ಅನುಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಶ್ರೀ[೧] ಒಬ್ಬ ಭಾರತೀಯ ನಟಿ ಮತ್ತು ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ನಿರೂಪಕಿ ಆಗಿದ್ದಾರೆ . ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.

ಅನುಶ್ರೀ
ಜನನ (1987-01-25) ೨೫ ಜನವರಿ ೧೯೮೭ (ವಯಸ್ಸು ೩೭)
ಹಳೆ ವಿದ್ಯಾರ್ಥಿಮಂಗಳೂರು ವಿಶ್ವವಿದ್ಯಾನಿಯ
ಉದ್ಯೋಗನಿರೂಪಕಿ, ನಟಿ
ಸಕ್ರಿಯ ವರ್ಷಗಳು2006– ಪ್ರಸ್ತುತ
ಯುಟ್ಯೂಬ್ ಮಾಹಿತಿ
ಚಾನಲ್Anushree Anchor
ಸಕ್ರಿಯ ಅವಧಿ2019– ಪ್ರಸ್ತುತ
ಲೇಖನ
  • ಮನೋರಂಜನೆ
ಚಂದಾದಾರರು9 ಲಕ್ಷದ 58 ಸಾವಿರ
ಒಟ್ಟು ವೀಕ್ಷಿಸಿ120,635,430
ಚಂದಾದಾರರು ಮತ್ತು ಒಟ್ಟು ವೀಕ್ಷಣೆ ಎಣಿಕೆ 11ನೇ ಮಾರ್ಚ್ 2024ವರೆಗೆ ಟಿಲ್।


ಜನನ ಹಾಗೂ ಬಾಲ್ಯ[ಬದಲಾಯಿಸಿ]

ಅನುಶ್ರೀ ಬೆಂಗಳೂರಿನಲ್ಲಿ ೨೫ ಜನವರಿ ೧೯೮೭ ರಲ್ಲಿ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೆ ಜನಿಸಿದರು. ಇವರದು ತುಳು ಮಾತಾಡುವ ಕುಟುಂಬವಾಗಿತ್ತು. ಇವರ ತಮ್ಮ ಅಭಿಜಿತ್. ಬಾಲ್ಯದಲ್ಲೇ ಅನುಶ್ರೀ ಇವರ ತಂದೆ ತಾಯಿ ಬೇರೆಯಾಗಿದ್ದರು.

ಇವರು ೫ನೇ ತರಗತಿವರೆಗೆ ಬೆಂಗಳೂರಿನ ಸೈಂಟ್ ಥೋಮಸ್ [ಶಾಶ್ವತವಾಗಿ ಮಡಿದ ಕೊಂಡಿ] ಶಾಲೆಯಲ್ಲಿ ಕಲಿತಿದ್ದರು. ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ತಮ್ಮ ಶಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಪದವಿ ಪೂರ್ವ ಶಿಕ್ಷಣ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

ವೃತ್ತಿ[ಬದಲಾಯಿಸಿ]

ಮಂಗಳೂರು ಮೂಲದ ಪ್ರಾದೇಶಿಕ ವಾಹಿನಿಯಾದ ನಮ್ಮ ಟಿವಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೊ ಡಿಮ್ಯಾಂಡು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಗ್ ಬಾಸ್ ಕನ್ನಡ- ಸೀಸನ್ 1' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಟಿವಿ 9 ಫಿಲ್ಮ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಅವರು ಬೆಂಕಿಪಟ್ಟಣ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು[೨]. ಮುರಳಿ ಮೀಟ್ಸ್ ಮೀರಾ ಎಂಬ ಚಲನಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ.

ಕೃಷಿ ಆಸಕ್ತಿ[ಬದಲಾಯಿಸಿ]

ಅನುಶ್ರೀ ಅವರು ನಟ ದರ್ಶನ್ ತೂಗುದೀಪ ಅವರಂತೆ ಕೃಷಿ ಆಸಕ್ತಿ ಹೊಂದಿದ್ದಾರೆ. ಹಾಸನದ ಹತ್ತಿರ 30 ಎಕರೆ ಜಮೀನನ್ನು ಖರೀದಿಸಿದ್ದಾರೆ. ಆಧಿಕ ಲಾಭವಿರುವ ಅಡಿಕೆ ತೋಟ ಮಾಡಿದ್ದಾರೆ. 2020ರಲ್ಲಿ ಕ್ಯಾಸನೂರು ನಾಟಿ ಅಡಿಕೆ ತಳಿ ಸಸಿಗಳನ್ನು ತರಿಸಿ ತೋಟ ಕಟ್ಟಿದ್ದಾರೆ.

