ಕಾಜೊಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಜೋಲ್ ದೇವ್ಗನ್
[[Image:
ಕಾಜೋಲ್
|frameless]]
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಕಾಜೋಲ್ ಮುಖರ್ಜೀ
(1975-08-05) ಆಗಸ್ಟ್ ೫, ೧೯೭೫ (ವಯಸ್ಸು ೪೮)
ಮುಂಬಯಿ, ಮಹಾರಾಷ್ಟ್ರ, ಭಾರತ
ವೃತ್ತಿ ಚಿತ್ರನಟಿ
ವರ್ಷಗಳು ಸಕ್ರಿಯ ೧೯೯೨-೨೦೦೧, ೨೦೦೬ - ಈಗಿನವರೆಗೆ
ಪತಿ/ಪತ್ನಿ ಅಜಯ್ ದೇವ್ಗನ್ (೧೯೯೯-ಈಗಿನ ವರೆಗೆ)

ಕಾಜೊಲ್ ದೇವ್ ಗನ್ ,ನೀ ಮುಖರ್ಜೀ ಬೆಂಗಾಲಿ:কাজল দেবগন ಕಾಜೊಲ್ ದೇಬ್ಗನ, 1975 ಆಗಷ್ಟ್ 5ರಂದು ಜನಿಸಿದ್ದು ಆಕೆಯ ಜನಪ್ರಿಯ ಹೆಸರು ಕಾಜೊಲ್ , ಈಕೆ ಭಾರತೀಯ ಹಿಂದಿ ಭಾಷೆಯ ಸಿನೆಮಾ ತಾರೆ,ಹಿಂದಿ ಚಲನಚಿತ್ರಗಳಲ್ಲಿ ಆಕೆ ಅಭಿನಯಿಸುತ್ತಾಳೆ. (2001)ಕಾಜೊಲ್ ತನ್ನ ಚೊಚ್ಚಿಲ ಸಿನೆಮಾ ಬೇಖುದಿ (1992)ಆಕೆಯ ಕಮರ್ಶಿಯಲ್ ಮೊದಲ ಹಿಟ್ ಬಾಜಿಗಾರ್ (1993)ಶಾರುಖ್ ಖಾನ್ ನೊಂದಿಗೆ ನಟಿಸಿದ ಕೀರ್ತಿ ಅವಳಿಗಿದೆ. ಅದರಂತೆ ಅದೇ ನಾಯಕ ನಟನೊಂದಿಗೆ ಬಾಲಿಯುಡ್ ನ ಅತಿ ದೊಡ್ಡ ಹಿಟ್ ದಿಲ್ ವಾಲೆ ದುಲ್ಹನಿಯಾ ಲೆ ಜಾಯೆಂಗ್ (1995),ಕುಚ್ ಕುಚ್ ಹೋತಾ ಹೈ (1998)ಮತ್ತು ಕಭಿ ಖುಶಿ ಕಭಿ ಗಮ್ (2001)ಇತ್ಯಾದಿಗಳು. ಈ ಎಲ್ಲಾ ಮೂರು ಚಿತ್ರಗಳಲ್ಲಿ ಆಕೆಯ ಸಾಧನೆ ಅತ್ಯುತ್ತಮವಾಗಿದೆ.ಅದಕ್ಕಾಗಿಯೇ ಮೂರು ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಗಳು ದೊರೆತವು. ಕಭಿ ಖುಷಿ ಕಭಿ ಗಮ್ ಚಿತ್ರದ 2001ರಲ್ಲಿನ ಯಶಸ್ವಿಯ ನಂತರ ಆಕೆ ಐದು ವರ್ಷಗಳ ಕಾಲ ಪೂರ್ಣಾವಧಿಯ ಚಲನಚಿತ್ರ ಅಭಿನಯದ ರಜೆ ಪಡೆದು ವಿಶ್ರಾಂತಿ ತೆಗೆದುಕೊಂಡಳು. ನಂತರ ಕುನಾಲ್ ಕೊಹಿಲಿ ಅವರ ಫನಾ (2006)ಚಲನಚಿತ್ರಕ್ಕಾಗಿ ನಾಲ್ಕನೆಯ ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ನ್ನು ಕಾಜೊಲ್ ಪಡೆದುಕೊಂಡಳು. ಭಾರತದ ಅತ್ಯಂತ ಗೌರವಾನ್ವಿತ ನಟಿ ಮತ್ತು ಯಶಸ್ವಿ ಹಾಗು ಪ್ರತಿಭಾನ್ವಿತ ಅಭಿನೇತ್ರಿಯಾಗಿದ್ದಾಳೆ. ಭಾರತೀಯ ನಟ ಅಜಯ್ ದೇವಗನ್ ಅವರೊಂದಿಗೆ ಅವಳ [೧][೨] ವಿವಾಹವಾಯಿತು.

ಕುಟುಂಬ ಮತ್ತು ಹಿನ್ನಲೆ[ಬದಲಾಯಿಸಿ]

ಪ್ರಮುಖ ಲೇಖನ  : ಮುಖರ್ಜೀ-ಸಮರ್ಥ ಕುಟುಂಬ ಕಾಜೊಲ್ ಮುಂಬಯಿನಲ್ಲಿ ಜನಿಸಿದಳು.ಬೆಂಗಾಲಿ-ಮರಾಠಿ ಸಭ್ಯ ಮತ್ತು ಭಾರತೀಯ ಸಿನೆಮಾ ವಲಯದಲ್ಲಿ ಉತ್ತಮ ಮರ್ಯಾದೆ ಪಡೆದಿದ್ದಾಳೆ. ಆಕೆಯ ತಾಯಿ ತನುಜಾ ಓರ್ವ ಜನಪ್ರಿಯ ನಟಿ ಹಾಗು ಆಕೆಯ ತಂದೆ ದಿವಂಗತ ಶೊಮು ಮುಖರ್ಜಿ ಅವರು ಚಿತ್ರ ನಿರ್ಮಾಪಕರಾಗಿದ್ದರು. ಆಕೆಯ ಚಿಕ್ಕಮ್ಮ ನೂತನ ಕೂಡಾ ಐದು ಬಾರಿ ಫಿಲ್ಮ್ ಫೇರ್ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ಸ್ ಅವಾರ್ಡ್ ಪಡೆದ ಕೀರ್ತಿಗೆ ಪಾತ್ರಳಾಗಿದ್ದಾಳೆ. ಆಕೆಯ ಅಜ್ಜಿ ದಿವಂಗತ ಶೊಭನಾ ಸಮರ್ಥ ಮತ್ತು ಮುತ್ತಜ್ಜಿ ರತ್ತನ್ ಬಾಯಿ ಅವರುಗಳು ಹಿಂದಿ ಚಲನಚಿತ್ರ ಜಗತ್ತಿನಲ್ಲಿಅತ್ಯಂತ ಪ್ರಭಾವಿ ವ್ಯಕ್ತಿತ್ವಯುಳ್ಳವರಾಗಿದ್ದರು. ಆಕೆಯ ಚಿಕ್ಕಪ್ಪಂದಿರರಾದ ;ಜೊಯ್ ಮುಖರ್ಜೀ ಮತ್ತು ದೆಬ್ ಮುಖರ್ಜೀ ಪ್ರಧಾನ ಚಿತ್ರ ನಿರ್ಮಾಪಕರು. ಕಾಜೊಲ್ ಳ ಚಿಕ್ಕಜ್ಜ ಸಶಾಧರ್ ಮುಖರ್ಜೀ ಅವರು ಕೂಡಾ ಉತ್ತಮ ಚಲನಚಿತ್ರ ನಿರ್ಮಾಪಕರಾಗಿದ್ದರು. ಆತನ ಪತ್ನಿ ಸತಿರಾಣಿ ದೇವಿ,ಕಾಜೊಲ್ ಳ ಅಜ್ಜಿ ಚಲನಚಿತ್ರದ ಪ್ರಖ್ಯಾತ ವ್ಯಕ್ತಿಗಳಾಗಿದ್ದಾರೆ.ಅಶೋಕ್ ಕುಮಾರ್ ,ಅನೂಪ್ ಕುಮಾರ್ ,ಮತ್ತು ಕಿಶೋರ್ ಕುಮಾರ್ ಇತ್ಯಾದಿ. ಕಾಜೊಲ್ ಕಸಿನ್ ರಾನಿ ಮುಖರ್ಜೀ,ಶರ್ಬಾನಿ ಮುಖರ್ಜೀ ಮತ್ತು ಮೊಹ್ನಿಶ್ ಕೂಡಾ ಬಾಲಿಯುಡ್ ನಟರಾಗಿದ್ದಾರೆ.ಅದೂ ಅಲ್ಲದೇ ಆಯನ್ ಮುಖರ್ಜೀ ಕೂಡಾ ಒಬ್ಬ ಪ್ರಸಿದ್ದ ನಿರ್ದೇಶಕರಾಗಿದ್ದಾರೆ. ಕಾಜೊಲ್ ಳ ಕಿರಿಯ ಸಹೋದರಿ ತನೀಶಾ ಮುಖರ್ಜೀ ಕೂಡಾ ಓರ್ವ ಅಭಿನೇತ್ರಿ. ಬಾಲಿಯುಡ್ ನಟ ಅಜಯ ದೇವಗನ್ ಅವರನ್ನು ಫೆಬ್ರವರಿ 24ರಂದು 1999ರಲ್ಲಿ ವಿವಾಹವಾದರು. ಏಪ್ರಿಲ್ 20,2003ರಲ್ಲಿ ಆಕೆ ಪುತ್ರಿ ನ್ಯಾಸ್ ಗೆ ಜನ್ಮ ನೀಡಿದಳು. ಏಪ್ರಿಲ್ 10,2008 ರಲ್ಲಿ ಆಕೆಯ ತಂದೆ ಹೃದಯ ರೋಗದ ಕಾಯಿಲೆಯಿಂದ (ಹಾರ್ಟ್ ಅಟ್ಯಾಕ್ )ನಿಂದ ಮೃತಪಟ್ಟರು. ಆತನ ಅಂತ್ಯಕ್ರಿಯೆಯು ಅದೇ ದಿನ ನಡೆದು ಬಾಲಿಯುಡ್ ಗಣ್ಯರೆಲ್ಲರೂ ಅಂತಿಮ ಯಾತ್ರೆಯಲ್ಲಿ [೩] ಪಾಲ್ಗೊಂಡರು.

ವೃತ್ತಿ[ಬದಲಾಯಿಸಿ]

ಪಂಚಗನಿಯಲ್ಲಿರುವ ಸೇಂಟ.ಜೊಸೆಫ್ ಕಾನ್ವೆಂಟ್ ಬಿಟ್ಟು ತನ್ನ ಹದಿನೇಳನೆಯ ವಯಸ್ಸಿನಲ್ಲಿಯೇ ಬದುಕಿನ ಭವಿಷ್ಯ ರೂಪಿಸಲು ಮುಂದಾದಳು. ಆಕೆಯ ಚೊಚ್ಚಿಲ ಚಿತ್ರ ಬೇಖುದಿ (1992) ರಲ್ಲಿ ಬಾಕ್ಸ್ ಆಫಿಸಿನಲ್ಲಿ ವಿಫಲವಾದರೂ ಆಕೆಯ ಅಭಿನಯ ಹಲವು ನಿರ್ಮಾಪಕರ ದೃಷ್ಟಿಗೆ ಬಿತ್ತು.ಆಗ ಆಕೆ ದೊಡ್ಡ ದೊಡ್ಡ ನಿರ್ಮಾಣ ಬ್ಯಾನರ್ ಗಳಲ್ಲಿ ಕೆಲಸ ಆರಂಭಿಸಿದಳು.

