ವಿಷಯಕ್ಕೆ ಹೋಗು

ಕೊಳ್ಳೇಗಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kollegal
ಕೊಳ್ಳೇಗಾಲ
city
Bird's Eyeview of Kollegal City from Maradi Gudda.
Bird's Eyeview of Kollegal City from Maradi Gudda.
Nickname(s): 
Silk City, ರೇಷ್ಮೆ ನಗರಿ
Country India
Stateಕರ್ನಾಟಕ
DistrictChamarajanagar district
Area
 • Total೨೭.೪೭ km (೧೦.೬೧ sq mi)
Elevation
೫೮೭ m (೧,೯೨೬ ft)
Population
 (2001)
 • Total೫೨,೬೦೭
 • ಸಾಂದ್ರತೆ೧,೯೧೫.೦೭/km (೪,೯೬೦�೦/sq mi)
Languages
 • OfficialKannada
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
571 440
Telephone code08224
ವಾಹನ ನೋಂದಣಿKA-10
ಜಾಲತಾಣ[<span%20class="url">.kollegalacity.gov.in www.kollegalacity.gov.in%20www<wbr/>.kollegalacity<wbr/>.gov<wbr/>.in]</span>]
ಕೊಳ್ಳೇಗಾಲ
ಕೊಳ್ಳೇಗಾಲ
town
Population
 (2001)
 • Total೫೨,೬೦೭

ಕೊಳ್ಳೇಗಾಲ ದಕ್ಷಿಣ ಭಾರತದಲ್ಲಿರುವ ಕರ್ನಾಟಕ ರಾಜ್ಯದ ಚಾಮರಾಜನಗರದ ಜಿಲ್ಲೆಯ ಪ್ರಮುಖ ತಾಲೂಕು. ಕೊಳ್ಳೇಗಾಲವು ಇಲ್ಲಿಯ ರೇಷ್ಮೆಉದ್ಯಮಕ್ಕೆ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಉದ್ಯಮವು ರಾಜ್ಯಾದ್ಯಂತ ರೇಷ್ಮೆ ವ್ಯಾಪಾರಿಗಳನ್ನು ಆಕರ್ಷಿಸುತ್ತದೆ.

ದೇಗುಲಗಳು

[ಬದಲಾಯಿಸಿ]
  1. ಇಲ್ಲಿ ಚೋಳರಕಾಲದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ,
  2. ಶ್ರೀ ಮರುಳೇಶ್ವರ ಸ್ವಾಮಿ ದೇಗುಲ,
  3. ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇಗುಲ,
  4. ಶ್ರೀ ಚೌಡೇಶ್ವರಿ ದೇಗುಲ .
  5. ಶ್ರಿ ಕನ್ಯಕಾ ಪರಮೇಶ್ವರಿ ದೇಗುಲ,
  6. ಶ್ರೀ ಮುಳ್ಳಾಚಮ್ಮ ದೇಗುಲ ,
  7. ಶ್ರೀ ಆಂಜನೇಯಸ್ವಾಮಿ ದೇಗುಲ
  8. ಶ್ರೀ ಚಿಕ್ಕಲ್ಲೂರು ಕ್ಷೇತ್ರ ,
  9. ಶ್ರೀ ಕುರುಬನಕಟ್ಟೆ ಕ್ಷೇತ್ರ,
  10. ಶ್ರೀ ಮಲೈ ಮಹದೇಶ್ವರ ದೇವಸ್ಥಾನ (ಬೆಟ್ಟ),
  11. ಹುಚ್ಚಾ ನಮ್ಮ ದೇವಸ್ಥಾನ
  12. ಶ್ರೀ ಕುಂತೂರು ಮಾರಮ್ಮನ ದೇವಸ್ಥಾನ ಕುಂತೂರು