ದೂರದರ್ಶನ[ಬದಲಾಯಿಸಿ]

ರಿಯಾಲಿಟೀ ಶೋಗಳು[ಬದಲಾಯಿಸಿ]

ವರ್ಷ ಶೀರ್ಷಿಕೆ ಟಿಪ್ಪಣಿ ಚಾನೆಲ್
2005 ಟೆಲಿ ಅಂತ್ಯಾಕ್ಷರಿ ನಿರೂಪಕಿ ನಮ್ಮ ಟಿವಿ
2006 ಡಿಮಾಂಡ್‌ಪ್ಪೋ ಡಿಮಾಂಡು ನಿರೂಪಕಿ ಈ ಟಿವಿ ಕನ್ನಡ
2006 ಸ್ಟಾರ್ ಲೈವ್ ನಿರೂಪಕಿ ಸ್ಟಾರ್ ಸುವರ್ಣ
2007 ನಮಸ್ತೆ ಕಸ್ತೂರಿ ನಿರೂಪಕಿ ಕಸ್ತೂರಿ ಟಿವಿ
2007 ರೀಲ್ ಸುದ್ದಿ
2008 ಕುಣಿಯೋಣ ಬಾರಾ ಸ್ಪರ್ಧಿ ಝೀ ಕನ್ನಡ
2008 ಸಿನಿಮಾ ಪನೋರಮ
2011 ಸೂಪರ್ (ಸೀಸನ್ 1) ನಿರೂಪಕಿ ಈ ಟಿವಿ ಕನ್ನಡ
2012 ಸೂಪರ್ (ಸೀಸನ್ 2) ನಿರೂಪಕಿ ಈ ಟಿವಿ ಕನ್ನಡ
2013 ಬಿಗ್ ಬಾಸ್ ಕನ್ನಡ ಸೀಸನ್ 1 ಸ್ಪರ್ಧಿ ಈ ಟಿವಿ ಕನ್ನಡ
2014 ಚಿನ್ನದ ಬೇಟೆ ನಿರೂಪಕಿ ಕಸ್ತೂರಿ ಟಿವಿ
2015 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 10) ನಿರೂಪಕಿ[೩] ಝೀ ಕನ್ನಡ
2015 ಸ್ವಲ್ಪ ಆಡ್ಜೆಸ್ಟೆ ಮಾಡ್ಕೋಳ್ಳಿ ನಿರೂಪಕಿ ಸ್ಟಾರ್ ಸುವರ್ಣ
2016 ಸ ರಿ ಗ ಮ ಪ (ಸೀಸನ್ 11) ನಿರೂಪಕಿ ಝೀ ಕನ್ನಡ
2016 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 12) ನಿರೂಪಕಿ ಝೀ ಕನ್ನಡ
2016 ಡಾನ್ಸ್ ಕರ್ನಾಟಕ ಡಾನ್ಸ್ ನಿರೂಪಕಿ ಝೀ ಕನ್ನಡ
2017 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 13) ನಿರೂಪಕಿ ಝೀ ಕನ್ನಡ
2017 ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ ನಿರೂಪಕಿ[೪] ಝೀ ಕನ್ನಡ
2017 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 14) ನಿರೂಪಕಿ ಝೀ ಕನ್ನಡ
2018 ಡಿಕೆಡಿ ಲಿಟ್ಲ್ ಮಾಸ್ಟರ್ ನಿರೂಪಕಿ ಝೀ ಕನ್ನಡ
2019 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 15) ನಿರೂಪಕಿ ಝೀ ಕನ್ನಡ
2019 ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ (ಸೀಸನ್ 2) ನಿರೂಪಕಿ ಝೀ ಕನ್ನಡ
2020 ಸ ರಿ ಗ ಮ ಪ (ಸೀಸನ್ 17) ನಿರೂಪಕಿ ಝೀ ಕನ್ನಡ
2021 ಡಾನ್ಸ್ ಕರ್ನಾಟಕ ಡಾನ್ಸ್ ನಿರೂಪಕಿ ಝೀ ಕನ್ನಡ
2021 ಸ ರಿ ಗ ಮ ಪ ಲಿಟ್ಲ್ ಚಾಂಪಿಯನ್‌ಶಿಪ್ (ಸೀಸನ್ 18) ನಿರೂಪಕಿ ಝೀ ಕನ್ನಡ
2022 ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ನಿರೂಪಕಿ ಝೀ ಕನ್ನಡ
2022 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 19) ನಿರೂಪಕಿ ಝೀ ಕನ್ನಡ
2023 ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 7 ನಿರೂಪಕಿ ಝೀ ಕನ್ನಡ


ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಶಿರ್ಷಿಕೆ ಪಾತ್ರ ಟಿಪ್ಪಣಿ Ref.
2011 ಭೂಮಿತಾಯಿ ಗೌರಿ
2011 ಮುರಳೀ ಮೀಟ್ಸ್ ಮೀರಾ ಮೀರಾ ಕಂಠದಾನ
2012 ಬೆಳ್ಳಿ ಕಿರಣ ಅನನ್ಯ
2014 ಟ್ಯೂಬ್‌ಲೈಟ್ ಸಂಧ್ಯಾ
2015 ಬೆಂಕಿಪಟ್ನಾ ಪಾವನಿ
2015 ರಿಂಗ್ ಮಾಸ್ಟರ್(2015) ಮಧು
2015 ಉತ್ತಮ ವಿಲನ್ ತಮಿಳು ಸಿನಿಮಾ
ವಿಶೇಷ ಪಾತ್ರ
[೫]
2016 ಮಾದ ಮತ್ತು ಮಾನಸಿ ಐಟಂ ಡಾನ್ಸರ್ ವಿಶೇಷ ಪಾತ್ರ [೬]
2017 ಉಪ್ಪು ಹುಳಿ ಖಾರ ಜಾಹ್ನವಿ

