ವಿಷಯಕ್ಕೆ ಹೋಗು

ಸೋಂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಂಕ್ರಾಮಿಕ ರೋಗ
Classification and external resources
ಒಂದು ಹುಸಿ ವರ್ಣ ಇಲೆಕ್ಟ್ರಾನ್ ಸೂಕ್ಷ್ಮಚಿತ್ರ ಮಧ್ಯಅನ್ನನಾಳ ಎಪಿಥೀಲಿಯಮ್‍ಗಳ ಮೂಲಕ ವಲಸೆ ಹೋಗುತ್ತಿರುವ ಮಲೇರಿಯಾ ಬೀಜಕಜೀವಿಯಂಶವನ್ನು ತೋರಿಸುತ್ತದೆ.
ICD-10A00-B99
ICD-9001-139
MeSHD003141

ಸೋಂಕು ಎಂದರೆ ಒಂದು ಆಶ್ರಯದಾತ ಜೀವಿಯಲ್ಲಿ ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ತೀವ್ರ ಗಾಯಗಳು, ಕೋಥ, ರೋಗ ಅಂಟಿದ ಅವಯವದ ಕಳೆತ, ಮತ್ತು ಮರಣಕ್ಕೂ ಕಾರಣವಾಗಬಹುದು.

ಸಾಂಕ್ರಾಮಿಕ ರೋಗ ಎಂದರೆ ಜೀವಿಯಿಂದ ಜೀವಿಗೆ ಹರಡುವ ಅಥವಾ ಅಂಟುವ ಕಾಯಿಲೆ (ಇನ್‌ಫೆಕ್ಶಿಯಸ್ ಡಿಸೀಸ್). ಪರ್ಯಾಯ ಪದ ಸೋಂಕು ರೋಗ. ಇವುಗಳ ಸಂಖ್ಯೆಗೆ ಮಿತಿ ಇಲ್ಲ. ಪ್ರತಿಯೊಂದು ಅಂಟುಬೇನೆಗೂ ಕಾರಣ ಒಂದೊಂದು ಬಗೆಯ ಸೂಕ್ಷ್ಮ ಜೀವಿ. ಇವು ಜೀವಿಯ ದೇಹ ಸೇರಿ ಅಲ್ಲಿ ರೋಗಕಾರಕವಾಗುತ್ತವೆ. ದೇಹದೊಳಗೆ ರೋಗಾಣುಗಳನ್ನು ವೃದ್ಧಿಸಿ ಜೀವಿಯ ಸ್ವಾಸ್ಥ್ಯವನ್ನು ಭಂಗಗೊಳಿಸುತ್ತವೆ. ಮುಂದೆ ಅಲ್ಲಿಂದ ಇತರ ಜೀವಿಗಳಿಗೆ ತಾಕಿ ಅಲ್ಲೆಲ್ಲ ರೋಗಕಾರಕಗಳಾಗುತ್ತವೆ. ಈ ರೋಗಗಳ ವ್ಯಾಪ್ತಿ ಗಮನಿಸಿ ಇವನ್ನು ವರ್ಗೀಕರಿಸಬಹುದು:

  1. ಒಂದು ಊರಿನಲ್ಲಿ ಅಥವಾ ಪ್ರದೇಶದಲ್ಲಿ ದೀರ್ಘಕಾಲ ನೆಲೆನಿಂತಿರುವವು. ಇವುಗಳಿಗೆ ಸ್ಥಳಿಕ ರೋಗಗಳು (ಎಂಡೆಮಿಕ್ ಡಿಸೀಸಸ್) ಎಂದು ಹೆಸರು.[] ಉದಾಹರಣೆಗೆ ಟೈಫಾಯಿಡ್, ಅಮೀಬಿಯೋಸಿಸ್, ಅತಿಬಾವು ರೋಗ, ಆಮಶಂಕೆ, ಕ್ಷಯರೋಗ ಮುಂತಾದವು.
  2. ವಿಸ್ತಾರ ಪ್ರದೇಶಗಳಲ್ಲಿ ಅಲ್ಪಕಾಲ ಹರಡಿರುವಂಥವು. ಇವು ಪಿಡುಗುಗಳು (ಎಪಿಡೆಮಿಕ್ ಡಿಸೀಸಸ್). ಉದಾಹರಣೆಗೆ ಕಾಮಾಲೆ, ಪೋಲಿಯೊ, ಪ್ಲೇಗ್ ಮುಂತಾದವು.
  3. ಅಲ್ಪಕಾಲದಲ್ಲಿ ಪ್ರಪಂಚಾದ್ಯಂತ ಹಬ್ಬುವಂಥವು. ಇವು ಖಂಡಾಂತರ ಪಿಡುಗುಗಳು (ಪ್ಯಾಂಡೆಮಿಕ್ ಡಿಸೀಸಸ್). ಉದಾಹರಣೆಗೆ ಇನ್‌ಫ್ಲುಯೆಂಝ, ಕಾಲರಾ, ಕೋಳಿಜ್ವರ ಮುಂತಾದವು.
  4. ಅಕಸ್ಮಾತ್ತಾಗಿ ಬೇರೆಡೆಗಳಿಂದ ಆಮದಾಗಿ ಬರುವಂಥವು. ಇವು ಕೆಲವೇ ಮಂದಿಯನ್ನು ಅಲ್ಪಕಾಲ ಬಾಧಿಸಿ ಮಾಯವಾಗುತ್ತವೆ. ಇವುಗಳಿಗೆ ವಿದೇಶಜ ಅಥವಾ ವಿದೇಶಾಗತ ರೋಗಗಳೆಂದು (ಎಕ್ಸೋಟಿಕ್ ಡಿಸೀಸಸ್) ಹೆಸರು.

ರೋಗ ಪ್ರಸಾರ ವಿಧಾನ ಆಧರಿಸಿ ಸಾಂಕ್ರಾಮಿಕ ರೋಗಗಳನ್ನು ವಿಂಗಡಿಸುವುದುಂಟು.[] ಉದಾಹರಣೆಗೆ ಪ್ರಾಣಿಮೂಲ ರೋಗಗಳು. ಇವು ಮನುಷ್ಯರನ್ನು ಪೀಡಿಸಬಹುದು. ಇವು ಪ್ರಾಣಿ ಅಥವಾ ಪ್ರಾಣಿಮೂಲ ರೋಗಗಳು (ಝೂನೋಟಿಕ್ ಡಿಸೀಸಸ್). ಉದಾಹರಣೆಗೆ ಹುಚ್ಚುನಾಯಿ ಕಡಿತ ರೋಗ (ರೇಬಿಸ್), ನೆರಡಿ (ಆಂತ್ರ್ಯಾಕ್ಸ್), ನಾರುಹುಳು ಬೇನೆ (ಬ್ರುಸೆಲ್ಲಾ) ಇತ್ಯಾದಿ.

ಸಾಂಕ್ರಾಮಿಕ ರೋಗಗಳ ಪ್ರಸಾರದಲ್ಲಿ ರೋಗಾಣುವಾಹಕಗಳ ಪಾತ್ರ ಬಲು ದೊಡ್ಡದು. ಇವು ಮನುಷ್ಯ ಅಥವಾ ಇತರ ಜೀವಿಗಳಾಗಿರಬಹುದು. ಅಂತೆಯೇ ಪ್ರಸಾರವರ್ಗಗಳೂ ವಿಭಿನ್ನ: ನೀರು, ಹಾಲು, ಆಹಾರ, ರಕ್ತ, ಹವೆ, ಸಂಪರ್ಕ ಮುಂತಾದವು.

ಉಲ್ಲೇಖಗಳು

[ಬದಲಾಯಿಸಿ]
  1. "Principles of Epidemiology in Public Health Practice, Third Edition An Introduction to Applied Epidemiology and Biostatistics". Centers for Disease Control and Prevention. Retrieved April 19, 2018.
  2. Riley LW (July 2019). "Differentiating Epidemic from Endemic or Sporadic Infectious Disease Occurrence". Microbiology Spectrum. 7 (4). doi:10.1128/microbiolspec.AME-0007-2019. PMID 31325286. S2CID 198135563.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸೋಂಕು&oldid=1206167" ಇಂದ ಪಡೆಯಲ್ಪಟ್ಟಿದೆ