ಸ್ವಯಂವೈದ್ಯ

ವಿಕಿಪೀಡಿಯ ಇಂದ
Jump to navigation Jump to search
'ಸ್ವಯಂವೈದ್ಯ ಪುಸ್ತಕ'

'ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು',, ಅತ್ಯಂತ ಮುತುವರ್ಜಿಯಿಂದ ತಮ್ಮ ಹಲವು ದಶಕಗಳ ಅನುಭವದ ತಪಸ್ಸಿನಿಂದ ಸರ್ವರಿಗೂ ಉಪಯುಕ್ತವಾಗುವಂತಹ 'ಆಯುರ್ವೇದ-ಗ್ರಂಥ'ವೊಂದನ್ನು ರಚಿಸಲು ಬಹಳ ವರ್ಷಗಳಿಂದ ಶ್ರಮಿಸುತ್ತಿದ್ದರು. ಅವರ ಸಿದ್ಧಿಗಳನ್ನೆಲ್ಲಾ ಕ್ರೋಢೀಕರಿಸಿ ಶ್ರೀಗಳವರು, ಈ 'ಸ್ವಯಂವೈದ್ಯ' ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. ಈ ಪುಸ್ತಕದ ಪ್ರತಿಗಳು 'ಅನಾಥ ಸೇವಾಶ್ರಮ, ಮಲ್ಲಾಡಿಹಳ್ಳಿ'ಯಲ್ಲಿ ಉಪಲಭ್ದವಿವೆ.

'ದೈಹಿಕ ಬಲಸಂವರ್ಧನೆಯ ಬಗ್ಗೆ ತೀವ್ರ ಚಿಂತನೆ'[ಬದಲಾಯಿಸಿ]

 • 'ಶಿಕ್ಷಣ', 'ದೈಹಿಕ ಧಾರ್ಢ್ಯ', 'ಅಧ್ಯಾತ್ಮಿಕ ಶ್ರೇಯಸ್ಸು', 'ಪ್ರಾಮಾಣಿಕ ರಾಷ್ಟ್ರೀಯ ಚಿಂತನೆ', 'ದೈಹಿಕ ಬಲಸಂವರ್ಧನೆ', 'ಸಾಹಿತ್ಯ', 'ಕಲೆ'-ಎಲ್ಲದರ ಬಗ್ಗೆಯೂ 'ಸ್ವಾಮೀಜಿ' ಚಿಂತನೆ ಮಾಡಿದ್ದಾರೆ. ಅಂತೆಯೇ ಪುಸ್ತಕದಲ್ಲಿ 'ಪ್ರಾಣಾಯಾಮ', 'ಸೂರ್ಯನಮಸ್ಕಾರ', 'ಕಥಾರೂಪಕ ಯೋಗಾಸನ', 'ಷಟ್ಕರ್ಮ ವಿಧಿ', 'ದೇಹ ಸ್ವಾಸ್ಥ್ಯ'ಕ್ಕಾಗಿ 'ಯೋಗಾಸನಗಳು', 'ಗುರುನಮಸ್ಕಾರ' ಮೊದಲಾದ ಬಗ್ಗೆ ಆಧಾರಪೂರ್ವಕವಾದ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.
 • ಸ್ವಾಮೀಜಿಯವರು ಕೀರ್ತಿಗಳಿಸಿದ 'ಆಯುರ್ವೇದ ವೈದ್ಯ ಪ್ರಕಾರ'ದಲ್ಲಿ ಸಾಕಷ್ಟು 'ತಲಸ್ಪರ್ಶಿಯಾದ ಸಂಶೋಧನೆ'ಗಳನ್ನು ಮಾಡಿ, 'ಅಂಗಮರ್ದನ'ದಂತಹ ಅಪರೂಪ ಗ್ರಂಥವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ದಾರಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು-ಈಗಾಗಲೇ ಅವರು ಕನ್ನಡಿಗರಿಗೆ ಕೊಟ್ಟಿರುವ 'ಸ್ವಯಂವೈದ್ಯ,'ಹೊತ್ತಿಗೆ.

'ಸ್ವಯಂ ವೈದ್ಯ ಗ್ರಂಥದ ವೈಶಿಷ್ಟ್ಯಗಳು'[ಬದಲಾಯಿಸಿ]