ಆಕೆಯ ಎರಡನೆಯ ಚಿತ್ರ 1993ರಲ್ಲಿ ಬಾಜಿಗಾರ್ ಉತ್ತಮ ಹೆಸರು ತಂದುಕೊಟ್ಟಿತು. ಈ ಚಿತ್ರವು ಪ್ರಮುಖ ಹಿಟ್ ಚಿತ್ರವೆನಿಸಿತ್ತಲ್ಲದೇ ಶಾರುಖ್ ಖಾನ್ ಜೊತೆ ಒಳ್ಳೆ ಜೋಡಿ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಂತರ ಆಕೆ ಶಾರುಖ್ ಖಾನ್ ರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಎಲ್ಲಾ ಬಾಕ್ಸ್ ಆಫಿಸ್ ನಲ್ಲಿ ಯಶಸ್ಸು [೪] ಕಂಡಳು. ಆಕೆಯ 1994ರಲ್ಲಿನ ಮೊದಲ ಬಿಡುಗಡೆ ಉಧಾರ್ ಕಿ ಜಿಂದಗಿ ಬಾಕ್ಸ್ ಆಫಿಸ್ ನಲ್ಲಿ [೫] ಸೋತಿತು. ಆದಾಗ್ಯೂ ಆಕೆಯ ಅಭಿನಯ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.BFJA ಬೆಸ್ಟ್ ಆಕ್ಟ್ರೆಸ್ಸ್ ಅವಾರ್ಡ್ ನ್ನು ಆಕೆ ಇದರಲ್ಲಿನ ಪಾತ್ರಕ್ಕಾಗಿ ಪಡೆದುಕೊಂಡಳು. ಆಕೆ ಯಶ್ ರಾಜ್ ಚಿತ್ರದಲ್ಲಿ ಮೊದಲ ಬಾರಿಗೆ ತಾರಾಪಟ್ಟ ಪಡೆದಳು.ಅತ್ಯಂತ ಪ್ರಣಯದ ಭಾವಭರಿತ ಕಥೆಯುಳ್ಳ ಯೆಹ್ ದಿಲ್ಲಗಿ ಯಲ್ಲಿ ಅಕ್ಷಯಕುಮಾರ ಮತ್ತು ಸೈಫ್ ಅಲಿಖಾನ್ ರೊಂದಿಗೆ ಮನೋಜ್ಞ ಅಭಿನಯ ನೀಡಿದಳು. ಈ ಚಿತ್ರವು ಬಾಕ್ಸ್ ಆಫಿಸಿನಲ್ಲಿ ಉತ್ತಮ ಯಶಸ್ವು ಕಂಡಿತಲ್ಲದೇ ಇದರಲ್ಲಿನ ಸ್ವಪ್ನಳ ಪಾತ್ರವು ಆಕೆಯ ಚಿಕ್ಕಪ್ಪನನ್ನು ಬಿಟ್ಟು ಭವಿಷ್ಯ ಅರಸಿ ದೊಡ್ಡ ಪಟ್ಟಣಕೆ ಹೋಗುವ ಅಭಿನಯ ಮನಮಿಡಿಯುವಂತಿದೆ.ಇದಕ್ಕಾಗಿ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ಕೂಡಾ ಫಿಲ್ಮ್ ಫೇರ್ ಅವಾರ್ಡಗಳಲ್ಲಿ ಆಕೆ ಭಾಜನಳಾದಳು. ವರ್ಷ 1995 ಅವಳ ಪಾಲಿಗೆ ಎರಡು ಅತಿ ದೊಡ್ಡ ಹಿಟ್ ಗಳನ್ನು ಆಕೆಗೆ ತಂದುಕೊಟ್ಟಿತು. ಆಕೆಯ ಮೊದಲ ಬಿಡುಗಡೆ ರಾಕೇಶ್ ರೋಶನ್ಕರನ್ ಅರ್ಜುನ್ . ಈ ಚಿತ್ರವು ಪುನರ್ಜನ್ಮದ ಬಗ್ಗೆ ಸವಿವರ ಮತ್ತು ಉತ್ತಮ ಅಭಿನಯಕ್ಕಾಗಿ ಆ ವರ್ಷದ ಅತಿದೊಡ್ಡ ಎರಡನೆಯ ಬಿಗ್ ಹಿಟ್ [೬] ಎನಿಸಿತು. ಆಕೆಯ ಮುಂದಿನ ಮೂರು ಬಿಡುಗಡೆಗಳು ಆ ವರ್ಷ ಬಾಕ್ಸ್ ಆಫಿಸನಲ್ಲಿ ಗೋತಾ ಹೊಡೆದವು.ಆದರೆ ಆದಿತ್ಯ ಚೊಪ್ರಾ ಅವರ ಚೊಚ್ಚಿಲ ನಿರ್ದೇಶನದ ದಿಲ್ ವಾಲೆ ದುಲ್ಹನಿಯಾ ಲೆ ಜಾಯೆಂಗೆ ಕೇವಲ ಹಿಟ್ ಅಷ್ಟೇ ಅಲ್ಲ ಹಿಂದಿ ಸಿನೆಮಾ ಜಗತ್ತಿನ ಅತಿದೊಡ್ಡ ಹಿಟ್ ಗಳಲ್ಲಿ [೭] ಒಂದಾಗಿದೆ. ಮುಂಬಯಿ ಥೆಯೆಟರ್ ಗಳಲ್ಲಿ ಇದು 2008ರ ಹೊತ್ತಿಗೆ ಹನ್ನೆರಡನೆಯ ವರ್ಷಕ್ಕೆ ಪದಾರ್ಪಣೆ ಮಾಡಿ ಬಾಲಿಯುಡ್ ನಲ್ಲಿನ ಬ್ಲಾಕ್ ಬಸ್ಟರ್ ಗಳಲ್ಲಿ ಒಂದಾದುದಲ್ಲದೇ 12 ಬಿಲಿಯನ್ ರೂಪಾಯಿ ಗಳಿಕೆಯ ದಾಖಲೆ [೮] ಮಾಡಿತು. ಈ ಚಿತ್ರದಲ್ಲಿನ ಕಾಜೊಲ್ ನಟನೆ ಮೆಚ್ಚುಗೆ ಪಡೆಯಿತಲ್ಲದೇ ಮೊದಲ ಬಾರಿಗೆ ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಗೆ ಪಾತ್ರವಾಯಿತು. [೯] ಕಾಜೊಲ್ ಳದು 1996ರಲ್ಲಿ ಕೇವಲ ಒಂದೇ ಬಿಡುಗಡೆ ಕಂಡಿತು,ಸೈಫ್ ಅಲಿಖಾನ್ ನೊಂದಿಗಿನ ಬಂಬಾಯಿ ಕಾ ಬಾಬು ಬಾಕ್ಸ್ ಆಫಿಸ್ ನಲ್ಲಿ [೧೦] ನೆಲಕಚ್ಚಿತು.1997ರಲ್ಲಿ , ಕಾಜೊಲ್ ನಟಿಸಿದ Gupt: The Hidden Truth .[೧೧] ಸಹನಟ ಬಾಬಿ ಡಯೊಲ್ ಮತ್ತು ಮನಿಶಾ ಕೊಯರಾಲರೊಂದಿಗಿನ ಚಿತ್ರವು ಆ ವರ್ಷದ ಅತಿ ದೊಡ್ಡ ಜನಮೆಚ್ಚುಗೆ [೧೧] ಪಡೆಯಿತು. ಆಕೆಯ ನಟನಾ ಸಾಮರ್ಥ್ಯವು ಬಾಲಿಯುಡ್ ವಲಯದಲ್ಲಿ ಕಾಜೊಲ್ ಉತ್ತಮ ಖಳನಾಯಿಕಿ ಪಾತ್ರದ ಮೊದಲ ಮಹಿಳಾ ನಟನೆಯು, ಪ್ರಥಮ ಬಾರಿಗೆಫಿಲ್ಮ್ ಫೇರ್ ಬೆಸ್ಟ್ ವಿಲನ್ ಅವಾರ್ಡ್ ಗೆ ಆಕೆಗೆ ಹೆಸರು ತಂದು ಕೊಟ್ಟಿತು. ಆಕೆಯ ಆ ವರ್ಷದ ಮುಂದಿನ ಬಿಡುಗಡೆಯು ಹಮೇಶಾ ಚಿತ್ರವಾಗಿತ್ತು. ಕರನ್ ಅರ್ಜುನ್ ತರಹ ಇದೂ ಕೂಡಾ ಒಂದು ಪುನರ್ ಜನ್ಮ ಹಾಗು ಹಿಂದಿನ ವೃತ್ತಾಂತದ ಬಗ್ಗೆ ಇತ್ತು. ಹೇಗೆಯಾದರೂ ಅದರ ನಂತರ ಇದು ಬಾಕ್ಸ್ ಆಫಿಸ್ ನಲ್ಲಿ [೧೧] ವಿಫಲವಾಯಿತು. ಆಕೆ ತನ್ನ ಮೊದಲ ತಮಿಳು ಚಿತ್ರ,ಮಿನ್ಸಾರಾ ಕನಾವು ದಲ್ಲಿನ ಅಭಿನಯ ಮನೋಜ್ಞವಾಗಿತ್ತು. ಈ ಚಿತ್ರವು ಯಶಸ್ವು ಕಂಡಿತಲ್ಲದೇ ಕಾಜೊಲ್ ಫಿಲ್ಮ್ ಫೇರ್ ಅವಾರ್ಡಸ್ ಸೌಥ್ ನಿಂದ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ಸ್ ನ್ನು ಪದೆದುಕೊಂಡಳು. ಆ ವರ್ಷದ ಕೊನೆಯ ಬಿಡುಗಡೆಯೆಂದರೆ ಹಾಸ್ಯದ ರೊಮ್ಯಾಂಟಿಕ್ -ಕಾಮಿಡಿ ಇಶ್ಕ್ ನಲ್ಲಿ ಆಕೆ ತನ್ನ ಭಾವಿ ಪತಿ ಅಜಯ ದೇವಗನ್ ಅವರೊಂದಿಗೆ ನಾಯಕಿಯಾಗಿದ್ದಳು. ಇದು ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಫಲಿತಾಂಶ [೧೧] ತಂದಿತು.

ಮತ್ತೆ ಆಕೆಯ ಚಿತ್ರ 1998ರಲ್ಲಿ ಯಶಸ್ವಿ ಕಂಡಿತು.ಇದರಲ್ಲಿ ಆಕೆಯದೇ ಪ್ರಧಾನ ಪಾತ್ರ ಮೂರು ತಾರೆಗಳ [೧೨] ಸಂಗಮದಂತಿತ್ತು. ಆಕೆ ಮೊದಲಬಾರಿಗೆ ಸಲ್ಮಾನ್ ಖಾನ್ ಜೊತೆಯಾಗಿ ಹಾಸ್ಯ ಚಲನಚಿತ್ರ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ ದಲ್ಲಿ ಅಭಿನಯಿಸಿದಳು. ಆ ವರ್ಷದಲ್ಲಿ ನಾಲ್ಕನೆಯ ಅತಿದೊಡ್ಡ ಹಿಟ್ ಆಗಿ ಮಾರ್ಪಟ್ಟಿತು. ಅವಳ ಮುಂದಿನ ಬಿಡುಗಡೆ ದುಶ್ಮನ್ ನಲ್ಲಿ ಸಂಜಯ ದತ್ತ ಜೊತೆಗಿನ ಇದು ಬಾಕ್ಸ್ ಆಫಿಸಿನಲ್ಲಿ ಪರವಾ ಇಲ್ಲವೆನ್ನುವಂತಿತ್ತು. ಆ ಚಿತ್ರದಲ್ಲಿನ ಆಕೆಯ ದ್ವಿಪಾತ್ರ ಅವಳಿಗೆ ಮೊದಲ ಸ್ಟಾರ್ ಸ್ಕ್ರೀನ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ತಂದು ಕೊಟ್ಟಿತು. ಮುಂದೆ ಆಕೆ ಅಜಯ್ ದೇವಗನ್ ಜೊತೆಯಲ್ಲಿ ನಟಿಸಿದ ಪ್ಯಾರ್ ತೊ ಹೋನಾ ಹಿ ಥಾ ಆ ವರ್ಷದಲ್ಲಿ ಎರಡನೆಯ ದೊಡ್ಡ ಹಿಟ್ ಆಗಿ ಹೊರಹೊಮ್ಮಿತು. ಆ ವರ್ಷದ ಅತಿ ದೊಡ್ಡ ಯಶಸ್ವು ಕಂಡ ಕರಣ್ ಜೊಹರ್ ಅವರ ಮೊದಲ ನಿರ್ದೇಶನದ ಕುಚ್ ಕುಚ್ ಹೋತಾ ಹೈ ಭಾರತ ಮತ್ತು ಸಾಗರೋತ್ತರ ದೇಶಗಳಲ್ಲಿ ಸಹ ಭಾರಿ ಯಶಸ್ವಿ [೧೩] ಕಂಡಿತು. ಆಕೆ ತನ್ನ ಸಾಧನೆಗಾಗಿ ಎರಡನೆಯ ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಗೆ ಭಾಜನಳಾದಳು. left|thumb| ಆಟೊಗ್ರಾಫ್ ಸಹಿ ಕಾಜೊಲ್ ಳ ಮೊದಲ ಬಿಡುಗಡೆ 1999ರಲ್ಲಿ ದಿಲ್ ಕ್ಯಾ ಕರೆ . ನಂದಿತಾ ರಾಯ ಳ ಅತ್ಯುತ್ತಮ ಪಾತ್ರಕ್ಕಾಗಿ ಅವಳು ಪ್ರಶಂಸೆಗೆ ಪಾತ್ರಳಾದಳು. ಆಕೆಯ ಮತ್ತೊಂದು ಎರದನೆಯ ಬಿಗ್ ಹಿಟ್ ಕೌಟುಂಬಿಕ ಚಿತ್ರ ಹಮ್ ಆಪಕೆ ದಿಲ್ ಮೆ ರೆಹತೆ ಹೈ ,ಅನಿಲ್ ಕಪೂರ್ ಜೊತೆಗಿನ ಈ ಚಿತ್ರ ಕಾಜೊಲ್ ಗೆ ಮತ್ತೊಂದು ಫಿಲ್ಮ್ ಫೇರ್ ಗೆ ಬೆಸ್ಟ್ ಆಕ್ಟ್ರೆಸ್ ಗೆ ನಾಮನಿರ್ದೇಶನ [೧೪] ಪಡೆದರು. ಆಕೆಯದು 2000ನೆಯ ವರ್ಷ ಅಯಶಸ್ವಿ ಅವಧಿ,ಆಕೆ ನಟಿಸಿದ ರಾಜು ಚಾಚಾ ಯಾರ ಗಮನಕೂ ಬಾರದಂತೆ [೧೫] ದಾಟಿಹೋಯ್ತು. ಕಾಜೊಲ್ ಳ ಕೇವಲ ಎರಡೇ ಚಿತ್ರಗಳು 2001ರಲ್ಲಿ ಬಿಡುಗಡೆಯಾದವು. ಆಕೆ ಮೊದಲ ಬಾರಿಗೆ ಕುಚ್ ಖಟ್ಟಿ ಕುಚ್ಚ್ ಮೀಠಿ ಚಿತ್ರದಲ್ಲಿ ಆಕೆ ದ್ವಿಪಾತ್ರದಲ್ಲಿ ನಟಿಸಿದ್ದಾಳೆ ಆದರೆ ಇದು ಬಾಕ್ಸ್ ಆಫಿಸ್ನಲ್ಲಿ ಸೋತಿತು. ಆದಾಗ್ಯೂ ಆಕೆ ತನ್ನ ಎರಡನೆಯ ಸಾಹಸದಲ್ಲಿ ಕರನ್ ಜೊಹರ್ ಅವರ ಜೊತೆಗಿನ ಕಭಿ ಖುಷಿ ಕಭಿ ಗಮ್ ಆ ವರ್ಷದಲ್ಲಿ ದೊಡ್ಡ ಹಿಟ್ ಆಗಿ ವಿಕ್ರಮ ಸಾಧಿಸಿತು.ಇದರಲ್ಲಿ ಆಕೆ ಹಲವು ಬೆಸ್ಟ್ ಅಕ್ಟ್ರೆಸ್ ಪ್ರಶಸ್ತಿಗಳನ್ನು [೧೬] ಪಡೆದಳು.ಆಕೆ ತನ್ನ ಮೂರನೆಯ ಫಿಲ್ಮ್ ಫೇರ್ ಬೆಸ್ಟ್ ಅಕ್ಟ್ರೆಸ್ ಅವಾರ್ಡ್ ಮತ್ತು ಆಕೆಯ ಎರಡನೆಯ ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ಫಾರ್ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ದೊರಕಿತು. ವಿಮರ್ಶಕ ತರನ್ ಆದರ್ಶ್ ಆಕೆಯ ಸಾಧನೆಯು ಮೊದಲ ದರ್ಜೆಯದಾಗಿದ್ದು ಎಂದು ಹೇಳಿದ್ದಾರಲ್ಲದೇ "ಕಾಜೊಲ್ ಚಾಂದನಿ ಚೌಕ್ ನ ತರಳೆ ಒಬ್ಬ ಪೋರಿ ಎಂದು ಹೇಳಿದ್ದಾರೆ. ಆಕೆಯ ಪಂಜಾಬಿ ಭಾಷಾ ಸಂಭಾಷಣೆಯು ಸಾಕಷ್ಟು ಮೆಚ್ಚುಗೆ ಗಳಿಸಿತು. ಅಲ್ಲಿನ ಸನ್ನಿವೇಶ ಆಕೆ ಅಮಿತಾಭ್ ರಿಂದ ಅವರಿಗೆ ತಿಳಿಯದೇ ಆಶೀರ್ವಾದ ಪಡೆದಿದ್ದು ಕೂಡಾ [೧೭] ಭಯಾನಕವೇ" ಕಭಿ ಖುಶಿ ಕಭಿ ಗಮ್ ನಂತರ ಆಕೆ ಐದು ವರ್ಷಗಳ ಕಾಲ ಕಾಜೊಲ್ ವಿಶ್ರಾಂತಿಯೆಡೆಗೆ ವಾಲಿದಳು. ಇಸವಿ 2003ರಲ್ಲಿ ಪುತ್ರಿ ನ್ಯಾಸಾಳಿಗೆ ಜನ್ಮ ನೀಡಿದಳು.

