ವಿಷಯಕ್ಕೆ ಹೋಗು

ಅಲೆಕ್ಸ್ ಫರ್ಗುಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sir Alex Ferguson
Sir Alex Ferguson
Personal information
Full name Alexander Chapman Ferguson
Date of birth (1941-12-31) ೩೧ ಡಿಸೆಂಬರ್ ೧೯೪೧ (ವಯಸ್ಸು ೮೨)
Place of birth Glasgow, Scotland
Playing position Striker
Club information
Current club Manchester United (manager)
Senior career*
Years Team Apps (Gls)
1957–1960 Queen's Park 31 (15)
1960–1964 St. Johnstone 37 (19)
1964–1967 Dunfermline Athletic 89 (66)
1967–1969 Rangers 41 (25)
1969–1973 Falkirk 95 (36)
1973–1974 Ayr United 24 (9)
Total 317 (170)
Teams managed
1974 East Stirlingshire
1974–1978 St. Mirren
1978–1986 Aberdeen
1985–1986 Scotland
1986– Manchester United
  • Senior club appearances and goals counted for the domestic league only.
† Appearances (Goals).

ಸರ್ ಅಲೆಕ್ಸಾಂಡರ್ ಚಾಪ್ಮನ್ "ಅಲೆಕ್ಸ್" ಫರ್ಗುಸನ್,Kt, CBE, ಸರ್ ಅಲೆಕ್ಸ್ ಅಥವಾ ಫೆರ್ಗೀ ಎಂದೇ ಚಿರಪರಿಚಿತ (ಜನನ 31 ಡಿಸೆಂಬರ್ 1941, ಗ್ಲಾಸ್ಗೌಗೋವನ್ ನಲ್ಲಿ). ಇವರು ಒಬ್ಬ ಸ್ಕಾಟಿಷ್ ಫುಟ್ಬಾಲ್ ತಂಡದ ವ್ಯವಸ್ಥಾಪಕ ಹಾಗು ಮಾಜಿ ಆಟಗಾರ, ಸದ್ಯಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕ. ಅಲ್ಲಿ ತಂಡದ ಉಸ್ತುವಾರಿಯನ್ನು 1986ರಿಂದ ವಹಿಸಿದ್ದಾರೆ.ಫರ್ಗುಸನ್ ಅಬರ್ಡೀನ್ ತಂಡದ ವ್ಯವಸ್ಥಾಪಕರಾಗಿ ಅತ್ಯಂತ ಯಶಸ್ವಿ ಅವಧಿ ಪೂರೈಸುವುದಕ್ಕೆ ಮುಂಚಿತವಾಗಿ ಈಸ್ಟ್ ಸ್ಟಿರ್ಲಿಂಗ್ಶೈರ್ ಹಾಗು St. ಮಿರ್ರೆನ್ ತಂಡದ ವ್ಯವಸ್ಥಾಪಕ ಕಾರ್ಯ ನಿರ್ವಹಿಸುತ್ತಿದ್ದರು. ಸ್ಕಾಟ್‌ಲೆಂಡ್ ರಾಷ್ಟ್ರೀಯ ತಂಡಕ್ಕೆ - ಜಾಕ್ ಸ್ಟೀನ್ ನ ನಿಧನದಿಂದಾಗಿ ಅಲ್ಪಾವಧಿಗೆ ಹಂಗಾಮಿ ವ್ಯವಸ್ಥಾಪಕ ಕಾರ್ಯ ನಿರ್ವಹಿಸಿದರು - ಅವರನ್ನು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕರನ್ನಾಗಿ ನವೆಂಬರ್ 1986ರಲ್ಲಿ ನೇಮಕ ಮಾಡಲಾಯಿತು.ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕರಾಗಿ 23 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಸರ್ ಮ್ಯಾಟ್ ಬಸ್ಬಿ ನಂತರ ಕ್ಲಬ್ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಎರಡನೇ ವ್ಯವಸ್ಥಾಪಕರೆನಿಸಿದರು.ಹಾಲಿ ಲೀಗ್ ತಂಡದ ವ್ಯವಸ್ಥಾಪಕರಲ್ಲಿ ಅವರ ಕಾಲಾವಧಿಯು ಸುದೀರ್ಘವಾಗಿದೆ. ಈ ಅವಧಿಯಲ್ಲಿ, ಫರ್ಗುಸನ್ ಹಲವು ಪ್ರಶಸ್ತಿಗಳನ್ನು ಗಳಿಸಿದರು ಜೊತೆಗೆ ಹಲವು ದಾಖಲೆಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡರು. ಇದರಲ್ಲಿ ಬ್ರಿಟಿಶ್ ಫುಟ್ಬಾಲ್ ಇತಿಹಾಸದಲ್ಲಿ ಹಲವು ಬಾರಿ ವರ್ಷದ ತಂಡ ವ್ಯವಸ್ಥಾಪಕ ಎಂಬ ಪ್ರಶಸ್ತಿ ಸೇರಿದೆ. ಕಳೆದ 2008ರಲ್ಲಿ, ಒಂದಕ್ಕಿಂತ ಹೆಚ್ಚು ಬಾರಿ ಯುರೋಪಿಯನ್ ಕಪ್ ಗಳಿಸಿದ ಮೂರನೇ ಬ್ರಿಟಿಷ್ ವ್ಯವಸ್ಥಾಪಕ ಎನಿಸಿಕೊಂಡರು.ಇಂಗ್ಲಿಷ್ ಆಟಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಇಂಗ್ಲಿಷ್ ಫುಟ್ಬಾಲ್ ಹಾಲ್ ಆಫ್ ಫೇಮ್ ನ ಉದ್ಘಾಟನೆಗೆ ಸೇರ್ಪಡೆಯಾದವರಲ್ಲಿ ಒಬ್ಬರೆನಿಸಿದರು. ಕಳೆದ 1999ರಲ್ಲಿ ರಾಣಿ ಎಲಿಜಬತ್ IIಅವರಿಗೆ ನೈಟ್ ಪದವಿ ನೀಡಿದರು.ಕಳೆದ 1980ರ ದಶಕದ ಪೂರ್ವದಿಂದ ಮಧ್ಯಭಾಗದವರೆಗೂ ಅನೇಕ ಪ್ರಮುಖ ಟ್ಪೋಫಿಗಳಿಗೆ ನಗರದ ಫುಟ್ಬಾಲ್ ಕ್ಲಬ್ ಅನ್ನು ನಿರ್ವಹಿಸುವ ಮೂಲಕ ನಗರಕ್ಕೆ ನೀಡಿದ ಸೇವೆಯಿಂದಾಗಿ ಪ್ರಸಕ್ತ ಫ್ರೀಡಂ ಆಫ್ ದಿ ಸಿಟಿ ಆಫ್ ಅಬರ್ಡೀನ್ ಪದವಿಯನ್ನು ಹೊಂದಿದ್ದಾರೆ.

ಆರಂಭಿಕ ಜೀವನ =

[ಬದಲಾಯಿಸಿ]
ಫರ್ಗುಸನ್ ಓಲ್ಡ್ ಟ್ರ್ಯಾಫೋರ್ಡ್ ನಲ್ಲಿ

ಫರ್ಗುಸನ್ ನೌಕಾ ನಿರ್ಮಾಣದ ಸಂಸ್ಥೆಯಲ್ಲಿ ಪ್ಲೇಟರ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಲೆಕ್ಸಾಂಡರ್ ಬೀಟನ್ ಫರ್ಗುಸನ್ ಹಾಗೂ ಅವರ ಪತ್ನಿ ಮಾಜಿ ಎಲಿಜಬತ್ ಹಾರ್ಡಿಯ ಮಗ.[] ಅವರುಗೋವನ್ ನಲ್ಲಿರುವ ಶೀಲ್ಡ್ ಹಾಲ್ ರಸ್ತೆಯ ತಮ್ಮ ಅಜ್ಜಿಯ ಮನೆಯಲ್ಲಿ 31 ಡಿಸೆಂಬರ್ 1941ರಲ್ಲಿ ಜನಿಸಿದರು. ಆದರೆ 667, ಗೋವನ್ ರಸ್ತೆಯ ಒಂದು ವಟಾರದ ಮನೆಯಲ್ಲಿ ಬೆಳೆದರು (ನಂತರದಲ್ಲಿ ಕಟ್ಟಡವನ್ನು ನೆಲಸಮ ಮಾಡಲಾಯಿತು).ಅಲ್ಲಿ ಅವರು ತಮ್ಮ ತಂದೆ-ತಾಯಿ ಹಾಗು ಕಿರಿಯ ಸಹೋದರ ಮಾರ್ಟಿನ್ ಜೊತೆ ವಾಸಿಸುತ್ತಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬ್ರೂಂಲೋನ್ ರೋಡ್ ಪ್ರೈಮರಿ ಸ್ಕೂಲ್ ಹಾಗು ನಂತರದ ಶಿಕ್ಷಣವನ್ನು ಗೋವನ್ ಹೈ ಸ್ಕೂಲ್ ನಲ್ಲಿ ಪಡೆದರು, ಜೊತೆಗೆ ರೇಂಜರ್ಸ್ ಫುಟ್ಬಾಲ್ ಕ್ಲಬ್‌ನ್ನು ಬೆಂಬಲಿಸಿದರು.[ಸೂಕ್ತ ಉಲ್ಲೇಖನ ಬೇಕು]

ಆಟದ ವೃತ್ತಿಜೀವನ

[ಬದಲಾಯಿಸಿ]

ಫರ್ಗುಸನ್ ವೃತ್ತಿಜೀವನವನ್ನು ಕ್ವೀನ್ಸ್ ಪಾರ್ಕ್ ತಂಡಕ್ಕೆ ಹವ್ಯಾಸಿ ಆಟಗಾರನಾಗಿ ಆಡುವುದರೊಂದಿಗೆ ಪ್ರಾರಂಭಿಸಿದರು. ಅಲ್ಲಿ ಅವರು ತಮ್ಮ 16 ವಯಸ್ಸಿಗೆ ಒಬ್ಬ ಸ್ಟೈಕರ್(ಗೋಲು ಹೊಡೆಯುವವ) ಆಗಿ ತಮ್ಮ ಪ್ರಥಮ ಪಂದ್ಯವನ್ನು ಆಡಿದರು.ತಮ್ಮ ಮೊದಲ ಪಂದ್ಯವನ್ನು ಒಂದು "ದುಃಸ್ವಪ್ನ" ವೆಂದು ವಿವರಿಸುತ್ತಾರೆ[] ಆದರೆ ಸ್ಟ್ರಾನ್ರೇರ್ ವಿರುದ್ದದ 2-1 ಅಂತರದ ಸೋಲಿನಲ್ಲಿ ಕ್ವೀನ್ಸ್ ಪಾರ್ಕ್ ಪರ ಗೋಲು ಗಳಿಸಿದರು. ಕ್ವೀನ್ಸ್ ಪಾರ್ಕ್ ಹವ್ಯಾಸಿ ತಂಡವಾಗಿದ್ದರಿಂದ, ಅವರು ಕ್ಲಯ್ಡೆ ಶಿಪ್ಯಾರ್ಡ್ಸ್ ನಲ್ಲಿ ಸಲಕರಣಾ ತಯಾರಿಕಾ ಕೆಲಸಗಾರನಾಗಿ ತರಬೇತಿ ಪಡೆದರು. ಅಲ್ಲಿ ಅವರು ಕಾರ್ಮಿಕ ಸಂಘದ ಪರಿಚಾರಕರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಹುಶಃ ಅವರ ಅತ್ಯಂತ ಗಮನ ಸೆಳೆದ ಪಂದ್ಯವೆಂದರೆ ಕ್ವೀನ್ಸ್ ಪಾರ್ಕ್ 1959ರ ಬಾಕ್ಸಿಂಗ್ ಡೇ ದಿನ ಕ್ವೀನ್ ಆಫ್ ದಿ ಸೌತ್ ಮೇಲೆ 7-1 ಅಂತರದಲ್ಲಿ ಸೋಲುನುಭವಿಸಿದ ಪಂದ್ಯ. ಇದರಲ್ಲಿ ಇಂಗ್ಲೆಂಡ್ ನ ಮಾಜಿ ಅಂತಾರಾಷ್ಟ್ರೀಯ ಆಟಗಾರ ಐವೊರ್ ಬ್ರೊಡಿಸ್ ಕ್ವೀನ್ ಆಫ್ ಸೌತ್ ಪರ ನಾಲ್ಕು ಗೋಲು ಹೊಡೆದರು. ಫರ್ಗುಸನ್ ಕ್ವೀನ್ಸ್ ಪಾರ್ಕ್ ಪರ ಗೋಲು ಹೊಡೆದ ಏಕೈಕ ಆಟಗಾರ.[] 31 ಪಂದ್ಯಗಳಲ್ಲಿ ಕ್ವೀನ್ಸ್ ಪಾರ್ಕ್ ಪರ 20 ಗೋಲುಗಳನ್ನು ಹೊಡೆದರೂ, ಅವರು ತಂಡದಲ್ಲಿ ಒಂದು ಕಾಯಂ ಸ್ಥಾನವನ್ನು ಗಳಿಸಲು ಸಾಧ್ಯವಾಗದ ಕಾರಣ 1960ರಲ್ಲಿ St. ಜಾನ್ಸ್ಟೋನ್ ತಂಡಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸಿಕೊಂಡರು.St. ಜಾನ್ಸ್ಟೋನ್ ಪರ ಸತತವಾಗಿ ಗೋಲನ್ನು ಹೊಡೆಯುತ್ತಿದ್ದರೂ ಸಹ, ತಂಡದಲ್ಲಿ ಪುನಃ ಒಂದು ಕಾಯಂ ಸ್ಥಾನವನ್ನು ಗಳಿಸುವಲ್ಲಿ ವಿಫಲರಾದರು ಹಾಗೂ ತಂಡ ಬದಲಾವಣೆಗೆ ಮತ್ತೆ ಮತ್ತೆ ಕೋರಿಕೊಳ್ಳುತ್ತಿದ್ದರು. ಕ್ಲಬ್ ನಲ್ಲಿ ಫರ್ಗುಸನ್‌ ಪರವಾದ ಬೆಂಬಲ ದೊರಕದಿರುವ ಕಾರಣ ಅವರು ಕೆನಡ ಕ್ಕೆ ವಲಸೆ ಹೋಗುವ ಯೋಜನೆಯನ್ನು ಸಹ ಮಾಡಿದ್ದರು,[] ಆದರೆ St. ಜಾನ್ಸ್ಟೋನ್ ತಂಡವು ಫಾರ್ವರ್ಡ್(ಮುಂಚೂಣಿಯ ಆಟಗಾರ)ನನ್ನು ನೇಮಿಸಿಕೊಳ್ಳುವಲ್ಲಿ ವಿಫಲಗೊಂಡಾಗ, ತಂಡದ ವ್ಯವಸ್ಥಾಪಕರು ರೇಂಜರ್ಸ್ ವಿರುದ್ಧದ ಪಂದ್ಯಕ್ಕೆ ಫರ್ಗುಸನ್‌ರನ್ನು ಆಯ್ಕೆ ಮಾಡಿದರು. ಈ ಪಂದ್ಯದಲ್ಲಿ, ತಂಡಕ್ಕೆ ಲಭ್ಯವಾದ ಅಚ್ಚರಿಯ ಜಯದಲ್ಲಿ ಅವರು ಹ್ಯಾಟ್ರಿಕ್(ಮೂರು ಗೋಲನ್ನು ಪಡೆಯುವುದು) ಗಳಿಸಿದರು. ಅದರ ಮುಂದಿನ ವರ್ಷದ ಬೇಸಿಗೆಯಲ್ಲಿ (1964) ಡನ್ ಫರ್ಮ್‌ಲೈನ್ ತಂಡವು ಇವರನ್ನು ನೇಮಕ ಮಾಡಿಕೊಂಡಿತು. ಇದರೊಂದಿಗೆ ಫರ್ಗುಸನ್ ಪೂರ್ಣಕಾಲಿಕ ವೃತ್ತಿಪರ ಫುಟ್ಬಾಲ್ ಆಟಗಾರರಾದರು.ಅದರ ಮುಂದಿನ ಕ್ರೀಡಾ ಋತುವಿನಲ್ಲಿ (1964–65), ಡನ್‌ಫರ್ಮ್‌ಲೈನ್ ಸ್ಕಾಟಿಷ್ ಲೀಗ್‌ನ ಬಲಿಷ್ಠ ತಂಡವಾಗಿತ್ತು ಜೊತೆಗೆ ಸ್ಕಾಟಿಷ್ ಕಪ್ ಫೈನಲ್ ತಲುಪಿತು. ಆದರೆ St. ಜಾನ್‌ಸ್ಟೋನ್ ವಿರುದ್ಧದ ಲೀಗ್ ಪಂದ್ಯದಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಫರ್ಗುಸನ್‌‌ ರನ್ನು ಫೈನಲ್ ಪಂದ್ಯಕ್ಕೆ ಕೈ ಬಿಡಲಾಯಿತು. ಡನ್‌ಫರ್‌ಲೈನ್, ಸೆಲ್ಟಿಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ 3-2 ಅಂಕಗಳ ಅಂತರದಿಂದ ಪರಾಭವಗೊಳ್ಳುವುದರ ಜೊತೆಗೆ ಒಂದು ಅಂಕದ ಅಂತರದಿಂದ ಲೀಗ್‌ನಲ್ಲಿ ಗೆಲ್ಲಲು ವಿಫಲವಾಯಿತು. 1965–66ರ ಕ್ರೀಡಾ ಋತುವಿನಲ್ಲಿ ಡನ್‌ಫರ್‌ಲೈನ್ ಪರ ಫರ್ಗುಸನ್ 51 ಪಂದ್ಯಗಳಲ್ಲಿ 45 ಗೋಲುಗಳನ್ನು ಬಾಚಿಕೊಂಡರು. ಸೆಲ್ಟಿಕ್ ತಂಡದ ಜೊಎ ಮ್ಯಾಕ್‌ಬ್ರೈಡ್ ಜೊತೆ ಸ್ಕಾಟಿಷ್ ಲೀಗ್ ನಲ್ಲಿ 31 ಗೋಲು ಹೊಡೆಯುವುದರೊಂದಿಗೆ ಅಗ್ರ ಗೋಲು ಹೊಡೆದ ಕೀರ್ತಿಗೆ ಭಾಜನರಾದರು.[] ಬಳಿಕ ಅವರು £65,000 ಸಂಭಾವನೆಯನ್ನು ಪಡೆಯುವುದರೊಂದಿಗೆ ರೇಂಜರ್ಸ್ ತಂಡಕ್ಕೆ ಸೇರ್ಪಡೆಗೊಂಡರು. ಎರಡು ಸ್ಕಾಟಿಷ್ ಕ್ಲಬ್‌ಗಳ ನಡುವೆ ತಂಡ ಬದಲಾವಣೆಗೆ ಆಗ ದಾಖಲೆಯ ಶುಲ್ಕವಾಗಿತ್ತು. 1969ರ ಸ್ಕಾಟಿಷ್ ಕಪ್ ಫೈನಲ್ ನಲ್ಲಿ ಗೋಲು ಬಿಟ್ಟುಕೊಡಲು ಅವಕಾಶ ಮಾಡಿಕೊಟ್ಟರೆಂದು ಆಪಾದಿಸಲಾಯಿತು,[] ಈ ಪಂದ್ಯದಲ್ಲಿ ಅವರನ್ನು ಸೆಲ್ಟಿಕ್ ತಂಡದ ನಾಯಕ ಬಿಲ್ಲಿ ಮ್ಯಾಕ್ ನಿಲ್ರ ಮೇಲೆ ನಿಗಾಯಿಡಲು ನಿಯೋಜಿಸಲಾಗಿತ್ತು. ನಂತರ ಅವರನ್ನು ಮುಖ್ಯ ತಂಡದಲ್ಲಿ ಆಡಲು ಅವಕಾಶ ನೀಡುವ ಬದಲಾಗಿ ಕ್ಲಬ್‌ ಜೂನಿಯರ್ ತಂಡಕ್ಕೆ ಆಡುವಂತೆ ಒತ್ತಡ ಹೇರಲಾಯಿತು.[] ಅವರ ಸಹೋದರನ ಪ್ರಕಾರ, ಫರ್ಗುಸನ್ ಈ ಅನುಭವದಿಂದ ತುಂಬಾ ಘಾಸಿಗೊಂಡಿದ್ದರು ಜೊತೆಗೆ ತಮಗೆ ದೊರೆತ ಸೋತವರಿಗೆ ನೀಡುವ ಪದಕವನ್ನು ಎಸೆದಿದ್ದರು.[] ಕೆಲವೊಂದು ಮಾಹಿತಿಯ ಪ್ರಕಾರ, ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದ ಕ್ಯಾಥಿಯನ್ನು ಮದುವೆಯಾದ ನಂತರ[] ಅವರು ರೇಂಜರ್ಸ್ ತಂಡದಲ್ಲಿ ತಾರತಮ್ಯವನ್ನು ಎದುರಿಸಿದರು. ಆದರೆ ಫರ್ಗುಸನ್ ತಮ್ಮ ಆತ್ಮಚರಿತ್ರೆಯಲ್ಲಿ ವಿಶದಪಡಿಸುವಂತೆ[೧೦], ಕ್ಲಬ್‌ಗೆ ಸೇರ್ಪಡೆಯಾದಾಗ ರೇಂಜರ್ಸ್ ತಂಡಕ್ಕೆ ತಮ್ಮ ಪತ್ನಿಯ ಧರ್ಮದ ಬಗ್ಗೆ ತಿಳಿದಿತ್ತು. ಆದರೆ ಫೈನಲ್ ಪಂದ್ಯದಲ್ಲಿ ತಮ್ಮ ಮೇಲೆ ಬಂದ ಆಪಾದನೆಯಿಂದಾಗಿ ಕ್ಲಬ್‌ನ್ನು ಅವರು ಇಷ್ಟವಿಲ್ಲದೆ ತೊರೆದಿದ್ದಾಗಿ ಹೇಳುತ್ತಾರೆ.ಮುಂದಿನ ಅಕ್ಟೋಬರ್ ನಲ್ಲಿ ನಾಟಿಂಗ್ಹಾಮ್ ಫಾರೆಸ್ಟ್ ಫರ್ಗುಸನ್ ರನ್ನು ನೇಮಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿತು,[೧೧] ಆದರೆ ಅವರ ಪತ್ನಿ ಇಂಗ್ಲೆಂಡ್ ಗೆ ಸ್ಥಳ ಬದಲಾವಣೆ ಮಾಡಿಕೊಳ್ಳಲು ಅಷ್ಟಾಗಿ ಇಷ್ಟಪಡದ ಕಾರಣ ಅವರು ಫಾಲ್ಕಿರ್ಕ್ ತಂಡಕ್ಕೆ ಸೇರ್ಪಡೆಯಾದರು. ಅವರನ್ನು ಆಟಗಾರರಿಗೆ ತರಬೇತುದಾರನಾಗಿ ಬಡ್ತಿ ನೀಡಲಾಯಿತು, ಆದರೆ ಜಾನ್ ಪ್ರೆನ್ಟಿಸ್ ತಂಡದ ವ್ಯವಸ್ಥಾಪಕನಾದಾಗ ಫರ್ಗುಸನ್ ರನ್ನು ತರಬೇತುದಾರನ ಜವಾಬ್ದಾರಿಯಿಂದ ತೆಗೆದುಹಾಕಿದ. ಫರ್ಗುಸನ್ ತಂಡ ಬದಲಾವಣೆಗೆ ಕೋರಿಕೊಂಡು ಅಯ್ರ್ ಯುನೈಟೆಡ್ ತಂಡಕ್ಕೆ ಸೇರ್ಪಡೆಯಾದರು. ಅಲ್ಲಿ ಅವರು ತಮ್ಮ ವೃತ್ತಿ ಜೀವನದಿಂದ 1974ರಲ್ಲಿ ನಿವೃತ್ತಿ ಪಡೆದರು.