 • ಈ ಗ್ರಂಥದಲ್ಲಿ, ಒಟ್ಟು ೬೧ ಪ್ರಕರಣಗಳು, ೩,೬೦೦ ಕ್ಕೂ ಮೀರಿ ಔಷಧ ಪ್ರಯೋಗಗಳನ್ನು ದಾಖಲಿಸಿದ್ದಾರೆ. ಪ್ರತಿ ಪ್ರಕರಣ ಆಯಾ ರೋಗಗಳಿಗೆ ಸಂಬಂಧಿಸಿದಸೂಕ್ಷ್ಮ ಪರಿಚಯ,ಕೊನೆಯಲ್ಲಿ ಯೋಗದಿಂದ ನಿವಾರಣೆ ಎಂಬ ಉಪಯುಕ್ತ ಪ್ರಕರಣದಿಂದ ಕೊನೆಗೊಳ್ಳುತ್ತದೆ. ಅಯುರ್ವೇದದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಗಿಡಮೂಲಿಕೆಗಳಾದ, ತುಳಸಿ, ಬೇವು, ಅಮೃತಬಳ್ಳಿ, ಆಡುಸೋಗೆ, ಇಂಗು, ಬೆಳ್ಳುಳ್ಳಿ, ನೀರುಳ್ಳಿ ,ಓಮ್, ಶುಂಠಿ,ಹಿಪ್ಪಲಿ, ಮೆಣಸು, ಉತ್ತರಣೆ, ಎಕ್ಕೆ, ಜೀರಿಗೆ, ಕೊತ್ತುಂಬರಿ, ಅಶ್ವತ್ಥ, ಅತ್ತಿಗರಿಕೆ, ತುಂಬೆ, ಸಕ್ಕರೆ, ಬೆಲ್ಲ, ಅಕ್ಕಿ, ಮೊದಲಾದ ದ್ರವ್ಯಗಳ ಉಪಯೋಗಗಳನ್ನು ವಿಸ್ತ್ರುತವಾಗಿ ವಿವರಿಸಿದ್ದಾರೆ.
 • ಪುಸ್ತಕದಲ್ಲಿ ಗಿಡಮೂಲಿಕಗಳ ಶಬ್ದಕೋಶವಿದೆ. ಚರಕ ಸಂಹಿತ, ಶುಶೃತಸಂಹಿತ, ಅಷ್ಟಾಂಗ ಹೃದಯ, ಮಾಧವನಿದಾನ,ಶಾಂ ಗ್ಙಧರ ಸಂಹಿತ,ಭಾವಪ್ರಕಾಶ,ಬಸವರಾಜೀಯ,ಮೊದಲಾದ ಗ್ರಂಥಗಳಿಂದ ವಿಷಯಗಳನ್ನು ಆಯ್ದುಕೊಳ್ಳಲಾಗಿದೆ.

ಆಯುರ್ವೇದದಲ್ಲಿ ದಿನಚರ್ಯೆ, ಋತುಚರ್ಯೆ, ಸ್ವಸ್ಥವೃತ್ತ, ಸದ್ವೃತ್ತಗಳಿಗೆ ವಿಶೇಷ ಮಹತ್ವವಿದೆ[ಬದಲಾಯಿಸಿ]

ಇವೆಲ್ಲದರಲ್ಲೂ ದಿನಚರ್ಯೆ, ಋತುಚರ್ಯೆ, ಸ್ವಸ್ಥವೃತ್ತ,ಸದ್ವೃತ್ತ-ಆರೋಗ್ಯದ ಮೂಲಸೂತ್ರ; ವಿವರವಾದ ವಿವರಣೆ,ಶರೀರ ವಿಜ್ಞಾನದಲ್ಲಿ ದೇಹಸ್ವಾಸ್ಥ್ಯ,ಅಥವಾ ಆರೋಗ್ಯವೆಂದರೆ, ವಾತ, ಪಿತ್ಥ, ಕಫಗಳ,ಸಮತ್ವ, ಅವುಗಳ ವಿಕಾರಗಳೇ ರೋಗಕ್ಕೆ ಕಾರಣ. ಪುಸ್ತಕದಲ್ಲಿ, ವ್ಯಾಧಿನಾಡಿ ಪರೀಕ್ಷೆ, ಅಷ್ಟಾಂಗ ವೈದ್ಯ, ಶಲ್ಯತಂತ್ರ, ಶಾಲಾಕ್ಯತಂತ್ರ, ಕಾಯ ಚಿಕಿತ್ಸೆ, ಭೂತವಿದ್ಯೆ, ಕೌಮಾರಭೃತ್ಯ, ಅಗದ ತಂತ್ರ, ರಸಾಯನ ತಂತ್ರ, ಮತ್ತು ವಾಜೀಕರಣ, ಇವೇ ಮೊದಲಾದ ವಿಷಯಗಳನ್ನು ವಿವರಿಸುವ ಒಟ್ಟು ೬೪೦ ಪುಟಗಳ ವಿವರಣೆಗಳಿವೆ. ಹಲವಾರು ಪುಸ್ತಕಗಳಲ್ಲಿನ ಪ್ರಕರಣಗಳನ್ನು ಪುಸ್ತಕದಲ್ಲಿ ಸಮಯಾನುಸಾರ ಉದಾಹರಿಸಿದ್ದಾರೆ.

