ವಿಷಯಕ್ಕೆ ಹೋಗು

ವಿಜಯ್ ಅಮೃತ್‌ರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ್ ಅಮೃತ್ ರಾಜ್
Vijay Amritraj
ದೇಶ ಭಾರತ
ಎತ್ತರ೧.೯೩m (೬ft. ೪in.)
ಆಟದಲ್ಲಿ ಪರಣಿತಿ ಪಡೆದದ್ದು೧೯೭೦
ನಿವೃತ್ತಿ೧೯೯೩
ಆಟRight-handed
ವೃತ್ತಿಯ ಬಹುಮಾದನದ ಹಣ$೧,೩೩೧,೯೧೩
ಸಿಂಗಲ್ಸ್
ವೃತ್ತಿಯ ದಾಖಲೆ೩೯೧–೩೦೩[]
ವೃತ್ತಿಯ ಶೀರ್ಷಿಕೆಗಳು೧೬
ಅತ್ಯುನ್ನತ ಶ್ರೇಣಿNo. ೧೬ (೭ July ೧೯೮೦)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್೧R (೧೯೮೩, ೧೯೮೪)
ಫ್ರೆಂಚ್ ಓಪನ್೩R (೧೯೭೪)
ವಿಂಬಲ್ಡನ್QF (೧೯೭೩, ೧೯೮೧)
ಯು.ಇಸ್. ಓಪನ್ (ಟೆನಿಸ್)QF (೧೯೭೩, ೧೯೭೪)
ಡಬಲ್ಸ್
ವೃತ್ತಿಯ ದಾಖಲೆ೨೬೨–೨೧೭
ವೃತ್ತಿಯ ಶೀರ್ಷಿಕೆಗಳು೧೩
ಅತ್ಯುನ್ನತ ಶ್ರೇಣಿNo. ೩೯ (೨೧ October ೧೯೮೫)
Last updated on: ೪ June ೨೦೦೭.

ವಿಜಯ್ ಅಮೃತ್‌ರಾಜ್ ( ವಿಜಯ್ ಅಮೃತ್‌ರಾಜ್ (ತಮಿಳು:விஜய் அம்ரித்ராஜ், ೧೯೫೩ ರ ಡಿಸೆಂಬರ್ ೧೪ ರಂದು ಜನಿಸಿದರು.) ಅವರು ಭಾರತದ ಮಾಜಿ ಟೆನಿಸ್ ಆಟಗಾರರಾಗಿದ್ದು, ಕ್ರೀಡಾ ನಿರೂಪಕ ಮತ್ತು ನಟರಾಗಿದ್ದಾರೆ.[]

ಅಮೃತ್‌ರಾಜ್ ರವರು ಭಾರತದ ಚೆನ್ನೈ ನಲ್ಲಿ ಮ್ಯಾಗಿ ಧೈರ್ಯಂ ಮತ್ತು ರಾಬರ್ಟ್ ಅಮೃತ್‌ರಾಜ್ ರವರ ಪುತ್ರರಾಗಿ ಜನಿಸಿದರು.[] ಇವರು ಮತ್ತು ಸಹೋದರರಾದ, ಆನಂದ್ ಅಮೃತ್‌ರಾಜ್ ಮತ್ತು ಅಶೋಕ್ ಅಮೃತ್‌ರಾಜ್ ರವರು, ಅಂತರರಾಷ್ಟ್ರೀಯ ಟೆನಿಸ್ ಟೂರ್‌‌ ಸಾಧನೆಯ ಉತ್ತುಂಗ ಶಿಖರದಲ್ಲಿ ಉತ್ತಮ ಸಾಧನೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ. ಇವರು ಶಾಲಾಶಿಕ್ಷಣವನ್ನು ಚೆನ್ನೈನ ಎಗ್ಮೋರ್ ನಲ್ಲಿರುವ ಡಾನ್ ಬೋಸ್ಕೊ ಶಾಲೆಯಲ್ಲಿ ಮುಗಿಸಿದರು. ಅನಂತರ ಚೆನ್ನೈನ ಲೊಯಲಾ ಕಾಲೇಜಿನಿಂದ ಪದವೀಧರರಾದರು. ಈ ಸಹೋದರರು (ವಿಜಯ್ ಮತ್ತು ಆನಂದ್) ವಿಂಬಲ್ಡನ್ ಪುರುಷರ ಡಬಲ್ಸ್ ನಲ್ಲಿ ೧೯೭೬ ರಲ್ಲಿನ ಸೆಮಿಫೈನಲಿಸ್ಟ್(ಉಪಾಂತ ಸ್ಪರ್ಧಿಗಳು)ಗಳಾಗಿದ್ದರು. ಇವರಿಗೆ ೧೯೮೩ ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೃತ್ತಿಜೀವನ

