ಅಂತರರಾಷ್ಟ್ರೀಯ ಸಂಘಟನೆಗಳು
ಸಾರ್ವಭೌಮ ರಾಷ್ಟ್ರಗಳು ಅಥವಾ ರಾಷ್ಟ್ರ ಸಂಘಟನೆಗಳು (ಯುರೋಪಿಯನ್ ಒಕ್ಕೂಟದ ಹಾಗೆ) ಸೇರಿ ಸರಕಾರೀ ಮಟ್ಟದಲ್ಲಿ ಒಪ್ಪಂದ ಮಾಡಿಕೊಂಡು ಸ್ಥಾಪಿಸುವ ಸಂಘಟನೆಗಳು ಅಂತಾರಾಷ್ಟ್ರೀಯ ಸಂಘಟನೆಗಳು ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು ಎಂದು ಕರೆಯಲ್ಪಡುತ್ತವೆ.
ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಬೆಳೆದಂತೆಲ್ಲ ಜಾಗತಿಕ ಸಮಸ್ಯೆಗಳನ್ನು ಸೌಹಾರ್ದದಿಂದ ಬಿಡಿಸಬಲ್ಲ ಜಾಗತಿಕ ಪ್ರಗತಿಯನ್ನು ಸಾಧಿಸಬಲ್ಲ ಅಂತಾರಾಷ್ಟ್ರೀಯ ಸಂಸ್ಥೆಗಳ ಅಗತ್ಯ ಹೆಚ್ಚಾಗುತ್ತದೆ. ಇಂಥ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕೆನ್ನುವ ಅಭಿಪ್ರಾಯ ಹೊಸದೇನಲ್ಲ. ಪ್ರಪಂಚ ಅನೇಕ ವರ್ಷಗಳಿಂದಲೂ ಇವುಗಳ ಸ್ಥಾಪನೆಗೆ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಪ್ರಾಚೀನ ಗ್ರೀಕರು ಇಂಥ ಕೆಲವು ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಪುರಾತನ ರೋಮನ್ನರೂ ಇಂಥ ಸಂಸ್ಥೆಯ ಅಗತ್ಯವನ್ನು ಮನಗಂಡಿದ್ದರು. ಆಧುನಿಕ ಕಾಲದಲ್ಲಿ ಅನೇಕ ತತ್ತ್ವಜ್ಞಾನಿಗಳೂ ರಾಜನೀತಿನಿಪುಣರೂ ಈ ಬಗೆಯ ಸಂಸ್ಥೆಗಳ ಸ್ಥಾಪನೆಗೆ ಒತ್ತಾಯ ಮಾಡಿದ್ದಾರೆ. ಅವರಲ್ಲಿ ವಿಲಿಯಮ್ ಪೆನ್, ಗ್ರೋಷಿಅಸ್, ರೂಸೋ, ಬೆಂಥಾಮ್ ಮತ್ತು ಕ್ಯಾಂಟ್ ಮುಖ್ಯರು. ಈ ದೃಷ್ಟಿಯಿಂದ ನಿಜವಾದ ಅಂತಾರಾಷ್ಟ್ರೀಯ ಸಂಸ್ಥೆ 19ನೆಯ ಶತಮಾನದಲ್ಲೇ ಪ್ರಾರಂಭವಾಯಿತೆನ್ನಬಹುದು. ಆದರೆ, ಒಂದು ಗೊತ್ತಾದ ಆಕಾರ ಪಡೆದದ್ದು 20ನೆಯ ಶತಮಾನದಲ್ಲಿ.
