ವಿಕಿಪೀಡಿಯ:ಪತ್ರಿಕೆ:೨೦೧೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮುದಾಯದ ಮುಖಾಮುಖಿ[ಬದಲಾಯಿಸಿ]

ಸಮುದಾಯದ ನಡುವಿನ ವಿಚಾರವಿನಿಮಯ ಮತ್ತು ಸಂಪರ್ಕ ಕೊಂಡಿಗಳನ್ನು ಹೆಚ್ಚಿಸಲು ಸಮ್ಮಿಲನಗಳನ್ನು ಹಮ್ಮಿಕೊಳ್ಳಲಾಯಿತು.

ಆಯೋಜಿಸಿರುವ ಸಮ್ಮಿಲನಗಳ ಪಟ್ಟಿ

  • ಸಮ್ಮಿಲನ/೧ : ಬೆಂಗಳೂರು - ಜನವರಿ ೧೨, ೨೦೧೨
  • ಸಮ್ಮಿಲನ/೨ : ಬೆಂಗಳೂರು - ಫೆಬ್ರವರಿ ೧೬, ೨೦೧೨ (ಐ.‌ಆರ್.ಸಿ)
  • ಸಮ್ಮಿಲನ/೩ : ಬೆಂಗಳೂರು - ಮಾರ್ಚ್ ೦೭, ೨೦೧೨ (ಐ.‌ಆರ್.ಸಿ)
  • ಸಮ್ಮಿಲನ/೪ : ಬೆಂಗಳೂರು - ಮಾರ್ಚ್ ೨೪, ೨೦೧೨
  • ಬೆಂಗಳೂರು ವಿಕಿಪೀಡಿಯ ಸಮ್ಮಿಲನ ೪೪ ಮತ್ತು ೪೫ ರಲ್ಲಿ ಮತ್ತೆ ಒಂದುಗೂಡಿದ ಕನ್ನಡ ವಿಕಿಪೀಡಿಯನ್ನರು ವಿಕ್ಷನರಿ ಹಾಗೂ ವಿಕಿಪೀಡಿಯ ಸುತ್ತಲಿನ ಅಭಿವೃದ್ದಿಯ ಬಗ್ಗೆ ಅನೇಕ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ೨೯, ಏಪ್ರಿಲ್ ೨೦೧೨ ರ ೪೫ನೇ ಬೆಂಗಳೂರು ವಿಕಿಪೀಡಿಯ ಸಮ್ಮಿಲನದಲ್ಲಿ ವಿಕಿಮೀಡಿಯ ಫೌಂಡೇಷನ್‌ನ ಬ್ಯಾರಿ ನಮ್ಮೊಡಗೂಡಿದ್ದು ವಿಶೇಷ.
  • ೯ನೇ ವಾರ್ಷಿಕೋತ್ಸವ ಸಮ್ಮಿಲನ - ಜೂನ್ ೧೨, ೨೦೧೨
  • ಸಮ್ಮಿಲನ/೫ : ಬೆಂಗಳೂರು - ಅಕ್ಟೋಬರ್ ೭, ೨೦೧೨

ಕಾರ್ಯಾಗಾರಗಳು[ಬದಲಾಯಿಸಿ]

ವಿಕಿಪೀಡಿಯ:ಕಾರ್ಯಾಗಾರ ದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು

  • ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ‌ನಲ್ಲಿ ವಿಕಿಮೀಡಿಯ ಇಂಡಿಯ ತಂಡದ ಜೊತೆ ದ್ರಾವಿಡ ಭಾಷೆಗಳ ವಿಕಿಪೀಡಿಯ ಸಂಪಾದನೆ ಕಾರ್ಯಾಗಾರದಲ್ಲಿ ಕನ್ನಡ ವಿಕಿಪೀಡಿಯವನ್ನೂ ಪರಿಚಯಿಸಲಾಯಿತು. ೬ನೇ ಆಗಸ್ಟ್ ೨೦೧೨. ಇದರ ವರದಿ ವಿಕಿಮೀಡಿಯ ಇಂಡಿಯಾ ಬ್ಲಾಗ್‌ನಲ್ಲಿ ಲಭ್ಯವಿದೆ.
  • ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಕಿ ಕಾರ್ಯಾಗಾರ , ೧೫ನೇ ಸೆಪ್ಟೆಂಬರ್ ೨೦೧೨

ಸಮುದಾಯ ಜಾಲತಾಣಗಳಲ್ಲಿ[ಬದಲಾಯಿಸಿ]