ಕುನಾಲ್ ಕೊಹ್ಲಿಯವರ ಫನಾ ದೊಂದಿಗೆ ಆಕೆ 2006ರಲ್ಲಿ ವಾಪಸಾದಳು ಆ ವರ್ಷ ಅದು ಅತ್ಯುತ್ತಮ ಹೆಗ್ಗಳಿಕೆಯ [೧೮] ಚಿತ್ರವಾಯಿತು. ಓರ್ವ ಅಂಧ ಕಾಸ್ಮೀರಿ ಯುವತಿ ಒಬ್ಬ ಭಯೋತ್ಪಾದಕನೊಂದಿಗೆ ಪ್ರೀತಿಸುವ ಕತೆ,ಇದರಲ್ಲಿ( ಅಮೀರ ಖಾನ್ ನಾಯಕ)ನಾಗಿದ್ದು ಇಲ್ಲಿನ ಕಾಜೊಲ್ ಳ ಅಭಿನಯ ಅವಳಿಗೆ ನಾಲ್ಕನೆಯ ಫಿಲ್ಮ್ ಫೇರ್ ಬೆಸ್ಟ್ ಅಕ್ಟ್ರೆಸ್ಸ್ ಅವಾರ್ಡ್ ತಂದಿತು.ಈ ದಾಖಲೆಯಿಂದಾಗಿ ಆಗಿ ಹಿಂದಿನ ತಲೆಮಾರಿನ ಮೀನಾಕುಮಾರಿ ಹಾಗು ಮಾಧುರಿ ದಿಕ್ಷೀತ ಅವರನ್ನು ಸರಿಗಟ್ಟುವಂತಾಯಿತು.ಈ ಇಬ್ಬರೂ ನಟಿಯರಿಗೆ ತಲಾ ನಾಲ್ಕರಂತೆ ಬೆಸ್ಟ್ ಅಕ್ಟ್ರೆಸ್ ಅವಾರ್ಡ ಬಂದಿದೆ. (ಕಾಜೊಲ್ ಳ ಚಿಕ್ಕಮ್ಮ ದಿವಂಗತ ನೂತನ್ ಸದ್ಯ ಇಂತಹ ಐದು ಪ್ರಶಸ್ತಿಗಳನ್ನು ಬಾಚಿಕೊಂಡ ನಟಿ ಎನಿಸಿದ್ದಾರೆ.) ಕಾಜೊಲ್ ಳ್ ಇತ್ತೀಚಿನ ಅಂದರೆ ಏಪ್ರಿಲ್ 11,2008ರಲ್ಲಿ ಬಿಡುಗಡೆಯಾದ ಯು,ಮೈ ಔರ್ ಹಮ್ ,ಪತಿ ಅಜಯ ದೇವಗನ್ ನ ಚೊಚ್ಚಿಲ ನಿರ್ದೇಶನದ ಚಿತ್ರ. ಈ ಚಿತ್ರ ಬಾಕ್ಸ್ ಆಫಿಸಿನಲ್ಲಿ ಸಾಧಾರಣ ಫಲಿತಾಂಶ ತಂದರೂ ವಿಸ್ಮೃತಿ ಕಾಯಿಲೆಯ ರೋಗಿಯ ಪಾತ್ರ ವಿಮರ್ಶಕರಿಂದ ಕಾಜೊಲ್ ಳಿಗೆ ಮೆಚ್ಚುಗೆ ತಂದಿತು. ಇದರಲ್ಲಿನ ನಟನೆಗಾಗಿ ಅವಳಿಗೆ ಹತ್ತನೆಯ ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ಸ ಅವಾರ್ಡಗೆ ಅವಳು ಸೂಚಿಸಲ್ಪಟ್ಟಳು. , ""...ರಾಜಾ ಸೇನ್ ತಮ್ಮ ವಿಶ್ಲೇಷಣೆಯಲ್ಲಿ " [೧೯] ಕಾಜೊಲ್ ತನ್ನ ಪಾತ್ರದಲ್ಲಿ ಆ ಕಾಯಿಲೆಯ ಬಗ್ಗೆ ಅಷ್ಟಾಗಿ ತಳೆ ಕೆಡಿಸಿಕೊಳ್ಳದೇ ಒಬ್ಬ ಉಲ್ಲಾಸದ ಹುಡುಗಿಯಾಗಿ ತನ್ನ ಅರೆತೆರೆದ ಕಣುಗಳ ಮೂಲಕ ಸುತ್ತಲೂ ತಂಗಾಳಿ ಬರುವಂತೆ ಮಾಡುವ ಆಸೌಂದರ್ಯ ಸ್ನಿಗ್ದತೆಗೆ ಸಾಕ್ಷಿಯಾಗಿದೆ.ಬದುಕಿನ ಸವಾಲುಗಳಿಗೆ ಆತ ಎದೆಗುಂದದೆ ಕೊಡುವ ಉತ್ತರ ಅವಳ ಆ ನಿಟ್ಟಿನಲ್ಲಿನ ಅಭಿನಯ ಕಾಜೊಲ್ ಳ ಅತ್ಯುತ್ತಮ ಅಭಿನಯಕ್ಕೆ ಸಾಧನೆಯಾಗಿದೆ." ಆಕೆಯ ಮತ್ತೊಂದು ಚಿತ್ರ ತೂನ್ಪೂರ್ ಕಾ ಸೂಪರ್ ಹಿರೊ ತನ್ನ ಪತಿಯೊಂದಿಗಿನ ಇದು ಲೈವ್ ಆಕ್ಷನ್ /ಆನಿಮೇಶನ್ ಒಳಗೊಂಡ ಚಿತ್ರ ಇದೇ2010ರ ಬೇಸಿಗೆಯಲ್ಲಿ ತೆರೆ ಕಾಣುವ ನಿರೀಕ್ಷೆ [೨೦] ಇದೆ. ಕರನ್ ಜೊಹರ್ ಅವರ ಹೊಸ ಚಿತ್ರ ಮೈ ನೇಮ್ ಈಸ್ ಖಾನ್ ನಲ್ಲಿಯೂ ಸಹ ಕಾಜೊಲ್ ಕಾಣಿಸಿಕೊಂಡಿದ್ದಾಳೆ.11ಸೆಪ್ಟೆಂಬರ್ ನಂತರದ ಪರಿಣಾಮಗಳು ಹಾಗು ಇಸ್ಲಾಮ್ ನ ದೃಷ್ಟಿಕೋನಗಳ ಬಗೆಗಿನ ನಿಜ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದೆ. ಇದರ ಚಿತ್ರೀಕರಣವು ಡಿಸೆಂಬರ್ 2008ರಲ್ಲಿ ಲಾಸ್ ಎಂಜಿಲ್ಸ್ ನಲ್ಲಿ ಆರಂಭಗೊಂಡು ಅಕ್ಟೋಬರ್ 2009ರ ಹೊತ್ತಿಗೆ ಅಂತ್ಯಗೊಳ್ಳುತ್ತದೆ. ಇದು ಫೆಬ್ರವರಿ 12,2010ಕ್ಕೆ ತೆರೆ [೨೧] ಕಾಣುವುದು. ಹಾಲಿಯುಡ್ ಚಿತ್ರ ಸ್ಟೆಪ್ ಮಾಮ್ (1998)ನ್ನು ಕಾಜೊಲ್ ಆಕ್ಟೋಬರ್ 9,2009ರಿಂದ ರಿಮೇಕ್ ಕಾರ್ಯ ಆರಂಭಿಸಿದ್ದು,ಇದರಲ್ಲಿ ಕರೀನಾ ಕಪೂರ್ ಮತ್ತು ಅರ್ಜುನ್ ರಾಮ್ ಪಾಲ್ ಅವರೊಂದಿಗಿನ ನಟನೆ ಇದೆ. ಸಿದ್ದಾರ್ಥ ಮಲ್ಹೋತ್ರಾ ಇದನ್ನು ನಿರ್ದೇಶಿಸಿದ್ದರೆ ಕರನ್ ಜೊಹರ್ [೨೨] ನಿರ್ಮಾಪಕರು.