[ಬದಲಾಯಿಸಿ]

ಆಗ ೧೯೭೦ ರಲ್ಲಿ ಇವರ ಮೊದಲನೆಯ ಗ್ರ್ಯಾಂಡ್ ಪ್ರೀಯನ್ನು ಆಡಿದ ನಂತರ, ಅಮೃತ್‌ರಾಜ್ ಅವರ ಮೊದಲನೆಯ ಪ್ರಮುಖ ಯಶಸ್ಸನ್ನು ೧೯೭೩ರ ಸಿಂಗಲ್ಸ್ ನಲ್ಲಿ ಕಾಣಬಹುದು. ಈ ಯಶಸ್ಸನ್ನು ಎರಡು ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಲ್ಲಿ ಕ್ವಾರ್ಟರ್-ಫೈನಲ್ ಹಂತ ತಲುಪುವ ಮೂಲಕ ಸಾಧಿಸಿದರು. ವಿಂಬಲ್ಡನ್ ನಲ್ಲಿ ಅವರು ಸಾಂದರ್ಭಿಕ ಚ್ಯಾಂಪಿಯನ್ ಜಾನ್ ಕೊಡೇಸ್ ವಿರುದ್ಧ ಐದನೇ ಸೆಟ್ ನಲ್ಲಿ ೭–೫ ಸೆಟ್ ಗಳಿಂದ ಸೋಲನ್ನನುಭವಿಸಿದರು. ಅಲ್ಲದೇ ಅನಂತರ ಆ ಬೇಸಿಗೆಯಲ್ಲಿ ನಡೆದ US ಓಪನ್ ನಲ್ಲಿ, ಎರಡು ಸುತ್ತುಗಳ ಮೊದಲು ರಾಡ್ ಲ್ಯಾವರ್ ರವರನ್ನು ಸೋಲಿಸಿದ ನಂತರ ಕೆನ್ ರೋಸ್ ವಾಲ್ ರವರಿಂದ ಸೋತರು.