  • ಫೇಸ್‌ಬುಕ್ ನಲ್ಲಿ ಕನ್ನಡ ವಿಕಿಪೀಡಿಯ ಗುಂಪನ್ನು ಸೃಷ್ಟಿಸಲಾಯಿತು - ಸಧ್ಯಕ್ಕೆ ಇದರ ಸದಸ್ಯರ ಸಂಖ್ಯೆ ೧೮೦೦ನ್ನೂ ಮೀರಿದೆ
http://www.facebook.com/groups/kannadawikipedia | kannadawikipedia@groups.facebook.com
  • ಫೇಸ್‌ಬುಕ್‌ನ ಕನ್ನಡ ವಿಕಿಪೀಡಿಯ ಪುಟದ ಮೂಲಕ ವಿಕಿಪೀಡಿಯ ಸಮುದಾಯದ ಚಟುವಟಿಕೆಗಳನ್ನು ಹಂಚಿಕೊಳ್ಳಲಾಯ್ತು
  • ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್ #wikipedia-kn ಅನ್ನು http://irc.freenode.net ನಲ್ಲಿ ಪ್ರಾರಂಭಿಸಲಾಗಿದ್ದು, ಮಾಸಿಕ ಮತ್ತು ತಾಂತ್ರಿಕ ತಂಡಗಳ ಸಂವಾದಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳಲಾಗಿದೆ.

ಯೋಜನೆಗಳ ಸುತ್ತ[ಬದಲಾಯಿಸಿ]

ಕನ್ನಡ ವಿಕಿಪೀಡಿಯ[ಬದಲಾಯಿಸಿ]

ವಿಕಿಪೀಡಿಯ:ಯೋಜನೆ/ಅನುವಾದಗೊಂಡ_ಲೇಖನಗಳ_ಸಂವರ್ಧನಾ_ಯೋಜನೆ[ಬದಲಾಯಿಸಿ]

ಸುಮಾರು ೨೦೧೦ - ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್‌ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.

ಪ್ರಾರಂಭದಲ್ಲಿ, ೧೨೦೦ ಲೇಖನಗಳು ಇರಬಹುದು ಎಂದು ಕೊಂಡಿದ್ದೆವು - ಆದರೆ ಈ ಸಂಖ್ಯೆ ಸುಮಾರು ೨೦೦೦ ಲೇಖನಗಳನ್ನು ಮುಟ್ಟಬಹುದು ಎನಿಸುತ್ತಿದೆ. ಇದರರ್ಥ ಕನ್ನಡ ವಿಕಿಪೀಡಿಯಾದಲ್ಲಿ ಈಗಿರುವ ೨೦ ಪ್ರತಿಶತ ಲೇಖನಗಳು ಗೂಗಲ್‌ನ ಯೋಜನೆಯಿಂದಾಗಿ ಸೇರ್ಪಡೆ ಆಗಿವೆ ಎಂದಾಯ್ತು.

ನಮ್ಮಲ್ಲಿ ಕೆಲವು ಕನ್ನಡ ವಿಕಿಪೀಡಿಗರು ಈ ಲೇಖನಗಳನ್ನು ಹೇಗೆ ಉತ್ತಮ ಪಡಿಸುವುದು ಎಂಬ ಬಗ್ಗೆ ಕೆಲಸ ಮಾಡುತ್ತಿದ್ದು, ಈ ಲೇಖನಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯಕ್ಕೆ ಒಂದಿಷ್ಟು ಉತ್ತಮ ಮಾಹಿತಿ ಕಲೆ ಹಾಕುವ ಉದ್ದೇಶ ನಮ್ಮದು - ಮತ್ತು ವಿಕಿಯೋಜನೆ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ ಯ ಪ್ರಾರಂಭವನ್ನು ಈ ಮೂಲಕ ಪ್ರಕಟಿಸಲು ಹರ್ಷಿಸುತ್ತೇವೆ.

ಈ ಯೋಜನೆಯ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳನ್ನು, ಚರ್ಚೆಗಳನ್ನು ಹಮ್ಮಿಕೊಂಡಿದ್ದೆವು ಮತ್ತು ವಾರದ ಹಿಂದಷ್ತೇ ಒಂದು ಐ.‌ಆರ್.ಸಿ ಚರ್ಚೆ ಈ ಯೋಜನೆಯ ಬಗ್ಗೆ ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್ #wikipedia-kn ನಲ್ಲಿ ನೆಡೆಯಿತು. ಯೋಜನಾ ಪುಟ ಹಾಗೂ ಐ.‌ಆರ್.ಸಿ ಯ ಚರ್ಚೆಗಳಲ್ಲಿ ನಾವೆಲ್ಲರೂ ಒಪ್ಪಿಗೆ ಸೂಚಿಸಿ, ನಿರ್ಣಯಕ್ಕೆ ಬಂದ ಕೆಲವು ಅಂಶಗಳು ಇಲ್ಲಿವೆ.