ಇತಿಹಾಸ

[ಬದಲಾಯಿಸಿ]
  • ಸ್ವಾತಂತ್ರದ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ಬಂದ ನಂತರವೂ ೧೯೫೬ರವರೆಗೆ ಮದರಾಸ್ ಪ್ರಸಿಡಿನ್ಸಿಯ ಆಡಳಿತದಲ್ಲಿತ್ತು.ಆ ನಂತರ ಈ ಭಾಗದಲವು ಭಾಷಾವಾರು ಪ್ರಾಂತ್ಯದ ಆಧಾರದ ಮೇರೆಗೆ ತಮಿಳುನಾಡು ರಾಜ್ಯದಿಂದ ಕರ್ನಾಟಕಕ್ಕೆ ಸೇರಿಸಲಾಯಿತು. 'ಕೊಳ್ಳೇಗಾಲ'ಕ್ಕೆ ಈ ಹೆಸರು ಬರಲು "ಕೌಹಳ" ಮತ್ತು "ಗಾಳವ" ಎಂಬ ಹೆಸರಿನ ಇಬ್ಬರು ಋಷಿಗಳು. ಇವರಿಬ್ಬರು ಈ ಪ್ರದೇಶವನ್ನು ಆಭಿವೃದ್ಧಿ ಮಾಡಿದರು ನಂಬಲಾಗಿದೆ. ಈ ಪಟ್ಟಣವು ಇಲ್ಲಿಯ ಕೈಮಗ್ಗದಲ್ಲಿ ತಯಾರಿಸಿದ ರೇಷ್ಮೆ ಸೀರೆಗಳ ಉದ್ಯಮಕ್ಕೆ ಬಹಳ ಪ್ರಸಿದ್ಧ.
  • ಈ ಪಟ್ಟಣವನ್ನು "ರೇಷ್ಮೆ ನಗರಿ" ಎಂದು ಕೂಡ ಕರೆಯುತ್ತಾರೆ.

ಕರ್ನಾಟಕದ ದೊಡ್ಡ ತಾಲ್ಲೂಕುಗಳಲ್ಲಿ ಇದು ಒಂದಾಗಿದೆ. ಮುಂಚೆ ಇದೇ ಅತೀ ದೊಡ್ಡ ತಾಲ್ಲೂಕಾಗಿತ್ತು. ಕೊಳ್ಳೇಗಾಲ ತಾಲ್ಲೂಕನ್ನು ವಿಭಾಗ ಮಾಡಿ, ಚಾಮರಾಜನಗರ ಜಿಲ್ಲೆಯ ಹೊಸ ತಾಲ್ಲೂಕನ್ನು ಮಾಡಿ, ಅದಕ್ಕೆ ಹನೂರು ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಗಿದೆ. ಕೊಳ್ಳೇಗಾಲ ಪಟ್ಟಣದ ಜನಸಂಖ್ಯೆ ೨೦೦೫ರಲ್ಲಿ ಅಂದಾಜಿನ ಪ್ರಕಾರ ೫೫,೪೩೨. ಕೊಳ್ಳೇಗಾಲ , ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ದಕ್ಷಿಣದ ಮೂಲೆಯಲ್ಲಿರುವ ಪಟ್ಟಣ . ಕೊಳ್ಳೇಗಾಲವು ರೇಷ್ಮೆ ನೂಲು ಮತ್ತು ರೇಷ್ಮೆ ನೇಯ್ಗೆಗೆ ಹೆಸರುವಾಸಿಯಾಗಿದೆ . ಕರ್ನಾಟಕದ ಅಧಿಕೃತ ಭಾಷೆಯಾದ ಕನ್ನಡ ಮತ್ತು ತಮಿಳು ಎರಡನ್ನೂ ಅಲ್ಲಿ ಮಾತನಾಡುತ್ತಾರೆ, ಕೊಳ್ಳೇಗಾಲವು ತಮಿಳು ಮಾತನಾಡುವ ಪ್ರದೇಶಗಳಿಗೆ ಹತ್ತಿರದಲ್ಲಿದೆ ಮತ್ತು 1956 ರ ಮೊದಲು ಇದು ಮದ್ರಾಸ್ ರಾಜ್ಯದ ಭಾಗವಾಗಿತ್ತು. ಬುಡಕಟ್ಟು ಗುಂಪುಗಳು ಪಟ್ಟಣದ ಸುತ್ತಲೂ ದೊಡ್ಡ ಪ್ರಮಾಣದ ಭೂಮಿ ಮತ್ತು ಅರಣ್ಯವನ್ನು ಆಕ್ರಮಿಸಿಕೊಂಡಿವೆ. . ಪಾಪ್ (2001) 52,607.[] ಕೊಳ್ಳೇಗಾಲ ಈ ಭಾಗದ ಪಿಯುಸಿ ಶಿಕ್ಷಣ ಕೇಂದ್ರವಾಗಿದೆ.

