ವಿಷಯಕ್ಕೆ ಹೋಗು

ಉತ್ತರಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತರಾಣಿ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. aspera
Binomial name
Achyranthes aspera
' 'ಉತ್ತರಾಣಿ ಗಿಡ'

ಅಪಮಾರ್ಗ ಒಂದು ಔಷಧೀ ಸಸ್ಯ. ಇದನ್ನು ಉತ್ತರಾಣಿಗಿಡ ಎಂದು ಕೂಡಾ ಕರೆಯಲಾಗುತ್ತದೆ. ಅಪಮಾರ್ಗ ಅಮರಾಂತಸಿಯ ಎಂದ ಸಸ್ಯ ಕುಟುಂಬಕ್ಕೆ ಸೇರಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ’ಅಪಮಾರ್ಗ’ವೆನ್ನುತ್ತಾರೆ. ಹಾಗೂ ಚಾಫ್-ಹೂವು , ಮುಳ್ಳುಗಟ್ಟಿಹೂ ಎಂದು ಕೂಡಾ ಕರೆಯಲಾಗುತ್ತದೆ.ಇದರ ಸಸ್ಯಶಾಸ್ತ್ರೀಯ ಹೆಸರು, 'Achyranthes aspera' ಯೆಂದು. ಹಾಗೆಯೇ, ತಮಿಳಿನಲ್ಲಿ, ನಾಯುವ್ರಿ, ಮಲಯಾಳಂನಲ್ಲಿ ಸಿರುಕಡಲಡಿ, ತೆಲುಗಿನಲ್ಲಿ, ಕಡಲರಿ ಕಾಟಲೇಟಿ, ಹಿಂದಿಯಲ್ಲಿ, ಅಂತಿಶ, ಚಿರ್ಚಿತಾ, ಅಪಂಗ, ಹೀಗೆ ಹಲವಾರು ಭಾಷೆಗಳಲ್ಲಿ ಬೇರೆ-ಬೇರೆ ಹೆಸರುಗಳಿಂದ ಜನಪ್ರಿಯವಾಗಿದೆ. ಹೆಚ್ಚುಕಡಿಮೆ ಎಲ್ಲಾ ಪ್ರದೇಶಗಳಲ್ಲೂ, ಬಯಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

ಉತ್ತರಾಣಿ ಗಿಡದ ಆಕಾರ

[ಬದಲಾಯಿಸಿ]

ಉತ್ತರಾಣಿ, ಗಿಡ, ಸುಮಾರು 30೦ ಸೆಂ. ಮೀ ನಿಂದ 9೦ ಸೆಂ.ಮೀಟರ್ ಎತ್ತರ ಬೆಳೆಯುವ ಗಿಡ. ಗುಲಾಬಿ ಬಣ್ಣದ ಹೂವೂಗಳು ಬಿಡುತ್ತವೆ.ಇದರ ಬೀಜ, ಬೇರು, ಕಾಂಡ,ಎಲೆ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ.

ಉತ್ತರಾಣಿಗಿಡ ಬೆಳೆಯುವ ಪ್ರದೇಶಗಳು

[ಬದಲಾಯಿಸಿ]

ಸಮಶೀತೋಷ್ಣ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ರಸ್ತೆಯಂಚಿನಲ್ಲಿ ಖಾಲಿ ನಿವೇಶನಗಳ ಅಂಚಿನಲ್ಲಿ ಹೊಲಗದ್ದೆಗಳ ಬದುವಿನಲ್ಲಿ ಎತ್ತರಕ್ಕೆ ಇವು ಬೆಳೆಯುತ್ತವೆ. ಹೆಚ್ಚುಕಡಿಮೆ ಎಲ್ಲಾ ಪ್ರದೇಶಗಳಲ್ಲೂ, ಬಯಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

