ವಿಷಯಕ್ಕೆ ಹೋಗು

ಸಂಖ್ಯಾಭವಿಷ್ಯಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಖ್ಯಾಭವಿಷ್ಯಶಾಸ್ತ್ರ ವು ಸಂಖ್ಯೆಗಳು ಮತ್ತು ಭೌತಿಕ ವಸ್ತುಗಳ ಅಥವಾ ಜೀವಿಗಳ ನಡುವಿನ ಅತೀಂದ್ರಿಯ ಅಥವಾ ಗೂಡಾರ್ಥದ ಸಂಬಂಧವೊಂದರಲ್ಲಿನ ಅನೇಕ ಪದ್ಧತಿಗಳು, ಸಂಪ್ರದಾಯಗಳು ಅಥವಾ ನಂಬಿಕೆಗಳ ಪೈಕಿ ಒಂದಾಗಿದೆ.

Pietro Bongo, Numerorum mysteria, 1591


ಸಂಖ್ಯಾಭವಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರೀಯ ಭವಿಷ್ಯಜ್ಞಾನವು ಪೈಥಾಗರಸ್‌‌ನಂತಹ ಆರಂಭಿಕ ಗಣಿತಶಾಸ್ತ್ರಜ್ಞರಲ್ಲಿ ಬಹು ಜನಪ್ರಿಯವಾಗಿತ್ತು. ಆದರೆ ಇದನ್ನು ಗಣಿತಶಾಸ್ತ್ರದ ಒಂದು ಭಾಗ ಎಂದು ಪರಿಗಣಿಸಲಿಲ್ಲ ಮತ್ತು ಆಧುನಿಕ ವಿಜ್ಞಾನಿಗಳು ಇದನ್ನು ಹುಸಿ ಗಣಿತಶಾಸ್ತ್ರ ಎಂದು ಕರೆದಿದ್ದಾರೆ.[][] ಇದು ಜ್ಯೋತಿಶ್ಯಾಸ್ತ್ರ ಮತ್ತು ಖಗೋಳ ವಿಜ್ಞಾನದ ನಡುವಿನ, ಹಾಗೂ ರಸವಿದ್ಯೆ ಮತ್ತು ರಸಾಯನ ಶಾಸ್ತ್ರದ ನಡುವಿನ ಐತಿಹಾಸಿಕ ಸಂಬಂಧಗಳಂತಿರುತ್ತದೆ.

ಜ್ಯೋತಿಶ್ಯಾಸ್ತ್ರ ಮತ್ತು ಇದೇ ತೆರನಾದ ಭವಿಷ್ಯಜ್ಞಾನದ ಕಲೆಗಳ ಜೊತೆಜೊತೆಗೆ, ಸಂಖ್ಯಾಭವಿಷ್ಯಶಾಸ್ತ್ರವು ಅತೀಂದ್ರಿಯ ವಿದ್ಯೆಯೊಂದಿಗೆ ಇಂದು ಹೆಚ್ಚಿನ ಸಂಬಂಧವನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]

ಕೆಲವೊಂದು ವೀಕ್ಷಕರ ಅವಲೋಕನದ ದೃಷ್ಟಿಯಲ್ಲಿ ಹೇಳುವುದಾದರೆ, ಸಾಂಪ್ರದಾಯಿಕ ಸಂಖ್ಯಾಭವಿಷ್ಯಶಾಸ್ತ್ರವನ್ನು ಅಭ್ಯಾಸ ಮಾಡದಿದ್ದರೂ ಸಂಖ್ಯಾತ್ಮಕ ಮಾದರಿಗಳಲ್ಲಿ ಅತೀವ ನಂಬಿಕೆಯನ್ನು ಇರಿಸುವವರಿಗೂ ಸಹ ಈ ಪದವನ್ನು ಬಳಸಬಹುದು. ಉದಾಹರಣೆಗೆ, ಅಂಡರ್‌ವುಡ್ ಡ್ಯೂಡ್ಲಿ ಎಂಬ ಗಣಿತಜ್ಞ 1997ರಲ್ಲಿ ಬಂದ ನ್ಯೂಮರಾಲಜಿ: ಆರ್ ವಾಟ್ ಪೈಥಾಗರಸ್‌ ರಾಟ್‌ ‌‌ ಎಂಬ ತನ್ನ ಪುಸ್ತಕದಲ್ಲಿ ಷೇರು ಮಾರುಕಟ್ಟೆ ವಿಶ್ಲೇಷಣೆಯ ಎಲಿಯಟ್ ತರಂಗ ಸಿದ್ಧಾಂತದ (ಎಲಿಯಟ್ ವೇವ್ ಪ್ರಿನ್ಸಿಪಲ್) ವೃತ್ತಿಗಾರರ ಕುರಿತು ಚರ್ಚಿಸುವಾಗ ಈ ಪದವನ್ನು ಬಳಸುತ್ತಾನೆ.

ಇತಿಹಾಸ

[ಬದಲಾಯಿಸಿ]

ಆಧುನಿಕ ಸಂಖ್ಯಾಭವಿಷ್ಯಶಾಸ್ತ್ರವು ಬ್ಯಾಬಿಲೋನಿಯ, ಪೈಥಾಗರಸ್‌ ಮತ್ತು ಅವನ ಶಿಷ್ಯರು (ಗ್ರೀಸ್, 6ನೇ ಶತಮಾನ B.C.), ಅಲೆಕ್ಸಾಂಡರನ ಕಾಲದ ನಂತರದ ಅಲೆಕ್ಸಾಂಡ್ರಿಯಾದಿಂದ ಬಂದ ಜ್ಯೋತಿಶ್ಯಾಸ್ತ್ರೀಯ ತತ್ವಶಾಸ್ತ್ರ, ಆರಂಭಿಕ ಕ್ರೈಸ್ತರ ಅತೀಂದ್ರಿಯಜ್ಞಾನ, ಆರಂಭದ ನಾಸ್ಟಿಕ್ ಪಂಥದ ನಿಗೂಢ ಜ್ಞಾನ, ಕಬ್ಬಾಲಾ‌ದ ಗಹನವಾದ ಭಾಷಾ ವ್ಯವಸ್ಥೆ, ಭಾರತದ ವೇದಗಳು, ಚೀನಾದ "ಸರ್ಕಲ್ ಆಫ್ ದ ಡೆಡ್" ಹಾಗೂ ಈಜಿಪ್ಟಿನ "ಬುಕ್ ಆಫ್ ದ ಮಾಸ್ಟರ್ ಆಫ್ ದ ಸೀಕ್ರೆಟ್ ಹೌಸ್" (ರಿಚುಯಲ್ ಆಫ್ ದ ಡೆಡ್)- ಇವೇ ಮೊದಲಾದ ವಿವಿಧ ರೀತಿಯ ಪುರಾತನ ಸಂಸ್ಕೃತಿಗಳು ಮತ್ತು ಬೋಧಕರ ವೈವಿಧ್ಯಮಯ ದೃಷ್ಟಿಕೋನಗಳನ್ನು ಒಳಗೊಂಡಿದೆ.

