ನ್ಯಾಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೇಟೊ ಇಂದ ಪುನರ್ನಿರ್ದೇಶಿತ)

ನ್ಯಾಟೋ(NATO) ವಿಶ್ವದ 32 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ. ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ ಇದರ ವಿಸ್ತೃತ ರೂಪ.


ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ೧೯೪೯ಮಾರ್ಚ್ ೧೭ರಂದು ಬ್ರಸೆಲ್ಸ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬೆಲ್ಜಿಯಮ್, ಇಂಗ್ಲೆಂಡ್, ಫ್ರಾನ್ಸ್, ಲಕ್ಸೆಮ್ಬರ್ಗ್, ನೆದರ್ರ್‍ಲ್ಯಾಂಡ್ ದೇಶಗಳು ಸಹಿ ಹಾಕಿದ್ದವು. ರಷ್ಯಾವನ್ನು ಮಿಲಿಟರಿ ಶಕ್ತಿ ಮೂಲಕ ಎದುರಿಸುವುದಕ್ಕೆ ಅಮೇರಿಕದ ಅಗತ್ಯವನ್ನು ಮನಗಂಡ ಈ ರಾಷ್ಟ್ರಗಳು, ಅಮೆರಿಕವನ್ನು ನ್ಯಾಟೋದ ಸದಸ್ಯರಾಷ್ಟ್ರವಾಗಲು ಆಹ್ವಾನಿಸಿದವು. ಈ ಹೊತ್ತಿಗೆ ಪಶ್ಚಿಮ ಯುರೋಪ್ ಒಕ್ಕೂಟದ ರೂಪ ಪಡೆದುಕೊಂಡಿತ್ತು.

ವಾಷಿಂಗ್ಟನ್ನಲ್ಲಿ ೧೯೪೯ಏಪ್ರಿಲ್ ೪ರಂದು ಕೆನಡಾ, ಪೋರ್ಚುಗಲ್, ಇಟಲಿ, ನಾರ್ವೆ, ಡೆನ್ಮಾರ್ಕ್, ಐಸ್ ಲ್ಯಾಂಡ್ ಮತ್ತು ಹಳೆ ಸದಸ್ಯರು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ನಂತರ ನ್ಯಾಟೋ ಅಸ್ತಿತ್ವಕ್ಕೆ ಬಂತು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಈ ಸಂಘದ ಅಧಿಕೃತ ಭಾಷೆಗಳು. ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ.

"https://kn.wikipedia.org/w/index.php?title=ನ್ಯಾಟೋ&oldid=1170953" ಇಂದ ಪಡೆಯಲ್ಪಟ್ಟಿದೆ