ಉಪಯೋಗಗಳು

[ಬದಲಾಯಿಸಿ]
  • ಉತ್ತರಾಣಿ ಎಲೆಯ ಕಷಾಯ, ಇಲ್ಲವೇ ರಸಸೇವನೆಯಿಂದ ಮೂತ್ರವಿಸರ್ಜನೆಯ ಕ್ಲೇಶವಿರುವುದಿಲ್ಲ. ಭೇದಿಯಾಗುವ ಸಂದರ್ಭದಲ್ಲಿ ಈ ಎಲೆಯ ರಸವನ್ನು ಮೊಸರಿಗೆ ಬೆರೆಸಿಕೊಂಡು ಸೇವಿಸಿದರೆ,ತಕ್ಷಣ ಭೇದಿ ನಿಲ್ಲುತ್ತದೆ.
  • ಉತ್ತರಾಣಿ ರಸ, ಮೂಲವ್ಯಾಧಿ, ಹೊಟ್ಟೆ ನೋವು, ಸುಟ್ಟ ಗಾಯಗಳಿಗೆ ಹಾಗೂ ಚರ್ಮವ್ಯಾಧಿಗಳಿಗೆ ದಿವ್ಯೌಷಧ.
  • ಉತ್ತರಾಣಿ ಬೇರನ್ನು ಕುಟ್ಟಿ ರಸತೆಗೆದು, ನೀರಿನಲ್ಲಿ ಕುದಿಸಿ ಕುಡಿದರೆ, ನಿದ್ರಾಹೀನತೆ ದೂರವಾಗುತ್ತದೆ.
  • ಒಣಗಿದ ಉತ್ತರಾಣಿ ಕಡ್ಡಿಯ ಕಾಂಡವನ್ನು ಸುಟ್ಟು ಭಸ್ಮಮಾಡಿ, ಅದಕ್ಕೆ ಕಾಳುಮೆಣಸಿನ ಪುಡಿ, ಜೇನುತುಪ್ಪಕ್ಕೆ ೩-೪ ಚಿಟಿಕೆಹಾಕಿಕೊಂಡು ಸೇವಿಸಿದರೆ,ನೆಗಡಿ ಕೆಮ್ಮು,ರಕ್ತಹೀನತೆ, ಅಸ್ತಮಾ, ಹೃದಯ ಸಂಬಂಧೀ ಕಾಯಿಲೆಗಳಿಗೆ ಉಪಯೋಗಕಾರಿಯಾಗುತ್ತದೆ.
  • ಚೇಳು, ಜೇನುಹುಳ,ಮತ್ತಿತರ ಕೀಟಗಳುಕಡಿದಾಗ ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಲೇಪವನ್ನು ಗಾಯದಮೆಲೆ ಹಚ್ಚಿದರೆ ಉಪಶಮನವಾಗುತ್ತದೆ.
  • ಬೆಲ್ಲಕ್ಕೆ ಒಂದು ಚಮಚೆ ಉತ್ತರಾಣಿ ರಸವನ್ನು ಸೇರಿಸಿ ಬೆಳಿಗ್ಯೆ ಎದ್ದಕೂಡಲೇ ಖಾಲಿಹೊಟ್ಟೆಗೆ ಸೇವಿಸುವುದರಿಂದ ರಕ್ತಹೀನತೆಗೆ ಒಳ್ಳೆಯ ಉಪಕಾರಿಯಾಗುತ್ತದೆ.
  • ಉತ್ತರಾಣಿಯ ಭಸ್ಮ, ಕ್ಷಾರದ ಗುಣವನ್ನು ಹೊಂದಿರುವುದರಿಂದ ಬಟ್ಟೆ ತೊಳೆಯಲು ಮಾರ್ಜಕವಾಗಿಯೂ ಬಳಸಬಹುದಾಗಿದೆ.
  • ಉತ್ತರಾಣಿಯ ಭಸ್ಮ, ಉಪ್ಪು ಹಾಗೂ ಸಾಸಿವೆ ಎಣ್ಣೆಯ ಲೇಹ್ಯದಿಂದ ಹಲ್ಲುಜ್ಜಿದರೆ, ಹಲ್ಲುನೋವು ನಿವಾರಣೆಯಾಗುತ್ತದೆ. ಕೆಲವರು ಉತ್ತರಾಣಿಯ ಒಣಗಿದ ಕಡ್ಡಿಯಿಂದ ಹಲ್ಲುಜ್ಜುತ್ತಾರೆ.
  • ಉತ್ತರ ಕರ್ನಾಟಕದಲ್ಲಿ, ದೀಪಾವಳಿ ಹಬ್ಬದ ಸಮಯದಲ್ಲಿ ಸಗಣಿ-ಸುಣ್ಣ-ಕೆಮ್ಮಣ್ಣಿನಲ್ಲಿ ಪಾಂಡವ-ಕೌರವರನ್ನು ಮಾಡಿ, ಅದಕ್ಕೆ ಉತ್ತರಾಣಿ ಕಡ್ಡಿಗಳನ್ನು ಸಿಕ್ಕಿಸಿ ಮನೆಯ ಮುಂಬಾಗಿಲಿನಲ್ಲಿ ಇಡಲಾಗುತ್ತದೆ.

ಗರ್ಭಿಣಿ ಹೆಂಗಸರಿಗೆ ಉತ್ತರಾಯಣಿ ಸೂಕ್ತವಲ್ಲ

[ಬದಲಾಯಿಸಿ]

ಗರ್ಭಿಣಿ ಹೆಂಗಸರು ಇದರಿಂದ ದೂರವಿರುವುದು ಒಳ್ಳೆಯದು ಉತ್ತರಾಣಿಯ ಅಧಿಕ ಸೇವನೆಯಿಂದ ಗರ್ಭಪಾತವಾಗುವ ಸನ್ನಿವೇಶಗಳು ಹೆಚ್ಚು.

ಹೆಚ್ಚು ವಿವರಗಳನ್ನು ಸಂಗ್ರಹಿಸಲು ಸಂಪರ್ಕಿಸಿ

[ಬದಲಾಯಿಸಿ]