ಗಣಿತಶಾಸ್ತ್ರೀಯ ಪರಿಕಲ್ಪನೆಗಳು ಭೌತಶಾಸ್ತ್ರಕ್ಕಿಂತ ಹೆಚ್ಚು "ಪ್ರಾಯೋಗಿಕ"ವಾದ್ದರಿಂದ (ನಿಯಂತ್ರಿಸಲು ಮತ್ತು ವರ್ಗೀಕರಿಸಲು ಸುಲಭವಾದ್ದರಿಂದ), ಅವು ಹೆಚ್ಚು ವಾಸ್ತವತೆಯನ್ನು ಹೊಂದಿವೆ ಎಂದು ಪೈಥಾಗರಸ್‌ ಮತ್ತು ಆ ಕಾಲದ ಇತರ ತತ್ವಜ್ಞಾನಿಗಳು ನಂಬಿದ್ದರು.

ಹಿಪ್ಪೋದ ಸೇಂಟ್ ಆಗಸ್ಟಿನ್ (354–430 A.D.) ಎಂಬಾತ, "ಸಂಖ್ಯೆಗಳು ಸತ್ಯದ ದೃಢೀಕರಣದ ರೂಪದಲ್ಲಿ ಸೃಷ್ಟಿಕರ್ತನು ಮಾನವರಿಗೆ ನೀಡಿರುವ ಸಾರ್ವತ್ರಿಕ ಭಾಷೆಯಾಗಿದೆ" ಎಂದು ಬರೆದಿದ್ದಾನೆ. ಪೈಥಾಗರಸ್‌ನಂತೆ ಈತನೂ ಸಹ ಪ್ರತಿಯೊಂದೂ ಸಂಖ್ಯಾಶಾಸ್ತ್ರೀಯ ಸಂಬಂಧಗಳನ್ನು ಹೊಂದಿವೆ ಎಂದು ನಂಬಿದ್ದ. ಈ ಸಂಬಂಧಗಳ ರಹಸ್ಯಗಳನ್ನು ಹುಡುಕುವುದು ಮತ್ತು ಪರೀಕ್ಷಿಸುವುದು ಅಥವಾ ದೈವಾನುಗ್ರಹದಿಂದ ಗೋಚರವಾದಂತೆ ಅವುಗಳನ್ನು ಪಡೆಯುವುದು ಮನಸ್ಸಿಗೆ ಬಿಟ್ಟ ವಿಚಾರ ಎಂಬುದು ಈತನ ನಂಬಿಕೆಯಾಗಿತ್ತು. ಆರಂಭಿಕ ಕ್ರೈಸ್ತಪಂಥದ ದೃಷ್ಟಿಕೋನಗಳಿಗಾಗಿ ನ್ಯೂಮರಾಲಜಿ ಅಂಡ್‌ ಚರ್ಚ್ ಫಾದರ್ಸ್‌ ನೋಡಿ.

ನೈಕೆಯ ಮೊದಲ ಸಮಾಲೋಚನ ಸಭೆಯ ನಂತರ 325 A.D.ಯಲ್ಲಿ ಬಂದ ಸ್ಥಳೀಯ ಚರ್ಚ್‌ನ ನಂಬಿಕೆಗಳಿಂದ ಬಂದ ಮಾರ್ಗಬದಲಿಕೆಗಳು ಅಥವಾ ಅನುಸರಣೆಗಳು ರೋಮನ್ ಸಾಮ್ರಾಜ್ಯದೊಳಗೆ ನಾಗರಿಕ ಉಲ್ಲಂಘನೆಗಳು ಎಂದು ವರ್ಗೀಕರಿಸಲ್ಪಟ್ಟವು. ಸಂಖ್ಯಾಭವಿಷ್ಯಶಾಸ್ತ್ರವು ಅಂದಿನ ಕ್ರೈಸ್ತ ಸಮುದಾಯದ ಮೆಚ್ಚುಗೆಯನ್ನು ಪಡೆಯಲಿಲ್ಲ, ಹಾಗೂ ಜ್ಯೋತಿಶ್ಯಾಸ್ತ್ರ ಮತ್ತು ಭವಿಷ್ಯಜ್ಞಾನ ಹಾಗೂ "ಮಂತ್ರ ವಿದ್ಯೆ"ಗಳೊಂದಿಗೆ ಇದನ್ನೂ ಅನುಮತಿಸದ ನಂಬಿಕೆಗಳ ಕ್ಷೇತ್ರಕ್ಕೆ ಸೇರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಈ ರೀತಿಯ ಧಾರ್ಮಿಕ ಬಹಿಷ್ಕಾರದ ಹೊರತಾಗಿಯೂ, ಇದುವರೆಗೂ "ಪವಿತ್ರ" ಸಂಖ್ಯೆಗಳೆಂದು ಪರಿಗಣಿಸಲ್ಪಟ್ಟಿರುವ ಸಂಖ್ಯೆಗಳಿಗೆ ನೀಡಲಾಗಿರುವ ಆಧ್ಯಾತ್ಮಿಕ ಪ್ರಾಮುಖ್ಯತೆಯು ಮರೆಯಾಗಿಲ್ಲ; "ಜೀಸಸ್ ಸಂಖ್ಯೆ"ಯಂಥ ಹಲವಾರು ಸಂಖ್ಯೆಗಳು ಗಾಝಾದ ದೊರೊಥಿಯಸ್‌ನಿಂದ ವ್ಯಾಖ್ಯಾನಿಸಲ್ಪಟ್ಟಿವೆ ಮತ್ತು ವಿಶ್ಲೇಷಿಸಲ್ಪಟ್ಟಿವೆ, ಹಾಗೂ ಸಂಖ್ಯಾಭವಿಷ್ಯಶಾಸ್ತ್ರವು ಕಡೇಪಕ್ಷ ಬಿಗಿಹಿಡಿತದ ಗ್ರೀಕ್ ಸಂಪ್ರದಾಯಶೀಲ ವಲಯಗಳಲ್ಲಷ್ಟೇ[][] ಅಲ್ಲದೇ ಇನ್ನೂ ಅನೇಕ ವಲಯಗಳಲ್ಲಿ ಇನ್ನೂ ಬಳಸಲ್ಪಡುತ್ತಿದೆ[೧].

