ಗಂಗೋತ್ರಿ
ಗಂಗೋತ್ರಿ
ಗಂಗೋತ್ರಿ | |
---|---|
Population (2001) | |
• Total | ೬೦೬ |
ಗಂಗೋತ್ರಿ ಭಾರತದ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಒಂದು ತೀರ್ಥಕ್ಷೇತ್ರ. ಭಾಗೀರಥಿ ನದಿಯ ದಂಡೆಯಲ್ಲಿರುವ ಗಂಗೋತ್ರಿ ಹಿಮಾಲಯದ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಹಿಮಾಲಯದ ಉನ್ನತ ಪ್ರದೇಶದಲ್ಲಿರುವ ಗಂಗೋತ್ರಿ ಸಮುದ್ರಮಟ್ಟದಿಂದ ೩,೦೪೨ ಮೀ. ಎತ್ತರದಲ್ಲಿದೆ. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾ ಡೂನ್‍ಗಳಿಂದ ಒಂದು ದಿನದ ಪ್ರಯಾಣ ಮಾಡಿ ಗಂಗೋತ್ರಿಯನ್ನು ತಲುಪಬಹುದು. ಯಮುನೋತ್ರಿಯಿಂದಾದರೆ ಎರಡು ದಿನಗಳ ಪ್ರಯಾಣ. ಗಂಗೋತ್ರಿಯವರೆಗೆ ವಾಹನಗಳು ಸಾಗಬಲ್ಲವಾದ್ದರಿಂದ ಇಲ್ಲಿಗೆ ಬರುವ ಯಾತ್ರಿಗಳ ಸಂಖ್ಯೆ ಯಮುನೋತ್ರಿಗೆ ಹೋಲಿಸಿದರೆ ಹೆಚ್ಚು. ಜೊತೆಗೆ ಗಂಗೋತ್ರಿ ಯಮುನೋತ್ರಿಗಿಂತ ಹೆಚ್ಚು ಪಾವನವೆಂದು ಜನರ ನಂಬಿಕೆ.
ಗಂಗೋತ್ರಿ ಗಂಗಾ ನದಿಯ ಉಗಮಸ್ಥಾನವಾಗಿದೆ. ಇಲ್ಲಿ ಗಂಗೆಯು ಭಾಗೀರಥಿ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವಳು. ಮುಂದೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯೊಂದಿಗೆ ಸಂಗಮಿಸಿದ ನಂತರ ನದಿಗೆ ಗಂಗಾ ಎಂಬ ನಾಮಧೇಯ. ಗಂಗೋತ್ರಿಯಲ್ಲಿ ಗಂಗಾ ದೇವಿಯ ಆಲಯವು ಇದೆ. ದೇವಾಲಯದ ಪ್ರಾಂಗಣದಲ್ಲಿ ಗಂಗೆಯನ್ನು ಒಲಿಸಿಕೊಳ್ಳಲು ಭಗೀರಥ ಚಕ್ರವರ್ತಿಯು ತಪಸ್ಸನ್ನು ಮಾಡಿದನೆನ್ನಲಾಗುವ ಸ್ಥಳವನ್ನು ಸಹ ಗುರುತಿಸಲಾಗಿದೆ. ಗಂಗಾನದಿಯ ಮೂಲ ಗಂಗೋತ್ರಿಯಿಂದ ೧೮ ಕಿ.ಮೀ. ಮುಂದೆ ಉನ್ನತ ಪರ್ವತಗಳಲ್ಲಿ ಇರುವ ಗೋಮುಖ. ಗಂಗೋತ್ರಿಯಿಂದ ಇಲ್ಲಿಗೆ ಅತಿ ಕಠಿಣ ಕಾಲ್ನಡಿಗೆಯ ಹಾದಿ ಇದೆ. ಗಂಗೋತ್ರಿಯಲ್ಲಿ ಪ್ರತಿ ಸಂಜೆ ನಡೆಸಲಾಗುವ ಗಂಗಾ ಆರತಿ ಬಲು ಪ್ರಸಿದ್ಧ. ಚಳಿಗಾಲದ ೬ ತಿಂಗಳುಗಳ ಕಾಲ ಈ ಪ್ರದೇಶವು ಹಿಮದಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿರುತ್ತದೆ. ದೀಪಾವಳಿಯ ದಿನದಂದು ಗಂಗೋತ್ರಿ ದೇವಾಲಯವನ್ನು ಮುಚ್ಚಿ ಗಂಗೆಯ ವಿಗ್ರಹವನ್ನು ಹಾರ್ಸಿಲ್ ಬಳಿಯ ಮುಖ್ಬಾ ಗ್ರಾಮದಲ್ಲಿ ನೆಲೆಗೊಳಿಸಿ ಆರಾಧಿಸಲಾಗುತ್ತದೆ. ಮುಂದಿನ ಮೇ ತಿಂಗಳಲ್ಲಿ ಮತ್ತೆ ಗಂಗೋತ್ರಿ ದೇವಾಲಯವನ್ನು ತೆರೆಯಲಾಗುತ್ತದೆ. ಗಂಗೋತ್ರಿ ಮತ್ತು ಆಸುಪಾಸಿನ ಪ್ರದೇಶಗಳು ಗಂಗೋತ್ರಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿವೆ.
ಇವನ್ನೂ ನೋಡಿ
[ಬದಲಾಯಿಸಿ]
ಬಾಹ್ಯ ಸಂಪರ್ಕಕೊಂಡಿಗಳು
[ಬದಲಾಯಿಸಿ]- ಗಂಗೋತ್ರಿ - ಅಧಿಕೃತ ಮಾಹಿತಿತಾಣ Archived 2008-09-21 ವೇಬ್ಯಾಕ್ ಮೆಷಿನ್ ನಲ್ಲಿ.
- ಗಂಗೋತ್ರಿ ಪ್ರವಾಸದ ಬಗ್ಗೆ ಮಾಹಿತಿ
- ಚಾರ್ಧಾಮ್- ಉತ್ತರಾಖಂಡ ಸರಕಾರದ ಅಧಿಕೃತ ಅಂತರಜಾಲ ಮಾಹಿತಿತಾಣ Archived 2009-08-28 ವೇಬ್ಯಾಕ್ ಮೆಷಿನ್ ನಲ್ಲಿ.
- ಉತ್ತರಕಾಶಿ ಜಿಲ್ಲೆಯ ಮಾಹಿತಿತಾಣದಲ್ಲಿ ಗಂಗೋತ್ರಿಯ ಬಗ್ಗೆ ಮಾಹಿತಿ Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ.
- ಗಂಗೋತ್ರಿ ಮತ್ತು ಗೋಮುಖ ಚಾರಣದ ಚಿತ್ರಗಳು
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು