ಡಿಸ್ಕವರಿ ಚಾನೆಲ್
Discovery Channel | |
---|---|
Launched | June 17, 1985 |
Owned by | Discovery Communications, Inc. |
Picture format | 576p (SDTV) 720p/1080i (HDTV) |
Slogan | The world is just awesome. |
Country | Worldwide |
Language | English |
Headquarters | Silver Spring, MD |
Sister channel(s) | Discovery Networks |
Website | http://dsc.discovery.com |
Availability | |
Satellite | |
DirecTV | Channel 278 Channel 1278 (VOD) |
Dish Network | Channel 182 |
C-Band | AMC 10-Channel 21 |
Starchoice | Channel 505 |
Sky Mexico | Channel 251 |
Dish Network Mexico | Channel 402 |
Cable | |
CableVision (Argentina) | Channel 52 |
Available on most cable systems | Check your local listings |
IPTV | |
Sky Angel | Channel 313 |
AT&T U-Verse | Channel 120 (SD) 1120 (HD) |
ಡಿಸ್ಕವರಿ ಚಾನೆಲ್ (ಮೊದಲ್ಲಿದ್ದ ಹೆಸರು ದಿ ಡಿಸ್ಕವರಿ ಚಾನೆಲ್ ) ಇದೊಂದು ಅಮೇರಿಕಾದ ಉಪಗ್ರಹ ಮತ್ತು ಕೇಬಲ್ TV ಚಾನೆಲ್ (ಮತ್ತು ಇದು IPTV, ಭೂಚರ ಟೆಲಿವಿಷನ್ ಮತ್ತು ವಿಶ್ವದ ಬೇರೆಡೆ ಇಂಟರ್‌ನೆಟ್ ಟೆಲಿವಿಷನ್ ಮುಖಾಂತರ ಪ್ರಸಾರಗೊಳ್ಳುತ್ತದೆ) ಹಾಗೂ ಇದನ್ನು ಸ್ಥಾಪಿಸಿದವರು ಜಾನ್ ಹೆಂಡ್ರಿಕ್ಸ್ ಮತ್ತು ಇದು ಡಿಸ್ಕವರಿ ಕಮ್ಯೂನಿಕೇಷನ್ಸ್ ಮುಖಾಂತರ ಹಂಚಿಕೆಗೊಳುತ್ತದೆ. CEO ಡೇವಿಡ್ ಜಾಸ್ಲಾವ್ ಇದು ನಡೆಸುತ್ತಾರೆ ಮತ್ತು ಇದೊಂದು ಸಾರ್ವಜನಿಕ ವ್ಯಾಪಾರಿ ಸಂಸ್ಥೆಯಾಗಿದೆ. ಇದು ಜನಪ್ರಿಯ ವಿಜ್ಞಾನ, ತಾಂತ್ರಿಕ ಜ್ಞಾನ ಮತ್ತು ಇತಿಹಾಸದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ಒದಗಿಸುತ್ತದೆ. U.S.,ನಲ್ಲಿ ಡಿಸ್ಕವರಿ ನೆಟವರ್ಕ್‌ಗಾಗಿ ತಯಾರಿಸುವ ಕಾರ್ಯಕ್ರಮಗಳು ಪ್ರಾಥಮಿಕವಾಗಿ ನೈಜ-ವಸ್ತುಗಳ ಮೇಲೆ ಆಧಾರಿತವಾಗಿರುತ್ತದೆ. ಚಿಂತನೆಯಿಂದ ಕೂಡಿದ ತನಿಖಾ ಕಾರ್ಯಕ್ರಮಗಳಾದ ಮಿಥ್‌ಬಸ್ಟರ್ಸ್ , ಅನ್ ಸಾಲ್ವಡ್‌ಹಿಸ್ಟರಿ ಮತ್ತು ಬೆಸ್ಟ್ ಎವಿಡೆನ್ಸ್ ಹಾಗೂ ಡರ್ಟಿ ಜಾಬ್ಸ್ ಮತ್ತು ಡೆಡ್ಲೀಯೆಸ್ಟ್ ಕ್ಯಾಚ್ ಮುಂತಾದ ಮೋಟಾರು, ಉದ್ಯೋಗದಂಥ ಕಾರ್ಯಕ್ರಮಗಳು; ಇದರ ಜೊತೆಗೆ ಕೌಟುಂಬಿಕ ಹಾಗೂ ಕಿರಿಯರಿಗಾಗಿಯೇ ತಯಾರಿಸುವ ಸಾಕ್ಷ್ಯಚಿತ್ರಗಳಿರುತ್ತವೆ. ಜನಪ್ರಿಯ ವಾರ್ಷಿಕ ಪ್ರದರ್ಶನವೆಂದರೆ ಶಾರ್ಕ್ ವೀಕ್ .[೧]
ಇತಿಹಾಸ
[ಬದಲಾಯಿಸಿ]BBCನವರು, ಅಮೇರಿಕಾದ ಬಂಡವಾಳ ಹೂಡಿಕೆಯ ಕಂಪನಿಯಾದ ಅಲ್ಲೆನ್ ಮತ್ತು ಕಂಪನಿ, ವೆಂಚ್ಯೂರಾ ಅಮೇರಿಕಾ ಮತ್ತು ಇನ್ನೂ ಅನೇಕ ಕಂಪನಿಯವರು ಜೂನ್ ೧೭, ೧೯೮೫ರಲ್ಲಿ $೫ ದಶಲಕ್ಷ ಹಣವನ್ನು ಹೂಡಿ ಡಿಸ್ಕವರಿ ಚಾನೆಲ್ ಅನ್ನು ಪ್ರಾರಂಭಿಸಿದರು. ಆರಂಭದಲ್ಲಿ ೧೫೬,೦೦೦ ಕುಟುಂಬಗಳಿಗೆ ೧೨ ಗಂಟೆಗಳು ಅಂದರೆ ಸಂಜೆ ೩ ರಿಂದ ಬೆಳಗಿನ ಝಾವ ೩ರವರೆಗೂ ಅಮೇರಿಕಾದ ವೀಕ್ಷಕರಿಗೆ ಹೊಸ ವಸ್ತುಗಳು ಎನ್ನುವಂಥ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತಿತ್ತು.[೨] ೧೯೮೨ರಲ್ಲಿ ಇದನ್ನು ಆರಂಭಿಸಿದ ಕೀರ್ತಿ ಜಾನ್ ಹೆಂಡ್ರಿಕ್ಸ್ ಗೆ ಮತ್ತು ಮಾತೃ ಸಂಸ್ಥೆಯಾದ-ಆಗಿನ ಕೇಬಲ್ ಎಡ್ಯೂಕೇಷನಲ್ ನೆಟ್‌ವರ್ಕ್ ಇನ್‌ಗೆ ಸಲ್ಲುತ್ತದೆ.[೩]
ಆರಂಭದ ವರ್ಷಗಳಲ್ಲಿ ವ್ರೆಮ್ಯಾ ಎನ್ನುವ ವಾರ್ತೆಗಳನ್ನೊಳಗೊಂಡ ಕೆಲವು ಸೋವಿಯತ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿತ್ತು.[೪] ೧೯೮೮ರಲ್ಲಿ ವರ್ಳ್ಡ್ ಮಾನಿಟರ್ ಎನ್ನುವ ರಾತ್ರಿ ಕಾರ್ಯಕ್ರಮಗಳನ್ನು ಪ್ರಥಮವಾಗಿ ಪ್ರದರ್ಶಿಸಿತು ಇದನ್ನು ಕ್ರಿಶ್ಚೀಯನ್ ಸೈನ್ಸ್ ಮಾನಿಟರ್ ನಿರ್ಮಿಸಿತು. ೧೯೮೮ ಕೂಡ ಶಾರ್ಕ್ ವೀಕ್ ಎನ್ನುವ ಕಾರ್ಯಕ್ರಮವನ್ನು ಮೊದಲ ಬಾರಿಗೆ ವಾರ್ಷಿಕವಾಗಿ ಪ್ರದರ್ಶನಗೊಳ್ಳಲು ಹಿಂದಿರುಗಿತು. ಕೇವಲ ಐದು ವರ್ಷದೊಳಗೇ ಈ ಚಾನಲ್ ೫೦ ದಶಲಕ್ಷ ಕುಟುಂಬಗಳನ್ನು ತಲುಪಿತು.
ಜನವರಿ ೪, ೨೦೦೬ರಲ್ಲಿ, ಟೆಡ್ ಕಾಪ್ಪೆಲ್, ಬಹುಕಾಲದ ಕಾರ್ಯಕಾರಿ ನಿರ್ಮಾಪಕ ಟಾಮ್ ಬೆಟ್ಟಗ್ ಮತ್ತು ಎಂಟು ಮಂದಿ ನೈಟ್‌ಲೈನ್ ನ ಸಿಬ್ಬಂದಿ ವರ್ಗದವರು ಡಿಸ್ಕವರಿ ಚಾನಲ್‌ಗೆ ಸೇರುತ್ತಾರೆ ಎಂದು ಘೋಷಿಸಿತು.