ಇಂಗ್ಲಿಷ್ ಸಾಹಿತ್ಯದಲ್ಲಿನ ಸಂಖ್ಯಾಭವಿಷ್ಯಶಾಸ್ತ್ರದ ಪ್ರಭಾವದ ಒಂದು ಆರಂಭಿಕ ಉದಾಹರಣೆಯನ್ನು - 1658ರಲ್ಲಿ ಬಂದ ಥೋಮಸ್ ಬ್ರೌನೆದ ಗಾರ್ಡನ್ ಆಫ್ ಸೈರಸ್ ಎಂಬ ಪ್ರೌಢಪ್ರಬಂಧದಲ್ಲಿ ಕಾಣಬಹುದು. ಇದರಲ್ಲಿ ಲೇಖಕ, ಸಂಖ್ಯೆ ಐದು ಮತ್ತು ಸಂಬಂಧಿತ ಪಂಚಕ ಮಾದರಿಯು ಕಲೆಗಳಾದ್ಯಂತ, ವಿನ್ಯಾಸದಲ್ಲಿ, ಮತ್ತು ನಿಸರ್ಗದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಸಸ್ಯಶಾಸ್ತ್ರದಲ್ಲಿ ಕಂಡುಬರುತ್ತವೆ ಎಂಬುದನ್ನು ಪ್ರಮಾಣೀಕರಿಸಲು ಪೈಥಾಗರಸ್‌ನ ಸಂಖ್ಯಾಭವಿಷ್ಯಶಾಸ್ತ್ರದಲ್ಲಿ ವಿಚಿತ್ರವಾಗಿ ತೊಡಗಿಸಿಕೊಂಡಿದ್ದಾನೆ.

ಆಧುನಿಕ ಸಂಖ್ಯಾಭವಿಷ್ಯಶಾಸ್ತ್ರವು ಹಲವಾರು ಪೂರ್ವಚರಿತ್ರೆಗಳನ್ನು ಹೊಂದಿದೆ. ರುತ್ ಎ. ಡ್ರೇಯರ್‌ನ ನ್ಯೂಮರಾಲಜಿ, ದ ಪವರ್ ಇನ್ ನಂಬರ್ಸ್ (ಸ್ಕ್ವೇರ್ ಒನ್ ಪಬ್ಲಿಷರ್ಸ್) ಎಂಬ ಪುಸ್ತಕವು ತಿಳಿಸುವ ಪ್ರಕಾರ, ಶತಮಾನದ (1800ರಿಂದ 1900 A.Dವರೆಗೆ) ಬದಲಾವಣೆಯ ಸುಮಾರಿಗೆ, ಶ್ರೀಮತಿ ಎಲ್‌. ಡೌ ಬ್ಯಾಲ್ಲಿಯೆಟ್ ಎಂಬಾಕೆ ಪೈಥಾಗರಸ್‌‌ನ ಕಾರ್ಯವನ್ನು ಬೈಬಲಿನ ಉಲ್ಲೇಖದೊಂದಿಗೆ ಸಂಯೋಜಿಸಿದ್ದಾರೆ. 1972ರ ಅಕ್ಟೋಬರ್ 23ರಲ್ಲಿ ಬ್ಯಾಲ್ಲಿಯೆಟ್‌‌ರ ವಿದ್ಯಾರ್ಥಿಯಾದ ಡಾ. ಜುನೊ ಜೋರ್ಡನ್ ಎಂಬಾತ ಸಂಖ್ಯಾಭವಿಷ್ಯಶಾಸ್ತ್ರವನ್ನು ಇನ್ನಷ್ಟು ಬದಲಾಯಿಸಿ, ಇಂದು "ಪೈಥಾಗರಸ್‌ ಕ್ರಮ" ಎಂಬ ಶೀರ್ಷಿಕೆಯಡಿಯಲ್ಲಿ ಹೆಸರುವಾಸಿಯಾಗಿರುವ ಪದ್ಧತಿಯಾಗಿ ಮಾರ್ಪಡುವಲ್ಲಿ ನೆರವಾದ.

ವಿಧಾನಗಳು

[ಬದಲಾಯಿಸಿ]

ಸಂಖ್ಯಾ ಅರ್ಥನಿರೂಪಣೆಗಳು

[ಬದಲಾಯಿಸಿ]

ನಿರ್ದಿಷ್ಟ ಅಂಕಿಗಳ ಅರ್ಥವನ್ನು ತಿಳಿಸಲು ಯಾವುದೇ ಸ್ಪಷ್ಟ ನಿರೂಪಣೆಗಳಿಲ್ಲ. ಸಾಮಾನ್ಯ ಉದಾಹರಣೆಗಳಲ್ಲಿ ಇವು ಸೇರಿವೆ:[]

0. ಸರ್ವಸ್ವ ಅಥವಾ ಪರಮಸ್ಥಿತಿ. ಸಮಸ್ತ
1. ವೈಯಕ್ತಿಕ. ಆಕ್ರಮಣಕಾರ. ಪುರುಷತತ್ವ.
2. ಸಮಸ್ಥಿತಿ. ಸಂಯೋಗ. ಶೀಘ್ರಗ್ರಾಹಿ. ಸ್ತ್ರೀತತ್ವ.
3. ಸಂವಹನ/ಪ್ರಭಾವ. ತಟಸ್ಥನೀತಿ.
4. ಸೃಷ್ಟಿ
5. ಕ್ರಿಯೆ. ಅವಿಶ್ರಾಂತಿ.
6. ಪ್ರತಿಕ್ರಿಯೆ/ನಿರಂತರ ಚಲನೆ. ಹೊಣೆಗಾರಿಕೆ.
7. ಚಿಂತನೆ/ಜಾಗೃತಿ.
8. ಶಕ್ತಿ/ತ್ಯಾಗ.
9. ಹೆಚ್ಚಿನ ಪ್ರಮಾಣದ ಬದಲಾವಣೆ.
10. ಮರುಹುಟ್ಟು.

ವರ್ಣಮಾಲೆಯ ಪದ್ಧತಿಗಳು

[ಬದಲಾಯಿಸಿ]

ವರ್ಣಮಾಲೆಯಯೊಂದರ ಅಕ್ಷರಗಳಿಗೆ ಸಂಖ್ಯಾತ್ಮಕ ಮೌಲ್ಯಗಳನ್ನು ನಿಗದಿ ಮಾಡುವ ಅನೇಕ ಸಂಖ್ಯಾಭವಿಷ್ಯಶಾಸ್ತ್ರ ಪದ್ಧತಿಗಳಿವೆ. ಉದಾಹರಣೆಗಳಲ್ಲಿ ಅರೇಬಿಕ್‌ನಲ್ಲಿನ ಅಬ್ಜದ್ ಅಂಕಿಗಳು, ಯೆಹೂದಿ ಅಂಕಿಗಳು, ಅರ್ಮೇನಿಯಾದ ಅಂಕಿಗಳು, ಮತ್ತು ಗ್ರೀಕ್ ಅಂಕಿಗಳು ಸೇರಿವೆ. ಅಕ್ಷರಗಳ ಸಂಖ್ಯಾತ್ಮಕ ಮೌಲ್ಯಗಳು, ಹಾಗೂ ಒಂದೇ ರೀತಿಯ ಮೌಲ್ಯವನ್ನು ಹೊಂದಿರುವ ಅಕ್ಷರಗಳ ನಡುವಿನ ಸಂಬಂಧಗಳ ಆಧಾರದ ಮೇಲೆ ಅವುಗಳಿಗೆ ಅತೀಂದ್ರಿಯ ಅರ್ಥವನ್ನು ನಿಗದಿಪಡಿಸುವ ಯೆಹೂದಿ ಸಂಪ್ರದಾಯದಲ್ಲಿರುವ ಅಭ್ಯಾಸವನ್ನು ಜೆಮೆಟ್ರಿಯಾ ಎನ್ನುತ್ತಾರೆ.