ಆಧುನಿಕ ಸಂಸ್ಥೆಗಳ ಉಗಮ
[ಬದಲಾಯಿಸಿ]ಆಧುನಿಕ ಅಂತಾರಾಷ್ಟ್ರೀಯ ಸಂಸ್ಥೆಯ ಮಾದರಿ 1948ರ ವೆಸ್್ಟಫೇಲಿಯ ಶಾಂತಿಕೌಲಿನಿಂದ ಉದ್ಭವಿಸಿತು. ಈ ಕೌಲು ಅಂತಾರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯಲ್ಲಿ ಒಂದು ಬಹುಮುಖ್ಯವಾದ ಮೈಲಿಗಲ್ಲಾಗಿದೆ. ವಿಯೆನ್ನ ಕಾಂಗ್ರೆಸ್ (1814-15) ನೆಪೋಲಿಯನ್ನನ ಪತನದ ಅನಂತರ ಸೇರಿ, ಪ್ರಪಂಚದ ವ್ಯವಹಾರಗಳನ್ನು ಪರಿಶೀಲಿಸಿ, ಇಂಥ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಇವುಗಳ ಜೊತೆ 19 ಮತ್ತು 20ನೆಯ ಶತಮಾನದ ಸಂಧಿಕಾಲದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಯಿತು; ಅನೇಕ ಸಮ್ಮೇಳನಗಳನ್ನು ನಡೆಸಲಾಯಿತು. ಆದಾಗ್ಯೂ ಮೊದಲನೆಯ ಮಹಾಯುದ್ಧ ಮುಗಿಯುವವರೆಗೂ ಒಂದು ಸರಿಯಾದ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಏರ್ಪಡಿಸಲು ಸಾಧ್ಯವಾಗಲಿಲ್ಲ. ಮೊದಲನೆಯ ಮಹಾಯುದ್ಧವಾದ ಮೇಲೆ, ಶಾಂತಿ ಒಪ್ಪಂದದ ತೀರ್ಮಾನದಂತೆ ಅಂತಾರಾಷ್ಟ್ರೀಯ ಸಂಸ್ಥೆಯ ಇತಿಹಾಸದಲ್ಲಿ ಮೊದಲಯದಾಗಿ ರಾಷ್ಟ್ರಗಳ ಒಕ್ಕೂಟ (ಲೀಗ್ ಆಫ್ ನೇಷನ್ಸ್) ಪ್ರಾರಂಭಿಸಿದ ನಂತರ ಈಗಿನ ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ ಆರ್ಗನೈಸೇಷನ್) ಸ್ಥಾಪನೆಯಾಯಿತು. ವಿಶ್ವದ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯ ಕಲ್ಪನೆ ನಿಧಾನವಾಗಿ ವಿಕಾಸಗೊಂಡಿತೇ ವಿನಾ, ಆಕಸ್ಮಿಕವಾಗಿ ಅಲ್ಲ.
ಇಪ್ಪತ್ತನೆಯ ಶತಮಾನದಲ್ಲಿ ಎರಡು ಸಂಸ್ಥೆಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಬಹು ಮುಖ್ಯವಾದುವು. ಮೊದಲನೆಯದು ರಾಷ್ಟ್ರಗಳ ಒಕ್ಕೂಟ. ಎರಡನೆಯದು ವಿಶ್ವಸಂಸ್ಥೆ. ಮೊದಲನೆಯ ಸಂಸ್ಥೆ ಮೊದಲನೆಯ ಮಹಾಯುದ್ಧವಾದ ಅನಂತರ 1919ರಲ್ಲಿ ಶಾಂತಿಕೌಲಿನ ಪ್ರಕಾರ ಸ್ಥಾಪಿತವಾಯಿತು. ಆಗ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಲನ್ನರೇ ಇದರ ಸ್ಥಾಪನೆಗೆ ಮುಖ್ಯ ಕಾರಣರು. ಇದರಲ್ಲಿ ಒಟ್ಟು 63 ಸದಸ್ಯ ರಾಷ್ಟ್ರಗಳಿದ್ದುವು. ಆದರೆ ನಾನಾ ಕಾರಣಗಳಿಂದ ಇದು ತನ್ನ ಧ್ಯೇಯಗಳನ್ನು ಪಾಲಿಸಲಾಗಲಿಲ್ಲ. ಜೊತೆಗೆ ಎರಡನೆಯ ಮಹಾಯುದ್ಧ 1939ರಲ್ಲಿ ಪ್ರಾರಂಭವಾಯಿತು. ಆಗ ಈ ಒಕ್ಕೂಟ ಕೊನೆಗೊಂಡಿತು. ಅದಾದ ಅನಂತರ ಎರಡನೆಯ ಮಹಾಯುದ್ಧ ನಡೆಯುತ್ತಿರುವಾಗ ಈಗಿನ ವಿಶ್ವಸಂಸ್ಥೆ 1945ರಲ್ಲಿ ಸ್ಥಾಪಿಸಲ್ಪಟ್ಟು ಈಗ ಒಟ್ಟು 193 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ.