ಅಮೃತ್‌ರಾಜ್ ೧೯೭೪ರಲ್ಲಿ ಫಾರೆಸ್ಟ್ ಹಿಲ್ಸ್ ನಲ್ಲಿ, ಎರಡನೆಯ ಸುತ್ತಿನಲ್ಲಿ ಯುವ ಆಟಗಾರ ಬೀಜಾನ್ ಬೊರ್ಗ್ ರವರನ್ನು ಸೋಲಿಸಿದ ನಂತರ, ಮತ್ತೊಮ್ಮೆ ರೋಸ್ ವಾಲ್ ರವರ ವಿರುದ್ಧ ಕೊನೆಯ ಎಂಟರಲ್ಲಿ ಹೊರನಡೆಯುವ ಮೂಲಕ ಮತ್ತೊಮ್ಮೆ ಅವರ ಕೈಚಳಕ ತೋರಿಸಿದರು. ಅನಂತರದ ವರ್ಷಗಳಲ್ಲಿ ಅವರು ಅನೇಕ ಗ್ರಾನ್ ಪ್ರೀ ಪಂದ್ಯಗಳ ಮುಂದಿನ ಹಂತವನ್ನು ಕೂಡಾ ತಲುಪಿದರು. ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳಲ್ಲಿ ಯಶಸ್ಸು ಗಳಿಸಲು ವಿಫಲರಾದರು. ೧೯೮೧ ರಲ್ಲಿ ಅಮೃತ್‌ರಾಜ್ ರವರು ಜಿಮ್ಮಿ ಕಾನಾರ್ಸ್ ರವರನ್ನು ಐದು ಸೆಟ್ ಗಳಿಂದ ಸೋಲಿಸಿ ಮತ್ತೊಮ್ಮೆ ಕ್ವಾರ್ಟರ್ ಫೈನಲ್ಸ್ ಅನ್ನು ತಲುಪುವವರೆಗೂ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳಲ್ಲಿ ಯಶಸ್ಸನ್ನು ಕಂಡಿರಲಿಲ್ಲ. ಈ ಪಂದ್ಯವು ಅಮೃತ್‌ರಾಜ್ ರ ಟೆನಿಸ್ ಶೈಲಿಯನ್ನು ತೋರಿಸುತ್ತದೆ. ಇವರು ಚೆಂಡನ್ನು ಹೊಡೆಯುವುದು, ಎದುರಾಳಿಯ ಮೇಲೆ ಎರಗುವುದು ಹಾಗು ಸರ್ವ್ ಮತ್ತು ವಾಲಿ(ಚೆಂಡು ನೆಲ ಮುಟ್ಟುವ ಮೊದಲೇ ಅದನ್ನು ಹಿಂದಿರುಗಿಸುವುದು)ಯನ್ನು ಇಷ್ಟ ಪಡುವಂತಹ ಟೆನಿಸ್ ಕೋರ್ಟ್ ನ ಸಹಜ ಆಟಗಾರರಾಗಿದ್ದಾರೆ. ಇವರು ಪ್ರಪಂಚದ ಅತ್ಯಂತ ಉತ್ತಮ ಆಟಗಾರರೊಂದಿಗೆ ಪ್ರತಿಸ್ಪರ್ಧಿಸಿದ್ದಾರೆ, ಆದರೆ ಸಾಮರ್ಥ್ಯದ ಕೊರತೆಯಿಂದಾಗಿ ದೀರ್ಘಕಾಲದ ಪಂದ್ಯಗಳಲ್ಲಿ ಹೆಚ್ಚಾಗಿ ಸೋತಿದ್ದಾರೆ. ಕಾನರ್ಸ್ ನ ವಿರುದ್ಧ ಎರಡು ಸೆಟ್ ಗಳಲ್ಲಿ ಮುಂದಿದ್ದರು, ಆದರೆ ಕೊನೆಯ ಎರಡು ಸೆಟ್ ಗಳಲ್ಲಿ ೨–೬, ೫–೭, ೬–೪, ೬–೩, ೬–೨ ಸೆಟ್ ಗಳಿಂದ ಖಚಿತ ಸೋಲಿಗೆ ಬಲಿಯಾದರು. ಇದೇ ರೀತಿಯ ವಿಂಬಲ್ಡನ್ ಫಲಿತಾಂಶವನ್ನು ೧೯೭೯ ರಲ್ಲಿ ೨ ನೇಯ ಸುತ್ತಿನಲ್ಲಿ ನೋಡಬಹುದು. ಈ ಪಂದ್ಯದಲ್ಲಿ ಅವರು ಬೊರ್ಗ್ ರನ್ನು ಸೋಲಿಸಲು ಸೆಟ್ ನೆಡೆ ದೃಷ್ಟಿ ನೆಟ್ಟಾಗ ಎರಡನೆಯ ಸೆಟ್ ನ ವರೆಗೂ ಒಂದರಿಂದ ಮತ್ತು ನಾಲ್ಕನೆಯ ಸೆಟ್ ನಲ್ಲಿ ೪–೧ ಕೇವಲ ೨–೬, ೬–೪, ೪–೬, ೭–೬, ೬–೨ ಸೆಟ್ ಗಳಿಂದ ಸೋತರು.