1= a, j, s; 2= b, k, t; 3= c, l, u; 4= d, m, v; 5= e, n, w; 6= f, o, x; 7= g, p, y; 8= h, q, z; 9= i, r

...ನಂತರ ಇವುಗಳನ್ನು ಕೂಡಿಸಲಾಗುತ್ತದೆ.

ಉದಾಹರಣೆಗಳು:

  • 3,489 → 3 + 4 + 8 + 9 = 24 → 2 + 4 = 6
  • Hello → 8 + 5 + 3 + 3 + 6 = 25 → 2 + 5 = 7

ಏಕ-ಅಂಕಿಯ "ಸಂಕಲನ" ಮಾಡುವ ಒಂದು ಕ್ಷಿಪ್ರವಿಧಾನವೆಂದರೆ, ಮೌಲ್ಯದ ಮೂಲಮಾನವಾದ 9ನ್ನು ತೆಗೆದುಕೊಳ್ಳುವುದು, ಇದು 0ಯ ಬದಲಿಗೆ 9ನ್ನೇ ಉತ್ತರವಾಗಿ ನೀಡುತ್ತದೆ.

ಲೆಕ್ಕ ಮಾಡುವಲ್ಲಿ ಅನೇಕ ವಿಧಾನಗಳಿವೆ. ಅವುಗಳೆಂದರೆ, ಪ್ರಾಚೀನ ಕ್ಯಾಲ್ಡಿಯಾದ ಕ್ರಮ, ಪೈಥಾಗರಸ್ ಕ್ರಮ, ಯೆಹೂದ್ಯರ ಕ್ರಮ, ಹೆಲಿನ್ ಹಿಚ್‌ಕೋಕ್‌ನ ವಿಧಾನ, ಧ್ವನಿವಿಜ್ಞಾನ ವಿಧಾನ, ಜಪಾನೀಯರ ಕ್ರಮ, ಅರೇಬಿಕ್ ವಿಧಾನ ಮತ್ತು ಭಾರತೀಯ ವಿಧಾನ.

ದಶಮಾಂಶ (ಆಧಾರ ಸಂಖ್ಯೆ 10) ಗಣಿತದ ಪದ್ಧತಿಯನ್ನು ಬಳಸಿ ಮೇಲಿನ ಉದಾಹರಣೆಗಳನ್ನು ಲೆಕ್ಕಹಾಕಲಾಗಿದೆ. ಇತರ ಸಂಖ್ಯಾ ಪದ್ಧತಿಗಳೂ ಅಸ್ತಿತ್ವದಲ್ಲಿವೆ. ಅವೆಂದರೆ, ದ್ವಿಮಾನ, ಅಷ್ಟಮಾನ, ಷೋಡಶಮಾನ (ಹೆಕ್ಸಾಡೆಸಿಮಲ್) ಮತ್ತು ಇಪ್ಪತ್ತನೇ ಒಂದರ ಕ್ರಮ (ವಿಗೆಸಿಮಲ್); ಈ ಆಧಾರಗಳಲ್ಲಿ ಅಂಕಿಗಳನ್ನು ಕೂಡಿಸುವುದರಿಂದ ಬೇರೆ ಬೇರೆ ಉತ್ತರಗಳು ಬರುತ್ತವೆ. ಮೇಲೆ ತೋರಿಸಿದ ಮೊದಲ ಉದಾಹರಣೆಯನ್ನು ಅಷ್ಟಮಾನ ಪದ್ಧತಿಯಲ್ಲಿ (ಆಧಾರ ಸಂಖ್ಯೆ 8) ಮಾಡಿದರೆ, ಅದು ಈ ಕೆಳಗಿನಂತಿರುತ್ತದೆ:

  • 3,48910 = 66418 → 6 + 6 + 4 + 1 = 218 → 2 + 1 = 38 = 310

ಪೈಥಾಗರಸ್ ಪದ್ಧತಿ

[ಬದಲಾಯಿಸಿ]

ಸಂಖ್ಯಾಭವಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ ಭವಿಷ್ಯ ಹೇಳುವ ವಿಧಾನವೊಂದರಲ್ಲಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಪ್ರವೃತ್ತಿಗಳನ್ನು ವಿಶ್ಲೇಷಿಸಲು ಹಾಗೂ ವ್ಯಾಖ್ಯಾನಿಸಲು ಅವನ ಹೆಸರು ಮತ್ತು ಜನ್ಮದಿನಾಕವನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿ ತತ್ವಜ್ಞಾನಿ ಪೈಥಾಗರಸ್‌‌ನಿಂದ ಕಾರ್ಯರೂಪಕ್ಕೆ ತರಲ್ಪಟ್ಟ ಪದ್ಧತಿಯೊಂದನ್ನು ಆಧರಿಸಲಾಗುತ್ತದೆ.[][]

ಚೀನಿಯರ ಸಂಖ್ಯಾಭವಿಷ್ಯಶಾಸ್ತ್ರ

[ಬದಲಾಯಿಸಿ]

ಚೀನಾದ ಕೆಲವರು ಸಂಖ್ಯೆಗಳಿಗೆ ವಿವಿಧ ರೀತಿಯ ಅರ್ಥಗಳನ್ನು ನಿಗದಿಪಡಿಸಿದ್ದಾರೆ ಹಾಗೂ ಸಂಖ್ಯೆಯ ನಿರ್ದಿಷ್ಟ ಸಂಯೋಜನೆಗಳು ಇತರವುಗಳಿಗಿಂತ ಹೆಚ್ಚು ಅದೃಷ್ಟಶಾಲಿಯಾಗಿರುತ್ತವೆ ಎಂದು ಪರಿಗಣಿಸಲ್ಪಟ್ಟಿವೆ. ಉತ್ತಮ ಅದೃಷ್ಟವು ಜೋಡಿಗಳಲ್ಲಿ ಬರುತ್ತವೆ ಎಂಬ ನಂಬಿಕೆ ಇರುವುದರಿಂದ, ಸಮ ಸಂಖ್ಯೆಗಳನ್ನು ಸರ್ವೇಸಾಮಾನ್ಯವಾಗಿ ಅದೃಷ್ಟ ಸಂಖ್ಯೆಗಳೆಂದು ನಂಬಲಾಗಿದೆ.