ಮಾನ್ಸ್‌ಟರ್ ಗ್ಯಾರೇಜ್ ಮತ್ತು ಅಮೇರಿಕನ್ ಚಾಪರ್ ನಂಥ ಜನಪ್ರಿಯ ಸರಣಿಗಳ ಮೇಲೆ ಅತೀ ಅವಲಂಬಿತವಾಗಿ ಕಳೆಗುಂದಿದ ನೆಟ್‌ವರ್ಕ್‌ನ ರೇಟಿಂಗ್ ೨೦೦೬[೫] ರಲ್ಲಿ ಅಭಿವೃದ್ಧಿಗೊಂಡಿತು. ಆದರೆ ಇಂಥ ಧಾರಾವಾಹಿಗಳಿಂದ ವೀಕ್ಷಕರಿಗೆ ಪ್ರಪಂಚವನ್ನು ಅರಿವು ಮಾಡಿಸುವ ಡಿಸ್ಕವರಿಯ ಮೂಲೋದ್ದೇಶಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವು ವಿಮರ್ಶಕರು ಹೇಳಿದರು. ೨೦೦೫ರಲ್ಲಿ ಡಿಸ್ಕವರಿಯು ತನ್ನ ಎಂದಿನ ಸಾಂಪ್ರದಾಯಿಕ ಕಾರ್ಯಕ್ರಮಗಳಾದ ಜನಪ್ರಿಯ-ವಿಜ್ಞಾನ, ಚರಿತ್ರೆ ಮತ್ತು ಭೂಗೋಳಿಕ ಕಾರ್ಯಕ್ರಮಗಳೆಡೆಗೆ ದೃಷ್ಟಿ ಕೇಂದ್ರೀಕರಿಸಲು ತನ್ನ ನಿಲುವುಗಳನ್ನು ಪರಿಷ್ಕರಿಸಿತು[೬]. ದಿ ಫ್ಲೈಟ್ ದಟ್ ಫೌಟ್ ಬ್ಯಾಕ್ (ಯುನೈಟೆಡ್ ಏರ್‌ಲೈನ್ ಫ್ಲೈಟ್ 93 ಬಗೆಗಿನ ಕಾರ್ಯಕ್ರಮ) ಮತ್ತು ಡೆಡ್ಲೀಯಸ್ಟ್ ಕ್ಯಾ಼ಚ್ ನಂಥ ಕಾರ್ಯಕ್ರಮಗಳನೊಳಗೊಂಡ ಪ್ರದರ್ಶನಗಳಿಗೆ ಏಳು ಪ್ರೈಮ್ ಟೈಮ್ ಎಮ್ಮಿ ಪ್ರಶಸ್ತಿಗಳಿಗೆ ನಾಮಕರಣಗೊಂಡಿತು .
೨೦೦೭ರಲ್ಲಿ, ಡಿಸ್ಕವರಿ ಚಾನಲ್‌ನ ಶ್ರೇಷ್ಟ ಸರಣಿಗಳಲ್ಲಿ ಮೈಕ್ ರೋವ್ ಜೊತೆಗಿನ ಡರ್ಟಿ ಜಾಬ್ಸ್ , ಎಮ್ಮಿ ಪ್ರಶಸ್ತಿಯ ಪ್ಲಾನೆಟ್ ಅರ್ಥ್ , ಮಿಥ್‌ಬಸ್ಟರ್ಸ್ ಮತ್ತು ಡೆಡ್ಲೀಯೆಸ್ಟ್ ಕ್ಯಾಚ್ ಸೇರಿರುತ್ತದೆ. ೨೦೦೮ಕ್ಕೆ ಡಿಸ್ಕವರಿಯು ತನ್ನ ಯೋಜನೆಯನ್ನು ಪ್ರಕಟಿಸಿತು ಅದರ ಪ್ರಕಾರ ಹಿಸ್ಟರಿ ಚಾನೆಲ್ ಬಿಟ್ಟು ಡಿಸ್ಕವರಿ ಸೇರಿದ ಜೋಶ್ ಬರ್ನ್‌ಸ್ಟೇಯ್ನ್‌ನ ಹೊಸ ಧಾರಾವಾಹಿಗಳೂ ಒಳಗೊಂಡಿದೆ. ಇತರ ಘೋಷಿತ ಸರಣಿಗಳೆಂದರೆ ಫೈಟ್ ಕ್ವೆಸ್ಟ್ , ಸ್ಮ್ಯಾಶ್ ಲ್ಯಾಬ್ ಮತ್ತು ನಾಲ್ಕನೆ ಅವಧಿಯ ಡೆಡ್ಲೀಯೆಸ್ಟ್ ಕ್ಯಾಚ್ .
ಈ ಡಿಸ್ಕವರಿ ಚಾನೆಲ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲೇ ಅತ್ಯಂತ ವ್ಯಾಪಕವಾದ ಕೇಬಲ್ ನೆಟ್‌ವರ್ಕ್ ಆಗಿರುತ್ತದೆ,[೭] ಇದು ೯೨ ದಶಲಕ್ಷ ಕುಟುಂಬಗಳನ್ನು ಮುಟ್ಟುತ್ತದೆ, ಜಾಗತಿಕ ವೀಕ್ಷಕರಲ್ಲಿ ೪೩೧ ದಶಲಕ್ಷ ಮನೆಗಳು ೧೭೦ ದೇಶಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಸೇರಿರುತ್ತದೆ.[೮] ಲ್ಯಾಟಿನ್ ಅಮೇರಿಕಾ, ದಿ ಯುನೈಟೆಡ್ ಕಿಂಗ್ಡಂ, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಇಂಡಿಯಾ, ಮಲೇಷಿಯಾ ಮತ್ತು ಇತರ ದೇಶಗಳಲ್ಲಿ ಈ ಚಾನಲ್ ಕಾಣಬಹುದಾಗಿದೆ.[೯]
ಪ್ರೊಗ್ರಾಮಿಂಗ್
[ಬದಲಾಯಿಸಿ]ಈ ಚಾನಲ್‌ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ವರ್ಷಪೂರ್ತ ವಾರಕ್ಕೊಮ್ಮೆ ಪ್ರಸಾರವಾಗುವ ಕಡಲಮೀನುಗಳ ಬಗೆಗಿನ ಶಾರ್ಕ್ ವೀಕ್ ಕಾರ್ಯಕ್ರಮವು; ಬೆರಿಂಗ್ ಸಮುದ್ರದಲ್ಲಿ ಏಡಿ ಹಿಡಿಯುವ ಬಗೆಗಿನ ಡೆಡ್ಲೀಯಸ್ಟ್ ಕ್ಯಾಚ್ ಕಾರ್ಯಕ್ರಮ; ಜನಪ್ರಿಯ ವೈಜ್ಞಾನಿಕ ಕಾರ್ಯಕ್ರಮ ಮಿಥ್‌ಬಸ್ಟರ್ಸ್ ಮತ್ತು ಹೌ ಇಟ್ಸ್ ಮೇಡ್ ; ಡರ್ಟಿ ಜಾಬ್ಸ್ ಎನ್ನುವ ಕೊಳಕು ಮತ್ತು/ಅಥವಾ ಅಪಾಯಕಾರಿ ಶ್ರಮಜೀವಿಗಳ ಕೆಲಸಗಳ ಬಗೆಗಿನ ಕಾರ್ಯಕ್ರಮ; ಕ್ಯಾಷ್ ಕ್ಯಾಬ್ ಎನ್ನುವ ಪ್ರಶ್ನಾವಳಿ ಕಾರ್ಯಕ್ರಮ, ಫ್ಯೂಚರ್‌ವೆಪನ್ಸ್ ಎನ್ನುವ ಶಸ್ತ್ರಾಸ್ತ್ರಗಳ ಬಗೆಗಿನ ಕಾರ್ಯಕ್ರಮ ಮತ್ತು ಮನುಷ್ಯ ಹೇಗೆ ಕಾಡಿನಲ್ಲಿ ಬದುಕಬಹುದೆಂಬುದರ ಬಗೆ ಮ್ಯಾನ್ vs ವೈಳ್ಡ್ ಎನ್ನುವ ಕಾರ್ಯಕ್ರಮ-ಸೇರಿರುತ್ತದೆ. ಕ್ರಿಸ್ಟೋಫರ್ ಲೋವೆಲ್ ಶೋಗೆ ಕ್ರಿಸ್ಟೋಫರ್ ಲೋವೆಲ್ ಡೇಟೈಂ ಎಮ್ಮಿ ಅವಾರ್ಡ್ ಅನ್ನು ೨೦೦೦ರಲ್ಲಿ ಗೆದ್ದುಕೊಂಡನು ಈ ಕಾರ್ಯಕ್ರಮವು ಡಿಸ್ಕವರಿ ಚಾನಲ್‌ನಲ್ಲಿ ೧೯೯೮ರಿಂದ ೨೦೦೧ರವರೆಗೂ ಪ್ರಸಾರವಾಯಿತು.
ದೂರದರ್ಶನೇತರ ಸಾಹಸಗಳು
[ಬದಲಾಯಿಸಿ]ಪ್ರೋ ಸೈಕ್ಲಿಂಗ್ ಟೀಂ
[ಬದಲಾಯಿಸಿ]೨೦೦೪ಕ್ಕೂ ಟೂರ್ ಡಿ ಫ್ರಾನ್ಸ್‌ಗೂ ಮುನ್ನ, ಡಿಸ್ಕವರಿ ಚಾನಲ್ ತಾನು ೨೦೦೫ರಲ್ಲಿ ಪ್ರಾರಂಭವಾಗುವ ಪ್ರೊಫೆಷನಲ್ ಬೈಸೈಕ್ಲಿಂಗ್ ಟೀಂಗೆ ಪ್ರಾಥಮಿಕ ಪ್ರಾಯೋಜಿತರಾಗುವುದಾಗಿ ಘೋಷಿಸಿತು, ಆ ಟೂರ್ ಡಿ ಫ್ರಾನ್ಸ್ ಟೀಂನಲ್ಲಿ ಏಳು ಸಾರಿ ಗೆದ್ದ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಇರುತ್ತಾನೆ. ಆದಾಗ್ಯೂ ೨೦೦೭ರ ಸ್ಪಾನೀಯಾರ್ಡ್ ಆಲ್ಬರ್ಟೋ ಕಾಂಟಾಡರ್ ಜೊತೆಗಿನ ಗೆಲುವಿನ ನಂತರ ಡಿಸ್ಕವರಿ ಚಾನಲ್ ಸೈಕ್ಲಿಂಗ್ ಪ್ರಾಯೋಜನ ಮಾಡುವದರಿಂದ ತಾನು ನಿವೃತ್ತಿಯಾಗುವುದಾಗಿ ಘೋಷಿಸಿತು. ೨೦೦೭ರ ಸೈಕ್ಲಿಂಗ್ ಕಾಲದಷ್ಟು ಹೊತ್ತಿಗೆ ಈ ಪ್ರಾಯೋಜನ ಮುಗಿಯುತ್ತದೆ.
ಡಿಸ್ಕವರಿ ಚಾನಲ್ ರೇಡಿಯೋ
[ಬದಲಾಯಿಸಿ]ಎರಡು ದೊಡ್ಡ ಕೆನಡಾ ಸ್ಯಾಟಲೈಟ್ ರೇಡಿಯೋಗೆ ಡಿಸ್ಕವರಿ ರೇಡಿಯೋ ಚಾನಲ್ ಸೇವೆಯನ್ನು ಲಭ್ಯ ಮಾಡುತ್ತದೆ. ಈ ಕಾರ್ಯಕ್ರಮಗಳಲ್ಲಿ ಡಿಸ್ಕವರಿ ಚಾನಲ್ ರೂಪಿಸುವ ಟಿವಿ ಕಾರ್ಯಕ್ರಮಗಳ ಆಡಿಯೋ ವರ್ಸೆಗಳನ್ನು ಪ್ರಸಾರ ಮಾಡುತ್ತದೆ. ಪೂರ್ವದಲ್ಲಿ ಡಿಸ್ಕವರಿಯು XM ಸ್ಯಾಟಿಲೈಟ್ ರೇಡಿಯೋ ಮೇಲೆ ಅವಲಂಬಿಸಿತ್ತು ಆದರೆ ಅದು ಸೆಪ್ಟೆಂಬರ್ ೨೦೦೫ರ ಆರಂಭದಷ್ಟು ಹೊತ್ತಿಗೆ ನಿಲ್ಲಿಸಲಾಯಿತು. ಸಿರೀಯಸ್ ಸ್ಯಾಟಿಲೈಟ್ ರೇಡಿಯೋ ಡಿಸ್ಕವರಿಯನ್ನು ತನ್ನ ಪಟ್ಟಿಯಿಂದ ಫೆಬ್ರವರಿ ೨೧, ೨೦೦೭ರಿಂದ ತೆಗೆದುಹಾಕಿತು.
ಸ್ಟೋರ್
[ಬದಲಾಯಿಸಿ]ಅಮೇರಿಕಾದ್ಯಂತ ಮಾಲ್‌ಗಳಲ್ಲಿನ ಚಿಲ್ಲರೆ ಮಳಿಗೆಗಳಿಗೆ ಮತ್ತು ಆನ್‌ಲೈನ್ ಮಳಿಗೆಗಳಿಗೆ ತನ್ನ ಬ್ರಾಂಡಿಂಗ್ ಅನ್ನು ಡಿಸ್ಕವರಿ ಕೊಟ್ಟಿತು. ಶೈಕ್ಷಣಿಕ ಉಡುಗೊರೆಗಳು ಈ ಮಾಲ್‌ಗಳ ವಿಶೇಷವಾಗಿತ್ತು. ಮೇ ೧೭, ೨೦೦೭ರಲ್ಲಿ ತಾನು ತನ್ನ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮತ್ತು ಮಾಲ್‌ಗಳ ಸಹಾಯದಿಂದಿರುವ ಮಳಿಗೆಗಳನ್ನು ನಿಲ್ಲಿಸುವುದಾಗಿ ಡಿಸ್ಕವರಿ ಘೋಷಿಸಿತು. ಹಡ್ಸನ್ ಗ್ರೂಪ್ ಮಾತ್ರ ಏರ್‌ಪೋರ್ಟ್‌ನಲ್ಲಿ ಡಿಸ್ಕವರಿ ಚಾನಲ್‌ನ ಮಳಿಗೆ ಮತ್ತು ವೆಬ್‌ಸೈಟ್ ಅನ್ನು ನಡೆಸುವುದೆಂದು ಆಯಿತು.[೧೦]
ದೂರದರ್ಶಕ
[ಬದಲಾಯಿಸಿ]ಲೊವೆಲ್ ಅಬ್ಸರ್ವೇಟರಿಯ ಸಹಭಾಗಿತ್ವದೊಂದಿಗೆ ಡಿಸ್ಕವರಿ ಚಾನಲ್ ಟೆಲಿಸ್ಕೋಪ್ Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ. ನ ನಿರ್ಮಾಣಕ್ಕೂ ಕೂಡ ಡಿಸ್ಕವರಿ ಚಾನಲ್ ಹಣ ದೇಣಿಗೆ ಕೊಡುತ್ತದೆ.
ಜಾಲತಾಣ
[ಬದಲಾಯಿಸಿ]Discovery.com [೧] ನಲ್ಲಿ ಅನೇಕ ಪ್ರತ್ಯೇಕವಾದ ಬ್ರೌಸರ್ ಆಧಾರಿತ ಆಟಗಳನ್ನು ಹೊಂದಿರುತ್ತದೆ ಮತ್ತು ಅವುಗಳಲ್ಲಿ ನಾನಾ ರೀತಿಯ ವಿಜ್ಞಾನ ಆಧಾರಿತ ಮತ್ತು ಸಾಮಾಜಿಕ ಸವಾಲುಗಳ ಬಗ್ಗೆ ಇರುತ್ತದೆ.
ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್
[ಬದಲಾಯಿಸಿ]ಟ್ಯಾಗ್‌ಲೈನ್ಸ್
[ಬದಲಾಯಿಸಿ]ಡಿಸ್ಕವರಿ ಚಾನಲ್ ಹೆಸರಿನ ಹಿಂದಿನ ಟ್ಯಾಗ್‌ಲೈನ್ ಗಳೆಂದರೆ ಅದು "ಎಕ್ಸ್‌ಪ್ಲೋರ್ ಯುವರ್ ವರ್ಳ್ಡ್ " ಮತ್ತು "ದೇರ್ಸ್ ನೋ ಥ್ರಿಲ್ ಲೈಕ್ ಡಿಸ್ಕವರಿ. " ಆದಾಗ್ಯೂ ಹೆಚ್ಚು ರಿಯಾಲಿಟಿ ಆಧಾರಿತ ಶೋಗಳನ್ನು ಮಾಡಲು ಮತ್ತು ತೀರಾ ಶೈಕ್ಷಣಿಕವಾದ ಕಾರ್ಯಕ್ರಮಗಳನ್ನೇ ಮಾಡುವುದರಿಂದ ದೂರವುಳಿಯಲು "ಎಂಟರ್‌ಟೈನ್ ಯುವರ್ ಬ್ರೈನ್ " ಎಂಬ ಘೋಷಣಾ ವಾಕ್ಯಕ್ಕೆ ಬದಲಾವಣೆಗೊಂಡಿತು. ನವೀಕೃತ ಡಿಸ್ಕವರಿ ಚಾನಲ್‌ನ ಹೊಸ ಟ್ಯಾಗ್‌ಲೈನ್, "ಲೆಟ್ಸ್ ಆಲ್ ಡಿಸ್ಕವರ್... " ಆಗಿದ್ದು ಇದರಲ್ಲಿ ಸತತ ಪದಗುಚ್ಛ ಅಥವಾ ವಾಕ್ಯ ಆ ನಿರ್ದಿಷ್ಟ ಪ್ರದರ್ಶನಕ್ಕೆ ಅನ್ವಯವಾಗುವಂತೆ ಇರುತ್ತದೆ. ಉದಾಹರಣೆಗೆ, ಮಿಥ್‌ಬಸ್ಟರ್ಸ್ ಕಾರ್ಯಕ್ರಮಕ್ಕೆ ಜಾಹೀರಾತು ಮಾಡುವಾಗಿ ಅದು "ಲೆಟ್ಸ್ ಆಲ್ ಡಿಸ್ಕವರ್, ವೈ ನೋ ಮಿಥ್ ಇಸ್ ಸೇಫ್ " ಎಂದು ಕೊನೆಯಾಗುತ್ತಿತ್ತು. ೨೦೦೮ರ ಲೋಗೋ ಬದಲಾವಣೆಯಲ್ಲಿ ಹೊಸ ಟ್ಯಾಗ್‌ಲೈನ್ : "ದಿ ವರ್ಳ್ಡ್ ಇಸ್ ಜಸ್ಟ್... ಏವ್‌ಸಮ್ " ಎಂದಾಯಿತು. ಹೊಸ ಜಾಹೀರಾತುಗಳಲ್ಲಿ ಇನ್ನೂ ಬಿಡುಗಡೆಯಾಗದ ದಿ ಆಂಟಿಡೋಟ್ ಆಲ್ಬಂನ ಮೊರ್ಚೀಬಾದ ಹಾಡುಗಳಲ್ಲಿ "ವಂಡರ್ಸ್ ನೆವರ್ ಸೀಸ್" ಹಾಡು ಮತ್ತು ಮುಟೇಮಾಥ್ ನ ಟಿಪಿಕಲ್ ಹಾಡು ಸೇರಿರುತ್ತದೆ. ಅವರ ಇತ್ತೀಚಿನ ಜಾಹೀರಾತಿನಲ್ಲಿ ೭೨ ಆಂಡ್ ಸನ್ನಿ ಏಜೆನ್ಸಿಯವರು ಸೃಷ್ಟಿಸಿದ ಐ ಲವ್ ದಿ ವರ್ಳ್ಡ್ ಎಂಬ ಹಾಡು, ಸಾಂಪ್ರದಾಯಿಕ "ಐ ಲವ್ ದಿ ಮೌಂಟೇನ್ಸ್" ಎಂಬ ಕ್ಯಾಂಪ್ ಫೈರ್ ಹಾಡಿನ ಪಲ್ಲವಿಗಳನ್ನು ಹೊಂದಿದೆ.