ಡೇವಿಸ್ ಕಪ್

[ಬದಲಾಯಿಸಿ]

ಅಮೃತ್‌ರಾಜ್ ರವರು ೧೯೭೦ರ ಮತ್ತು ೧೯೮೦ರ ಪೂರ್ವಾರ್ಧಲ್ಲಿ ಭಾರತದ ಡೇವಿಸ್ ಕಪ್ ನ ನಾಯಕರಾಗಿದ್ದು, ೧೯೭೪ ಮತ್ತು ೧೯೮೭ ರಲ್ಲಿ ಭಾರತವು ಫೈನಲ್ ಅನ್ನು ತಲುಪಲು ಸಹಾಯಮಾಡಿದರು. ಇಲ್ಲಿ ಅವರು ಚ್ಯಾಂಪಿಯನ್ ಆಗಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ಮೊದಲಿನ ಶ್ರೇಣಿಯಲ್ಲಿರುವ ಆಟಗಾರರ ವಿರುದ್ಧ ಸ್ಮರಣೀಯ ವಿಜಯ ಸಾಧಿಸಿದರು. ಆಗ ೧೯೮೭ ರಲ್ಲಿನ ಫೈನಲ್ ಪಂದ್ಯಕ್ಕೆ ಭಾರತವನ್ನು ಕೊಂಡೊಯ್ಯುವಲ್ಲಿ ಅರ್ಜೆಂಟೀನಾದ ಮಾರ್ಟೀನ್ ಜ್ಯೇಟ್ ರವರ ವಿರುದ್ಧ ಆಡಿದ ಮಾಡು ಅಥವಾ ಮಡಿ ಎಂಬಂತಹ ಸ್ಪರ್ಧೆಯ ಸಂದರ್ಭದಲ್ಲಿ ಐದು ಸೆಟ್ ಗಳ ನಿರ್ಣಾಯಕ ಪಂದ್ಯ ಸ್ವಾರಸ್ಯಕರವಾಗಿತ್ತು.

ಅಮೃತ್‌ರಾಜ್ ರವರು ಈಗಲೂ ಕೆಲವೊಮ್ಮೆ ಸಾಂದರ್ಭಿಕವಾಗಿ ಆಡುತ್ತಾರೆ. ಅಲ್ಲದೇ ೨೦೦೮ ರ ವಿಂಬಲ್ಡನ್ ನ Sr. ಇನ್ ವಿಟೇಷನ್ ಜೆಂಟಲ್ ಮೆನ್ಸ್ ಡಬಲ್ಸ್ ನಲ್ಲಿ, ಜಿನ್ ಮೇಯರ್ ರವರ ಜೊತೆಗೂಡಿ ಫೈನಲ್ ಪ್ರವೇಶಿಸಿದ್ದರು. ಇವರು ೧ ನೇ ಕ್ರಮಾಂಕದ ಆಟಗಾರರೆನಿಸಿದರು.

ವೈಶಿಷ್ಟ್ಯಗಳು

[ಬದಲಾಯಿಸಿ]
  • ಅವರ ವೃತ್ತಿಜೀವನದ ಸಿಂಗಲ್ಸ್ ನ ಗೆಲವು-ಸೋಲಿನ ದಾಖಲೆಯನ್ನು ೩೮೪-೨೯೬ ಎಂದು ಒಟ್ಟುಗೂಡಿಸಿದ್ದಾರೆ. ೧೬ ಸಿಂಗಲ್ಸ್ ಗಳಲ್ಲಿ ಶೀರ್ಷಿಕೆಗಳನ್ನು ಗಳಿಸಿದ್ದಾರೆ, ಇದರ ಜೊತೆಯಲ್ಲಿ ಡಬಲ್ಸ್ ನಲ್ಲಿ ೧೩ (ಬಿರುದು)ಶೀರ್ಷಿಕೆಗಳನ್ನು ಗೆದ್ದಿದ್ದಾರೆ.
  • ಅವರ ಸಾಧನೆಯ ವರ್ಷವಾದ ೧೯೮೪ ರಲ್ಲಿ (ಸಿನ್ ಸಿನಾಟಿಯಲ್ಲಿನ ಮೊದಲನೆಯ ಸುತ್ತಿನಲ್ಲಿ) ಜಾನ್ ಮ್ಯಾಕ್ ಎನ್ರೊ ರವರನ್ನು ಒಳಗೊಂಡಂತೆ ಅತ್ಯುತ್ತಮ ಆಟಗಾರರನ್ನು ಸೋಲಿಸಿದ್ದಾರೆ.
  • ಜಿಮ್ಮಿ ಕಾನಾರ್ಸ್ ರವರ ವಿರುದ್ಧ ಅವರು ಆಡಿದ ೧೧ ಪಂದ್ಯಗಳಲ್ಲಿ ಐದು ವೃತ್ತಿಪರ ಗೆಲುವುಗಳ ಸಾಧಿಸಿದ್ದಾರೆ.
  • ಸಿಂಗಲ್ಸ್ ನಲ್ಲಿ ವಿಶ್ವದ ನಂ.೧೬ ನೇ ಶ್ರೇಯಾಂಕ ಗಳಿಸುವ ಮೂಲಕ ೧೯೮೦ ರ ಜುಲೈನಲ್ಲಿ ಅವರ ವೃತ್ತಿಜೀವನದ ಅಗ್ರ ಮಟ್ಟ ತಲುಪಿದ್ದರು.
  • ಇವರ ಪುತ್ರ ಪ್ರಕಾಶ್ ಅಮೃತ್‌ರಾಜ್ ಮತ್ತು ಸೋದರಳಿಯ, ಸ್ಟೀಫನ್ ಅಮೃತ್‌ರಾಜ್, ಇಬ್ಬರೂ ಕೂಡ ವೃತ್ತಿಪರ ಟೆನಿಸ್ ಆಟಗಾರರಾಗಿದ್ದಾರೆ.