ಉದ್ದೇಶಗಳು
[ಬದಲಾಯಿಸಿ]ಪ್ರಪಂಚದಲ್ಲಿ ಶಾಂತಿ ಮತ್ತು ರಕ್ಷಣೆ ಏರ್ಪಡಿಸಲು, ಅನಂತರ ರಾಷ್ಟ್ರೀಯ ವ್ಯವಹಾರಗಳಲ್ಲಿರುವ ಲೋಪದೋಷಗಳನ್ನು ನಿವಾರಿಸಲು, ರಾಷ್ಟ್ರಗಳು ಪರಸ್ಪರ ಸಹಕಾರ ಮತ್ತು ಸ್ನೇಹದಿಂದಿರಲು, ರಾಷ್ಟ್ರಗಳನ್ನು ಯುದ್ಧ ಮತ್ತು ಯುದ್ಧಭಯದಿಂದ ತಪ್ಪಿಸಲು, ಪ್ರಪಂಚದ ರಾಷ್ಟ್ರಗಳನ್ನು ಒಟ್ಟುಗೂಡಿಸಲು, ಯಾವುದೇ ಸಮಸ್ಯೆಗಳು ಬರಲಿ ಅವುಗಳನ್ನು ಶಾಂತಿ ಮಾರ್ಗದಿಂದಲೇ ತೀರ್ಮಾನಿಸಲು ಜನರ ಜೀವನದ ಮಟ್ಟವನ್ನು ಹೆಚ್ಚಿಸಲು ಮತ್ತು ಪ್ರಪಂಚದ ಎಲ್ಲ ರಾಷ್ಟ್ರಗಳೂ ಪ್ರಜಾಪ್ರಭುತ್ವಗಳನ್ನು ಸ್ಥಾಪಿಸಿ, ನಡೆಸಿಕೊಂಡು ಹೋಗಲು ಇಂಥ ಸಂಸ್ಥೆಗಳು ಅಗತ್ಯ. ಈ ಮೇಲ್ಕಂಡ ಆದರ್ಶಗಳು ಪ್ರಪಂಚದ ಏಳಿಗೆಗೆ ಅತ್ಯಾವಶ್ಯಕವಾಗಿರುವುದರಿಂದ, ಅಂತಾರಾಷ್ಟ್ರೀಯ ಸಂಸ್ಥೆಗಳು ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸುವ ಬಹು ಮುಖ್ಯವಾದ ಅಂಗಗಳಾಗಿವೆ.
ಪ್ರಮುಖ ಅಂತರರಾಷ್ಟ್ರೀಯ ಸಂಘಟನೆಗಳು
[ಬದಲಾಯಿಸಿ]ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ಮುಖ್ಯ ಸಂಸ್ಥೆಗಳ ಸೂಕ್ಷ್ಮಪರಿಚಯವನ್ನಿಲ್ಲಿ ಕೊಡಲಾಗಿದೆ.
ಜಾಗತಿಕ ಸಂಘಟನೆಗಳು
[ಬದಲಾಯಿಸಿ]- ಸಂಯುಕ್ತ ರಾಷ್ಟ್ರ ಸಂಸ್ಥೆ, ಮತ್ತು ಅದರ ವಿಭಾಗೀಯ ಸಂಸ್ಥೆಗಳು.