ಲೋಗೋಗಳು
[ಬದಲಾಯಿಸಿ]ಡಿಸ್ಕವರಿ ಚಾನಲ್‌ನ ಮೊದಲ ಲೋಗೋದಲ್ಲಿ ವಿಶ್ವ ಭೂಪಟವನ್ನು ಹೊಂದಿರುವ ಟಿವಿ ಪರದೆಯಾಗಿತ್ತು.
ಎರಡು ದಶಕಗಳು ಪ್ರಸಾರದಲ್ಲಿದ್ದು ಲೋಗೋದಲ್ಲಿ ಡಿಸ್ಕವರಿ ವರ್ಡ್‌ಮಾರ್ಕ್ ಅನ್ನು ಅರೋರಾ ಬೋಳ್ಡ್ ಕಂಡೆನ್ಸ್‌ಡ್ ಫಾಂಟ್ ರೂಪದಲ್ಲಿ ಒಳಗೊಂಡಿರುತ್ತದೆ ಹಾಗೂ ಅದರಲ್ಲಿ ವೃತ್ತಾಕಾರದ ಸ್ವರೂಪವನ್ನು ಅದರ ಮುಂದೆ ಇರುತ್ತದೆ. ಸಾಧಾರಣವಾಗಿ ಆ ವೃತ್ತ ಉದಯ ರವಿಯ ಸ್ವರೂಪವನ್ನು ಪಡೆಯುತ್ತದೆ ಅಥವಾ ವಿಟ್ರೂವೀಯನ್ ಮ್ಯಾನ್ ನ ಅನಿಮೇಟೆಡ್ ವರ್ಸೆ ತಾಳುತ್ತದೆ.
೯೦ರ ಮಧ್ಯದಲ್ಲಿ "ದಿ" ಎನ್ನುವ ಪದವನ್ನು ಚಾನಲ್ ಹೆಸರಿನಲ್ಲಿ ತೆಗೆದು ಹಾಕಲಾಯಿತು. ಲೋಗೋದಲ್ಲಿ ಭೂಗೋಳವು ಶಾಶ್ವತ ಸ್ಥಾನವನ್ನು ಪಡೆಯಿತು ಮತ್ತು ಅದಕ್ಕೊಂದು ಪಟ್ಟಿಯನ್ನು ಅದರ ಕೆಳಗೆ ಅಳವಡಿಸಲಾಯಿತು. ಈ ಅವಧಿಯಲ್ಲೇ ಕಂಪನಿಯು ಅನೇಕ ಹೊಸ ಜಾಲಗಳನ್ನು ಪ್ರಾರಂಭಿಸಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿತು. ಡಿಸ್ಕವರಿ ಬಳಸುವ ಮಾದರಿಯ ಲೋಗೋವನ್ನೇ ಅನೇಕ ಸೋದರ ಸಂಸ್ಥೆಗಳೂ ಬಳಸಿದವು, ಅವುಗಳಲ್ಲಿ ಭೂಪಟವನ್ನು ಅಳವಡಿಸಿರುವುದೂ ಇರುತ್ತಿತ್ತು ಮತ್ತು ಅದೇ ರೀತಿಯು ಮುದ್ರಾಕ್ಷರದ ಛಾಪು ಇರುತ್ತಿತ್ತು. ಡಿಸ್ಕವರಿಯ ಲೋಗೋಗಳನ್ನು ಹೊಂದಿರುವ ಇತರ ಜಾಲಗಳೆಂದರೆ ಅನಿಮಲ್ ಪ್ಲಾನೆಟ್, ಟ್ರಾವೆಲ್ ಚಾನಲ್, ಡಿಸ್ಕವರಿ ಸೈನ್ಸ್, ಡಿಸ್ಕವರಿ ವಿಂಗ್ಸ್ ಮತ್ತು ಡಿಸ್ಕವರಿ ಹೋಮ್ ಮತ್ತು ಲೀಶ್ಯೂರ್. ೨೦೦೦ರಲ್ಲಿ ಲೋಗೋವನ್ನು ಸಣ್ಣದಾಗಿ ಬದಲಾಯಿಸಲಾಯಿತು, ಅದರಲ್ಲಿ "ಚಾನಲ್" ಪದವನ್ನು ಪಟ್ಟಿಯೊಳಗಡೆಗೆ ಜರುಗಿಸಲಾಯಿತು.
ಏಪ್ರಿಲ್ ೧೫, ೨೦೦೮ರಂದು, ಡೆಡ್ಲೀಯಸ್ಟ್ ಕ್ಯಾಚ್ ನ ಪ್ರಥಮ ಪ್ರದರ್ಶನಕ್ಕೆ ಮುನ್ನ, ಡಿಸ್ಕವರಿ ಚಾನಲ್ ಹೊಸ ಲೋಗೋವನ್ನು, ಹೊಸ ಗ್ರಾಫಿಕ್ಸ್ ಅನ್ನು ಮತ್ತು "ದಿ ವರ್ಳ್ಡ್ ಇಸ್ ಜಸ್ಟ್ ಆವ್‌ಸಂ" ಎಂಬ ಟ್ಯಾಗ್‌ಲೈನ್ ಅನ್ನು ಪ್ರಾರಂಭಿಸಿತು. ಈ ಹೊಸ ಲೋಗೋವನ್ನು ಬಾಸ್ಟನ್‌ನ ವ್ಯೂ ಪಾಯಿಂಟ್ ಕ್ರಿಯೇಟಿವ್‌ನವರು ವಿನ್ಯಾಸಗೊಳಿಸಿದರು ಮತ್ತು ಅರೋರಾ ಬೋಳ್ಡ್ ಕಂಡೆನ್ಸ್‌ಡ್ ಫಾಂಟ್‌ಗೆ ಬದಲಾಗಿ ಗೋಥಮ್ ಫಾಂಟ್ ಬಳಸಲಾಯಿತು.[೧೧] ಭೂಗೋಳವು "ಡಿಸ್ಕವರಿ" ಪದದ "D" ಅಕ್ಷರದೊಂದಿಗೆ ಬೆಸೆಯಲಾಗಿದೆ.[೧೨] ಈ ಡಿ-ಭೂಪಟ ಭಾಗವನ್ನು ಪ್ರತ್ಯೇಕವಾಗಿ ಹೊರ ತೆಗೆಯ ಬಹುದು ಉದಾಹರಣೆಗೆ ಅದನ್ನು ಚಾನಲ್‌ನ ಬಗ್ ನಲ್ಲಿ ಬಳಸಲಾಗಿದೆ. ೨೦೦೯ರ ಮೊದಲಾರ್ಧದಲ್ಲಿ ವಿಶ್ವದ ಇತರ ಭಾಗಕ್ಕೆ ಹೊಸ ಲೋಗೋವನ್ನು ಬಿಡಲಾಯಿತು.
ಅಂತಾರಾಷ್ಟ್ರೀಯ
[ಬದಲಾಯಿಸಿ]೧೭೦ ದೇಶಗಳಲ್ಲಿ ೪೩೧ ದಶಲಕ್ಷ ಕುಟುಂಬಗಳಿಗೆ ಡಿಸ್ಕವರಿ ತಲುಪುತ್ತದೆ. ಪ್ರಸ್ತುತ ಡಿಸ್ಕವರಿ ಕಮ್ಯೂನಿಕೇಷನ್ಸ್‌ನವರು ೩೩ ಭಾಷೆಗಳಲ್ಲಿ ೨೯ ಜಾಲಗಳಿಗೆ ಪ್ರಸಾರ ಮಾಡುತ್ತಾರೆ. ಅಸಂಖ್ಯಾತ ದೇಶಗಳಲ್ಲಿ ಡಿಸ್ಕವರಿ ಚಾನಲ್ ಡಿಜಿಟಲ್ ಉಪಗ್ರಹ ವೇದಿಕೆಯಲ್ಲಿ ಬಹುಸಂಖ್ಯಾತ ಭಾಷೆಗಳ ಧ್ವನುಮುದ್ರಣ ಗಳಲ್ಲಿ ಅಥವಾ ಅಡಿಬರಹಗಳಲ್ಲಿ ಲಭ್ಯವಾಗುತ್ತದೆ. ಅವುಗಳಲ್ಲಿ ಸ್ಪ್ಯಾನಿಷ್, ಜರ್ಮನ್, ರಷಿಯನ್, ಝೆಕ್, ಹಿಂದಿ,ತೆಲುಗು ತಮಿಳು, ಡಚ್, ಪೋರ್ಚ್ಯೂಗೀಸ್, ಇಟಾಲೀಯನ್, ನಾರ್ವೇಯ್ನ್, ಸ್ವೀಡಿಶ್, ಡ್ಯಾನಿಶ್, ಫಿನ್ನಿಶ್, ಟರ್ಕಿಶ್, ಗ್ರೀಕ್, ಪಾಲಿಶ್, ಹಂಗೇರಿಯನ್, ರೊಮಾನೀಯನ್, ಅರಾಬಿಕ್, ಸ್ಲೋವೀನ್, ಇಂಡೀಯನ್, ಜಪಾನೀಸ್, ಕೊರೀಯನ್ ಮತ್ತು ಸರ್ಬೀಯನ್ ಭಾಷೆಗಳಿರುತ್ತದೆ. ಬಲ್ಗೇರಿಯಾದಲ್ಲಿ, ಕೇಬಲ್ ಸೇವೆ ಒದಗಿಸುವವರ ಸಹಾಯದೊಂದಿಗೆ ೨೦೦೦–೨೦೦೧ರಿಂದ ಡಿಸ್ಕವರಿಯು ಬಲ್ಗೇರಿಯನ್ ಭಾಷೆಗಳಲ್ಲಿ ಅಡಿಬರಹದೊಂದಿಗೆ ಪ್ರದರ್ಶನಗೊಳ್ಳುತ್ತಿದೆ.