ಸಂಸ್ಕೃತ ಗ್ರಂಥಗಳಿಂದ[ಬದಲಾಯಿಸಿ]

 • ಯೋಗ ರತ್ನಾಕರ,
 • ರಾಜನಿಘಂಟು,

ಕನ್ನಡ ಪುಸ್ತಕಗಳಿಂದ[ಬದಲಾಯಿಸಿ]

 1. ಆಯುರ್ವೇದ ಚಿಕಿತ್ಸಾ ಸಂಗ್ರಹ,
 2. ಆಯುರ್ವೇದಸಾರ,
 3. ಆರೋಗ್ಯವು ಮತ್ತು ದೀರ್ಘಾಯುಸ್ಸು,
 4. ಆರೋಗ್ಯ ದರ್ಪಣ,
 5. ಅಜ್ಜಿಮದ್ದು,
 6. ಉಪಯುಕ್ತ ಗಿಡಮೂಲಿಕೆಗಳು ಊರೌಷಧ,
 7. ಔಷಧಿ ಗಿಡಗಳು,
 8. ಪ್ರಸೂತಿ ತಂತ್ರ ,
 9. ಬಡವರ ವೈದ್ಯ,
 10. ವೈದ್ಯಕೀಯ ಲೇಖನಗಳು,
 11. ದೀರ್ಘಾಯು ಮಾಸಪತ್ರಿಕೆ,
 12. ವೈದ್ಯಜೀವನ,
 13. ವೈದ್ಯ,
 14. ಮನೋರಮ,
 15. ವೈದ್ಯ ಸಾರಸಂಗ್ರಹ,
 16. ವೈದ್ಯತತ್ವ,
 17. ನಿರ್ಣಾಯಕ ಸಾಗರ,
 18. ಶರೀರ ರಚನಾ ಮತ್ತು ಗುಣಧರ್ಮ ಶಾಸ್ತ್ರ,
 19. ಶರೀರಸಂಪತ್ತು,
 20. ಸಹಸ್ರಯೋಗ,
 21. ಸ್ವಸ್ಥ ಜೀವನ,
 22. ಹಳ್ಳಿಯ ವೈದ್ಯ,
 23. ಹಿಂದು ಯುನಾನಿ ಅನುಭವವೈದ್ಯರತ್ನ,
 24. ಕಲ್ಪವೃಕ್ಷ,ಮತ್ತು ಅನೇಕ ತಾಳೆಗರಿಯ ಗ್ರಂಥಗಳು,
 25. ಹಳೆಯ ಕೈಬರಹದ ಹೊತ್ತಿಗೆಗಳು; ಟಿಪ್ಪಣಿಗಳು, ವಗೈರೆ.

ಹಿಂದಿ ಪುಸ್ತಕಗಳಿಂದ[ಬದಲಾಯಿಸಿ]

 1. ಅಭಿನವ್ ಬೂಟಿದರ್ಪಣ್,
 2. ಅನುಭೂತ ಚಿಕಿತ್ಸಾ,
 3. ಅಷ್ಟಾಂಗ ಆಯುರ್ವೇದ್,
 4. ಆಯುರ್ವೇದೀಯ್ ಹಿತೋಪದೇಶ್,
 5. ಅಯುರ್ವೇದ್ ಕೋಶ್,
 6. ಆಯುರ್ವೇದ್ ಪ್ರಕಾಶ್,
 7. ಆಯುರ್ವೇದ್ ಮಾಸಿಕ್,
 8. ಆಯುರ್ವೇದ್ ವಿಶ್ವಕೋಶ್,
 9. ಆಯುರ್ವೇದ್ ವಿಜ್ಞಾನ್,
 10. [ಮಾ] ಆಯುರ್ವೇದ್ ಮೀಮಾಂಸ್,
 11. ತ್ರಿದೋಶ್ ಮೀಮಾಂಸ್,
 12. ಧನ್ವಂತರಿ ಮಾಸಿಕ್,
 13. ನಿದಾನ್ ಚಿಕಿತ್ಸಾ ಹಸ್ತಾಮಲಕ್,
 14. ಬಾಲ್ ರೋಗ್ ಚಿಕಿತ್ಸಾ,
 15. ಬೈಷಜ್ಯ ರತ್ನಾವಳಿ,
 16. ಯವ್ವನ್ ರಕ್ಷಾ,
 17. ರಾಜಯಕ್ಷ್ಮ,
 18. ವೈದ್ಯ,
 19. [ಮಾ],
 20. ಪ್ರಾಣಾಚಾರ್ಯ,
 21. ಸಚಿತ್ರ ಆಯುರ್ವೇದ್,
 22. ಉನ್ಮಾದ್,
 23. ಔಷಧ್ ಗುಣಧರ್ಮ್,
 24. ಬೈಷಜ ಬೋಧಿನಿ,
 25. ಕಲ್ಲ್ತಾಣ್ [ಮಾಸಿಕ್], ಇತ್ಯಾದಿ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. Exclusive : Fond Memories of ‘Malladihalli Swamiji’