ಮಾಧ್ಯಮ[ಬದಲಾಯಿಸಿ]

ಆಕೆ 2005ರಲ್ಲಿನ TV ಶೊ ಕೌನ್ ಬನೇಗಾ ಕ್ರೊರ್ ಪತಿ (ಹೂ ವಾಂಟ್ಸ್ ಟು ಬಿ ಎ ಮಿಲಿಯಾನರ್?ನ ಭಾರತೀಯ ಅನುಕರಣೆ) ಅಮಿತಾಭ್ ಬಚ್ಚನ್ ಇದರ ನಿರ್ವಾಹಕರು. ಆಕೆ ತನ್ನ ಪತಿ ಅಜಯ್ ದೇವಗನ್ ಜೊತೆಯಿದ್ದರು. ಅವರು ಒಂದು ಕೋಟಿ (10 ದಶಲಕ್ಷ)ಗೆದ್ದರು.ಅದನ್ನು ಚೆನ್ನೈನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ದಾನ ನೀಡಿದರು. ಇಂಡಿಯನ್ ಐಡೊಲ್ ನ ಒಂದು ಮತ್ತು ಎರಡನೆಯ ಋತುವಿನಲ್ಲಿಆಕೆ ಗೌರವ ತೀರ್ಪುಗಾರರಾಗಿ ಕಾಣಿಸಿಕೊಂಡದ್ದು [೨೩] ಇದೆ. ಕರನ್ ಜೊಹರ್ ಅವರ ಟಾಕ್ ಶೊ ಕೊಫಿ ಉಯಿತ್ ಕರನ್ ನಲ್ಲಿ ಮೊದಲ ಸರಣಿಯಲ್ಲಿ ಶಾರುಖ್ ಖಾನ್ ನೊಂದಿಗೆ ಕಾಣಿಸಿಕೊಂಡಳು. ಆ ಋತುವಿನ ಕೊನೆಯ ಧಾರಾವಾಹಿ (ಸರಣಿ)ಯಲ್ಲಿ ಶಾರುಖ ಖಾನ್ ಮತ್ತು ಅಮಿತಾಭ್ ಬಚ್ಚನ್ ರೊಂದಿಗೆ ಕಾಣಿಸಿದಳು ಮತ್ತೆ ಅದೇ ಟಾಕ್ ಶೊ ನ ಎರಡನೆಯ ಸರಣಿಯಲ್ಲಿ ಕರನ್ ನ ಮೊದಲ ಎಪಿಸೋಡ್ ಸುರುವಾಗಿದ್ದೇ ಕುಚ್ ಕುಚ್ ಹೋತಾ ಹೈ ನೊಂದಿಗೆ ಮತ್ತೆ ಒಟ್ಟುಗೂಡಿತು. ಹೆಚ್ಚು ಕಡಿಮೆ ಆತನ ನಿರ್ದೇಶನದ ದಶಕದ ನಂತರ ಕರನ್ , ಶಾರುಖ ಖಾನ್ ಮತ್ತು ರಾಣಿ ಮುಖರ್ಜೀ ಅವರೊಂದಿಗೆ ಮತ್ತೆ ಆವ್ಹಾನ ನೀಡಿದ. ಆಕೆ ಮನೀಶ್ ಮಲ್ಹೋತ್ರಾ ಅವರ ಫ್ಯಾಶನ್ ವೀಕ್ 2006 ,ರಲ್ಲಿ ಫ್ರೀಡಮ್ ಎಂಬ ಶೀರ್ಷಿಕೆಯಡಿ ರೂಪದರ್ಶಿಯಾಗಿ ರಾಂಪ್ ಮೇಲೆ ಪ್ರೀತಿ ಜಿಂಟಾಳೊಂದಿಗೆ ತನ್ನ ಸೌಂದರ್ಯ [೨೪] ಮೆರೆದಳು. ಇದೇ ಸಂದರ್ಭದಲ್ಲಿ 2006ರಳ್ಳಿ ಬಾಲಿಯುಡ್ ಲೆಜೆಂಡ್ಸ್ ಎಂಬ ಶೀರ್ಷಿಕೆಯಡಿ 4 ತಾರೆಯರ ಪ್ರತಿಮೆಗಳನ್ನು ಅನಾವರಣಗೊಳಿಸಲಾಯಿತು. ಇದಲ್ಲದೇ ಪ್ರಿಯಾಂಕಾ ಚೊಪ್ರಾ, ಹೃತಿಕ್ ರೋಶನ್ ಮತ್ತು ಶಾರುಖ ಖಾನ್ ಆಕೆಯೂ ಈ ಲೆಜೆಂಡ್ ಗಳಲ್ಲಿ [೨೫] ಒಬ್ಬಳು. ಆಕೆಯ ಪತಿ ಅಜಯ್ ದೇವಗನ್ ತಾಯಿ ತನುಜಾ ಅವರೊಂದಿಗೆ 2008ರಲ್ಲಿನ TV ಶೊ ರಾಕ್ 'ಎನ್ 'ರೊಲ್ ಫೆಮಿಲಿ ಕಾರ್ಯ ಕ್ರಮದ [೨೬] ತೀರ್ಪುಗಾರರಾಗಿದ್ದರು. ವಿಶೇಷ ಸಂಚಿಕೆಯಾದ ಇಂಡಿಯನ್ ವೊಗ್ಯು ನ ವಾರ್ಷಿಕ ಕಾರ್ಯಕ್ರಮದಲ್ಲಿ ಆಕೆ ಶಾರುಖ ಖಾನ್ ನೊಂದಿಗೆ [೨೭] ಪಾಲ್ಗೊಂಡಳು.