ಚೀನಿಯರ ಸಂಖ್ಯಾ ವ್ಯಾಖ್ಯಾನಗಳು

[ಬದಲಾಯಿಸಿ]

ಚೀನಾದ ಕ್ಯಾಂಟನ್ ನಗರದ ನಿವಾಸಿ ಈ ಕೆಳಗಿನ ಅರ್ಥನಿರೂಪಣೆಗಳನ್ನು ನೀಡಿದ್ದಾನೆ, ಅವು ಚೀನಾದ ಇತರ ಭಾಷೆಗಳಲ್ಲಿ ಭಿನ್ನವಾಗಿರಬಹುದು:

  1. (yi)  — ಖಂಡಿತ
  2. (er)  — ಸುಲಭ (易/yi)
  3. (san)  — ಜೀವನ (生/saang)
  4. (si)  — 4ರ ಉಚ್ಚಾರಣೆಯು ಸಾವು ಅಥವಾ ನೋವು (死/sei) ಎಂಬುದಕ್ಕಿರುವ ಪದದೊಂದಿಗಿನ ಒಂದು ಸಮಾನ ರೂಪದ ಪದವಾಗಿರುವುದರಿಂದ ಇದನ್ನು ಅದೃಷ್ಟಹೀನ ಸಂಖ್ಯೆ ಎನ್ನುತ್ತಾರೆ.
  5. (wu)  — ಸ್ವಯಂ, ನನಗೆ, ನಾನೇ (吾/ng), ಏನೂ ಇಲ್ಲ, ಎಂದೆಂದಿಗೂ ಇಲ್ಲ (唔/ng, m)
  6. (liu)  — ಸುಲಭ ಮತ್ತು ಸರಳ, ಎಲ್ಲಾ ವಿಧದಲ್ಲೂ
  7. (qi)  — ಕ್ಯಾಂಟನ್ ಪ್ರದೇಶದ ಉಪಭಾಷೆಯಲ್ಲಿನ ಒಂದು ಅಶಿಷ್ಟ/ಅಶ್ಲೀಲ ಪದ.
  8. (ba)  — ಹಠಾತ್ ಭಾಗ್ಯ, ಏಳಿಗೆ
  9. (jiu) — ದೀರ್ಘಕಾಲ (久/gau), ಕ್ಯಾಂಟನ್ ಪ್ರದೇಶದ ಉಪಭಾಷೆಯಲ್ಲಿನ ಅಶಿಷ್ಟ/ಅಶ್ಲೀಲ ಪದ

ಅದೃಷ್ಟಸಂಖ್ಯೆಯ ಕೆಲವೊಂದು ಸಂಯೋಜನೆಗಳಲ್ಲಿ ಇವು ಸೇರಿವೆ:

  • 99 — ದುಪ್ಪಟ್ಟು ದೀರ್ಘಕಾಲ, ಹಾಗಾಗಿ ಚಿರಂತನ; ಪ್ರಖ್ಯಾತ ಚೀನಾ-ಅಮೆರಿಕಾದ ಸೂಪರ್‌ಮಾರುಕಟ್ಟೆ ಸರಣಿಯಾದ 99 ರ‌್ಯಾಂಚ್ ಮಾರ್ಕೆಟ್‌‌ ಹೆಸರಿನಲ್ಲಿ ಇದನ್ನು ಬಳಸಲಾಗಿದೆ.
  • 168 — ಏಳಿಗೆಗೆ ಅಥವಾ ಉಚ್ಛ್ರಾಯಸ್ಥಿತಿಯಲ್ಲಿರುವುದರ ದಾರಿ, ಅಕ್ಷರಶಃ ಭಾಷಾಂತರಿಸಿ ಹೇಳುವುದಾದರೆ "ಶ್ರೀಮಂತರಾಗಿ ಮುಂದುವರಿಯುವುದು"— ಚೀನಾದಲ್ಲಿನ ಅನೇಕ ಅಧಿಕಮೌಲ್ಯ-ಪಾವತಿಯ ದೂರವಾಣಿ ಸಂಖ್ಯೆಗಳು ಈ ಸಂಖ್ಯೆಯೊಂದಿಗೆ ಆರಂಭವಾಗುತ್ತವೆ. ಇದು ಚೀನಾದಲ್ಲಿನ ಒಂದು ಮೋಟೆಲ್‌ ಸರಣಿಯ ಹೆಸರು ಕೂಡಾ ಆಗಿದೆ (ಮೋಟೆಲ್ 168).
  • 518 — ನಾನು ಏಳಿಗೆ ಹೊಂದುತ್ತೇನೆ, ಇತರ ಮಾರ್ಪಾಡುಗಳು ಹೀಗಿವೆ: 5189 (ನಾನು ಒಂದು ಸುದೀರ್ಘವಾದ, ಸರಳವಾದ ಏಳಿಗೆಯ ಮಾರ್ಗದಲ್ಲಿ ಮುಂದುವರೆಯುತ್ತೇನೆ), 516289 (ನಾನು ದೀರ್ಘಕಾಲ ಐಶ್ವರ್ಯವಂತನಾಗುವ ಸರಳ ದಾರಿಯನ್ನು ಪಡೆಯುತ್ತೇನೆ) ಮತ್ತು 5918 (ನಾನು ಬೇಗ ಏಳಿಗೆ ಹೊಂದುತ್ತೇನೆ)
  • 814 — ಇದು 168ರ ರೀತಿಯಲ್ಲಿದೆ, ಇದರರ್ಥ "ಜೀವನ ಪೂರ್ತಿ ಸಿರಿವಂತನಾಗಿರುವುದು". 148 ಸಹ "ಜೀವನ ಪೂರ್ತಿ ಸಿರಿವಂತನಾಗಿರುವ" ಅದೇ ಅರ್ಥವನ್ನು ಸೂಚಿಸುತ್ತದೆ.
  • 888 — ಏಳಿಗೆಯ ಮ‌ೂರಪಟ್ಟು, ಅಂದರೆ "ಐಶ್ವರ್ಯ ಐಶ್ವರ್ಯ ಐಶ್ವರ್ಯ". (ಉದಾಹರಣೆಗೆ, ಓಲಿಂಪಿಕ್‌ ಆಟಗಳು ಅದರ ಅತಿಥೇಯ ದೇಶವಾದ ಚೀನಾಕ್ಕೆ ಆಟಗಳ ಯಶಸ್ಸು ತಂದುಕೊಡಬೇಕು ಎಂಬುದನ್ನು ಖಾತ್ರಿಪಡಿಸುವುದಕ್ಕೋಸ್ಕರ, ಚೀನಾದ ಅಧಿಕಾರಿಗಳು ಬೀಜಿಂಗ್‌ನಲ್ಲಿನ 2008ರ ಬೇಸಿಗೆ ಒಲಿಂಪಿಕ್ಸ್‌ನ್ನು ಅತ್ಯಂತ ಶ್ರೇಯಸ್ಕರ ದಿನಾಂಕದಂದೇ ಪ್ರಾರಂಭವಾಗುವಂತೆ ನಿಯುಕ್ತಿಗೊಳಿಸಿದ್ದರು: ಅಂದರೆ, 2008ರ ಆಗಸ್ಟ್ 8 — ಹೊಸ ಸಹಸ್ರಮಾನದ 8ನೇ ವರ್ಷದಲ್ಲಿನ 8ನೇ ತಿಂಗಳಿನ 8ನೇ ದಿನದಂದು ಇದು ಪ್ರಾರಂಭವಾಯಿತು).
  • 1314 — ಸಂಪೂರ್ಣ ಜೀವಮಾನ, ಅಸ್ತಿತ್ವ.
  • 289 — ಈ ಸಂಯೋಜನೆಯು ಸಮಗ್ರವಾಗಿ ಋಜುಸ್ವರೂಪ ಅಥವಾ ಸುಗಮವಾದುದಾಗಿದೆ: ಅದೃಷ್ಟ/ಐಶ್ವರ್ಯದ ಹುಡುಕುವಲ್ಲಿ ಹಾಗೂ ಅದನ್ನು ದೀರ್ಘ ಕಾಲದವರೆಗೆ ಹೊಂದಿರುವಲ್ಲಿನ ಸುಲಭದ ಮಾರ್ಗವಾಗಿದೆ. (2 ಅಂದರೆ ಸುಲಭ, 8 ಅಂದರೆ ಅದೃಷ್ಟ, 9 ಅಂದರೆ ದೀರ್ಘಕಾಲದವರೆಗೆ)