ಕೊಳ್ಳೇಗಾಲ ಪಟ್ಟಣದ ಹೆಸರುವಾಸಿಯಾದ ಕೆಲವು ಶಾಲೆಗಳು

[ಬದಲಾಯಿಸಿ]
  1. ಸೆವೆಂತ್ ಡೇ ಅಡ್ವೆಂಟಿಸ್ಟ್,
  2. ಲಯನ್ಸ್ ಹೈ ಸ್ಕೂಲ್,
  3. ಶ್ರೀ ವಾಸವಿ ವಿದ್ಯಾ ಕೇಂದ್ರ,
  4. ಸಂತ ಫ್ರಾನಿಸ್ಸ್ ಅಸ್ಸಿಸಿ.
  5. MGSV ಜೂನಿಯರ್ ಕಾಲೇಜು,
  6. ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಟ್ಟಿದೆ.
  7. ಮಹದೇಶ್ವರ ಪ್ರಥಮ ದರ್ಜೆ ಪದವಿ ಕಾಲೇಜು, ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ವಿಶೇಷ ಕೊಡುಗೆಯನ್ನು ನೀಡಿದೆ.
  8. ಲಯನ್ಸ್ ಹೈ ಸ್ಕೂಲ್ ಕೂಡ ತನ್ನ ಜೂನಿಯರ್ ಕಾಲೇಜಿನ ವಿಭಾಗವನ್ನು ೯೦ರ ದಶಕದಲ್ಲಿ ಪ್ರಾರಂಭಿಸಿ, ಕೆಲವು ಅತಿ ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಈ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷವಾದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಪ್ರಾರಂಭವಾದ ಮಾನಸ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿದೆ. ಮೊದಲು ಕನ್ನಡ ಮಾಧ್ಯಮವಿದ್ದ ಸಂತ ಫ್ರಾನಿಸ್ಸ್ ಅಸ್ಸಿಸಿ ಶಾಲೆಯು ಈಗ ಇಂಗ್ಲಿಷ್ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಿದೆ. ಈ ಭಾಗದಲ್ಲಿ, ನೀವು ಪ್ರೈಮರಿ/ಹೈಸ್ಕೂಲ್ ಅಥವಾ ಪಿಯು ಶಿಕ್ಷಣ ಕೊಡಿಸಲು ಬಯಸಿದರೆ, ಕೊಳ್ಳೇಗಾಲ ನಿಮಗೆ ತಕ್ಕ ಅವಕಾಶ ಒದಗಿಸುತ್ತದೆ

ಇತಿವೃತ್ತ

[ಬದಲಾಯಿಸಿ]