ನಟನಾ ವೃತ್ತಿ ಬದುಕು

[ಬದಲಾಯಿಸಿ]

ವಿಜಯ್,ಅಲ್ಪಕಾಲೀನ ನಟನಾ ವೃತ್ತಿಜೀವನವನ್ನು ಕೂಡ ಹೊಂದಿದ್ದಾರೆ. ಇವರು ೧೯೮೩ ರ ಜೇಮ್ಸ್ ಬಾಂಡ್ ಸಿನಿಮಾ ಆಕ್ಟೊಪುಸಿಯಲ್ಲಿ ನಾಯಕನ ಜೊತೆಗಾರ,ವಿಜಯ ಆಗಿ ಅತ್ಯಂತ ಗಮನಾರ್ಹವಾಗಿ ಕಾಣಿಸಿಕೊಂಡಿದ್ದಾರೆ.(ರೊಜರ್ ಮೋರ್ ಪ್ರಮುಖವಾಗಿ ನಟಿಸಿದ್ದಾರೆ). ಈ ಚಲನಚಿತ್ರದಲ್ಲಿ ಬಾಂಡ್ ರವರು ಭಾರತಕ್ಕೆ ತಮ್ಮ ಗುರಿ ಸಾಧನೆಗೆ ಬಂದ ಸಂದರ್ಭದಲ್ಲಿನ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[]

ಇವರು Star Trek IV: The Voyage Home ನಲ್ಲಿಯೂ ಕೂಡ ಆಕಾಶನೌಕೆಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇವರು NBC TV ಸರಣಿಗಳ ದಿ ಲಾಸ್ಟ್ ಪ್ರೀಸಿಂಕ್ಟ್ ನಲ್ಲಿ ಮತ್ತು ಯಾಕೊವ್ ಸ್ಮಿರಾನ್ಫ್ ರವರ ವಾಟ್ ಎ ಕಂಟ್ರಿ ಎಂಬ ಸಂದರ್ಭದಲ್ಲಿ ಹಾಸ್ಯ ಪ್ರದರ್ಶನದಲ್ಲಿ ಸತತ ಕಾಣಿಸಿಕೊಳ್ಳುವ ಪಾತ್ರ ಮಾಡಿದ್ದರು. ಅಷ್ಟೇ ಅಲ್ಲದೇ ಹಾರ್ಟ್ ಟು ಹಾರ್ಟ್ ನಂತಹ ದೂರದರ್ಶನದ ಅನೇಕ ಪ್ರದರ್ಶನಗಳಲ್ಲಿ ಅತಿಥಿ ನಟರಾಗಿರುತ್ತಿದ್ದರು. ಅವರು ಕ್ರೀಡಾ ನಿರೂಪಕರಾದ ಕಾರಣ, ಭುವನ ಸುಂದರಿ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದರು. ಅಲ್ಲದೇ ಬಹುಮಾಧ್ಯಮ ವಹಿವಾಟನ್ನು ಯಶಸ್ವಿಯಾಗಿ ಬೆಳೆಸಿದರು.

