿಡುಗಡೆ ಮಾಡಲಾಯಿತು. ಸಲೀಂ ಮರ್ಚಂಟ್‍ ಇದರಲ್ಲಿ ನಾಯಕನಾಗಿ ನಟಿಸಿದ್ದಾರೆ.[೧] 2015ರಲ್ಲಿ ಭಾರತದಲ್ಲೆಅತಿಚಿಕ್ಕ ವಯಸ್ಸಿನಲ್ಲಿ 2 ‘ಗಿಮಾ’ ಪ್ರಶಸ್ತಿ ಗೆದ್ದ ಹಿನ್ನಲೆಗಾಯಕ ಎಂಬ ಗರಿಗೆ ಅರ್ಮಾನ್ ಪಾತ್ರರಾಗಿದ್ದಾರೆ. ಕನ್ನಡದ ಮುಂಗಾರು ಮಳೆ-2 ಚಿತ್ರದಲ್ಲಿ ‘ಸರಿಯಾಗಿ ನೆನಪಿದೆ’ ಎಂಬ ಹಾಡನ್ನು ಹಾಡಿದ್ದಾರೆ. 2017 6ನೇ ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬೆಸ್ಟ ಪ್ಲೇ ಬ್ಯಾಕ್ ಸಿಂಗರ್ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನ್ನಡದಲ್ಲಿ ‘ಸಿದ್ಧಾರ್ಥ’ಚಿತ್ರಕ್ಕೆ ಧ್ವನಿ ನೀಡುವುದರ ಮೂಲಕ 2015 ರಲ್ಲಿ ಸ್ಯಾಂಡಲ್‍ವುಡ್‍ಗೆ ಪ್ರವೇಶಿಸಿದರು. ಒಟ್ಟು 9 ಕನ್ನಡ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ.[೨]

ಧ್ವನಿ ಹಾಗೂ ರೂಪದಿಂದ ಎಲ್ಲರ ಗಮನಸೆಳೆಯುತ್ತಿರುವ ಅರ್ಮಾನ್ 2016ರ ಟಾಸೆಲ್‍ ಅವಾಡ್ರ್ಸ ನೀಡುವ ‘ಫ್ಯಾಶನ್‍ ಆ್ಯಂಡ್ ಲೈಫ್‍ಸ್ಟೈಲ್’ ವಿಭಾಗದ ‘ಮೋಸ್ಟ್ ಫ್ಯಾಶನೇಬಲ್’ ‘ಸಿಂಗಿಂಗ್‍ ಐಕಾನ್‍ ಆಫ್ ದಿ ಇಯರ್’ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೊದಲು ‘ಯೂನಿವರ್ಸಲ್ ಮ್ಯೂಸಿಕ ಇಂಡಿಯಾ’ದಿಂದ ಗುರುತಿಸಿಕೊಂಡಿದ್ದ ಇವರು ಹೆಸರಾಂತ ಭಾರತೀಯ ಸಂಗೀತ ಸಂಸ್ಥೆಯಾಗಿರುವ ‘ಟಿ-ಸೀರಿಸ್’ಗೂ ಸಹಿ ಹಾಕಿದ್ದರು. ಅರ್ಮಾನ್ ಮಲಿಕ್ ಮೊದಲು ಅಭಿನಯಿಸಿದ ಚಿತ್ರ ‘ಕಚ್ಚಾ ಲಿಂಬೂ’. 2011 ಈ ಚಿತ್ರವನ್ನು ಸಾಗರ್ ಬಳ್ಳಾರಿ ಚಿತ್ರಕಥೆ ಜೊತೆಗೆ ನಿರ್ದೇಶನ ಮಾಡಿದ್ದರು. ಈ ಚಿತ್ರವು 13 ವರ್ಷದ ಶಂಬೂ ಎಂಬ ಬಾಲಕನ ಕುರಿತು ಕಥೆಯಾಗಿತ್ತು. ಮಕ್ಕಳ ಶಾಲಾ ದಿನಗಳು, ಪೋಷಕರಿಗೆ ಮಕ್ಕಳ ಮೇಲಿನ ಉದಾಸ ಧೋರಣೆ ಕುರಿತಾಗಿ ಚಿತ್ರ ಬಿಂಬಿಸುತ್ತದೆ. ನಂತರ ಶಾರುಕ್ ಖಾನ್ ಅಭಿನಯದ ‘ಮೈ ನೇಮ್ ಈಸ‍ ಖಾನ್’ ಚಿತ್ರದಲ್ಲಿ ಬರುವ ಇಂಗ್ಲೀಷ್ ಹುಡುಗನ ಪಾತ್ರಕ್ಕೆ ಮೊದಲ ಬಾರಿಕೆಧ್ವನಿ ನೀಡಿದರು. ನಂತರ ರೇಡಿಯೋಗೆ ಭಾಷಾಂತರಗೊಂಡ ‘ಸ್ಲಂಡಾಗ್’ ಮೀಲೆನಿಯರ ಎಂಬ ಬಹು ಖ್ಯಾತಿಯ ಹಾಲಿವುಡ್‍ ಚಿತ್ರದಲ್ಲಿ ಬರುವ ಸಲೀಂ ಪಾತ್ರಕ್ಕೂ ಧ್ವನಿ ಕೊಟ್ಟಿದ್ದಾರೆ. ಇವರ ಇಂಗ್ಲೀಷ್ ಭಾಷೆಯ ಸ್ಪಷ್ಟನೆ ಆ ಪಾತ್ರವನ್ನು ಇನ್ನಷ್ಟು ಜನಪ್ರಿಯಗೊಳಿಸಿತು.