ಗಂಧದಕಳ್ಳ ಹಾಗೂ ದಂತಚೋರನಾಗಿದ್ದ ವೀರಪ್ಪನ್ ಕೊಳ್ಳೇಗಾಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ. ಬಹಳಷ್ಟು ಜನ ಪ್ರವಾಸಿಗರು ಕೊಳ್ಳೇಗಾಲವನ್ನು ಭೇಟಿ ಮಾಡುತ್ತಾರೆ. ಮಲೆ ಮಹದೇಶ್ವರ ಬೆಟ್ಟ, ಮತ್ತು ಇದರ ಹತ್ತಿರವಿರುವ ಹೊಗೆನ್ಕಲ್‌ ಜಲಪಾತ ಹಾಗೂ ಶಿವನ ಸಮುದ್ರದ (ಬ್ಲಫ್ ಎಂದು ಕೂಡ ಕರೆಯಲ್ಪಡುವ) ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕೆಲವು ಜನಪ್ರಿಯ ಸ್ಥಳಗಳು. ಬಿಳಿಗಿರಿ ರಂಗನ ಬೆಟ್ಟ (ಬಿ.ಆರ್. ಹಿಲ್ಸ್, ಎಂದು ಕರೆಯಲಾಗುವ) ಕೊಳ್ಳೇಗಾಲ ಪಟ್ಟಣದಿಂದ ಕೇವಲ ೩೦ ಕಿ.ಮೀ. ದೂರದಲ್ಲಿದೆ. ಈ ಬೆಟ್ಟಕ್ಕೆ ಹೋಗುವ ಪ್ರಯಾಣ, ಒಂದು ರೋಮಾಂಚಕ ಅನುಭವ ಕೊಡುತ್ತದೆ. ಈ ಬೆಟ್ಟದ ಮೇಲಿಂದ ನೀವು ಕಾಣುವ ಚಿತ್ರಣವು ಬಹಳ ಅನುರೂಪವಾಗಿದ್ದು, ನಿಮ್ಮ ಜೀವನ ಪರ್ಯಂತ ನೀವು ಇದನ್ನು ಮರೆಯುವುದಿಲ್ಲ. ಮರಳಿನಲ್ಲಿರುವ ತಲಕಾಡಿನ ದೇವಸ್ಥಾನಗಳು ಕೂಡ ಬಹಳ ಜನಪ್ರಿಯ. ಈ ತಾಲೂಕಿನ ಹಲವಾರು ಗ್ರಾಮಗಳು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವುದರಿಂದ ಭಾಷಾ ಸಾಮರಸ್ಯವನ್ನು ಕಾಣಬಹುದಾಗಿದೆ. ಇಲ್ಲಿನ ಹಲವಾರು ಗ್ರಾಮಸ್ಥರು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡಬಲ್ಲರು.

[]

ಭೂಗೋಳ

[ಬದಲಾಯಿಸಿ]
ಕುಯಿಲು ಮಾಡಲು ಸಿದ್ಧವಾಗಿರುವ ಭತ್ತದ ಗದ್ದೆಗಳು.
ಕೊಳ್ಳೇಗಾಲದ ಹೃದಯ ಭಾಗದಲ್ಲಿರುವ ಮರಡಿಗುಡ್ಡ ಬೆಟ್ಟ
ಮರಡಿಗುಡ್ಡ ಬೆಟ್ಟದಿಂದ ಕಾಣುವ ಕೊಳ್ಳೇಗಾಲ ಪಟ್ಟಣದ ವಿಹಂಗಮ ಪಕ್ಷಿನೋಟ
ಮರಡಿಗುಡ್ಡದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿಯವರು ಪಾದ ಊರಿದ ಸ್ಥಳ, ಕೊಳ್ಳೇಗಾಲ

ಕೊಳ್ಳೇಗಾಲವು 12°09′N 77°07′E / 12.15°N 77.12°E / 12.15; 77.12 ರಲ್ಲಿ ಸ್ಥಿತವಾಗಿದೆ[]. ಅದು ಸರಾಸರಿಯಾಗಿ ೫೮೮ ಮೀಟರ್ (೧೯೨೯ ಅಡಿ) ಯಷ್ಟು ಸರಾಸರಿ ಎತ್ತರವನ್ನು (ಎಲಿವೇಷನ್) ಹೊಂದಿದೆ. ಇದು ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಕಾರಣ ಈ ಪಟ್ಟಣವು ಮಿಶ್ರವಾದ ಮೇಲ್ಮೈ ಲಕ್ಷಣಗಳ ತವರಾಗಿದೆ. ವಿವಿಧ ಬಗೆಯ ಪಕ್ಷಿಗಳು ವರ್ಷ ಪೂರ್ತಿ ಇಲ್ಲಿರುವ ಸುಂದರವಾದ ಕೆರೆಗಳಲ್ಲಿ ವಾಸಿಸುತ್ತದೆ. ತಾಪಮಾನ ಹದವಾಗಿದೆ. ಭೂಕಂಪ, ಪ್ರವಾಹದಂತಹ ಇತರೆ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳು ಇಲ್ಲಿ ಸಂಭವಸುವುದಿಲ್ಲ. ಆದುದರಿಂದ ಕೊಳ್ಳೇಗಾಲವು ಭೌಗೋಳಿಕವಾಗಿ,ಬಹಳ ಸುರಕ್ಷಿತವಾದ ಪ್ರದೇಶ.