ದತ್ತಿ ನಿಧಿಸಂಸ್ಥೆ (ಫೌಂಡೇಷನ್)

[ಬದಲಾಯಿಸಿ]

೨೦೦೬ರಲ್ಲಿ, "ಅಮೇರಿಕ ಸಂಯುಕ್ತ ಸಂಸ್ಥಾನದ ಶಾಂತಿ ಧೂತ" ರಾಗಿ ತಮ್ಮ ನಿಗದಿತ ಕಾರ್ಯವನ್ನು ಮುಗಿಸಿದ ನಂತರ, ವಿಜಯ್ ಅಮೃತ್‌ರಾಜ್ ರವರು "ದಿ ವಿಜಯ್ ಅಮೃತ್‌ರಾಜ್ ಫೌಂಡೇಷನ್(ದತ್ತಿ ನಿಧಿಸಂಸ್ಥೆ)" ಸ್ಥಾಪಿಸಿದರು.[][] ಈ ಸಂಸ್ಥೆಯು ಭಾರತದಲ್ಲಿರುವ, ದುರಂತಕ್ಕೆ ಒಳಗಾದ ಮತ್ತು ಕಾಯಿಲೆಯನ್ನು ಎದುರಿಸಲಾಗದ ಹಾಗು ಕಾಯಿಲೆಗೆ ತುತ್ತಾಗುವ ಅಮಾಯಕ ಜನರಿಗೆ ಸಹಾಯ ಮಾಡುವುದು, ಅವರ ರೋಗ ಗುಣಪಡಿಸುವುದು, ಅವರಲ್ಲಿ ಭರವಸೆ ಮೂಡಿಸುವ ಗುರಿ ಹೊಂದಿದೆ. ಈ ಸಂಸ್ಥೆಯಲ್ಲಿ "ನೀಡುವುದರಲ್ಲಿ ನಾವು ಪಡೆಯುತ್ತೇವೆ" ಎಂಬ ದೃಢ ನಂಬಿಕೆಯೊಂದಿಗೆ ಮುನ್ನಡೆಸುವ ಮೂಲಕ, ಇದು ಮಾನವಿಯತೆಯ ಸಹಾಯದ ಹಸ್ತಗಳ ನಿಜವಾದ ಅಗತ್ಯವಿರುವವರ ಸೇವೆಗೆಂದು ಪಣತೊಟ್ಟಿದೆ. ಆಗ ೨೦೦೬ರಲ್ಲಿ ಪಡೆದ ಮೊದಲ ಅಸಾಮಾನ್ಯವಾದ ಯಶಸ್ಸಿನ ನಂತರ, ತಕ್ಷಣವೇ ಸಂಸ್ಥೆಯು ಭಾರತದ ಅನೇಕ ದತ್ತಿ ಸಂಸ್ಥೆಗಳಿಂದ ಧನ ಸಂಗ್ರಹಿಸಿ ನೆರವಿಗೆ ಮುಂದಾಯಿತು. ಮುಂದಿನ ದಶಕಗಳಲ್ಲಿ ಸಂಸ್ಥೆಯು ಭಾರತೀಯ ಒಕ್ಕೂಟದ ಎಲ್ಲಾ ರಾಜ್ಯಗಳಲ್ಲೂ ತನ್ನ ಶಾಖೆಯನ್ನು ತೆರೆಯುವ ಹಾಗು ಈ ರಾಜ್ಯಗಳ ದುರಾದೃಷ್ಟ ಪ್ರಜೆಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಗುರಿ ಹೊಂದಿದೆ. ಇಂದು, ಹಲವು ಗಣ್ಯ ನಾಯಕರು, ರಾಜಕಾರಣಿಗಳು, ವ್ಯಾಪಾರದ ಮುಖ್ಯಸ್ಥರು,ಮತ್ತು ಮಾನವ ಪ್ರೇಮಿಗಳನ್ನೊಳಗೊಂಡಂತೆ ಅನೇಕ ಗಮನಾರ್ಹ ವ್ಯಕ್ತಿಗಳು ಈ ಸಂಸ್ಥೆಯೊಂದಿಗೆ ಸಂಬಂಧ ಬೆಳೆಸಿದ್ದಾರೆ; ಅವರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಮಾಜಿ ಅಧ್ಯಕ್ಷ ಜಾರ್ಜ್ H. W. ಬುಷ್ ರವರು, ದಿ CORBISCO ಗ್ರೂಪ್ ನ ಅಧ್ಯಕ್ಷರು ಮತ್ತು CEO ಆಗಿರುವ ರೆಡ್ಡಿ S.