===ಅರ್ಮಾನ್ ಹಾಡಿದ ಹಿಂದಿ ಹಾಡುಗಳು=== [೩]

 • ಚಿತ್ರ- ಭೂತ್‍ನಾಥ್, ಹಾಡು- ಹೇ ಬಡ್ಡಿ, ವರ್ಷ- 2008
 • ಚಿತ್ರ- ಛಾನಾಚೈತ್ರ, ಹಾಡು- ಕೇಲ್ ಶೂರು, ವರ್ಷ- 2010
 • ಚಿತ್ರ- ಚಿಲ್ಲರ್ ಪಾರ್ಟಿ, ಹಾಡು- ಆ ರೆಲಾ ಹೈ ಅಪುನ್,ಬೆಲ್ಹಾದೊ, ಚಟ್ಟೆ ಬಟ್ಟೆ, ಜಿದ್ದಿ ಪಿದ್ದಿ, ವರ್ಷ- 2011
 • ಚಿತ್ರ- ಕಮಾಂಡೋ, ಹಾಡು- ತೇರೆ ದಿಲ್ ಮೇ, ವರ್ಷ- 2013
 • ಚಿತ್ರ- ಜೈ ಹೋ, ಹಾಡು- ತುಮ್ಕೊತೊ ಆನಾ ಹೀ ತಾ, ಲವ್ ಯೂಟಿಲ್‍ದಎಂಡ್, ಜೈಜ್ಯಜೈ ಹೋ, ವರ್ಷ- 2014
 • ಚಿತ್ರ- ಡಬ್ಲೂ, ಹಾಡು- ವಿಲ್ಡ ವಿಲ್ಡ, ತು ಹವಾ, ವರ್ಷ_2014
 • ಚಿತ್ರ- ಉಂಗ್ಲಿ, ಹಾಡು- ಯೂಲಿಯ, ವರ್ಷ- 2014
 • ಚಿತ್ರ- ಹೀರೋ, ಹಾಡು- ಮೆ ಹೂ ಹೀರೋತೆರಾ, ವರ್ಷ- 2015
 • ಚಿತ್ರ- ಕ್ಯಾಲೆಂಡರ್‍ಗಲ್ರ್ಸ, ಹಾಡು- ಕ್ವಾಹಿಶೇನ್, ವರ್ಷ-2015
 • ಚಿತ್ರ- ಹೇಟ್ ಸ್ಟೋರಿ ಥ್ರಿ, ಹಾಡು- ತುಮ್ಹೆ ಅಪನ ಬನಾನೆ ಕಾ, ವಜಾತುಮ್ ಹೋ, ವರ್ಷ-2015
 • ಚಿತ್ರ- ಸನಮ್‍ರೇ, ಹಾಡು- ಹುವಾ ಹೇ ಆಜ್ ಪೆಹ್ಲಿ ಬಾರ್, ವರ್ಷ-2016
 • ಚಿತ್ರ- ಕಪೂರಆ್ಯಂಡ್ ಸನ್ಸ್, ಹಾಡು- ಬುದ್ದು ಸಾ ಮನ್, ವರ್ಷ- 2016
 • ಚಿತ್ರ- ಕೀ ಆ್ಯಂಡ್ ಕಾ, ಹಾಡು- ಪೂಲ್ ಇಷ್ಕ, ವರ್ಷ- 2016
 • ಚಿತ್ರ- ಭಾಗಿ, ಹಾಡು- ಸಬ್‍ತೇರಾ, ವರ್ಷ-2016
 • ಚಿತ್ರ- ಅಝರ್, ಹಾಡು- ಬೋಲ್‍ದೋ ನಾ ಜರಾ, ಓಯ್‍ಒಯ್. ವರ್ಷ-2016
 • ಚಿತ್ರ- ದೋ ಲಪ್ಜೋಕಿ ಕಹಾನಿ, ಹಾಡು- ಕುಚ್‍ತೋ ಹೈ, ವರ್ಷ- 2016
 • ಚಿತ್ರ- ಜುನೂನಿಯತ್, ಹಾಡು- ಮಜ್ಕೋ ಬರ್ಸಾತ್ ಬನಾ ಲೋ, ವರ್ಷ- 2016
 • ಚಿತ್ರ- ಬಾರ್ ಬಾರ್‍ದೇಖೋ, ಹಾಡು- ಸೌ ಆಸ್ಮಾನ್, ವರ್ಷ- 2016
 • ಚಿತ್ರ- ಎಮ್, ಎಸ್‍ಧೋನಿ, ಹಾಡು- ಬೆಸ್‍ಬ್ರಿಯಾನ್, ಜಬ್‍ತಕ್, ಕೌನ್‍ತುಜೆ, ವರ್ಷ- 2016
 • ಚಿತ್ರ- ಸಾಂಸ್ಹೇ, ಹಾಡು- ತುಮ್‍ಜೋ ಮೀಲೆ ವರ್ಷ- 2016
 • ಚಿತ್ರ- ಪೋರ್ಸ 2, ಹಾಡು- ಕೋಯಿ ಇಶಾರಾ, ವರ್ಷ- 2016
 • ಚಿತ್ರ-ವಜಾತುಮ್ ಹೋ, ಹಾಡು- ದಿಲ್ ಮೇ ಚುಪಾ ಲುಂಗಾ, ವರ್ಷ- 2016
 • ಚಿತ್ರ- ನೂರ್, ಹಾಡು- ಉಫ್, ವರ್ಷ- 2017
 • ಚಿತ್ರ- ಚೇಫ್, ಹಾಡು- ತೇರೆ ಮೇರೆ, ವರ್ಷ- 2017