ಇತರ ಕ್ಷೇತ್ರಗಳು

[ಬದಲಾಯಿಸಿ]

ಸಂಖ್ಯಾಭವಿಷ್ಯಶಾಸ್ತ್ರ ಮತ್ತು ಜ್ಯೋತಿಶ್ಯಾಸ್ತ್ರ

[ಬದಲಾಯಿಸಿ]

0ಯಿಂದ 9ರವೆಗಿನ ಪ್ರತಿಯೊಂದು ಸಂಖ್ಯೆಯ‌ೂ ನಮ್ಮ ಸೌರವ್ಯೂಹದ ಒಂದು ಆಕಾಶಕಾಯದಿಂದ ಆಳಲ್ಪಡುತ್ತದೆ ಎಂದು ಕೆಲವು ಜ್ಯೋತಿಷಿಗಳು ನಂಬುತ್ತಾರೆ.

ಸಂಖ್ಯಾಭವಿಷ್ಯಶಾಸ್ತ್ರ ಮತ್ತು ರಸವಿದ್ಯೆ

[ಬದಲಾಯಿಸಿ]

ರಸವಿದ್ಯೆಗೆ ಸಂಬಂಧಿಸಿದ ಹೆಚ್ಚಿನ ಸಿದ್ಧಾಂತಗಳು ಸಂಖ್ಯಾಭವಿಷ್ಯಶಾಸ್ತ್ರಕ್ಕೆ ಹತ್ತಿರದ ಸಂಬಂಧವನ್ನು ಹೊಂದಿದ್ದವು. ಇಂದೂ ಬಳಸಲಾಗುತ್ತಿರುವ ಅನೇಕ ರಾಸಾಯನಿಕ ಪ್ರಕ್ರಿಯೆಗಳ ಆವಿಷ್ಕಾರಕನಾದ ಪರ್ಷಿಯಾದ ರಸವಿದ್ಯಾತಜ್ಞ ಜಾಬಿರ್ ಇಬ್ನ್‌ ಹಯನ್ ತನ್ನ ಪ್ರಯೋಗಗಳನ್ನು ಸವಿವರವಾದ ಸಂಖ್ಯಾಭವಿಷ್ಯಶಾಸ್ತ್ರದಲ್ಲಿ ಅರಬ್ಬಿ ಭಾಷೆಯಲ್ಲಿರುವ ಘಟಕಗಳ ಹೆಸರುಗಳ ಆಧಾರದ ಮೇಲೆ ಮಾಡಿದ.

ವಿಜ್ಞಾನದಲ್ಲಿ "ಸಂಖ್ಯಾಭವಿಷ್ಯಶಾಸ್ತ್ರ"

[ಬದಲಾಯಿಸಿ]

ವೈಜ್ಞಾನಿಕ ತತ್ವಗಳ ಪ್ರಾಥಮಿಕ ಪ್ರೇರಣೆಯು ವೈಜ್ಞಾನಿಕ ವೀಕ್ಷಣೆಗಳಿಗೆ ಬದಲಾಗಿ ಮಾದರಿಗಳ ಒಂದು ಜೋಡಿಯಂತೆ ಕಂಡುಬಂದರೆ, ಅವುಗಳಿಗೆ ಕೆಲವೊಮ್ಮೆ "ಸಂಖ್ಯಾಭವಿಷ್ಯಶಾಸ್ತ್ರ" ಎಂಬ ಹಣೆಪಟ್ಟಿಯನ್ನು ಹಚ್ಚಲಾಗುತ್ತದೆ. ಈ ಪದದ ಆಡುಮಾತಿನ ಬಳಕೆಯು ವೈಜ್ಞಾನಿಕ ಸಮುದಾಯದಲ್ಲಿ ಕೊಂಚ ಸಾಮಾನ್ಯವಾಗಿದೆ ಹಾಗೂ ಪ್ರಶ್ನಾರ್ಹ ಅಥವಾ ಸಂದೇಹಾಸ್ಪದ ವಿಜ್ಞಾನವಾಗಿ ಸಿದ್ಧಾಂತವೊಂದನ್ನು ತಳ್ಳಿಹಾಕುವಲ್ಲಿ ಇದನ್ನು ಬಹುತೇಕವಾಗಿ ಬಳಸಲಾಗುತ್ತದೆ.