ಕೆನಡಾ
[ಬದಲಾಯಿಸಿ]ಡಿಸ್ಕವರಿ ಚಾನಲ್ ಕೆನಡಾದಲ್ಲಿ ಪ್ರತ್ಯೇಕವಾದ ಮಾಲೀಕತ್ವವನ್ನು ಹೊಂದಿದೆ. ಕೆನೇಡಿಯನ್ ವೀಕ್ಷಕರಿಗೆ ಎಂದೇ ಮಾಡಿದ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ ಕೆನೇಡಿಯನ್ ವೀಕ್ಷಕರು ಅನೇಕಾಂಶ ಆಂಗ್ಲ-ಭಾಷೆಯ ಅಮೇರಿಕನ್ನರು ವೀಕ್ಷಿಸುವ ಕಾರ್ಯಕ್ರಮಗಳನ್ನೇ ವೀಕ್ಷಿಸುತ್ತಾರೆ. ಗಮನೀಯವಾಗಿ, ಕೆನೇಡೀಯನ್ ಚಾನಲ್‌ನವರು ಡೈಲಿ ಪ್ಲಾನೆಟ್ ಎನ್ನುವ ಶೋವನ್ನು ನಿತ್ಯ ಪ್ರಸಾರ ಮಾಡುತ್ತದೆ, ಮೂಲಭೂತವಾಗಿ ಇದು @discovery.ca , ಇದು ಈ ರೀತಿಯಲ್ಲಿ ಮೊದಲ ಬಾರಿ ಎನ್ನಲಾಗಿದೆ. ಅಪರೂಪವಾಗಿ, ಅನೇಕ ಇಂಥ ವಿಷಯಗಳು ನಾನಾ ಸರಣಿಗಳಲ್ಲಿ ತೆಗೆದುಕೊಂಡು ಒಂದು ಗಂಟೆಯ ವಿಶೇಷ ಕಾರ್ಯಕ್ರಮದಲ್ಲಿ ಸೇರಿಸಿ ಮೂಲ ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಕೆನೇಡಿಯನ್ ಚಾನಲ್‌ಗಳಾದ ಡಿಸ್ಕವರಿ HD, ಡಿಸ್ಕವರಿ ಹೆಲ್ತ್, ಡಿಸ್ಕವರಿ ಕಿಡ್ಸ್, ಡಿಸ್ಕವರಿ ಸಿವಿಲೈಜೇಷನ್, ಮತ್ತು ಅನಿಮಲ್ ಪ್ಲಾನೆಟ್ ಕೂಡ ಕಂಡು ಬರುತ್ತದೆ. ಎಲ್ಲಾ ಚಾನಲ್‌ಗಳೂ ಪ್ರತ್ಯೇಕ ಮಾಲೀಕತ್ವವನ್ನು ಹೊಂದಿದ್ದರೂ ಡಿಸ್ಕವರಿ ಕಮ್ಯೂನಿಕೇಷನ್ಸ್ ನವರದ್ದು ೨೦% ಪಾಲುದಾರಿಕೆ ಇರುತ್ತದೆ.
ಯುರೋಪ್
[ಬದಲಾಯಿಸಿ]ಯುನೈಟೆಡ್ ಕಿಂಗ್ಡಂನಲ್ಲಿ ಡಿಸ್ಕವರಿ ಚಾನಲ್ UKಯು US ವರಸೆಯ ಕೆಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ ಅವುಗಳಲ್ಲಿ ಮಿಥ್‌ಬಸ್ಟರ್ಸ್ , ಅಮೇರಿಕನ್ ಚಾಪರ್ಸ್ , ಹೌ ಇಟ್ಸ್ ಮೇಡ್ ಮತ್ತು ಡೆಡ್ಲೀಯಸ್ಟ್ ಕ್ಯಾಚ್ ಇರುತ್ತದೆ. ಡಿಜಿಟಲ್ ಸ್ಯಾಟಿಲೈಟ್ (SKY) ಮತ್ತು ಡಿಜಿಟಲ್ ಕೇಬಲ್‌ನ ಬೇಸಿಕ್ ವಂತಿಗೆ ಆಧಾರಿತವಾಗಿ ಈ ಚಾನಲ್ ನಡೆಯುತ್ತದೆ. ಡಿಸ್ಕವರಿ UK ಕೆಲವು ಹೆಚ್ಚಿನ ಚಾನಲ್‌ಗಳನ್ನು ನಡೆಸುತ್ತದೆ: ಅವುಗಳೆಂದರೆ ಡಿಸ್ಕವರಿ HD, ಡಿಸ್ಕವರಿ ನಾಲೆಡ್ಜ್, ಡಿಸ್ಕವರಿ ಟರ್ಬೋ, ಡಿಸ್ಕವರಿ ಸೈನ್ಸ್, ಅನಿಮಲ್ ಪ್ಲಾನೆಟ್, DMAX, ಡಿಸ್ಕವರಿ ರೀಯಲ್ ಟೈಮ್, ಡಿಸ್ಕವರಿ ಹೋಮ್ ಆಂಡ್ ಹೆಲ್ತ್, ಡಿಸ್ಕವರಿ ಟ್ರಾವೆಲ್ ಆಂಡ್ ಲೀಶ್ಯೂರ್ ಹಾಗೂ ಡಿಸ್ಕವರಿ ಶೆಡ್. ಪಾಳಿಗಳ ಅನುಸಾರವಾಗಿ ಈ ಕೆಲವು ಚಾನಲ್‌ಗಳು ಕಾರ್ಯ ನಿರ್ವಹಿಸುತ್ತವೆ.
ಐರ್ಲ್ಯಾಂಡ್ ಗಣರಾಜ್ಯದಲ್ಲಿ UK ಸಂಚಿಕೆಗಳು ಅನೇಕ ಕೇಬಲ್/ಡಿಜಿಟಲ್ ಆಪರೇಟರ್‌ಗಳೊಡನೆ ಲಭ್ಯವಾಗುತ್ತದೆ ಆದರೆ ಅದು ಸ್ಥಳೀಯ ಜಾಹೀರಾತನ್ನು ಮಾತ್ರ ಹೊಂದಿರುತ್ತದೆ.
ಜರ್ಮನಿ, ಆಸ್ಟ್ರಿಯಾ ಮತ್ತು ಸ್ವಿಜರ್‌ಲ್ಯಾಂಡ್ ಗಳಲ್ಲಿ ಡಿಸ್ಕವರಿ ಚಾನಲ್ ಪ್ರೀಮೀಯರ್-ಡಿಜಿಟಲ್-ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸುವುದಲ್ಲದೆ ಬೇರೆ ಇತರ ನೆಟ್‌ವರ್ಕ್‌ಗಳಾದ ZDF ಮತ್ತು ಕೇಬೆಲ್ 1ಗೆ ಕೆಲವು ನಿರ್ದಿಷ್ಟ ಕಾರ್ಯಕ್ರಮಗಳನ್ನು ಮಾಡಿ ಕೊಡುತ್ತದೆ. ಸಾಕ್ಷ್ಯ ಚಿತ್ರಗಳ ಚಾನಲ್ XXPಗೂ ಕೂಡ ಡಿಸ್ಕವರಿ ಕಮ್ಯೂನಿಕೇಷನ್ಸ್ ಮಾಲೀಕತ್ವವನ್ನು ಹೊಂದಿದೆ. ಈ ಚಾನಲ್‌ನ ಮಾಜಿ ಷೇರುದಾರರಾದ ಸ್ಪೈಗೆಲ್ TV ಮತ್ತು "dctp"ಯವರಿಂದ ೨೦೦೬ರ ವಸಂತದಲ್ಲಿ ಕೊಂಡುಕೊಳ್ಳಲಾಯಿತು. ಎಲ್ಲಾ ಕಾರ್ಯಕ್ರಮಗಳನ್ನು ಜರ್ಮನ್ ಭಾಷೆಗೆ ಡಬ್ ಮಾಡಲಾಗುತ್ತದೆ. ಈ ಚಾನಲ್ ಈಗ "DMAX" ಎಂದು ಕರೆಯಲಾಗುತ್ತದೆ, ಡಿಸ್ಕವರಿ ಚಾನಲ್‌ನೊಂದಿಗೆ ಸಂಭಾವ್ಯವಾಗಿ ಜಂಟಿಯಾಗಲು ಈ ರೀತಿ ಹೆಸರೆನ್ನಬಹುದು.
ನೆದರ್‌ಲ್ಯಾಂಡ್ಸ್ ನಲ್ಲಿ, ದಿ ಡಿಸ್ಕವರಿ ಚಾನಲಿಗೆ IPTV ಮತ್ತು DVB-Tಯ ಚಂದಾ ಜೊತೆಗೆ ಅನೇಕ ಕೇಬಲ್ ಚಂದಾವನ್ನು ಸೇರಿಸಲಾಗಿದೆ. ಬಹುತೇಕ ಎಲ್ಲಾ ಕಾರ್ಯಕ್ರಮಗಳು ತನ್ನ ಮೂಲ ಭಾಷೆಯಲ್ಲೇ ಪ್ರಸಾರವಾಗುತ್ತದೆ ಆದರೆ ಡಚ್ ನಲ್ಲಿ ಮಾತ್ರ ಡಚ್ ಭಾಷೆಯಲ್ಲೇ ಅಡಿಬರಹವಿರುತ್ತದೆ ಕಾರಣ ಅದು ಡಚ್‌ನ ನಿಯಮವಾಗಿರುತ್ತದೆ. ಕೆಲವು ಕಾರ್ಯಕ್ರಮಗಳು ಮತ್ತು ಅನೇಕ ಪ್ರಚಾರ ತುಣುಕುಗಳು ಹಾಗೂ ಕಾರ್ಯಕ್ರಮದ ಘೋಷಣೆಗಳ ಧ್ವನಿಯೂ ಕೂಡ ಡಚ್ ಭಾಷೆಯಲ್ಲೇ ಇರುತ್ತದೆ. ಬೆಲ್ಜೀಯಂನ ಡಚ್ ಮಾತನಾಡುವ ಭಾಗವಾದ ಫ್ಲಾಂಡರ್ಸ್‌ನಲ್ಲಿ ಡಿಸ್ಕವರಿ ಚಾನಲ್ ಕೇಬಲ್ ಟೆಲಿವಿಷನ್‌ನಲ್ಲಿ ೧ ಅಕ್ಟೋಬರ್ ೨೦೦೯ರಿಂದ ಲಭ್ಯವಾಗುತ್ತದೆ.