- ಇಂಟರ್ಪೋಲ್
- International Hydrographic Organization
- ವಿಶ್ವ ವ್ಯಾಪಾರ ಸಂಸ್ಥೆ
- Universal Postal Union
- ಅಂತಾರಾಷ್ಟ್ರೀಯ ಗ್ರಂಥಾಲಯ ಸಂಘಗಳ ಸಂಯುಕ್ತ ಸಂಘ (ಇಂಟನಾರ್ಯಷನಲ್ ಫೆ಼ಡರೇಷನ್ ಆ¥sóï ಲೈಬ್ರರಿ ಅಸೋಸಿಯೇಷನ್ಸ) : ಸ್ಥಾಪನೆ 1962ರಲ್ಲಿ. ಆಡಳಿತ ಕಚೇರಿ ಇಂಗ್ಲೆಂಡಿನಲ್ಲಿದೆ. ಗ್ರಂಥಾಲಯ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸುವುದು, ಅದರಲ್ಲೂ ಮುಖ್ಯವಾಗಿ ಗ್ರಂಥಾಲಯಗಳ, ಗ್ರಂಥಾಲಯ ಸಂಘಗಳ ಹಾಗೂ ಗ್ರಂಥಸೂಚಿಕಾರರ ನಡುವೆ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕವನ್ನೇರ್ಪಡಿಸುವುದು ಇದರ ಮುಖ್ಯ ಉದ್ದೇಶ. ಅಂತಾರಾಷ್ಟ್ರೀಯ ಮೈತ್ರಿ ಒಕ್ಕೂಟ (ಇಂಟನಾರ್ಯಷನಲ್ ಫೆ಼್ರಂಡ್ಷಿಪ್ ಲೀಗ್) : ಸ್ವಯಂಪ್ರೇರಿತ ಹಾಗೂ ರಾಜಕೀಯದಿಂದ ದೂರವಿರುವ ಈ ಒಕ್ಕೂಟದ ಉದ್ದೇಶ ಪ್ರಪಂಚದ ಜನರ ಪ್ರವಾಸಾಭಿಲಾಷೆ ಮೈತ್ರಿಮನೋಭಾವಗಳನ್ನು ಬೆಳೆಸುವುದೇ ಆಗಿದೆ.
- ಅಂತಾರಾಷ್ಟ್ರೀಯ ಆರೋಗ್ಯ ಶಿಕ್ಷಣದ ಬ್ರಿಟಿಷ್ ಸಂಘ (ಬ್ರಿಟಿಷ್ ಸೊಸೈಟಿ ಫಾ಼ರ್ ಇಂಟನಾರ್ಯಷನಲ್ ಹೆಲ್ತ ಎಜ್ಯುಕೇಷನ್) : ಶೈಕ್ಷಣಿಕ ವಿಧಾನಗಳಿಂದ ಜನಾರೋಗ್ಯವನ್ನು ಉತ್ತಮಗೊಳಿಸಲು ತಾಂತ್ರಿಕ ನೆರವನ್ನು ನೀಡುತ್ತಿರುವ ಈ ಸಂಘಕ್ಕೆ ಆರೋಗ್ಯ ಶಿಕ್ಷಣ ಹಾಗೂ ಕೈಗಾರಿಕಾಕ್ಷೇತ್ರದ ಪ್ರಮುಖ ಪರಿಣತರು ಸದಸ್ಯರಾಗಿದ್ದಾರೆ. ವಿಶ್ವಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು ಈ ಸಂಸ್ಥೆ ಗಣನೀಯ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಕೇಂದ್ರ ಕಚೇರಿ ಲಂಡನ್ನಿನಲ್ಲಿದೆ.
- ಅಂತಾರಾಷ್ಟ್ರೀಯ ಬೌದ್ಧಿಕ ಸಹಕಾರ ಸಂಸ್ಥೆ (ಇಂಟನಾರ್ಯಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಟಲೆಕ್ಚುಯಲ್ ಕೋಆಪರೇಷನ್) : 1922ರಲ್ಲಿ ರಾಷ್ಟ್ರಗಳ ಒಕ್ಕೂಟದ ಅಂಗವಾಗಿ ರೂಪುಗೊಂಡ ಈ ಸಂಘದ ಉದ್ದೇಶ ಸಾಹಿತ್ಯ ವಿಜ್ಞಾನ ಹಾಗೂ ಕಲೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಂತರರಾಷ್ಟ್ರೀಯ ಸಹಕಾರ ದೃಷ್ಟಿಯಿಂದ ಪರಿಶೀಲಿಸುವುದೇ ಆಗಿದೆ. ಈಗ ಈ ಸಂಸ್ಥೆಯ ಕೆಲಸವನ್ನು ಯುನೆಸ್ಕೊ ವಹಿಸಿಕೊಂಡಿದೆ.
- ಅಂತಾರಾಷ್ಟ್ರೀಯ ಭಾಷೆ : ಅಂತಾರಾಷ್ಟ್ರೀಯ ವ್ಯವಹಾರ ಮಾಧ್ಯಮವಾಗಿ ವಿಶ್ವಭಾಷೆಯೊಂದನ್ನು ರೂಪಿಸುವ ಕೆಲಸ ನಡೆದಿದೆ.