ವ್ಯವಸ್ಥಾಪಕನಾಗಿ ವೃತ್ತಿಜೀವನದ ಪ್ರಾರಂಭ

[ಬದಲಾಯಿಸಿ]

ಈಸ್ಟ್ ಸ್ಟರ್ಲಿಂಗ್‌ಶೈರ್

[ಬದಲಾಯಿಸಿ]

ಜೂನ್ 1974ರಲ್ಲಿ, ಈಸ್ಟ್ ಸ್ಟರ್ಲಿಂಗ್ ಶೈರ್ ತಂಡದ ವ್ಯವಸ್ಥಾಪಕರನ್ನಾಗಿ ನೇಮಿಸಲಾಯಿತು. ಆಗ ಅವರ ವಯಸ್ಸು ಕೇವಲ 32 ವರ್ಷ. ತಾತ್ಕಾಲಿಕ-ನೌಕರಿಯಾಗಿದ್ದ ಕಾರಣ ಅವರಿಗೆ ವಾರಕ್ಕೆ £40 ಹಣವನ್ನು ನೀಡಲಾಗುತ್ತಿತ್ತು, ಜೊತೆಗೆ ಆ ಸಮಯದಲ್ಲಿ ಕ್ಲಬ್ ಪರ ಒಬ್ಬನೇ ಒಬ್ಬ ಗೋಲ್ ಕೀಪರ್ ಕೂಡ ಇರಲಿಲ್ಲ.[೧೨] ಅವರು ತಕ್ಷಣವೇ ಒಬ್ಬ ಶಿಸ್ತು ಪಾಲಕನಾಗಿ ಖ್ಯಾತಿಯನ್ನು ಪಡೆದರು, ಜೊತೆಗೆ ಕ್ಲಬ್ ನ ಮುಂಚೂಣಿಯ ಆಟಗಾರ ಬಾಬ್ಬಿ ಮ್ಯಾಕ್ ಕಲ್ಲಿ ನಂತರ "ಫರ್ಗುಸನ್‌‌ಗೆ ಮುಂಚೆ ತಮಗೆ ಯಾರ ಬಗ್ಗೆಯೂ ಭಯವಿರಲಿಲ್ಲ. ಅವರು ಆರಂಭದಿಂದಲೂ ಹೆದರಿಕೆ ಹುಟ್ಟಿಸುತ್ತಿದ್ದರು" ಎಂದು ಹೇಳುತ್ತಾನೆ.[೧೩] ಆದಾಗ್ಯೂ,ಅವರ ತಂಡದ ಆಟಗಾರರು ಅವರ ಜಾಣ್ಮೆಯ ನಿರ್ಧಾರಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಜೊತೆಗೆ ಕ್ಲಬ್‌ನ ಫಲಿತಾಂಶಗಳು ಗಣನೀಯವಾಗಿ ಸುಧಾರಿಸಿತು.ಅದರ ಮುಂದಿನ ಅಕ್ಟೋಬರ್‌ನಲ್ಲಿ, ಫರ್ಗುಸನ್‌ರನ್ನು St. ಮಿರ್ರೆನ್ ತಂಡವನ್ನು ನಿರ್ವಹಿಸಲು ಆಹ್ವಾನಿಸಲಾಯಿತು.ಈ ತಂಡವು ಈಸ್ಟ್ ಸ್ಟಿರ್ಲಿಂಗ್ ಶೈರ್ ಗಿಂತ ಕಡಿಮೆ ಕ್ರಮಾಂಕವನ್ನು ಹೊಂದಿದ್ದರೂ, ಅವರ ಕ್ಲಬ್ ದೊಡ್ಡದಾಗಿತ್ತು. ಫರ್ಗುಸನ್ ಈಸ್ಟ್ ಸ್ಟರ್ಲಿಂಗ್ ಶೈರ್ ಎಡೆಗೆ ಸ್ವಲ್ಪ ನಿಷ್ಠೆಯ ಭಾವನೆ ವ್ಯಕ್ತಪಡಿಸಿದರೂಜಾಕ್ ಸ್ಟೀನ್ ರಿಂದ ಸಲಹೆ ಪಡೆದ ನಂತರ St. ಮಿರ್ರೆನ್ ತಂಡವನ್ನು ಸೇರಲು ನಿರ್ಧರಿಸಿದರು.[೧೪]

St. ಮಿರ್ರೆನ್

[ಬದಲಾಯಿಸಿ]

ಫರ್ಗುಸನ್ St. ಮಿರ್ರೆನ್ ತಂಡದ ವ್ಯವಸ್ಥಾಪಕರಾಗಿ 1974 ರಿಂದ 1978ರವರೆಗೂ ಕಾರ್ಯ ನಿರ್ವಹಿಸಿದರು. ಕೇವಲ 1,000 ಜನರು ವೀಕ್ಷಿಸುತ್ತಿದ್ದ ಕೆಳಾರ್ಧದ ಹಳೆಯ ಸೆಕೆಂಡ್ ಡಿವಿಷನ್ನಿಂದ ಫಸ್ಟ್ ಡಿವಿಷನ್ ಚಾಂಪಿಯನ್ಸ್ ಸ್ಥಾನಕ್ಕೆ 1977ರಲ್ಲಿ ತಂಡವನ್ನು ಏರಿಸುವುದರೊಂದಿಗೆ ಗಮನಾರ್ಹ ಬದಲಾವಣೆಯನ್ನು ತಂದರು. ಫುಟ್ಬಾಲ್ ಪ್ರತಿಭೆಗಳಾದ ಬಿಲ್ಲಿ ಸ್ಟಾರ್ಕ್, ಟೋನಿ ಫಿಟ್ಜ್ ಪ್ಯಾಟ್ರಿಕ್, ಲೆಕ್ಸ್ ರಿಚರ್ಡ್ಸನ್, ಫ್ರಾಂಕ್ ಮ್ಯಾಕ್ ಗಾರ್ವೆಯ್, ಬಾಬ್ಬಿ ರೀಡ್ ಹಾಗು ಪೀಟರ್ ವೀಇರ್ ಮುಂತಾದವರನ್ನು ಶೋಧಿಸುವ ಮೂಲಕ ಈ ಪರಿವರ್ತನೆ ಉಂಟುಮಾಡಿದರು.[೧೫] ಲೀಗ್‌ನಲ್ಲಿ ಗೆದ್ದ ತಂಡದ ಆಟಗಾರರ ಸರಾಸರಿ ವಯಸ್ಸು 19 ವರ್ಷವಾಗಿತ್ತು ಹಾಗು ತಂಡದ ನಾಯಕ ಫಿಟ್ಜ್ ಪ್ಯಾಟ್ರಿಕ್ 20 ವರ್ಷದ ಯುವಕನಾಗಿದ್ದ.[೧೬] St. ಮಿರ್ರೆನ್, ಫರ್ಗುಸನ್ ರನ್ನು ಕ್ಲಬ್ ನಿಂದ ವಜಾ ಮಾಡಿದ ಏಕೈಕ ತಂಡ. ಕ್ಲಬ್ ತಮ್ಮನ್ನು ತಪ್ಪಾಗಿ ವಜಾ ಮಾಡಿದ್ದರ ವಿರುದ್ಧ ಔದ್ಯೋಗಿಕ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು. ಆದರೆ ಸೋಲನ್ನು ಅನುಭವಿಸುವುದರ ಜೊತೆಗೆ ಮೇಲ್ಮನವಿಗೆ ಅವಕಾಶ ಸಿಗಲಿಲ್ಲ. ಸಂಡೆ ಹೆರಾಲ್ಡ್ ನ ಬಿಲ್ಲಿ ಆಡಮ್ಸ್ ಮೇ 30, 1999ರಲ್ಲಿ ಬರೆದ ಲೇಖನದ ಪ್ರಕಾರ, ಅಧಿಕೃತ ಹೇಳಿಕೆಯಲ್ಲಿ ಫರ್ಗುಸನ್ ರನ್ನು ಹಲವಾರು ಒಪ್ಪಂದ ಭಂಗ ಮಾಡಿರುವುದಕ್ಕೆ ವಜಾ ಮಾಡಲಾಗಿತ್ತು. ಇದರಲ್ಲಿ ಆಟಗಾರರಿಗೆ ಅನಧಿಕೃತವಾಗಿ ಸಂಬಳವನ್ನು ನೀಡುವುದು ಸಹ ಸೇರಿತ್ತು.[೧೫] ಅವರನ್ನು ತಮ್ಮ ಕಚೇರಿಯ ಕಾರ್ಯದರ್ಶಿಗೆ ಬೆದರಿಸುವ ನಡವಳಿಕೆ ತೋರಿಸಿದರೆಂದು ಪ್ರತಿಆರೋಪ ಮಾಡಲಾಯಿತು. ಏಕೆಂದರೆ ಅವರು ಆಟಗಾರರ ಕೆಲವು ವೆಚ್ಚಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಬಯಸಿದ್ದರು. ಅವರು ತಮ್ಮ ಕಾರ್ಯದರ್ಶಿಯೊಂದಿಗೆ ಆರು ವಾರಗಳ ಕಾಲ ಮಾತನಾಡಲಿಲ್ಲ, ಅವಳಿಂದ ಕೀಲಿಯನ್ನು ಕಸಿದುಕೊಂಡು ಅವಳೊಟ್ಟಿಗೆ 17 ವರ್ಷದ ಸಹಾಯಕನ ಮೂಲಕ ವ್ಯವಹರಿಸುತ್ತಿದ್ದರು. ನ್ಯಾಯಮಂಡಳಿಯು, ಫರ್ಗುಸನ್ "ಸಂಕುಚಿತ ಮನೋಭಾವ ಹೊಂದಿದ್ದಾರೆಂದು" ಹಾಗು "ಅಪಕ್ವ" ರೆಂದು ತೀರ್ಮಾನಿಸಿತು.[೧೭] ನ್ಯಾಯಮಂಡಳಿಯ ಸಭೆಯಲ್ಲಿ St. ಮಿರ್ರೆನ್ ತಂಡದ ಅಧ್ಯಕ್ಷ, ವಿಲ್ಲಿ ಟಾಡ್, ಫರ್ಗುಸನ್‌ರಿಗೆ "ತಂಡವನ್ನು ನಿರ್ವಹಿಸುವ ಸಾಮರ್ಥ್ಯ" ವಿಲ್ಲವೆಂದು ಹೇಳಿದರು.ಮೇ 31, 2008ರಲ್ಲಿ, ದಿ ಗಾರ್ಡಿಯನ್ ಫರ್ಗುಸನ್ ರನ್ನು ಮುಂಚಿನ ವರ್ಷಗಳಲ್ಲಿ ತಂಡದಿಂದ ವಜಾಗೊಳಿಸಿದ್ದ ಟಾಡ್ ಜೊತೆಗಿನ ಸಂದರ್ಶನವನ್ನು ಪ್ರಕಟಿಸಿತು( ಈಗ ಅವರಿಗೆ 87 ವರ್ಷ). ಅವರು ಫರ್ಗುಸನ್ ಒಪ್ಪಂದ ಮುರಿದು ಅಬರ್ಡೀನ್ ತಂಡದ ಸೇರ್ಪಡೆಗೆ ಒಪ್ಪಿಕೊಂಡಿದ್ದು ವಜಾಗೊಳಿಸಲು ಮುಖ್ಯ ಕಾರಣವೆಂದು ವಿವರಿಸಿದರು. ಫರ್ಗುಸನ್ ಡೈಲಿ ಮಿರ್ರರ್ ನ ಪತ್ರಕರ್ತ ಜಿಮ್ ರಾಡ್ಜರ್‌ಗೆ, ಅಬರ್ಡೀನ್ ತಂಡಕ್ಕೆ ಕಡೇಪಕ್ಷ ತನ್ನೊಂದಿಗೆ ಒಬ್ಬ ಸದಸ್ಯ ಬರಬೇಕೆಂದು ಕೇಳಿಕೊಂಡಿದ್ದಾಗಿ ಹೇಳುತ್ತಾರೆ. ಅವರು St. ಮಿರ್ರೆನ್ ಸಿಬ್ಬಂದಿಗೆ ತಾವು ತಂಡವನ್ನು ಬಿಡುತ್ತಿರುವ ಬಗ್ಗೆ ತಿಳಿದಿತ್ತೆಂದು ಹೇಳುತ್ತಾರೆ. ಟಾಡ್ ನಡೆದಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಆದರೆ ಅಬರ್ಡೀನ್ ತಂಡವು ಪರಿಹಾರ ಕುರಿತು ಚರ್ಚಿಸಲು ತಮ್ಮ ಕ್ಲಬ್ ನೊಟ್ಟಿಗೆ ಸಂಪರ್ಕ ಹೊಂದಲಿಲ್ಲವೆಂದು ಆರೋಪಿಸಿದರು.[೧೮]

ಅಬರ್ಡೀನ್ ತಂಡದ ನಿರ್ವಹಣೆ

[ಬದಲಾಯಿಸಿ]

ಆರಂಭಿಕ ನಿರಾಶೆ

[ಬದಲಾಯಿಸಿ]

ಫರ್ಗುಸನ್ ಅಬರ್ಡೀನ್ ತಂಡದ ವ್ಯವಸ್ಥಾಪಕರಾಗಿ ಜೂನ್ 1978ರಲ್ಲಿ ಸೇರ್ಪಡೆಯಾದರು. ಅವರು ಒಂದೇ ಒಂದು ಕ್ರೀಡಾ ಋತುವಿನಲ್ಲಿ ತಂಡದ ವ್ಯವಸ್ಥಾಪಕರಾಗಿದ್ದ ಬಿಲ್ಲಿ ಮ್ಯಾಕ್ ನಿಲ್ ರ ಸ್ಥಾನದ ಬದಲಿಗೆ ಬಂದರು. ಮೆಕ್‌ನಿಲ್‌ಗೆ ಸೆಲ್ಟಿಕ್ ತಂಡವನ್ನು ನಿರ್ವಹಿಸುವ ಅವಕಾಶ ದೊರೆತಿತ್ತು. ಅಬರ್ಡೀನ್, ಸ್ಕಾಟ್‌ಲೆಂಡ್‌ನ ಪ್ರಮುಖ ಕ್ಲಬ್ ಗಳಲ್ಲಿ ಒಂದೆನಿಸಿದ್ದರೂ, ತಂಡವು 1955ರಿಂದೀಚೆ ಯಾವುದೇ ಪಂದ್ಯದಲ್ಲಿ ಜಯಗಳಿಸಿರಲಿಲ್ಲ. ತಂಡವು ಪಂದ್ಯಾವಳಿಗಳಲ್ಲಿ ಚೆನ್ನಾಗಿ ಪ್ರದರ್ಶನವನ್ನು ನೀಡುತ್ತಿತ್ತಾದರೂ, ಹಿಂದಿನ ಡಿಸೆಂಬರ್‌ನಿಂದ ಯಾವುದೇ ಲೀಗ್ ಪಂದ್ಯದಲ್ಲಿ ಸೋತಿರಲಿಲ್ಲ. ಹಿಂದಿನ ಕ್ರೀಡಾ ಋತುವಿನಲ್ಲಿ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿತ್ತು.[೧೯] ಫರ್ಗುಸನ್ ನಾಲ್ಕು ವರ್ಷ ತಂಡದ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರೂ ಸಹ, ಕೆಲವು ಆಟಗಾರರಿಗಿಂತ ಹೆಚ್ಚು ವಯಸ್ಸಾಗಿರಲಿಲ್ಲ. ಜೊತೆಗೆ ಜೊಎ ಹಾರ್ಪರ್ ನಂತಹ ಕೆಲವು ಹಿರಿಯ ಆಟಗಾರರಿಂದ ಗೌರವವನ್ನು ಪಡೆಯುವಲ್ಲಿ ಅವರಿಗೆ ಕಷ್ಟವಾಗುತ್ತಿತ್ತು.[೨೦] ಕ್ರೀಡಾ ಋತುವು ಸರಿಯಾಗಿ ನಡೆಯಲಿಲ್ಲ, ಅಬರ್ಡೀನ್ ತಂಡವು ಸ್ಕಾಟಿಷ್ F.A. ಕಪ್ ನಲ್ಲಿ ಸೆಮಿ-ಫೈನಲ್ ಹಂತವನ್ನು ಹಾಗು ಲೀಗ್ ಕಪ್ ನಲ್ಲಿ ಫೈನಲ್ ಹಂತವನ್ನು ತಲುಪಿತು. ಆದರೆ ಎರಡೂ ಪಂದ್ಯಗಳಲ್ಲಿ ಸೋತು ಲೀಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯಿತು.ಡಿಸೆಂಬರ್ 1979ರಲ್ಲಿ, ತಂಡವು ಮತ್ತೊಮ್ಮೆ ಲೀಗ್ ಕಪ್ ಫೈನಲ್‌ನಲ್ಲಿ ಸೋತಿತು. ಈ ಬಾರಿ ಮರುಪಂದ್ಯದ ನಂತರ ಡುಂಡಿ ಯುನೈಟೆಡ್ ತಂಡಕ್ಕೆ ಶರಣಾಯಿತು. ಫರ್ಗುಸನ್ ತಂಡದ ಸೋಲಿಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಜೊತೆಗೆ ಮರುಪಂದ್ಯದಲ್ಲಿ ತಂಡಕ್ಕೆ ಬದಲಾವಣೆಯನ್ನು ಮಾಡಬೇಕಿತ್ತೆಂದು ಒಪ್ಪಿಕೊಳ್ಳುತ್ತಾರೆ.[೨೧]

ಅಂತಿಮವಾಗಿ ದೊರೆತ ರಜತ ಕಿರೀಟ

[ಬದಲಾಯಿಸಿ]

ಅಬರ್ಡೀನ್ ತಂಡವು ಆ ಋತುವಿನಲ್ಲಿ ಕಳಪೆ ಪ್ರದರ್ಶನದೊಂದಿಗೆ ಪ್ರಾರಂಭ ಮಾಡಿತು. ಆದರೆ ಹೊಸ ವರ್ಷದಲ್ಲಿ ತಂಡದಲ್ಲಿ ಗಮನಾರ್ಹವಾದ ಸುಧಾರಣೆಯಾಗುವುದರ ಜೊತೆಗೆ ಆ ಕ್ರೀಡಾ ಋತುವಿನ ಫೈನಲ್ ಪಂದ್ಯದಲ್ಲಿ 5-0 ಅಂಕಗಳೊಂದಿಗೆ ಸ್ಕಾಟಿಷ್ ಲೀಗ್ ಗೆದ್ದುಕೊಂಡಿತು. ಹದಿನೈದು ವರ್ಷದಲ್ಲಿ ಇದೆ ಮೊದಲ ಬಾರಿಗೆ ರೇಂಜರ್ಸ್ ಅಥವಾ ಸೆಲ್ಟಿಕ್ ತಂಡಕ್ಕೆ ದೊರಕದ ಜಯ ಅಬರ್ಡೀನ್ ತಂಡಕ್ಕೆ ಈ ಪಂದ್ಯಾವಳಿಯಲ್ಲಿ ದೊರೆಯಿತು. ತಮ್ಮ ತಂಡದ ಆಟಗಾರರು ತಮ್ಮ ಬಗ್ಗೆ ಗೌರವದ ಭಾವನೆ ಹೊಂದಿದ್ದಾರೆಂದು ಅವರು ಭಾವಿಸಿದರು. ನಂತರ ಹೇಳಿದರು "ಆ ಸಾಧನೆಯು ನಮ್ಮಲ್ಲಿ ಏಕತೆ ಉಂಟುಮಾಡಿತು. ಅಂತಿಮವಾಗಿ ಆಟಗಾರರು ನನ್ನಲ್ಲಿ ನಂಬಿಕೆ ಇಟ್ಟರು".[೨೨] ಹಾಗಿದ್ದರು ಸಹ ಅವರೊಬ್ಬ ಕಟ್ಟುನಿಟ್ಟಿನ ಶಿಸ್ತುಪಾಲಕರಾಗಿದ್ದರು ಜೊತೆಗೆ ಅವರ ಆಟಗಾರರು ಅವರನ್ನು ಫ್ಯುಅರಿಅಸ್ ಫೆರ್ಗಿ (ಕ್ರೋಧಾವಿಷ್ಟ ಫೆರ್ಗಿ) ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಜಾನ್ ಹೆವಿಟ್ಟ್ ಎಂಬ ಆಟಗಾರ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ವಾಹನವನ್ನು ಹಿಂದಿಕ್ಕಿದ್ದಕ್ಕಾಗಿ ದಂಡವನ್ನು ಹೇರುವುದರ ಜೊತೆಗೆ,[೨೩] ಆಟದ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನದ ನಂತರ ಆಟಗಾರನೊಬ್ಬನ ಮೇಲೆ ಚಹಾದ ಪಾತ್ರೆಯನ್ನು ಎಸೆದಿದ್ದರು.[೨೪] ಅವರು ಅಬರ್ಡೀನ್ ಪಂದ್ಯಗಳ ವಾತಾವರಣದ ಬಗ್ಗೆ ಅಸಮಾಧಾನ ಹೊಂದಿದ್ದರು, ಜೊತೆಗೆ ತಂಡವನ್ನು ಹುರಿದುಂಬಿಸುವ ಉದ್ದೇಶದಿಂದ, ಸ್ಕಾಟಿಷ್ ಮಾಧ್ಯಮವನ್ನು ಗ್ಲಾಸ್ಗೊ ಕ್ಲಬ್‌ಗಳ ಪರವಾಗಿ ಪಕ್ಷಪಾತಿಯಾಗಿದೆ ಎಂದು ಆರೋಪಿಸಿ 'ಮುತ್ತಿಗೆಯ ಮನಸ್ಥಿತಿ'ಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿದರು.[೨೫] ತಂಡವು 1982ರಲ್ಲಿ ಸ್ಕಾಟಿಷ್ ಕಪ್ ಗೆಲ್ಲುವುದರೊಂದಿಗೆ ವಿಜಯ ಯಾತ್ರೆಯನ್ನು ಮುಂದುವರೆಸಿತು. ಫರ್ಗುಸನ್ ರನ್ನು ವೂಲ್ವ್ಸ್ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲು ಆಹ್ವಾನಿಸಲಾಯಿತು ಆದರೆ ವೂಲ್ವ್ಸ್ ತಂಡವು ತೊಂದರೆಯಲ್ಲಿರುವ ಕಾರಣದಿಂದ ಅವರು ಈ ಆಮಂತ್ರಣವನ್ನು ತಿರಸ್ಕರಿಸುತ್ತಾರೆ[೨೬] ಹಾಗು " ಅಬರ್ಡೀನ್ ತಂಡದಲ್ಲಿ ಅವರ ಬಯಕೆಗಳು ಅರ್ಧದಷ್ಟೂ ನೆರವೇರಿಲ್ಲ".[೨೭]

ಯುರೋಪಿಯನ್ ಯಶಸ್ಸು

[ಬದಲಾಯಿಸಿ]

ಫರ್ಗುಸನ್ ಅದರ ಮುಂದಿನ ಕ್ರೀಡಾ ಋತು(1982–83) ವಿನಲ್ಲಿ ಅಬರ್ಡೀನ್ ತಂಡವು ಇನ್ನೂ ಹೆಚ್ಚಿನ ಯಶಸ್ಸನ್ನು ಗಳಿಸುವುದಕ್ಕೆ ಸಹಾಯ ಮಾಡಿದರು. ತಂಡವು ಹಿಂದಿನ ಕ್ರೀಡಾ ಋತುವಿನಲ್ಲಿ ಸ್ಕಾಟಿಷ್ ಕಪ್ ಗೆದ್ದ ಫಲವಾಗಿ ಯುರೋಪಿಯನ್ ಕಪ್ ವಿನ್ನರ್ಸ್ ಕಪ್‌ಗೆ ಅರ್ಹತೆಯನ್ನು ಪಡೆಯಿತು, ಜೊತೆಗೆ ಹಿಂದಿನ ಸುತ್ತಿನಲ್ಲಿ 4-1 ಅಂಕಗಳಿಂದ ಟೋಟೆನ್ಹಾಮ್ ಹೊಟ್ಸ್‌ಪುರ್ ತಂಡವನ್ನು ಸೋಲಿಸಿದ್ದ ಬಯೇರ್ನ್ ಮ್ಯೂನಿಚ್ ನ್ನು ಪರಿಣಾಮಕಾರಿಯಾಗಿ ಸೋಲಿಸಿತು. ವಿಲ್ಲಿ ಮಿಲ್ಲರ್ ನ ಪ್ರಕಾರ, ಇದು ತಂಡಕ್ಕೆ ಸ್ಪರ್ಧೆಯಲ್ಲಿ ಗೆಲ್ಲಬಹುದೆಂಬ ಭರವಸೆಯನ್ನು ನೀಡಿತು,[೨೮]. ಇದನ್ನು ತಂಡವು ಮೇ 11, 1983ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ವಿರುದ್ಧ 2-1 ಅಂಕಗಳ ಜಯ ಸಾಧಿಸುವುದರೊಂದಿಗೆ ಸಾಬೀತು ಪಡಿಸಿತು. ಅಬರ್ಡೀನ್ ತಂಡವು ಯುರೋಪಿಯನ್ ಟ್ರೋಫಿ ಗೆದ್ದ ಮೂರನೇ ಸ್ಕಾಟಿಷ್ ತಂಡ ಎನಿಸಿಕೊಂಡಿತು. ಫರ್ಗುಸನ್ ಗೆ ತಾವು "ತಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಯೋಗ್ಯ ಕೆಲಸ ಮಾಡಿದೆ" ಎಂದು ಭಾವಿಸಿದರು.[೨೯] ಅಬರ್ಡೀನ್ ತಂಡವು ಆ ಕ್ರೀಡಾ ಋತುವಿನ ಲೀಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿತು. ಜೊತೆಗೆ ರೇಂಜರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 1-0 ಅಂಕಗಳಿಂದ ಜಯ ಗಳಿಸುವುದರೊಂದಿಗೆ ಸ್ಕಾಟಿಷ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿತು. ಆದರೆ ಪಂದ್ಯದಲ್ಲಿ ತಮ್ಮ ತಂಡದ ಪ್ರದರ್ಶನವು ಫರ್ಗುಸನ್‌ರಿಗೆ ತೃಪ್ತಿ ತರಲಿಲ್ಲ, ಜೊತೆಗೆ ಆಟಗಾರರನ್ನು "ಕೀಳು ಪ್ರದರ್ಶನ" ನೀಡಿದರೆಂದು ಪಂದ್ಯದ ನಂತರ ಟೆಲಿವಿಶನ್ ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು. ಇದು ಆಟಗಾರರನ್ನು ಘಾಸಿಗೊಳಿಸಿತು[೩೦] - ಈ ಹೇಳಿಕೆಯನ್ನು ಅವರು ನಂತರ ವಾಪಸ್ಸು ಪಡೆದರು.ಕಳೆದ 1983–84 ಕ್ರೀಡಾ ಋತು ವಿನಲ್ಲಿ ಒಂದು ಮಧ್ಯಮ ಮಟ್ಟದ ಪ್ರದರ್ಶನದೊಂದಿಗೆ ಪ್ರಾರಂಭವಾದ ಅಬರ್ಡೀನ್ ತಂಡದ ಸ್ಥಿತಿಯು ನಂತರ ಸುಧಾರಿಸಿತು. ತಂಡವು ಸ್ಕಾಟಿಷ್ ಪಂದ್ಯಾವಳಿಯನ್ನು ಗೆಲ್ಲುವುದರ ಜೊತೆಗೆ ಸ್ಕಾಟಿಷ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿತು. ಫರ್ಗುಸನ್ ರಿಗೆ 1984ರ ಗೌರವ ಪಟ್ಟಿಯಲ್ಲಿ OBE ಪ್ರಶಸ್ತಿಯನ್ನು ನೀಡಲಾಯಿತು[೩೧]. ಇದರ ಜೊತೆಗೆ ಕ್ರೀಡಾ ಋತುವಿನಲ್ಲಿ ರೇಂಜರ್ಸ್, ಅರ್ಸೆನಲ್ ಹಾಗು ಟೋಟೆನ್ಹಾಮ್ ಹೊಟ್ಸ್‌ಪುರ್ ತಂಡಕ್ಕೆ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುವಂತೆ ಆಮಂತ್ರಣ ನೀಡಲಾಯಿತು. ಅಬರ್ಡೀನ್ ತಮ್ಮ ಲೀಗ್ ಪ್ರಶಸ್ತಿಯನ್ನು 1984–85 ಕ್ರೀಡಾ ಋತುವಿನಲ್ಲಿ ಉಳಿಸಿಕೊಂಡಿತು, ಆದರೆ 1985–86ರ ಕ್ರೀಡಾ ಋತುವು ನಿರಾಶಾದಾಯಕವಾಗಿತ್ತು. ಜೊತೆಗೆ ತಂಡವು ಎರಡು ಸ್ವದೇಶೀ ಕಪ್‌ಗಳನ್ನೂ ಗೆದ್ದಿದ್ದರೂ ಸಹ ಲೀಗ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಫರ್ಗುಸನ್ ರನ್ನು, 1986ರ ಪ್ರಾರಂಭದಲ್ಲಿ ಕ್ಲಬ್ ನ ಬೋರ್ಡ್ ಆಫ್ ಡೈರೆಕ್ಟರ್ ರನ್ನಾಗಿ ನೇಮಕ ಮಾಡಲಾಯಿತು, ಆದರೆ ಏಪ್ರಿಲ್ ನಲ್ಲಿ ಅವರು ಕ್ಲಬ್ ನ ಅಧ್ಯಕ್ಷ ಡಿಕ್ ಡೊನಾಲ್ಡ್ ಗೆ ತಾವು ಬೇಸಿಗೆಯಲ್ಲಿ ಕ್ಲಬ್ ನ್ನು ತೊರೆಯಲು ಉದ್ದೇಶಿಸಿರುವುದಾಗಿ ಹೇಳಿದರು.ಫರ್ಗುಸನ್ 1986ರ ವಿಶ್ವ ಕಪ್ ನ ಅರ್ಹತಾ ಸುತ್ತಿನಪಂದ್ಯದಲ್ಲಿ ಸ್ಕಾಟಿಷ್ ರಾಷ್ಟ್ರೀಯ ತಂಡ ದ ತರಬೇತಿ ಸಿಬ್ಬಂದಿಯ ಭಾಗವಾಗಿದ್ದರು. ಆದರೆ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಸ್ಕಾಟ್‌ಲೆಂಡ್ ತಮ್ಮ ಗುಂಪಿನಲ್ಲಿ ಅರ್ಹತೆ ಗಳಿಸಿದಾಗ, ಪಂದ್ಯದ ಕೊನೆಯಲ್ಲಿ ತಂಡದ ವ್ಯವಸ್ಥಾಪಕ ಜಾಕ್ ಸ್ಟೀನ್ 10 ಸೆಪ್ಟೆಂಬರ್ 1985ರಲ್ಲಿ ಕುಸಿದುಬಿದ್ದು ನಿಧನರಾದರು. ಫರ್ಗುಸನ್ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಸ್ಕಾಟಿಷ್ ರಾಷ್ಟ್ರೀಯ ತಂಡದ ಪರ ಹಾಗು ನಂತರ ವಿಶ್ವ ಕಪ್ ಗೆ ತಂಡ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲು ಕೂಡಲೇ ಒಪ್ಪಿಕೊಂಡರು. ತಮ್ಮ ಅಂತರಾಷ್ಟ್ರೀಯ ಕರ್ತವ್ಯಗಳನ್ನು ನಿರ್ವಹಿಸುವ ಸಲುವಾಗಿ, ಅವರು ಅಬರ್ಡೀನ್ ತಂಡಕ್ಕೆ ತಮ್ಮ ಸಹ-ತಂಡ ವ್ಯವಸ್ಥಾಪಕನಾಗಿದ್ದ ಆರ್ಚಿ ನಾಕ್ಸ್‌ರನ್ನು ನೇಮಕ ಮಾಡಿಕೊಂಡರು.ಸರಿಸುಮಾರು ಇದೆ ಸಮಯದಲ್ಲಿ, ಟೋಟೆನ್ಹಾಮ್ ಹೊಟ್‌ಸ್ಪುರ್ ತಂಡವು ಪೀಟರ್ ಶ್ರೀವ್ಸ್ ರ ಬದಲಾಗಿ ಫರ್ಗುಸನ್ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲು ಆಮಂತ್ರಣ ನೀಡಿತು. ಆದರೆ ಅವರು ನಿರಾಕರಿಸಿದ ಕಾರಣದಿಂದ ಈ ಹುದ್ದೆಯು ಲುಟನ್ ಟೌನ್'ಸ್ ತಂಡದ ಡೇವಿಡ್ ಪ್ಲೀಟ್ ಪಾಲಾಯಿತು. ಫರ್ಗುಸನ್ ರಿಗೆ ಡಾನ್ ಹೊವೆ ಯ ಬದಲಿಗೆ ಅರ್ಸೆನಲ್ ತಂಡದ ವ್ಯವಸ್ಥಾಪಕರಾಗಲೂ ಸಹ ಆಹ್ವಾನವಿತ್ತು, ಆದರೆ ಅವರು ಈ ಆಹ್ವಾನವನ್ನೂ ಕೂಡ ನಿರಾಕರಿಸಿದರು. ಅವರ ಬದಲಿಗೆ ಸ್ಕಾಟಿಷ್ ತಂಡದ ಅವರ ಸಹಚರ ಜಾರ್ಜ್ ಗ್ರಹಾಮ್ ಈ ಹುದ್ದೆಯನ್ನು ಅಲಂಕರಿಸಿದರು.[೩೨] ಅದೇ ಬೇಸಿಗೆಯಲ್ಲಿ, ಅವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆರಾನ್ ಅಟ್ಕಿನ್ಸನ್ ರಿಗೆ ಬದಲಿಯಾಗಿ ವ್ಯವಸ್ಥಾಪಕರಾಗಿ ಹುದ್ದೆಯನ್ನು ಅಲಂಕರಿಸುವ ಬಗ್ಗೆ ಊಹಾಪೋಹಗಳಿತ್ತು. ತಂಡವು ಆರಂಭದ 10-ಪಂದ್ಯಗಳಲ್ಲಿ ಜಯವನ್ನು ಸಾಧಿಸಿ ಪ್ರಶಸ್ತಿಯ ಗರಿ ಅನಿವಾರ್ಯವೆಂದು ಕಾಣಿಸಿದರೂ ಸಹ ಇಂಗ್ಲಿಷ್‌ನ ಅಗ್ರ ಪೈಪೋಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಆದಾಗ್ಯೂ ಫರ್ಗುಸನ್ ಕ್ಲಬ್ ನಲ್ಲಿ ಬೇಸಿಗೆ ಪೂರ್ತಿ ಕಾರ್ಯ ನಿರ್ವಹಿಸುತ್ತಾರಾದರೂ, ಅಟ್ಕಿನ್ಸನ್ ರನ್ನು ನವೆಂಬರ್ 1986ರಲ್ಲಿ ವಜಾಗೊಳಿಸಿದಾಗ ಅಂತಿಮವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆ.