  • ನಮ್ಮ ಕೆಲಸಕ್ಕೆ ಒಂದು ನಿಶ್ಚಿತ ರೂಪ ಕೊಡಲು, ಈ ಯೋಜನೆಯನ್ನು ೧೪ ಸಣ್ಣ ಕಾರ್ಯಗಳಾಗಿ ವಿಂಗಡಿಸಲಾಗಿದೆ.
  • ಲೇಖನಗಳಲ್ಲಿ ಕಂಡುಬರುವ ಕೆಂಪುಬಣ್ಣದ ಮುರಿದ ಕೊಂಡಿಗಳನ್ನು ಈಗಲೇ ತೆಗೆಯುವುದು ಬೇಡ ಎಂದು ನಿರ್ಧರಿಸಲಾಗಿದೆ ( ಬೇರೆ ಸಂವರ್ಧನಾ ಯೋಜನೆಗಳನ್ನು ಹೊರತುಪಡಿಸಿ) - ಏಕೆಂದರೆ ಇದರ ಮೂಲಕ ಹೊಸ ವಿಕಿ ಸಂಪಾದಕರನ್ನು ಈ ಲೇಖನಗಳ ಸೃಷ್ಟಿಗೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಬೇಕಿದ್ದಲ್ಲಿ ಮುಂದೆ ಈ ನಿರ್ಣಯವನ್ನು ಮತ್ತೆ ಪರಾಮರ್ಶಿಸಬಹುದು.
  • ಲೇಖನದ ಪರಿಚಯ ಭಾಗಗಳನ್ನು ಉತ್ತಮ ಪಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ತೆಗೆದು ಕೊಂಡಿದ್ದು, ಇತರೆ ಭಾಗಗಳನ್ನು ಬಗ್ಗೆ ಸದ್ಯ ಅಲೋಚಿಸದಿರುವಂತೆ ತೀರ್ಮಾನಿಸಿದ್ದೇವೆ. ಯಾವುದೇ ಲೇಖನವನ್ನು ಸಮೃದ್ಧಗೊಳಿಸಲು ತೊಡಗಿದಲ್ಲಿ ಬಹಳಷ್ಟು ಕೆಲಸಗಳು ಒತ್ತಟ್ಟಿಗೆ ಬರುತ್ತಲೇ ಹೋಗುವುದರಿಂದ ಈ ಒಂದು ನಿರ್ಣಯಕ್ಕೆ ಬರಲಾಗಿದೆ. ಲೇಖನದ ಇತರ ಭಾಗಗಳನ್ನು ಇದಕ್ಕಿಂತಲೂ ಹೆಚ್ಚು ಉತ್ತಮ ಪಡಿಸುವ ಕಾರ್ಯಗಳನ್ನು ಮುಂದಕ್ಕೆ ಹಾಕಿಕೊಳ್ಳಲಾಗುವುದು.
  • ನಾವು ಅನುವಾದದಿಂದ ಪರಿಣಾಮ ಹೊಂದಿರುವ ಎಲ್ಲಾ ಲೇಖನಗಳ ಪಟ್ಟಿ ಪರಿಶೀಲಿಸಿ ಯೋಜನೆಯ ಪ್ರಾರಂಭದ ಹಂತಕ್ಕಾಗಿ ಸುಮಾರು ೧೫೦ ಲೇಖನಗಳನ್ನು ಆಯ್ಕೆ ಮಾಡಿದ್ದೇವೆ.
  • ಬಳಕೆದಾರರಿಗೆ ಸಮಯ ಹಿಡಿಯುವ ಕೆಲವು ಕಾರ್ಯಗಳನ್ನು (ಖಾಲಿ ಜಾಗಗಳು / ಸಾಲುಗಳನ್ನು ತೆಗೆಯುವುದು) ಸ್ವಯಂಚಾಲಿತವಾಗಿ ಮಾಡಬಹುದು.
  • ನಾವು ಹೊಸ ಬಳಕೆದಾರರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡ ಆನ್ಲೈನ್ ಮತ್ತು ಆಫ್ಲೈನ್ ಸಮುದಾಯಗಳಲ್ಲಿ ಈ ಯೋಜನೆಯ ಪ್ರಚಾರ ಮಾಡಬೇಕಾಗಿದೆ. ಈ ಯೋಜನೆಯ ಉದ್ದೇಶ ಕೇವಲ ಲೇಖನಗಳನ್ನು ಸುಧಾರಣೆ ಮಾಡುವುದು ಮಾತ್ರವಲ್ಲ, ಸಮುದಾಯ ಕಟ್ಟವುದು ಕೂಡ ಆಗಿದೆ.
  • ಯೋಜನೆಯ ಪುಟವು ಯಾವಾಗಲೂ ಸಮುದಾಯದ ಸದಸ್ಯರು ಪ್ರಸ್ತುತ ಗಮನ ಹರಿಸುತ್ತಿರುವ ಲೇಖನಗಳ ಪಟ್ಟಿಯನ್ನು ಹೊಂದಿರುತ್ತದೆ. ಯಾವುದೇ ಇತರ ಲೇಖನದ ಮೇಲೆ ಯಾರಾದರೂ ಕೆಲಸ ಮಾಡಲು ಬಯಸುವ ಸಂದರ್ಭದಲ್ಲಿ, ಈ ಯೋಜನೆಯ ಅಂಗವಾಗಿರುವ ಎಲ್ಲಾ ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಯೋಜನೆಯ ಪುಟವನ್ನು ಒಮ್ಮೆ ಓದಿ, ನಿಮ್ಮ ಹೆಸರನ್ನೂ ಸದಸ್ಯರ ಪಟ್ಟಿಗೆ ಸೇರಿಸಿ.