ಸಮಾಜ ಸೇವೆ[ಬದಲಾಯಿಸಿ]

ಆಕೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಿಗಿಸಿಕೊಂಡಿದ್ದಾಳೆ.ಸಾಮಾಜಿಕ ಕಾರ್ಯದ ರಾಯಭಾರಿಯಾಗಿರುವ ಆಕೆ ಬ್ರಿಟನ್ ಮೂಲದ ಲೂಂಬಾ ಟ್ರಸ್ಟ್ ನ ಮಹಪೋಷಕಿಯಾಗಿದ್ದಾಳೆ. ಇದರ ಮೂಲಕ ವಿಧವೆಯರು,ಮಕ್ಕಳು ಬಹಳ ಮುಖ್ಯವಾಗಿ ಭಾರತದಲ್ಲಿನ ಇಂತಹ ಜನರಿಗೆ ಕಾಜೊಲ್ ,NGO ಶಿಕ್ಷಾ ದ ಮೂಲಕ [೨೮] ಕಾರ್ಯೋನ್ಮುಖಳಾಗಿದ್ದಾಳೆ. ಆಕೆಗೆ ಕರ್ಮವೀರ ಪುರಸ್ಕಾರ್ ಅವಾರ್ಡ್ (26 ನವೆಂಬರ್ 2008)ದೊರಕಿದೆ.ತಮ್ಮ ವೃತ್ತಿಪರತೆಯನ್ನು ಬಿಟ್ಟು ಸಮಾಜಸೇವೆಯಲ್ಲಿ ತೊಡಗಿಕೊಳ್ಳುವವರಿಗೆ ಈ ಪ್ರಶಸ್ತಿ [೨೯] ನೀಡಲಾಗುತ್ತದೆ.

ಪ್ರಶಸ್ತಿಗಳು[ಬದಲಾಯಿಸಿ]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಸಿನಿಮಾ ಪಾತ್ರ ಇತರೆ ಟಿಪ್ಪಣಿಗಳು
1992 ಬೇಖುದಿ ರಾಧಿಕಾ
1993 ಬಾಜಿಗರ್ Priya Chopra
(1994). ಉಧಾರ್ ಕಿ ಜಿಂದಗಿ ಸೀತೆ
ಯೆಹ್ ದಿಲ್ಲಗಿ ಸಪ್ನಾ ನಾಮನಿರ್ದೇಶಿತ, ಫಿಲ್ಮ್ ಫೇರ್ ಬೆಸ್ಟ್ ಅಕ್ಟ್ರೆಸ್ಸ್ ಅವಾರ್ಡ್
1995 ಕರಣ್‌ ಅರ್ಜುನ್‌ ಸೋನಿಯಾ ಸಕ್ಷೇನಾ
ತಾಕತ್ ಕವಿತಾ
ಹಲ್ ಚಲ್ ಶರ್ಮಿಲಿ
ಗುಂಡಾರಾಜ್ ರೀತು
ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿಮ್ರನ್ ಸಿಂಗ್ ಫಿಲ್ಮ್‌ಫೇರ್‌ನ ಉತ್ತಮ ನಟಿ ಪ್ರಶಸ್ತಿ (ವಿಮರ್ಶಾತ್ಮಕ) ವಿಜೇತೆ
1996 ಬಂಬಾಯಿ ಕಾ ಬಾಬು ನೇಹಾ
1997 Gupt: The Hidden Truth ಇಶಾ ದಿವಾನ್ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ,
ಹಮೇಶಾ ರಾನಿ ಶರ್ಮಾ/ರೇಶ್ಮಾ
ಮಿನ್ಸಾರಾ ಕಾನವು aj ಪ್ರಿಯಾ ಅಮಲ್ ರಾಜ್ ವಿನ್ನರ್ , ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಸೌತ್
ತಮಿಳು ಚಲನಚಿತ್ರ
Dubbed into ಹಿಂದಿ ಯಲ್ಲಿಸಪ್ನೇ
ಇಷ್ಕ್‌ ಕಾಜಲ್
1998 ಪ್ಯಾರ್‌ ಕಿಯಾ ತೊ ಡರ್ನಾ ಕ್ಯಾ ಮುಸ್ಕಾನ್ ಠಾಕೂರ್
ಡ್ಯುಪ್ಲಿಕೇಟ್‌ ವಿಶೇಷ ಪಾತ್ರ
ದುಶ್ಮನ್ l ಸೋನಿಯಾ/ನೆನಾ ಸೆಹಗಲ್ Nominated, Filmfare Best Actress Award
ಪ್ಯಾರ್ ತೊ ಹೋನಾ ಹಿ ಥಾ ಸಂಜನಾ Nominated, Filmfare Best Actress Award
ಕುಚ್‌ ಕುಚ್‌ ಹೋತಾ ಹೈ (1998) ಅಂಜಲಿ ಶರ್ಮಾ ಫಿಲ್ಮ್‌ಫೇರ್‌ನ ಉತ್ತಮ ನಟಿ ಪ್ರಶಸ್ತಿ (ವಿಮರ್ಶಾತ್ಮಕ) ವಿಜೇತೆ
1999 ದಿಲ್ ಕ್ಯಾ ಕರೆ ನಂದಿತಾ ರೈ
ಹಮ್ ಆಪಕೆ ದಿಲ್ ಮೆ ರೆಹತೆ ಹೈ ಮೇಘಾ Nominated, Filmfare Best Actress Award
ಹೋತೆ ಹೋತೆ ಪ್ಯಾರ್ ಹೊ ಗಯಾ ಪಿಂಕಿ
2000 ರಾಜು ಚಾಚಾ ಅನ್ನಾ
2001 ಕುಚ್ ಖಟ್ಟಿ ಕುಚ್ ಮೀಥಿ ಟೀನಾ/ಸ್ವೀಟಿ ಖನ್ನಾ ದ್ವಿಪಾತ್ರ
ಕಬೀ ಖುಷಿ ಕಬೀ ಗಮ್ Anjali Sharma Raichand ಫಿಲ್ಮ್‌ಫೇರ್‌ನ ಉತ್ತಮ ನಟಿ ಪ್ರಶಸ್ತಿ (ವಿಮರ್ಶಾತ್ಮಕ) ವಿಜೇತೆ
2003 ಕಲ್‌ ಹೋ ನಾ ಹೋ Special appearance in song Maahi Ve
2006 ಫನಾ ಜೂನಿ ಅಲಿ ಬೇಗ್ ಫಿಲ್ಮ್‌ಫೇರ್‌ನ ಉತ್ತಮ ನಟಿ ಪ್ರಶಸ್ತಿ (ವಿಮರ್ಶಾತ್ಮಕ) ವಿಜೇತೆ
ಕಭೀ ಅಲ್ವಿದ ನಾ ಕೆಹ್ನಾ Special appearance in song Rock N Roll Soniye
2007 ಓಂ ಶಾಂತಿ ಓಂ ಸ್ವತಹ ಆಕೆ ದೀವಾನಗೀ ದೀವಾನಗೀ ಹಾಡಿನಲ್ಲಿ ವಿಶೇಷ ಪಾತ್ರ
2008 ಯು, ಮೆ ಔರ್ ಹಮ್ ಪಿಯಾ Nominated, Filmfare Best Actress Award
ಹಾಲ್-ಎ-ದಿಲ್ Special appearance in song Oye Hoye
ರಬ್‌ ನೇ ಬನಾದಿ ಜೋಡೀ ಗೌರವ ನಟಿಯಾಗಿ ಹಾಡು ಫಿರ್ ಮೊಲೆಂಗೆ ಚಲ್ತೆ ಚಲ್ತೆ
2009 ವಿಗ್ನಹರ್ತಾ ಶ್ರೀ ಸಿದ್ದಿವಿನಾಯಕ ಸ್ವತಹ ಆಕೆ ಗೌರವ ನಟನೆ[೩೦]
2010 ಮೈ ನೇಮ್ ಈಸ್ ಖಾನ್ ಮಂದಿರಾ ಖಾನ್ ಬಿಡುಗಡೆ ಫೆರವರಿ 12, 2010
ಲೌ ಯು ಮಾ ಚಿತ್ರೀಕರಣಗೊಳ್ಳುತ್ತಿದೆ[60]
ತೂನ್ಪೂರ್ ಕಾ ಸೂಪರ್ ಹಿರೊ [೨೦][೨೦] ಬೇಸಿಗೆಯಲ್ಲಿ ಬಿಡುಗದೆ
ಲೈವ್ ಆಕ್ಷನ್ /ಎನಿಮೇಶನ್ ಫಿಲ್ಮ್
ಕೂಚಿ ಕೂಚಿ ಹೋತಾ ಹೈಂ ಆಂಗೀ ಕರ್ತರಿ/ಕರ್ಮಣಿ ಪ್ರಯೋಗದ ರೂಪ(ಕರ್ತೃವಿಗೂ ಕ್ರಿಯೆಗೂ ಸಂಬಂಧ ರೂಪಿಸುವ ಕ್ರಿಯಾರೂಪಗಳಲ್ಲಿ ಒಂದು)