ಮ್ಯಾಂಚೆಸ್ಟರ್ ತಂಡದ ನಿರ್ವಹಣೆ

[ಬದಲಾಯಿಸಿ]

ನೇಮಕಾತಿ ಹಾಗು ಮೊದಲ ವರ್ಷಗಳು

[ಬದಲಾಯಿಸಿ]

ಫರ್ಗುಸನ್ ರನ್ನು ಓಲ್ಡ್ ಟ್ರ್ಯಾಫೋರ್ಡ್ ನ ತಂಡ ವ್ಯವಸ್ಥಾಪಕರನ್ನಾಗಿ 6 ನವೆಂಬರ್ 1986ರಲ್ಲಿ ನೇಮಕ ಮಾಡಲಾಯಿತು. ಅವರು ಪ್ರಾರಂಭದಲ್ಲಿ ಹಲವು ಆಟಗಾರರ ಬಗ್ಗೆ ಚಿಂತಿತರಾಗಿದ್ದರು, ಉದಾಹರಣೆಗೆ ನಾರ್ಮನ್ ವೈಟ್ಸೈಡ್, ಪಾಲ್ ಮೆಕ್‌ಗ್ರಾಥ್ ಹಾಗು ಬ್ರಯಾನ್ ರಾಬ್ಸನ್ ಮುಂತಾದ ಆಟಗಾರರು ಅತಿಯಾಗಿ ಮದ್ಯಪಾನ ಮಾಡುತ್ತಿದ್ದರು ಹಾಗು ಇವರುಗಳ ದೈಹಿಕ ಸಾಮರ್ಥ್ಯದ ಮಟ್ಟದ ಬಗ್ಗೆ "ನಿರುತ್ಸಾಹಗೊಂಡಿದ್ದರು". ಆದರೆ ಆಟಗಾರರ ಶಿಸ್ತನ್ನು ಹೆಚ್ಚಿಸುವಲ್ಲಿ ಇವರು ಸಮರ್ಥರಾಗುವುದರ ಜೊತೆಗೆ ಯುನೈಟೆಡ್ ತಂಡವು ಪಟ್ಟಿಯಲ್ಲಿ ಏರಿಕೆಯಾಗಿ 11 ಸ್ಥಾನವನ್ನು ಗಳಿಸಿ ಕ್ರೀಡಾಋತುವನ್ನು ಮುಗಿಸಿತು. ಆ ಕ್ರೀಡಾ ಋತುವಿನ ಪಂದ್ಯಾವಳಿಯಲ್ಲಿ ಲಿವರ್ ಪೂಲ್ ತಂಡದ ಮೇಲೆ ಆನ್ಫೀಲ್ಡ್ ನಲ್ಲಿ 1-0 ಅಂಕಗಳಿಂದ ಜಯ ಸಾಧಿಸಿತು - ಇದು ಲಿವರ್ ಪೂಲ್ ತಂಡಕ್ಕೆ ಸಹ ಆ ಕ್ರೀಡಾ ಋತುವಿನಲ್ಲಿ ತಾಯ್ನಾಡಲ್ಲಿ ಸೋತ ಏಕೈಕ ಪಂದ್ಯವಾಗಿತ್ತು. ಇದು ಅವರಿಗೆ ಲೀಗ್ ಪ್ರಶಸ್ತಿಗಾಗಿ ಸೆಣೆಸಾಟವನ್ನು ಅಂತ್ಯಗೊಳಿಸುವಲ್ಲಿ ಸಹಾಯಮಾಡಿತು. ಫರ್ಗುಸನ್ ತಮ್ಮ ನೇಮಕಾತಿಯ ಮೂರು ವಾರಗಳ ನಂತರ ವೈಯುಕ್ತಿಕ ದುರಂತವನ್ನು ಅನುಭವಿಸಿದರು. ಅವರ ತಾಯಿ ಎಲಿಜಬತ್, ತಮ್ಮ 64ನೇ ವರ್ಷದಲ್ಲಿ ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನ ಹೊಂದಿದರು.ಫರ್ಗುಸನ್ ಅಬರ್ಡೀನ್ ತಂಡದಲ್ಲಿ ತಮಗೆ ಸಹಾಯಕರಾಗಿದ್ದ ಆರ್ಚೀ ನಾಕ್ಸ್ ರನ್ನು ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ತಮ್ಮ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರು.ಕಳೆದ 1987-88ರ ಕ್ರೀಡಾ ಋತು ವಿನಲ್ಲಿ, ಫರ್ಗುಸನ್ ಹಲವಾರು ಪ್ರಮುಖ ಆಟಗಾರರನ್ನು ತಮ್ಮ ತಂಡಕ್ಕೆ ನೇಮಕ ಮಾಡಿಕೊಂಡರು, ಇವರಲ್ಲಿ ಸ್ಟೀವ್ ಬ್ರೂಸ್, ವೀವ್ ಆನ್ಡರ್ಸನ್, ಬ್ರಿಯನ್ ಮ್ಯಾಕ್ಕ್ಲೈರ್ ಹಾಗು ಜಿಮ್ ಲಇಗ್ಹ್ಟನ್ ಸೇರಿದ್ದಾರೆ. ಈ ಎಲ್ಲ ಹೊಸ ಆಟಗಾರರು ಯುನೈಟೆಡ್ ತಂಡಕ್ಕೆ ಒಂದು ಮಹತ್ವವಾದ ಕೊಡುಗೆಯನ್ನು ನೀಡುವುದರ ಜೊತೆಗೆ ಲಿವರ್ ಪೂಲ್ ತಂಡಕ್ಕಿಂತ ಒಂಬತ್ತು ಅಂಕಗಳು ಹಿಂದೆ, ಎರಡನೇ ಸ್ಥಾನವನ್ನು ಪಡೆದರು. ಬಾರ್ಸಿಲೋನ ತಂಡದಿಂದ ಎರಡು ವರ್ಷಗಳ ಬಳಿಕ ಮಾರ್ಕ್ ಹುಗ್ಹೆಸ್ ಕ್ಲಬ್‌ಗೆ ಮರಳಿದ ನಂತರ ಯುನೈಟೆಡ್ ತಂಡ ಉತ್ತಮ ಆಟವಾಡುವುದೆಂದು ನಿರೀಕ್ಷಿಸಲಾಗಿತ್ತು. ಆದರೆ 1988-89ರ ಕ್ರೀಡಾ ಋತುವು ಅವರಿಗೆ ನಿರಾಶೆಯನ್ನು ತಂದಿತ್ತು. FA ಕಪ್ ನ ಆರನೇ ಸುತ್ತಿನಲ್ಲಿ ನಾಟ್ಟಿಂಗ್ಹಾಮ್ ಫಾರೆಸ್ಟ್ ತಂಡಕ್ಕೆ 1-0 ಅಂಕಗಳಿಂದ ತಾಯ್ನಾಡಿನಲ್ಲಿ ಶರಣಾಗುವುದರ ಜೊತೆಗೆ ಪಂದ್ಯಾವಳಿಯಲ್ಲಿ ಹನ್ನೊಂದನೇ ಸ್ಥಾನವನ್ನು ಗಳಿಸಿತು. ಕ್ರೀಡಾ ಋತುವಿನಲ್ಲಿ, ಬರ್ಮುಡನ್ ತಂಡದ ಇಂಗ್ಲೆಂಡ್ ಪ್ರವಾಸದ ಭಾಗವಾಗಿ, ಯುನೈಟೆಡ್ ತಂಡವು ಬರ್ಮುಡನ್ ರಾಷ್ಟ್ರೀಯ ತಂಡ ಹಾಗು ಸೊಮರ್ಸೆಟ್ ಕೌಂಟಿ ಕ್ರಿಕೆಟ್ ಕ್ಲಬ್ ನ ಜೊತೆಗೆ ಸೌಹಾರ್ದ ಪಂದ್ಯಗಳನ್ನು ಆಡಿತು. ಸೊಮರ್ಸೆಟ್ ವಿರುದ್ಧದ ಪಂದ್ಯದಲ್ಲಿ, ಸ್ವತಃ ಫರ್ಗುಸನ್ ಹಾಗು ಅವನ ಸಹಾಯಕ, ಆರ್ಚೀ ನಾಕ್ಸ್ ಇಬ್ಬರೂ ಮೈದಾನಕ್ಕೆ ಇಳಿದರು ಜತೆಗೆ ನಾಕ್ಸ್ ಸ್ಕೋರ್‌ಷೀಟ್‌ನಲ್ಲಿ ಮುಂದುವರಿದರು. ಈ ಪಂದ್ಯವು ಮ್ಯಾಂಚೆಸ್ಟರ್ ಯುನೈಟೆಡ್ ಮೊದಲ ತಂಡಕ್ಕೆ ಫರ್ಗುಸನ್ ಆಡಿದ ಏಕೈಕ ಪಂದ್ಯವಾಗಿತ್ತು.ಕಳೆದ 1989-90ರ ಕ್ರೀಡಾ ಋತುವಿನಲ್ಲಿ, ಫರ್ಗುಸನ್ ಮಧ್ಯಮೈದಾನದ ಆಟಗಾರರಾದ ನಿಲ್ ವೆಬ್ಬ್ ಹಾಗು ಪಾಲ್ ಇನ್ಸ್ ಹಾಗು ರಕ್ಷಕ ಗ್ಯಾರಿ ಪಾಲ್ಲಿಸ್ಟೆರ್ ಗೆ(ಮಿಡಲ್ಸ್‌ಬ್ರೋಗ್ ತಂಡದಿಂದ £2.3 ದಶಲಕ್ಷ ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದು ಒಂದು ರಾಷ್ಟ್ರೀಯ ದಾಖಲೆ) ಹೆಚ್ಚಿನ ಮೊತ್ತದ ಹಣ ನೀಡುವುದರೊಂದಿಗೆ ತಮ್ಮ ತಂಡಕ್ಕೆ ಮತ್ತಷ್ಟು ಚೇತರಿಕೆ ನೀಡಿದರು. ಮೊದಲ ದಿನ 4-1 ಅಂಕಗಳ ಅಂತರದಲ್ಲಿ ಹಾಲಿ ಚಾಂಪಿಯನ್ಸ್ ಆಗಿದ್ದ ಅರ್ಸೆನಲ್ ತಂಡದ ವಿರುದ್ಧ ಜಯ ಸಾಧಿಸುವ ಮೂಲಕ ಕ್ರೀಡಾ ಋತುವಿನಲ್ಲಿ ಶುಭಾರಂಭ ಮಾಡಿತು, ಆದರೆ ಯುನೈಟೆಡ್ ಲೀಗ್ ಸ್ಥಿತಿಯು ಬೇಗನೆ ಕೆಟ್ಟುಹೋಯಿತು. ಸೆಪ್ಟೆಂಬರ್‌ನಲ್ಲಿ, ಯುನೈಟೆಡ್ ತಂಡವು ಅದರ ಪ್ರಬಲ ಎದುರಾಳಿಯಾದ ಮ್ಯಾಂಚೆಸ್ಟರ್ ಸಿಟಿ ತಂಡದ ವಿರುದ್ಧ 5-1 ಅಂಕಗಳ ಒಂದು ಅವಮಾನಕರ ಸೋಲನ್ನು ಅನುಭವಿಸಿತು. ಇದರ ಪರಿಣಾಮವಾಗಿ ಹಾಗು ಕ್ರೀಡಾ ಋತುವಿನ ಪ್ರಾರಂಭದಲ್ಲಿ ಎಂಟು ಪಂದ್ಯಾವಳಿಗಳಲ್ಲಿ ಸತತವಾಗಿ ಆರು ಬಾರಿ ಸೋಲು ಹಾಗು ಎರಡು ಡ್ರಾಗಳಿಂದಾಗಿ , "ಮೂರು ವರ್ಷಗಳು ವಿನಾಯಿತಿ ನೀಡಿದರು ಸಹ ಇನ್ನೂ ಹೊಲಸಾಗಿದೆ ಟಾ ರಾ ಫೆರ್ಗಿ." ಎಂಬ ಘೋಷಣೆಯನ್ನು ಹೊತ್ತ ಬ್ಯಾನರ್ ಅನ್ನು ಓಲ್ಡ್ ಟ್ರಫೋರ್ಡ್ ನಲ್ಲಿ ಪ್ರದರ್ಶಿಸಲಾಗಿತ್ತು, ಹಾಗು ಹಲವು ಪತ್ರಕರ್ತರು ಹಾಗು ಬೆಂಬಲಿಗರು ಫರ್ಗುಸನ್ ರನ್ನು ವಜಾಗೊಳಿಸಬೇಕೆಂದು ಕರೆ ನೀಡಿದರು.[೩೩] ಫರ್ಗುಸನ್ ನಂತರ ಡಿಸೆಂಬರ್ 1989ನ್ನು "ಪಂದ್ಯದಲ್ಲಿ ನಾನು ಅನುಭವಿಸಿದ ಅತ್ಯಂತ ಕರಾಳ ದಿನಗಳು" ಎಂದು ವಿವರಿಸುತ್ತಾರೆ.[೩೪] ಏಳು ಪಂದ್ಯಗಳ ಸ್ಪರ್ಧೆಯಲ್ಲಿ ಒಂದನ್ನೂ ಗೆಲ್ಲದ ಪರಿಣಾಮವಾಗಿ, ಮ್ಯಾಂಚೆಸ್ಟರ್ ಯುನೈಟೆಡ್ ತಂಡವು FA ಕಪ್ ನ ಮೂರನೇ ಸುತ್ತಿನಲ್ಲಿ ನಾಟ್ಟಿಂಗ್ಹಾಮ್ ಫಾರೆಸ್ಟ್ ತಂಡದ ಜೊತೆಗೆ ಸರಿಸಮ ಪಂದ್ಯವನ್ನು ಆಡಿತು. ಆ ಕ್ರೀಡಾ ಋತುವಿನ ಪಂದ್ಯಾವಳಿಯಲ್ಲಿ ಫಾರೆಸ್ಟ್ ತಂಡವು ಉತ್ತಮ ಪ್ರದರ್ಶನವನ್ನು ನೀಡುತ್ತಿತ್ತು,[೩೫] ಹಾಗು ಯುನೈಟೆಡ್ ತಂಡವು ಪಂದ್ಯದಲ್ಲಿ ಸೋಲುತ್ತದೆ ಹಾಗೂ ಇದರ ಪರಿಣಾಮವಾಗಿ ಫರ್ಗುಸನ್ ವಜಾಗೊಳ್ಳುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಯುನೈಟೆಡ್ ತಂಡವು ಪಂದ್ಯವನ್ನು 1-0 ಅಂಕಗಳಿಂದ ಗೆದ್ದುಕೊಂಡಿತು.ಮಾರ್ಕ್ ರಾಬಿನ್ಸ್ ನ ಗೋಲಿಗೆ ಅಭಿನಂದನೆ ಸಲ್ಲಿಸಬೇಕು ಹಾಗೂ ಅಂತಿಮವಾಗಿ ಯುನೈಟೆಡ್ ಫೈನಲ್ಸ್ ಪ್ರವೇಶಿಸಿತು. ಕಪ್‌ನ ಜಯವನ್ನು, ಫರ್ಗುಸನ್‌‌ ರ ಓಲ್ಡ್ ಟ್ರಫೋರ್ಡ್ ವೃತ್ತಿಜೀವನವನ್ನು ಪಾರುಮಾಡಿದ ಪಂದ್ಯವೆಂದು ಪದೇ ಪದೇ ಉದಾಹರಿಸಲಾಗುತ್ತಿದೆ.[೩೫][೩೬][೩೭] ಮೊದಲ ಪಂದ್ಯದಲ್ಲಿ 3-3 ಅಂಕಗಳಿಂದ ಸಮ ಮಾಡಿಕೊಂಡಿದ್ದ ಯುನೈಟೆಡ್ ತಂಡವು ಫೈನಲ್ ನ ಮರುಪಂದ್ಯದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡವನ್ನು ಸೋಲಿಸಿ FA ಕಪ್ ನಲ್ಲಿ ವಿಜಯಿಯಾಯಿತು. ಫರ್ಗುಸನ್‌ಗೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕರಾಗಿ ಸಿಕ್ಕ ಮೊದಲ ಪ್ರಮುಖ ಪಾರಿತೋಷಕ ಇದಾಗಿದೆ. ಯುನೈಟೆಡ್ ತಂಡದ ಮೊದಲ ಪಂದ್ಯದಲ್ಲಿ ರಕ್ಷಣಾತ್ಮಕ ದೋಷಗಳನ್ನು ಗೋಲ್ ಕೀಪರ್ ಜಿಮ್ ಲೈಗ್‌ಟನ್ ಮೇಲೆ ಏಕಪಕ್ಷೀಯವಾಗಿ ಆಪಾದಿಸಲಾಯಿತು. ಇದು ಫರ್ಗುಸನ್ ರಿಗೆ ತಮ್ಮ ಮಾಜಿ ಅಬರ್ಡೀನ್ ಆಟಗಾರನನ್ನು ತಂಡದಿಂದ ಕೈಬಿಡುವಂತೆ ಹಾಗು ಅವನ ಬದಲಿಗೆ ಲೆಸ್ ಸೀಲೆಯ್ ನನ್ನು ಕರೆತರುವಂತಾಯಿತು.

ಕ್ಯಾಂಟೋನ ಹಾಗು ಮೊದಲ ಲೀಗ್ ಪ್ರಶಸ್ತಿ

[ಬದಲಾಯಿಸಿ]

