ಅನುಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಅನುಶ್ರೀ[೧] ದೂರದರ್ಶನದಲ್ಲಿ ಕನ್ನಡವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕಿ. ಅವರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.

ಜನನ, ಹಾಗೂ ಬಾಲ್ಯ[ಬದಲಾಯಿಸಿ]

ಅನುಶ್ರೀ ಬೆಂಗಳೂರಿನಲ್ಲಿ ೩೦, ಜುಲೈ, ೧೯೯೦ ರಲ್ಲಿ ಜನಿಸಿದರು. ತಂದೆ ಸಂಪತ್, ಮತ್ತು ತಾಯಿ ಶಶಿಲಾ. ಮನೆಯಲ್ಲಿ ತುಳು ಮಾತಾಡುವ ಕುಟುಂಬವಾಗಿತ್ತು. ಅವರ ತಮ್ಮ ಅಭಿಜಿತ್. ಅನು ಅವರು, ಚಿಕ್ಕವಳಿದ್ದಾಗ ಅವರ ತಂದೆ-ತಾಯಿಯಿಂದ ದೂರ ಇದ್ದರು. ಅವರು ನಾರಾಯಣ ಗುರು ಶಾಲೆಗೆ ಹೋಗುವ ಮುನ್ನ ಅವರು ತನ್ನ ೫ನೇ ತರಗತಿಯನ್ನು ಸೈಂಟ್ ಥೋಮಸ್ ಬೆಂಗಳೂರಿನಲ್ಲಿ[permanent dead link] ಕಲಿತಿದ್ದರು. ಅವರಿಗೆ ಪದವಿ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

ಉದ್ಯೋಗ[ಬದಲಾಯಿಸಿ]

ಅನುಶ್ರೀ ಅವರು ಉದ್ಯೋಗವನ್ನು ಕಾರ್ಯಕ್ರಮ ನಿರೂಪಕಿಯಾಗಿ "ಈ ಟಿ.ವಿ" ಕನ್ನಡ ಕಾರ್ಯಕ್ರಮ ಡಿಮ್ಯಾಂಡಪೊ ಡಿಮ್ಯಾಂಡು ಎಂಬ ಕಾರ್ಯಕ್ರಮದಲ್ಲಿ ಅವರ ಪ್ರತಿಭೆಯನ್ನು ತೋರಿಸಿದ್ದಾಳೆ. ಅನುಶ್ರೀ ಅವರು ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಬಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಕಾಮಿಡಿ ಕಿಲಾಡಿಗಳು, ಕಾಮಿಡಿ ಕಪ್. ಇತ್ಯಾದಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದರು.ಅವರು ಬೆಂಕಿಪಟ್ಟಣ ಎಂಬ ಚಿತ್ರವನ್ನು ಮಾಡಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.ಅಲ್ಲಿ ಅವರು ಸಾಧನೆಯನ್ನು ಮಾಡಿ ಬೆಸ್ಟ್ ಡಿಬೇಟ್ ಎಂಬ ಪ್ರಶಸ್ತಿಯನ್ನು ಗಳಿಸಿದ್ದಾರೆ. ಹಾಗೂ 'ಮುರಳಿ ಮೀಟ್ಸ್ ಮೀರಾ' ಎಂಬ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ ದೊರಕಿದೆ.

ಒಳ್ಳೆಯ ಅಭಿನೇತ್ರಿಯಾಗುವ ಆಶೆ[ಬದಲಾಯಿಸಿ]

ಅನುಶ್ರೀ ಒಬ್ಬ ಮೌಲ್ಯಾಧಾರಿತ ಅಭಿನೇತ್ರಿಯಾಗಲು ಬಯಸುತ್ತಾರೆ. [೨]

ಪ್ರಶಸ್ತಿಗಳು[ಬದಲಾಯಿಸಿ]

  1. ೨೦೧೧ : 'ಮುರಳಿ ಮೀಟ್ಸ್ ಮೀರಾ' ಕನ್ನಡ ಚಲನ ಚಿತ್ರಕ್ಕೆ, ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ, [೩]
  2. ೨೦೧೫ : 'ಝೀ ಕುಟುಂಬ ಪ್ರಸಿದ್ಧ ನಿರೂಪಕಿ ಪ್ರಶಸ್ತಿ,
  3. ೨೦೧೫ : 'ಬೆಂಕಿ ಪಟ್ಣ' ಕನ್ನಡ ಚಲನ ಚಿತ್ರದಲ್ಲಿ, ಉತಮ ನಾಯಕಿ ಪ್ರಶಸ್ತಿ' [೪]
  4. ೨೦೧೮ : ಕೆಂಪೇಗೌಡ ಪ್ರಶಸ್ತಿ. [೫]

ಟಿವಿ ಉದ್ಯೋಗ[ಬದಲಾಯಿಸಿ]

  1. ೨೦೦೫-ಟೆಲಿ ಅಂತಾಕ್ಷರಿ
  2. ೨೦೦೬-ಡಿಮ್ಯಾಂಡಫ್ಫೊ ಡಿಮ್ಯಾಂಡು
  3. ೨೦೦೬-ಸ್ಟಾರ್ ಲೈವ್
  4. ೨೦೦೭-ನಮಸ್ತೇ ಕಸ್ತೂರಿ
  5. ೨೦೧೫-ಬಿಗ್ ಬಾಸ್
  6. ೨೦೧೫-ಸರಿಗಮಪ[೬]
  7. ೨೦೧೭-ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ .[೭]

ಉಲ್ಲೇಖಗಳು[ಬದಲಾಯಿಸಿ]

  1. "Anushree Biography, Movies List, Age, Height, Caste, Lesser Known Facts". Archived from the original on 2020-04-28. Retrieved 2020-04-13.
  2. Focus-is-to-Become-a-Good-Actor-Not-the-Top-Heroine
  3. Karnataka State Film Award for Best Dubbing Artist to Anushree, for the (female lead role) Reema vohra, 2010-11
  4. 'ಬೆಂಕಿ ಪಟ್ಣ' ಚಲನ ಚಿತ್ರದಲ್ಲಿ ನಾಯಕಿಯ ಪಾತ್ರ
  5. www.newindianexpress.com/states/karnataka/2018/aug/16/278-people-to-be-awarded-on-kempegowda-jayanti-1858437.html '278 people to be awarded on Kempegowda Jayanti, Awardees also include directors T N Seetharam, B Suresh and Kudlu Ramakrishna, and television anchor Anushree. 16th August 2018
  6. https://timesofindia.indiatimes.com/tv/news/kannada/Anushree-in-demand/articleshow/48331601.cms
  7. "Kannada host Anushree bags 'Famous Anchor' award - Times of India". The Times of India (in ಇಂಗ್ಲಿಷ್). Retrieved 18 December 2019.
"https://kn.wikipedia.org/w/index.php?title=ಅನುಶ್ರೀ&oldid=1052877" ಇಂದ ಪಡೆಯಲ್ಪಟ್ಟಿದೆ