ಪ್ರಶಸ್ತಿಗಳು[ಬದಲಾಯಿಸಿ]

 • 2015- ಗಿಮಾಅವಾರ್ಡ-ಅತ್ಯುತ್ತಮ ಡೆಬ್ಯೂಟಂಟ್ ಪ್ರಶಸ್ತಿ
 • 2015- ಕಲಕಾರಅವಾರ್ಡ- ಅತ್ರುತ್ತಮ ಉದಯೋನ್ಮುಖ ಗಾಯಕ
 • 2015- ಗಿಮಾಅವಾರ್ಡ- ಅತ್ರುತ್ತಮ ಸಂಗೀತ ಡೆಬ್ಯೂಟ್
 • 2015- ಬಿಗ್ ಸ್ಟಾರ ಎಂಟರ್‍ಟೈನ್ಮೆಂಟ್‍ ಅವಾಡ್ರ್ಸ- ವರ್ಷದ ಅತ್ಯಂತ ಮನರಂಜನೆ ನೀಡಿದ ಗಾಯಕ
 • 2015- ಸ್ಟಾರಡಸ್ಟಅವಾರ್ಡ- ಅತ್ಯುತ್ತಮ ಹಿನ್ನೆಲೆ ಗಾಯಕ
 • 2016- ಪಿಲ್ಮಫೇರ್‍ ಅವಾರ್ಡ- ಆರ್‍ಡಿ ಬುರ್ಮಾನ್‍ ಅವಾರ್ಡ
 • 2016 - ಗಿಮಾ ಅವಾರ್ಡ- ಅತ್ಯುತ್ತಮ ಸಂಗೀತ ವೀಡಿಯೋ
 • 2016- ದಾದಾ ಸಾಹೇಬ ಫಾಲ್ಕೆ ಅವಾರ್ಡ- ಅತ್ಯಂತ ಪಡೆದ ಹಿನ್ನೆಲೆ ಗಾಯಕ
 • 2016-ಸೋಲ್ ಲಯನ್ಸ್ ಗೋಲ್ಡ ಅವಾರ್ಡ - ಅತ್ಯುತ್ತಮ ಜನಪ್ರಿಯತೆ ಪಡೆದ ಹಿನ್ನಲೆ ಗಾಯಕ
 • 2016- ಮಿರ್ಚಿ ಮ್ಯೂಸಿಕಲ್ ಅವಾರ್ಡ- ಅತ್ಯುತ್ತಮ ಇಂಡೋ- ಪಾಪ್ ಹಾಡು(ಮೇ ರಹೂಯಾ ನಾ ರಹೂ)
 • 2016- ಟಾಸೆಲ್‍ ಅವಾರ್ಡ- ಅತ್ಯಂತ ಫ್ಯಾಷನೆಬಲ್ ಹಿನ್ನೆಲೆ ಗಾಯಕ
 • 2102- 23ನೇ ಸೋಲ್ ಲಯನ್ಸ್ ಗೋಲ್ಡ ಅವಾರ್ಡ- ಅತ್ಯತ್ತಮ ಹಿನ್ನಲೆ ಗಾಯಕ
 • 2017- 6ನೇ ದಕ್ಷಿಣ ಭಾರತದ ಅಂತರಾಷ್ಟ್ರೀಯ ಸಿನಿಮಾ ಅವಾರ್ಡ- ಅತ್ಯತ್ತಮ ಹಿನ್ನಲೆ ಗಾಯಕ (ಚಿತ್ರ- ಮುಂಗಾರು ಮಳೆ-2)


ಉಲ್ಲೇಖಗಳು[ಬದಲಾಯಿಸಿ]

 1. https://en.wikipedia.org/wiki/Armaan_Malik
 2. https://www.timesnownews.com/entertainment/news/bollywood-news/article/bollywood-singer-armaan-malik-says-a-singers-personality-should-shine-through-voice/356271
 3. https://www.youtube.com/user/22armaanmalik?app=desktop