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಪ್ರಶಸ್ತಿಗಳು ವರ್ಗ ಫಲಿತಾಂಶ ಇತರೆ ಟಿಪ್ಪಣಿಗಳು
2011 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಉತ್ತಮ ಕಂಠದಾನ ಕಲಾವಿದೆ ಗೆಲುವು ಮುರಳಿ ಮೀಟ್ಸ್ ಮೀರಾ ಸಿನಿಮಾಕ್ಕಾಗಿ [೭]
2015 ಝೀ ಕುಟುಂಬ ಅವಾರ್ಡ್ಸ್ ಪ್ರಸಿದ್ದ ನಿರೂಪಕಿ ಗೆಲುವು
2015 NAK ಮೀಡಿಯಾ ಅಚೀವ್‌ಮೆಂಟ್ ಅವಾರ್ಡ್ ಉತ್ತಮ ಚೊಚ್ಚಲ ನಟಿ ಗೆಲುವು ಬೆಂಕಿ ಪಟ್ಟಣ ಸಿನಿಮಾಕ್ಕಾಗಿ[೮]
2016 ಝೀ ಕುಟುಂಬ ಅವಾರ್ಡ್ಸ್ 2016 ಉತ್ತಮ ನಿರೂಪಕಿ ಗೆಲುವು
2017 ಝೀ ಕುಟುಂಬ ಅವಾರ್ಡ್ಸ್ 2017 ಪ್ರಸಿದ್ದ ನಿರೂಪಕಿ ಗೆಲುವು
2018 ಕೆಂಪೆಗೌಡ ಪ್ರಶಸ್ತಿ ಗೆಲುವು [೯]
2018 ಝೀ ಕುಟುಂಬ ಅವಾರ್ಡ್ಸ್ (2018) ನೆಚ್ಚಿನ ನಿರೂಪಕಿ ಗೆಲುವು
2019 ಝೀ ಕುಟುಂಬ ಅವಾರ್ಡ್ಸ್ (2019) ನೆಚ್ಚಿನ ನಿರೂಪಕಿ ಗೆಲುವು
2020 ಝೀ ಕುಟುಂಬ ಅವಾರ್ಡ್ಸ್ (2020) ನೆಚ್ಚಿನ ನಿರೂಪಕಿ ಗೆಲುವು
2021 ಝೀ ಕುಟುಂಬ ಅವಾರ್ಡ್ಸ್ (2021) ನೆಚ್ಚಿನ ನಿರೂಪಕಿ ಗೆಲುವು
2022 ಝೀ ಕುಟುಂಬ ಅವಾರ್ಡ್ಸ್ (2022) ನೆಚ್ಚಿನ ನಿರೂಪಕಿ ಗೆಲುವು


ಉಲ್ಲೇಖಗಳು[ಬದಲಾಯಿಸಿ]

  1. "Anushree Biography, Movies List, Age, Height, Caste, Lesser Known Facts". Archived from the original on 2020-04-28. Retrieved 2020-04-13.
  2. Focus-is-to-Become-a-Good-Actor-Not-the-Top-Heroine
  3. https://timesofindia.indiatimes.com/tv/news/kannada/Anushree-in-demand/articleshow/48331601.cms
  4. "Kannada host Anushree bags 'Famous Anchor' award - Times of India". The Times of India (in ಇಂಗ್ಲಿಷ್). Retrieved 18 December 2019.
  5. "Anushree in demand - Times of India". Timesofindia.indiatimes.com. Retrieved 2016-07-24.
  6. "Anushree to introduce characters in Madhu Mathu Manasi - Times of India". Timesofindia.indiatimes.com. 2015-08-19. Retrieved 2016-07-24.
  7. Karnataka State Film Award for Best Dubbing Artist to Anushree, for the (female lead role) Reema vohra, 2010-11
  8. 'ಬೆಂಕಿ ಪಟ್ಣ' ಚಲನ ಚಿತ್ರದಲ್ಲಿ ನಾಯಕಿಯ ಪಾತ್ರ
  9. www.newindianexpress.com/states/karnataka/2018/aug/16/278-people-to-be-awarded-on-kempegowda-jayanti-1858437.html '278 people to be awarded on Kempegowda Jayanti, Awardees also include directors T N Seetharam, B Suresh and Kudlu Ramakrishna, and television anchor Anushree. 16th August 2018
"https://kn.wikipedia.org/w/index.php?title=ಅನುಶ್ರೀ&oldid=1215086" ಇಂದ ಪಡೆಯಲ್ಪಟ್ಟಿದೆ