ಆದಾಗ್ಯೂ ಯುನೈಟೆಡ್ ತಂಡದ ಲೀಗ್ ನ ಸ್ಥಿತಿಯು 1990–91 ರಲ್ಲಿ ಬಹುಮಟ್ಟಿಗೆ ಸುಧಾರಣೆಯಾದರೂ ತಂಡದಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲದ ಕಾರಣ ಆರನೇ ಸ್ಥಾನವನ್ನು ಪಡೆಯಿತು. ಹಿಂದಿನ ಕ್ರೀಡಾ ಋತುವಿನಲ್ಲಿ FA ಕಪ್ ಫೈನಲ್ ಪಂದ್ಯದಲ್ಲಿ ಜಯವನ್ನು ಗಳಿಸಿದ್ದರೂ ಸಹ, ಕೆಲವರಿಗೆ ಯಶಸ್ಸು ಗಳಿಸುವುದರಲ್ಲಿ ಫರ್ಗುಸನ್‌ರ ಸಾಮರ್ಥ್ಯದ ಬಗ್ಗೆ ಸಂದೇಹವಿತ್ತು. ಏಕೆಂದರೆ ಬಸ್ಬಿಯ ನಂತರ ಎಲ್ಲ ತಂಡ ವ್ಯವಸ್ಥಾಪಕರು - ಲೀಗ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು.[೩೭] ತಂಡವು ಲೀಗ್ ಕಪ್ ನಲ್ಲಿ ಶೆಫ್ಫೀಲ್ಡ್ ವೆಡ್‌ನೆಸ್‌ಡೆ ತಂಡಕ್ಕೆ 1-0 ಅಂಕಗಳಿಂದ ಪರಾಭವಗೊಳ್ಳುವುದರ ಮೂಲಕ ರನ್ನರ್ಸ್ ಅಪ್ ಪಡೆಯಿತು. ತಂಡವು ಯುರೋಪಿಯನ್ ಕಪ್ ವಿನ್ನರ್ಸ್ ಕಪ್ನ ಫೈನಲ್ಸ್ ತಲುಪುವುದರ ಜೊತೆಗೆ ಆ ಕ್ರೀಡಾ ಋತುವಿನ ಸ್ಪಾನಿಶ್ ಚಾಂಪಿಯನ್ಸ್ ಬಾರ್ಸಿಲೋನ ತಂಡವನ್ನು 2-1 ಅಂಕಗಳಿಂದ ಸೋಲಿಸಿತು. ಪಂದ್ಯದ ನಂತರ, ಫರ್ಗುಸನ್ ಯುನೈಟೆಡ್ ತಂಡವು ಮುಂದಿನ ಕ್ರೀಡಾ ಋತುವಿನಲ್ಲಿ ಪಂದ್ಯಾವಳಿಯನ್ನು ಗೆಲ್ಲುವುದಾಗಿ ಪ್ರತಿಜ್ಞೆ ಮಾಡಿದರು.[೩೮] ಕಳೆದ 1991ರ ಕ್ರೀಡಾ ಋತುವಿನ ಕೊನೆಯಲ್ಲಿ, ಫರ್ಗುಸನ್ ರ ಸಹಾಯಕ ಆರ್ಚಿ ನಾಕ್ಸ್ ಗ್ಲಾಸ್ಗೌ ರೇಂಜರ್ಸ್ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳುವುದರ ಜೊತೆಗೆ ವಾಲ್ಟರ್ ಸ್ಮಿತ್ ಗೆ ಸಹಾಯಕನಾದ. ಫರ್ಗುಸನ್ ಯುವ ತಂಡದ ತರಬೇತುದಾರ ಬ್ರಯಾನ್ ಕಿಡ್ ನನ್ನು ನಾಕ್ಷ್‌ಗೆ ಬದಲಿಯಾಗಿ ತಮ್ಮ ಸಹಾಯಕ ತಂಡ ವ್ಯವಸ್ಥಾಪಕನಾಗಿ ಬಡ್ತಿ ನೀಡಿದರು.ಕಳೆದ 1991–92 ಕ್ರೀಡಾ ಋತುವು ಫರ್ಗುಸನ್‌ರ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ, ಫರ್ಗುಸನ್, "ಮಾಧ್ಯಮದಲ್ಲಿ ಕೆಲವರು ತಮ್ಮ ತಪ್ಪುಗಳು ತಂಡದ ದುರವಸ್ಥೆಗೆ ದಾರಿ ಮಾಡಿಕೊಟ್ಟಿತು ಎಂದು ಭಾವಿಸಿದ್ದಾರೆ" ಎಂದು ಹೇಳಿದರು.[೩೯] ಯುನೈಟೆಡ್ ತಂಡವು ಲೀಗ್ ಕಪ್ ಹಾಗು ಸೂಪರ್ ಕಪ್ ಎರಡನ್ನು ಮೊದಲ ಬಾರಿಗೆ ಗೆದ್ದುಕೊಂಡಿತು, ಆದರೆ ಆ ಕ್ರೀಡಾ ಋತುವಿನಲ್ಲಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೂ ಲೀಗ್ ಪ್ರಶಸ್ತಿ ಗಾಗಿ ನಡೆದ ಪಂದ್ಯಾವಳಿಯಲ್ಲಿ ತಮ್ಮ ಎದುರಾಳಿಗಳಾದ ಲೀಡ್ಸ್ ಯುನೈಟೆಡ್ ತಂಡಕ್ಕೆ ಶರಣಾಗಬೇಕಾಯಿತು. ಫರ್ಗುಸನ್, ಲುಟನ್ ಟೌನ್ ತಂಡದ ಮೈಕ್ಕ್ ಹಾರ್ಫೋರ್ಡ್ ರನ್ನು ತಮ್ಮ ತಂಡಕ್ಕೆ ಕರೆತರುವಲ್ಲಿ ವಿಫಲರಾದ ಕಾರಣಕ್ಕೆ ಯುನೈಟೆಡ್ ಲೀಗ್‌ ಬಲಿಕೊಡಬೇಕಾಯಿತೆಂದು ಭಾವಿಸಿದರು. ಜೊತೆಗೆ ಮುಂದಿನ ಕ್ರೀಡಾ ಋತುವಿನಲ್ಲಿ ಪಂದ್ಯವನ್ನು ಗೆಲ್ಲಬೇಕಾದರೆ ತಂಡದಲ್ಲಿ "ಒಂದು ಹೆಚ್ಚುವರಿ ಆಯಾಮ" ವನ್ನು ನೀಡಬೇಕಾದ ಅವಶ್ಯಕತೆಯಿದೆಯೆಂದು ಹೇಳಿದರು.[೪೦] ಕಳೆದ 1992ರ ಕ್ರೀಡಾ ಋತುವಿನ ಅಂತ್ಯದಲ್ಲಿ, ಫರ್ಗುಸನ್ ಒಬ್ಬ ಹೊಸ ಸ್ಟ್ರೈಕರ್(ಗೋಲು ಹೊಡೆಯುವವ) ಗೆ ಹುಡುಕಾಟ ನಡೆಸಿದರು. ಅವರು ಸೌತ್ಆಮ್ಪ್ಟನ್ ತಂಡದ ಅಲನ್ ಶೆಅರೆರ್ ಜತೆ ಒಪ್ಪಂದಕ್ಕೆ ಪ್ರಯತ್ನ ನಡೆಸಿದರು, ಆದರೆ ಈ ಆಟಗಾರ ಬ್ಲಾಕ್ ಬರ್ನ್ ರೋವೆರ್ಸ್ ತಂಡದ ಪಾಲಾದರು. ಅಂತಿಮವಾಗಿ, 23 ವರ್ಷದ ಕೇಂಬ್ರಿಜ್ ಯುನೈಟೆಡ್ ತಂಡದ ಸ್ಟ್ರೈಕರ್ ಡಿಓನ್ ಡಬ್ಲಿನ್ ಗೆ £1 ದಶಲಕ್ಷ ಪಾವತಿ ಮಾಡಿದರು - ಬೇಸಿಗೆಯಲ್ಲಿ ಮಾಡಿಕೊಂಡ ಏಕೈಕ ಹಾಗು ಪ್ರಮುಖ ಒಪ್ಪಂದ ಇದಾಗಿತ್ತು.ಕಳೆದ 1992-93 ಕ್ರೀಡಾ ಋತು ವು ಮಂದ ಗತಿಯಲ್ಲಿ ಪ್ರಾರಂಭವಾಯಿತು( ನವೆಂಬರ್ ತಿಂಗಳ ಪ್ರಾರಂಭದಲ್ಲಿ ಅವರು 22 ಸ್ಥಾನಗಳಲ್ಲಿ 10ನೇ ಸ್ಥಾನವನ್ನು ಪಡೆದಿದ್ದರು). ಇದು ಯುನೈಟೆಡ್ ತಂಡವು ಲೀಗ್ ಪ್ರಶಸ್ತಿಯನ್ನು ಗಳಿಸುವಲ್ಲಿ ಮತ್ತೊಮ್ಮೆ ವಿಫಲವಾಗುವಂತೆ ಕಂಡು ಬರುತ್ತಿತ್ತು (ಈ ಬಾರಿ ಪ್ರೀಮಿಯರ್ ಲೀಗ್). ಆದರೆ, ಲೀಡ್ಸ್ ಯುನೈಟೆಡ್ ತಂಡದಿಂದ £1.2 ದಶಲಕ್ಷಕ್ಕೆ ಫ್ರೆಂಚ್ ಸ್ಟ್ರೈಕರ್ ಎರಿಕ್ ಕ್ಯಾಂಟೋನ ನ ಖರೀದಿಯ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಭವಿಷ್ಯ ಹಾಗು ತಂಡದ ವ್ಯವಸ್ಥಾಪಕರಾಗಿ ಫರ್ಗುಸನ್‌ರ ಸ್ಥಾನ ಎರಡೂ ಉಜ್ವಲವಾಗುವಂತೆ ಕಂಡು ಬಂದಿತು. ಕ್ಯಾಂಟೋನ, ಮಾರ್ಕ್ ಹುಗ್ಹೆಸ್ ಜೊತೆಗೂಡಿ ಒಂದು ಪ್ರಬಲ ಸಹಯೋಗವನ್ನು ರೂಪಿಸಿಕೊಂಡು ಕ್ಲಬ್‌ಗೆ ಅಗ್ರ ಸ್ಥಾನ ದೊರಕಿಸಿಕೊಟ್ಟ. ಇದರೊಂದಿಗೆ ಯುನೈಟೆಡ್ ತಂಡವು 26 ವರ್ಷಗಳಿಂದ ಸತತವಾಗಿ ಲೀಗ್ ಚಾಂಪಿಯನ್ ಶಿಪ್ ಕಾಯುವಿಕೆಯನ್ನು ಅಂತ್ಯಗೊಳಿಸುವುದರ ಜೊತೆಗೆ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಅನ್ನು ಗಳಿಸಿದ ಮೊದಲ ತಂಡವನ್ನಾಗಿ ಮಾಡಿದ. ಯುನೈಟೆಡ್ ತಂಡವು 10 ಅಂಕಗಳ ಅಂತರದಿಂದ ರನ್ನರ್ಸ್‌ಅಪ್ ತಂಡವಾಗಿ ಹೊರಹೊಮ್ಮಿದ ಆಸ್ಟನ್ ವಿಲ್ಲ ತಂಡವನ್ನು ಸೋಲಿಸುವುದರ ಜೊತೆಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು. ಆಸ್ಟನ್‌ವಿಲ್ಲಾ 2 ಮೇ 1993ರಲ್ಲಿ ಓಲ್ಡ್ ಹಾಮ್ ನಲ್ಲಿ 1-0 ಅಂತರದಿಂದ ಸೋಲುವುದರೊಂದಿಗೆ ಯುನೈಟೆಡ್ ಪ್ರಶಸ್ತಿಯನ್ನು ಬಾಚಿಕೊಂಡಿತು. ಅಲೆಕ್ಸ್ ಫರ್ಗುಸನ್ ರನ್ನು ಲೀಗ್ ವ್ಯವಸ್ಥಾಪಕರ ಒಕ್ಕೂಟವು ವರ್ಷದ ತಂಡ ವ್ಯವಸ್ಥಾಪಕ ಎಂದು ಆಯ್ಕೆ ಮಾಡಿತು.

ಎರಡು ಡಬಲ್ಸ್

[ಬದಲಾಯಿಸಿ]

1993–94 ವರ್ಷಾವಧಿಯಲ್ಲಿ ಹೆಚ್ಚಿನ ಯಶಸ್ಸು ದೊರೆಯಿತು. ಫರ್ಗುಸನ್, ನಾಟಿಂಗ್ಹಾಮ್ ಫಾರೆಸ್ಟ್ ನ 22 ವರ್ಷದ ಮಧ್ಯಮೈದಾನ ಆಟಗಾರ ರೋಯ್ ಕೆಅನೆ ಯನ್ನು, ವೃತ್ತಿ ಜೀವನದ ಕೊನೆಯನ್ನು ಸಮೀಪಿಸಿದ್ದಬ್ರಯಾನ್ ರಾಬ್ಸನ್ ನ ಬದಲಿ ಆಟಗಾರನಾಗಿ ದೀರ್ಘಾವಧಿಗೆ £3.75 ದಶಲಕ್ಷಕ್ಕೆ ಬ್ರಿಟಿಶ್ ದಾಖಲೆ ಶುಲ್ಕ ಕೊಟ್ಟು ವರ್ಗಾವಣೆ ಮಾಡಿಕೊಂಡ.ಯುನೈಟೆಡ್ ತಂಡವು 1993–94ರ ಪ್ರೀಮಿಯರ್ ಲೀಗ್ ನ ಪಟ್ಟಿಯಲ್ಲಿ ಪ್ರಾರಂಭದಿಂದ ಅಂತ್ಯದವರೆಗೂ ಅಕ್ಷರಶಃ ಮುಂಚೂಣಿಯಲ್ಲಿತ್ತು. ಕ್ಯಾಂಟೋನ, ಮಾರ್ಚ್ 1994ರಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಪಂದ್ಯದಿಂದ ಹೊರಗೆ ಕಳಿಸಿದರೂ ಸಹ ಎಲ್ಲ ಪಂದ್ಯಗಳಿಂದ 25 ಗೋಲು ಗಳಿಸಿ ಅಗ್ರ ಗೋಲುಗಾರ ಎನಿಸಿಕೊಂಡ. ಯುನೈಟೆಡ್ ತಂಡವು ಲೀಗ್ ಕಪ್ ನ ಫೈನಲ್ ಪ್ರವೇಶಿಸಿದರೂ 3-1 ಅಂಕಗಳಿಂದ ಆಸ್ಟನ್‌ವಿಲ್ಲ ತಂಡಕ್ಕೆ ಶರಣಾಯಿತು. ಫರ್ಗುಸನ್ ಮುಂಚೆ ಯುನೈಟೆಡ್ ತಂಡವನ್ನು ನಿರ್ವಹಿಸುತ್ತಿದ್ದ ರಾನ್ ಅಟ್ಕಿನ್ಸನ್ ಆಸ್ಟನ್ ವಿಲ್ಲ ತಂಡವನ್ನು ನಿರ್ವಹಿಸುತ್ತಿದ್ದರು. FA ಕಪ್ ಫೈನಲ್ ಪಂದ್ಯದಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಚೆಲ್ಸಿಯಾ ವಿರುದ್ಧದ ಪಂದ್ಯದಲ್ಲಿ ಪರಿಣಾಮಕಾರಿಯಾದ 4-0 ಅಂಕಗಳ ಅಂತರದಿಂದ ಜಯ ಗಳಿಸಿತು. ಅಬರ್ಡೀನ್ ಜತೆ ಸ್ಟಾಟಿಷ್ ಪ್ರೀಮಿಯರ್ ವಿಭಾಗ ಮತ್ತು ಸ್ಕಾಟಿಷ್ ಕಪ್ ಪ್ರಶಸ್ತಿಗಳನ್ನು ಅನುಸರಿಸಿ ಫರ್ಗುಸನ್ ತಮ್ಮ ಎರಡನೇ ಲೀಗ್ ಹಾಗು ಕಪ್ ಡಬಲ್ ಅನ್ನು ಗೆದ್ದರು. ಫರ್ಗುಸನ್, ಕ್ರೀಡಾ ಋತುವಿನ ಕೊನೆಯಲ್ಲಿ ಬ್ಲಾಕ್ ಬರ್ನ್ ರೋವರ್ಸ್ ತಂಡದ ಡೇವಿಡ್ ಮೇಗೆ £1.2 ದಶಲಕ್ಷ ಹಣ ಪಾವತಿ ಮಾಡುವ ಮೂಲಕ ತಮ್ಮ ತಂಡದಲ್ಲಿ ಆಡಲು ಒಪ್ಪಂದ ಮಾಡಿಕೊಂಡರು.1994–95 ರ ಕ್ರೀಡಾ ಋತುವು ಫರ್ಗುಸನ್ ರ ಪಾಲಿಗೆ ಅತ್ಯಂತ ಕಷ್ಟಕರವಾಗಿತ್ತು. ಕ್ಯಾಂಟೋನ, ಸೆಲ್ಹರ್ಸ್ಟ್ ಪಾರ್ಕ್ ನಲ್ಲಿ ನಡೆದ ಒಂದು ಪಂದ್ಯದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡದ ಬೆಂಬಲಿಗನ ಮೇಲೆ ಆಕ್ರಮಣ ಮಾಡುತ್ತಾನೆ. ಈ ಘಟನೆಯಿಂದಾಗಿ ಅವನು ಇಂಗ್ಲಿಷ್ ಫುಟ್ಬಾಲ್ ನ್ನು ತೊರೆದುಬಿಡಬಹುದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಎಂಟು ತಿಂಗಳ ನಿಷೇಧದಿಂದಾಗಿ ಕ್ಯಾಂಟೋನ ಕ್ರೀಡಾ ಋತುವಿನ ಕಡೆ ನಾಲ್ಕು ತಿಂಗಳು ಆಟದಿಂದ ವಂಚಿತನಾಗುತ್ತಾನೆ. ಆತನ ಅಪರಾಧಕ್ಕಾಗಿ 14 ದಿನಗಳ ಜೈಲು ವಾಸವನ್ನು ವಿಧಿಸಲಾಗುತ್ತದೆ ಆದರೆ ಈ ದಂಡನೆಯು ಮನವಿಯ ಮೇರೆಗೆ ರದ್ದು ಪಡಿಸಿ 120 ಗಂಟೆಗಳ ಕಾಲ ಸಮುದಾಯ ಸೇವೆಯನ್ನು ಮಾಡಬೇಕೆಂದು ಆದೇಶಿಸಲಾಗುತ್ತದೆ. ಭರವಸೆ ಮೂಡಿಸಿದ ಸಂಗತಿಯೆಂದರೆ, ಯುನೈಟೆಡ್ ತಂಡವು ಬ್ರಿಟಿಶ್ ದಾಖಲೆ ಹಣವಾದ £7 ದಶಲಕ್ಷವನ್ನು ನ್ಯೂ ಕ್ಯಾಸೆಲ್ ತಂಡದ, ಯಥೇಚ್ಛವಾಗಿ ಗೋಲು ಗಳಿಸುವ ಆಂಡಿ ಕೋಲ್ನಿಗೆ ಪಾವತಿ ಮಾಡಿತು.ಜೊತೆಗೆ ಯುವ ವಿಂಗರ್ ಕೀತ್ ಗಿಲ್ಲೆಸ್ಪಿ(/0)ಈಶಾನ್ಯ ತಂಡಕ್ಕೆ ವಿನಿಮಯವಾಗಿ ತೆರಳಿದರು.ಆದಾಗ್ಯೂ, ಕ್ರೀಡಾ ಋತುವಿನ ಅಂತಿಮ ದಿನ ವೆಸ್ಟ್ಹಾಮ್ ಯುನೈಟೆಡ್ ತಂಡದೊಂದಿಗೆ 1-1 ಅಂಕಗಳ ಸಮ ಮಾಡಿಕೊಂಡ ಪರಿಣಾಮ ಚಾಂಪಿಯನ್ ಶಿಪ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಹಿಡಿತದಿಂದ ತಪ್ಪಿ ಹೋಯಿತು. ಪಂದ್ಯವನ್ನು ಗೆದ್ದಿದ್ದರೆ ಲೀಗ್ ಪ್ರಶಸ್ತಿಯು ತಂಡಕ್ಕೆ ದೊರಕುತ್ತಿತ್ತು. ಯುನೈಟೆಡ್ ತಂಡ FA ಕಪ್ ಫೈನಲ್ ನಲ್ಲಿ 1-0 ಅಂಕಗಳಿಂದ ಎವರ್ಟನ್ ತಂಡಕ್ಕೆ ಕೂಡ ಶರಣಾಯಿತು.1995ರ ಬೇಸಿಗೆಯಲ್ಲಿ ಯುನೈಟೆಡ್ ನ ಪ್ರಸಿದ್ಧ ಆಟಗಾರರು ತಂಡದಿಂದ ನಿರ್ಗಮಿಸಲು ಅವಕಾಶ ಮಾಡಿ, ಇವರ ಬದಲಿಗೆ ಬೇರೆ ಆಟಗಾರರನ್ನು ಖರೀದಿಸದೇ ಇರುವ ಕಾರಣ ಫರ್ಗುಸನ್ ಅತಿಯಾದ ಟೀಕೆಯನ್ನು ಎದುರಿಸಿದರು. ಮೊದಲಿಗೆ ಪಾಲ್ ಇನ್ಸ್ ಇಟಲಿಯ ಇಂಟರ್ನ್ಯಾಜಿಒನೇಲ್ ತಂಡಕ್ಕೆ £7.5 ದಶಲಕ್ಷ ಹಣಕ್ಕೆ ವರ್ಗಾವಣೆಯಾದರು, ದೀರ್ಘಕಾಲದಿಂದ ತಂಡದಲ್ಲಿ ಸ್ಟ್ರೈಕರ್ ಆಗಿದ್ದ ಮಾರ್ಕ್ ಹುಗ್ಹೆಸ್ ನನ್ನು ಇದಕ್ಕಿದ್ದಂತೆ ಚೆಲ್ಸಿಯಾ ತಂಡಕ್ಕೆ £1.5 ದಶಲಕ್ಷ ಒಪ್ಪಂದದ ಹಣಕ್ಕೆ ಮಾರಾಟ ಮಾಡಲಾಯಿತು, ಹಾಗು ಆಂಡ್ರೆ ಕಂಚೆಲ್ಸ್ಕಿಸ್ ಎವರ್ಟನ್ ತಂಡಕ್ಕೆ ಮಾರಾಟ ಮಾಡಲಾಯಿತು. ಮೊದಲ ತಂಡದಲ್ಲಿ ಆಡಲು ಸಿದ್ದರಾಗಿರುವ ಅನೇಕ ಮಂದಿ ಯುವ ಆಟಗಾರರು ಯುನೈಟೆಡ್ ತಂಡದಲ್ಲಿದ್ದಾರೆಂದು ಫರ್ಗುಸನ್ ಭಾವಿಸಿದ್ದಾರೆಂಬ ಸುದ್ದಿಯು ವ್ಯಾಪಕವಾಗಿ ಹರಡಿತ್ತು. "ಫೆರ್ಗಿ'ಸ್ ಫ್ಲೆಜಲಿಂಗ್ಸ್"(ಫೆರ್ಗಿಯ ಮರಿಗಳು) ಎಂದೇ ಕರೆಯಲ್ಪಡುತ್ತಿದ್ದ ಯುವ ಆಟಗಾರರಾದ ಗ್ಯಾರಿ ನೆವಿಲ್ಲೆ, ಫಿಲ್ ನೆವಿಲ್ಲೆ, ಡೇವಿಡ್ ಬೆಕ್ಕ್ಹಾಮ್, ಪಾಲ್ ಸ್ಕ್ಹೊಲೆಸ್ ಹಾಗು ನಿಕಿ ಬಟ್ಟ್ ಮುಂತಾದವರು ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಲಿದ್ದರು. ಯುನೈಟೆಡ್ ತಂಡವು 1995-96 ರ ಕ್ರೀಡಾ ಋತುವಿನ ಮೊದಲ ಲೀಗ್ ಪಂದ್ಯದಲ್ಲಿ ಆಸ್ಟನ್ ವಿಲ್ಲ ತಂಡಕ್ಕೆ 3-1 ಅಂಕಗಳಿಂದ ಪರಾಭಾವಗೊಂಡಾಗ, ಮಾಧ್ಯಮವು ಫರ್ಗುಸನ್‌ರ ಮೇಲೆ ಮುಗಿಬಿದ್ದು,ಬಹಿರಂಗ ಟೀಕೆ ಮಾಡಿತು. ಅವರು ಯುನೈಟೆಡ್ ತಂಡವು ನೆಲೆ ತಪ್ಪಿದ್ದು ಏಕೆಂದರೆ ಅಲೆಕ್ಸ್ ಫರ್ಗುಸನ್‌ರ ತಂಡವು ಹಲವು ಯುವ ಹಾಗು ಅನನುಭವಿ ಆಟಗಾರರಿಂದ ಕೂಡಿತ್ತೆಂದು ಬರೆದರು. ಮ್ಯಾಚ್ ಆಫ್ ದಿ ಡೇ ಪಂಡಿತ, ಅಲನ್ ಹನ್ಸೆನ್, "ನೀವು ಮಕ್ಕಳನ್ನಿಟ್ಟುಕೊಂಡು ಗೆಲ್ಲಲಾರಿರಿ" ಎಂದು ಕುಖ್ಯಾತ ಘೋಷಣೆ ಮಾಡಿದರು. ಆದಾಗ್ಯೂ, ಯುವ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡಿದರು ಜೊತೆಗೆ ಯುನೈಟೆಡ್ ತಂಡವು ಮುಂದಿನ ಐದು ಪಂದ್ಯಗಳನ್ನು ಗೆದ್ದಿತು. ಕ್ಯಾಂಟೋನ ತನ್ನ ಅಮಾನತಿನಿಂದ ಮರಳಿದಾಗ, ಅದು ತಂಡಕ್ಕೆ ಚೇತರಿಕೆ ನೀಡಿತಾದರೂ,ತಂಡವು ನ್ಯೂಕ್ಯಾಸಲ್ ತಂಡಕ್ಕಿಂತ ಹದಿನಾಲ್ಕು ಅಂಕಗಳು ಹಿಂದೆಉಳಿದಿದ್ದು ಕಂಡುಬಂತು. ಆದಾಗ್ಯೂ, 1996ರ ಪ್ರಾರಂಭದಲ್ಲಿ ತಂಡವು ಸತತವಾಗಿ ಉತ್ತಮ ಫಲಿತಾಂಶಗಳನ್ನು ಕಾಣುವುದರ ಜೊತೆಗೆ ಅಂತರ ಕಡಿಮೆಯಾಯಿತು. ಜೊತೆಗೆ ಮಾರ್ಚ್ ಪ್ರಾರಂಭದಿಂದ ಯುನೈಟೆಡ್ ತಂಡವು ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತು. ಪ್ರತಿಸ್ಪರ್ಧಿಗಳಾದ ನ್ಯೂಕ್ಯಾಸಲ್ ತಂಡವು ಜನವರಿಯಲ್ಲಿ 12 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿತ್ತಾದರೂ ತಮ್ಮ ಮುಂಚಿನ ಗೆಲುವಿನ ಆಧಾರದ ಮೇಲೆ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸುವಲ್ಲಿ ವಿಫಲವಾಯಿತು.

ನ್ಯೂಕ್ಯಾಸಲ್ ತಂಡದ ವ್ಯವಸ್ಥಾಪಕ ಕೆವಿನ್ ಕೀಗನ್ ಪ್ಟೆಲಿವಿಷನ್ ನೇರಪ್ರಸಾರದಲ್ಲಿ ("ನಾನು ಅವರನ್ನು ಸೋಲಿಸಿದ್ದರೆ, ಅದನ್ನು ಇಷ್ಟಪಡುತ್ತಿದ್ದೆ! ಇಷ್ಟಪಡುತ್ತಿದ್ದೆ!") ಎಂದು ತಮ್ಮ ಮಾತಿನ ಆಸ್ಫೋಟವನ್ನು ಸಿಡಿಸಿದರು. ಇದನ್ನು ಸಾಮಾನ್ಯವಾಗಿ ಫರ್ಗುಸನ್ ತಮ್ಮ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದ ಕ್ಷಣವೆಂದು ಭಾವಿಸಲಾಗುತ್ತದೆ. ಯುನೈಟೆಡ್ ತಂಡದ ಪ್ರೀಮಿಯರ್ ಲೀಗ್ ಪ್ರಶಸ್ತಿಯ ಯಶಸ್ಸನ್ನು ಕ್ರೀಡಾ ಋತುವಿನ ಅಂತಿಮ ದಿನ ದೃಢ ಪಡಿಸಲಾಯಿತು. ತಂಡವು ಲಿವರ್ ಪೂಲ್ ವಿರುದ್ಧ ಆ ವರ್ಷದ FA ಕಪ್ ಫೈನಲ್ ನಲ್ಲಿ ಆಡುವುದರ ಜೊತೆಗೆ ಕ್ಯಾಂಟೋನ ತಡವಾಗಿ ಹೊಡೆದ ಗೊಲಿನಿಂದಾಗಿ 1-0 ಅಂಕಗಳ ಜಯ ಸಾಧಿಸಿತು.1996–97ರಲ್ಲಿ ಅಲೆಕ್ಸ್ ಫರ್ಗುಸನ್, ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಐದು ಕ್ರೀಡಾ ಋತುಗಳಲ್ಲಿ ತಮ್ಮ ನಾಲ್ಕನೇ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಪಡೆಯುವಲ್ಲಿ ಮಾರ್ಗದರ್ಶನ ನೀಡಿದರು. ಅಕ್ಟೋಬರ್ ನ ಕೊನೆ ಭಾಗದಲ್ಲಿ, ತಂಡವು ಸತತವಾಗಿ ಮೂರು ಲೀಗ್ ಸೋಲುಗಳನ್ನು ಅನುಭವಿಸುವುದರ ಜೊತೆಗೆ ಈ ಪ್ರಕ್ರಿಯೆಯಲ್ಲಿ 13 ಗೋಲುಗಳನ್ನು ಬಿಟ್ಟುಕೊಟ್ಟಿತು. ತಂಡವು ತಾಯ್ನಾಡಲ್ಲಿ 40 ವರ್ಷಗಳಿಂದ ಕಾಯ್ದುಕೊಂಡಿದ್ದ ಅಜೇಯ ದಾಖಲೆಯನ್ನು ಟರ್ಕಿಷ್ ತಂಡದ ಫೆನೆರ್ ಬಹ್ಚೆ ಗೆ ಶರಣಾಗುವುದರೊಂದಿಗೆ ಮುರಿಯಿತು. ಆದರೂ ಚಾಂಪಿಯನ್ಸ್ ಲೀಗ್ ನ ಸೆಮಿಫೈನಲ್ ಹಂತವನ್ನು ತಲುಪಿತು. ಆದರೆ ಜರ್ಮನಿಯ ಬೋರುಸ್ಸಿಯ ಡೋರ್ಟ್ ಮಂಡ್ ತಂಡಕ್ಕೆ ಶರಣಾಯಿತು. ಕ್ರೀಡಾ ಋತುವಿನ ಕೊನೆಯಲ್ಲಿ, ಕ್ಯಾಂಟೋನ ಫುಟ್ಬಾಲ್‌ನಿಂದ ಅಚ್ಚರಿಯೆಂಬಂತೆ ನಿವೃತ್ತಿಯನ್ನು ಘೋಷಿಸಿದ.