ಪೋಲ್ಯಾಂಡ್ ನಲ್ಲಿ ಡಿಸ್ಕವರಿ ಚಾನಲ್ ಅನೇಕ ಕೇಬಲ್ ಟೆಲಿವಿಷನ್ ಆಫರ್‌ಗಳಲ್ಲಿ ಸೇರಿಸಲಾಗಿದೆ. ಕೆಲವೊಮ್ಮೆ ಸ್ವಲ್ಪ ಹೆಚ್ಚುವರಿ ಹಣ ತೆಗೆದುಕೊಂಡು ಸ್ಯಾಟಿಲೈಟ್ ಡಿಜಿಟಲ್ ವೇದಿಕೆಗಳಲ್ಲಿ ಲಭ್ಯ ಮಾಡಲಾಗಿದೆ. ಸೈಫ್ರಾ ಪ್ಲಸ್-ಪಾಲಿಷ್ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಕಾಣಲು ಅವಕಾಶ ಕಲ್ಪಿಸಿಕೊಟ್ಟಿದೆ. ಮತ್ತು ಡಿಜಿಟಲ್ ವೇದಿಕೆ "n" ಮೇಲೆಯೂ ಕೂಡ ಹೆಚ್ಚುವರಿಯಾಗಿ ಡಿಸ್ಕವರಿ ಹಿಸ್ಟೋರಿಯಾ ಚಾನಲ್ ಅನ್ನು ಪಾಲಿಷ್‌ನ ದೊಡ್ದ ಪ್ರಸಾರದ TVN ಎಂಬ ಸಂಸ್ಥೆಯ ಸಹಕಾರದೊಡನೆ ನಿರ್ಮಿಸಲಾಗಿರುತ್ತದೆ.
ಸ್ಲೋವೇನಿಯಾದಲ್ಲಿ, ಡಿಸ್ಕವರಿ ಚಾನಲ್ ಅತ್ಯಂತ ಜನಪ್ರಿಯ ಚಾನಲ್‌ಗಳಲ್ಲಿ ಒಂದಾಗಿರುತ್ತದೆ, ಇದಕ್ಕೆ ವ್ಯಾಪಕವಾದ ವೀಕ್ಷಕ ಬಳಗವಿದೆ ಹಾಗಾಗಿ ಕಾರ್ಯಕ್ರಮಗಳ ಅಡಿಬರಹವನ್ನು ಸ್ಲೋವೇನ್ ನಲ್ಲಿಯೂ ಕೊಡಲಾಗುತ್ತದೆ.
ಸರ್ಬಿಯಾದಲ್ಲಿ ಡಿಸ್ಕವರಿ ಚಾನಲ್ ಅನ್ನು ಕೇಬಲ್ ಮುಖೇನ ಸರ್ಬಿಯನ್ ಅಡಿಬರಹದಲ್ಲಿ ಪ್ರಸಾರ ಮಾಡಲಾಗುತ್ತದೆ. ಮಿಥ್ ಬಸ್ಟರ್ಸ್ ನಂಥ ಸುಮಾರಾದ ಜನಪ್ರಿಯತೆಯನ್ನು ಅನುಭವಿಸಿದರೆ ಅಮೇರಿಕನ್ ಚಾಪರ್ ಅದ್ಭುತವಾಗಿ ಸ್ವೀಕರಿಸಲಾಯಿತು.
ಸ್ಪೇಯ್ನ್ ನಲ್ಲಿ, ದಿಸ್ಕವರಿ ಚಾನಲ್ ಪೋರ್ಚುಗಲ್ ನೊಂದಿಗೆ ಸಮಯವನ್ನು ಹಾಗೂ ಕಾರ್ಯಕ್ರಮಗಳನ್ನು ಹಂಚಿಕೊಳ್ಳುತ್ತದೆ ಮತ್ತು ಸ್ಯಾಟಿಲೈಟ್ ಮತ್ತು ಕೇಬಲ್ ವೇದಿಕೆಗಳಲ್ಲಿ ಲಭ್ಯವಾಗುತ್ತದೆ ಹಾಗೂ ಅದು ಸ್ಪ್ಯಾನಿಷ್ ಮತ್ತು ಪೋರ್ಚ್ಯೂಗೀಸ್ ಭಾಷೆಗಳೆರಡರಲ್ಲೂ ಲಭ್ಯವಾಗುತ್ತದೆ. ಸ್ಪೇಯ್ನ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನೂ ಡಬ್ಬಿಂಗ್ ಮಾಡಿದರೆ ಪೋರ್ಚ್ಯೂಗಲ್‌ನಲ್ಲಿ ಮಾತ್ರ ಅಡಿಬರಹದೊಂದಿಗೆ ಪ್ರಸಾರವಾಗುತ್ತದೆ. ಜೊತೆಗೆ, ಪೋರ್ಚ್ಯೂಗಲ್ ಮೂರು ಡಿಸ್ಕವರಿ-ಬ್ರಾಂಡ್ ಚಾನಲ್‌ಗಳನ್ನು ಹೊಂದಿದೆ : ಡಿಸ್ಕವರಿ ಟರ್ಬೋ (ಕ್ರೀಡಾಮೋಟಾರ್‌ಗಳು), ಡಿಸ್ಕವರಿ ಸೈನ್ಸ್ (ಸೈನ್ಸ್ ಆಂಡ್ ಟೆಕ್ನಾಲಜಿ) ಮತ್ತು ಡಿಸ್ಕವರಿ ಸಿವಿಲೈಜೇಷನ್ (ಪುರಾತನ ಚರಿತ್ರೆ, ಕ್ರೈಂಗಳು, ಉಗ್ರರ ದಾಳಿ ಇತ್ಯಾದಿ). ಇವು ಮೂಲ ಡಿಸ್ಕವರಿ ಚಾನಲ್‌ಗಳನ್ನೇ ಅನುಸರಿಸುತ್ತದೆ ಆದರೆ ಜಾಹೀರಾತುಗಳನ್ನು ಮಾತ್ರ ಹೊರತು ಪಡಿಸಲಾಗಿರುತ್ತದೆ. ಸ್ಪ್ಯಾನಿಷ್ ಜಾಹೀರಾತುಗಳು ಪೋರ್ಚ್ಯೂಗೀಸರಿಗೆ ಡಬ್ಬಿಂಗ್ ಮಾಡದೆ ಅಥವಾ ಅಡಿಬರಹವಿಲ್ಲದೆ ಉಣಬಡಿಸಲಾಗುತ್ತದೆ.
ಆಸ್ಟ್ರೇಲಿಯಾ ಮತ್ತು ನ್ಯೂ ಜೀಲ್ಯಾಂಡ್
[ಬದಲಾಯಿಸಿ]ಆಸ್ಟ್ರೇಲಿಯಾದಲ್ಲಿ, ಸಮಯದ ಪಾಳಿಯಿಲ್ಲದೆ ಡಿಜಿಟಲ್ ವಂತಿಗೆ ಮೇಲೆ ಕಾರ್ಯನಿರ್ವಹಿಸುವ ಆರು ಚಾನಲ್‌ಗಳಲ್ಲಿ ಡಿಸ್ಕವರಿ ಚಾನಲ್ ಒಂದಾಗಿರುತ್ತದೆ ಮತ್ತು ಇದು ಫಾಕ್ಸ್‌ಟೆಲ್, ಆಪ್ಟಸ್ TV ಮತ್ತು ಆಸ್ಟಾರ್ ನಲ್ಲಿ ಲಭ್ಯವಾಗುತ್ತದೆ.
ನ್ಯೂ ಜೀಲ್ಯಾಂಡ್ ನಲ್ಲಿ ಆಸ್ಟ್ರೇಲಿಯಾ ವರಸೆಯ ಡಿಸ್ಕವರಿಯು ಸ್ಕೈ ನೆಟ್‌ವರ್ಕ್ ಟೆಲಿವಿಶನ್ ನಲ್ಲಿ ಪ್ರಸಾರವಾಗುತ್ತದೆ.