ಜನಸಾಂದ್ರತೆ

[ಬದಲಾಯಿಸಿ]

As of 2001 ಭಾರತ ಜನಗಣತಿ GRIndia ಯ ಪ್ರಕಾರ, ಕೊಳ್ಳೇಗಾಲದ ಜನಸಂಖ್ಯೆ ೫೨,೪೫೦. ಒಟ್ಟು ಜನಸಂಖ್ಯೆಯಲ್ಲಿ ೫೧% ಪುರುಷರೂ ಮತ್ತು ೪೯% ಮಹಿಳೆಯರೂ ಇದ್ದಾರೆ. ಕೊಳ್ಳೇಗಾಲದ ಸರಾಸರಿ ಸಾಕ್ಷರತೆ ಪ್ರಮಾಣ ೬೯%, ಇದು ರಾಷ್ಟ್ರದ ಸರಾಸರಿ ಸಾಕ್ಷರತೆಯ ಪ್ರಮಾಣವಾದ ೫೯.೫% ಗಿಂತ ಜಾಸ್ತಿಯಿದೆ. ಪುರುಷರ ಸಾಕ್ಷರತೆ : ೭೪%, ಮಹಿಳಾ ಸಾಕ್ಷರ ಪ್ರಮಾಣ: ೬೪%. ಕೊಳ್ಳೇಗಾಲದ ಜನಸಂಖ್ಯೆಯ ೧೦% ರಷ್ಟು ಆರು ವರ್ಷ ಅಥವಾ ಅದಕ್ಕಿಂತ ಕೆಳೆಗಡೆ ಇದ್ದಾರೆ. ಕೊಳ್ಳೇಗಾಲದ ಜನತೆ ಮೈಸೂರು, ಬೆಂಗಳೂರಿನಲ್ಲಿ ಮಾತನಾಡುವ ಕನ್ನಡಕ್ಕಿಂತ ಭಿನ್ನವಾದ ಶೈಲಿಯಲ್ಲಿ ಮಾತನಾಡುತ್ತದೆ. ಕನ್ನಡದ ಈ ವಿಶಿಷ್ಠವಾದ ಶೈಲಿಯಲ್ಲಿ ಸ್ನೇಹಿತರೊಂದಿಗೆ ಮಾತಾನಾಡುವಾಗ 'ಡಾ' ಎಂದು ಸೇರಿಸಲಾಗುತ್ತದೆ. ಕೊಳ್ಳೇಗಾಲದ ಭಾಗದಲ್ಲಿ ಮಾತನಾಡುವ ಕನ್ನಡವನ್ನು ೨೦೦೫ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ್ ಆಭಿನಯದ ಜೋಗಿ ಚಿತ್ರದಲ್ಲಿ ಬಳಸಲಾಗಿದೆ.[]

ಈ ತಾಲೂಕಿನ ಸಿನಿಮಾ ನಟರು

[ಬದಲಾಯಿಸಿ]
  1. ಡಾ.ರಾಜ್‌ಕುಮಾರ್
  2. ಶಿವರಾಜ್ ಕುಮಾರ್
  3. ರಾಘವೇಂದ್ರ ರಾಜ್ ಕುಮಾರ್
  4. ಪುನೀತ್ ರಾಜ್‍ಕುಮಾರ್ (ನಟ)
  5. ನಿರ್ದೇಶಕ ಎಸ್. ಮಹೇಂದ್ರ
  1. "2005 population estimates for cities in India". mongabay.com. Retrieved 2007-04-11.
  2. Mahalingam, Jayanthi. "Sand Covered Temples". Journey through Kaveri. dimdima.com. Archived from the original on 2007-03-13. Retrieved 2007-04-11.
  3. Falling Rain Genomics, Inc - Kollegal
  4. Deepak, S.N. "Jogi". Deccan Herald » Movie Reviews. Deccan Herald. Retrieved 2007-04-11.