ಜೇ ರೆಡ್ಡಿಯವರು, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಾಜಿ ಅಂಡರ್ ಸೆಕ್ರೆಟರಿ ಜನರಲ್ ಆಗಿದ್ದ ಶಶಿ ಥರೂರ್ ಮತ್ತು ಬ್ಲೇರ್ ರವರ ಆಡಳಿತದ ಸಂದರ್ಭದಲ್ಲಿ ಗ್ರೇಟ್ ಬ್ರಿಟನ್ ನ ರಕ್ಷಣಾ ಪಡೆಯ ಮುಖ್ಯಸ್ಥರಾಗಿದ್ದ ಜನರಲ್ ದಿ ಲಾರ್ಡ್ ಗುಥ್ರೆ ಆಫ್ ಕ್ರಾಯ್ಗಿಬ್ಯಾಂಕ್ ಪ್ರಮುಖರಾಗಿದ್ದಾರೆ. ಈ ಸಂಸ್ಥೆಯು ಪ್ರತಿವರ್ಷ ಅತ್ಯಂತ ಯಶಸ್ವಿ ಗಾಲ್ಫ ಪಂದ್ಯಾವಳಿ ನಡೆಸುತ್ತದೆ. ಇದರ ಜೊತೆಯಲ್ಲಿ ಕ್ಯಾಲಿಫೊರ್ನಿಯಾದ ಬೆವರ್ಲಿಹಿಲ್ಸ್ ನಲ್ಲಿ ಕ್ರೀಡಾ ಸಮಾರಂಭದ ಔತಣಕೂಟವನ್ನೂ ಏರ್ಪಡಿಸುತ್ತದೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಅಮೃತ್‌ರಾಜ್,ಶೀಲಂಕನ್ ತಮಿಳರಾದ ಅವರ ಪತ್ನಿ ಶ್ಯಾಮಲಾ ಹಾಗು ಪುತ್ರರಾದ ಪ್ರಕಾಶ್ ಅಮೃತ್‌ರಾಜ್ ಮತ್ತು ವಿಕ್ರಂ ರವರೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದಾರೆ. ಇವರು ಕ್ರೈಸ್ತ ಧರ್ಮೀಯರಾಗಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Vijay Amritraj at the Association of Tennis Professionals
  2. ವಿಜಯ್ ಅಮೃತ್‌ರಾಜ್ ಅಟ್ ದಿ ಇಂಟರ್ ನೆಟ್ ಮೂವೀ ಡೇಟಾಬೇಸ್
  3. ೩.೦ ೩.೧ "ದಿ ಹಿಂದು : ಅಟ್ ಹೋಮ್ ಆನ್ ಎವ್ರಿ ಟರ್ಫ್". Archived from the original on 2007-10-01. Retrieved 2010-12-14.
  4. [5] [೧] Archived 2010-02-02 ವೇಬ್ಯಾಕ್ ಮೆಷಿನ್ ನಲ್ಲಿ.
  5. ದಿ ವಿಜಯ್ ಅಮೃತ್‌ರಾಜ್ ಫೌಂಡೇಷನ್ Archived 2015-07-11 ವೇಬ್ಯಾಕ್ ಮೆಷಿನ್ ನಲ್ಲಿ. - ಅಫೀಷಿಯಲ್ ವೆಬ್ ಸೈಟ್
  6. "ಲುಕ್ ಟು ದಿ ಸ್ಟಾರ್ಸ್". Archived from the original on 2012-07-02. Retrieved 2010-12-14.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
Awards
First ATP Most Improved Player
೧೯೭೩
Succeeded by