ಆಗ್ನೇಯ ಏಷ್ಯಾ
[ಬದಲಾಯಿಸಿ]ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫಿಲ್ಲೀಪೀನ್ಸ್, ಮಲ್ಲೇಷಿಯಾ, ಸಿಂಗಾಪೂರ್, ಥಾಯ್‌ಲ್ಯಾಂಡ್, ವಿಯೆಟ್ನಾಮ್ ಮತ್ತು ಇತರ ಆಗ್ನೇಯ ಏಷಿಯಾದಲ್ಲಿ, ಡಿಸ್ಕವರಿಯ ಚಾನಲ್ ಡಿಜಿಟಲ್ ವಂತಿಗೆಯ ಟೆಲಿವಿಷನ್‌ನಲ್ಲಿ ಲಭ್ಯವಾಗುತ್ತದೆ. ಡಿಸ್ಕವರಿ ಚಾನಲ್ ಏಷಿಯಾ ಇನ್ನೂ ಕೂಡ ಕ್ರೈಂ ಕಾರ್ಯಕ್ರಮಗಳನ್ನು ತೋರಿಸುತ್ತದೆ ಉದಾಹರಣೆಗೆ ಮೋಸ್ಟ್ ಈವಿಲ್ , ದಿ FBI ಫೈಲ್ಸ್ , ಇತ್ಯಾದಿ.. ವಿಶೇಷವಾಗಿ ಭಾರತ ಮತ್ತು ಚೀನಾದಲ್ಲಿ ಅಭಿವೃದ್ಧಿ ಹಾಗೂ ಸಮಾಜದ ಬಗ್ಗೆ ಅನೇಕ ಕಾರ್ಯಕ್ರಮಗಳಿವೆ. ಉದಾಹರಣೆಗೆ ಥಾಯ್‌ಲ್ಯಾಂಡ್, ಮಲ್ಲೇಷಿಯಾ ಮತ್ತು ಸಿಂಗಾಪೂರ್‌ಗಳಲ್ಲಿ ಡಿಸ್ಕವರಿ ಚಾನಲ್‌ನಿಂದ ಕವಲೊಡೆದ ಅನೇಕ ಚಾನಲ್‌ಗಳಿವೆ : ಡಿಸ್ಕವರಿ ಟರ್ಬೋ, ಡಿಸ್ಕವರಿ ಸೈನ್ಸ್, ಡಿಸ್ಕವರಿ ಹೋಮ್ ಆಂಡ್ ಹೆಲ್ತ್ ಮತ್ತು ಡಿಸ್ಕವರಿ ಟ್ರಾವೆಲ್ ಆಂಡ್ ಲಿವಿಂಗ್.
ಇನ್ನೊಂದು ಕಡೆ ಫಿಲ್ಲೀಪೀನ್ಸ್ ತನ್ನದೇ ಆದ ಸ್ವಂತ ಚಾನಲ್ ಇದೆ ಅದು ಆಗ್ನೇಯ ಏಷಿಯಾದಿಂದ ಪ್ರತ್ಯೇಕವಾಗಿರುತ್ತದೆ. ಅದರೆ ಇತ್ತೀಚೆಗೆ ಫಿಲ್ಲೀಪೀನ್ಸ್‌ನವರು ಆಗ್ನೇಯ ಏಷಿಯಾದೊಡನೆ ಸಮಯ ಹಾಗೂ ಕಾರ್ಯಕ್ರಮಗಳನ್ನು ಹಂಚಿಕೊಳ್ಳುತ್ತಿದೆ ಆದರೆ ಫಿಲ್ಲೀಪೀನ್ ಜಾಹೀರಾತುಗಳನ್ನು ಮತ್ತು ವಾಣಿಜ್ಯ ಬ್ರೇಕ್‌ಗಳನ್ನು ಮಾತ್ರ ಹೊರತು ಪಡಿಸಿರುತ್ತದೆ.
ದಕ್ಷಿಣ ಆಫ್ರಿಕಾ
[ಬದಲಾಯಿಸಿ]ದಕ್ಷಿಣ ಆಫ್ರಿಕಾದಲ್ಲಿ, ಡಿಸ್ಕವರಿ ಚಾನಲ್ ತನ್ನ ಸಮಯ ಹಾಗೂ ಕಾರ್ಯಕ್ರಮಗಳನ್ನು ಆಫ್ರಿಕಾದ ಎಲ್ಲಾ ಮಿಡ್ಲ್ ಈಸ್ಟ್ ಮತ್ತು ಟರ್ಕಿ ಜೊತೆ ಹಂಚಿಕೊಳ್ಳುತ್ತದೆ. DStv/ಮಲ್ಟಿಚಾಯ್ಸ್ ವೇದಿಕೆಯಲ್ಲಿ ಡಿಸ್ಕವರಿ ಚಾನಲ್ ಜೊತೆಗೆ ಸಿಬ್ಲಿಂಗ್ ಚಾನಲ್‌ಗಳು, ಡಿಸ್ಕವರಿ ವರ್ಲ್ಡ್ ಮತ್ತು ಅನಿಮಲ್ ಪ್ಲಾನೆಟ್ ಲಭ್ಯವಾಗುತ್ತದೆ.
ವಿವಾದ
[ಬದಲಾಯಿಸಿ]RFID
[ಬದಲಾಯಿಸಿ]ಆಗಸ್ಟ್ ೨೦೦೮ರಲ್ಲಿ ಡಿಸ್ಕವರಿ ಚಾನಲ್ ತನ್ನ ಜನಪ್ರಿಯ ಕಾರ್ಯಕ್ರಮ ಮಿಥ್‌ಬಸ್ಟರ್ಸ್ ಅನ್ನು ನಿಲ್ಲಿಸಿತೆಂದು ವರದಿಯಾಯಿತು ಕಾರಣ ಆ ಧಾರಾವಾಹಿಯಲ್ಲಿ ಕ್ರೆಡಿಟ್ ಕಾರ್ಡ್ ಗಳಲ್ಲಿ RFID ಸುರಕ್ಷತೆ ಬಗ್ಗೆ ಪರೀಕ್ಷಿಸಲಾಗಿತ್ತು, ಇದು ಚಾನಲ್‌ನ ಬಹುತೇಕ ಜಾಹೀರಾತುದಾರರಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿಯವರೇ ಇರುವುದರಿಂದ ಅವರ ವ್ಯಾಪಾರಕ್ಕೆ ಧಕ್ಕೆ ಬಂದಲ್ಲಿ ಅವರು ಡಿಸ್ಕವರಿ ಚಾನಲ್‌ಗೆ ಜಾಹೀರಾತು ಕೊಡದೆ ಹೋಗಬಹುದೆಂಬ ಅಳುಕಿನಿಂದ ಈ ನಿಲುವನ್ನು ತಾಳಲಾಯಿತೆಂದು ಹೇಳಲಾಗಿದೆ. ಮಿಥ್‌ಬಸ್ಟರ್ಸ್ ಕಾರ್ಯಕ್ರಮವನ್ನು ನಿರ್ಮಿಸುವ ಸಂಸ್ಥೆ ಬಿಯಾಂಡ್ ಪ್ರೊಡಕ್ಷನ್ಸ್ ಈ ವಿಚಾರವನ್ನು ತನಿಖೆ ಮಾಡದಿರಲು ತೀರ್ಮಾನಿಸಿತು ಆದರೆ ಈ ತೀರ್ಮಾನ ಡಿಸ್ಕವರಿಯಾಗಲಿ ಅಥವಾ ಅದರ ಜಾಹೀರಾತು ವಿಭಾಗವಾಗಲಿ ತೆಗೆದುಕೊಂಡಿಲ್ಲ.[೧೩]
ಒಗಟು ಮಲೇಷಿಯಾ
[ಬದಲಾಯಿಸಿ]ಎನಿಗ್ಮಾಟಿಕ್ ಮಲೇಷಿಯಾ ಕಾರ್ಯಕ್ರಮವನ್ನು ಪ್ರಚಾರಪಡಿಸುವ ಜಾಹೀರಾತಿನಲ್ಲಿ ಮಲೇಷಿಯಾದ ಸಾಂಸ್ಕೃತಿಕ ಸ್ವತ್ತಿನ ಬಾಲಿಗಳು ಪೆಂಡೆಟ್ ನರ್ತಕಿಯರು ಇರುತ್ತಾರೆ. ಇದು ಬಾಲಿಯ ನರ್ತಕಿಯರಲ್ಲಿ ಕ್ರೋಧವನ್ನುಂಟು ಮಾಡುತ್ತದೆ ಮತ್ತು ಅವರು ಮಲೇಷಿಯಾ ಇದಕ್ಕಾಗಿ ಕ್ಷಮೆ ಕೋರಬೇಕೆಂದು ಆಗ್ರಹಿಸುತ್ತದೆ, ಬೀದಿ ಪ್ರತಿಭಟನೆಗಳನ್ನೂ ಕೈಗೊಳ್ಳುತ್ತದೆ.[೧೪] ಇದರ ಜೊತೆಗೆ ಇಂಡೋನೇಷಿಯಾದ ಪ್ರವಾಸೋದ್ಯಮ ಇಲಾಖೆ ಮತ್ತಿತ್ತರ ಸ್ಥಳೀಯ ಸರಕಾರಗಳು ಹಾಗೂ ಸಾಂಸ್ಕೃತಿಕ ಚರಿತ್ರೆಗಾರರೂ ಕೂಡ ಈ ಬಗ್ಗೆ ಸ್ಪಷ್ಟನೆ ಬಯಸುತ್ತಾರೆ.[೧೫] ಮಲೇಷಿಯಾ ಸರಕಾರವು ಕೇವಲ ದೂರವಾಣಿಯಲ್ಲಿ ಕ್ಷಮೆ ಕೋರಿದ್ದರಿಂದ ಮತ್ತೂ ಕೆರಳಿದ ಇಂಡೋನೇಷಿಯಾ ಪ್ರವಾಸೋದ್ಯಮ ಇಲಾಖೆ ಅಧಿಕೃತವಾಗಿ ಬರಹದ ಮುಖೇನ ಕ್ಷಮೆಯನ್ನು ಬಯಸಿತು, ಇದೊಂದು ದಾಖಲಾಗಿರಬೇಕೆಂದು ಹೇಳಿತು.[೧೬]
ಸರಣಿಗಳ ಪಟ್ಟಿ
[ಬದಲಾಯಿಸಿ]- ಎ ಹಾಂಟಿಂಗ್
- ಅಮೆರಿಕನ್ ಚಾಪರ್
- ಕ್ಯಾಷ್ ಕ್ಯಾಬ್
- ಡೆಡ್ಲೀಯಸ್ಟ್ ಕ್ಯಾಚ್
- ಡಿಸ್ಟ್ರಾಯ್ಡ್ ಇನ್ ಸೆಕೆಂಡ್ಸ್
- ಡರ್ಟಿ ಜಾಬ್ಸ್
- ಫೈಟ್ ಕ್ವೆಸ್ಟ್
- ಫ್ಯಾಕ್ಟರಿ ಮೇಡ್
- ಘೋಸ್ಟ್ ಲ್ಯಾಬ್
- ಹೌ ಇಟ್ಸ್ ಮೇಡ್
- ಜೀವನ ವೃತ್ತಾಂತ
- ಮ್ಯಾನ್ vs. ವೈಳ್ಡ್
- ಮಾನ್ಸ್ಟರ್ಸ್ ರಿಸರಕ್ಟಡ್
- ಮಿಥ್‌ಬಸ್ಟರ್ಸ್
- ಐ ಶುಡ್ನ್ಟ್ ಬಿ ಅಲೈವ್
- ಇಂಟು ದಿ ಯುನಿವರ್ಸ್ ವಿಥ್ ಸ್ಟೀಫೆನ್ ಹಾಕಿಂಗ್
- ಒನ್ ವೇ ಔಟ್
- ಔಟ್ ಆಫ್ ದಿ ವೈಳ್ಳ್Out of the Wild
- ಪಿಚ್ಮೆನ್
- ಪ್ಲಾನೆಟ್ ಅರ್ಥ್
- ಸಾಲ್ವಿಂಗ್ ಹಿಸ್ಟರಿ
- ಸ್ಟಾರ್ಮ್ ಚೇಸರ್ಸ್
- ಸರ್ವಿವೋರ್ಮನ್
- ದಿ ಕಾಲೋನಿ
- ಟೈಮ್ ವ್ರಾಪ್
- ಟ್ರೆಷರ್ ಕ್ವೆಸ್ಟ್
- ವೀರ್ಡ್ ಆರ್ ವಾಟ್?