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "Top Superstar Actresses". Retrieved 8 September 2007. {{cite web}}: Unknown parameter |dateformat= ignored (help)[ಶಾಶ್ವತವಾಗಿ ಮಡಿದ ಕೊಂಡಿ]
  2. Bollywood News Service (1 February 2008). "You, me aur Kajol". ದಿ ಹಿಂದೂ. Archived from the original on 2008-08-29. Retrieved 2009-05-30. {{cite web}}: Italic or bold markup not allowed in: |publisher= (help)
  3. Bollywood Hungama News Network (10 April 2008). "Kajol's father passed away". IndiaFM. Retrieved 2008-03-12.
  4. "Box Office 1993". BoxOfficeIndia.Com. Archived from the original on 2012-07-21. Retrieved 2007-01-12.
  5. "Box Office 1994". BoxOfficeIndia.Com. Archived from the original on 2013-01-07. Retrieved 2007-01-10.
  6. "Box Office 1995". BoxOfficeIndia.Com. Archived from the original on 2012-07-29. Retrieved 2007-01-12.
  7. "All Time Earners Inflation Adjusted (Figures in Ind Rs)". BoxOfficeIndia.com. Archived from the original on 2012-07-21. Retrieved 2008-01-12.
  8. "´DDLJ´ Enters The Twelfth Year At The Theaters!". planetbollywood.com. Retrieved 14 January 2007.
  9. "Box Office 1996". BoxOfficeIndia.Com. Archived from the original on 2012-07-21. Retrieved 2007-01-12.
  10. "Box Office 1996". BoxOfficeIndia.Com. Archived from the original on 2012-07-21. Retrieved 2007-01-12.
  11. ೧೧.೦ ೧೧.೧ ೧೧.೨ ೧೧.೩ "Box Office 1997". BoxOfficeIndia.Com. Archived from the original on 2012-01-11. Retrieved 2007-01-10.
  12. "Box Office 1998". BoxOfficeIndia.Com. Archived from the original on 2012-06-30. Retrieved 2007-01-10.
  13. "Overseas Earnings (Figures in Ind Rs)". BoxOfficeIndia.Com. Archived from the original on 2012-05-25. Retrieved 2008-01-10.
  14. "Box Office 1999". BoxOfficeIndia.Com. Archived from the original on 2012-07-13. Retrieved 2007-01-10.
  15. "Box Office 2000". BoxOfficeIndia.Com. Archived from the original on 2012-07-20. Retrieved 2007-01-10.
  16. "Box Office 2001". BoxOfficeIndia.Com. Archived from the original on 2012-06-29. Retrieved 2007-01-10.
  17. Adarsh, Taran (11 December 2001). "Kabhi Khushi Kabhie Gham review". indiaFM. Archived from the original on 2007-12-18. Retrieved 2007-12-03.
  18. "Box Office 2006". BoxOfficeIndia.Com. Archived from the original on 2012-05-25. Retrieved 2007-01-10.
  19. http://www.rediff.com/movies/2008/apr/11hum.htm
  20. ೨೦.೦ ೨೦.೧ ೨೦.೨ http://www.toonpur.com/
  21. http://www.bollywoodhungama.com/news/2009/11/02/13424/index.html
  22. "ಆರ್ಕೈವ್ ನಕಲು". Archived from the original on 2010-03-29. Retrieved 2010-03-09.
  23. http://www.bollywoodhungama.com/news/2006/04/12/6989/index.html
  24. "Malhotra gets his 'Freedom'!". Retrieved 2007-12-03.
  25. http://www.bollywoodhungama.com/features/2006/09/18/1581/index.html
  26. http://www.bollywoodhungama.com/features/2008/04/01/3730/index.html
  27. http://www.bollywoodhungama.com/features/2009/09/26/5529/index.html
  28. http://www.bollywoodhungama.com/news/2008/10/06/11990/index.html
  29. http://www.bollywoodhungama.com/news/2008/11/25/12233/index.html
  30. http://www.bollywoodhungama.com/movies/cast/14141/index.html

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾಜೊಲ್&oldid=1204785" ಇಂದ ಪಡೆಯಲ್ಪಟ್ಟಿದೆ