ಜೊತೆಗೆ ನಮ್ಮೊಡನೆ ಈ ಕಾರ್ಯದಲ್ಲಿ ಕೈಜೋಡಿಸಿ ಹಾಗೂ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾದ ಆಸಕ್ತರನ್ನೂ ಕರೆತನ್ನಿ.

ವಿಕಿಪೀಡಿಯ:ಪತ್ರಿಕೆ[ಬದಲಾಯಿಸಿ]

ಮೊದಲ ಭಾರಿಗೆ ವಿಕಿಪೀಡಿಯ ಸುತ್ತಲೂ ನೆಡೆಯುತ್ತಿರುವ ಬೆಳವಣಿಗೆಗಳನು ಸಮುದಾಯಕ್ಕೆ ಮುಟ್ಟಿಸಲು ವಿಕಿಪೀಡಿಯ:ಪತ್ರಿಕೆ ಯನ್ನು ಆರಂಭಿಸಲಾಗಿದೆ

ಕನ್ನಡ ವಿಕ್ಷನರಿ[ಬದಲಾಯಿಸಿ]

ಪತ್ರಿಕೆಗಳಲ್ಲಿ[ಬದಲಾಯಿಸಿ]

  1. ಪ್ರಜಾವಾಣಿಯ ಕಾಮನಬಿಲ್ಲಿನಲ್ಲಿ - ಕನ್ನಡ ವಿಕಿಪೀಡಿಯ, ೬ನೇ ಸೆಪ್ಟೆಂಬರ್ ೨೦೧೨
  2. ಕನ್ನಡ ವಿಕಿಪೀಡಿಯ ೯ನೇ ವರ್ಷದ ಹರ್ಷ - ಸಂಯುಕ್ತ ಕರ್ನಾಟಕದ ವರದಿ , ೧೨ನೇ ಜೂನ್, ೨೦೧೨ (ಇ-ಪತ್ರಿಕೆ ಆವೃತ್ತಿ )
  3. ಕನ್ನಡ ವಿಕಿಪೀಡಿಯದ ೯ನೇ ಹುಟ್ಟುಹಬ್ಬ - ತಯಾರಿಗೆ ವಿಕಿಪೀಡಿಯ ಬೆಂಗಳೂರು ಸಮ್ಮಿಲನ - Oneindia Kannada
  4. ವಿಕಿಪೀಡಿಯನ್ನರ ಸಮ್ಮಿಲನ - ಉದಯವಾಣಿ ವರದಿ, ೧೨ನೇ ಜೂನ್ ೨೦೧೨ (ಇ-ಪತ್ರಿಕೆ ಆವೃತ್ತಿ)
  5. 9ನೇ ವಸಂತಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಕ್ಕೆ ಶುಭ ಹಾರೈಕೆ - ದಟ್ಸ್ ಕನ್ನಡ ಡಾಟ್ ಕಾಮ್ ವರದಿ , ೧೨ನೇ ಜೂನ್ ೨೦೧೨