- ವ್ರೆಕ್ಕ್ರೀಯೇಷನ್ ನೇಷನ್
ಇವುಗಳನ್ನೂ ನೋಡಿ
[ಬದಲಾಯಿಸಿ]- ಡಿಸ್ಕವರಿ HD
- HD ಥಿಯೇಟರ್
- ಲಿಸ್ಟ್ ಆಫ್ ಚಾನಲ್ಸ್ ಆನ್ ವರ್ಜಿನ್ ಟೆಲಿವಿಷನ್
- ಲಿಸ್ಟ್ ಆಫ್ ಡೈರೆಕ್TV ಚಾನಲ್ಸ್
- ಲಿಸ್ಟ್ ಆಫ್ ಡಿಶ್ ನೆಟ್‌ವರ್ಕ್ಸ್ ಚಾನಲ್ಸ್
- ಲಿಸ್ಟ್ ಆಫ್ ಡಾಕ್ಯೂಮೆಂಟರಿ ಚಾನಲ್ಸ್
- ಡಿಸ್ಕವರಿ ಕಿಡ್ಸ್
- ಡಿಸ್ಕವರಿ ಟೈಮ್ಸ್ ಸ್ಕ್ವೇರ್ ಎಕ್ಸ್ಪೊಸಿಷನ್
ಆಕರಗಳು
[ಬದಲಾಯಿಸಿ]- ↑ "ಮೀಡಿಯಾಪೋಸ್ಟ್ ಪಬ್ಲಿಕೇಷನ್ಸ್ - ಡಿಸ್ಕವರಿ ರಿಬ್ರಾಂಡ್ಸ್, ಅಪ್‌ಗ್ರೇಡ್ಸ್ ಮಾರ್ಕೇಟಿಂಗ್ ಎಫರ್ಟ್ಸ್ - 07/24/2007". Archived from the original on 2007-02-14. Retrieved 2021-08-10.
- ↑ Schneider, Steve (June 16, 1985). "CABLE TV NOTES; A CHANNEL WITH A DIFFERENCE". New York Times. Retrieved May 1, 2010.
- ↑ "The Discovery Channel; Science, Nature, Adventure and Animals That Bite". The Washington Post. June 19, 1988. Archived from the original on ಜೂನ್ 14, 2010. Retrieved ಜೂನ್ 21, 2010.
- ↑ "Television: The Russians Are Coming". Time. February 23, 1987. Archived from the original on ಜೂನ್ 14, 2010. Retrieved ಜೂನ್ 21, 2010.
- ↑ "DCI :: ಪ್ರೆಸ್ ಆಂಡ್ ನ್ಯೂಸ್ ರಿಲೀಸಸ್". Archived from the original on 2007-01-24. Retrieved 2010-06-21.
- ↑ ಡರ್ಟಿ ವರ್ಕ್ - 8/14/2006 - ಮಲ್ಟಿ ಚಾನಲ್ ನ್ಯೂಸ್
- ↑ "ಟಾಪ್ 20 ಕೇಬಲ್ ಪ್ರೋಗ್ರಾಮ್ ನೆಟ್‌ವರ್ಕ್ಸ್ - NCTA.com". Archived from the original on 2007-11-05. Retrieved 2010-06-21.
- ↑ "DCI :: ಬ್ಯುಸಿನೆಸ್ ಆಂಡ್ ಬ್ರಾಂಡ್ಸ್ :: ಡಿಸ್ಕವರಿ ಚಾನಲ್". Archived from the original on 2008-10-12. Retrieved 2010-06-21.
- ↑ "DCI :: ಪ್ರೆಸ್ ಆಂಡ್ ನ್ಯೂಸ್ ರಿಲೀಸಸ್". Archived from the original on 2007-01-24. Retrieved 2010-06-21.
- ↑ "Discovery shuttering 103 locations". CNN. May 17, 2007. Retrieved May 1, 2010.
- ↑ "Viewpoint Creative Designs New Discovery Channel Logo". Viewpoint Creative. Archived from the original on 2011-07-17. Retrieved 2010-06-21.
- ↑ "Discovery Times New Branding Campaign To 'Deadliest Catch' Debut". Multichannel News. March 31, 2008.
- ↑ "Mythbusters Host Retracts RFID Censorship Comments". Archived from the original on 2009-10-08. Retrieved 2008-12-12.
- ↑ Niken Prathivi and Irawaty Wardany (2009-09-03). "Protests over presence of Pendet dance in Malaysia's tourism ad continue". Jakarta Post. Archived from the original on 2009-08-29. Retrieved 2009-09-03.
- ↑ I Wayan Juniartha (2009-08-28). "Pendet, the dance that rocks the cradle". Jakarta Post. Retrieved 2009-09-03.
- ↑ Dessy Sagita (2009-08-27). "Indonesian Minister Rejects Malaysian Pendet Apology". The Jakarta Globe. Archived from the original on 2009-08-31. Retrieved 2009-09-03.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಪ್ರಧಾನ ಪಾತ್ರವರ್ಗ
[ಬದಲಾಯಿಸಿ]- Official website
- ಅಫೀಷಿಯಲ್ ಡಿಸ್ಕವರಿ ಸ್ಟೋರಿ
- ಡಿಸ್ಕವರಿ ಚಾನಲ್ಸ್ ಅಫೀಷಿಯಲ್ ಯೂಟೂಬ್
- ಡಿಸ್ಕವರಿ ಕಮ್ಯೂನಿಕೇಷನ್ಸ್ ಇಂಕ್.
ಇತರೆ
[ಬದಲಾಯಿಸಿ]- ಡಿಸ್ಕವರಿ ಎಡ್ಯೂಕೇಷನ್ Archived 2006-11-25 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಸ್ಕೂಲ್ಸ್ Archived 2011-11-14 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಸ್ಮೀಯೋ Archived 2006-09-28 ವೇಬ್ಯಾಕ್ ಮೆಷಿನ್ ನಲ್ಲಿ. (ಡಿಸ್ಕವರಿ ಎಡ್ಯೂಕೇಷನ್ಸ್ ಆನ್‌ಲೈನ್ ಹೋಮ್ವರ್ಕ್ ಹೆಲ್ಪ್ ಸರ್ವೀಸ್)
- ಡಿಸ್ಕವರಿ ಚಾನಲ್ ಜಪಾನ್ Archived 2011-06-30 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ಜರ್ಮನಿ Archived 2008-06-02 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ಫಿನ್ಲ್ಯಾಂಡ್
- ಡಿಸ್ಕವರಿ ಚಾನಲ್ ರೊಮಾನಿಯಾ
- ಡಿಸ್ಕವರಿ ಚಾನಲ್ ಇಂಡಿಯಾ
- ಡಿಸ್ಕವರಿ ಚಾನಲ್ ಚೈನಾ Archived 2008-05-21 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ಬ್ರೆಜಿಲ್
- ಡಿಸ್ಕವರಿ ಚಾನಲ್ ಕೆನಡಾ Archived 2010-07-31 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ಇಂಟರ್ನ್ಯಾಷನಲ್ Archived 2012-04-20 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ತೈವಾನ್
- ಡಿಸ್ಕವರಿ ಚಾನಲ್ ರಷಿಯಾ Archived 2012-01-02 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ಏಷಿಯಾ Archived 2019-01-23 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿಸ್ಕವರಿ ಚಾನಲ್ ಕೊರಿಯಾ
- ಡಿಸ್ಕವರಿ ಚಾನಲ್ ಲ್ಯಾಟಿನ್ ಅಮೇರಿಕಾ
- ಡಿಸ್ಕವರಿ ಚಾನಲ್ ಆಟ್ TV ಆರ್ಕ್ Archived 2007-02-27 ವೇಬ್ಯಾಕ್ ಮೆಷಿನ್ ನಲ್ಲಿ.