ವಿಜ್ಞಾನದಲ್ಲಿನ "ಸಂಖ್ಯಾಭವಿಷ್ಯಶಾಸ್ತ್ರ"ದ ಸುಪರಿಚಿತ ಉದಾಹರಣೆಯು ಕೆಲವು ದೊಡ್ಡ ಸಂಖ್ಯೆಗಳ ಕಾಕತಾಳೀಯವಾದ ಹೋಲಿಕೆಯನ್ನು ಒಳಗೊಂಡಿದ್ದು, ಇದು ಗಣಿತಶಾಸ್ತ್ರೀಯ ವಿಜ್ಞಾನಿ ಪಾಲ್ ದಿರಾಕ್, ಗಣಿತಶಾಸ್ತ್ರಜ್ಞ ಹರ್ಮನ್ ವೆಯ್ಲ್ ಮತ್ತು ಖಗೋಳ ಶಾಸ್ತ್ರಜ್ಞ ಆರ್ಥರ್ ಸ್ಟ್ಯಾನ್ಲಿ ಎಡಿಂಗ್ಟನ್ ಮೊದಲಾದ ಶ್ರೇಷ್ಠ ವ್ಯಕ್ತಿಗಳ ಕುತೂಹಲ ಕೆರಳಿಸಿತು. ವಿಶ್ವದ ಅವಧಿ ಹಾಗೂ ಕಾಲದ ಪರಮಾಣು ಏಕಮಾನ, ವಿಶ್ವದಲ್ಲಿರುವ ಎಲೆಕ್ಟ್ರಾನ್‌ಗಳ ಸಂಖ್ಯೆಯ ಅನುಪಾತದಂಥ ಪ್ರಮಾಣಗಳನ್ನು ಹಾಗೂ ಇಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳಿಗಾಗಿರುವ ಗುರುತ್ವ ಹಾಗೂ ವಿದ್ಯುತ್‌ ಬಲದ ನಡುವಿನ ಬಲಗಳಲ್ಲಿನ ವ್ಯತ್ಯಾಸಗಳನ್ನು ಈ ಸಂಖ್ಯಾತ್ಮಕ ಕಾಕತಾಳೀಯತೆ ಅಥವಾ ಏಕಕಾಲೀನತೆಗಳು ಉಲ್ಲೇಖಿಸುತ್ತವೆ. ("ಈಸ್ ದ ಯೂನಿವರ್ಸ್ ಫೈನ್ ಟ್ಯೂನ್ಡ್ ಫಾರ್ ಅಸ್?", ಸ್ಟೆಂಜರ್, ವಿ.ಜೆ., ಪುಟ 3[]).

ದೊಡ್ಡ ಸಂಖ್ಯೆಯ ಏಕಕಾಲೀನತೆಗಳು ಹಲವಾರು ಗಣಿತಶಾಸ್ತ್ರೀಯ ವಿಜ್ಞಾನಿಗಳನ್ನು ಆಕರ್ಷಿಸುತ್ತಲೇ ಬಂದಿವೆ. ಉದಾಹರಣೆಗೆ, ದಿರಾಕ್‌ನ ದೊಡ್ಡ ಸಂಖ್ಯೆಯ ಕಲ್ಪನಾ ಸಿದ್ಧಾಂತವನ್ನು ಆಧರಿಸಿ ಜೇಮ್ಸ್ ಜಿ. ಗಿಲ್ಸನ್ ಎಂಬಾತ "ಗುರುತ್ವದ ಕ್ವಾಂಟಮ್ ಸಿದ್ಧಾಂತ"ವೊಂದನ್ನು ರೂಪಿಸಿದ.[]

ಭೌತಶಾಸ್ತ್ರದಲ್ಲಿ, ವೋಲ್ಫ್‌ಗಂಗ್ ಪಾಲಿ ಎಂಬಾತನೂ ಸಹ 137ನ್ನೂ ಒಳಗೊಂಡಂತೆ ನಿರ್ದಿಷ್ಟ ಸಂಖ್ಯೆಗಳ ಚಹರೆಯಿಂದ ಆಕರ್ಷಿತನಾಗಿದ್ದ.[೧೦]

ಜೂಜಿನಲ್ಲಿನ ಸಂಖ್ಯಾಭವಿಷ್ಯಶಾಸ್ತ್ರ

[ಬದಲಾಯಿಸಿ]

ಬಿಂಗೊ, ರೂಲೆಟ್, ಕೀನೋ, ಲಾಟರಿಗಳು ಮತ್ತು ಸಂಖ್ಯೆಗಳನ್ನಾಧರಿಸಿದ ಇತರ ಜೂಜಾಟಗಳನ್ನು ಆಡುವಾಗ ಸಂಖ್ಯಾಭವಿಷ್ಯಶಾಸ್ತ್ರವನ್ನು ಏಕೈಕ ಪರಿಣಾಮಕಾರೀ ವಿಧಾನವಾಗಿ ಕೆಲವೊಮ್ಮೆ ಆಶ್ರಯಿಸಲಾಗುತ್ತದೆ. ಈ ಆಟಗಳಲ್ಲಿ ಆಟಗಾರರ ಗೆಲ್ಲುವ ಸಂಭಾವ್ಯತೆಯನ್ನು ಹೆಚ್ಚಿಸುವ ಯಾವುದೇ ಕಾರ್ಯತಂತ್ರವೂ ಇಲ್ಲದಿರುವುದರಿಂದ, ತಾವು ಯಾವುದನ್ನು ಯೋಚಿಸುತ್ತಾರೋ ಆ ಸಂಖ್ಯೆಗಳಿಂದ ತಮಗೆ ಸಹಾಯವಾಗುತ್ತದೆ ಎಂಬುದನ್ನು ತಿಳಿಯಲು ಆಟಗಾರಾರರು ಸಂಖ್ಯೆಗಳ ಬಗ್ಗೆ ಒಲವು ತೋರಿಸುತ್ತಾರೆ.

ಉದಾಹರಣೆಗೆ, ಸಂಖ್ಯಾಭವಿಷ್ಯಶಾಸ್ತ್ರವನ್ನು ರೂಲೆಟ್ ಜೂಜಾಟದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಆಟಗಾರರು ಒಂದೇ ಸಂಖ್ಯೆಯ ಮೇಲೆ ಪಣವೊಡ್ಡುತ್ತಾರೆ. ಈ ಅಧ್ಯಯನದ ಮ‌ೂಲ ತತ್ತ್ವಗಳ ಆಧಾರದ ಮೇಲೆ ವ್ಯಕ್ತಿಯ ಅದೃಷ್ಟ ಸಂಖ್ಯೆಗಳನ್ನು ಕಂಡುಹಿಡಿಯಲು 'ಅದೃಷ್ಟ ಸಂಖ್ಯೆ ಉತ್ಪಾದಕರು' ಎಂಬ ವಿಶೇಷ ವಿಧಾನಗಳನ್ನು ಬಳಸಲಾಗುತ್ತದೆ.[೧೧]

ಜನಪ್ರಿಯ ಸಂಸ್ಕೃತಿ

[ಬದಲಾಯಿಸಿ]