- ಅಂತಾರಾಷ್ಟ್ರೀಯ ನ್ಯಾಯ : ಅಂತಾರಾಷ್ಟ್ರೀಯ ವ್ಯವಹಾರಗಳು ಯಾವ ರೀತಿಯಲ್ಲೂ ತೊಡಕಿಲ್ಲದೆ ಸಾಗಲು, ಒದಗಬಹುದಾದ ಸಮಸ್ಯೆಗಳನ್ನು ಒಡಂಬಡಿಕೆಯ ಮೂಲಕ ಪರಿಹಾರ ಮಾಡಿಕೊಳ್ಳಲು, ಕಾಯಿದೆಗಳಿಗೆ ಮಾನ್ಯತೆ ಕೊಟ್ಟು ಪರಸ್ಪರ ಕೀರ್ತಿಗೌರವಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ತಯಾರಾದ ನ್ಯಾಯಸೂತ್ರಗಳಿವು. 1945ರಲ್ಲಿ ವಿಶ್ವಸಂಸ್ಥೆ ಈ ಬಗ್ಗೆ ಒಂದು ನ್ಯಾಯ ಪ್ರಣಾಳಿಕೆಯನ್ನು ಹೊರತಂದಿದೆ. ನ್ಯಾಯಪರಿಪಾಲನೆ, ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಷಯಗಳು ಇಲ್ಲಿ ಅಡಕವಾಗಿವೆ.
- ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಇಂಟನಾರ್ಯಷನಲ್ ಪ್ರೆಸ್ ಇನ್ಸ್ಟಿಟ್ಯೂಟ್) : ಪತ್ರಿಕಾ ಸ್ವಾತಂತ್ರ್ಯ, ಸಂಬಂಧಗಳಿಗೆ ಸಂಬಂಧಪಟ್ಟ ಸಂಸ್ಥೆ (ನೋಡಿ-ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ).
ಇತರೆ
Regional organizations
[ಬದಲಾಯಿಸಿ]ಯುರೋಪ್:
- ಯುರೋಪಿಯನ್ ಒಕ್ಕೂಟ (EU)
- Council of Europe
- European Free Trade Association (EFTA)
- European Space Agency (ESA)
- European Patent Organisation
ಏಷ್ಯಾ:
- Asian Cooperation Dialogue (ACD)
- ಆಸಿಯಾನ್ (ASEAN)
- ಸಾರ್ಕ (SAARC)
- Gulf Cooperation Council
- Colombo Plan
ಯುರೇಷ್ಯಾ:
- Commonwealth of Independent States (CIS)
- Shanghai Cooperation Organization (SCO)
- Eurasian Economic Community
- Central Asian Cooperation Organization
- GUAM
- Organization of the Black Sea Economic Cooperation (BSEC)
ಆಫ್ರಿಕ:
- ಆಫ್ರಿಕನ್ ಒಕ್ಕೂಟ
- Conseil de l'Entente
- Economic Community of West African States (ECOWAS)
- Southern African Development Community (SADC)
- Intergovernmental Authority on Development (IGAD)
- Arab Maghreb Union
Western Hemisphere:
- Organization of American States (OAS)
- South American Community of Nations
- Mercosur
- Andean Community
- Caribbean Community (CARICOM)
- Organisation of Eastern Caribbean States (OECS)
- Central American Parliament
- Rio Group
- NAFTA
- Cooperation System of the American Air Forces(SICOFAA)
Trans-atlantic:
- ನೇಟೊ (NATO)
- Organization for Security and Co-operation in Europe (OSCE)
ಆರ್ಕ್ಟಿಕ್ ಮಹಾಸಮುದ್ರ:
ಹಿಂದೂ ಮಹಾಸಾಗರ:
ಪೆಸಿಫಿಕ್ ಮಹಾಸಾಗರ:
- Asia-Pacific Economic Cooperation (APEC)
- Pacific Islands Forum
- Pacific Regional Environment Programme (SPREP)
- Secretariat of the Pacific Community
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Headquarters of International Organisation Archived 2017-03-13 ವೇಬ್ಯಾಕ್ ಮೆಷಿನ್ ನಲ್ಲಿ. List of International Organisation and their Headquarters
- Procedural history and related documents on the Articles on the Responsibility of International Organizations in the Historic Archives of the United Nations Audiovisual Library of International Law
- World News related documents Archived 2014-12-28 ವೇಬ್ಯಾಕ್ ಮೆಷಿನ್ ನಲ್ಲಿ. on the World News related documents