ಮೂರು ಗೆಲುವು

[ಬದಲಾಯಿಸಿ]

ಫರ್ಗುಸನ್, 1997–98 ಕ್ರೀಡಾ ಋತುವಿನ ಸ್ಪರ್ಧೆಗಾಗಿ ಯುನೈಟೆಡ್ ತಂಡದ ಸವಾಲಿಗೆ ಚೇತರಿಕೆ ನೀಡಲು, 31 ವರ್ಷದ ಇಂಗ್ಲೆಂಡ್ ಸ್ಟ್ರೈಕರ್ (ಗೋಲು ಹೊಡೆಯುವವ) ಟೆಡ್ಡಿ ಶೇರಿಂಗ್ಹಾಮ್ ಹಾಗು ಡಿಫೆನ್ಡರ್(ರಕ್ಷಕ)ಹೆನ್ನಿಂಗ್ ಬರ್ಗ್ ಎಂಬ ಇಬ್ಬರು ಆಟಗಾರರ ಜೊತೆ ಒಪ್ಪಂದ ಮಾಡಿಕೊಂಡರು. ಆದಾಗ್ಯೂ, ಆ ಕ್ರೀಡಾ ಋತುವು ಟ್ರೋಫಿರಹಿತವಾಗಿ ಮುಕ್ತಾಯ ಕಂಡಿತು. ಫ್ರೆಂಚ್ ವ್ಯವಸ್ಥಾಪಕ ಅರ್ಸೇನೆ ವೆಂಜರ್ನ ಮಾರ್ಗದರ್ಶನದಲ್ಲಿ ಅರ್ಸೆನಲ್ ತಂಡವು ಪ್ರೀಮಿಯರ್ ಲೀಗ್‌ನ್ನು ಗೆದ್ದಿತು. ಈತ ಫರ್ಗುಸನ್ ಜೊತೆ ಒಂದು ದೀರ್ಘಕಾಲದ ಪ್ರತಿಸ್ಪರ್ಧೆಯನ್ನು ಪ್ರಾರಂಭಿಸಿದ. ಕಳೆದ 1998ರ ಬೇಸಿಗೆಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಸ್ಟ್ರೈಕರ್ ದ್ವೈಟ್ ಯೋರ್ಕೆ, ಡಚ್ ಡಿಫೆನ್ಡರ್ ಜಾಪ್ ಸ್ಟಂ ಹಾಗು ಸ್ವೀಡಿಶ್ ವಿಂಗರ್ ಜೆಸ್ಪರ್ ಬ್ಲೊಂಕ್ವಿಸ್ಟ್ ಸೇರ್ಪಡೆಯಾದರು.ಡಿಸೆಂಬರ್ 1998ರಲ್ಲಿ, ಫರ್ಗುಸನ್ ರ ಸಹಾಯಕ ಬ್ರಯಾನ್ ಕಿಡ್, ಬ್ಲಾಕ್ ಬರ್ನ್ ರೋವರ್ಸ್ ತಂಡವನ್ನು ನಿರ್ವಹಿಸಬೇಕೆಂಬ ಪ್ರಸ್ತಾಪಕ್ಕೆ ಒಪ್ಪಿಕೊಂಡು ತನ್ನ ಬದಲಿಗೆ ಡೆರ್ಬಿ ಕೌಂಟಿ ತಂಡದ ಸ್ಟೀವ್ ಮ್ಯಾಕ್ ಕ್ಲಾರೆನ್ ನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದ. ವ್ಯಂಗ್ಯವೆಂದರೆ, ಯುನೈಟೆಡ್ ತಂಡವು 0-0 ಅಂಕಗಳಿಂದ ಪಂದ್ಯವನ್ನು ಸಮ ಮಾಡಿಕೊಂಡ ಹಿನ್ನೆಲೆಯಲ್ಲಿ ಕಿಡ್ಸ್ ತಂಡವನ್ನು ಲೀಗ್ ಕ್ರೀಡಾ ಋತುವಿನ ಉಪಾಂತ ಪಂದ್ಯದಲ್ಲಿ ಕೆಳವಿಭಾಗಕ್ಕೆ ವರ್ಗಾಯಿಸಲಾಯಿತು. 1998–99ರಲ್ಲಿ ಕ್ಲಬ್ ಅಭೂತಪೂರ್ವವಾಗಿ ಪ್ರೀಮಿಯರ್ ಲೀಗ್ ಪ್ರಶಸ್ತಿ, FA ಕಪ್ ಹಾಗು ಚಾಂಪಿಯನ್ಸ್ ಲೀಗ್ ತ್ರಿವಳಿ ಪ್ರಶಸ್ತಿಗಳನ್ನು ಪಡೆಯಿತು.ಕ್ರೀಡಾ ಋತುವು ಅತ್ಯಂತ ಪರಿಣಾಮಕಾರಿಯಾದ ಪಂದ್ಯಗಳನ್ನು ಒಳಗೊಂಡಿತ್ತು. ಚಾಂಪಿಯನ್ಸ್ ಲೀಗ್ ಸೆಮಿ ಫೈನಲ್ ನ ಎರಡನೇ ಸುತ್ತಿನಲ್ಲಿ, ಯುನೈಟೆಡ್ ತಂಡವು ಜುವೆನ್ಟುಸ್ ಗೆ ಎರಡು ಗೋಲುಗಳನ್ನು ಹೊಡೆಯಲು ಅವಕಾಶ ಮಾಡಿಕೊಟ್ಟಿತು; ಆದಾಗ್ಯೂ, ಅಮಾನತಿನ ಮೂಲಕ ಫೈನಲ್ ಪಂದ್ಯ ತಪ್ಪಿಹೋದ ರೋಯ್ ಕೆಅನೆ ಯಿಂದ ಸ್ಫೂರ್ತಿ ಪಡೆದ ತಂಡವು ಜುವೆನ್ಟುಸ್ ತಂಡವನ್ನು 3-2 ಅಂಕಗಳಿಂದ ಪರಾಭವಗೊಳಿಸಿ 1968ರಿಂದೀಚೆಗೆ ತಮ್ಮ ಮೊದಲ ಯುರೋಪಿಯನ್ ಕಪ್‌ ಪೈನಲ್ ಪಂದ್ಯವನ್ನು ಗೆದ್ದಿತು. FA ಕಪ್ ನ ಸೆಮಿಫೈನಲ್ ನಲ್ಲಿ, ಯುನೈಟೆಡ್ ತಂಡವು ತಮ್ಮ ನಿಕಟ ಪ್ರತಿಸ್ಪರ್ಧಿಗಳಾದ ಅರ್ಸೆನಲ್ ತಂಡದ ಜೊತೆ ಸ್ಪರ್ಧೆಗಿಳಿಯಿತು. ಪಂದ್ಯದಲ್ಲಿ ಕೀನೆಯನ್ನು ಹೊರಗಟ್ಟಿದಾಗ ಹಾಗೂ ಆರ್ಸೆನಲ್ ತಂಡಕ್ಕೆ ಕಡೆ-ಕ್ಷಣದ ಪೆನಾಲ್ಟಿ ಲಭಿಸಿದಾಗ ತಂಡವು ಸೋಲುವ ಹಂತವನ್ನು ತಲುಪಿದಂತೆ ಕಂಡುಬಂತು. ಪೀಟರ್ ಸ್ಚ್ಮೆಇಚೆಲ್ ಪೆನಾಲ್ಟಿಯಿಂದ ತಂಡವನ್ನು ಪಾರು ಮಾಡಿದ, ಹಾಗು ಹೆಚ್ಚುವರಿ ಸಮಯದಲ್ಲಿ ರಯಾನ್ ಗಿಗ್ಸ್ ಆಟದ ಮೈದಾನದುದ್ದಕ್ಕೂ ಓಡಿ ಗೋಲನ್ನು ಗಳಿಸಿದ. ಬಹುಶಃ ಅವನ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ಗೋಲು ಇದಾಗಿದೆ. ಇದರೊಂದಿಗೆ ತಂಡವು ಪಂದ್ಯದಲ್ಲಿ ಜಯ ಗಳಿಸಿತು. ನಂತರ ತಂಡವು ನ್ಯೂಕ್ಯಾಸಲ್ ಯುನೈಟೆಡ್ ತಂಡವನ್ನು ವೆಮ್ಬ್‌ಲೇ ಯಲ್ಲಿ 2-0 ಅಂಕಗಳಿಂದ FA ಕಪ್ ಫೈನಲ್ ನಲ್ಲಿ ಪರಾಭವಗೊಳಿಸಿತು. ತಂಡದ ಗೆಲುವಿಗೆ ಟೆಡ್ಡಿ ಶೇರಿಂಗ್ಹಾಮ್ ಹಾಗು ಪಾಲ್ ಸ್ಕ್ಹೊಲೆಸ್ ಅಭಿನಂದನೀಯರು. ಯುರೋಪಿಯನ್ ಗೆಲುವು ಎಲ್ಲದಕ್ಕಿಂತ ಅತ್ಯಂತ ವಿಸ್ಮಯಕಾರಿಯಾಗಿತ್ತು. ಬಾರ್ಸಿಲೋನಾದ ನೌ ಕ್ಯಾಂಪ್ ನಲ್ಲಿ ನಡೆದ ಪಂದ್ಯದಲ್ಲಿ ಮರಿಒ ಬಸ್ಲರ್ ನ ಫ್ರೀಕಿಕ್(ಮುಕ್ತ ಹೊಡೆತ)ನಿಂದಾಗಿ 90ನೇ ನಿಮಿಷದಲ್ಲಿ ಬಯೇರ್ನ್ ಮ್ಯೂನಿಚ್ ತಂಡಕ್ಕಿಂತ 1-0 ಅಂಕಗಳಿಂದ ಹಿಂದೆ ಉಳಿದಿತ್ತು. ಆದರೆ ಆಟದ ತೀರ್ಪುಗಾರ ಪೈರ್‌ಲುಗಿ ಕಾಲ್ಲಿನ 3 ನಿಮಿಷಗಳ ನಷ್ಟದ ಸಮಯಕ್ಕೆ ಅವಕಾಶ ಮಾಡಿಕೊಟ್ಟಾಗ, ಬದಲಿ ಆಟಗಾರ, ಟೆಡ್ಡಿ ಶೇರಿಂಗ್ಹಾಮ್ ಗೋಲು ಸಮಗೊಳಿಸಿದಾಗ ಹೆಚ್ಚುವರಿ ಸಮಯ ಖಾತ್ರಿಯಾಯಿತು. ಆದರೆ ಗಡಿಯಾರದಲ್ಲಿ ಕೆಲವೇ ಕೆಲವು ಸೆಕೆಂಡ್‌ಗಳು ಬಾಕಿಯಿರುವಂತೆ ತಡವಾಗಿ ಬಂದ ಬದಲಿ ಆಟಗಾರ ಓಲೆ ಗುನ್ನರ್ ಸೋಲ್ಸ್‌ಜೀರ್ಗೆಲುವಿನ ಗೋಲನ್ನು ಹೊಡೆದು ಇತಿಹಾಸ ನಿರ್ಮಾಣವಾಯಿತು.ಜೂನ್ 12 , 1999ರಲ್ಲಿ ಅಲೆಕ್ಸ್ ಫರ್ಗುಸನ್ ರಿಗೆ ಕ್ರೀಡೆಗೆ ನೀಡಿದ ಕೊಡುಗೆಗಾಗಿ ನೈಟ್‌ಹುಡ್ ಪದವಿ ನೀಡಿ ಪುರಸ್ಕರಿಸಲಾಯಿತು.[೪೧]

ಹ್ಯಾಟ್ರಿಕ್ ಪ್ರಶಸ್ತಿ

[ಬದಲಾಯಿಸಿ]

ಮ್ಯಾಂಚೆಸ್ಟರ್ ಯುನೈಟೆಡ್ ತಂಡವು 1999–2000 ಕ್ರೀಡಾ ಋತುವಿನಲ್ಲಿ ಕೇವಲ ಮೂರು ಪ್ರೀಮಿಯರ್ ಲೀಗ್ ಸೋಲುಗಳೊಂದಿಗೆ ಹಾಗು 18 ಅಂಕಗಳ ಆಸರೆಯೊಂದಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಯುನೈಟೆಡ್ ತಂಡ ಹಾಗು ಉಳಿದ ಪ್ರೀಮಿಯರ್ ಲೀಗ್ ತಂಡಗಳ ಅಂಕಗಳಲ್ಲಿನ ಅಗಾಧ ಅಂತರವು, ಕ್ಲಬ್ ನ ಆರ್ಥಿಕ ಪ್ರಾಬಲ್ಯವು ಇಂಗ್ಲಿಷ್ ಆಟಕ್ಕೆ ಸಮಸ್ಯೆಯನ್ನು ಒಡ್ಡುತ್ತಿದೆಯೇ ಎಂಬ ಪ್ರಶ್ನೆಯು ಕೆಲವರನ್ನು ಕಾಡಿತು.ಏಪ್ರಿಲ್ 2000ದಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಡಚ್ ಸ್ಟ್ರೈಕರ್ (ಗೋಲು ಹೊಡೆಯುವವನು) ರುಉದ್ ವ್ಯಾನ್ ನಿಸ್ಟೆಲ್ರೂಯ್ ನನ್ನು PSV ಇಂಡ್ ಹೊವೆನ್ ತಂಡದಿಂದ ಬ್ರಿಟಿಶ್ ದಾಖಲೆಯ ಹಣ £18 ದಶಲಕ್ಷಕ್ಕೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿಕೊಂಡಿತು. ಆದರೆ ವ್ಯಾನ್ ನಿಸ್ಟೆಲ್ರೂಯ್ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹನಾದ ಹಿನ್ನೆಲೆಯಲ್ಲಿ ಈ ಒಪ್ಪಂದವನ್ನು ಮಧ್ಯದಲ್ಲೇ ತಡೆಹಿಡಿಯಲಾಯಿತು. ಆತ ದೈಹಿಕ ಸಾಮರ್ಥ್ಯವನ್ನು ಮತ್ತೆ ಪಡೆದುಕೊಳ್ಳಲು ತನ್ನ ತಾಯ್ನಾಡಿಗೆ ಮರಳಿದ. ನಂತರ ಆತ ಒಂದು ತೀವ್ರತರವಾದ ಮೊಣಕಾಲಿನ ಪೆಟ್ಟಿನಿಂದ ನರಳಿದ. ಇದು ಅವನನ್ನು ಒಂದು ವರ್ಷದ ಮಟ್ಟಿಗೆ ಆಟವನ್ನು ಆಡದಂತೆ ಮಾಡಿತು. 28 ವರ್ಷದ ಫ್ರೆಂಚ್ ಗೋಲ್ ಕೀಪರ್ ಫೇಬಿಯನ್ ಬರ್ಥೆಜ್ ನನ್ನು ಮೊನಾಕೋ ತಂಡದಿಂದ £7.8 ದಶಲಕ್ಷ ಹಣ ನೀಡಿ ವರ್ಗಾವಣೆ ಮಾಡಿಕೊಳ್ಳಲಾಯಿತು. ಇವನನ್ನು ಬ್ರಿಟಿಶ್ ಕ್ಲಬ್ ಒಪ್ಪಂದ ಮಾಡಿಕೊಂಡ ಅತ್ಯಂತ ದುಬಾರಿ ಗೋಲ್ ಕೀಪರ್ ಎಂದು ಹೇಳಲಾಯಿತು. ಮತ್ತೊಮ್ಮೆ ಯುನೈಟೆಡ್ ತಂಡವು ಪ್ರಶಸ್ತಿಯನ್ನು ಪಡೆಯಿತು. 2001ರ ಕ್ರೀಡಾ ಋತುವಿನ ಕೊನೆಯಲ್ಲಿ ರುಉದ್ ವ್ಯಾನ್ ನಿಸ್ಟೆಲ್ರೂಯ್ ತಂಡಕ್ಕೆ ಸೇರ್ಪಡೆಯಾದ. ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಲಾಜಿವೊ ಗೆ £28.1 ದಶಲಕ್ಷ ವರ್ಗಾವಣೆಯ ಹಣವನ್ನು ನೀಡುವ ಮೂಲಕ ಬ್ರಿಟಿಶ್ ದಾಖಲೆಯನ್ನು ಮುರಿಯಿತು. ಈ ಹಣವನ್ನು ಅವನಿಗೆ ಅರ್ಜೆಂಟೀನದ ಮಧ್ಯಮೈದಾನ ಆಟಗಾರ ಜುಆನ್ ಸೆಬಾಸ್ಟಿಯನ್ ವೆರೋನ್ ನ ಆಕ್ರಮಣವನ್ನು ತಡೆಹಿಡಿಯಲು ನೀಡಲಾಗಿತ್ತು. ಆದರೆ ಅವನಿಗೆ ನೀಡಿದ ವರ್ಗಾವಣೆ ಹಣ ಸೂಚಿಸುಂತೆ ಅವನ ಮೇಲಿರಿಸಿದ್ದ ತೀವ್ರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಅಸಫಲನಾದ. ಎರಡು ವರ್ಷಗಳ ಬಳಿಕ £15 ದಶಲಕ್ಷ ಹಣಕ್ಕೆ ಅವನನ್ನು ಚೆಲ್ಸಿಯಾತಂಡಕ್ಕೆ ಮಾರಾಟ ಮಾಡಲಾಯಿತು.

ತಂಡದ ಮರುರಚನೆ ಹಾಗು ಬದಲಾವಣೆ

[ಬದಲಾಯಿಸಿ]

