ದೊಡ್ಡ ದ್ಯವರ ಜಾತ್ರೆ
ದೊಡ್ಡ ದ್ಯಾವರ ಜಾತ್ರೆ ೧೧ ವರುಷಗಳಿಗೆ ಒಮ್ಮೆ ನಡೆಯುವ ಜಾತ್ರೆ. ಈ ಜಾತ್ರೆಯು ಕೋಲಾರದಲ್ಲಿ ನಡೆಯುತ್ತದೆ. ಈ ಜಾತ್ರೆಯಲ್ಲಿ ಪಾಲ್ಗೊಳಲು ಕರ್ನಾಟಕವಲ್ಲದೆ, ತಮಿಳು ನಾಡು ಹಾಗು ಆಂಧ್ರ ಪ್ರದೇಶಧಿಂದಲೂ ಭಕ್ತಾದಿಗಳು ಬರುತ್ತಾರೆ. ಈ ಜಾತ್ರೆ ಏಪ್ರಿಲ್ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನಡಿಯುತ್ತದೆ. ಜಾತ್ರೆ ಮೂರು ದಿನಗಳ ಕಾಲ ನಡಿಯುತ್ತದೆ. ಜಾತ್ರೆಗೆ ಬರುವ ಅಪಾರ ಸಂಕ್ಯಯಾ ಭಕ್ತರು ಕೋಲಾರದ ನಗರ ದೇವತೆ ಕೋಲಾರಮ್ಮನ ದೇವಸ್ತಾನದ ಎದುರಿನಲ್ಲಿ ಇರುವ ಬೃಹದಾಕಾರದ ಕೋಲಾರಮ್ಮನ ಕೆರೆಯಲ್ಲಿ ಸಣ್ಣ ಸಣ್ಣ ಗುಡಿಸಿಲುಗಳನ್ನು ಹಾಕಿಕೊಂಡು ಜಾತ್ರೆ ನಡಿಯುವ ಮೂರು ದಿನಗಳ ಕಾಲ ವಾಸಿಸುತ್ತಾರೆ. ಮಳೆ ಕಾಲ ಇನ್ನೂ ಶುರುವಾಗಿರದ ಕರಣ ಕೋಲಾರಮ್ಮನ ಕೆರೆಯಲ್ಲಿ ನೀರು ತುಂಬಾ ಇರುವುದಿಲ್ಲ , ಇದರಿಂದ ಕೆರೆಯ ದಡದಲ್ಲಿ ಲಕ್ಷಾಂತರ ಜನರು ತಂಗಬಹುದು. ಈ ಜಾತ್ರೆಯು ನೂರಾರು ವರುಷಗಳಿಂದ ಎಡೆಬಿಡದೆ ನಡೆದುಕೊಂಡು ಬಂದಿದೆ. ಈ ಜಾತ್ರೆಯಲ್ಲಿ ಕುರುಬ ಗೌಡರು ತಮ್ಮ ಕುಲ ದೇವತೆಗಳಾದ ಬೀರೇಶ್ವರ, ಬತ್ತೆಶ್ವರ , ಸಿದ್ದೇಶ್ವರ ಹಾಗು ಗುರುಮುರ್ತೆಶ್ವರ ದೇವರುಗಳನ್ನು ಪೂಜಿಸುತ್ತಾರೆ. ಕೋಲಾರಮ್ಮನ ಕೆರೆಯ ಪಕ್ಕದಲ್ಲಿರುವ ಕುರುಬರಪೇಟೆಯಲ್ಲಿ ಈ ದೇವರುಗಳ ದೇವಸ್ತಾನಗಳಿವೆ. ಈ ದೇವರುಗಳ ಉತ್ಸವ ಮೂರ್ತಿಗಳನ್ನು ಕೋಲಾರದದಿಂದ ಸುಮಾರು ೩ ಕಿಲೋಮೀಟರು ದೂರದಲ್ಲಿರುವ ಅಂತರಗಂಗೆ ಬೆಟ್ಟಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಬರುತ್ತಾರೆ, ಹಾಗೆ ಹೋಗಿ ಬರುವಾಗ ದಾರಿಯಲ್ಲಿ ಸಿಗುವ ಎಲ್ಲ ದೇವಸ್ತಾನಗಳ ಬಳಿ ನಿಲ್ಲಿಸಿ ಭಕ್ತರು ತಮ್ಮ ತಲೆಗಳ ಮೇಲೆ ತೆಂಗಿನಕಾಯಿ ಒಡೆಯುವ ಪವಾಡವನ್ನು ಮಾಡುತ್ತಾರೆ. ಈ ಜಾತ್ರೆಗೆ ಕುರುಬ ಗೌಡ ಕುಲಸ್ತರು ದೂರದ ಊರುಗಳಿಂದ ಬರುತ್ತಾರೆ. ತೆಂಗಿನಕಾಯಿ ಪವಾಡದ ಜೊತೆಗೆ " ಕುಲಸ್ತ ಮಹಾಕೂಟ", "ನಾಗ ದೇವತೆ ತನಿ", "ಬಿಲ್ವರ್ಚೆನೆ", "ಮೇಲುದೀಪ ಪೂಜೆ" ಇತ್ಯಾದಿ ಆಚರಣೆಗಳನ್ನು ಮಾಡುತ್ತಾರೆ. ದಕ್ಷಿಣ ಕರ್ನಾಟಕದ ಹಳೆ ಕುರುಬ ಗೌಡರ ಎಲ್ಲ ಮನೆತನದ ಒಬ್ಬರಾದರು ತಮ್ಮ, ತಮ್ಮ , ಕುಲ ದೇವತೆಯನ್ನು ಪೂಜಿಸಲು ಇಲ್ಲಿಗೆ ಬಂದೆ ಬರುತ್ತಾರೆ. ಕರ್ನಾಟಕದ ಆಚರಿಸುವ ಹಬ್ಬಗಳಲ್ಲಿ ಇದು ಒಂದು ವಿಶಿಸ್ಟ ಹಬ್ಬ. ೨೦೦೯ ರಲ್ಲಿ ಅದ್ದೂರಿಯಾಗಿ ನಡೆದ ಜಾತ್ರೆ ಮತ್ತೆ ೨೦೨೦ ರಲ್ಲಿ ನಡೆಯುತ್ತದೆ, ಭಕ್ತಾದಿಗಳು ಹರಿಕೆಗಳನ್ನೂ ಮಾಡಿಕೊಂಡು ಮತ್ತು ತಮ್ಮ ಹರಿಕೆಗಳನ್ನೂ ತೀರಿಸಲು ಮತ್ತೆ ೧೧ ವರುಷಗಳ ಕಾಲ ಕಾಯಬೇಕು. ಈ ತರ ಜಾತ್ರೆಗಳನ್ನು ಕುರುಬ ಗೌಡರ ಪೂರ್ವಿಕರು ತಮ್ಮ ಜನಾಂಗದ ಜನರನ್ನು ಒಗ್ಗೂಡಿಸುವ ಮತ್ತು ತಮ್ಮ ಸಂಪ್ರದಾಯವನ್ನು ಉಳಿಸುವ ಸಲುವಾಗಿ ಮಾಡಿರಬಹುದೆಂಬ ನಂಬಿಕೆ.