ಸಂಖ್ಯಾಭವಿಷ್ಯಶಾಸ್ತ್ರವು 'ಕಲ್ಪಿತ ಸಾಹಿತ್ಯ'ದಲ್ಲಿ ಒಂದು ಜನಪ್ರಿಯ ಕಥಾವಸ್ತು ಸಾಧನವಾಗಿದೆ. ವಿನೋದಮಯ ಪರಿಣಾಮವೊಂದಕ್ಕೆ ಮೀಸಲಾಗಿರುವ ಒಂದು ಪ್ರಾಸಂಗಿಕ ವಸ್ತುವಾಗಿರುವುದರಿಂದ ಮೊದಲ್ಗೊಂಡು ಕಥೆಯ ಎಳೆಯ ಒಂದು ಪ್ರಮುಖ ಅಂಶವಾಗುವವರೆಗೆ ಇದರ ವ್ಯಾಪ್ತಿಯಿದೆ. ಐ ಲವ್ ಲ್ಯೂಸಿ ಎಂಬ 1950ರ ದಶಕದ TV ಹಾಸ್ಯ ಕಾರ್ಯಕ್ರಮವೊಂದರ ದ ಸಿಯಾನ್ಸ್ ಎಂಬ ಶೀರ್ಷಿಕೆಯ ಸಂಚಿಕೆಯೊಂದರಲ್ಲಿ ಲ್ಯೂಸಿಯು ಸಂಖ್ಯಾಭವಿಷ್ಯಶಾಸ್ತ್ರದಲ್ಲಿ ತೊಡಗುವ ಚಿತ್ರಣವು ವಿನೋದಮಯ ಪ್ರಸಂಗಕ್ಕೆ ಉದಾಹರಣೆಯಾಗಿದ್ದರೆ, π ಎಂಬ ಚಲನಚಿತ್ರದಲ್ಲಿ ಯೆಹೂದ್ಯ ಧರ್ಮಶಾಸ್ತ್ರ ಗ್ರಂಥವಾದ ಟೊರಾಹ್‌ದಲ್ಲಿ ಅಡಗಿರುವ ಸಂಖ್ಯಾತ್ಮಕ ಮಾದರಿಗಳನ್ನು ಅರಸುತ್ತಿರುವ ಸಂಖ್ಯಾಜ್ಯೋತಿಷಿಯೊಬ್ಬನನ್ನು ಕಥಾನಾಯಕನು ಭೇಟಿಯಾಗುವುದು ಕಥೆಯ ಎಳೆಯ ಪ್ರಮುಖ ಅಂಶವಾಗುವುದರ ಉದಾಹರಣೆಯಾಗಿದೆ.


ಇದನ್ನೂ ಗಮನಿಸಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. FEMINIST NUMEROLOGY Archived 2012-12-28 ವೇಬ್ಯಾಕ್ ಮೆಷಿನ್ ನಲ್ಲಿ. - ಪ್ರೊಫೆಸರ್ ಜಾನ್ ವೆಬ್, ಸೈನ್ಸ್‌ ಇನ್‌ ಆಫ್ರಿಕಾ
  2. Underwood Dudley (1997). Numerology. MAA. ISBN 0-88385-507-0.
  3. [http://www.acrobase.gr/showthread.php?t=25436 Η Ελληνική γλ�σσα, ο Πλάτων, ο Αριστοτέλης και η Ορθοδοξία]
  4. [https://web.archive.org/web/20090211205119/http://users.otenet.gr/~mystakid/petroan.htm "Αγαπητέ Πέτρο, Χρόνια Πολλά και ευλογημένα από Τον Κύριο Ημ�ν Ιησού Χριστό"]. Archived from the original on 2009-02-11. Retrieved 2010-01-07. {{cite web}}: replacement character in |title= at position 60 (help)
  5. ಕಂಪ್ಯಾರಟಿವ್ ನ್ಯೂಮರಾಲಜಿ: ದ ನಂಬರ್ಸ್ ಒನ್ ಟು ಟೆನ್: ಫಂಡಮೆಂಟಲ್ ಪವರ್ಸ್. psyche.com
  6. http://abcnews.go.com/abcnewsnow/GMANow/Story?id=4813087&page=1
  7. http://www.mystical-www.co.uk/prediction/numer.html
  8. "ಕೊಲರಾಡೊ ಯ‌ೂನಿವರ್ಸಿಟಿ" (PDF). Archived from the original (PDF) on 2012-07-16. Retrieved 2010-01-07.
  9. fine-structure-constant.org
  10. ಕಾಸ್ಮಿಕ್ ನಂಬರ್ಸ್: ಪಾಲಿ ಆಂಡ್ ಜಂಗ್ಸ್ ಲವ್ ಆಫ್ ನ್ಯೂಮರಾಲಜಿ - ಡ್ಯಾನ್ ಫಾಲ್ಕ್‌ನಿಂದ, ನಿಯತಕಾಲಿಕದ ಸಂಚಿಕೆ 2705, 24 ಎಪ್ರಿಲ್ 2009 - ನ್ಯೂ ಸೈಂಟಿಸ್ಟ್
  11. "Number Symbolism - Myth or Reality?". RouletteDoc.com. Retrieved 2009-12-07.


ಆಕರಗಳು

[ಬದಲಾಯಿಸಿ]
  • ಸ್ಕಿಮ್ಮೆಲ್, ಎ. (1996). ದಿ ಮಿಸ್ಟರಿ ಆಫ್ ನಂಬರ್ಸ್ . ISBN 0-19-506303-1 — ಐತಿಹಾಸಿಕ ಸಂಸ್ಕೃತಿಗಳಲ್ಲಿನ ಸಂಖ್ಯೆಗಳ ಅಧಿಕಾರ್ಥಗಳು ಮತ್ತು ಅವುಗಳ ಸಂಬಂಧಗಳ ಒಂದು ವಿದ್ವತ್ಪೂರ್ಣ ಸಂಗ್ರಹ.
  • ಪಾಂಡೆ, ಎ. (2006). ನ್ಯೂಮರಾಲಜಿ: ದಿ ನಂಬರ್ ಗೇಮ್
  • ಡ್ಯೂಡ್ಲೆ, ಯು. (1997). ನ್ಯೂಮರಾಲಜಿ: ಆರ್, ವಾಟ್ ಪೈಥಾಗರಸ್ ರಾಟ್ . ಮೆಥಮ್ಯಾಟಿಕಲ್ ಅಸೋಸಿಯೇಷನ್ ಆಫ್ ಅಮೆರಿಕಾ — ಚರಿತ್ರೆಯಾದ್ಯಂತದ ಕ್ಷೇತ್ರದ ಒಂದು ಸಂಶಯವಾದದ ಸಮೀಕ್ಷೆ
  • ನಾಗಿ, ಎ. ಎಂ. (2007). ದಿ ಸೀಕ್ರೆಟ್ ಆಫ್ ಪೈಥಾಗರಸ್ (DVD). ASIN B000VPTFT6
  • E. W. Bullinger (1921). Number in Scripture. Eyre & Spottiswoode (Bible Warehouse) Ltd. {{cite book}}: External link in |title= (help)
  • ಡ್ರೇಯರ್, ಆರ್.ಎ. (2002) ನ್ಯೂಮರಾಲಜಿ, ದಿ ಪವರ್ ಇನ್ ನಂಬರ್ಸ್, ಎ ರೈಟ್ & ಲೆಫ್ಟ್ ಬ್ರೈನ್ ಅಪ್ರೋಚ್. ISBN 0-9640321-3-9

ಬಾಹ್ಯ ಕೊಂಡಿಗಳು

[ಬದಲಾಯಿಸಿ]