2001–02 ಕ್ರೀಡಾ ಋತುವಿನ ಎರಡು ಪಂದ್ಯಗಳಿಗೆ, ಡ‌ಚ್‌ನ ಮಧ್ಯಮ ಕ್ಷೇತ್ರ ರಕ್ಷಕ ಜಾಪ್ ಸ್ಟಾಮ್ ನನ್ನು ಲಾಜಿವೊ ತಂಡಕ್ಕೆ £16 ದಶಲಕ್ಷ ಒಪ್ಪಂದದ ಹಣಕ್ಕೆ ಮಾರಾಟ ಮಾಡಲಾಯಿತು. ಸ್ಟಂ ತಂಡದಿಂದ ನಿರ್ಗಮಿಸಿದ ಕಾರಣವು ಅವನ ಆತ್ಮಚರಿತ್ರೆ ಹೆಡ್ ಟು ಹೆಡ್ ನಲ್ಲಿ ಪ್ರಕಟವಾಗಿದೆ. ಇದರಂತೆ, ಅವನ ಮುಂಚಿನ ತಂಡವಾದ PSV ಇಂಡ್ಹೊವೆನ್ ಜೊತೆ ವರ್ಗಾಣೆಯ ಬಗ್ಗೆ ಮಾಹಿತಿ ನೀಡುವುದಕ್ಕೆ ಮುಂಚಿತವಾಗಿ ಅಲೆಕ್ಸ್ ಫರ್ಗುಸನ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಸೇರಲು ಅನಧಿಕೃತವಾಗಿ ತನ್ನ ಜೊತೆಗೆ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಫರ್ಗುಸನ್ ಸ್ಟಾಮ್2ನ ಬದಲಿ ಆಟಗಾರನಾಗಿ ಇಂಟರ್ನ್ಯಾಜಿಒನೇಲ್ ತಂಡದ 36 ವರ್ಷದ ಪ್ರಮುಖ ಕ್ಷೇತ್ರರಕ್ಷಕ ಲೋರೆಂಟ್ ಬ್ಲಾಂಕ್ ನನ್ನು ನೇಮಕ ಮಾಡಿಕೊಳ್ಳುತ್ತಾರೆ. ಕ್ರೀಡಾ ಋತುವಿನ ಪ್ರಾರಂಭಕ್ಕೆ ಮುಂಚೆ, ಫರ್ಗುಸನ್ ತಮ್ಮ ಸಹಾಯಕ ಸ್ಟೀವ್ ಮ್ಯಾಕ್ ಕ್ಲಾರೆನ್‌ರನ್ನು ಕೂಡ ಕಳೆದುಕೊಳ್ಳುತ್ತಾರೆ. ಅವನುಮಿಡಲ್ಸ್‌ಬ್ರೋಗ್ ತಂಡದ ವ್ಯವಸ್ಥಾಪಕನಾಗಿ ಅಧಿಕಾರ ವಹಿಸಿಕೊಳ್ಳುತ್ತಾನೆ. ಒಬ್ಬ ಕಾಯಂ ಸಹಾಯಕ ದೊರೆಯುವವರೆಗೂ ಫರ್ಗುಸನ್ ಈ ಹುದ್ದೆಯನ್ನು ದೀರ್ಘಾವಧಿಯ ತರಬೇತುದಾರ ಜಿಮ್ ರಯಾನ್ ಗೆ ನೀಡುತ್ತಾರೆ. ಡಿಸೆಂಬರ್ 8, 2001ರಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಪ್ರೀಮಿಯರ್ ಲೀಗ್ ನಲ್ಲಿ ಒಂಬತ್ತನೇ ಸ್ಥಾನವನ್ನು ಪಡೆಯಿತು - ಕೈಯಲ್ಲಿ ಒಂದು ಪಂದ್ಯ ಉಳಿಸಿಕೊಂಡಿದ್ದ ಲಿವರ್ ಪೂಲ್ ತಂಡಕ್ಕಿಂತ 11 ಅಂಕಗಳಿಂದ ಹಿಂದಿತ್ತು. ತಂಡದ ಸ್ಥಿತಿಯಲ್ಲಿ ಒಂದು ನಾಟಕೀಯ ಬದಲಾವಣೆಯಾಯಿತು: ಡಿಸೆಂಬರ್ ಮಧ್ಯಭಾಗದಿಂದ ಜನವರಿ ಕೊನೆಯವರೆಗೂ, ಎಂಟು ಪಂದ್ಯಗಳಲ್ಲಿ ಸತತ ಗೆಲುವನ್ನು ಪಡೆದು ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಪ್ರೀಮಿಯರ್ ಲೀಗ್ ನ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆಯುವುದರ ಜೊತೆಗೆ ಪ್ರಶಸ್ತಿಗಾಗಿ ಪೈಪೋಟಿಯನ್ನು ಸರಿದಾರಿಗೆ ಪುನಃ ತಂದರು. ಇದರ ಹೊರತಾಗಿಯೂ, ಯುನೈಟೆಡ್ ತಂಡವು ಲೀಗ್ ನಲ್ಲಿ ಮೂರನೇ ಸ್ಥಾನವನ್ನು ಪಡೆಯಿತು. ಎದುರಾಳಿ ಅರ್ಸೇನೆ ವೆಂಜರ್ ಓಲ್ಡ್ ಟ್ರ್ಯಾಫೋರ್ಡ್ ನಲ್ಲಿ ತಮ್ಮ ತಂಡ ಅರ್ಸೆನಲ್‌ಗೆ 1-0 ಅಂಕಗಳಿಂದ ಕ್ರೀಡಾ ಋತುವಿನ ಉಪಾಂತ ಪಂದ್ಯದಲ್ಲಿ ವಿಜಯಿಯಾಗುವುದರ ಜೊತೆಗೆ ಪ್ರಶಸ್ತಿಯನ್ನು ಗಳಿಸಿಕೊಟ್ಟರು.ಯುನೈಟೆಡ್ ತಂಡವು ಚಾಂಪಿಯನ್ಸ್ ಲೀಗ್ ನ ಸೆಮಿಫೈನಲ್ ಪಂದ್ಯದಲ್ಲಿ ಬಯೇರ್ ಲೆವೆರ್ಕುಸೇನ್ ಗೆ ಗೋಲುಗಳನ್ನು ಹೊಡೆಯಲು ಅವಕಾಶ ಮಾಡಿಕೊಟ್ಟು ಯುರೋಪ್ ನಲ್ಲೂ ಅಪಯಶಸ್ವಿಯಾಯಿತು.2001–02ರ ಕ್ರೀಡಾ ಋತುವು, ಫರ್ಗುಸನ್ ರಿಗೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕರಾಗಿ ಕಡೆಯ ಪಂದ್ಯವಾಗಬೇಕಿತ್ತು. ತಂಡ ಆಟದಲ್ಲಿ ಲಯ ಕಳೆದುಕೊಂಡ ಕಾರಣಕ್ಕೆ ಅವರ ನಿವೃತ್ತಿಯ ದಿನಾಂಕವನ್ನು[who?] ಅಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಫರ್ಗುಸನ್ ತಮ್ಮ ನಿವೃತ್ತಿಯ ಘೋಷಣೆಯನ್ನು ಮುಂಚಿತವಾಗಿ ಮಾಡಿದ್ದರಿಂದ ಆಟಗಾರರಲ್ಲಿ ನಕಾರಾತ್ಮಕ ಪರಿಣಾಮ ಉಂಟಾಯಿತು ಹಾಗೂ ಶಿಸ್ತನ್ನು ಹೇರುವ ಅವರ ಸಾಮರ್ಥ್ಯಕ್ಕೆ ಧಕ್ಕೆ ಉಂಟಾಯಿತೆಂದು ಸ್ವತಃ ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಫೆಬ್ರವರಿ 2002ರಲ್ಲಿ, ಅವರು ಮತ್ತೆ ಮೂರು ವರ್ಷಗಳ ಕಾಲ ತಂಡವನ್ನು ನಿರ್ವಹಿಸಲು ಒಪ್ಪಿಗೆ ನೀಡುತ್ತಾರೆ.ಕ್ರೀಡಾ ಋತುವಿನ ಕೊನೆಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಮತ್ತೊಮ್ಮೆ ವರ್ಗಾವಣೆಗೆ ಬ್ರಿಟಿಶ್ ದಾಖಲೆಯನ್ನು ಮತ್ತೊಮ್ಮೆ ಮುರಿಯುತ್ತದೆ. ಅದು £30ದಶಲಕ್ಷ ಹಣವನ್ನು ಲೀಡ್ಸ್ ಯುನೈಟೆಡ್ ತಂಡಕ್ಕೆ ನೀಡಿ 24 ವರ್ಷದ ಮಧ್ಯದ ಕ್ಷೇತ್ರರಕ್ಷಕ ರಿಒ ಫೆರ್ಡಿನಂಡ್ ನನ್ನು ವರ್ಗಾವಣೆ ಮಾಡಿಕೊಳ್ಳುತ್ತದೆ.ಅದೇ ವರ್ಷದ ಬೇಸಿಗೆಯಲ್ಲಿ, ಫರ್ಗುಸನ್ ಪೋರ್ಚುಗೀಸ್ ತರಬೇತುದಾರ ಕಾರ್ಲೋಸ್ ಕುಎಇರೋಜ್ ನನ್ನು ತಮ್ಮ ಸಹಾಯಕನಾಗಿ ನೇಮಕ ಮಾಡಿಕೊಳ್ಳುತ್ತಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ತಮ್ಮ ಎಂಟನೇ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಕ್ರೀಡಾ ಋತು ಕೊನೆಗೊಳ್ಳುವ ಎರಡು ತಿಂಗಳ ಮುಂಚೆ ಗಳಿಸುತ್ತದೆ. ಇದೀಗ ತಂಡವು ಮುಂಚೂಣಿ ತಂಡವಾದ ಅರ್ಸೆನಲ್ ತಂಡಕ್ಕಿಂತ ಎಂಟು ಅಂಕಗಳು ಹಿಂದಿರುತ್ತದೆ. ಯುನೈಟೆಡ್ ತಂಡದ ಆಟದ ಲಯದಲ್ಲಿ ಸುಧಾರಣೆ ಹಾಗು ಅರ್ಸೆನಲ್ ತಂಡದ ಲಯದಲ್ಲಿ ಕುಸಿತದಿಂದಾಗಿ, ಪ್ರೀಮಿಯರ್ ಲೀಗ್ ಟ್ರೋಫಿಯು ಕ್ರಮೇಣ ಲಂಡನ್ನರ ಹಿಡಿತದಿಂದ ತಪ್ಪಿ ಓಲ್ಡ್ ಟ್ರ್ಯಾಫೋರ್ಡ್ ದಿಕ್ಕಿಗೆ ಸಾಗುತ್ತದೆ. ಫರ್ಗುಸನ್, 2002-03ರ ಪ್ರಶಸ್ತಿಯ ಗರಿಯು, ತಂಡವು ಗಮನಾರ್ಹವಾಗಿ ಸುಸ್ಥಿತಿಗೆ ತಲುಪಿದ್ದರ ಪರಿಣಾಮವಾಗಿ ತಮಗೆ ಅತ್ಯಂತ ತೃಪ್ತಿಯನ್ನು ತಂದಿದೆ ಎಂದು ವಿವರಿಸುತ್ತಾರೆ. ಫರ್ಗುಸನ್ ತಂಡದ ವ್ಯವಸ್ಥಾಪಕನಾಗಿ ಕಾರ್ಯತಂತ್ರ ರೂಪಿಸುವಲ್ಲಿ ಮೇಲುಗೈ ಎಂದು ಸಾಬೀತಾಗಿರುವುದು ಇದೇನು ಮೊದಲ ಬಾರಿ ಅಲ್ಲ. ಅರ್ಸೆನಲ್ ತಂಡದ ನೆಮ್ಮದಿಯನ್ನು ಮುರಿಯುವುದರಲ್ಲಿ ಯಶಸ್ವಿಯಾಗುವುದರ ಜೊತೆಗೆ ಉದ್ವೇಗಕ್ಕೆ ಒಳಗಾಗದ ಅವರ ತಂಡದ ವ್ಯವಸ್ಥಾಪಕ ಅರ್ಸೇನೆ ವೆಂಜರ್‌ ನೆಮ್ಮದಿಯನ್ನು ಕೆಡಿಸಿದರು. ಫರ್ಗುಸನ್ 2003–04 ಕ್ರೀಡಾ ಋತುವಿನ ಕೊನೆಯಲ್ಲಿ ಅವರ ಹನ್ನೊಂದನೇ FA ಕಪ್ ಗಾಗಿ ಮಾರ್ಗದರ್ಶನ ನೀಡಿದರು. ಆದರೆ ಕ್ರೀಡಾ ಋತುವು ಅತ್ಯಂತ ನೀರಸವಾಗಿತ್ತು. ತಂಡವು ಪ್ರೀಮಿಯರ್ ಲೀಗ್ ನಲ್ಲಿ ಮೂರನೇ ಸ್ಥಾನವನ್ನು ಪಡೆಯುವುದರ ಜೊತೆಗೆ ಅಂತಿಮವಾಗಿ ಗೆದ್ದ FC ಪೋರ್ಟೊ ತಂಡವು ಚಾಂಪಿಯನ್ಸ್ ಲೀಗ್ ನಿಂದ ಹೊರಹೊಗಬೇಕಾಯಿತು. ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಹಾಜರಾಗಲು ವಿಫಲನಾದ ರಿಒ ಫೆರ್ಡಿನಂಡ್‌ಗೆ ಹೇರಲಾದ ಎಂಟು ತಿಂಗಳ ನಿಷೇಧದಿಂದಾಗಿ ಕ್ರೀಡಾ ಋತುವಿನ ಕಡೆಯ ನಾಲ್ಕು ತಿಂಗಳು ಆತ ಆಟವನ್ನು ಆಡುವುದಿಲ್ಲ. ಹೊಸದಾಗಿ ನೇಮಕಗೊಂಡ ಎರಿಕ್ ಡಿಜೆಂಬ-ಡಿಜೆಂಬ ಹಾಗು ಜೋಸೆ ಕ್ಲೆಬೇರ್ಸನ್ ಉತ್ತಮ ಪ್ರದರ್ಶನ ನೀಡುವಲ್ಲಿ ನಿರಾಶೆಗೊಳಿಸಿದರು.. ಆದರೆ 18 ವರ್ಷದ ಪೋರ್ಚುಗೀಸ್ ವಿಂಗರ್ ಕ್ರಿಸ್ಟಿಯಾನೋ ರೋನಾಲ್ಡೋ ನ ನೇಮಕವು ಸ್ವಲ್ಪಮಟ್ಟಿಗೆ ಭರವಸೆಯನ್ನು ಹುಟ್ಟಿಸಿತು.ಕಳೆದ 2004–05 ಕ್ರೀಡಾ ಋತುವಿನ ಪ್ರಾರಂಭದಲ್ಲಿ, ವಾಯ್ನೆ ರೂನೆಯ್ ಹಾಗು ಅರ್ಜೆಂಟಿನ ದ ರಕ್ಷಕ ಗೇಬ್ರಿಯಲ್ ಹೆಇನ್ಜ್ ಯುನೈಟೆಡ್ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಈ ನಡುವೆ ಕ್ರಿಸ್ಟಿಯಾನೋ ರೋನಾಲ್ಡೋ ಹಿಂದಿನ ಕ್ರೀಡಾ ಋತುವಿನಲ್ಲಿ ತೋರಲಾಗದಿದ್ದ ಪ್ರದರ್ಶನವನ್ನು ಪಂದ್ಯಗಳನ್ನು ಗೆಲ್ಲುವ ಸಾಧನೆಗಳ ಮೂಲಕ ಮುಂದುವರೆಸುತ್ತಾನೆ. ವ್ಯಾನ್ ನಿಸ್ಟೆಲ್ರೂಯ್, ಕ್ರೀಡಾ ಋತುವಿನುದ್ದಕ್ಕೂ ಗಾಯದಿಂದ ಬಳಲಿದ ಕಾರಣಕ್ಕೆ ತಂಡದಲ್ಲಿ ಸ್ಟ್ರೈಕರ್‌ನ ಕೊರತೆಯುಂಟಾಗುತ್ತದೆ. ಪರಿಣಾಮವಾಗಿ ಕ್ಲಬ್ ನಾಲ್ಕು ಕ್ರೀಡಾ ಋತುವಿನಲ್ಲೂ ಮೂರನೇ ಬಾರಿ ಮೂರನೇ ಸ್ಥಾನವನ್ನು ಗಳಿಸುತ್ತದೆ. FA ಕಪ್ ನಲ್ಲಿ ತಂಡವು ಪೆನಾಲ್ಟಿಗಳ ಆಧಾರದ ಮೇಲೆ ಅರ್ಸೆನಲ್ ತಂಡಕ್ಕೆ ಶರಣಾಗುತ್ತದೆ.ಕ್ರೀಡಾ ಋತುವಿಗಾಗಿ ಫರ್ಗುಸನ್ ನಡೆಸಿದ ತಯಾರಿಯು, ಅತ್ಯಂತ ಗಮನಸೆಳೆದ ಪ್ರಮುಖ ಶೇರುದಾರ ಜಾನ್ ಮ್ಯಾಗ್ನಿಯರ್ ಜತೆ ವಿವಾದದಿಂದ ಭಂಗವಾಗುತ್ತದೆ. ಓಟದಕುದುರೆ ರಾಕ್ ಆಫ್ ಗಿಬ್ರಾಲ್ಟರ್ ನ ಒಡೆತನದ ಬಗ್ಗೆ ಈ ವಿವಾದ ಉದ್ಭವಿಸುತ್ತದೆ. ಮ್ಯಾಗ್ನಿಯರ್ ಹಾಗು ಅವರ ವ್ಯಾವಹಾರಿಕ ಪಾಲುದಾರ J. P. ಮ್ಯಾಕ್ಮನುಸ್ ತಮ್ಮ ಷೇರುಗಳನ್ನು ಅಮೆರಿಕಾದ ವಾಣಿಜ್ಯ ಪ್ರಭು ಮಾಲ್ಕಂ ಗ್ಲೆಜರ್ ಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ಇದರಿಂದ ಗ್ಲೆಜರ್ ಕ್ಲಬ್ ನ ಸಂಪೂರ್ಣ ನಿಯಂತ್ರಣವನ್ನು ಹೊಂದುವುದಕ್ಕೆ ದಾರಿ ಸುಗಮವಾಯಿತು. ಇದು ಯುನೈಟೆಡ್ ತಂಡದ ಅಭಿಮಾನಿಗಳಿಂದ ತೀವ್ರವಾದ ಪ್ರತಿಭಟನೆಗೆ ದಾರಿ ಮಾಡಿಕೊಡುವುದರ ಜೊತೆಗೆ ವರ್ಗಾವಣೆ ಮಾರುಕಟ್ಟೆಯಲ್ಲಿ ತಂಡವನ್ನು ಬಲಗೊಳಿಸುವ ಫರ್ಗುಸನ್‌ರ ಯೋಜನೆಯನ್ನು ಭಂಗಗೊಳಿಸಿತು. ಇದೆಲ್ಲದರ ಮಧ್ಯೆ, ಯುನೈಟೆಡ್ ತಂಡವು ತಮ್ಮ ಗೋಲ್ ಕೀಪಿಂಗ್ ಹಾಗು ಮಧ್ಯಮೈದಾನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಮುಂದಾಯಿತು. ಇದಕ್ಕಾಗಿ, ತಂಡವು ಡಚ್ ಕೀಪರ್ ಎಡ್ವಿನ್ ವ್ಯಾನ್ ಡೆರ್ ಸರ್ ನನ್ನು ಫುಲ್ ಹಾಮ್ ತಂಡದಿಂದ ಹಾಗು ಕೊರಿಯನ್ ಪ್ರಸಿದ್ಧ ಆಟಗಾರ ಪಾರ್ಕ್ ಜಿ-ಸಂಗ್ ನನ್ನು PSV ತಂಡದಿಂದ ನೇಮಕ ಮಾಡಿಕೊಂಡಿತು.ಕ್ರೀಡಾ ಋತುವು ತುಂಬಾ ಬದಲಾವಣೆಗಳಿಂದ ಕೂಡಿತ್ತು. ನವೆಂಬರ್ 18ರಂದು, ರೋಯ್ ಕೆಅನೆ ಅಧಿಕೃತವಾಗಿ ಕ್ಲಬ್ ನ್ನು ತೊರೆದ, ಅವನ ಕರಾರು ಪರಸ್ಪರ ಸಮ್ಮತಿಯೊಂದಿಗೆ ಕೊನೆಗೊಂಡಿತು. ಯುನೈಟೆಡ್ ತಂಡವು UEFA ಚಾಂಪಿಯನ್ಸ್ ಲೀಗ್ ನ ನಾಕೌಟ್ ಹಂತದಲ್ಲಿ ಅರ್ಹತೆ ಪಡೆಯಲು ವಿಫಲವಾಯಿತು. ಜನವರಿಯಲ್ಲಿ ನಡೆದ ವರ್ಗಾವಣೆಯಲ್ಲಿ ಸೆರ್ಬಿಯಾ ದ ರಕ್ಷಕ ನೆಮಂಜ ವಿದಿಕ್ ಹಾಗು ಫ್ರೆಂಚ್ ಫುಲ್-ಬ್ಯಾಕ್(ಗೋಲಿನ ಬಳಿ 'ಹಾಫ್ ಬ್ಯಾಕ್'ಆಟಗಾರರ ಹಿಂದೆ ನಿಂತು ಆಡುವವ) ಪ್ಯಾಟ್ರಿಸ್ ಇವ್ರಾ ರನ್ನು ನೇಮಕ ಮಾಡಿಕೊಳ್ಳಲಾಯಿತು. ತಂಡವು ಲೀಗ್‌ನಲ್ಲಿ ಮುಂಚೂಣಿಯಲ್ಲಿದ್ದ ಚೆಲ್ಸಿಯಾತಂಡದ ಹಿಂದೆ ಎರಡನೇ ಸ್ಥಾನವನ್ನು ಗಳಿಸಿತು. ಬೇರೆ ಸ್ಥಳದಲ್ಲಿ ದೊರಕದ ಯಶಸ್ಸು ಲೀಗ್ ಕಪ್‌ನ ಗೆಲುವಿನಿಂದಾಗಿ ಸಮಾಧಾನಕರ ಬಹುಮಾನವನ್ನು ಗೆದ್ದಂತಾಗಿತ್ತು. ಕಾರ್ಲಿಂಗ್ ಕಪ್ ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡದ ಪರಿಣಾಮವಾಗಿ ಓಲ್ಡ್ ಟ್ರ್ಯಾಫೋರ್ಡ್ ನಲ್ಲಿ ರುಉದ್ ವ್ಯಾನ್ ನಿಸ್ಟೆಲ್ರೂಯ್ ನ ಭವಿಷ್ಯವು ಅತಂತ್ರವಾಯಿತು. ಕ್ರೀಡಾ ಋತುವಿನ ಕೊನೆಯಲ್ಲಿ ಆತ ತಂಡದಿಂದ ನಿರ್ಗಮಿಸಿದ.

ಎರಡನೇ ಯುರೋಪಿಯನ್ ಟ್ರೋಫಿ

[ಬದಲಾಯಿಸಿ]
ಫರ್ಗುಸನ್ ತಂಡದ ಸಹಾಯಕ ಮಾಜಿ ವ್ಯವಸ್ಥಾಪಕ ಕಾರ್ಲೋಸ್ ಕುಎಇರೋಜ್ ಜೊತೆಯಲ್ಲಿ

ಮೈಕ್ಹೇಲ್ ಕಾರ್ರಿಕ್ಕ್ ನನ್ನು ರೋಯ್ ಕೀನೆಯ ಬದಲಿಯಾಗಿ £14 ದಶಲಕ್ಷ ಗೆ ಒಪ್ಪಂದ ಮಾಡಿಕೊಳ್ಳಲಾಯಿತು, ಆದಾಗ್ಯೂ ಈ ಹಣವು ಪ್ರದರ್ಶನಗಳು ಹಾಗು ಫಲಿತಾಂಶಗಳ ಆಧಾರದ ಮೇಲೆ ಅಂತಿಮವಾಗಿ ಭವಿಷ್ಯದಲ್ಲಿ £18.6 ದಶಲಕ್ಷಗೆ ಏರಿಕೆಯಾಗಬಹುದು. ಯುನೈಟೆಡ್ ತಂಡವು ಕ್ರೀಡಾ ಋತುವಿನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಜೊತೆಗೆ ಮೊದಲ ಬಾರಿಗೆ ನಾಲ್ಕು ಪ್ರೀಮಿಯರ್ ಲೀಗ್ ಪಂದ್ಯಾವಳಿಗಳನ್ನು ಗೆದ್ದು ಕೊಂಡಿತು. ತಂಡವು ಪ್ರೀಮಿಯರ್ ಲೀಗ್‌ನ ಪ್ರಾರಂಭದಲ್ಲಿ ವೇಗದ ಹೆಜ್ಜೆ ಹಾಕುವುದರ ಜೊತೆಗೆ 38-ಕ್ರೀಡಾ ಋತುವಿನ ಹತ್ತನೇ ಪಂದ್ಯದಿಂದ ತನ್ನ ಅಗ್ರ ಸ್ಥಾನವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಜನವರಿ 2006ರಲ್ಲಿ ಮಾಡಿಕೊಂಡ ಒಪ್ಪಂದಗಳು ಯುನೈಟೆಡ್ ತಂಡದ ಪ್ರದರ್ಶನದ ಮೇಲೆ ಮಹತ್ವವಾದ ಪರಿಣಾಮವನ್ನು ಬೀರಿದವು; ಪ್ಯಾಟ್ರಿಸ್ ಎವರ ಹಾಗು ನೆಮಂಜ ವಿದಿಕ್, ಈಗಾಗಲೇ ತಂಡದಲ್ಲಿದ್ದ ಆಟಗಾರರಾದ ರಿಒ ಫರ್ಡಿನಂಡ್ ಹಾಗು ಸ್ಕಿಪರ್(ನಾಯಕ)ಗ್ಯಾರಿ ನೆವಿಲ್ಲೆ ಜೊತೆಗೂಡಿ ತಂಡದ ದೃಢ ಬ್ಯಾಕ್‌ಲೈನ್ ಆಟಗಾರರಾಗಿ ರೂಪುಗೊಂಡರು. ಮೈಕ್ಹೇಲ್ ಕಾರ್ರಿಕ್ಕ್ ನ ಸೇರ್ಪಡೆಯು ಮಾಧ್ಯಮದಲ್ಲಿ ಹಲವಾರು ಪ್ರಶ್ನೆಗಳಿಗೆ ಹಾಗು ವಿಮರ್ಶೆಗೆ ಗುರಿಯಾಯಿತು. ಆದರೆ ಈತನ ಸೇರ್ಪಡೆಯು ಸ್ಥಿರತೆ ಹಾಗು ಯುನೈಟೆಡ್ ಮಧ್ಯ ಮೈದಾನದಲ್ಲಿ ಮತ್ತಷ್ಟು ಸೃಜನಶೀಲತೆಯನ್ನು ತಂಡಕ್ಕೆ ಒದಗಿಸುವುದರ ಜೊತೆಗೆ ಪಾಲ್ ಸ್ಕ್ಹೊಲೆಸ್ ಜೊತೆ ಒಂದು ಪರಿಣಾಮಕಾರಿಯಾದ ಜೊತೆಯಾಟ ರೂಪುಗೊಂಡಿತು. ಪಾರ್ಕ್ ಜಿ-ಸುಂಗ್ಹಾಗು ರಯಾನ್ ಗಿಗ್ಗ್ಸ್ ಇಬ್ಬರೂ ತಮ್ಮ ಮಹತ್ವವನ್ನು ಮೊದಲ ತಂಡಕ್ಕೆ ಮನವರಿಕೆ ಮಾಡಿಕೊಡುವುದರ ಜೊತೆಗೆ ವಾಯ್ನೆ ರೂನೆಯ್ ಹಾಗು ಕ್ರಿಸ್ಟಿಯಾನೋ ರೋನಾಲ್ಡೋ ಜೊತೆಗೂಡಿ ದಾಳಿಯಲ್ಲಿ ಗಮನಾರ್ಹ ಗತಿಯನ್ನು ಮತ್ತು ತೀಕ್ಷ್ಣತೆಯನ್ನು ಸೇರಿಸಿದರು.ಫರ್ಗುಸನ್, 6 ನವೆಂಬರ್ 2006ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ತಂಡ ವ್ಯವಸ್ಥಾಪಕರಾಗಿ ನೇಮಕಗೊಂಡು 20 ವರ್ಷಗಳಾದ ಸಂದರ್ಭದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಫರ್ಗುಸನ್‌ರಿಗೆ ಅವರ ಮಾಜಿ ಹಾಗು ಹಾಲಿ ಆಟಗಾರರಿಂದ ಗೌರವಾರ್ಪಣೆಯಾಯಿತು.[೪೨] ಇದರ ಜೊತೆಗೆ ಅವರ ಹಳೆಯ ಪ್ರತಿಸ್ಪರ್ಧಿ ಅರ್ಸೇನೆ ವೆಂಜರ್,[೪೩] ಅವರ ಮಾಜಿ ನಾಯಕ ರೋಯ್ ಕೀನೆ, ಹಾಗು ಹಾಲಿ ಆಟಗಾರರೂ ಸಹ ಗೌರವವನ್ನು ಸಲ್ಲಿಸಿದರು. ಅದರ ಮರುದಿನ ಹಮ್ಮಿಕೊಳ್ಳಲಾಗಿದ್ದ ಸಂತೋಷಕೂಟವು ನೀರಸವಾಗಿತ್ತು. ಏಕೆಂದರೆ ಯುನೈಟೆಡ್ ತಂಡವು ಕಾರ್ಲಿಂಗ್ ಕಪ್ ನ ನಾಲ್ಕನೇ ಸುತ್ತಿನಲ್ಲಿ ಒಂದೇ ಒಂದು ಗೋಲಿನಿಂದ ಸೋತು ಸೌತ್ ಎಂಡ್ ತಂಡಕ್ಕೆ ಶರಣಾಯಿತು. ಆದಾಗ್ಯೂ, ಡಿಸೆಂಬರ್ 1ರಂದು ಮ್ಯಾಂಚೆಸ್ಟರ್ ಯುನೈಟೆಡ್ ತಂಡವು 35 ವರ್ಷದ ಹೆನ್ರಿಕ್ ಲಾರ್ಸ್ಸನ್ ನನ್ನು ಎರವಲು ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿದೆಯೆಂದು ಪ್ರಕಟಿಸಲಾಯಿತು.[೪೪] ಈ ಆಟಗಾರನನ್ನು ಅಲೆಕ್ಸ್ ಫರ್ಗುಸನ್ ಹಲವು ವರ್ಷಗಳ ಕಾಲ ಮೆಚ್ಚಿಕೊಂಡಿದ್ದರು ಜೊತೆಗೆ ಮುಂಚೆ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಕಳೆದ 2006ರ ಡಿಸೆಂಬರ್ 23ರಂದು, ಕ್ರಿಸ್ಟಿಯಾನೋ ರೋನಾಲ್ಡೋ ಕ್ಲಬ್ನ ಪರ 2000ನೇ ಗೋಲನ್ನು ಫರ್ಗುಸನ್‌ರ ಮಾರ್ಗದರ್ಶನದಲ್ಲಿ ಆಸ್ಟನ್ ವಿಲ್ಲ ವಿರುದ್ಧದ ಪಂದ್ಯದಲ್ಲಿ ಗಳಿಸಿದ.[೪೫] ಮ್ಯಾಂಚೆಸ್ಟರ್ ಯುನೈಟೆಡ್ ತರುವಾಯ ತಮ್ಮ ಒಂಬತ್ತನೇ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಆದರೆ ಚೆಲ್ಸಿಯರ ದೀದಿಯರ್ ಡ್ರೋಗ್ಬಾ ವೆಂಬ್ಲೆಯಲ್ಲಿ ನಡೆದ FAಕಪ್ ಫೈನಲ್‌ನಲ್ಲಿ ಪಂದ್ಯದ ಕೊನೆಯಲ್ಲಿ ಗೋಲುಗಳಿಸುವ ಮೂಲಕ ಡಬಲ್ ಪ್ರಶಸ್ತಿ ತಪ್ಪಿಹೋಯಿತು. ಒಂದು ವೇಳೆ ಈ ಪಂದ್ಯದಲ್ಲಿ ಯುನೈಟೆಡ್ ತಂಡವು ಗೆದ್ದಿದ್ದರೆ, ಆಗ ಡಬಲ್ ಪಂದ್ಯವನ್ನು ನಾಲ್ಕು ಬಾರಿ ಗೆದ್ದ ಮೊದಲ ಇಂಗ್ಲಿಷ್ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಚಾಂಪಿಯನ್ಸ್ ಲೀಗ್ ನಲ್ಲಿ, ಕ್ಲಬ್ ಸೆಮಿ-ಫೈನಲ್ಸ್ ಹಂತವನ್ನು ತಲುಪಿತು. ಕ್ವಾರ್ಟರ್ ಫೈನಲ್ ನ ಎರಡನೇ ಸುತ್ತಿನಲ್ಲಿ ರೋಮ ತಂಡದ ವಿರುದ್ಧ ತಾಯ್ನಾಡಿನಲ್ಲಿ 7-1 ಅಂಕಗಳ ಜಯವು ದಾಖಲೆಯಾಯಿತು. ಆದರೆ ಮೊದಲ ಸುತ್ತಿನಲ್ಲಿ 3-2 ಅಂಕಗಳಿಂದ ಮೇಲಿನ ಸ್ಥಾನವನ್ನು ಪಡೆದಿದ್ದರೂ ಸಹ ಸೆಮಿ ಫೈನಲ್ ನ ಎರಡನೇ ಸುತ್ತಿನಲ್ಲಿ ಮಿಲನ್ ತಂಡದ ವಿರುದ್ಧ 3-0 ಅಂಕಗಳಿಂದ ಸ್ಯಾನ್ ಸಿರೋ ನಲ್ಲಿ ಪರಾಭವಗೊಂಡಿತು.ಕಳೆದ 2007-08ರ ಕ್ರೀಡಾ ಋತುವಿಗೋಸ್ಕರ, ಯುನೈಟೆಡ್‌ನ ಮೊದಲ ತಂಡವನ್ನು ಬಲಪಡಿಸುವ ದೃಷ್ಟಿಯಿಂದ ಫರ್ಗುಸನ್ ಕೆಲವು ಗಮನಾರ್ಹ ಒಪ್ಪಂದಗಳನ್ನು ಮಾಡಿಕೊಂಡರು. ದೀರ್ಘ-ಕಾಲದಿಂದ ಫರ್ಗುಸನ್‌ರ ಗುರಿಯಾಗಿದ್ದ ಓವನ್ ಹರ್‌ಗ್ರೀವ್ಸ್ ಬರ್ಯೇರ್ನ್ ಮ್ಯೂನಿಚ್ ತಂಡದಿಂದ ಸೇರ್ಪಡೆಗೊಂಡ. ಇದರೊಂದಿಗೆ ವರ್ಷದ ಮಾತುಕತೆಗಳು ಅಂತ್ಯಗೊಂಡವು. ಫರ್ಗುಸನ್ ಯುವ ಪೋರ್ಚುಗೀಸ್ ವಿಂಗರ್ ನಾನಿ ಮತ್ತು ಬ್ರೆಜಿಲಿಯನ್ ಪ್ಲೇಮೇಕರ್ ಆಂಡರ್‌ಸನ್(ವಿರುದ್ಧ ತಂಡದ ಆಕ್ರಮಣಕಾರಿ ಆಟವನ್ನು ತಡೆವವ)ಅವರ ಸೇರ್ಪಡೆಗಳೊಂದಿಗೆ ಮಧ್ಯಮಮೈದಾನದ ಆಟವನ್ನು ಮತ್ತಷ್ಟು ಬಲಪಡಿಸಿದರು. ಕಳೆದ ಬೇಸಿಗೆಯಲ್ಲಿ ಸಂಕೀರ್ಣ ಮತ್ತು ಲಂಬಿತ ವರ್ಗಾವಣೆ ಕಥೆಯೊಂದಿಗೆ ವೆಸ್ಟ್ ಹಾಮ್ ಯುನೈಟೆಡ್ ತಂಡದ ಅರ್ಜೆಂಟಿನ ಸ್ಟ್ರೈಕರ್ ಕಾರ್ಲೋಸ್ ಟೆವೆಜ್ನ ಒಪ್ಪಂದ ಏರ್ಪಟ್ಟಿತು.ಫರ್ಗುಸನ್‌ರ ಉಸ್ತುವಾರಿಯಲ್ಲಿ ಯುನೈಟೆಡ್ ತಂಡವು ಕ್ರೀಡಾ ಋತುವಿನ ಪ್ರಾರಂಭದಲ್ಲಿ ಕಳಪೆ ಪ್ರದರ್ಶನವನ್ನು ನೀಡಿತು. ತಮ್ಮ ಎದುರಾಳಿಗಳಾದ ಪಕ್ಕದ ಮ್ಯಾಂಚೆಸ್ಟರ್ ಸಿಟಿ ತಂಡದ ಜೊತೆಗೆ 1-0 ಅಂಕಗಳಿಂದ ಸೋಲನ್ನು ಅನುಭವಿಸುವ ಮುಂಚೆ ಮೊದಲ ಎರಡು ಲೀಗ್ ಪಂದ್ಯಗಳನ್ನು ಸರಿಸಮ ಮಾಡಿಕೊಂಡಿತು. ಆದಾಗ್ಯೂ, ಯುನೈಟೆಡ್ ತಂಡವು ಚೇತರಿಸಿಕೊಂಡು ಪ್ರಶಸ್ತಿಗಾಗಿ ಅರ್ಸೆನಲ್ ತಂಡಕ್ಕೆ ಪ್ರಬಲ ಸ್ಪರ್ಧೆಯನ್ನು ಒಡ್ಡಿತು. ತಂಡದ ಆಟದ ಲಯವು ಉತ್ತಮಗೊಂಡ ಮೇಲೆ, ಫರ್ಗುಸನ್, ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕ ಅವಧಿಯಲ್ಲಿ ಈವರೆಗೂ ತಾವು ಸೇರಿಸಲು ಸಾಧ್ಯವಾದ ಅತ್ಯುತ್ತಮ ತಂಡವೆಂದು ಹೇಳುತ್ತಾರೆ.[೪೬] ಕಳೆದ 2008ರ ಫೆಬ್ರವರಿ 16ರಂದು, ಓಲ್ಡ್ ಟ್ರ್ಯಾಫೋರ್ಡ್ ನಲ್ಲಿ ನಡೆದ FA ಕಪ್ ಪಂದ್ಯದ ಐದನೇ ಸುತ್ತಿನಲ್ಲಿ ಯುನೈಟೆಡ್ ತಂಡವು ಅರ್ಸೆನಲ್ ತಂಡವನ್ನು 4-0 ಅಂಕಗಳಿಂದ ಪರಾಭವಗೊಳಿಸಿತು. ಆದರೆ ಅಂತಿಮವಾಗಿ ಗೆದ್ದ ಪೋರ್ಟ್ಸ್ ಮೌತ್ ತಂಡದಿಂದ ಮಾರ್ಚ್ 8ರಂದು ಆರನೇ ಸುತ್ತಿನಲ್ಲಿ 1-0 ಅಂಕಗಳಿಂದ ತಾಯ್ನಾಡಿನಲ್ಲಿ ಸೋಲಪ್ಪಿತು. ಯುನೈಟೆಡ್ ತಂಡದ ಪೆನಾಲ್ಟಿ ಮನವಿಯನ್ನು ತಿರಸ್ಕರಿಸಲಾಯಿತು, ಫರ್ಗುಸನ್ ಪಂದ್ಯದ ನಂತರ ವೃತ್ತಿಪರ ಪಂದ್ಯದ ಮ್ಯಾಚ್ ಅಧಿಕಾರಿಗಳ ಮಂಡಳಿ ಯ ಪ್ರಧಾನ ವ್ಯವಸ್ಥಾಪಕ ಕೀತ್ ಹಾಕೆಟ್ "ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ" ವೆಂದು ಆಪಾದಿಸಿದರು. ಬಳಿಕ FA ಫರ್ಗುಸನ್ ರ ಅನುಚಿತ ವರ್ತನೆಗಾಗಿ ದಂಡ ವಿಧಿಸಿತು, ಅವರು ಇದನ್ನು ಪ್ರಶ್ನಿಸಿ ತಕರಾರು ಹೂಡಲು ನಿರ್ಧರಿಸಿದರು. ಫರ್ಗುಸನ್ ಆ ಕ್ರೀಡಾ ಋತುವಿನಲ್ಲಿ ಎದುರಿಸಿದ ಎರಡನೇ ದಂಡ ಇದಾಗಿತ್ತು. ಯುನೈಟೆಡ್ ತಂಡ ಬೋಲ್ಟನ್ ವಾಂಡರರ್ಸ್ ಗೆ 1-0 ಅಂಕಗಳಿಂದ ಪರಾಭವಗೊಂಡಾಗ ಅವರು ಆಟದ ರೆಫರೀ ವಿರುದ್ಧ ದೂರು ನೀಡಿದ್ದರು - ಇದಕ್ಕೆ ಅವರು ತಕರಾರು ಹೂಡದಿರಲು ನಿರ್ಧರಿಸಿದ್ದರು. ಕರಾರುವಾಕ್ಕಾಗಿ 25 ವರ್ಷಗಳ ಹಿಂದೆ ಅಬರ್ಡೀನ್ ತಂಡವು ಯುರೋಪಿಯನ್ ಕಪ್ ವಿನ್ನರ್ಸ್ ಕಪ್ ನಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ವಿರುದ್ಧ ಗೆಲುವನ್ನು ಸಾಧಿಸುವಲ್ಲಿ ಫರ್ಗುಸನ್ ನೇತೃತ್ವ ವಹಿಸಿದ ಬಳಿಕ ಮೇ 11, 2008ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಹತ್ತನೇ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಪಡೆಯಲು ಫರ್ಗುಸನ್ ಮುಂದಾಳತ್ವ ವಹಿಸಿದರು. ಹತ್ತಿರದ ಪ್ರತಿಸ್ಪರ್ಧಿಯಾದ ಚೆಲ್ಸಿಯಾ ತಂಡವು ಪಂದ್ಯಗಳ ಅಂತಿಮ ಸುತ್ತನ್ನು ತಲುಪುವಾಗ ಪಾಯಿಂಟ್‌ಗಳಲ್ಲಿ ಸಮನಾಗಿದ್ದರೂ,ಬೋಲ್ಟನ್‌ ವಿರುದ್ಧ ತವರಿನ ಪಂದ್ಯದಲ್ಲಿ ಕೆಳಮಟ್ಟದ ಗೋಲಿನ ವ್ಯತ್ಯಾಸದಿಂದಾಗಿ 1-1 ಡ್ರಾ ಮಾತ್ರ ಸಾಧ್ಯವಾಗಿ ,ಚಾಂಪಿಯನ್ ಪಟ್ಟಕ್ಕೆ ಎರಡು ಅಂಕಗಳು ತಪ್ಪಿಹೋಯಿತು.

ಫರ್ಗುಸನ್ 2009ರಲ್ಲಿ.

ಕಳೆದ 21 ಮೇ, 2008ರಲ್ಲಿ, ಫರ್ಗುಸನ್ ಮ್ಯಾಂಚೆಸ್ಟರ್ ಯುನೈಟೆಡ್ ಜತೆ ತಮ್ಮ ಎರಡನೇ ಯುರೋಪಿಯನ್ ಕಪ್‌ನ್ನು ಚೆಲ್ಸಿಯಾ ತಂಡವನ್ನು 6-5 ಅಂಕಗಳ ಪೆನಾಲ್ಟಿ ಗೋಲುಗಳ ಮೂಲಕ ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣ ದಲ್ಲಿ ಪರಾಭವಗೊಳಿಸುವ ಮೂಲಕ ಗೆದ್ದುಕೊಂಡರು. ಮೊದಲ ಆಲ್-ಇಂಗ್ಲಿಷ್ UEFA ಚಾಂಪಿಯನ್ಸ್ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಹೆಚ್ಚುವರಿ ಅವಧಿಯ ನಂತರ 1-1 ಅಂಕಗಳಿಂದ ಪಂದ್ಯವನ್ನು ಸಮಮಾಡಿಕೊಂಡ ನಂತರ ಪೆನಾಲ್ಟಿ ಅವಕಾಶ ನೀಡಲಾಗಿತ್ತು. ಕ್ರಿಸ್ಟಿಯಾನೋ ರೋನಾಲ್ಡೋ, ಒಂದು ಪೆನಾಲ್ಟಿ ಯನ್ನು ಹೊಡೆಯಲು ವಿಫಲರಾದಾಗ, ಚೆಲ್ಸಿಯಾ ತಂಡದ ಜಾನ್ ಟೆರ್ರಿ ಯ ಹೊಡೆತ ಯಶಸ್ವಿಯಾಗಿ ಗೋಲಾಗಿದ್ದರೆ ಟ್ರೋಫಿಯು ಚೆಲ್ಸಿಯಾ ತಂಡದ ಪಾಲಾಗುತ್ತಿತ್ತು. ಆದರೆ ಟೆರ್ರಿ ಈ ಸದವಕಾಶವನ್ನು ಬಿಟ್ಟುಕೊಟ್ಟರು. ಜೊತೆಗೆ ನಿಕೋಲಾಸ್ ಅನೆಲ್ಕ ಪೆನಾಲ್ಟಿಯನ್ನು ಎಡ್ವಿನ್ ವ್ಯಾನ್ ಡೇರ್ ಸಾರ್'ಸ್ ತಡೆಹಿಡಿದ ಕಾರಣ ಟ್ರೋಫಿಯು ಫರ್ಗುಸನ್ ಮಾರ್ಗದರ್ಶನದ ಅಡಿಯಲ್ಲಿ ಎರಡನೇ ಬಾರಿಗೆ ಹಾಗು ಒಟ್ಟಾರೆಯಾಗಿ ಮೂರು ಸಲ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪಾಲಾಯಿತು. ಕಳೆದ 2007–08 UEFA ಚಾಂಪಿಯನ್ಸ್ ಲೀಗ್ ನ ನಂತರ ಫರ್ಗುಸನ್ ಮುಂದಿನ ಮೂರು ವರ್ಷಗಳಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತ್ಯಜಿಸುವ ಇಚ್ಛೆಯನ್ನು ಪ್ರಕಟಿಸಿದರು.[೪೭] ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಅಧ್ಯಕ್ಷ ಡೇವಿಡ್ ಗಿಲ್ ತ್ವರಿತವಾಗಿ ಪ್ರವೇಶಿಸಿ ಅಲೆಕ್ಸ್ ಫರ್ಗುಸನ್‌ರ ಇತ್ಯರ್ಥವಾಗದ ನಿವೃತ್ತಿಯ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದರು.ಕಳೆದ 2008–09 ಕ್ರೀಡಾ ಋತುವಿನಲ್ಲಿ ತಂಡವು ನಿಧಾನ ಗತಿಯಲ್ಲಿ ಪ್ರಾರಂಭಿಸಿದರೂ, ಯುನೈಟೆಡ್ ತಂಡವು ಪ್ರೀಮಿಯರ್ ಲೀಗ್‌ನ್ನು ಒಂದು ಪಂದ್ಯ ಉಳಿದಿರುವಾಗಲೇ ಗೆದ್ದುಕೊಂಡಿತು. ಇದು ಫರ್ಗುಸನ್ ಇಂಗ್ಲಿಷ್ ಫುಟ್ಬಾಲ್ ಇತಿಹಾಸದಲ್ಲಿ ಎರಡು ವಿವಿಧ ಸಂದರ್ಭಗಳಲ್ಲಿ ಸತತವಾಗಿ ಮೂರು ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗಳಿಸಿದ ಮೊದಲ ತಂಡ ವ್ಯವಸ್ಥಾಪಕ ಎಂಬ ಕೀರ್ತಿಯನ್ನು ತಂದು ಕೊಟ್ಟಿತು. ಫರ್ಗುಸನ್ ರ ನೇತೃತ್ವದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಸದ್ಯಕ್ಕೆ 11 ಲೀಗ್ ಪ್ರಶಸ್ತಿಗಳನ್ನು ಗಳಿಸಿದೆ. ಜೊತೆಗೆ 2008–09 ಕ್ರೀಡಾ ಋತುವಿನ ಗೆಲುವು ತಂಡವನ್ನು ಲಿವೆರ್ಪೂಲ್ ತಂಡದ ಸ್ಥಾನಕ್ಕೆ ಏರಿಸುವುದರ ಜೊತೆಗೆ ಒಟ್ಟಾರೆಯಾಗಿ 18 ಸಂದರ್ಭಗಳಲ್ಲಿ ಲೀಗ್ ಚಾಂಪಿಯನ್ಸ್ ಆಗಿರುವುದು ಒಂದು ದಾಖಲೆಯಾಗಿದೆ. ತಂಡವು 2009ರ ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ 27 ಮೇ, 2009ರಲ್ಲಿ FC ಬಾರ್ಸಿಲೋನ ತಂಡದ ವಿರುದ್ಧ ಸ್ಪರ್ಧಿಸಿ 2-0 ಅಂಕಗಳಿಂದ ಪರಾಭವಗೊಂಡಿತು.ಪ್ರಶಸ್ತಿ ಪ್ರಧಾನ ಸಮಾರಂಭದ ನಂತರ, ಫರ್ಗುಸನ್ ತಮ್ಮ ಆರೋಗ್ಯ ಅನುಮತಿ ನೀಡುವವರೆಗೂ ತಾವು ಯುನೈಟೆಡ್ ತಂಡದಲ್ಲಿ ಉಳಿಯುವುದಾಗಿ ಒಪ್ಪಿಕೊಳ್ಳುವುದರ ಜೊತೆಗೆ ಪ್ರಶಸ್ತಿಯನ್ನು ಮತ್ತೊಂದು ಬಾರಿ ಗೆದ್ದರೆ ತಮಗೆ ಸಂತಸವಾಗುತ್ತದೆಂದು ಹೇಳುತ್ತಾರೆ. ಪ್ರಶಸ್ತಿಯನ್ನು ಮತ್ತೊಂದು ಬಾರಿ ಗೆದ್ದರೆ, ಯುನೈಟೆಡ್ ತಂಡದ ಒಟ್ಟು ಲೀಗ್ ಗೆಲುವುಗಳು ಅದರ ಎದುರಾಳಿಯಾದ ಲಿವರ್‌ಪೂಲ್‌ಗಿಂತ ಜಾಸ್ತಿಯಾಗುತ್ತದೆ. ಇದರೊಂದಿಗೆ ಒಟ್ಟಾರೆ ಗೆಲುವಿನಲ್ಲಿ ಯುನೈಟೆಡ್ ತಂಡವು ಮುಂಚೂಣಿಯಲ್ಲಿರುತ್ತದೆ.[೪೮]

ವಿವಾದಗಳು

[ಬದಲಾಯಿಸಿ]

ತಮ್ಮ ಯುನೈಟೆಡ್ ವೃತ್ತಿಜೀವನದ ಅವಧಿಯಲ್ಲಿ ಫರ್ಗುಸನ್ ಹಲವು ವಿವಾದಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದರು.

ಗೊರ್ಡೊನ್ ಸ್ಟ್ರಾಚನ್

[ಬದಲಾಯಿಸಿ]

ಕಳೆದ 1999ರಲ್ಲಿ ಬಿಡುಗಡೆಯಾದ ಅವರ ಆತ್ಮಚರಿತ್ರೆ "ಮೈ ಲೈಫ್ ಇನ್ ಫುಟ್ಬಾಲ್" ನಲ್ಲಿ ಫರ್ಗುಸನ್ ಸ್ಟ್ರಾಚನ್ ಬಗ್ಗೆ ಹೇಳುತ್ತಾ "ನಾನು ಈ ಮನುಷ್ಯನನ್ನು ಒಂದು ಚೂರು ನಂಬುವುದಿಲ್ಲವೆಂದು ನಿರ್ಧಾರ ಮಾಡಿದ್ದೇನೆ - ನಾನು ಆತುರದಲ್ಲಿ ನನ್ನ ಬೆನ್ನನ್ನು ಅವನಿಗೆ ತೋರಿಸಲು ಇಚ್ಛೆ ಪಡುವುದಿಲ್ಲ" ವೆಂದು ಹೇಳುತ್ತಾರೆ.[೪೯] ಸ್ಟ್ರಾಚನ್ ಈ ಹೇಳಿಕೆಗೆ ಪ್ರತಿಕ್ರಯಿಸುತ್ತಾ ತಮಗೆ "ಆಶ್ಚರ್ಯ ಹಾಗು ನಿರಾಶೆ"[೪೯] ಆಗಿದೆಯಾದರೂ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲವಾಗಿ ಹೇಳುತ್ತಾರೆ.

ಡೇವಿಡ್ ಬೆಕ್ಹ್ಯಾಮ್ & ಡ್ರಾ ಫಿಕ್ಸಿಂಗ್

[ಬದಲಾಯಿಸಿ]

ಕಳೆದ 2003ರಲ್ಲಿ, ಫರ್ಗುಸನ್ ಯುನೈಟೆಡ್ ತಂಡದ ಆಟಗಾರ ಡೇವಿಡ್ ಬೆಕ್ಹಾಮ್ ಜೊತೆ ಉಡುಪು ಬದಲಾಯಿಸಿಕೊಳ್ಳುವ ಕೋಣೆಯಲ್ಲಿ ವಾದಕ್ಕೆ ತೊಡಗಿದ್ದರಿಂದ ಬೆಕ್ಹಾಮ್ ಗಾಯಗೊಂಡರು.[೫೦],ಫರ್ಗುಸನ್ ಹತಾಶೆಯಿಂದ ಫುಟ್ಬಾಲ್ ಬೂಟನ್ನು ಒದ್ದ ಕಾರಣದಿಂದ ಅದು ಆಟಗಾರನ ಮುಖಕ್ಕೆ ಬಡಿದು ಗಾಯವಾಯಿತೆಂದು ಆರೋಪಿಸಲಾಯಿತು. ಏಪ್ರಿಲ್ 5, 2003ರಲ್ಲಿ, ಫರ್ಗುಸನ್ ದಿ ಚಾಂಪಿಯನ್ಸ್ ಪಂದ್ಯಾವಳಿ ಯಲ್ಲಿ ಫಲಿತಾಂಶವು ಮುಂಚಿತವಾಗಿ ಸ್ಪಾನಿಶ್ ಹಾಗು ಇಟಾಲಿಯನ್ ತಂಡದ ಪರವಾಗಿ [೫೧] ಫಿಕ್ಸ್ ಆಗಿದೆಯಂದು ವಾದಿಸಿದರು. ಇದರ ಪರಿಣಾಮವಾಗಿ ಮೇ 1ರಂದು ಅವರಿಗೆ 10,000 ಸ್ವಿಸ್ಸ್ ಫ್ರಾಂಕ್ಸ್ (£4,600) ದಂಡ ಹೇರಲಾಯಿತು.

ರಾಕ್ ಆಫ್ ಗಿಬ್ರಾಲ್ಟರ್

[ಬದಲಾಯಿಸಿ]

ಕಳೆದ 2003ರಲ್ಲಿ, ಫರ್ಗುಸನ್ ಯುನೈಟೆಡ್ ತಂಡದ ಆ ಅವಧಿಯ ಪ್ರಮುಖ ಪಾಲುದಾರರಾಗಿದ್ದ ಜಾನ್ ಮಗ್ನಿಎರ್ ವಿರುದ್ಧ ರೇಸ್ ಕುದುರೆಯಾದ ರಾಕ್ ಆಫ್ ಗಿಬ್ರಾಲ್ಟರ್ನ ತಳಿಹಕ್ಕಿಗಾಗಿ ಕಾನೂನು ಸಮರ ಹೂಡಿದರು[೫೨]. ಮ್ಯಾಗ್ನಿಯರ್ ಇದಕ್ಕೆ ಪ್ರತಿಕ್ರಿಯೆಯಾಗಿ ಫರ್ಗುಸನ್ ರ ವಿರುದ್ಧ ಪ್ರತಿದಾವೆ ಹೂಡಿ "ಮೋಷನ್ ಟು ಕಂಪ್ಲೈ"[೫೩] ಸಲ್ಲಿಸಿದರು. ರಾಕ್ ಆಫ್ ಗಿಬ್ರಾಲ್ಟರ್ ತಳಿಶುಲ್ಕದಲ್ಲಿ ಅರ್ಧದಷ್ಟು ನೀಡಬೇಕೆಂಬ ಫರ್ಗುಸನ್ ಹೇಳಿಕೆಗೆ ಅವರು ಸಮರ್ಥನೆ ಕೊಡಬೇಕಾದ ಅಗತ್ಯವನ್ನು ಮ್ಯಾಗ್ನಿಯರ್ ಪ್ರತಿಪಾದಿಸಿದರು. ಈ ಕಾನೂನು ವಿವಾದಗಳು ಫರ್ಗುಸನ್‌ರ ವರ್ಗಾವಣೆ ವ್ಯವಹಾರಗಳನ್ನು ಒಳಗೊಂಡ "99 ಪ್ರಶ್ನೆ" ಗಳಿಗೆ ಉತ್ತರಿಸುವ ಮನವಿಯೊಂದಿಗೆ ಮತ್ತಷ್ಟು ಜಟಿಲವಾಯಿತು. ಇದರಲ್ಲಿ ಜಾಪ್ ಸ್ಟಂ, ಜುಆನ್ ವೆರೋನ್, ಟಿಮ್ ಹೊವರ್ಡ್, ಡೇವಿಡ್ ಬೆಲ್ಲಿಯೋನ್, ಕ್ರಿಸ್ಟಿಯಾನೋ ರೋನಾಲ್ಡೋ ಹಾಗು ಕ್ಲೆಬರ್ಸನ್ ಮುಂತಾದ ಆಟಗಾರರ ವರ್ಗಾವಣೆಗಳು ಸೇರಿದ್ದವು.[೫೪] . ಅಂತಿಮವಾಗಿ ಮೊಕದ್ದಮೆಯು ನ್ಯಾಯಾಲಯದ ಹೊರಗೆ ಬಗೆಹರಿಯಿತು.

ಫರ್ಗುಸನ್, 2004ರಲ್ಲಿ UK ಟೆಲಿವಿಶನ್ ನಲ್ಲಿ ಪ್ರಸಾರವಾದ "ಫಾದರ್ ಅಂಡ್ ಸನ್" ಎಂಬ ಹೆಸರಿನ ಸಾಕ್ಷ್ಯಚಿತ್ರದ ಪ್ರಸಾರದ ನಂತರ BBC ವಾಹಿನಿಗೆ ಸಂದರ್ಶನಗಳನ್ನು ನೀಡಲು ನಿರಾಕರಿಸುತ್ತಾರೆ. ದಿ ಇಂಡಿಪೆಂಡೆಂಟ್ ಪತ್ರಿಕೆಯ ಪ್ರಕಾರ, ಸಾಕ್ಷ್ಯಚಿತ್ರವು "ಅವರ ಮಗ ಹಾಗು ಏಜೆಂಟ್ ಜೇಸನ್‌ ತನ್ನ ತಂದೆಯ ಪ್ರಭಾವ ಹಾಗು ಸ್ಥಾನಮಾನವನ್ನು ವರ್ಗಾವಣೆಯ ಮಾರುಕಟ್ಟೆಯಲ್ಲಿ ತನ್ನ ಸ್ವಪ್ರಯೋಜನಕ್ಕಾಗಿ ಬಳಸಿಕೊಂಡನೆಂದು ಚಿತ್ರಿಸಿತ್ತು." ಅದೇ ಪತ್ರಿಕೆಯ ಲೇಖನವು "ಫರ್ಗುಸನ್ ಜೂ." ಯಾವುದೇ ತಪ್ಪು ಕೆಲಸದಲ್ಲಿ ಭಾಗಿಯಾಗಿಲ್ಲವೆಂದು ಉಲ್ಲೇಖಿಸುವುದರ ಜೊತೆಗೆ ಫರ್ಗುಸನ್ ಸೀನಿಯರ್ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿತು : "ಅವರು[BBC] ನನ್ನ ಮಗನ ಬಗ್ಗೆ ತೀರ ಅಸಂಬದ್ಧವಾಗಿ ಕಥೆ ಹೆಣೆದಿದ್ದಾರೆ. ಇದೆಲ್ಲ ಕಲ್ಪಿತ ಕಥೆ ಹಾಗು 'ಬ್ರೌನ್ ಪೇಪರ್ ಬ್ಯಾಗ್' (ವಂಚನೆ) ಹಾಗು ಇತರ ಅನುಚಿತ ನಡವಳಿಕೆಗಳು. ನನ್ನ ಮಗನ ಗೌರವದ ಮೇಲೆ ಇದೊಂದು ಭಾರಿ ಆಕ್ರಮಣ ಹಾಗು ಇದಕ್ಕೆ ಅವನನ್ನು ದೂಷಿಸಬಾರದಿತ್ತು."[೫೫]. BBC ವಾಹಿನಿಯಲ್ಲಿ ಪ್ರಸಾರವಾಗುವ ಮ್ಯಾಚ್ ಆಫ್ ದಿ ಡೇ ಮುಂತಾದ ಕಾರ್ಯಕ್ರಮಗಳಿಗೆ ಯಾವುದೇ ಸಂದರ್ಶನವನ್ನು ಅವರ ಸಹಾಯಕ ನೀಡುತ್ತಾನೆ (ಹಾಲಿ ಸಹಾಯಕ ಮೈಕ್ ಫೆಲಾನ್). ಆದಾಗ್ಯೂ, 2010-11 ಕ್ರೀಡಾ ಋತುವಿಗೆ ಉದ್ದೇಶಿಸಲಾಗಿರುವ ಅಧಿಕಾರದ ಹೊಸ ಕಾನೂನಿನ ಪ್ರಕಾರ, ಫರ್ಗುಸನ್ ತಮ್ಮ BBC ಬಹಿಷ್ಕಾರವನ್ನು ಸ್ಪಷ್ಟವಾಗಿ ಕೊನೆಗೊಳಿಸಬೇಕಾಗುತ್ತದೆ.[೫೬]

ಕಾರ್ಯತಂತ್ರ ಹಾಗು ಇತರ ತಂಡ ವ್ಯವಸ್ಥಾಪಕರೊಂದಿಗಿನ ಸಂಬಂಧ

[ಬದಲಾಯಿಸಿ]

ಫರ್ಗುಸನ್, ಮಾಧ್ಯಮಗಳು ಹೆಸರಿಸುವ "ಮಾನಸಿಕ ತಂತ್ರಗಾರಿಕೆ ಆಟ" ಗಳನ್ನು ತಮ್ಮ ಸಹ ಪ್ರೀಮಿಯರ್‌ಶಿಪ್ ತಂಡ ವ್ಯವಸ್ಥಾಪಕರೊಂದಿಗೆ ಬಳಕೆ ಮಾಡಿಕೊಳ್ಳುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ನಡವಳಿಕೆಯು ಸಾಮಾನ್ಯವಾಗಿ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ವಿರುದ್ಧ ತಂಡದ ವ್ಯವಸ್ಥಾಪಕರು ಅಥವಾ ಅವರ ತಂಡದ ಬಗ್ಗೆ ಅವಹೇಳನಕಾರಿ ಪ್ರತಿಕ್ರಿಯೆಯನ್ನು ನೀಡುವುದು ಸಹ ಒಳಗೊಂಡಿದೆ. ಇದು ಇತರ ತಂಡ ವ್ಯವಸ್ಥಾಪಕರ ಜೊತೆ ಹಲವಾರು ಅಲ್ಪ ಪ್ರಮಾಣದ ಕಲಹಗಳಿಗೆ ದಾರಿ ಮಾಡಿಕೊಟ್ಟಿದೆ. ಇದರಲ್ಲಿ ಕೆವಿನ್ ಕೀಗನ್, ಅರ್ಸೇನೆ ವೆಂಜರ್, ರಾಫೆಲ್ ಬೆನಿಟೆಜ್ ಹಾಗು ಈ ಕ್ರೀಡಾ ಋತುವಿನಲ್ಲಿ ಮಾರ್ಕ್ ಹುಗ್ಹೆಸ್ ಜೊತೆಗಿನ ಕಲಹಗಳು ಸೇರಿವೆ.

ಆಟದ ತೀರ್ಪುಗಾರರಾಗಿ

[ಬದಲಾಯಿಸಿ]

ಫರ್ಗುಸನ್ ನಿಂದನೆ ಮಾಡಿದ್ದಕ್ಕೆ ಹಾಗು ಪಂದ್ಯದ ಅಧಿಕಾರಿಗಳು ತಪ್ಪು ಮಾಡಿದ್ದಾರೆಂದು ಅವರು ಗ್ರಹಿಸಿದಾಗ ಸಾರ್ವಜನಿಕವಾಗಿ ಅವರನ್ನು ಖಂಡಿಸಿದಕ್ಕಾಗಿ ಅನೇಕ ಶಿಕ್ಷೆಯನ್ನು ವಿಧಿಸಲಾಗಿದೆ: 20 ಅಕ್ಟೋಬರ್ 2003 - ಫೋರ್ತ್ ಅಫೀಷಿಯಲ್( ತೀರ್ಪುಗಾರರಿಗೆ ಸಹಾಯಕನಾಗಿರುವ ವ್ಯಕ್ತಿ) ಜೆಫ್ಫ್ ವಿಂಟರ್ ನನ್ನು ನಿಂದನೆ ಮಾಡಿದ್ದರಿಂದ ಹಾಗು/ಅಥವಾ ಅವಹೇಳನ ಮಾಡಿದ್ದರಿಂದ ಎರಡು ಪಂದ್ಯಗಳಿಗೆ ನಿಷೇಧ ಹಾಗು £10,000 ದಂಡವನ್ನು ವಿಧಿಸಲಾಯಿತು.[೫೭] 14 ಡಿಸೆಂಬರ್ 2007 - ಮಾರ್ಕ್ ಕ್ಲಾಟೆನ್ ನನ್ನು ನಿಂದಿಸಿದ್ದರಿಂದ ಹಾಗು/ಅಥವಾ ಅವಹೇಳನ ಮಾಡಿದ್ದರಿಂದ ಎರಡು ಪಂದ್ಯಗಳಿಗೆ ನಿಷೇಧ ಹಾಗು £5,000 ದಂಡವನ್ನು ವಿಧಿಸಲಾಯಿತು.[೫೮] 18 ನವೆಂಬರ್ 2008 - ಒಂದು ಪಂದ್ಯದ ನಂತರ ಮೈಕ್ ಡಿನ್‌ ಜತೆ ಜಗಳಕ್ಕೆ ಇಳಿದಿದ್ದರಿಂದ ಎರಡು ಪಂದ್ಯಗಳಿಗೆ ನಿಷೇಧ ಹಾಗು £10,೦೦೦ ದಂಡ ವಿಧಿಸಲಾಯಿತು[೫೯] 12 ನವೆಂಬರ್ 2009 - ಅಲನ್ ವಿಲೆಯ್ ನ ಅರ್ಹತೆಯ ಬಗ್ಗೆ ಟೀಕಿಸಿದ್ದರಿಂದ ನಾಲ್ಕು ಪಂದ್ಯಗಳಿಗೆ ನಿಷೇಧ (ಎರಡಕ್ಕೆ ಹಂಗಾಮಿ ನಿಷೇಧ) ಹಾಗು £20,000 ದಂಡ ವಿಧಿಸಲಾಯಿತು.[೬೦] ಫರ್ಗುಸನ್ ಆಟದ ತೀರ್ಪುಗಾರರಿಗೆ ಒಡ್ಡುವ ಬೆದರಿಕೆಯು ಫೆರ್ಗಿ ಟೈಮ್ ನ ಫಲಿತಾಂಶ ನೀಡುತ್ತೆಂದು ಸೂಚಿಸಲಾಗಿದೆ. ಇದನ್ನು ಅಸಾಮಾನ್ಯವಾಗಿ ಇಂಜುರಿ ಸಮಯ(ಹೆಚ್ಚುವರಿ ಸಮಯ)ವನ್ನು ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಪಂದ್ಯದಲ್ಲಿ ಹಿಂದುಳಿದಿದ್ದಾಗ ಸೇರಿಸಲಾಗುತ್ತಿತ್ತು. ಈ ನುಡಿಗಟ್ಟು 2004ರಷ್ಟು ಹಳೆಯದಾಗಿದೆ,[೬೧] ಜೊತೆಗೆ ದಿ ಟೈಮ್ಸ್ ನ ಅಂಕಿಅಂಶದ ವಿಮರ್ಶೆಯು ಸಹ ಈ ಅಭಿಪ್ರಾಯವು ಕ್ರಮಬದ್ಧವೆಂದು ಸೂಚಿಸುತ್ತದೆ. ಆದಾಗ್ಯೂ ಲೇಖನವು ಫುಟ್ಬಾಲ್ ಆಟದ ಇತರ ಮಾನದಂಡವು ಆಟದಲ್ಲಿ ನೀಡಲಾದ ಹೆಚ್ಚಿನ ಸಮಯ ಹಾಗು ಯುನೈಟೆಡ್ ತಂಡ ಹಿಂದಿರುವುದಕ್ಕೆ ಪರಸ್ಪರ ಸಂಬಂಧವನ್ನು ವಿವರಿಸಬಹುದೆಂದು ಗಮನಸೆಳೆಯುತ್ತದೆ.[೬೨]

ಪರಂಪರೆ

[ಬದಲಾಯಿಸಿ]

ಫರ್ಗುಸನ್ ನಿರ್ವಹಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಪುರನಾವರ್ತನೆಗೊಳ್ಳುವ ಒಂದು ವಿಷಯವೆಂದರೆ ಅವರ ದೃಷ್ಟಿಯಲ್ಲಿ ಯಾವುದೇ ಆಟಗಾರ ಕ್ಲಬ್‌ಗಿಂತ ದೊಡ್ಡವನಲ್ಲ. ಅವರು ಆಟಗಾರರೊಂದಿಗೆ ವ್ಯವಹರಿಸುವಾಗ ಒಂದು ದೃಢವಾದ "ನನ್ನ ದಾರಿ ಅಥವಾ ಹೆದ್ದಾರಿ" ಯ ಮಾರ್ಗವನ್ನು ಅನುಸರಿಸುತ್ತಿದ್ದರು. ಈ ವಿಧವಾದ ನಿರ್ವಹಣಾ ತಂತ್ರದ ಒತ್ತಡದಿಂದಾಗಿ ಹಲವು ಪ್ರಮುಖ ಆಟಗಾರರ ನಿರ್ಗಮನಗಳಿಗೆ ದಾರಿಮಾಡಿಕೊಟ್ಟಿತು. ಕಾಲಾನುಕ್ರಮದಲ್ಲಿ ಆಟಗಾರರಾದ ಗೊರ್ಡನ್ ಸ್ಟ್ರಾಚನ್, ಪಾಲ್ ಮ್ಯಾಕ್‌ಗ್ರಾಥ್, ಪಾಲ್ ಇನ್ಸ್, ಜಾಪ್ ಸ್ಟಂ, ದ್ವೈಟ್ ಯೋರ್ಕೆ, ಡೇವಿಡ್ ಬೆಕ್ಹ್ಯಾಮ್ ಹಾಗು ಇತ್ತೀಚಿಗೆ ರುಉದ್ ವ್ಯಾನ್ ನಿಸ್ಟೆಲ್ರೂಯ್ ಹಾಗು ಗೇಬ್ರಿಯಲ್ ಹೆಇನ್ಜೆ ಇವರುಗಳು ಫರ್ಗುಸನ್ ಜೊತೆಗೆ ವಿವಿಧ ಪ್ರಮಾಣಗಳಲ್ಲಿ ವಿವಾದದೊಂದಿಗೆ ಕ್ಲಬ್‌ನಿಂದ ನಿರ್ಗಮಿಸಿದರು. ಕ್ಲಬ್‌ನ ಇತಿಹಾಸದಲ್ಲೇ ಅತ್ಯಂತ ಸ್ಪೂರ್ತಿದಾಯಕ ಆಟಗಾರನಾದ, ರೋಯ್ ಕೀನೆ ಸಹ ಆಟಗಾರರ ಮೇಲೆ ಕ್ಲಬ್‌ನ ಆಂತರಿಕ ಟೆಲಿವಿಷನ್ ವಾಹಿನಿ MUTV ಯಲ್ಲಿ ತೀಕ್ಷ್ಣವಾದ ವಿಮರ್ಶೆಯನ್ನು ಫರ್ಗುಸನ್ ಮಾಡುವ ಮೂಲಕ ಕೀನೆ ಕೂಡ ಅವರ ಕೋಪಕ್ಕೆ ಗುರಿಯಾಗಿದ್ದರು. ಅತ್ಯಂತ ಹೆಚ್ಚಿಗೆ ಸಂಭಾವನೆ ಪಡೆಯುವ ಹಾಗು ಅತೀ ಗಣ್ಯ ಆಟಗಾರರ ಜತೆ ಇಂತಹ ಶಿಸ್ತಿನ ವರ್ತನೆಯಿಂದ ಮ್ಯಾಂಚೆಸ್ಟರ್ ಯುನೈಟೆಡ್ ನ ಮುಂದುವರಿದ ಯಶಸ್ಸಿಗೆ ಕಾರಣವೆಂದು ಪ್ರಸ್ತಾಪಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ವೈಯಕ್ತಿಕ ಜೀವನ

[ಬದಲಾಯಿಸಿ]

ಫರ್ಗುಸನ್ ವಿಲ್ಮ್ ಸ್ಲೋ, ಚೆಶೈರ್ ನಲ್ಲಿ ತಮ್ಮ ಪತ್ನಿ ಕ್ಯಾಥಿ ಫರ್ಗುಸನ್ (ಅಲಿಯಾಸ್ ಹೋಲ್ಡಿಂಗ್) ಜೊತೆ ವಾಸಿಸುತ್ತಾರೆ. 1966ರಲ್ಲಿ ಮದುವೆಯಾದ ಈ ದಂಪತಿಗೆ ಮೂವರು ಗಂಡು ಮಕ್ಕಳು: ಮಾರ್ಕ್ (ಜನನ 1968) ಹಾಗು ಅವಳಿಗಳಾದ (ಜನನ 1972) ಡರ್ರೆನ್, ಹಾಲಿ ಪ್ರೆಸ್ಟನ್ ನಾರ್ತ್ ಎಂಡ್ ನ ತಂಡ ವ್ಯವಸ್ಥಾಪಕ , ಹಾಗು ಜಾಸನ್, ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ನಡೆಸುತ್ತಾನೆ.ಕಳೆದ 1998ರಲ್ಲಿ ಫರ್ಗುಸನ್ ರನ್ನು ಲೇಬರ್ ಪಾರ್ಟಿ ಗೆ ವೈಯುಕ್ತಿಕವಾಗಿ ಖಾಸಗಿಯಾಗಿ ಅತ್ಯಂತ ಹೆಚ್ಚಿನ ದೇಣಿಗೆ ನೀಡಿದ ವ್ಯಕ್ತಿ ಎಂದು ಪಟ್ಟಿ ಮಾಡಲಾಗಿದೆ.[೬೩]

ಗೌರವ ಪ್ರಶಸ್ತಿಗಳು

[ಬದಲಾಯಿಸಿ]

ಆಟಗಾರ

[ಬದಲಾಯಿಸಿ]
St. ಜಾನ್ಸ್ಟೋನ್
ಫಾಲ್ಕಿರ್ಕ್

ಸ್ಕಾಟಿಷ್ ಫಸ್ಟ್ ಡಿವಿಷನ್ (1): 1969–70

ತಂಡದ ವ್ಯವಸ್ಥಾಪಕರಾಗಿ

[ಬದಲಾಯಿಸಿ]

ಇಂಗ್ಲಿಷ್ ಆಟಕ್ಕೆ ತಂಡ ವ್ಯವಸ್ಥಾಪಕರಾಗಿ ನೀಡಿದ ಕೊಡುಗೆಯನ್ನು ಮನ್ನಿಸಿ ಫರ್ಗುಸನ್ ರನ್ನು 2002ರಲ್ಲಿ ಇಂಗ್ಲಿಷ್ ಫುಟ್ಬಾಲ್ ಹಾಲ್ ಆಫ್ ಫೇಮ್ ನ ಉದ್ಘಾಟನೆಗೆ ಸೇರ್ಪಡೆ ಮಾಡಲಾಗಿತ್ತು. ಕಳೆದ 2003ರಲ್ಲಿ, ಫರ್ಗುಸನ್ FA ಕೋಚಿಂಗ್ ಡಿಪ್ಲೋಮಾ ಪಡೆದವರಲ್ಲಿ ಮೊದಲಿಗರಾದರು. ಈ ಪದವಿಯನ್ನು ತಂಡದ ವ್ಯವಸ್ಥಾಪಕರಾಗಿ ಅಥವಾ ಮುಖ್ಯ ತರಬೇತುದಾರರಾಗಿ ಕಡೇಪಕ್ಷ 10 ವರ್ಷ ಅನುಭವ ಹೊಂದಿದ ಎಲ್ಲ ತರಬೇತುದಾರರಿಗೆ ನೀಡಲಾಯಿತು. ಅವರು ಪ್ರೆಸ್ಟನ್ ನಲ್ಲಿ ನೆಲೆಹೊಂದಿರುವನ್ಯಾಷನಲ್ ಫುಟ್ಬಾಲ್ ಮ್ಯೂಸಿಯಂ ನ ಉಪಾಧ್ಯಕ್ಷರಾಗಿದ್ದಾರೆ, ಜೊತೆಗೆ ಎಗ್ಸೆಕ್ಯುಟಿವ್ ಕಮಿಟಿ ಆಫ್ ದಿ ಲೀಗ್ ವ್ಯವಸ್ಥಾಪಕಸ್ ಅಸೋಸಿಯೇಶನ್ ನ ಒಬ್ಬ ಸದಸ್ಯರಾಗಿದ್ದಾರೆ. ಇದರ ಜೊತೆಗೆ ಅಗ್ರ ಲೀಗ್ ಗೌರವವನ್ನು ಪಡೆದ ತಂಡದ ಏಕೈಕ ಮ್ಯಾನೇಜರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಜೊತೆಗೆ ಇಂಗ್ಲೆಂಡ್-ಸ್ಕಾಟ್ಲ್ಯಾಂಡ್ ಗಡಿಯ ಡಬಲ್ ನಾರ್ತ್ ಹಾಗು ಸೌತ್ ಗೌರವವನ್ನು ಪಡೆದಿದ್ದಾರೆ.(ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಜತೆ ಪ್ರೀಮಿಯರ್ ಲೀಗ್ ಗೆದ್ದರು, ಹಾಗು ಅಬರ್ಡೀನ್ ತಂಡದ ಜತೆ ಸ್ಕಾಟಿಷ್ ಪ್ರೀಮಿಯರ್ ಡಿವಿಷನ್ ನನ್ನು ಗೆದ್ದರು).[ಸೂಕ್ತ ಉಲ್ಲೇಖನ ಬೇಕು]

St. ಮಿರ್ರೆನ್

1976-77

ಅಬರ್ಡೀನ್

1979–80, 1983–84, 1984–85

ಮ್ಯಾಂಚೆಸ್ಟರ್ ಯುನೈಟೆಡ್
ವೈಯಕ್ತಿಕ ಸಾಧನೆ
ಬಿರುದುಗಳು ಮತ್ತು ವಿಶೇಷ ಪ್ರಶಸ್ತಿಗಳು

ಅಂಕಿಅಂಶಗಳು

[ಬದಲಾಯಿಸಿ]

ಆಟಗಾರನಾಗಿ

[ಬದಲಾಯಿಸಿ]
Appearances and goals by club, season and competition
Club Season League Cup League Cup Europe Total
Apps Goals Apps Goals Apps Goals Apps Goals Apps Goals
Queen's Park 1957–58
1958–59
1959–60
Total 31 15
St Johnstone 1960–61
1961–62
1962–63
1963–64
Total 37 19
Dunfermline Athletic 1964–65
1965–66
1966–67
Total 89 66
Rangers[೬೪] 1967–68 29 19 5 0 6 2 6 3 46 24
1968–69 12 6 1 0 4 2 3 3 20 11
Total 41 25 6 0 10 4 9 6 66 35
Falkirk 1969–70[೬೫] 21 15 3 3
1970–71[೬೬] 28 13 0 0
1971–72[೬೭] 28 9 2 1 9 4 39 14
1972–73[೬೮] 18 0 2 1 0 0 20 1
Total 95 37 7 5
Ayr United 1973–74[೬೯] 24 9 4 1 0 0 28 10
Total 24 9 4 1 0 0 28 10
Career total 317 171 6 0

ತಂಡದ ವ್ಯವಸ್ಥಾಪಕನಾಗಿ

[ಬದಲಾಯಿಸಿ]
As of 30 March 2010

ಟಿಪ್ಪಣಿಗಳು

[ಬದಲಾಯಿಸಿ]
  1. Nick Barratt Published: 12:01AM BST 05 May 2007 (2007-05-05). "Family detective". Telegraph. Archived from the original on 2008-01-09. Retrieved 2009-10-30.{{cite web}}: CS1 maint: numeric names: authors list (link)
  2. The Boss. p. 33.
  3. "Get all the latest Scottish football news and opinions here". Dailyrecord.co.uk. 2009-08-11. Retrieved 2009-10-30.
  4. "Ferguson reveals earlier Canada emigration plans". ESPN Soccernet. 2010-02-04. Archived from the original on 2010-02-06. Retrieved 2010-02-04.
  5. "Scotland — List of Topscorers". Rsssf.com. 2009-06-12. Retrieved 2009-10-30.
  6. The Boss. p. 82.
  7. The Boss. p. 83.
  8. The Boss. p. 86.
  9. Reid, Harry (2005). The Final Whistle?. Birlinn. p. 223. ISBN 1841583626.
  10. Managing My Life. p. ?.
  11. The Boss. p. 85.
  12. The Boss. pp. 108–9.
  13. "A leader of men is what he does best". The Guardian. 23 November 2004. Retrieved 9 March 2007.
  14. The Boss. p. 117.
  15. ೧೫.೦ ೧೫.೧ "Sunday Herald St. Mirren article". Archived from the original on 2008-01-07. Retrieved 2007-11-09.
  16. "FA article". Retrieved 2007-11-09.
  17. "Guardian bullying article". Retrieved 2007-11-11.
  18. "31.05.1978: Alex Ferguson is fired by St Mirren". Guardian. 31 May 2008. Retrieved 29 December 2008.
  19. The Boss. p. 159.
  20. The Boss. p. 171.
  21. The Boss. p. 174.
  22. The Boss. p. 175.
  23. The Boss. p. 179.
  24. The Boss. p. 180.
  25. The Boss. p. 191.
  26. The Boss. p. 195.
  27. The Boss. p. 196.
  28. The Boss. p. 201.
  29. The Boss. p. 203.
  30. The Boss. p. 204.
  31. "Lewis heads sporting honours". BBC News. 1999-12-12. Retrieved 2007-06-18. {{cite web}}: Cite has empty unknown parameter: |coauthors= (help)
  32. "Ferguson 'almost became Arsenal boss'". BBC News. 10 June 2009. Retrieved 2009-06-10. {{cite news}}: Cite has empty unknown parameter: |coauthors= (help)
  33. "Arise Sir Alex?". BBC News, 27 May 1999. 27 May 1999. Retrieved 3 December 2005.
  34. Ferguson, Alex (1993). Just Champion!. Manchester United Football Club plc. p. 27. ISBN 0952050919. {{cite book}}: Unknown parameter |coauthors= ignored (|author= suggested) (help)
  35. ೩೫.೦ ೩೫.೧ "How Robins saved Ferguson's job". BBC News 4 November 2006. 4 November 2006. Retrieved 8 August 2008.
  36. "20 years and Fergie's won it all!". Manchester Evening News. 6 November 2006. Retrieved 8 August 2009.
  37. ೩೭.೦ ೩೭.೧ "Recalling the pressure Ferguson was under". The Independent. 8 May 1997. Archived from the original on 1 ಮೇ 2009. Retrieved 8 August 2009.
  38. Managing My Life. p. 302.
  39. Managing My Life. p. 311.
  40. Managing My Life. p. 320.
  41. "Arise Sir Alex". BBC News. 12 June 1999. Retrieved 18 June 2007. {{cite news}}: Cite has empty unknown parameter: |coauthors= (help)
  42. "Saviour Robins: Fergie just cannot let go". ESPN Soccernet, 4 November 2006. Archived from the original on 27 ನವೆಂಬರ್ 2011. Retrieved 11 January 2007.
  43. "Wenger: Managers should emulate Ferguson". ESPN Soccernet, 4 November 2006. Archived from the original on 4 ಜೂನ್ 2011. Retrieved 11 January 2007.
  44. "Man Utd capture Larsson on loan". BBC Sport. 1 December 2006. Retrieved 11 January 2007.
  45. Bostock, Adam (23 December 2006). "Report: Villa 0 United 3". Manutd.com. Retrieved 18 June 2007.
  46. "Ferguson: This is the best squad I've ever had". Daily Telegraph. 12 November 2007. Archived from the original on 14 ನವೆಂಬರ್ 2007. Retrieved 27 November 2007.
  47. "Queiroz could step up to boss United when Sir Alex decides to call it a day". Mail Online (UK). 25 May 2008. Retrieved 27 May 2008.
  48. "Fergie won't be retiring for some while yet, insists Manchester United chief Gill". Mail Online (UK). 25 May 2008. Retrieved 27 May 2008.
  49. ೪೯.೦ ೪೯.೧ "Fergie v Strachan". The BBC. 2006-09-12. Retrieved 2009-12-14.
  50. "Sir Alex Ferguson factfile". The Times. 1997-11-05. Archived from the original on 2011-06-04. Retrieved 2009-12-14.
  51. "Sir Alex Ferguson factfile". Manchester Evening News. 2006-11-06. Retrieved 2009-12-14.
  52. "Sir Alex Ferguson takes His case to Court". Racing and Sports. 2003-11-20. Archived from the original on 2013-08-23. Retrieved 2009-12-14.
  53. "Magnier's legal action damages hopes of a deal". The Independent. 2004-02-03. Archived from the original on 2010-01-22. Retrieved 2009-12-14.
  54. "United won't answer the 99 questions". The Guardian. 2004-02-01. Retrieved 2009-12-14.
  55. "Ferguson will never talk to The BBC again". The Independent. 2007-09-06. Retrieved 2009-12-14.
  56. "Sir Alex Ferguson will be forced to speak to the BBC under new Premier League rules". The Telegraph. 2009-11-14. Archived from the original on 2009-11-18. Retrieved 2009-12-14.
  57. "Sir Alex Ferguson Factfile". Manchester Evening News. 2006-11-06. Retrieved 2009-12-14.
  58. "Ferguson banned for two matches". The BBC. 2007-12-14. Retrieved 2009-12-14.
  59. "Sir Alex Ferguson banned and fined £10,000". The Times. 2008-11-19. Archived from the original on 2011-06-04. Retrieved 2009-12-14.
  60. "Sir Alex Ferguson banned for two games and fined after Alan Wiley jibe". The Guardian. 2009-11-12. Retrieved 2009-12-14.
  61. "Wiley's time-keeping hands United lifeline". Daily Telegraph. 2004-08-30. Retrieved 2010-02-21.
  62. "It's a fact! Fergie time does exist in the Premier League". The Times. 2009-10-24. Archived from the original on 2011-06-04. Retrieved 2010-02-21.
  63. "UK Politics | 'Luvvies' for Labour". BBC News. 1998-08-30. Retrieved 2009-10-30.
  64. Fitbastats.com - Alex Ferguson, Rangers
  65. Rothmans Football Yearbook 1970–71, p. 724, 740–741. Queen Anne Press, London.
  66. Rothmans Football Yearbook 1971–72, p. 563, 537. Queen Anne Press, London.
  67. Rothmans Football Yearbook 1972–73, p. 648–649, 683–684, 688. Queen Anne Press, London.
  68. Rothmans Football Yearbook 1973–74, p. 572–573, 626–628. Queen Anne Press, London.
  69. Rothmans Football Yearbook 1974–75, p. 570–571, 642–644. Queen Anne Press, London.

ಆಕರಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]